ಒಟ್ಟು 2104 ಕಡೆಗಳಲ್ಲಿ , 102 ದಾಸರು , 1734 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಗನೆ ಕರೆತಾರೇ ಸಖಿಯೇ [ಬೆಗನೆಕರೆತಾರೆ] ಪ ನಾಗಶಯನನವ ಕೂಗದೆ ಬಾರನೆ ಅ.ಪ ಪೂತನಿ ಶಿಶುಗಳ ಫಾತಿಸುತಿಹಳೆಂಬ ಮಾತನವಗೆ ಪೇಳೆ ಭೀತಿಯತೋರಿ ಆತುರದಿಂದವ ಐತರುವನೆ ಸಖಿ ಪ್ರೀತಿಯೊಳೀವೆನೀ ರತುನದ ಹಾರವ 1 ಕರಿ ಧ್ರುವ ಪ್ರಹ್ಲಾದ ತರುಣಿ ಪಾಂಚಾಲಿ ಮೊರೆಯಿಡುವುದ ಹೇಳೆ ಭರದಲಿ ಬರುವ ಉರಗನ ಗರಳದಿ ಕರುತುರು ನೋಯುವ ಪರಿಯ ಬಿತ್ತರಿಸಿ | ಮುರಳೀಧರಗೆ 2 ಸಂಗಡ ಬರದಿರೆ ಭಂಗಿಸುವರು ಗೋ ಪಾಂಗನೆಯರು ಎಂದು ರಂಗಗೆ ಹೇಳೇ ಇಂಗಿತಜ್ಞನು ನಮ್ಮ ಮಾಂಗಿರಿಯರಸನು ಸಂಗಡ ಬರುವನು ಸಂದೇಹವಿಲ್ಲ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬೇಡ ಬೇಡ ಹೋಗೆಂದು ಕಾಡದಿರು ಕೃಪೆಯೊಂದ ಬೇಡದಿರಲಾರೆ ಮಾಂಗಿರಿಯರಂಗ ಪ ಬೇಡುವನ ಕೈ ಕೀಳು ನೀಡುವನ ಕೈ ಮೇಲು ಬೇಡಿದಲ್ಲದೆ ಕೃಪೆಯ ಮಾಡನೈರಂಗಾ ಅ.ಪ ಗಾನಕೆ ನಲಿಯುವೆಯೋ ಧ್ಯಾನಕೆ ಒಲಿಯುವೆಯೋ ಜ್ಞಾನಕೆ ಸಿಗುವೆಯೋ ನಾನರಿಯೆನು ಗಾನದರಿವೆನಗಿಲ್ಲ ಧ್ಯಾನಮಾಡುವನಲ್ಲ ಜ್ಞಾನಾನುಭವವಿಲ್ಲ ಆಧಾರವಿಲ್ಲ 1 ನೀನೆನ್ನ ಕಡೆಗಣಿಸಿ ಹೀನ ಹೋಗೆಂದೆನಲು ನಾನಳುವೆನನವರತ ಶ್ವಾನದಂತೆ ಸೂನು ಬಾ ಬಾರೆಂದು ಸಾನುರಾಗದಿ ರಮಾದೇವಿ ಸಂತೈಪಳು 2 ಎನ್ನಮ್ಮ ಕೃಪೆಯಿಂದ ನಿನ್ನ ಕಾಲ್ವಿಡಿಯೆಂದು ಎನ್ನ ಕಳುಹುತ ನಿನಗೆ ಎನ್ನ ತೋರ್ದು ಎನ್ನನತಿಕೃಪೆಯಿಂದ ಮನ್ನಿಸೆನ್ನುವಳಾಗ ನಿನ್ನ ಕೃಪೆ ಯೆನಗುಂಟು ಮಾಂಗಿರೀಶಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬೇಡಿಕೆಗೆ ಮಿತಿಯಿಲ್ಲ ಬೇಡಿಕೆಗೆ ಕೊನೆಯಿಲ್ಲ ಬೇಡಿ ಬದುಕುವುದೊಂದು ರೋಗವಯ್ಯ ಪ ರೂಢಿಗೊಡೆಯನ ದಿವ್ಯನಾಮಗಳ ಕೊಂಡಾಡಿ ಹಾಡುವವಗೆ ರೋಗಭಯವಿಲ್ಲವಯ್ಯಾ ಅ.ಪ ಬೇಡುವವ ಮನೆಮನೆಗೆ ಓಡೋಡಿ ನಿಲಬೇಕು ನಾಡಿಗರ ನೋಡಿ ಕೈ ನೀಡಬೇಕು ನೋಡಿದರೆ ಕಟ್ಟಾಳು ಬೇಡುವೆ ಹೋಗತ್ತ ದುಡಿ ಗೇಡಿ ಎಂದಾಗ ಗೋಳಾಡಲೇಕಯ್ಯ 1 ಕಂಡ ಕಂಡವರಿಗೆಲ್ಲ ಕೈಮುಗಿದು ಮಂಡೆಯ ಬಾಗಿ ಭಂಡನೆಂದೆನಿಸುವುದು ಮಾನಭಂಗ ಪುಂಡರೀಕಾಕ್ಷ ಗೋವಿಂದ ನಾಮವ ಹಾಡಿ ಕೊಂಡಾಡಲೊದಗುವನು ಮಾಂಗಿರಿಯರಂಗ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬೇಡಿಗೊಂಬೆನೊ ದೇವ ಮಹಾನುಭಾವ ಪ ಮೂಡಲುಗಿರಿವಾಸ ಶ್ರೀ ಶ್ರೀನಿವಾಸ ಅ.ಪ ನಾನಾ ಯೋನಿಗಳಲಿ ನಾ ಬಂದು ನೊಂದೆನೋ ನೀನೇ ಸಲಹಬೇಕೋ ಎನಗೆ ಜನುಮವು ಸಾಕೊ 1 ತನುವೂ ಮನಗಳನ್ನೂ ನಿನಗರ್ಪಿಸಿದೆನೊ ವನಜಾಕ್ಷ ಬಿಡಿಸು ಸಿಕ್ಕುಯೆನಗೆ ನೀನೇ ದಿಕ್ಕು 2 ಮಾನಾಪಮಾನವು ನಿನ್ನದು ಎನಗೇನೊ ದೀನ ಜನರ ಪಾಲ ರಂಗೇಶವಿಠಲ 3
--------------
ರಂಗೇಶವಿಠಲದಾಸರು
ಬೇಡಿದರೆ ನೀಡುವುದೇನು ಹಿರಿದೆ ಗೋವಿಂದ ಬೇಡದೆ ನೀಡೆ ನಿನ್ನಂತಸ್ತಿಗತಿಚೆಂದ ಪ ನೀಡುವನು ನೀನಿರಲು ಬೇಡಿಕೆಗೆ ಕೊನೆಯುಂಟೆ ಬೇಡಿ ಬೇಸತ್ತರೂ ಆಸೆಯಿಂಗುವುದುಂಟೆ ಬೇಡಿದಮಣಿ ನೂರುಜನುಮ ಸಾಕಹುದುಂಟೆ ಬೇಡದೇ ಭಜಿಪವಗೆ ಹುಟ್ಟು ಸಾವುಗಳುಂಟೆ 1 ಹಿಂದೆ ನೀನಿತ್ತುದನು ಇಂದುಣುತಲಿಹೆವಯ್ಯ ಮುಂದೆ ನಾನುಣಲೇನು ಬೇಡವಯ್ಯ ಸಂದಿರ್ಪುವೈ ಸಾಲಸೋಲಂಗಳೇನಯ್ಯ ಮುಂದೇನು ಬೇಡ ಮಾಂಗಿರಿವಾಸ ರಂಗಯ್ಯ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬೇಡುವೆ ಇದನಾ ಜೀಯ್ಯಾ ವೆಂಕಟಾರಾಯ ಮಾಡು ಕರುಣವ ಫಲದಾಯ ಪ ಯತಿರತುನತಿ ದಶಮತಿ ಮತದಲಿ ಸ ನ್ನತಿ ಹಿತ ಭಕುತಿಲಿ ಪ್ರತಿದಿನ ಸ ಪಥ ಚತುರತೆ ತತುವೇಷ ತತಿಸಮ್ಮತ ಹಿತವಾಗಿಪ್ಪ ಸುಖಮತಿಯನೀಯೋ 1 ಬಲಬಲ ಬಲರಿಪು ವೊಲಿದೊಲಿದು ಗಿರಿಯಲಿ ಬಲುವೊಲಿಮೆಲಿ ವೊಲಿಸಬಾರದೇ ಕಳವಳಿಸಲು ಬಲಗುಂದಿ ನಲವು ನಿ ಶ್ಚಲವಾಗಿ ಬಲವಾಗಿ ಗಿರಿಯೆಳದೆಲೊ ಸಲಹಿದಿ 2 ತ್ರಿಜಗವೀರ ಧ್ವಜ ಸುಜನರ ನಿಜಪದ ರಜರಜವಾದರು ಭಜಿಸುವ ಸರ್ವದ ವ್ರಜಗಳ ಸಂಗ ದ್ವಿಜನರವಿ ಈ ಮತದಿ ಸಿರಿ ವಿಜಯವಿಠ್ಠಲರೇಯಾ 3
--------------
ವಿಜಯದಾಸ
ಬೇಡುವೆನು ಉಡಿಯೊಡ್ಡಿ ನಾ ನಿನ್ನ ಭಜಿಸಿ ಮಾಡುದಯ ನಿನ್ನವರ ಒಡನಾಡ ಹರಿಯೆ ಪ ಇಡುವ್ಯೋ ಸಂಸಾರದಿ ಕೊಡು ಬಿಡದೆ ನಿರ್ಮೋಹ ನಡೆಸುವೆಯೊ ಹಿರೇತನದಿ ನುಡಿಸದಿರು ಪಕ್ಷ ಬಡತನದಿ ಇಡುವೆಯೋ ಕಡುಧೈರ್ಯ ಕೃಪೆಮಾಡು ಸಡಗರದ ಸಿರಿಕೊಡುವ್ಯೋ ಕಡುಶಾಂತಿ ನೀಡು 1 ಬೇನೆಯೊಳು ನೂಕುವೆಯೋ ತ್ರಾಣಕೊಡು ತಡೆವ ಬಹು ಮಾನ ಕೊಡುವೆಯೋ ಮೊದಲು ನಾನೆಂಬುದ್ಹರಿಸು ಕಾನನದಿ ತಿರುಗಿಸುವಿಯೋ ಜ್ಞಾನಪಾಲಿಸು ಅಪ ಮಾನವಿತ್ತರೆ ನಿನ್ನ ಧ್ಯಾನದೊಳಗಿರಿಸು 2 ತಿರಿದುಣಿಸಿ ಬದುಕಿಸುವ್ಯೋ ತೋರಿಸು ಜಗದಭಿಮಾನ ಪರಿಪಕ್ವಾನ್ನುಣಿಸುವೆಯೋ ಪರಪಂಕ್ತಿ ಬಿಡಿಸು ದೊರೆತನವ ಕರುಣಿಸುವ್ಯೋ ಕರುಣಗುಣ ವರ ನೀಡು ನರರೊಳಗೆ ಆಡಿಸುವ್ಯೋ ಮರೆಸು ಅನೃತವ 3 ಶರಣರ್ವರ್ತನದೆನ್ನ ನಿರಿಸುವೆಯೊ ಅನುಗಾಲ ನಿರುತು ಧರ್ಮಗಲದ ಸ್ಥಿರಬುದ್ಧಿ ನೀಡು ಮರೆವೆ ಮಾಯವ ತರಿದು ಅರಿವಿನೊಳಿರಿಸುವೆಯೊ ಹರಿಶರಣರಹುದೆನುವ ವರ್ತನವ ನೀಡು 4 ಹರಣಪೋದರು ನಿಮ್ಮ ಚರಣಕ್ಕೆರಗಿದ ಶಿರವ ಪರರಿಗೆರಗಿಸದಿರು ಶರಣಾಗತಪ್ರೇಮಿ ಜರಾಮರಣ ಪರಿಹರಿಸಿ ವರಮುಕ್ತಿ ಪಾಲಿಸಿ ವರದ ಶ್ರೀರಾಮ ನಿಮ್ಮ ಚರಣದಾಸೆನಿಸು 5
--------------
ರಾಮದಾಸರು
ಬೇಡುವೆನೋ ಗೋವಿಂದಾ ಬೇಡಬೇಡವೀ ಬಂಧ ಪ ಪಾಡಿಪಾಡಲಾನಂದಾ ನೋಡಿ ನೋಡಲತ್ಯಾನಂದ ಅ.ಪ ಕಡವರವೀಯಬೇಡ ಪೊಡವಿಯ ಸುಖಬೇಡ ಕಡುಲೋಭ ಮೋಹಬೇಡ ದೃಢ ಭಕ್ತಿಯನು ಮಾತ್ರ 1 ನರಕದ ಬಾಧೆಯು ಪರಿಹರಿಸಲು ಬೇಡ ನಿರುತ ನಿಮ್ಮಯ ನಾಮ ಸ್ಮರಣೆ ಸುಖವು ಮಾತ್ರ 2 ಜನನ ಮರಣಗಳ ಕೊನೆಗಾಣಿಸಲಿ ಬೇಡ ಅನಿತು ಜನುಮದಿ ನಿನ್ನ ನೆನೆವ ಬುದ್ಧಿಯು ಮಾತ್ರ 3 ಮಾಂಗಿರಿಯರಸನೆ ತುಂಗ ಕೃಪಾಂಗನೆ ಹಿಂಗದೆ ನೀನೆನ್ನಂತರಂಗದೊಳಿರುವುದ ಮಾತ್ರ4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬೇಲೂರು ಬೇಲೂರ ಚೆನ್ನಿಗನ ನೋಡುವ ಬನ್ನಿ ಬಾಲಾರ್ಕತೇಜನ ಪಾಡುವ ಬನ್ನಿ ಪ ಮೇಲಾದ ವರಗಳ ಬೇಡುವ ಬನ್ನಿ ನೀಲಾಂಗನಿಗೆ ಪೂಜೆ ಮಾಡುವ ಬನ್ನಿ ಅ.ಪ ಕ್ಷೀರಸಮುದ್ರದಿ ಮೀಯುವ ಬನ್ನಿ ಇಲ್ಲಿ ದ್ವಾರದೇಶದಿ ನಿಂತು ಕಾಯುವ ಬನ್ನಿ ಚಾರುಸುಗಂಧವ ತೇಯುವ ಬನ್ನಿ ನಮ್ಮ ಕಾರುಣ್ಯದಿಂದವ ಕಾಯುವ ಬನ್ನೀ1 ಸುತ್ತು ಪ್ರದಕ್ಷಿಣೆ ಮಾಡುವ ಬನ್ನಿ ಅಲ್ಲಿ ಚಿತ್ತಾಕರ್ಷಕ ಚಿತ್ರ ನೋಡುವ ಬನ್ನಿ ಅತ್ತಿತ್ತ ವಂದನೆ ಮಾಡುವ ಬನ್ನಿ ಎಲ್ಲ ಮತ್ತೆ ಕೈ ಜೋಡಿಸಿ ಪಾಡುವ ಬನ್ನಿ 2 ಎಂಥ ಚೆಲುವ ಚೆನ್ನನಿವನಬ್ಬ ಮ ತ್ತಿಂಥ ಚೆಲುವನಿಲ್ಲ ಇನ್ನೊಬ್ಬ ಎಂಥ ಲಾವಣ್ಯವಿದಬ್ಬಬ್ಬ ಮ ತ್ತಿಂಥಾವ ಮಾಂಗಿರಿ ರಂಗನೊಬ್ಬ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬೈಯದವನಿಗಿಂತಲೂ ಬೈಯುವವನೇ ಮೇಲು ಹೊಯ್ಯದವಗಿಂತಲೂ ಹೊಯ್ಯುವವನೆ ಮೇಲು ಪ ಬಾಯೆನಲು ಬರಲೊಲ್ಲೆ ಮಾಯಾಕಾರ ನಿನ್ನಅ.ಪ ಒಬ್ಬ ಧರಣಿಯನೊಯ್ದ ಒಬ್ಬ ಖಡ್ಗವ ಹಿಡಿದ ಒಬ್ಬ ಧರಣಿಯನೆ ಕದ್ದ ಒಬ್ಬ ಬೈದಾ ಉಬ್ಬಿ ನೀ ಸಂತಸದಿ ಅಬ್ಬರಿಸಿ ಪರಿದೈದೆ ಒಬ್ಬೊಬ್ಬರಿಗೂ ದಿವ್ಯ ದರ್ಶನವನು 1 ಜಾರನೆಂದರು ಕೆಲರು ಚೋರನೆಂದರು ಕೆಲರು ಪೋರನಿವನೆಂದರು ನಾರಿಯರು ಪಲರು ಆರೇನ ಬೈದರೂ ದೂರಿ ನಿಂದಿಸಿದರೂ ಸ್ಮರಿಸಿದಾ ನಿಮಿಷಾರ್ಧ ಹರಿ ನಿನ್ನ ಭಕ್ತರ 2 ಇರಬಹುದು ಹಸಿವು ಬಾಯಾರಿಕೆಗಳಿಂದ ಅರಿವು ನಿದ್ರಾ ನೀರಡಿಕೆಗಳ ತೊರೆದು ಅರಸುವಾ ಸಮಯದಲಿ ಬರುವೆ ನೀನದರಿಂದ 