ಒಟ್ಟು 110 ಕಡೆಗಳಲ್ಲಿ , 37 ದಾಸರು , 103 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಶ್ರೀನಿವಾಸಾರ್ಯರ ಶೃಂಗಾರ ಗುಣಂಗಳಆನೆಂತು ವರ್ಣಿಸುವೆನು ಪ ದಾನವಾಂತಕ ಹರಿಯ ಮಾನಸಾರ್ಚನೆ ಮಾಳ್ಪಮಾನಿಸಾ ವೇಷಧರರ ಇವರ ಅ.ಪ. ನಿರ್ಜರ ಪತಿಯ ಚಿತ್ತ ಸಂಪಾದಿಸುವರಮತ್ತು ಗಜವೆಂಬ ದುರ್ವಾದಿಗಳನೇ ಮುರಿದು ಹತ್ತು ದಿಕ್ಕಿಲಿ ಮೆರೆವರ ಇವರ 1 ಪಾದ ಅಂಗಾರ ಕರಮುಟ್ಟಿ ಪಾಲಿಸುತ್ತಿಹರ ||ವರ ಮಂತ್ರಾಕ್ಷತೆಯನ್ನಿತ್ತು ಮುದದಿಂದ ಪಾ-ಮರರನ್ನೆ ಪೊರೆವರ ಇವರ2 ಲಕ್ಷ್ಮೀಪತಿ ಶ್ರೀನಿವಾಸಾರ್ಯರೆಮ್ಮನು ಬಿಡದೆ ರಕ್ಷಿಸಲೆಂತೆಂಬೆನೊಅಕ್ಷರ ಪುರುಷ ಅಪ್ರಾಕೃತನ ತೋರಿ ಮದ ಮತ್ಸರವ ಬಿಡಿಸೆಂಬೆನೊ ||ಸೂಕ್ಷ್ಮಾಂಬರಧರ ಮೋಹನ ವಿಠಲನಈ ಕ್ಷಣದಿ ತೋರಿಸೆಂಬೆನೊ ನಾನು 3
ಷಟ್ಪದಿ ಭೃಂಗ ದಿವಿಜ ಲಲಾಮ ಶುಭಗುಣ ಸಾಂದ್ರ ಗುರುವರನೇಸೇರಿಹೆನು ತವಶಿಷ್ಯ ಕೋಟಿಲಿ ಬೀರಿ ಕರುಣಾ ದೃಷ್ಟಿ ಶ್ರುತಿ ಭಂಡಾರ ಸೂರೆಯ ಮಾಡ್ವ ಹಾ ಹಾ ಕಾರದಿಂ ತಪಿಪ 1 ಬಾಲ ನೆನ್ನಯ ಶಿರವ ನಿಮ್ಮಯ ಶೀಲಕರದಿಂ ಭೂಷಿಸುತ ಕವಿತಾ ಲತಾಂಗಿಯ ತಾಂಡವಾಡಿಸಿ ಚಂದ್ರಮೌಳಿನುತಕಾಳಿಮನಕುಮುದೇಂದು ಜಗಸಂ ಚಾಲಕ ಪ್ರಭು ಮುಖ್ಯ ಪ್ರಾಣಗುಪಾಲಿಸುತ ಸತ್ತಾದಿ ಸಕಲವ ಪೊರೆದು ಮೆರವಂಥಾ 2 ಪತಿ ಮಾ ವಂದ್ಯ ನಿರುಪಮ ನಾರಸಿಂಹನುಅಂದು ನಿಮ್ಮನು ಕಾಯ್ದ ತೆರಪೊರೆ ಶ್ರೀ ಸುಧೀಂದ್ರ ಸುತ 3 ಏನಿದೇನಿದು ನಿಮ್ಮ ಮಹಿಮೆಯಮಾನವರಿಯಲು ಸುರರಿಗಾಗದುಮಾನವರ ಪಾಡೇನು ಶಿರತೂ ಗುತಿಹ ಫಣಿರಾಜಮಾನ್ಯ ಸುರ ಋಷಿ ಕರುಣ ಬಲವೋಮೇಣ್ಪರಿಸರನ ಕೃಪೆಯೊ ಕಾಣೆನುದಾನಿ ನರಹರಿ ವರದ ಫಲವೋ ಮೊತ್ತವೇ ಯೆಂಬೆ 4 ಜಂಭಾರಿ ಮೇಣಾಬಾಲ ಸುಬ್ರಹ್ಮಣ್ಯನೋ ಶಂಕಿಪುದು ಸುರನೀಕಾ 5ಸೂಕ್ಷ್ಮಮತಿಗಳೆ ಪೇಳಿ ಸರ್ವಾಧ್ಯಕ್ಷನವತಾರವನು ಯಾವ ಸುಲಕ್ಷಣ ಭಕುತಗೇನೆ ಮಾಡಿಹ ನಮ್ಮಗುರುವ ಬಿಡೆಪಕ್ಷ ವಹಿಸದೆ ಪೇಳಿ ಯಾವನು ಲಕ್ಷ್ಯ ಮಾಡದೆ ಕಷ್ಟ ಮಾತೆಯಕುಷಿಯಂ ಬಂದಿಹನು ಮುಮ್ಮುಡಿ ನಮ್ಮ ನುದ್ಧರಿಸೆ 6 ವ್ಯಾಜ ವಿಲ್ಲದಲೆದೈತ್ಯ ಪಿತತಾನಿತ್ತ ಬಾಧೆಗೆ ನಾಥ ನರಹರಿ ಬಂದುದಚ್ಚರಿಯಂತೆ ಭಾವಿಸೆ ಭಕ್ತವತ್ಸಲ ಬಿರುದು ಪೊಳ್ಳೆಬಿಡೆ 7 ಸತಿ ಸಂಹಾರ ಕಾಟವು ಮತ್ತೆ ಯತಿ ಯಂತಾಗೆ ಹಾಗೆಯೆನಿಂತಿರಲು ವೃಂದಾವನದಿ ಕಾಡುವರು ಶಿಷ್ಯಗಣಾ 8 ಸತಿಯ ಬೇಕೆಂದೊಬ್ಬ ನೀಡೈ ಸುತನ ದಂಪತಿ ವ್ಯಾಜ್ಯ ಹರಿಸಿರಿಜತನ ಮಾಡಿಸಿ ವೇತನವ ಹರಿಸಿನ್ನು ವ್ಯಾಧಿಗಳಪಥನ ವಾಯಿತು ಕೂಳುಕೊಡಿಸೈ ಸತತ ವೀತೆರ ಬಯಕೆ ವ್ರಾತದಿಸುತಪ ನೀನೆಂತಾಗೆ ಕುಪಿತನು ಬಲ್ಲ ಬತ ಹರಿಯೇ 9 ತಿರುಗುತಲಿಹರು ತಮ್ಮಯ ಹೀನ ನಡತೆಗಳಿಂದ ಸ್ತ್ರೀಯರು ವಿಧಿಯ ನಡೆಸುವರು ಚೆನ್ನ ಔಷಧ ವಿಹುದು ನಿನ್ನಲಿ ಹಣ್ಣಿನಾಶಯ ತೋರಿನೀ ಭವ ಹುಣ್ಣುವಳಿಯುವೆ ಎಷ್ಟು ಕರುಣಿಯೊ ಗುರುವೆ ಶರಣೆಂಬೆ 1 ಕಳತ್ರ ವೆಲ್ಲವನೆಂತೆನಲು ಬಲು ಹುಚ್ಚುತನವ ರ್ಣಿಸಲು ಮಿಕ್ಕುದುದಾಉಕ್ತಿ ಭಜಿಸುವಗೇನು ಪೇಳ್ವುದು ಮುಕ್ತಿಕರಗತ ವೇಕೆ ಸಂಶಯ ಶಾಸ್ತ್ರ ಭಾಗ್ಯವೆ ಸಾಕು ಕರುಣಿಸಿ ನಮಿಪೆ ಭೂಯಿಷ್ಠ 11 ಸೂತ್ರ ಖರೆ 12 ಪ್ರೀತಿತಮ ಇವನಂಥ ದಾತನ ಗ್ರಂಧ ನಿಚಯವ ಭೋಜ್ಯ ಕಿಡುತಲಿ ಸುತ್ತಿಗೆದ್ದಲು ಹುಳಕೆ ಮೆಚ್ಚುವ ನೇನು ಪಯ ಸುರಿಯೆಪುತ್ರರಿಗೆ ಮದ್ದಿಕ್ಕಿ ಪಿತನಿಗೆ ಮತ್ತೆ ಭೋಜನ ವಿಕ್ಕೆ ಬಹುಸುಪ್ರೀತಿ ಯಾದಂತಾಯ್ತು ಹರಿಹರೀ ಪಾಹಿಮಾಂ ಪಾಹೀ 13 ಶುಂಠನಾದರು ಪಠಿಸೆ ನಮ್ಮಯ ಕಂಠದಿಂ ಬಂದಂಧ ನುಡಿವೈಕುಂಠ ರಮಣನ ಕಾಂಬ ಪಂಡಿತ ನೆನೆಸಿ ಧರೆಯೊಳಗೆಕಂಟಕವ ನಿರಿದು ಭವದಲಿ ವಿಷ ಕಂಠ ಗಾತಪ್ರಿಯ ತನ್ನಯಭಂಟನನು ಮಾಡಿಕೊಳಲೆಂತೆಂದೆನ್ನ ಹರಿಸಿ ಪೊರೆ 14 ಏಳಿರೇಳಿರಿ ಸಂತ ಮಿತ್ರರೆ ಕೇಳಿ ಕೇಳಿದುದೆಲ್ಲ ನೀಡುವಪಾಲಕನು ಶ್ರೀ ರಾಘವೇಂದ್ರನು ಇಲ್ಲ ಮೆರೆಯುತಿರೆಕೇಳಿ ಭವಸುಖ ಮತ್ತೆ ಭವದಲಿ ಬೀಳುವರೆ ವಿಜ್ಞಾನ ಯಾಚಿಸಿಕೊಲ್ಲಿರೀ ಸಂಸಾರ ಬೀಜವ ಕಲಿಯು ಎಷ್ಠರವ15ನಾಲ್ಕುಶತ ಐವತ್ತು ವರುಷವೆ ವೋಲಗವ ಕೈಕೊಂಬ ಮುಂದಿವಅಲಸವ ಮಾಡಿದೆಡೆ ಸುರತರು ಬಿಟ್ಟತೆರವೇನೆಜಾಲ ಮಾತುಗಳೇಕೆ ಮುಂದಿನ ಶೀಲ ಮಾರ್ಗವ ನೋಡ್ವ ಜಾಣನುಪಾಲಿಸೈಧೋರೆ ಕೆಟ್ಟೆ ಕೆಟ್ಟೆನು ಎನ್ನ ಕೈ ಕೊಡುವ 16 ಏಕೆ ಭಯ ನಮಗಿನ್ನು ನರಕದ ಏಕೆ ಕಳವಳ ಅಶನ ವಸನÀಕೆಏಕೆ ಸಂಶಯ ಜ್ಞಾನ ವಿಶಯದಿ ಪಿಡಿಯೆ ಗುರುವರನೆನೂಕಿ ವಿಷಯದಿ ಬಯಕೆ ಬೇಗನೆ ಬೇಕು ಎನ್ನುತ ಜ್ಞಾನ ನಿಧಿಗಳಹಾಕಿ ದಂಡವ ಪಾಹಿ ಗುರುವರ ಪಾಹಿ ಯೆಂತೆನ್ನ 17 ಭುಕ್ತಿ ಹಾಗೆ ವಿರಕ್ತ ಭಕ್ತಿಯು ಭಕ್ತ ವೃಂದಕೆ ಭ್ರಷ್ಟ ಬಿಟ್ಟವನು 18 ಜಯ ಜಯವು ಗುರುಸಾರ್ವಭೌಮಗೆಜಯ ಜಯವು ಮಂತ್ರಾಲಯಸ್ಥಗೆಜಯ ಜಯವು ವಿಜಯೀಂದ್ರ ಪೌತ್ರಗೆ ವ್ಯಾಸರಾಜನಿಗೆಜಯ ಜಯ ಪರಿಮಳಾ ಪ್ರದಾತಗೆ ಜಯಜಯವು ಖಂಡಾರ್ಥ ನೀಡ್ದಗೆಜಯ ಜಯವು ಸಶರೀರ ಬೃಂದಾ ವನದಿ ಸೇರ್ದವಗೇ 19 ಜಯ ಜಯವು ಬಾಹ್ಲೀಕ ರಾಯಗೆ ಜಯ ಜಯವು ಶ್ರೀ ಸತ್ಯಸಂಧಗೆಜಯ ಜಯವು ಪ್ರಹ್ಲಾದರಾಜಗೆ ಶಿಷ್ಯ ವತ್ಸಲ್ಯಗೆಜಯ ಜಯವು ಶ್ರೀ ರಾಘವೇಂದ್ರಗೆಜಯ ಜಯವು ಮಂಗಳವ ಸುರಿಪಗೆಜಯ ಜಯವು ಜಯ ಮುನಿಯ ಪ್ರೀಯಗೆ ನಮ್ಮ ಗುರುವರಗೆ 20 ಮಾನನಿಧಿ ಜಯತೀರ್ಥ ರಾಯರಘನ್ನ ಹೃದಯಗ ವಾಯು ವಂತರಶ್ರೀ ನಿಲಯ ಶ್ರೀ ಕೃಷ್ಣವಿಠಲ ಪ್ರೀಯ ಗುರುರಾಜನಾನು ಪಾಮರ ಬಾಲ ನುಡಿಗಳ ನೀನೆ ತಿದ್ದುತ ಮನ್ನಿಪುದು ನಾನಿನ್ನ ದಾಸರ ದಾಸನೆಂದು ಸ್ವೀಕರಿಸು ಶರಣು 21
ಸಂಚಿತ ಪ್ರಾರಬ್ಧ ಕ್ರಿಯಮಾಣಾ | ಪ್ರಪಂಚದಿ ಈಡ್ಯಾಡೋ ಪ ಸ್ಥೂಲಕೆ ಭೋಗಕೆ ಸಾಕ್ಷಿಯು ಸೂಕ್ಷ್ಮವು | ಕಾರಣದಲಿ ಸಾಕ್ಷೀ || ಭೋಗಾಪೇಕ್ಷೆಯು ಸೂಕ್ಷ್ಮವು ನೀನಿತುದುಹ ಕಾರಣ ಲಕ್ಷೀ 1 ಸ್ಪರ್ಶದಿ ಶಬ್ದವು ಶಬ್ದಾಸ್ಪರ್ಶವಿದು | ರೂಪವು ತೋರಿತು ರೂಪವು ರಸದಲಿ || ಗಂಧದಿ ಕಾಣಿಸಿತೊ 2 ಕರ್ಮದಿ ರೂಪವು ರೂಪದಿ ಕರ್ಮವು | ಕರ್ಮರೂಪಕ್ಕೇ ||ವ್ಯಾಪಕ ಭವತಾರಕನೆಂದರಿಯದೆ ಕಲಾಪವ್ಯಾಕೀ ಮನಕೆ 3
ಸತ್ಸಂಗ ಮಾಡೊ ಮನವೆ ಚಿತ್ಸುಖ ನೋಡಲಿಕೆ ಅತಿಸೂಕ್ಷ್ಮಾನಂದ ಸುಪಥ ಅತಿಶಯಾನಂದ ಸದ್ಗತಿ ಸುಮೋಕ್ಷದಾಯಕ ಹಿತದೋರಿಕೊಡುವ ಸದ್ಗುರುನಾಥ ಧ್ರುವ ತೊಡಕಿ ಮಿಡುಕಬ್ಯಾಡ ಹಡಕಿ ವಿಷಯದೊಳು ಗಡಕವಾಗಿ ಕೆಡುಕ ಬುದ್ಧಿಯಿಂದ ಕೆಡುದೇನ ಬಡದ ಭವಣೆ ಬಟ್ಟು ತಾವು ಕೊಡುವರೇನ ಹಾಕಿ ವೈವಯಮನ ಬ್ಯಾಗೆ ಗುರುದಯಕರುಣ 1 ಸಿಲ್ಕಿಮಾಯ ಮಲ್ಕಿನೊಳು ಅಳ್ಕಿ ಆಲಪರಿಯಬ್ಯಾಡ ಬಲ್ಕಿ ಮಾಡಿಕೊಳ್ಳಿ ನೀ ಸುಜ್ಞಾನ ಕ್ಷುಲ್ಲಕ ಬುದ್ಧಿಗಾಗಿ ನಿನ್ನ ತನುವಿನೊಳಗೆ ಖೂನ ನುಲ್ಕಿ ಸುಟ್ಟ ಮಲ್ಕಿನಂತೆ ಜನಕಾಲಂಬ ತೋರಿ ನೀನು ಜಲಕಮಲದಂತಿರನುದಿನ ನಿಲ್ಕಿ ನೆಲೆಗೊಂಬುದಿದು ತಳಕು ತನ್ನೊಳಗದೆಯೆಂದು ನಾಲ್ಕುವೇದ ಸಾರುತಿದೆ ಪೂರ್ಣ2 ಮಾನವ ಜನ್ಮ ನಿರ್ತದಿಂದ ಅರ್ತು ಕೂಡಿ ಕರ್ತು ನಿಜಾನಂದ ಗುರುಬೋಧ ಥರಥರದಿ ತೋರಿ ಪೂರ್ಣ ಸಾರ್ಥಕ ಮಾಡುವದಿದು ತೀರ್ಥಪುಣ್ಯ ಸರ್ವಕ್ಷೇತ್ರವಾದ ಅರ್ಥಿಯಿಂದವಿಡಿದು ಗುರು ಪಡಿಯೊ ನಿನ್ನ ಸ್ವಹಿತದ 3
ಸಮಜೊ ಭಾಯಿ ಸಕುನಾ ಚಾರೊ ಖುದಾಕಾ ತೆಲಗು ಕನ್ನಡ ತುರಕಾರೆ ವಂದೇ ಸುಖ ಧ್ರುವ ನಜರೋಮೆ ನಜರೋಮೆ ತನ್ನೊಳಗದೆ ಅತಿಸೂಕ್ಷ್ಮವಾಗಿ ತಿಳಕೋಮೆ ತಿಳಕೋಮೆ ಸದ್ಗುರು ವಚನ ಶೋಧುನಿ ಪಾಹಾ ಸಪ್ರೇಮ ಸಪ್ರೇಮ ಚುಡುವಯ್ಯ ಉನ್ನದಿ ಪೂರ್ಣ ಘನ ಮಹಿಮೆ 1 ಫ್ಯಾರೆ ವಳಖೂನಿ ಸಾರಾಸಾರಾ ನಿವಡೂನಿ ನಿವಡೂನಿ ನಜರ ಹುಜರ ದೇಖೋ ಯಾರಾ ಹೈಗನೀ ಹೈಗನಿ ಜನ್ಮಕ ಬಂದು ಮಾಡುವದೆ ಸಾಧನೀ ಸಾಧನೀ ಮಂಚಿ ಉನ್ನದಿ ನಕಳೆ ಸದ್ಗುರು ಪಾವುನಿ 2 ಚೆಪ್ಪೆವೈಯ್ಯ ಎಂದರ ಹೇಳುವ ಗುರು ನೀಠಾ ಗುರುನೀಠಾ ಆನಂದ ಆಹೆ ತುಜ ಮಹಿಪತಿ ಸುಖ ಮೋಠಾ 3
ಸೀತಾಪತಿವಿಠಲ ದಾಸಳ ನಿರ್ಯಾಣ ಪದ ಮಾಧವನಾ ಪುರ ಸೇರಲು ಬೇಗ ಪ. ಪುಟ್ಟಿದಾರಭ್ಯದಿ ನಿಷ್ಟೆನೇಮದೊಳಿದ್ದು ಕಷ್ಟಪರಂಪರೆ ಸಹಿಸುತ ಜಗದಿ ಹರಿಯ ಕರುಣದಿ ಗುರುಕೃಪೆ ಪಡೆದಿ 1 ಹಿರಿಯೂರೆನ್ನುವ ಪುರ ವರ ವೇದಾವತಿ ತೀರ ಪರಮ ಸಾತ್ವಿಕರಲ್ಲಿ ಜನುಮ ತಳೆದಿ ತುಳಸಿಯ ವರದಿ ಮುದ್ದಿನಿಂ ಬೆಳೆದಿ 2 ಶಿಷ್ಟ ಸಂಪ್ರದಾಯ ಕಟ್ಟಿನೊಳಗೆ ನಿನ ಗಷ್ಟಮ ವರುಷದಿ ಮದುವೆಯ ಮಾಡಿ ಹರುಷವಗೂಡಿ ಹರಿಯ ಕೊಂಡಾಡಿ3 ಸತಿ ರುಕ್ಮಿಣೀಬಾಯಿ ಹೆಸರಿನಿಂ ಬಾಳ್ವೆಯ ಬಹು ಅಲ್ಪಕಾಲ ಕೊಟ್ಟನೆ ಸಿರಿಲೋಲ ಮುಸುಕಿತು ಮಾಯಜಾಲ 4 ಸಂಸಾರ ಕೈಕೊಂಡು ವಂಶಕೊಬ್ಬನ ಪಡೆದು ಕಂಸಾರಿ ಕರುಣದಿ ಇರುತಿರೆ ನೀನು ವಿಧಿ ತಂದೊಡ್ಡಿದನು 5 ಎರಡು ವರ್ಷದ ಮಗುವ ಕರದಲ್ಲಿ ಕೈಕೊಂಡು ಪರಿಪರಿ ಕಷ್ಟದಿ ಶಿಶುವ ಬೆಳೆಸಿದೆ ವಿದ್ಯೆ ಕಲಿಸಿದೆ ಪುತ್ರಗ್ಹರಸಿದೆ 6 ಒಬ್ಬ ಆ ಮಗನರ್ಥಿ ಸಂಸಾರವನೆ ಕಂಡು ಉಬ್ಬಿ ಹರುಷಾದಲ್ಲಿ ಇರುತಿರೆ ನೀನು ಮೊಮ್ಮಕ್ಕಳನು ಪಡೆದೆ ನಾಲ್ವರನು 7 ಘಟಿಸುತ ಸ್ವಪ್ನದಿ ಸೇವೆಗೈಯ್ಯೆಂದು ಅಭಯವನಂದು ಕೊಡಲು ದಯಸಿಂಧು 8 ಮರುದಿನ ಮನೆಯಲ್ಲೆ ಭರದಿ ಸೇವೆಯ ಕೊಂಡು ಹರಿವಾಯುಗಳನಿಟ್ಟು ಸುತ್ತುವರಿಯುತ್ತ ಎಡವಿ ಬೀಳುತ್ತ ಪ್ರದಕ್ಷಿಣೆ ಬರುತಾ 9 ಒಲಿದು ಆ ಭಕ್ತಿಗೆ ವರನೇತ್ರವಿತ್ತನು ನಳಿನನಾಭನ ಭಕ್ತ ಘಟಿಕಾಚಲನಿಲಯ ಭಾರತಿಪ್ರೀಯ ದಿವಿಜರ ಒಡೆಯ 10 ಭಕ್ತಿ ವಿರಕ್ತಿ ಜ್ಞಾನವು ಚಿತ್ತದಿ ಮೂಡಿ ಸೋತ್ತಮರಾದ ಶ್ರೀ ವಿಬುಧರ ದಯದಿ ಮೋಕ್ಷಸಾಧನದಿ ದಿನಗಳ ಕಳೆದಿ 11 ಶ್ರವಣ ಕೀರ್ತನ ಸ್ಮರಣೆ ಮನನಾದಿಗಳನೆಲ್ಲ ತವಕದಿ ಕೈಕೊಂಡು ಮೋದದಿ ಮೆರೆದಿ ಕಷ್ಟವ ಮೆರೆದಿ ಹರಿಗುರು ದಯದಿ 12 ಪ್ರಥಮ ಯಾಮದಲೆದ್ದು ಜಿತಮನದಿಂದ ಶ್ರೀ ಪತಿಯ ಸ್ತೋತ್ರಗಳನ್ನು ವದನದಿ ಸತತ ಪರಿಯಂತ 13 ಉಚ್ಛಸ್ವರದಿ ನೀನು ಪಾಡಿದ್ಹಾಡುಗಳಿಂದು ಅಚ್ಚಳಿಯದೆ ನಮ್ಮ ಸ್ಮರಣೆಯೊಳ್ನಿಂತು ಹರುಷವನಾಂತು ಮರೆಯುವುದೆಂತು 14 ವೃದ್ಧಾಪ್ಯ ತಲೆದೋರೆ ಇದ್ದೊಬ್ಬ ಪುತ್ರನು ಪದ್ಮನಾಭನ ಪುರ ಸೇರಿ ನಿನ್ನಗಲಿ ದುಃಖದಿ ಬಳಲಿ ತೊಳಲಿದೆ ಬಳಲಿ 15 ಪೌತ್ರರಿಬ್ಬರು ನಿನ್ನ ಹೆತ್ತಮ್ಮನಂದದಿ ಚಿತ್ತದಿ ತಿಳಿದಿನ್ನು ಸಲಹುತ್ತಿರಲು ಹರಿದಯ ಬರಲು ದುಃಖ ಮರೆಯಲು 16 ಕಲ್ಯಾಣನಗರದಿ ಕಿರಿಯ ಮೊಮ್ಮಗನಿರೆ ಆಹ್ಲಾದದಿಂದ ನೀನವನಲ್ಲಿ ಇರಲು ಸದ್ಗುರು ಬರಲು ಜ್ಞಾನವೆರೆಯಲು 17 ಹರಿದಾಸಕೂಟದ ವರ ಅಂಕಿತವ ಕೊಂಡು ಗುರುಕರುಣವ ಪೊಂದಿ ನೀ ನಮಗೆಲ್ಲ ಸನ್ಮಾರ್ಗಕ್ಕೆಲ್ಲ ಮೊದಲಾದೆಯಲ್ಲ 18 ಶ್ರೀ ತಂದೆ ಮುದ್ದುಮೋಹನದಾಸರ ದಯದಿ ಸೀತಾಪತಿವಿಠ್ಠಲನ್ನ ಒಲಿಸಿದೆ ಧ್ಯಾನದೋಳ್ತಂದೆ ಆನಂದಪಡೆದೆ 19 ಕಂಚಿ ಕಾಳಹಸ್ತಿ ಶ್ರೀ ರಂಗಯಾತ್ರೆಯ ಸಂಚಿಂತನೇಯಿಂದ ಗೈದೆಯೆ ನೀನು ಗಳಿಸಿದೆ ಇನ್ನು ಭಕುತಿಯ ಪೊನ್ನು 20 ಉಡುಪಿ ಮಂತ್ರಾಲಯ ಸೇತು ರಾಮೇಶ್ವರ ಕಡು ಭಕ್ತಿಯಲಿ ತಿರುಪತಿ ಕ್ಷೇತ್ರ ಚರಿಸಿ ಕಷ್ಟವ ಸಹಿಸಿ ಶ್ರೀ ಹರಿಗೆ ಅರ್ಪಿಸಿ 21 ಕಡುಕೃಪೆಯಿಂದಂದು ಕಣ್ಣನ್ನೆ ಕೊಟ್ಟಂತ ಮೃಡಪಿತ ಘಟಿಕಾಚಲೇಶನ್ನ ಕೂಡಿ ಕಣ್ತುಂಬ ನೋಡಿ ತನುವನೀಡಾಡಿ22 ಅಂತರಂಗದ ಬಿಂಬ ಸರ್ವಾಂತರ್ಯಾಮಿ ಎಂ ತೆಂಬಂಥ ಚಿಂತನೆ ಸಂತತಗೈದೆ ಅಭಿಮಾನ ತೊರೆದೆ ದ್ವಂದ್ವ ಸಹಿಸಿದೆ 23 ವ್ರತನೇಮ ಜಪತಪ ಸತತದಿಗೈಯ್ಯುತ್ತ ಕ್ಷಿತಿವಾರ್ತೆಗೆಳಸಾದೆ ಮನವನ್ನೆ ಸೆಳೆದು ಹರಿಪಾದಕ್ಕೆರದು ಹಿತವನ್ನೆ ಮರೆದು 24 ಭಾಗವತಾದಿ ಸಚ್ಛಾಶ್ತ್ರ ಶ್ರವಣಗೈದು ಜಾಗ್ರತಳಾದಿ ಭೂಸುರರ ಸೇವೆಯಲಿ ಸೂಕ್ಷ್ಮಧರ್ಮದಲಿ ಪುಣ್ಯಗಳಿಸುತಲಿ 25 ಸತತಬಿಂಬಕ್ರಿಯ ವ್ರತವಂದೆ ಕೈಕೊಂಡು ಜತನದಿ ಮರೆಯದೆ ಪ್ರತಿಕಾರ್ಯದಲ್ಲಿ ಅರ್ಪಿಸಿ ಹರಿಯಲ್ಲಿ ಇದ್ದೆ ಮೋದದಲಿ 26 ಮುಖ್ಯಪ್ರಾಣನ ದಯ ಮುಖ್ಯಮಾಡುತ ಇನ್ನು ಅಕ್ಕರೆ ಭಕ್ತಿಯ ತೋರಿದೆ ನೀನು ಬೆನ್ನು ಬಿಡದವನು ನಿನ್ನ ಸಲಹಿದನು 27 ಭಾರತಿಪತಿ ಮುಖ್ಯಪ್ರಾಣಾಂತರ್ಗತನೆಂಬ ವಾರುತಿ ಇಲ್ಲದ ವಚನವೆ ಇಲ್ಲಾ ನಿನ್ನ ಈ ಸೊಲ್ಲ ಮರೆಯಲೊಶವಲ್ಲ 28 ಶ್ರೀ ರಾಮಚಂದ್ರನ ಆರಾಧನೆಯಗೈದು ಸಾರತತ್ವವ ತಿಳಿದು ಸಾಧಿಸಿ ಪಥವ ಸಹಸ್ರಾರು ಜಪವ ಗೈದೆ ತಪವ 29 ನೀ ಹಾಡಿದ ಸ್ತೋತ್ರ ನಿನ್ನ ಸನ್ಮಾರ್ಗವ ನನ್ನೆಯಿಂದಲಿ ಎರೆದೆ ಹೆಣ್ಣು ಮಕ್ಕಳಿಗೆ ಸ್ಮರಿಸುವರೀಗೆ ಸತ್ಕೀರ್ತಿಯದಾಗೆ 30 ಹರಿ ಗುರು ವರತತ್ವ ದಿವಿಜರಭಿಮಾನಿಗಳ ನಿರುತದಿ ಚಿಂತಿಸಿ ಸಾಧನಗೈದೆ ಕಾಲವ ಕಳೆದೆ ಹರಿಪಾದಕ್ಕೆರೆದೆÀ 31 ಬಿಂಬಾನು ಸಂಧಾನ ಚತುರಳಾಗಿ ನೀನು ಸಂಭ್ರಮದಿಂದ ಶ್ರೀ ಮಧ್ವಶಾಸ್ತ್ರದಲಿ ಮನಸ ನೀಡುತಲಿ ಸುಖ ಸುರಿಯಲಿ 32 ಒದ್ದು ತಾಪತ್ರಯ ಸದ್ಗುರು ಕೃಪೆ ಪೊಂದಿ ಗೆದ್ದೆ ನೀ ಸುಲಭದಿ ಭವದ ಬಂಧನವ ಪಡೆದೆ ಹರಿ ದಯವ ಕೊಟ್ಟಿತೆ ಮುದವ 33 