ಒಟ್ಟು 34031 ಕಡೆಗಳಲ್ಲಿ , 136 ದಾಸರು , 11034 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಚರಣವ ನೋಡಬರಲಿ ಕೃಷ್ಣಶರಣಜನರು ಸುಕೃತವ ಸೊರೆಗೊಳಲಿ ಪ. ಬ್ರಹ್ಮರುದ್ರಾದಿಗಳೆಲ್ಲ ತಮ್ಮತಮ್ಮ ಮನದಿ ನೆನೆವುದು ಪುಸಿಯಲ್ಲನಮ್ಮ ದೃಷ್ಟಿಗೆ ತೋರಿತಲ್ಲ ಇನ್ನುಜನ್ಮ ಸಫಲವಪ್ಪುದಲಸಿಕೆ ಸಲ್ಲ 1 ಶ್ರುತಿಸ್ಮøತಿ ಕೊಂಡಾಡುತಿ[ದಿ]ಕೋ ನಾನಾಮತದಲ್ಲಿ ಮಾಡುವ ವಹಮಾನ ಸಾಕುಪತಿತಪಾವನೆಗಂಗೆ ಇದಕೋ ಇನ್ನುಮತಿಯುಳ್ಳ ನಿಪುಣರು ನಿಶ್ಚೈಸಬೇಕು 2 ವೇದೇ ರಾಮಾಯಣೇ ಎಂಬಆಧ್ಯೇಯಂ ಸದಾಯೆಂಬ ವಚನವನೆಂಬಮೋದಿ ಹಯವದನ ಡಂಬವಿಲ್ಲ-ದಾದರಮಾತ್ರ ಪೂಜೆಯನೆ ಕೈಕೊಂಬ3
--------------
ವಾದಿರಾಜ
ಹರಿಚಿತ್ತಾ ಸತ್ಯ ಹರಿಚಿತ್ತಾ ಪ ನರಚಿತ್ತವಿದ್ದಂತೆ | ನಡೆಯದು ಲವಲೇಶ ಅ.ಪ ಸುದತಿ ಮಕ್ಕಳು ಭಾಗ್ಯ ಬೈಸೋದು ನರಚಿತ್ತ | ಮದಿವಾಗದಿರುವೋದು ಹರಿಚಿತ್ತವು || ಕುದುರೆ ಅಂದಣ ಆನೆ ಬೈಸೋದು ನರಚಿತ್ತ | ಪದಚಾರಿ ಗೈಸೋದು ಹರಿಚಿತ್ತವಯ್ಯಾ 1 ವಿಧ ವಿಧ ಯಾತ್ರೆಯ ಬೈಸೋದು ನರಚಿತ್ತ | ವದಗಿ ಬರುವ ರೋಗ ಹರಿಚಿತ್ತವೊ || ಸದ ಅನ್ನದಾನವ ಬೈಸೋದು ನರಚಿತ್ತ | ಉದತಕ್ಕೆ ಅಲಸೋದು ಹರಿಚಿತ್ತವಯ್ಯ 2 ಭೂಮಿಯನಾಳಬೇಕೆಂಬೋದು ನರಚಿತ್ತ | ಆ ಮಾತಿಗೆ ಅಡ್ಡ ಹರಿಚಿತ್ತವು || ವಿಜಯ ವಿಠಲನ್ನ ಬೈಸೋದು ನರಚಿತ್ತ | ಕಾಮಿಸಿ ಜೀವ್ಯೊದು ಹರಿಚಿತ್ತವಯ್ಯಾ 3
--------------
ವಿಜಯದಾಸ
