ಒಟ್ಟು 85 ಕಡೆಗಳಲ್ಲಿ , 3 ದಾಸರು , 81 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿ ಹರಿ ಹರಿಯೆನ್ನಿ ಹರಿಯ ನೆನವಿಗೊಮ್ಮೆ ತನ್ನಿ ಧ್ರುವ ಹಿಡಿದು ನಿಜ ಒಂದು ¥ಥ ಪಡೆಯಬೇಕು ಸ್ವಹಿತ ನೋಡಿ ಗೂಢಿನೂಳು ಗುರುತ ಕೊಡುವ ನೋಡಿ ಗುರುನಾಥ ಒಡಯನಹುದಯ್ಯನೀತ ಪೊಡವಿಯೊಳು ಶ್ರೀನಾಥ ಮಾಡಿ ಭಕ್ತಿ ಏಕಚಿತ್ತ ಕೂಡಿ ಜ್ಞಾನಸನ್ಮತ 1 ಹಿಡಿದು ನೀವು ಗುರುಪಾದ ಮಾಡಬ್ಯಾಡಿ ಭೇದ ಕಡಿಯಬೇಕು ಕಾಮಕ್ರೋಧ ಕೂಡಿ ನಿಜಸುಭೋದ ಬೋಧ ಗೂಢಗುಪ್ತವಾಗಿಹ್ಯದ ಕೊಂಡಾಡುತಿಹ್ಯ ವೇದ ಬಿಡದೆ ಮಹಿಮೆ ನಿರ್ಗುಣದ 2 ನಾವು ನೀವುವೆಂಬ ನುಡಿ ಗೋವಿಸುವದೀಡ್ಯಾಡಿ ಹ್ಯಾವ ಹೆಮ್ಮೆಹಿಡಿಯಬ್ಯಾಡಿ ಭಾವ ಬಲಿದು ಪೂರ್ಣ ನೋಡಿ ಕಾವ ಕರುಣನ ಕೂಡಿ ಭವಬಂಧನ ನೀಗಿ ಬಿಡಿ ಪಾವನ್ನವಾದ ನೋಡಿ ಮಹಿಪತಿ ನಿಜಗೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿನಾಮ ಘೋಷ ಧ್ರುವ ಎಲ್ಲಿ ಶ್ರೀಹರಿನಾಮ ಘೋಷ ಅಲ್ಲಿ ಸಕಲ ಸುಖ ಸಂತೋಷ ಸುಲಭಲಿಹುದು ಭವಭಯದ ನಾಶ ಹರಿನಾಮ ಘೋಷ 1 ಹರಸುವದಾನಂದದ ಹರುಷ ಹರಿಸುವದು ಕಲಿಮಲ ಕಲುಷ ತ್ವರಿತೋಡಿಸುವದು ಮಹಾಪಾತಕ ದೋಷ ಹರಿನಾಮ ಘೋಷ 2 ಸ್ವಹಿತ ಸಾಧನದ ಸುಉಪದೇಶ ಬಾಹ್ಯಾಂತರದೋರುವ ಪ್ರಕಾಶ ಮಹಿಪತಿಗಿದೆ ನಿತ್ಯವನುಭವದುಲ್ಹಾಸ ಹರಿನಾಮ ಘೋಷ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಸ್ಮರಣೆ ಪೂರಣ ಕರತನ್ನಿ ಧ್ರುವ ಕರತನ್ನಿರೊ ವರಗುರು ಕೃಪೆಯಿಂದ ಗುರುವರ ಮೂರುತಿ ಕರುಣಾನಂದ 1 ಕರುಣಿಸಿ ನೋಡಲು ಬಾಹುದು ಪುಣ್ಯ ಶರಣ ಜನರಿಗಿದು ತಾರ್ಕಣ್ಯ 2 ತಾರ್ಕಣ್ಯಂಬುದು