ಪೇಳಲೋಶವೆ ಹೇ ದಯಾಳು ನಿನ್ನಯ ಗುಣ ಬಾಳಿದೆ ಧರೆಯೊಳು ತೊಂಬತ್ತೈದೊರುಷ ವೃದ್ಧಾಪ್ಯದೋಷ ನಿನಗಿಲ್ಲ ಲೇಶ 34 ಇಂದ್ರಿಯಂಗಳು ಎಲ್ಲ ಒಂದು ಕುಗ್ಗದೆ ಒಬ್ಬ ರಿಂದಲು ಸೇವೆಯ ಕೊಳದೆ ಲವಲವಿಕೆ ಯಿಂದಿರುವ ಬಯಕೆ ಸಲಿಸೀತೆ ಮನಕೆ 35 ಕಿರಿಯ ಮೊಮ್ಮೊಗ ರಮಾಕಾಂತನಲ್ಲಿರುತಿರೆ ಕರೆಹೇಳಿ ಕಳುಹಿದ ಹರಿ ತನ್ನ ಪುರಕೆ ಕ್ಲಿಪ್ತಕಾಲಕ್ಕೆ ಆಗೆ ಮನವರಿಕೆ 36 ತೊರೆದೈದು ದಿನ ಅನ್ನ ಹರಿಧ್ಯಾನಂಗತಳಾಗಿ ವರ ಗಂಗೆ ವದನದಿ ಪ್ರಾಶನಗೈದು ಅಭಿಮಾನ ತೊರೆದು ಭ್ರಾಂತಿಯ ಮೆರೆದು 37 ವರಹಜೆ ತುಂಗ ತೀರದಿ ಪ್ರಾಣನಾಥನ ಚರಣಮೂಲದಿ ಶಿವಮೊಗ್ಗ ಕ್ಷೇತ್ರದಲಿ ಹರಿಸ್ಮರಣೆಯಲಿ ಪ್ರಾಣ ಸಲಿಸುತಲಿ 38 ಸ್ವಭಾನುವತ್ಸರ ಭಾದ್ರಪದ ಬಹುಳ ಇದ್ದ ದಶಮಿ ದಿನ ಗುರುವಾರದಲ್ಲಿ ಮಧ್ಯರಾತ್ರಿಯಲಿ ತನು ತೊರೆದಿಲ್ಲಿ 39 ಕೇಶವದೂತರು ಮೀಸಲಿಂದಲಿ ನಿನ್ನ ಘಾಸಿಗೊಳಿಸದೆ ಕರೆದೊಯ್ದರೇನಮ್ಮ ಪೇಳೆ ಎನ್ನಮ್ಮ ಎಲ್ಲಿ ಪೋದ್ಯಮ್ಮ 40 ಹೆತ್ತಮ್ಮಗಿಂತಲೂ ಹೆಚ್ಚಾಗಿ ನಮ್ಮನ್ನು ಅರ್ಥಿಯಿಂ ಬೆಳೆಸಿದೆ ಅಭಿಮಾನದಿಂದ ಅನುರಾಗದಿಂದ ಬಹುಮಾನದಿಂದ 41 ಮೊಮಕ್ಕಳೆಂದರೆ ಬಹು ಪ್ರೀತಿ ನಿನಗಲ್ಲೆ ಒಮ್ಮೆ ನಾಲ್ವರು ಬಂದು ಇರುವೆವು ನಾವು ಆಲ್ಪರಿಯುವೆವು ಅಗಲಿ ಸೈರಿಸೆವು 42 ಅರ್ಥಿಲಿ ರಮಾಕಾಂತ ವಿಠಲಾಂಕಿತ ಕೃಷ್ಣ ಮೂರ್ತಿಯು ಪುತ್ರಗಿಂತಧಿಕದಿ ನಿನ್ನ ಅಂತ್ಯಕ್ರಿಯವನ್ನ ಮಾಡಿದ ಧನ್ಯ 43 ಶ್ರದ್ಧೆಯಿಂದಗ್ರಜನಿಂದ ಕೂಡುತ ನಿನ್ನ ಶುದ್ಧಭಾವದಿಗೈದ ಅಂತ್ಯಸೇವೆಯನು ಸ್ವೀಕರಿಸಿ ನೀನು ಹರಸಿ ಹಿತವನ್ನು 44 ತಿಳಿದು ತಿಳಿಯದೆ ನಾನು ಗೈದಪರಾಧವ ನಲವಿಂದ ಕ್ಷಮಿಸಿ ನಮ್ಮನು ಮನ್ನಿಸಿದೆ ಸಹನವ ತಳದೆ ಬಹು ಪ್ರೀತಿಗೈದೆ 45 ಎಲ್ಲ ಪರಿಯಲಿ ನಮ್ಮ ಕ್ಷಮಿಸಿ ಕಾಪಾಡಮ್ಮ ಬಲ್ಲಿದಳು ನೀನು ಆಶೀರ್ವದಿಸುವುದು ಸುಖವ ತೋರುವುದು ಕೃಪೆಯ ಮಾಡುವುದು 46 ಅಂಜನೆಕಂದ ನಿನ್ನವನೆಂಬ ಅಭಿಮಾನ ರಂಜಿಸೆ ಸಹಜದಿ ನಿನ್ನೊಳು ಮಾತೆ ಜಗದಿ ವಿಖ್ಯಾತೆ ಹರಿಗತಿಪ್ರೀತೆ 47 ಪತಿಗುರು ಪವನ ಹೃದ್ಗತಮೂರ್ತಿ ಚಿಂತನ ರತಳೆ ನಿನ್ನಯ ಚರಿತೆ ಪೇಳ್ದೆ ತಿಳಿದನಿತು ತಪ್ಪನು ಮರೆತು ಲಾಲಿಸು ಮಾತು 48 ಗೋಪಾಲಕೃಷ್ಣವಿಠಲನ ಸದ್ಭಕ್ತಳೆ ಶ್ರೀ ಪಾದಕ್ಕೆರಗಿ ನಾ ಜಯವ ಪಾಡುವೆನು ಧನ್ಯಳೇ ನೀನು ಮಾನ್ಯಳೆ ನೀನು 49