ಹರಿತ್ರಿವಿಕ್ರಮ ವ್ಯಾಸವಿಠಲ | ಪೊರೆ ಇವಳಾ ಪ ದುರಿತ ದುಷ್ಕøತವೆಲ್ಲ | ದೂರಮಾಡುತಲೀ ಅ.ಪ. ಸಾರ | ಪಠಿಸೆಂದು ಪೇಳ್ದಾ 1 ವರುಷ ಪೈಂಗಳ ಪುಷ್ಯ | ಆರಾಧನೆಯದಿನದಿಗುರುಗಳನು ಕಂಡೀಕೆ | ಅವರೆ ಇವರೆಂದುಭರದಿ ನಿಶ್ಚಯಿಸುತಲಿ | ಹರಿದಾಸ್ಯ ಕಾಂಕ್ಷಿಸುತಗುರುವೆಂದು ಎನ್ನ ಬಳಿ | ಪ್ರಾರ್ಥಿಸುತ್ತಿಹಳಾ 2 ಕಂಸಾರಿ ಕಳೆದು ಭವಸಂಸಕ್ತಳಾಗಿಸದೆ | ಉದ್ದರಿಸೊ ಇವಳಾಶಂಸಿಸೀ ತವಪಾದ | ಪಾಂಸುವನೆ ಧರಿಸಿ ನಿ-ಸಂಶಯದಿ ತವದಾಸ್ಯ | ಸಿದ್ದಿಸೊ ಹರಿಯೇ 3 ಪತಿತ ಪಾವನ ರಂಗ | ಪತಿವ್ರತೆಗೆ ಸುಜ್ಞಾನಭಕ್ತಿ ಹರಿಗುರುಗಳಲಿ | ಇತ್ತು ಅಧಿಕಧಿಕಾವತ್ತಿ ಬಹ ವಿಘ್ನಗಳ | ಹತ್ತಿಕ್ಕಿ ಪೊರೆಯೆಂದುಅರ್ಥಿಯಲಿ ಬಿನೈಪೆ | ಮರುತಂತರಾತ್ಮ 4 ದರ್ವಿ ಜೀವಿಯ ಪೊರೆಯೊ | ದುರ್ವಿಭಾವ್ಯನೆ ಹೃದಯಗಹ್ವರದಿ ತವರೂಪ | ತೋರ್ವ ಮನಮಾಡೀಸರ್ವತ್ರ ತವನಾಮ | ದಿವ್ಯ ಸಂಸ್ಕøತಿ ಈಯೊಸರ್ವೊತ್ತಮನೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಹರಿದಾಟ ನಿಲಿಸು ಮನದಘದೂರ ಸುಖಸಾರ ಎರಗುವೆನು ತವಪದಕೆ ಸ್ಮರಿಸಿ ನಿಮ್ಮುಪಕಾರ ಪ ಸಂತಸವ ಕೊಡು ಎನ್ನ ಅಂತರಂಗದಿ ನಿಂತು ಕಂತುಪಿತ ಚಿಂತಿಪರ ಚಿಂತಾಮಣಿ ಪ್ರಭುವೆ 1 ಅಲ್ಪಮನಸಿನ ಕುಕಲ್ಪನೆಯ ಪರಿಹರಿಸು ಅಲ್ಪರಿವ ದೀನರಿಗೆ ಕಲ್ಪತರು ನೀನು 2 ನಾಮಾಡಿದಪರಾಧ ಪ್ರೇಮದಿಂ ಕ್ಷಮಿಸು ಶ್ರೀ ರಾಮ ಮಮಪ್ರಾಣೇಶ ಪ್ರೇಮಾಬ್ಧಿನಿಲಯ 3
--------------
ರಾಮದಾಸರು
ಹರಿದಾಸನ ಮಾಡಿಕೊಂಬುವಿಯ ಎನ್ನ ಪ ಪರಮಕರುಣಾಶರಧಿ ಭಕ್ತ ಪ್ರಸನ್ನ ಅ.ಪ. ಪಾಡುವ ಶೈಲಿ ತಿಳಿಸಿ ನೋಡಿ ಕುಣಿದು ಕುಣಿಯುವ 1 ದುರುಳ ಸುಖಕೆ ದಾರಿಯ ತಿಳಿಸೀ ಪಥ ಸಾಗಿಸಿ ಬಿಡದೇ 2 ಕಜ್ಜಿಗಳನು ನಿರುತ ದಿರಿಸಿ ಕಾಯುತ ಲೀಗ 3 ಕರುಣ ಕವಚವ ತೊಡಿಸಿ ಬಾಧೆ ತಟ್ಟದ್ಹಾಂಗೆ 4 ಸಿರಿ ಶ್ರೀಕೃಷ್ಣವಿಠಲ ಪರಮೋ- ಚರಿಸಿ ನಲಿವಂಥ 5
--------------
ಕೃಷ್ಣವಿಠಲದಾಸರು
ಹರಿದಾಸನಾದರೆ ಹ್ಯಾಂಗಿರಲಿ ಬೇಕು ನರಲೋಕದ ಚಿಂತೆ ಬಿಟ್ಟುಕೊಡಬೇಕು ಪ ಇಂದ್ರಿಯಗಳನ್ನೆಲ್ಲ ಗ್ರಹಿಸಬೇಕು ಬಂದದೆಲ್ಲ ಬರಲಿ ಈಗಲೇ ಎನಬೇಕು ಅಂದವರು ಎನಗೆ ಬಂಧುಗಳು ಎನಬೇಕು 1 ಸ್ನಾನವನು ಬಿಟ್ಟು ಹರಿಕಥೆಯ ಕೇಳಲಿ ಬೇಕು ಮಾನಾಭಿಮಾನಕ್ಕೆ ಹರಿತಾನೆ ಎನಬೇಕು ಏನಾದರಾಗಲಿ ಸುಖಬಡಲಿಬೇಕು 2 ಇರಳು ಹಗಲು ಹರಿಸ್ಮರಣೆ ಮಾಡಲಿ ಬೇಕು ಪರಲೋಕದ ಗತಿ ಬಯಸಬೇಕು ಗುರುಹಿರಿಯರಿಗೆ ವಂದನೆಯ ಮಾಡಲಿ ಬೇಕು ದುರುಳರನ ಕಂಡರೆ ದೂರಾಗಬೇಕು 3 ತಾವರೆಮಣಿ ತುಲಸಿಸರವ ಧರಿಸಲಿಬೇಕು ಭಾವಶುದ್ಧನಾಗಿ ತಿರುಗಬೇಕು ಕೋವಿದರೆ ಸಂಗಡ ಕೂಡ್ಯಾಡುತಿರಬೇಕು ಪಾವಕನಂತೆ ಇಂಪವ ಕಾಣಬೇಕು 4 ಅನ್ನಪಾನಾದಿಗಳಿಗವಸರ ಬೀಳದಿರಬೇಕು ಕಣ್ಣಿದ್ದು ಕುರುಡನೆಂದೆನಿಸಬೇಕು ಚೆನ್ನಾಗಿ ವಾಯುಮತದಲ್ಲಿ ನಿಂದಿರಬೇಕು ತನ್ನೊಳಗೆ ತಾ ತಿಳಿದು ನಗುತಲಿರಬೇಕು 5 ಬಿಂಬ ಮೂರುತಿಯ ಹೃದಯದಲಿ ನಿಲಿಸಲಿ ಬೇಕು ಡಂಭಕ ಭಕುತಿಯ ಜರಿಯ ಬೇಕು ಡಿಂಬುವನು ದಂಡಿಸಿ ವ್ರತವ ಚರಿಸಲಿ ಬೇಕು ನಂಬಿ ನರಹರಿಪಾದವೆನುತ ಸಾರಲಿ ಬೇಕು6 ಹರಿಯಿಲ್ಲದನ್ಯತ್ರ ದೈವವಿಲ್ಲೆನ ಬೇಕು ಮರುತನೆ ಜಗಕೆ ಗುರುವೆನಲಿ ಬೇಕು ಪುರಂದರದಾಸರೇ ದಾಸರೆಂದನ ಬೇಕು ಸಿರಿ ವಿಜಯವಿಠ್ಠಲನ ಸ್ಮರಣೆ ಮಾಡಲಿ ಬೇಕು 7