ತರ್ಕರಹಿತ ಸರ್ಕನೆ ತಿಳಿವದು ತನ್ನೊಳು ಗುರುತ 3 ಗುರ್ತವಾಗಲು ನಿಜ ಹಿತಾರ್ಥ ಅರ್ತವಗಿದು ಸ್ವಸುಖ ಪರಮಾರ್ಥ 4 ಪರಮಾರ್ಥವು ಪರಗತಿ ಸಾಧನ ಪರಲೋಕಕೆ ಐದುವ ಸೊಪಾನ 5 ಸೋಪಾನವೆ ಸುಲ್ಲಭ ಸುಪಥ ಉಪಾಯದಲಿ ತಿಳಿಯಲು ಸ್ವಹಿತ 6 ಸ್ವಹಿತ ಮಾರಿಕೊಂಬುದೇ ಸುಖ ಸಾಹ್ಯ ಮಾಡುವ ಶ್ರೀ ಗುರುಕುಲತಿಲಕಾ 7 ಶ್ರೀಗುರು ಸೇವೆಯ ಮಾಡಿರೊ ಬ್ಯಾಗ ಜಗದೊಳಗಿದು ಮಹಾ ಪುಣ್ಯದ ಯೋಗ 8 ಯೋಗವೆ ಮಹಾ ನಿಜ ಭಕ್ತರ ಪ್ರಾಣ ಸುಗಮ ಸುಪಥ ಸದ್ಗತಿ ಸಾಧನ 9 ಸಾಧನ ಪಡೆವದು ಗುರುದಯ ಕರುಣ ಸದಮಲ ಸುಖ ಸುಜ್ಞಾನದ ಸ್ಪುರಣ10 ಸ್ಪುರಣ ಸುಫಲಿತ ಸುಜನರ ಹೃದಯ ಸುರ ಮುನಿ ಜನರಾನಂದದ ಉದಯ 11 ಉದಯವಾಯಿತು ಮಹಿಪತಿ ಮನದೊಳಗೆ ಸದೋದಿತವಾಯಿತು ಗುರುಕೃಪೆಲೆನಗೆ 12 ಎನ್ನೊಳು ದೋರಿತಾನಂದದಲಹರಿ ತನ್ನಿಂದಲಿ ತಾನೊಲಿದ ಶ್ರೀ ಹರಿ 13
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರುಷದಿಂದಲಿ ಮನವೇ | ಪ ಭವ ಜಲದಿಂದಲಿ ದಾಟಿಸುವನು ಕಣ್ಣವರಿಸುತಲಿದ್ದು|ಅಚ್ಯುತಾನಂತ ಹರಿ| ಯನ್ನದೆವೆ ಕಂಡ ಚಿಂತೆಯನು ಮಾಡಿ| ಬನ್ನ ಬಡುತಲಿ ಉದರ|ಧಾವತಿಯವಳಗಾಗಿ| ದಣ್ಣನೇ ದಣಿದು ಬಂದು ಬಯಿಗೋರಗುವೇ 1 ಬಳ್ಳಿನೊರಳಗ ತೊಡರಿದ|ಕಾಲಿನಂತೆ ಭವಾ ತಳ್ಳಿಯೊಳುಸಿಲ್ಕಿ ಬಳಲುತಾ ಗುಂದುತಾ| ನಿಲ್ಲದೆವೆ ತಿರುಗುತಿಹೆ ಸಾಧು ಸಂಗಕಬರಲು ಯಳ್ಳಿಸಿತು ಅವಕಾಶ ಕಾಣೆ ನಾನು 2 ಕೆರೆಯ ನೀರನು ಕೆರೆಗೆ ಚೆಲ್ಲಿ|ವರವಪಡಿಯಲಿಕ್ಕೆ ಭರದಿಂದ ಬಂದ ಅಲತ್ಯ ನೋಡ್ಯಾ| ಹರಿನಾಮ ಹರಿಗರ್ಪಿಸಿ ಗತಿ ಪಡಿಯಲೊಲ್ಲಿ ಹರ ಹರಾ ನಿನಗೆಂತು ಮತಿ ವದಗಿತೋ 3 ಹಾಡಿ ಕೊಂಡಾಡಿದರ ಹರಿನಾಮ ನಾಲಿಗ್ಗೆ ಬಾಡಿಗೆಯು ಬೀಳುವದೋ ನಾನರಿಯೆ ನೋ ಮೂಢ ಪಾಮರನೆಮರ ಹುಟ್ಟಿ ಮರಬಿದ್ದಂತೆ ನೋಡು ನರ ದೇಹದಲಿ ಬಂದಾಯಿತು 4 ಹಿಂದಿನಪರಾಧಗಳಯೇನಾದರಾಗಲಿ ಮುಂದೆ ಇನ್ನಾರ ಸ್ವಹಿತ ವಿಚಾರಿಸೋ ತಂದೆ ಮಹಿಪತಿಸ್ವಾಮಿ ದ್ವಂದ್ವ ಚರಣಕ ಹೊಂದಿ ಇಂದಿರೇಶನ ವಲಮೆ ಪಡೆದು ಸುಖಿಸೋ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹಳೆಯದಾಯಿತು ಕಾಯಾ ಇನ್ನಾರೇ | ತಿಳಿ ಸ್ವಹಿತೋಪಾಯಾ ಪ ಬಾಲಕನಾಗಿ ಕೆಲವು ದಿನ ಕಳೆದೀ | ಮೌಲ್ಯ ಯೌವ್ವನದಲಿ ಉನ್ಮತ್ತನಾದಿ 1 ಸಡಿಲುತ ಬಂದವು ಅಂಗಮಾಟಗಳು | ವಡಮೂಡದು ವಿವೇಕ ಬುದ್ಧಿಗಳು 2 ಮಂಡೂಕ ಸರ್ಪ ನೋಡದೆ ಭರದಿ | ಅಂಡಲುವದು ನೊಣಕದೇ ಪರಿಯಾದಿ 3 ಏನಾದರಾಗಲಿ ಹಿಂದಿನ ಕರಣೆ | ಜ್ಞಾನದೆಚ್ಚರ ಹಿಡಿ ಮನದೊಳು ಪ್ರಾಣಿ 4 ಗುರುವರ ಮಹಿಪತಿ ನಂದನ ಪ್ರಿಯನಾ | ಅರಿತರೆ ಬಂದದೆ ಸಾರ್ಥಕ ಖೂನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೊಂದಿ ಸುಖಿಸು ಹರಿಯ ಪಾದಾ ಧ್ರುವ ನಾನಾ ಪುಣ್ಯ ನಿದಾನದಿ ಧರೆಯೊಳು | ಮಾನವ ಜನುಮಕ ನೀನೀಗ ಬಂದು | ಪರಿ ತಾ ನಿಜವರಿಯದೆ | ಜ್ಞಾನ ಶೂನ್ಯನಾಗೇ-ನಿಹುದಣ್ಣಾ 1 ಹಿಡಿವರೇ ಭ್ರಾಂತಿಯ ಜಡಿವರೆ ಮತಿಯ | ನುಡಿವರೇ ಪುಸಿಯನು ಬಿಡುವರೆ ಸತ್ಯವ | ಇಡುವರೆ ದುರ್ಗಣ ಸಿಡುವರೆ ಬೋಧಕ | ಕೆಡುವರೆ ಮರವಿಲಿ ಬಿಡುವರೆ ವ್ಯರ್ಥಾ 2 ಮೂರು ದಿನದ ಸಂಸಾರದೊಳಗ | ಕಂ | ಸಾರಿಯ ಭಕ್ತಿಯ ಸೇರಿ | ಸಾರ ಸ್ವಹಿತ ಸಹ | ಕಾರಿ ಮಹಿಪತಿ ಸಾರಿದ ಬೋಧಾ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು