ಒಟ್ಟು 181 ಕಡೆಗಳಲ್ಲಿ , 52 ದಾಸರು , 174 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳ ಮಂಗಳ ಜಯಮಂಗಳ ಶುಭ ದೇವದೇವೋತ್ತಮಗೆ ಧ್ರುವ ಕೇಶವ ನಾರಾಯಣಗೆ ಮಂಗಳ ವಾಸುದೇವ ವಾಮನಗೆ ಮಂಗಳ ಹೃಷೀಕೇಶ ಪುರುಷೋತ್ತಮಗೆ ಮಂಗಳ ವಸುದೇವಸುತ ಶ್ರೀಕೃಷ್ಣಗೆ ಮಂಗಳ 1 ಅಚ್ಯುತ ಜನಾರ್ಧನಗೆ ಮಂಗಳ ಮತ್ಸ್ಯಕೂರ್ಮ ವರಾಹಿಗೆ ಮಂಗಳ ಸಚ್ಚಿದಾನಂದ ಶ್ರೀಧರಗೆ ಮಂಗಳ ಮುಚುಕುಂದವರದ ವಿಷ್ಣುಗೆ ಮಂಗಳ2 ಮಾಧವ ಮಧುಸೂದನಗೆ ಮಂಗಳ ಸಾಧು ಹೃದಯುವಾಸಗೆ ಮಂಗಳ ಅಧೋಕ್ಷಜ ಅನಿರುದ್ಧಗೆ ಮಂಗಳ ಪದ್ಮನಾಭ ಪ್ರದ್ಯುಮ್ನಗೆ ಮಂಗಳ 3 ಗರುಡವಾಹನ ಗೋವಿಂದಗೆ ಮಂಗಳ ಉರಗಶಯನ ಉಪೇಂದ್ರಗೆ ಮಂಗಳ ಹರಿ ದಾಮೋದರ ಸಂಕರುಷಣಿಗೆ ಮಂಗಳ ನಾರಸಿಂಹ ತ್ರಿವಿಕ್ರಮಗೆ ಮಂಗಳ 4 ಪರಮ ಪಾವನ ಭಾರ್ಗವಗೆ ಮಂಗಳ ಕರುಣಾಕರ ಶ್ರೀ ರಾಮಗೆ ಮಂಗಳ ಧರಿಯೊಳು ಭೌದ್ಧ ಕಲ್ಕಿಗೆ ಮಂಗಳ ತರಳ ಮಹಿಪತಿಸ್ವಾಮಿಗೆ ಮಂಗಳ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಂಗಳ ಮೂರುತಿ ಅದಿಕೇಶವ ನಾರಾಯಣ ಮಾಧವ ಗೋವಿಂದ ವಿಷ್ಣು ಮಧುಸೂದನ ಧ್ರುವ ನೇಮದಿಂದುದಿಸಿದೆ ವಾಮನ ತ್ರಿವಿಕ್ರಮ ಸಾಮಗಾಯನ ಪ್ರಿಯಾನಂದೋಬ್ರಹ್ಮ ದಾಮೋದರ ಸಂಕರುಷಣಾದೆ ಪುರುಷೋತ್ತಮ ವಾಸುದೇವ ನಮ್ಮ 1 ಸದ್ಗುಣ ಬೀರುವ ಹೃಷೀಕೇಶ ಶ್ರೀಧರ ಪೂರ್ಣ ಪ್ರದ್ಯುಮ್ನ ಅನಿರುದ್ಧಾನಂದ ಗುಣ ಅಚ್ಯುತ ಜನಾರ್ದನ ಸಿದ್ಧ ಸಿದ್ಧಕ ಪ್ರಿಯಾನಂದ ಘನ 2 ಅಧೋಕ್ಷಜ ನೃಸಿಂಹ ಉಪೇಂದ್ರ ಶ್ರೀಹರಿ ಕೃಷ್ಣ ಹೃದಯದಲಿ ಕೊಂಡಾಡುದನುದಿನ ಸದಾ ಪ್ರಸನ್ನ ಮಹಿಪತಿಗೀ ನಾಮ ಗುಣ ಸದೋದಿತಾದನು ಭಾನುಕೋಟಿಪೂರ್ಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಂಗಳಾರತಿಯ ಬೆಳಗೆ ಮಧುಸೂದನಗೆ ದಿವ್ಯ ಮಂಗಳಾರತಿಯ ಬೆಳಗೆ |ಪ|| ಮಂದರ ಕೃಷ್ಣ ಮಚ್ಛನಾಗಿ ವೇದವ ತಂದಿಟ್ಟು ಅಮೃತ ಬೀರಿದಂಥ ಹರಿಗೆ1 ಎತ್ತಿ ತಂದು ಹರವಿ ಕೃಷ್ಣ ಸುತ್ತಿ ಒಯ್ದ ಸುರುಳಿಭೂಮಿ ಸುತ್ತಿ ಒಯ್ದ ಸುರುಳಿ ಭೂಮಿ ಹೊಟ್ಟೆ ಬಗೆದು ಕರುಳ ತನ್ನ ಕುತ್ತಿಗ್ಯಲ್ಲಿ ಧರಿಸಿದಾತಗೆ 2 ಕೂಸಿನಂತೆ ಬಂದು ಬೆಳೆದಾಕಾಶವ್ಹಿಡಿಯದೆ ಕೃಷ್ಣ ಕೂಸಿನಂತೆ ಬಂದು ಬೆಳೆದ ನಾಶಮಾಡಿ ಕ್ಷತ್ರಿಯರ ಪರಶುರಾಮನೆನಿಸಿದಾತಗೆ 3 ಕುಂಭಕರ್ಣನಣ್ಣ(ನ) ಹತ್ತು ರುಂಡ ಹಾರಿಸಿ ಕೃಷ್ಣ ಕುಂಭಕರ್ಣನಣ್ಣ(ನ) ಚೆಂಡನಾಡುತಲಿ ಕಾಳಿಂಗನ್ಹೆಡೆಯ ತುಳಿದ ಹರಿಗೆ4 ಬಟ್ಟೆ ತೊರೆದು ಬೌದ್ಧನಾಗಿ ಹತ್ತಿ ಹಯವನೇರಿ ಕೃಷ್ಣ ಬಟ್ಟೆ ತೊರೆದು ಬೌದ್ಧನಾಗಿ ದುಷ್ಟಕಲಿಯ (ಕೊಂದ) ಭೀಮೇಶಕೃಷ್ಣನಂಗ ಪೂಜಿಸುತಲಿ5
--------------
ಹರಪನಹಳ್ಳಿಭೀಮವ್ವ
ಮದನ ಗೋಪಾಲಗೊ ಸುದತಿ ಯಶೋದೆ ನಂದ ಕಂದನಿಗೊ ಪ ಶ್ರೀಶ ಶ್ರೀ ಕೇಶವ ನಾರಾಯಣನಿಗೊ ಮಾಧವ ಗೋವಿಂದ ಹರಿಗೊ ಸಾಸಿರ ನಾಮದ ವಿಷ್ಣು ಮಧುಸೂದನಗೊ ಭೂಸುರ ಪಾಲ ತ್ರಿವಿಕ್ರಮ ವಾಮ£ಗೊ 1 ಮುದ್ದು ಮೂರುತಿ ಶ್ರೀಧರ ಹೃಷಿಕೇಶಗೊ ಪದ್ಮನಾಭ ದಾಮೋದರಗೊ ಶುದ್ಧಮನದಿ ಸಂಕರ್ಷಣ ವಾಸುದೇವಗೊ ಅನಿರುದ್ಧ ಮೂರುತಿಗೊ 2 