ವೆಂದೆನುತ ಬಂದೆನು ನಾ ಪ ಬಂದಾ ಬಂದಜನಕಾನಂದ ಕೊಡುತಲಿ ವಂದಿಸಿ ಭಜಿಪರಘಂಗಳ ಕಳೆದು ಸಲಹುವಿಯೋ ಸದ್ಗುರು ರಾಘವೇಂದ್ರಾ 1 ಭೀತರಾಗುತ ನಿನ್ನಡಿಗಳ ಸೇವಿಸಲು ಆದರದಿಂದಲವರ ಭವ-ಭಯವ ಪರಿಹರಿಸಿ ಸಲಹಿ ಉದ್ಧರಿಸುವೆ ಗುರುರಾಘವೇಂದ್ರಾ 2 ದುಷ್ಟ ಜನರು ಕೂಡಿ ಕೆಟ್ಟಯೋಚನೆ ಮಾಡಿ ಗುಟ್ಟಾಗಿ ನಿಮ್ಮ ಪರೀಕ್ಷಿಸ ಬೇಕೆಂಧು ಜೀವ ವಿದ್ದವನ ನಿರ್ಜೀವನೆನುತ ತರಲು ಸತ್ಯದಿ ನಿರ್ಜೀವನನ್ನಾಗಿ ಮಾಡಿದೆ ಪ್ರಭವೆ 3 ಕುಹಕಿ ಜನರು ಎಲ್ಲಿ ವನಕೆತುಂಡನು ತಂದು ಚಿಗುರಿಸ ಬೇಕೆನುತಲಿ ಕೇಳಲು ಕಮುಂಡದೊಳಿದ್ದ ದಿವ್ಯೋದಕ ಪ್ರೋಕ್ಷಿಸಿ ಚಿಗುರಿಸಿ ಫಲ ಮಾಡ್ದೆ ಅದ್ಭುತ ಮಹಿಮಾ 4 ಮಾವಿನರಸದೊಳು ಮುಳುಗಿ ಮೃತನಾದಾ ಬಾಲಕನಿಗೆ ಪ್ರಾಣಗಳನಿತ್ತೆ ದಯದೀ ಭುವಿಯೊಳು ನಿಮ್ಮ ಮಹಿಮೆಗೆಣೆಕಾಣೆ ಮಂತ್ರಾಲಯದೊರೆ ಗುರು ರಾಘವೇಂದ್ರಾ 5 ``ಶ್ರೀರಾಘವೇಂದ್ರಾಯ ನಮಃ'' ಎಂಬ ದಿವ್ಯನಾಮವ ಮನುಜನು ಪ್ರತಿದಿನ ಭಜಿಸುತ್ತಲಿರಲು ಘೋರ ದುರಿತಗಳೆಲ್ಲ ದೂರವ ಮಾಡಿ ನಿನ್ನ ಚರಣಸೇವಕರನ್ನು ಸಲಹುವಿಯೋಗುರುವೇ6 ಶ್ರೀ ರಘುರಾಮನ ಪ್ರಿಯಭಕ್ತನಾದ ಶ್ರೀ ಗುರು ರಾಘವೇಂದ್ರರ ಚರಣ ಭಜಿಸಿರೊ ನಂಬಿದ ಭಕ್ತರ ಬೆಂಬಿಡದೆ ಸಲಹುವ ಘನ್ನಕೃಪಾನಿಧಿ ನಮ್ಮ ಗುರು ರಾಘವೇಂದ್ರಾ 7
ಸಪ್ತಾನ್ನ ತಿಳಿವುದು ಸಾಧನವಯ್ಯ ಪ ಆಪ್ತ ಹರಿಯು ಕೊಟ್ಟ ಬುದ್ಧಿಯಿಂದಲಿ ಜನರು ಅ.ಪ ಮಕ್ಕಳು ಮೊದಲಾದವರ ಪೋಷಣೆ ಒಂದು ಪಕ್ಕಿಗೆ ಮೇವನ್ನು ಕೊಡುವುದೊಂದು ಅಕ್ಕರದಲಿ ಗೋಗೆ ತೃಣವ ನೀಡುವುದೊಂದು ಲೆಕ್ಕವಿಲ್ಲದ ಫಲವು ಅತಿಥಿ ಪೂಜೆ 1 ತಾತ ಮೊದಲಾದ ಹಿರಿಯರಪೂಜೆ ಆರು ತಾತಿಳಿದು ಉಂಬೋದು ಏಳನೆಯ ಅನ್ನವು ಶ್ರೀತರುಣೀವರನ ಸೇವಕರೆ ಕೇಳಿ 2 ಭೂಸುರ ಜನ್ಮವು ಸಾರ್ಥಕವು ಶ್ರೀಸತಿಯರಸ ಶ್ರೀ ಗುರುರಾಮ ವಿಠಲ ದಾಸತ್ವವಿತ್ತು ಎಂದೆಂದಿಗೂ ಪೊರೆವ 3
ಹರಿಯೆ ಸರ್ವೋತ್ತಮ ಪರದೈವವೆಂತೆಂಬ ಮರುತ ಮತವ ಸಾರಿರೊ ಪ. ಗರುವಿಕೆಯನೆ ಬಿಟ್ಟು ಪರಮತವನೆ ಸುಟ್ಟು ಹರಿಯ ಸೇವಕರಾಗಿರೊ | ಈ ಜಗದೊಳು ಅ.ಪ. ಪಂಚ ಭೇಧವ ತಿಳಿದು ಪಂಚೇಂದ್ರಿಯವ ಸೆಳೆದು ಪಂಚ ಮೂರ್ತಿಯ ಭಜಿಸಿರೊ ಪಂಚ ಸಂಸ್ಕಾರದಿ ಪಂಚಯಜ್ಞವ ರಚಿಸಿ ಪಂಚ ಮಾರ್ಗವ ಸಾರಿರೊ | ವೈರಾಗ್ಯದಿ 1 ಎಂಟು ಮದಗಳನಳಿದು ಎಂಟು ಮೂರ್ತಿಯ ತಿಳಿದು ಎಂಟು ದಳದಿ ಕಾಣಿರೊ ಎಂಟು ಕರ್ತೃತ್ವವ ಎಂಟು ತತ್ವದಿ ಮಾಳ್ಪ ಎಂಟಕ್ಷರನ ಪಾಡಿರೊ | ಕೊಂಡಾಡಿರೊ 2 ಮೂರು ಗುಣಗಳಿಂದ ಮೂರು ಮಾಳ್ಪ ಜಗವ ಮೂರು ರೂಪವ ನೆನೆಯಿರೊ ಮೂರು ಮೂರು ಭಕ್ತಿ ಮೂರು ಮಾರ್ಗದಿ ರಚಿಸಿ ಮೂರು ಲೋಕವ ಸಾರಿರೊ | ಮೂರನೆ ಗೆದ್ದು 3 ಕಂಡ ದೈವಗಳಿಗೆ ಮಂಡೆಯ ಬಾಗಿಸುತ ಬೆಂಡು ಆಗಲಿ ಬೇಡಿರೊ ಹಿಂಡು ದೈವಗಳಿಗೆ ಗಂಡ ಹರಿಯ ಭಜಿಸಿ ಗಂಡುಗಲಿಯಾಗಿರೊ | ಧೈರ್ಯವ ತಾಳಿ 4 ಗುರುಗಳಿಂದಲಿ ತತ್ವ ಸರ್ವಕಾಲದಿ ತಿಳಿದು ಉರ್ವಿಯೊಳಗೆ ಬಾಳಿರೊ ಸರ್ವಾಂತರ್ಯಾಮಿ ಶ್ರೀ ಗೋಪಾಲಕೃಷ್ಣವಿಠ್ಠಲ ಸರ್ವಬಿಂಬನೆನ್ನಿರೊ | ಮೂಲರೂಪಿ 5