3 ಇಳೆಯನೇ ತೆತ್ತವನ ತುಳಿದು ಕೈಸೆರೆ [ಮಾಡ್ದೆ] ಹಳಿದು ನಿಂದಿಸಿದವನ ಬಳಿಗೆ ಹೋದೆ ಮುಳಿಸಿನಿಂದೊದ್ದವನ ಕಾಲುಗಳ ನೀತೊಳೆದೆ ಹಳಿವು ಬೈಗಳು ನಿನಗೆ ಹಿತವು ಮಾಂಗಿರಿಯ ರಂಗ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬ್ರಹ್ಮದೇವರ ಸ್ತೋತ್ರ* ಮಟ್ಟತಾಳ ಕಂಬು ವಿಹಂಗ ಗಮನ ವಿಭುವೆನಂಬಿದವರ ಪೊರೆವ ವ್ಯಾಸವಿಠಲ ನೀ-ನೆಂಬುವರನ ನಂಬಿದ ನೀಚನ ಮರಿಯಾದಿರು 2 ತ್ರಿವಿಡಿತಾಳ ಜಿಹ್ವೆ ನುಡಿಯದುಸವಿಯದ ನಾನಾ ರಸವನುಂಡು ಬಹುಕಾಲಸವೆದು ಪೋದವು ನಟ್ಟ ಮನವು ಇನ್ನು ತಿರಗದುತವ ವಿಸ್ಮøತಿಯಲಿಂದ ಭೂ ವನದೊಳಿದ್ದ ಮಾ-ನವರ ಚರಿಯದಲಿ ಕೋಪವೆ ತಗ್ಗದುಎವೆ ಇಡುವಿನಿತು ಕಾಲವಾದರು ಪೂಜಾವಿವರದಲ್ಲಿಗೆ ಚಿತ್ತವು ನಿಲ್ಲದು ಭವವಿದೂರನೆ ಕೇಳುಕವಲ ಬುದ್ಧಿಯಲಿಂದ ನವನವ ರೂಪದ ಯುವತಿಯರನಿವಹದ ಅನುಭವ ದ್ವಿವಿಧವಿಂದಿಗೇ ಕಾ-ಯವ ನೋಡಲಿದ್ದಂತೆ ಇಲ್ಲದಂತೆಧ್ರುವದಲಿ ನುಡಿವೆ ಎನ್ನವಗುಣವಿನ್ನೊಂದುಭವಸಾಗರವ ದಾಟಿಸುವ ಜ್ಞಾನಿಗಳ ಪ್ರೀತಿಯನೆ ತ-ಗ್ಗುವಂತೆ ಚತುರ ತೋರುವೆಇವುಗಳಿಂದಾಗುವ ಜನನ ಬಾಧಿಯ ಬಲ್ಲೆಜೀವರಲ್ಲಿ ಹೀನ ಜನ್ಮವ ಬರುವದು ಬಲ್ಲೆಸ್ಥಾವಿರಾಯ ವ್ಯಾನಾದಿ ನೆಗುವವು ಪುಣ್ಯಾಖ್ಯಗಿರಿಗೆಪವಿಯಂಬದನುಗಾಲ ಪಠಿಸಬಲ್ಲೆಪವನನಂತರ್ಯಾಮಿ ಶ್ರೀವ್ಯಾಸವಿಠಲ ಇಂಥಅವಿವೇಕ ಮನುಜಂಗೆ ಆವಗತಿಯಾಗುವದೊ 3 ಅಟ್ಟತಾಳ ಅನ್ಯಾಯ ನಡತಿಗಳ ಚರಿಸುತಲಿಪ್ಪಮನುಜಾಧಮನಿಗೆ ಮಹಿಯೊಳಗೆ ವಿಪ್ರಜನ್ಮವ ನೀನಿತ್ತದಾವ ಬಗೆಯ ಕಾಣೆಇನ್ನೀಗ ಮಾಡುವ ಅನ್ಯಾಯ ನಡತಿಯುತಣ್ಣನ ಕಿಡಿಯಂತೆ ತತ್ಕಾಲಕಿಪ್ಪದುಘನ್ನ ಬವಣೆ ಮುಂದೆ ಅನುಭವವೇ ನಿಜಪನ್ನಗ ಶಯನ ಶ್ರೀ ವ್ಯಾಸವಿಠ್ಠಲ ಸುಪ್ರಸನ್ನ ವದನ ದೇವ ನಿನ್ನ ಪಾದವೆ ಗತಿ 4 ಆದಿತಾಳ ಪಾದ ಚೆನ್ನಾಗಿ ಪೊಂದಿಸಿನಿನ್ನವನಿವನೆಂದು ಮನುಜರಿಂದ ನುಡಿಸಿನಿನ್ನ ಕೀರ್ತನೆಯ ವದನದಿಂದ ಪೇಳಿಸಿಇನ್ನು ಈ ಬಗೆ ಮಾಳ್ಪರೆ ಘನ್ನದಯಾಂಬುಧೇಮನ್ನ ವಾಚ ಕಾಯದಿ ಅನ್ಯಾಯ ಪೆಚ್ಚಿಸದೆಎನ್ನ ಬೆಳವಿಗೆಯಂತೆ ಬೆಳಸದಂತೆ ಮಾಡಿದೆಮನ್ನಣಿಸುವ ಜನರಿಂದ ಮಾಂದ್ಯವ ಮಾಡಿಸಿದೆಸನ್ಯಾಯವಲ್ಲ ಧೊರಿಯೆ ನಿನ್ನ ಚಿತ್ತವೊ ಸ್ವಾಮಿಸನ್ಮುನಿಗಣ ಪ್ರೀಯ ವ್ಯಾಸವಿಠ್ಠಲರೇಯಾನಿನ್ನವರವನೊ ನಿನ್ನ ಸರಿ ಬಂದ ಬಗೆ ಮಾಡೊ 5 ಜತೆ ವೇಣುಗೋಪಾಲ ದಾಸರ ಮನ ಮಂದಿರಾ |ಪ್ರಾಣ ನಿನ್ನದೊ ವ್ಯಾಸವಿಠ್ಠಲ ಗೋಪಾಲಕೃಷ್ಣ ||
--------------
ವ್ಯಾಸವಿಠ್ಠಲರು
ಭಕುತಜನರ ಮುಕುಟಮಾನಸ ನಿಖಿಲಜಗತ್ರಾಣ ಮಧುಸೂದನ ಪ ಜಗಜೀವನ ಜಗಪಾಲನ ಜಗವಂದನ ಜಗಪಾವನ ಜಗಭರಿತ ಜಗನ್ನಾಥ ಜಗ ಜಯಕಾರ ಜಗದಾಧಾರ 1 ಜಲಜಪಾಣಿ ಜಲಜನಾಭ ಜಲಜನೇತ್ರನೆ ಜಲಜಗಾತ್ರನೆ ಜಲಜಾಭರಣ ಜಲಧಿಶಯನ ಜಲಜಸುತೆನಾಥ ಜಲಜಾಸನಪಿತ 2 ಉರಗಶಯನ ಗಿರಿಧಾರಣ ಗಿರಿಜಾವಂದಿತ ದುರಿತರಹಿತ ಜರಾಮರಣಹರಣ ಪರಮ ಕರುಣಿ ಶ್ರೀರಾಮ ಶರಣಪ್ರೇಮ 3
--------------
ರಾಮದಾಸರು
ಭಕುತವತ್ಸಲ ಶೀಲಾ-ಶೇಷಗಿರಿಯ ಲೋಲಾ ಪ ನೀ ಕರುಣಿಸೊ ಎನ್ನಾ-ಕುಲಸ್ವಾಮಿ ಘನ್ನಾಅ.ಪ ಮಂದಭಾಗ್ಯನು ನಾನು ವೃಂದಾರಕ ವಂದ್ಯ ತಂದೆ ಎನಗೆಂದೆಂದು ಅನಿಮಿತ್ತಬಂಧೂ ವಂದಿಪೆ ನಿನ್ನಯ ದ್ವಂದ್ವಪಾದದ ಧ್ಯಾನ ಅ- ದೊಂದನಾದರು ಇತ್ತು ಬಂಧವ ಪರಿಹರಿಸೊ ಹಿಂದೆ ನಿನ್ನಯ ನಾಮ ಒಂದೇ ಬಂಧಹರಿಸಿತು ಭಕುತವೃಂದಕೆ ಅಂದು ಅವರೇನೆಂದು ಕರೆದರೋ ಮಂದರೋದ್ಧರ ಬಂಧಮೋಚಕ1 ಓಲೈಪರೋ ಮುಕ್ತಜಾಲ ನಿನ್ನ ಕಾಲನಾಮಕ ಆಪತ್ಕಾಲಬಾಂಧವನೆಂದು ಕಾಲಿಗೆರಗುವೆ ಕೃಪಾಳು ನೀನಲ್ಲವೆ ಸೊಲ್ಲಲಾಲಿಸೊ ಲಕುಮಿನಲ್ಲ ನೀ ನಲ್ಲದಲೆ ಇನ್ನಿಲ್ಲವೆಂದಿಗೂ ಬಲ್ಲಿದರಿಗತಿಬಲ್ಲಿದನು ಆ- ವಲ್ಲಿ ನೆನೆದರೆ ಅಲ್ಲೇ ಪೊರೆವೆ 2 ಪುರಾಣಪುರುಷನೆ ಪರಮ ಕರುಣಿ ಎಂದು ಪುರಾಣದೊಳು ನೀನೆ ಪ್ರತಿಪಾದ್ಯನೊ ಕರಿ ಧ್ರುವ ಭೃಗು ಭೀಷ್ಮರ ಚರಿತೆಯ ನೋಡಲು ಹರಿ ನಿನ್ನ ಸರಿಯುಂಟೆ ದುರಿತಾಪಹಾರದಿ ಸ್ಮರಿಪರಘ ಪರಿಹರಿಪ ಶ್ರೀಪ ಸುರಪಹರಮುಖವಿಬುಧವಂದ್ಯ ದರಸುದರ್ಶನಧಾರಿ ಶ್ರೀ ವೇಂಕಟೇಶಉರುಗಾದ್ರಿವಾಸ ವಿಠಲಾ 3
--------------
ಉರಗಾದ್ರಿವಾಸವಿಠಲದಾಸರು
ಭಕುತಸಂಸಾರಿ ಹರಿ ಶಕಟಸಂಹಾರಿ ಸಕಲಾಂತರ್ಯಾತ್ಮಕ ಗಿರಿಧಾರಿ ಪ. ಅಂತರ್ಬಹಿವ್ರ್ಯಾಪ್ತಾನಂತಾವತಾರಿ ಸಂತಜನರ ಮನೋಭ್ರಾಂತಿನಿವಾರಿ 1 ನಿಖಿಲ ಬ್ರಹ್ಮಾದಿ ಸುರನಿಕರಕೈವಾರಿ ಕಂಸಾರಿ 2 ಘನಕೃಪಾಸಾಗರ ಪ್ರಣತಾರ್ತಿಹಾರಿ ಅನಘ ಲಕ್ಷ್ಮೀನಾರಾಯಣ ನಿರ್ವಿಕಾರಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಭಕ್ತಜನ ಸಂರಕ್ಷಣ ಪ ಭಕ್ತಜನ ಸಂರಕ್ಷ ಭವದುರಿತ ಸಂಹಾರಿ ಭಕ್ತರಾ ಸುರಧೇನು - ತರುವೆ ಚಿಂತಾಮಣಿಯೆ ಪೊತ್ತ ತಿಮ್ಮಪ್ಪ ಏಳೊಅ.ಪ. ಅಂಬರವು ತಾಂಬ್ರಮಯವಾಗೆ ಗರುಡಾಗ್ರಜನು ಇಂಬಿನಲಿ ತಲೆದೋರೆ ಕಿರಣಗಳು ಹರಹಿದುವು ತಾರಾ ನಿಕರವಂಬರದಿ ರೂಹುಮಾಸೆ ಕುಂಭಿಣಿಯ ಮುಸುಕಿರ್ದ ಕತ್ತಲೆ ಪರಿದು ಪೋಗೆ ಅಂಬುಜದಳಕ್ಕೆ ಮರಿದುಂಬಿಗಳು ಎರಗಿದವು ಸರಸಿಜಾಂಬುಕ ಮಂಚದಿಂದೇಳೊ 1 ಉದಯ ಪರ್ವತಕೆ ರಥನೂಕಿದನು ಮಾರ್ತಾಂಡ ಉರಗ ಪೆಡೆಯೆತ್ತಿದನು ಭಯದಿಂದ ಅಡಗಿದರು ದಶದಿಕ್ಕಿನೊಳಗೆ ತ್ರಿದಶರಬ್ಬರಿಸಿ ಆನಕ ದುಂದುಭೀ ಶಂಖ ಧಂ ಧಂ ಧಣಾ ಸರಿಗಮಪದನೀ ಯೆಂದೆನುತ ತುರೆಸಿದರು ಸದಮಲಾನಂದ ತಿಮ್ಮಾ 2 ನಾರಿಯರು ಬಂದು ಅಂಗಳ ಬಳಿದು ಗಂಧದಾ ಸಾರಣಿಯದೆಳೆದು ಮುತ್ತಿನ ರಂಗವಾಲೆ ವಿ- ಮಕರ ಕನ್ನಡಿ ದ್ವಾರದಲಿ ಬಿಗಿದರ್ಥಿಯಲಿ ಗೊಲ್ಲ ಕಟ್ಟಿಗೇ- ಕಾರ ಪರಿವಾರದವರೆಲ್ಲ ವೊಪ್ಪುತಿದಾರೆ ಕಂಸಾರಿ ಕೋನೇರಿವಾಸ 3 ನೃತ್ಯಗಾರರು ಬಂದು ತತ್ಥಿಗಿಣಿ ತಕ್ಥೈಯ ತಿತ್ತಿರಿ ಮೃದಂಗ ಜೊತೆ ತಪ್ಪದಂದದಿ ತಾಳ ಬತ್ತೀಸರಾಗದಲಿ ಎತ್ತಿ ಧ್ವನಿತೋರುತ್ತ ನೃತ್ಯ ಪಾಡುತ್ತ ಕುಣಿಯೆ ಮುತ್ತೈದೆಯರು ಬಂದು ಮುತ್ತಿನಾರತಿ ಪಿಡಿದು ಮಿತ್ರಭಾವದಿ ನಿಮ್ಮ ಅಡಿಗಳಿಗೆ ಹರಿವಾಣ ನೋಡುತ್ತಿದಾರೆ ಸರ್ವೇಶ4 ಕಾದೋದಂ ವಿಮಲ ಕಮ್ಮೆಣ್ಣಿ ಕಸ್ತೂರಿ ಸ್ವಾದು ಜವ್ವಾಜಿ ಚಂದನ ಗಂಧ ದ್ರವ್ಯಗಳ ಹೇಮ ಪಾದುಕಾ ಪಟ್ಟುವಸನ ಈ ಧರೆಯ ಮೇಲಿರ್ದ ಉಡಿಗೆ ತೊಡಿಗೆಯು ಕರ್ಪು ರಾದಿ ತಾಂಬೂಲ ನಿರ್ಮಲ ದಾದಿಯರು ಪಿಡಿದು ಮುಂದೆ ಆದಿಹರಿ ಪರಮಪುರುಷ 5 ದಂಡಿಗೆ ಶಂಖತಾಳ ತಂಬೂರಿ ಜಾಂಗಟೆಯ ಗೊಂಡು ನಿನ್ನಯ ಪರಮ ಪ್ರೀತ್ಯರ್ಥ ದಾಸರು ಬೊಮ್ಮಾಂಡ ಕಟಹÀ ಬಿಚ್ಚುವಂತೆ ತಂಡ ತಂಡದಿ ಗೆಜ್ಜೆಕಟ್ಟಿ ಅಭಿನಯ ತಿರುಹಿ ಕೊಂಡಾಡೆ ಶಬ್ದ ಪ್ರತಿ ಶಬ್ದವಾಗುತಿದೆ ಭೂ- ಬಲ್ಲವರಾರು ಕುಂಡಲಗಿರಿವಾಸ ತಿಮ್ಮಾ 6 ಗೋತ್ರಾರಿ ಹರಿಧರ್ಮ ಪುಣ್ಯಜನಪನು ವರುಣ ವೀತಿಹೋತ್ರನ ಸಖನು ಯಕ್ಷೇಶ ಕೈಲಾಸ- ಸೂರ್ಯ ಚಿತ್ತದಲಿ ಮುಖ್ಯರಾದ ವಿಶ್ವ - ಮಿತ್ರ ಸನಕಾದಿಗಳು ನಾರದರೆ ಮೊದಲಾಗಿ ಸ್ತೋತ್ರವನು ಮಾಡುತಲಿದ್ದಾರೆ ಲಕ್ಷ್ಮೀಕಳತ್ರ ಜಗದ್ಭರ್ತ ತಿಮ್ಮಾ 7 ನಿಚ್ಚ ಏಳುವ ಸಮಯ ಮೀರಿತೋ ಇಂದೀಗ ಎಚ್ಚರಿಕೆ ಪುಟ್ಟದೇ ಎಲೋ ದೇವ ಶ್ರೀದೇವಿ ಮೆಚ್ಚಿಸಿದ ಮಹಸರಸವೆ ಮುಚ್ಚಟೆಯಿದೇಂ ತಿಳಿಯಲಾಗದೆ ಸ್ವಾಮಿ ಸೊಲ್ಲು ಕರ್ಣಕೆ ಬೀಳದಾಯಿತೆ ಕಾಣೆ ಸಚ್ಚಿದಾನಂದಾತ್ಮಕ 8 ನಿದ್ರೆಗೆವೆ ಹಾಕದಿರೊ ನೀರೊಳಗೆ ನೀನಿರೊ ಉ- ಪದ್ರ ಭೂಮಿಗೆ ಕಳೆಯೊ ಕಶ್ಯಪನ ಸುತನಳಿಯೊ ಸ- ಮುದ್ರ ರಾಣಿಯ ಪಡೆಯೊ ರಾಯರಾಯರ ತÀಡೆಯೊ ಮುದ್ರೆ ಭೂಮಿಜೆಗೆ ಕಳುಹೊ ಅದ್ರಿಯುದ್ಧರಿಸೊ ಮುಪ್ಪುರವ ಸಂಹರಿಸೊ ಕಲಿ- ಕ್ಷುದ್ರ ಕಳೆ ನಿದ್ರೆ ಸಾಕೆಂದು ಶುಕ್ತಿ ಸಾರುತಿದೆ ವೆಂಕಟಕಾದ್ರವೇಯ ಹಾಸಿಗೆಯಿಂದೇಳು 9
--------------
ವಿಜಯದಾಸ