ಹರುಷದಿ ನಾರಸಿಂಹ ಅಚ್ಚುತಗೊ ಸರಸಿಜನಯನ ಜನಾರ್ದನುಪೇಂದ್ರಗೊ ಸಿರಿ ಹರಿ ಕೃಷ್ಣಗೊ 3 ಶಂಖು ಚಕ್ರ ಗದಾ ಪದ್ಮವು ಧರಿಸಿದ ವೆಂಕಟರಮಣಗೊ ಶ್ರೀಹರಿಗೊ ಪಂಕಜನಯನ ಶ್ರೀರಂಗನಾಥನಿಗೊ ಬಿಂಕದಿ ಪಾಂಡುರಂಗ ವಿಠ್ಠಲಗೊ 4 ಘನಮಹಿಮ ಮನು ಕಂಚಿ ವರದರಾಜನಿಗೊ ಇನಕುಲ ತಿಲಕ ಶ್ರೀರಾಮಚಂದ್ರನಿಗೊ ವನಿತೆಯರೊಡಗೂಡಿ ಮೆರೆವ ಕೃಷ್ಣನಿಗೊ ವನಜಾಕ್ಷ ಪಶ್ಚಿಮ ರಂಗಧಾಮನಿಗೊ 5 ಬಗೆ ಬಗೆ ನಾಮಗಳಿಂದ ಪೂಜೆಯಗೊಂಬ ಅಗಣಿತ ಮಹಿಮಗೊ ಆಶ್ಚರ್ಯಗೊ ಖಗವಾಹನ ಕರಿರಾಜ ವರದಗೊ ನಿತ್ಯ ತೃಪ್ತನಿಗೊ 6 ಶ್ರದ್ಧೆಯಿಂದಲಿ ತನ್ನ ಭಜಿಪ ಭಕ್ತರ ಕಾಯ್ವ ರೌದ್ರಿನಾಮ ಸಂವತ್ಸರದಿ ಮುದ್ದು ಮೂರುತಿ ಕಮಲನಾಭ ವಿಠ್ಠಲನಿಗೆಪದ್ಮಾಕ್ಷಿ ವನಮಾಲೆ ಹಾಕಿದೆಯಾ 7
--------------
ನಿಡಗುರುಕಿ ಜೀವೂಬಾಯಿ
ಮದನ ಜನಕ ಹೃದಯ ನಿಲಯಕೆ ಮುರವÀುಥನ ಪ ಆದರದಲಿ ಉಪಚರಿಸುವೆನು ಕಲಿ ಬಾಧೆಯ ಪರಿಹರಿಸೋ ಮಧುಸೂದನ ಅ.ಪ ಪೂರ್ಣಸದಾಗಣಿತೇಡ್ಯಗುಣಾನುಭ ವೈಕಶರೀರ ಕಲುಷದೂರ ಚೀರ್ಣ ಪುಣ್ಯಚಯದಿಂದ ಕರೆಯಲು ತ್ರಾಣವಿಹುದು ಮನ್ಮನದಲಿ ನೆಲಿಸೊ 1 ಶಮದಮಗಳನುಗ್ರಹಿಸುತ ಸಜ್ಜನ ಸಮಿತಿಯ ಸಹವಾಸವ ನೀಡೋ ಅಮಿತಪ್ರಮತಿಗಳ ಶಾಸ್ತ್ರಪ್ರವಚನದಿ ಮಮತೆಯ ಸ್ಥಿರಪಡಿಸೊ ಶೃತಿಪತೇ 2 ಗುರುಕರಣವು ನಿನ್ನನರಿಯಲು ಕಾರಣ ಶರಣಂಭವ ಸಂತತ ಹಿರಿಯರು ಮಾಡಿದ ಸಾಧನಗಳಿಗಿದು ಹಿರಿದಾಗುವುದೇ ಪ್ರಣತ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ಮಂದರೋದ್ಧಾರಾನಂದನ ಕಂದ ಬಾ ಬೇಗಾ ನಿನ್ನ ಸುಂದರಾನನಾನಂದದಿ ನೋಳ್ಪೆ ಬಾ ಬೇಗಾ ಪ. ಮದನ ಮೋಹನ ಚದುರ ಶ್ರೀ ಕೃಷ್ಣ ಬಾ ಬೇಗ ಸುದತಿಯೇರ ಮುದವಿಹಾರ ಮದಸೂದನ ಕೃಷ್ಣ ಅ.ಪ. ಕಸ್ತೂರಿತಿಲಕ ಶಿಸ್ತಲಿ ಪೊಳೆಯೆ ಬಾ ಬೇಗಾ, ನಿನ ಮಸ್ತಕದರಳೆಲೆ ಶಿಸ್ತನು ನೋಳ್ವೆ ಬಾ ಬೇಗಾ ಹಸ್ತದಿ ಕಡಗ ಕಂಕಣ ಶೋಭಾ ಬಾ ಬೇಗಾ ಶಿಸ್ತಿನಿಂದ ಕೊಳಲನೂದೆ ಹಸ್ತಿವರದನೆ 1 ಕೊರಳೊಳು ತುಲಸಿಮಾಲಾ ಶೋಭಾ ಬಾ ಬೇಗಾ ನಿನ ಮುಂಗುರುಳು ಕೂದಲೊಳು ಮೆರೆವ ಕಿರೀಟ ಬಾ ಬೇಗಾ ವೈಜಯಂತಿ ಮಾಲಾ ಶೋಭಾ ಬಾ ಬೇಗಾ ಸರಿಯಾರೊ ಜಗದಿ ನಿನಗೆ ವರ ಶ್ರೀ ಶ್ರೀನಿವಾಸ2
--------------
ಸರಸ್ವತಿ ಬಾಯಿ
ಮದಾಂಧನೋ ನಾನು ಮಧುಸೂದನ ಪ ಜಗವನು ತುಂಬಿದ ತ್ರಿಗುಣಾತ್ಮಕನೆತೆಗೆದು ಕಣ್ಗಳ ನೋಡದ ನಾನು 1 ಪವನನೊಡೆಯ ನಿನ್ನ ಸವಿಸವಿ ಸ್ತವಕೆಕಿವಿಗೊಡದೆ ಕಿವುಡನಾದೆನಾ 2 ಎಡೆಗಿದ್ದರು ಗಡ ಅಡಗಿಹನಿಲ್ಲೆಂದುಹುಡುಕುತ ಕೇಳುವ ಜಡಮತಿ ನಾನು 3 ಗದುಗಿನ ವೀರನಾರಾಯಣನೆ ಎನ್ನಎದೆಯೊಳು ನಿಂತಿರೆ ನೋಡದ ನಾನು 4
--------------
ವೀರನಾರಾಯಣ
ಮನ್ನಿಸೆನ್ನ ಮಧುಸೂದನ ಪ. ಮದನನಯ್ಯ ಮೋಹನಕಾಯಉನ್ನತಗುಣನಿಲಯ ಉಡುಪಿನ ಕೃಷ್ಣರಾಯ ಅ.ಪ. ಶ್ರುತಿಗಳ ತಂದೆ ಮುನ್ನ ಸುರಮುನಿಗಳ ಮನ-ಕತಿ ಹರುಷವ ಕೊಟ್ಟೆ ಅಗಣಿತಗುಣರನ್ನಯತಿಗಳ ಪಾಲಿಸಿದೆ ಮುಂದುವರಿವದಿತಿಜರ ಸೋಲಿಸಿದೆ ಈ ಮಹಿಯೊಳುಮತಿವಂತರ ಪೊರೆದೆ ಮಹಿಮೆಯಿಂದ ಮೆರೆದೆ1 ಅಚ್ಚಹಾರಶೋಭಿತ ಕಂಠ ಆಶ್ರಿತರಿಗೆ ನೀ ನಂಟಮೆಚ್ಚಿದ ಪಾರ್ಥನ ಮಿತ್ರನೆನಿಸಿದೆ ಸುಚರಿತ್ರಮೆಚ್ಚಿದ ನಿನ್ನಯ[ಭಕ್ತÀ್ತ]ವೈಕುಂಠದಮುಚ್ಚಳ ತೆಗೆಸಲು ಶಕ್ತ ಅಚ್ಚುತ ನಿನ್ನಅರ್ಚಿಸಿದವ ಕೃತಾರ್ಥ ಅವನೆ ಸರ್ವಸಮರ್ಥ2 ಎಂದೆಂದು ನಿನ್ನವರೊಳು ಎನ್ನ ಕೂಡಿಸೊ ಕೃಪಾಳುವಂದ್ಯ ಗರುಡನ ಸ್ಕಂಧವೇರಿ ಬಹ ಗೋವಿಂದತಂದೆ ನೀನೆ ತಾಯಿ ನೀನೆ ಹಯವದನಬಂಧು ನೀನೆ ಬಳಗ ನೀನೆ ಮತ್ತದರಿಂದಕುಂದುಮಾಡುವುದು ಬಿಡೋ ಕಂಡು ಕರುಣವ ಮಾಡೋ 3
--------------
ವಾದಿರಾಜ
ಮರಣ ಕಾಲವ ತಿಳಿಸೋ ಮಧುಸೂದನಾ ಪ ಶರಣು ಬಂದವರ ಭಯಹರಣಾ ಅ.ಪ. ಸ್ನಾನಮಾಡಲಿಬೇಕು ಮೌನದಿಂದಿರಬೇಕು ಹರಿಜ್ಞಾನಪೂರ್ವಕ ಹರಿಯ ಧ್ಯಾನಬೇಕುನಾನಾ ವಿಷಯದ ಚಿಂತೆ ಮಾನಸದಿ ಬಿಡಬೇಕುದಾನ ಧರ್ಮಗಳನು ಮಾನಸದಿ ಮಾಡಬೇಕು 1 ಸುತ್ತಲು ಜನರುಗಳ ಹತ್ತಿರ ಕೂಡುತಲಿನಿತ್ಯ ಭಾಗವತಾದಿ ಶಾಸ್ತ್ರಗಳನುಮೃತ್ಯು ಕಾಲದಿ ಪರಿಸೆ ಶ್ರೋತ್ರದಿಂ ಕೇಳಿ ಯಮ-ಭೃತ್ಯರು ಓಡಲಿಬೇಕು ಎತ್ತಿ ಕಾಲುಗಳು 2 ಮಕ್ಕಳು ಮನೆಗಳಲಿ ಚಿಕ್ಕ ಯುವತಿಗಳಲ್ಲಿಮಿಕ್ಕಾದ ಪಶು ಕೃಷಿ ರೊಕ್ಕಗಳಲ್ಲಿಪೊಕ್ಕಿ ಮನಸಿಲಿ ವಿಷಯ ಸಿಕ್ಕಿ ತೊಡಕೆನೊ ಎನ್ನವಕ್ರವಾ ತೋರಿಸುತ ಮೆಲ್ಲ ಕೈ ಬಿಡಿಸಿನ್ನು 3 ಕಮಲ ಮಂದಹಾಸವ ತೋರೋಸಿಂಧು ಉದ್ಧರನೆ ವೃಂದಾವನೀಯೋ 4 ಸಿಂಧುವಿನ ತಟದಿ ಗೋವೃಂದದೊಳಗೆ ಚಂದದಲಿ ಕೊಳಲೂದೋ ಸುಂದರ ಮುಖ ಕಮಲಒಂದೇ ಮನದಲಿ ನೋಡಾನಂದದಲಿ ಮಾಡೋಇಂದಿರೇಶ ನಿನ್ನ ಮುಂದೆ ನಿಂತಿರುವಾನಾರಂದ ಮುನಿ ಗುರುವರ ಮಂದಸ್ಮøತಿ ನೀಡೋ 5
--------------
ಇಂದಿರೇಶರು