--------------
ವಿಜಯದಾಸ
ಹರಿದಾಸಮಹತಿ ಕ್ಷಮಿಸುವುದೆಮ್ಮ ತಪ್ಪುಗಳ ಸ್ವಾಮಿಕ್ಷಮಶೀಲವೆಂಬ ದಾಸೋಹ ಬಿರುದಿನೊಳು ಪ ಸುರರು ಸಾಧುಸಮರಲ್ಲವೆಂಬ ಶ್ರುತಿ ಸರಿಬಂತು ಸ್ವಾಮಿ ಅ ಶರಧಿಯೊಳಿರುತಿರ್ಪ ಚರಜೀವಿಗಳ ಗುಣಾ-ಕರಿಸಿ ಇಷ್ಟೆಂದು ಪೇಳಲುಬಹುದುಸಿರಿವರದನ ಅಂತಃಕರಣಕೊಪ್ಪಿದ ನಿಮ್ಮಇರವ ತಿಳಿಯಲು ನರರ ವಶವೆ ಸ್ವಾಮಿ1 ಆಢಕದೊಳಗಂಬರವನೆ ಅಳೆದು ಲೆಕ್ಕಕೂಡಿದ ಮಿತಿಯ ಪೇಳಲು ಬಹುದುರೂಢಿಗೀಶನ ಸೇವೆ ಮಾಡಿದ ಮುಕ್ತರಈಡಿಲ್ಲವೆಂಬುದನಿತರರರಿವರೆ ಸ್ವಾಮಿ 2 ಈ ಶರೀರದೊಳಗಿಪ್ಪ ಕೇಶಗಳೆಲ್ಲವನುಬೇಸರಿಸದೆಣಿಸಿ ಹೇಳಲು ಬಹುದುಶೇಷಶಯನ ಕಾಗಿನೆಲೆಯಾದಿಕೇಶವದಾಸರ ಮಹಿಮೆ ಕಾಣಲಿಕಾಗದು ಸ್ವಾಮಿ 3
--------------
ಕನಕದಾಸ
ಹರಿದಾಸರ ಸ್ತುತಿ ಆನಂದ ಸಾಗರದ ಸೌಖ್ಯವೇಂ ನುತಿಪೆ ಪ. ಆನಂದ ಶ್ರೀ ಗುರುಗಳತಿ ಕೃಪೆಯೊಳಿತ್ತ ಅ.ಪ. ಗಾನಲೋಲನ ಮಹಿಮೆ ಜ್ಞಾನ ಬೋಧನೆಯಿಂದ ನಾನಾಪ್ರಕಾರದಿಂ ವರ್ಣಿಸುತಲಿ ಮಾನಿನಿಯ ಮನದ ಶೋಕಾಗ್ನಿ ಶಾಂತಿಯಗೈಸಿ ಮಾನಸದಿ ನಲಿವಂತೆ ಮಮತೆಯೊಳು ಪೊರೆದ 1 ರಾಮಚಂದ್ರನ ಮಹಿಮೆ ನೇಮದಿಂದಲಿ ಪಠಿಸೆ ಸೋಮಕಳೆ ಪೌರ್ಣಿಮ ಸ್ಥಿರವಾರದಿ ಕಾಮಧೇನುವು ಎನುತ ಕರೆದು ಮುದವಿತ್ತು 2 ಕಲುಷ ಲಿಂಗದ ಕಳೆಯ ಕಳೆದು ಚಂದ್ರನೊಳಿಟ್ಟು ಅ- ನಿಲ ಭಾರತಿಯರ ವ್ಯಾಪಾರ ತಿಳಿಸಿ ಜಲಜಾಕ್ಷ ಗೋಪಾಲಕೃಷ್ಣವಿಠ್ಠಲ ಮನದಿ ನೆಲಸಿ ಮುಕ್ತಿಯ ಕೊಡುವ ಮಾರ್ಗ ತೋರಿದರು3
--------------
ಅಂಬಾಬಾಯಿ
ಹರಿದಾಸರಿಗೆ ಒಬ್ಬರ ಗೊಡವೆ ಯಾತಕೆ ಅರಿವೆ ಅನ್ನಾಭರಣ ದ್ರವ್ಯ ಸರ್ವವು ಶ್ರೀ ವರನೆ ಎಂಬ ಪ ನಿತ್ಯಾನಂದ ನಿತ್ಯಜ್ಞಾನಾನಿಮಿತ್ತ ಬಂಧು ಭಕ್ತರಿಗೆ ಇತ್ತದ್ದೆ ಸಂಪತ್ತು ಎಂದು ಕೀರ್ತಿಸುತ್ತ ನರ್ತಿಸುವ 1 ದೋಷದೂತರನೊಬ್ಬ ಪೋಷ್ಯ ಪೋಷಕಾಧಾರ ಧೇಯ ದೋಷಕಾರಿ ತ್ರೈ ಲೋಕ್ಯ ವಿಭೂಷಣ ವಿಭೂತಿದನೆಂಬ 2 ಎನ್ನ ಸ್ವಾಮಿ ಸರ್ವರಿಗೆ ಎನ್ನ ಬಿಂಬ ಎಲ್ಲರಿಗೆ ಮಾನ್ಯ ಮಾನದನು ಜಗದ್ಭಿನ್ನನೆಂದು ತುತಿಸುತಿಪ್ಪ 3 ಜನನೀ ಜನಕ ಲಕ್ಷ್ಮೀ ನಾರಾಯಣನೆ ಪುತ್ರಮಿತ್ರನೆಂದು ಕ್ಷಣಶ ಕೊಂಡಾಡುತನ್ಯರ ಗಣನೆ ಮಾಡದಿಪ್ಪ ನಿಜ4 ಹಾನಿ ಲಾಭ ಕೀರ್ತಿ ಅಪಮಾನ ಮಾನ ಪುಣ್ಯಪಾಪ ಶ್ರೀನಿವಾಸಗರ್ಪಿಸಿ ಮದ್ದಾನೆಯಂತೆ ಚರಿಸುತಿಪ್ಪ 5 ಅನಂತ ಜೀವರಿಗಿನ್ನು ಅನಾದಿ ಅನ್ನದನಾಗಿ ಅನಿರ್ವಿಣ್ಣ ನಾಮಕನೆಂದು ಸನ್ನುತಿಸಿ ಹಿಗ್ಗುತಿಪ್ಪ 6 ಸರ್ವ ಜೀವ ದೇಹಾಂತಸ್ಥ ಸರ್ವ ಜಗನ್ನಾಥ ವಿಠಲ ಸರ್ವರೂಪ ಸರ್ವನಾಮ ಸರ್ವವೇದೋದಿತನೆಂಬೊ 7
--------------
ಜಗನ್ನಾಥದಾಸರು
ಹರಿದಾಸರಿಗೆ ಕಿಂಚಿತ್ತಳಿವಿಲ್ಲ ಮನವೆ ಹರಿಯನ್ನು ನೆರೆನಂಬು ಸರಿಯಾರು ನಿನಗೆ ಪ ದುರಿತ ಕೋಟ್ಯಾಚರಿಸಿ ನರಕಿಯಾದಜಮಿಳಗೆ ಮರಣಕಾಲದಿ ಸಂಸ್ಮರಣ ಮಾತ್ರದಿ ನರಕದ ಭಯತಪ್ಪಿ ಸ್ಥಿರಮುಕ್ತಿಪದವಾಯ್ತು ಅರಿದು ನೀ ಗಟ್ಟ್ಯಾಗಿ ಸ್ಮರಿಸು ಮಾಧವನ 1 ಹರಿಸರ್ವೋತ್ತಮನೆಂಬ ತರಳನಿಗೆ ಹಿರಣ್ಯ ಹರಿಯೆಲ್ಲಿ ತೋರದಿರೆ ಶಿರಹಾರಿಸಿಕಪೆನೆನಲು ನರಹರಿಯ ರೂಪದಿಂ ಭರದಿ ಕಂಬದಿ ಬಂದು ಹಿರಣ್ಯಕನ ಶಿರತರಿದು ಪೊರೆದ ಪ್ರಹ್ಲಾದನ 2 ಲಲನೆ ದ್ರೌಪದಿ ಲಕ್ಷ್ಮೀನಿಲಯನ ದಯದಿಂದ ಉಳಿದಳು ಮಾನದಿಂ ಖುಲ್ಲನ ಸಭೆಯಲಿ ಅನುದಿನ ಚಲಿಸದೆ ಮನವಂ ತಿಳಿದು ನೀ ಭಜಿಸೆಲೊ ಸುಲಭ ಶ್ರೀರಾಮ 3
--------------
ರಾಮದಾಸರು
ಹರಿದಾಸರು ದಾಸೋತ್ತಮ ನೀನೆ ಶ್ರೀ ವೈಕುಂಠ-ದಾಸೋತ್ತಮ ನೀನೆ ಪ. ಮಕ್ಕಳುಗಳಿಗೆ ಮೊಮ್ಮಕ್ಕಳುಗಳಿಗೆ ದೇ-ವಕ್ಕಳಿಗೆ ಮನುಮುನಿಗಳಿಗೆಸಿಕ್ಕದ ಪರಬೊಮ್ಮನ ಕೂಸುಮಾಡಿ ತಂ-ದಿಕ್ಕಿ ತೊಡೆಯಮ್ಯಾಲೆ ಆಡಿಸಿ ಮುದ್ದ್ದಿಸುತಿ[ಹ]1 ಅಪರೋಕ್ಷ ಜ್ಞಾನಿಯಾ[ದೆ] 2 ಹರಿಸರ್ವೋತ್ತಮ ಹಯವದನ ಮೂರುತಿ ವೇಲಾ-ಪುರದರಸಗೆ ಪ್ರತಿಬಿಂಬನಾದವರ ವೈಕುಂಠ ದಾಸೋತ್ತಮ ಎನಗೆ ಹರಿಯತೋರಿಸಿ ಪರಮ ಧನ್ಯನಮಾಡಿದ 3
--------------
ವಾದಿರಾಜ
ಹರಿಧ್ಯಾನವೆ ಗಂಗಾಸ್ನಾನ ವಿಷ- ಯಾನುಭವ ಜಯವೆ ಮೌನ ಪ್ರಾಣೇಶನೆ ಸರ್ವೋತ್ತಮ ವೇದ ಪು- ರಾಣ ಪ್ರಮಾಣವೆ ಜ್ಞಾನ1 ಮತ್ತರ ಸಂಗ ಪ್ರವೃತ್ತಿಯೊಳಿರದೆ ನಿ- ವೃತ್ತಿಯೊಳಿರುವುದೆ ಮಾನ ಸತ್ಯಾತ್ಮನ ರೂಪದೊಳು ಭೇದರಾ- ಹಿತ್ಯವೆ ಸರ್ವಸಮಾನ2 ಕರ್ತ ಲಕ್ಷ್ಮೀನಾರಾಯಣನ ಪಾದ ಭಕ್ತಿ ವಿರಹಿತನೆ ಹೀನ ಚಿತ್ತಜೋದ್ಭವ ಪರಾತ್ಪರ ತ್ರಿಜಗವು ಪ್ರತ್ಯಗಾತ್ಮನಾಧೀನ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹರಿನಾಮ ಜಪಕಿನ್ನು ಸರಿಯಾದುದಿಲ್ಲ ಸರಸಿಜಾಸನಿದರ ಸಾರವನು ಬಲ್ಲ ಪ. ಬಡವಾಗ್ನಿ ಸುತ್ತಿದರು ಕೊಡುವದನುಪಮ ತಂಪ ನಡುನೀರೊಳಗೆ ಮುಳುಗಲುಡುಪವಹದು ಕಡುಭಯದ ಕಾಡಲ್ಲಿ ಮಿಡುಕುತಿಹ ಸಮಯದಲಿ ಒಡೆಯನನು ನೆನೆದವನ ಕಡೆಹಾಯಿಸುವ ನಮ್ಮ 1 ಘೋರ ರಿಪು ರಾಜಾಗ್ನಿ ಘೋರಾಹಿ ಪಕ್ಷಿ ಮೃಗ ಮಾರಿ ಮೊದಲಾದಭಯಕಾರಿಗಳನು ದೂರ ಓಡಿಸಿ ದಡವ ಸೇರೆ ಸಲಹುವ ನಮ್ಮ ಕಾರುಣ್ಯ ನಿಧಿಯನ್ನು ಸಾರಿಸಾರಿಗೆ ನೆನೆವ 2 ಆವ ಕಾಲಕು ಸುಖವನೀವ ಶೇಷ ಗಿರೀಶ ಶ್ರೀವರನ ಸರ್ವತ್ರ ಸ್ಮರಿಸಿರೆಂದು ದೇವಋಷಿಯೆಂದುದನು ದಿಟವೆನುತ ನಂಬುವರ ಕಾವನನುಭವ ಸಿದ್ಧ ಕಮಲಾಕ್ಷ ಗತಿಯೆಂಬ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹರಿನಾಮ ಭಜನೆಯೊಳಿರು ಇರೂ ಶ್ರೀಹರಿ ಮಹಿಮೆಯ ಭುವಿ ತೋರುರೋರು ಪ ಸಜ್ಜನರ ಸಂಗವ ಮಾಡು ಮಾಡು ದುರ್ಜನರ ಸಂಗವ ಬಿಡೂ ಬಿಡೂ ಮೂಜ್ಜಗದೊಡೆಯನ ಪಾಡು ಪಾಡು ಇನ್ನು ಮುಕುತಿಯ ಬೇಕೆಂದು ಬೇಡು ಬೇಡು 1 ಪಾದ ಹಿಡಿ ಹಿಡಿ ಮನದಿರುವ ಕಾಮ ಕ್ರೋಧ ಕಡಿ ಕಡಿ ಶರಣರ ಕೂಟದೋಳ್ ಕೂಡಿ ಕೂಡಿ ಬೇಗ ನರಹರಿ ಮೂರ್ತಿಯ ನೋಡಿನೋಡಿ 2 ರಾಮನಾಮಾಮೃತ ಕುಡಿ ಕುಡಿ ಅತಿಕಾಮುಕ ದ್ರವ್ಯವ ಬಿಡಿಬಿಡಿ ಸ್ವಾಮಿ ನಾರಾಯಣನೆಂದು ನುಡಿನುಡಿ ಬಹು ಪ್ರೇಮದಿ ಹರಿಕರುಣ ಪಡಿಪಡಿ 3 ಸಕಲಶಾಸ್ತ್ರಗಳ ನೋಡು ನೋಡು ಅದರ ಸಾರಾಂಶ ತಿಳಿದು ಆಡೂ ಆಡೂ ಪ್ರಕಟಿತ ಭಕ್ತರಿಗನ್ನ ನೀಡು ನೀಡು ಇನ್ನು ಪರಮಾತ್ಮನ ಕೊಂಡಾಡು ಆಡು 4 ನರಹರಿಯು ಕಥೆಯ ಕಿವಿಲಿ ಕೇಳುಕೇಳು ಪರಮ ಭಕ್ತರ ಪಾದಕೆ ಬೀಳು ಬೀಳು ಶ್ರೀ ಪರಬ್ರಹ್ಮನ ಸೇವೆಗೆ ಏಳು ಏಳು 5 ಯೋಗ್ಯರ ಕಂಡರೆ ಹಿಗ್ಗೂ ಹಿಗ್ಗೂ ಅತಿ ಭಾಗ್ಯರ ಕಂಡರೆ ತಗ್ಗೂ ತಗ್ಗೂ ಸುಜ್ಞಾನಿಗಳಿಗೆ ಡೊಗ್ಗು ಡೊಗ್ಗು ಇನ್ನು ಶುದ್ಧಾತ್ಮಕರೊಳು ಜಗ್ಗು ಜಗ್ಗು 6 ಸನ್ಯಾಸಿಗಳನು ಸೇರು ಸೇರು ದುಷ್ಟದುರ್ಮಾಗರ ಕಂಡು ದೂರು ದೂರು ಮರ್ಮ ಬಲ್ಲವರಲ್ಲಿ ಜಾರು ಜಾರು ಶ್ರೀ ಮಹಾ 'ಹೆನ್ನ ವಿಠ್ಠಲನ’ ‘ಸಾರೂ ಸಾರೂ’ 7
--------------
ಹೆನ್ನೆರಂಗದಾಸರು
ಹರಿನಾಮದರಗಿಳಿಯು ದೊರಕಿತಿಂದು ವರ ಹಿರಿಯರಾ ಕರುಣದಿಂದೆನಗೆ ಪ. ಸಾರ ಹಾದಿಯಲಿ ವರದ ಮಾಧವನೆಂಬ ಸಾಧಿಸಿ ಕಂಸನ ಗೆದ್ದ ಗೋವಿಂದ 1 ದುಷ್ಟರನು ಶಿಕ್ಷಿಪ ವಿಷ್ಣುವಿನ ನಾಮವು ಕಷ್ಟವನು ಪರಿಹರಿಪ ಮಧುಸೂಧನ ಇಷ್ಟ ಮೂರುತಿ ತ್ರಿವಿಕ್ರಮನ ನಾಮವು ಉತ್ಕøಷ್ಟ ವಾಮನನೆಂಬ ಕಠ್ಠಾಣಿ ಮುತ್ತಿನ 2 ಭವ ಚಂದಿರಾನನನಾದ ದಾಮೋದರನಾ 3 ವಾಸುದೇವ ಎಂಬ ಸಂಕಟವ ಪರಿಹರಿಪ ಪ್ರದ್ಯುಮ್ನನೆಂಬುವನ ಎನ್ನ ಸಂಕುಚಿತ ಮಂಕನಳಿವ ಅನಿರುದ್ಧನ 4 ಪರಮ ಪದವಿಯನಿತ್ತು ಪೊರೆವ ಪುರುಷೋತ್ತಮನ ಪರರ ಬೇಡಿ ಸದ್ವಸ್ತು ಅಧೋಕ್ಷಜನಾ ವರ ಜ್ಞಾನಿಗಳ ಮಾನಸ ನಾರಸಿಂಹನ ಪರಮಪುರುಷನೆಂಬ ಅಚ್ಚುತನ್ನಾ 5 ಮುದ್ದು ಮುಖದೊಳು ತಿಲಕ ತಿದ್ದಿದ ಜನಾರ್ಧನನ ಹದ್ದುವಾಹನನಾದ ಉಪೇಂದ್ರನ ಮುದ್ದು ರಮೆಯರಸ ಶ್ರೀ ಶ್ರೀನಿವಾಸನೆಂಬುವನ 6
--------------
ಸರಸ್ವತಿ ಬಾಯಿ