ಮಹಾಬಲಿಪುರ ಮಹಾಬಲೇಶ್ವರ ಮಾವಳಿಪುರ ಮಿಹಿರಾ ಸುರುಚಿರ ಪರಾತ್ಪರಾ ಪ ಮಹೀಸುರಾರ್ಚಿತ ಸದಾಕೃಪಾಕರ ವಿಹಂಗವಾಹನ ಪೀತಾಂಬರ ಅ.ಪ ಮಧುಸೂದನ ತವಪಾದುಕಾ ಸಾರದ ಮಾಧವಿ ಸುಮದಲಿ ಪೂದತ್ತರುದಿಸಿ ಮೇದಿನಿಯೊಳು ತವಾರಾಧನ ತತ್ವವ ಬೋಧಿಸುವಂತೆ ನೀಗೈದೆ ಕೃಪಾನಿಧೆ 1 ಶ್ರೀಮದನಂತ ದಿವ್ಯಾಸನಮಂಡಿತ ಶ್ರೀಮಹೀಸಂಯುತ ಲೋಕವಿಖ್ಯಾತಾ ಪ್ರೇಮಸುಧಾನ್ವಿತ ಕಾಮಿತದಾತಾ ಶ್ರೀ ಮಾಂಗಿರಿಪತಿ ಶರಣಸಂಪ್ರೀತಾ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಾಧವ ಗೋ'ಂದ ಬಾರೊದಾಶರಥೆ ದಯಾಸಮುದ್ರ ಬೇಗ ಬಾರೊ 1'ಷ್ಣು ಮಧುಸೂದನ ತ್ರಿ'ಕ್ರಮ ವಾಮನ ಬಾರೋಶಿಷ್ಟಜನರ ತಾುತಂದೆ ಸ್ವಾ'ು ಬಾರೋ 2ಶ್ರೀಧರ ಹೃೀಕೇಶ ಪದ್ಮನಾಭ ಶೌರಿ ಬಾರೊ 3ದಾಮೋಧರ ಸಂಕರ್ಷಣ ವಾಸುದೇವ ಬಾರೊಕಾಮಕಮಲಜ ಕುಶಲವ ಗಂಗಾಜನಕ ಬಾರೊ 4ಪ್ರದ್ಯುಮ್ನ ಅನಿರುದ್ಧ ಪುರುಷೊತ್ತಮ ಬಾರೊಮುದ್ದುಪಾದ ಸೇವೆಕೊಟ್ಟು ಪಾಲಿಸ ಬಾರೊ 5ಅಧೋಕ್ಷಜ ಶ್ರೀನಾರಸಿಂಹ ಅಚ್ಯುತ ಬಾರೊಅಧಮನು ಆರ್ತನು ವಂದಿಪರ ಪತಿತೋದ್ಧಾರ ಬಾರೊ 6ಜನಾರ್ದನ ಉಪೇಂದ್ರ ಹರಿ ಶ್ರೀಕೃಷ್ಣ ಬಾರೊಅನಾಥಪಾಲಕಾಪದ್ಬಾಂಧವ ಅಘಹರ ಬಾರೊ 7ಗುರುವರ ತುಲಸೀರಾಮಸ್ವರೂಪ ಭೂಪ ಬಾರೊಧರರಂಗಸ್ವಾ'ುದಾಸ ಜೀವೋದ್ಧಾರ ಬಾರೋ 8
--------------
ಮಳಿಗೆ ರಂಗಸ್ವಾಮಿದಾಸರು
ಮಾಧವ ಗೋವಿಂದ ಜಯಜಯ ವಿಷ್ಣುವೆ ಮಧುಸೂದನ ತ್ರಿವಿಕ್ರಮಜಯ ವಾಮನ ಜಯ ಶ್ರೀಧರ ಜಯ 1ಜಯ ಜಯ ಹೃೀಕೇಶ ಪದ್ಮನಾಭ ಜಯದಾಮೋದರ ಸಂಕರ್ಷಣ ಜಯಜಯ ವಾಸುದೇವನೆ ಜಯ ಪ್ರದ್ಯುಮ್ನನೆಜಯಾನಿರುದ್ಧ ಪುರುಷೋತ್ತಮ ಜಯ 2ಜಯ ಜಯಾಧೋಕ್ಷಜ ನಾರಸಿಂಹ ಜಯಜಯ ಜಯಾಚ್ಯುತ ಜಯ ಜನಾರ್ದನಜಯ ಜಯೋಪೇಂದ್ರನೆ ಜಯ ಹರೆ ಶ್ರೀ ಕೃಷ್ಣಜಯ ತಿರುಪತಿ ವೆಂಕಟರಮಣ 3ಓಂ ಪೂತನಾಜೀವಿತಹರಾಯ ನಮಃ
--------------
ತಿಮ್ಮಪ್ಪದಾಸರು
ಮಾಧವ ಸರ್ವೇಶ ಗೋವಿಂದಗೆಲಿಸೆಂದು ಕೋಲಸರ್ವೇಶ ಗೋವಿಂದಗೆಲಿಸೆಂದು ವಿಷ್ಣುವಿನ ಸೋಸಿಲೆ ಮೊದಲೆ ಬಲಗೊಂಬೆ ಕೋಲ 1 ಮಧುಸೂದನ ತ್ರಿವಿಕ್ರಮ ವಿಧಿಪಿತ ವಾಮನ ಸುದತೆ ಶ್ರೀಧರ ಋಷಿಕೇಶ ಕೋಲಸುದತೆ ಶ್ರೀಧರ ಋಷಿಕೇಶನ ನೆನೆದರೆ ಹದಕಾನೆ ವರವ ಕೊಡುವೊನು ಕೋಲ 2 ಪದ್ಮನಾಭ ದಾಮೋದರ ಮುದ್ದು ಸಂಕರ್ಷಣವಸುದೇವ ನಮ್ಮ ಗೆಲಿಸೆಂದು ಕೋಲವಸುದೇವನಮ್ಮ ಗೆಲಿಸೆಂದು ಪ್ರದ್ಯುಮ್ನಅನಿರುದ್ಧರ ಮೊದಲೆ ಬಲಗೊಂಬೆ ಕೋಲ 3 ಅಧೋಕ್ಷಜ ಹರುಷಾಗೊ ನಾರಸಿಂಹ ಪುರುಷ ಸೂಕ್ತದಲೆ ಪ್ರತಿಪಾದ್ಯ ಕೋಲಪುರುಷಸೂಕ್ತದಲೆ ಅಚ್ಯುತಹರುಷದಿ ನಮ್ಮ ಗೆಲಿಸೆಂದು ಕೋಲ 4 ಪಾದ ನೆನದೆವ ಪಂಥಗೆಲಿಸೆಂದು 5
--------------
ಗಲಗಲಿಅವ್ವನವರು
ಮಾಧವ ಮಧುಸೂದನ ಕೇಶವÀ ಹರೆ ಯಾದವ ಕೃಷ್ಣ ಶ್ರೀಹರಿ ಶೌರೆಪ ವೇದವೇದ್ಯ ಸನÀ್ಮುನಿಗುಣ ಸೇವಿತ ಸಾಧುವಂದಿತ ಚರಣಕೆ ನಮಿಪÉ ಅ.ಪ ಮಂದರಧರ ಗೋವಿಂದ ಮುಕುಂದನೆ ಇಂದಿರೆಯರಸ ಹೃನ್ಮಂದಿರದಿ ಮಂದಗಮನೆ ಮಹಾಲಕ್ಷ್ಮಿಯೊಡನೆ ಆ- ನಂದದಿ ನಲಿನಲಿದಾಡು ಹರಿ 1 ಸರಸಿಜನಾಭನೆ ಮುರಳಿಧರನೆ ಹರಿ ಪರಮಪುರುಷ ಪಾವನರೂಪ ಸುರಗಂಧರ್ವರು ಸ್ತುತಿಸುತ ಪಾಡ್ವರು ವಾಹನ ಹರಿಯೇ2 ಆದಿಪುರುಷ ಪುರುಷೋತ್ತಮ ಹರಿ ಈ ವತ್ಸರ ಶುಭದಿನಗಳಲಿ ಆದರದಲಿ ಗುರುಹಿರಿಯರ ಸೇವಿಸಿ ಶ್ರೀಧರನನ್ನು ಭಕ್ತಿಲಿ ಭಜಿಸಿ 3 ಗೋಕುಲಪತಿ ಗೋವಿಂದ ಮುಕುಂದನೆ ಮಾತುಳಾಂತಕ ಮಧುಸೂದನನೆ ಗೋಪತಿ ಕೃಷ್ಣನೆ ಸಲಹುವ ಸುಜನರ ಮೂಕಾಂಬಿಕೆ ನಾಮವ ಧರಿಸಿ 4 ಕಡುಹರುಷದಿ ನಿನ್ನಡಿಗಳಿಗೆರಗುವೆ ಬಿಡದೆ ರಕ್ಷಿಸೆಂದೆನ್ನುತಲಿ ಕರುಣದಿ ಕಾಪಾಡುತ ಸಲಹುವದು ಕಮಲನಾಭ ವಿಠ್ಠಲ ದೇವ 5
--------------
ನಿಡಗುರುಕಿ ಜೀವೂಬಾಯಿ
ಮಾಧವ ಮಧುಸೂದನ ಗೋವರ್ಧನ ಪ ದೋಷನಿವಾರಣ ಶೇಷಾರಿಗಮನ ವಾಸುಕಿಗಿರಿಶಯನ 1 ಕೀಟಕ ಸಂಹರ ಹಾಟಕಾಂಬರ ತಾಟಕಿಪ್ರಾಣಹರಣ 2 ಕೌಸ್ತುಭಮಾಲಾ ಕುಜನರ ಕಾಲ ಕಂಸಾಸುರಾದಿ ಮರ್ದನ 3 ಗೋಕುಲವಾಳಿದ ಗೋಪಿಯರ್ವರದ ಗೊಪ ಗೋಪತಿ ನಂದನ 4 ಮಂದರ ನಿಲಯ ಸಿಂಧುಜಾಪ್ರಿಯ ಬಂಧುವೆ ಅನಾಥಜನ 5 ಜಗದೋದ್ಧಾರಣ ಜಗತ್ರಯಮೋಹನ ಜಗಜೀವನ ಪಾವನ 6 ಶಂಖಚಕ್ರಾಂಕಿತನೆ ಕಿಂಕರಜನ ಪ್ರೀತ ಶಂಖಸುರಾದಿ ಮರ್ದನ 7 ಯದುಕುಲಸಂಭವ ಸದಯ ಯಾದವ ಸದಮಲಸುಖಸದನ 8 ಹರಿಗೋವಿಂದ ಪರಮಾನಂದ ನರಹರಿ ಸಿರಿರಮಣ 9 ಸಿರಿನರಸಿಂಗ ಪರಿಭವಭಂಗ ಪರತರ ಗಿರಿಧಾರಣ 10 ನಿತ್ಯನಿರಾಮಯ ನಿರ್ಗುಣ ನಿರ್ಭಯ ನಿರಂಜನ 11 ಪರಮಪುರುಷ ಹರಿ ಸರ್ವೇಶ ಸುರಮುನಿನುತಚರಣ 12 ನಿಮಗೋಚರ ಜಗದಾಧಾರ ಅಘನಾಶ ಭಜಕಜನ 13 ವೇದಾದಿನಮಿತ ವೇದವೇದಾತೀತ ಸಾಧುಸಜ್ಜನಪ್ರಾಣ 14 ವರದಶ್ರೀರಾಮ ನಿರತರ ಪ್ರೇಮ ಪರಿತರ ಪರಿಪೂರ್ಣ15
--------------
ರಾಮದಾಸರು