ಹರಿಯೆ ಎನ್ನ ದೊರೆಯೆ ನಿನ್ನಯ ಮರೆಯಹೊಕ್ಕೆನೊ ಪ ವ್ಯಾಘ್ರಗಿರಿಯೊಳಿರುವ ಸಿರಿನಾರಾಯಣ ಅ.ಪ ಸಕಲ ಲೋಕಗಳನು ನೀನೇ ಸೃಜಿಸುವಾತನು ಸುಖದಿ ಪ್ರಾಣಿಗಳನು ನೀನೇ ಸಲಹುವಾತನು ಪ್ರಕಟವಾದ ಜಗವ ನೀನೆ ಪ್ರಳಯಗೈವನು ನಿತ್ಯ ನೀನೆ ನಿಯಮಿಸುವನು 1 ಸ್ಥೂಲ ಸೂಕ್ಷ್ಮರೂಪ ನೀನೆ ಮೂಲ ಪುರುಷನು ಲೀಲೆಯನ್ನು ಪ್ರಕಟಗೈವ ಕಾಲರೂಪನು ನೀಲಲೋಹಿತಾದಿ ವಿಬುಧಜಾಲವಂದ್ಯನು ಪಾಲಿತಾಖಿಲಾಂಡ ರಮಾಲೋಲ ಸುಗುಣಜಾಲ ಶ್ರೀ 2 ಪರಮಪುರುಷ ಪಂಕಜಾಕ್ಷ ಪತಿತಪಾವನ ಶರಧಿ ಶಯನ ಸಕಲಲೋಕ ಸಂವಿಭಾವನ ವರಗುಣಾಢ್ಯ ವಿಗತಮಾಯ ವಿಶ್ವಮೋಹನ ದುರಿತಗಜ ಮೃಗಾಧಿರಾಜ ವರದವಿಠಲ ವಿಹಗಯಾನ3
ಹರಿಯೆ ಯನ್ನ ಧೊರೆಯೆ ನಿನ್ನಮರೆಯ ಹೊಕ್ಕೆನೊ ಸಿರಿಯರಮಣ ಪ ಸಕಲ ಲೋಕಗಳನುನೀನೇ ಸೃಜಿಸುವಾತನು ಸುಖದಿ ಪ್ರಾಣಿಗಳನು ನೀನೆ ಸಲಹುವಾತಾನು ಪ್ರಕಟವಾದ ಜಗವ ನೀನೆ-ಪ್ರಳಯಗೈವನು ನಿಖಿಲ ಜೀವಸಾಕ್ಷಿಯಾಗಿ ನಿತ್ಯನೀನೆನಿಯಮಿಸುವನು 1 ಸ್ಥೂಲಸೂಕ್ಷ್ಮರೂಪನೀನೆ ಮೂಲಪುರುಷನು ಲೀಲೆಯನ್ನು ಪ್ರಕಟಗೈವ ಕಾಲರುಪನು ನೀಲ ಲೋಹಿತಾದಿ ವಿಬುಧಜಾಲ ವಂದ್ಯನು ಪಾಲಿತಾಖಿಲಾಂಡ ರಮಾಲೋಲ ಸುಗುಣಜಾಲ ಶ್ರೀ 2 ಪರಮ ಪುರುಷ ಪಂಕಜಾಕ್ಷ-ಪತಿತ ಪಾವನ ಶರಧಿಶಯನ ಸಕಲಲೋಕ ಸಂವಿಭಾವನ ವಿಶ್ವ ಮೋಹನ ದುರಿತ ಗಜಮೃಗಾಧಿರಾಜವರದ ವಿಠಲ ವಿಹಗಯಾನ 3
ಹರಿಹರಿಯಂದು ಸ್ಮರಿಸಿ ಉರಗೇಂದ್ರ ವರಮಂಚ ಮಿಗಿಲೇರಿಸಿ ಚರಣದೊಳದೃಷ್ಟಿಯಿರಿಸಿ ಪ. ಅಕ್ಷಯಗುಣ ಪೌರುಷ ಅನವರತ ರಕ್ಷಿಸುವುದೆನ್ನಾಶ್ರಿತ ರಾಕ್ಷಸಾಂಬುಧಿವಿಶೋಷ ಭಕ್ತಜನ ರಕ್ಷಾವಿನೋದ ಭೂಪ 1 ಏನೆಂಬೆನದ್ಭುತವನು ಬಹು ಸೂಕ್ಷ್ಮ ದಾನಯಜ್ಞಾದಿಗಳನು ಧ್ಯಾನಿಸುತ ತ್ವತ್ಪದವನೀ ಚರಿಸಲನ್ಯೂನವಹ ವಿಸ್ಮಯವನು 2 ವರ ಶ್ರುತಿಸ್ಮøತಿಗಳರಿತು ವಿಧಿಯೋಳಾಚರಿಸಿದರು ಫಲವ ಕುರಿತು ಸಿರಿವರನೆ ನಿನ್ನ ಮರೆತು ಇರಲದಿಹ ಪರಕಲ್ಲವಾದಸರಿತು 3 ಬಾಗಿ ಪೊರೆವ ದೊರೆಯೆ ಕಂಭದಲಿ ತೋರ್ದ ಸಿರಿಯೆ 4 ಮೂರ್ತಿ ಅವಗುಣಗಳೇನೊಂದನೆಣಿಸದರ್ಥಿ ಶ್ರೀನಿಧಿಯೆ ಮಾಡು ಪೂರ್ತಿ ಶೇಷಾದ್ರಿ ಮಾನಿಮರುದೀಡ್ಯ ಕೀರ್ತಿ 5
ಹಿಮಾಚಲೇಂದ್ರನ ಕುಮಾರಿ ಶಂಕರಿ ಉಮಾಂಬೆ ಬಾರಮ್ಮ ಪ ಕುಮಾರ ಶಕ್ರಾದಿ ಸಮಸ್ತ ಸುರಗಣ ಸಮರ್ಚಿತಾಂಘ್ರಿಯೆ ನಮೋನಮೋ ಎಂಬೆ ಅ.ಪ. ಬುದ್ಧ್ಯಾಭಿಮಾನಿಯೆ ಸದ್ಯೋಜಾತನ ರಾಣಿ ಹೃದ್ಧ್ಯೋಮದಲಿ ಪೊಳೆದು ವಿದ್ಯಾ ಬುದ್ಧಿಯನಿತ್ತು ಶುದ್ಧಾತ್ಮನನು ಮಾಡಿ ಸದ್ಭಕ್ತಿ ಪಂಥದ ಸಿದ್ಧಾಂತ ತಿಳಿಸಮ್ಮ 1 ಘೋರ ಭವಾಬ್ಧಿಯ ತಾರಿಪ ಸುಲಭದ ದಾರಿಯ ತೋರೆನುತ ಮುರಾರಿಯನು ಬೇಡಿ ಶ್ರೀ ರಾಮ ನಾಮದ ರುಚಿ ಬೀರಿದೆ ಜಗದೊಳು 2 ಲಕ್ಷಾಘ ಧ್ವಂಸಿನಿ ದಾಕ್ಷಾಯಿಣೀ ಗಣಾ ಧಕ್ಷನ ವರ ಜನನಿ ಲಕ್ಷ್ಮೀಕಾಂತನ ಅಪರೋಕ್ಷದಿ ಕಾಂಬುವ ಸೂಕ್ಷ್ಮವನೊರೆದೆನ್ನ ರಕ್ಷಿಸು ಅಮ್ಮಯ್ಯ 3
ಹುಡುಕಿ ಕರೆತಾರೆ ಸಖಿ ಜಡಜನಯನ ಒಡೆಯನ್ಹಂಬಲ ಪಾದ ಗಡನೆ ಪೋಗಿ ಪ ಧ್ಯಾನಧೃಢ ಅವನು ಇರುವ ಸ್ಥಾನ ಪೇಳುವೆ ಜಾಣೆ ಕೇಳೆ ಹಗಲು ಇರುಳು ಖೂನವಿಲ್ಲವನಿಹ್ಯ ಸ್ಥಳದಿ ತಾನೆತಾನಾಗಿ ಸೂಕ್ಷ್ಮದಿ ಶೂನ್ಯ ಪೀಠದಿ ವಾಸಿಪ ಜಾಣನ ಜವದಿಂ ಪೋಗಿ 1 ಅರಿದು ಮರೆದಿರೆ ಅವನ ಗುರುತು ಒರೆಯುವೆ ಜರಾಮರಣಿವಲ್ಲವಗೆ ಧರಿಸಿರುವಂತವತಾರ ತಿರುಗಲು ಮೂಡವು ಅಡಿಗಳು ನೆರಳೇ ಇಲ್ಲವು ನಿಲ್ಲಲು ಶರೀರವಿಲ್ಲದೆ ತೋರುವ ಪರಮನ ತ್ವರಿತದಿ ಹಿಡಿದು 2 ಪ್ರೇಮ ಸುಂದರೀ ಅವನ ನಾಮ ಪೇಳುವೆ ನೇಮದಿಂದ ಕೂಗುತಿಹ್ಯವು ಸಾಮಯಜುರಾದಿ ವೇದವು ಆಮಹಮಹಿಮನ ಘನತರ ನಾಮದ ನೆಲೆಯೇ ಸಿಗದಿದೆ ಕಾಮಿನಿಯಂಥ ಸ್ವಾಮಿ ಶ್ರೀ ರಾಮ ಸದ್ಗುರು ಪ್ರಭುವಿನ 3
139-2ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಯಮರ ಜನವಿನುತಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ವಿಜಯದಾಸರಲಿ ಗೋಪಾಲದಾಸರಲಿನಿಜ ಗುರುಭಕ್ತಿ ವರ್ಧಿಸಿ ಹರಿದಾಸನಿಜಪಂಥದಿ ತನ್ನ ಸೇರಿಸೆ ಅನುಗ್ರಹಿಸೆನಿಜಭಾವದಲಿ ಆಚಾರ್ಯ ಬೇಡಿದರು 1ನರಸಿಂಹ ದಾಸರಾಗಿಹ ತಂದೆಮುಖದಿಂದವರಗಾಯತ್ರಿ ಮಂತ್ರ ಉಪದಿಷ್ಟರಾಗಿವರದೇಂದ್ರರಲಿ ಮೂಲಟೀಕಾದಿ ಗ್ರಂಥಗಳುಮಂತ್ರೋಪದೇಶವು ಕೊಂಡವರು ಮೊದಲೇ 2ಶ್ರೀನಿವಾಸಾಚಾರ್ಯರ ಕೋರಿಕೆಯಮನ್ನಣೆಮಾಡಿದರು ದಾಸಾರ್ಯರುಘನಮಹಾಸಚ್ಛಾಸ್ತ್ರ ತತ್ತ್ವ ವಿಷಯಗಳಕನ್ನಡಮಾತಲ್ಲಿ ಬೋಧಿಸಿದರು 3ಪ್ರಣವಹರಿ ಜಾಗ್ರದಾದ್ಯವಸ್ಥಾ ಪ್ರಣಯನಕೃಷ್ಣರಾಮ ನಾರಸಿಂಹವರಾಹವಿಷ್ಣು ಪರಂಜ್ಯೋತಿ ಪರಂಬ್ರಹ್ಮವಾಸುದೇವಏನೆಂಬೆ ಶ್ರೀಶ ಗುಣಕ್ರಿಯಾ ರೂಪಮಹಿಮೆ 4ಗಾಯತ್ರಿ ನಾಮಆಮ್ನಾಯಗಾಯನ ಮಾಡಿದಯದಿ ಜಗವೆಲ್ಲ ರಕ್ಷಿಸುವ ಸ್ವಾಮಿಹಯಗ್ರೀವ ಗಾಯತ್ರಿ ಮಂತ್ರ ಪ್ರತಿಪಾದ್ಯನುನಾರಾಯಣವಾಸುದೇವವೈಕುಂಠ5ತ್ರಾತಹಯ ಶೀರ್ಷನೆ ಗಾಯತ್ರಿ ನಾಮನುಭೂತಪೂರ್ಣ ವಾಗ್ವಶಿ ಶರೀರವ್ಯಾಪ್ತಪೃಥ್ವಿ ಆಶ್ರಯ ಪ್ರಾಣಾಧಾರ ಹೃದಯನುತ್ರಿಧಾಮ ಪಾದತ್ರಯ ಜಗತ್ಪಾದ ಸದೃಶ 6ಜ್ಞಾನ ಸುಖಬಲಪೂರ್ಣ ಸರ್ವ ಆಧಾರನುದಿನಪತೇಜಃ ಪುಂಜಚೇಷ್ಟಕ ಸ್ಫೂರ್ತಿದನುವನಜಜಾಂಡದ ಸರ್ವಕರ್ತನೂ ದೇವಭಜನೀಯ ಧ್ಯಾತವ್ಯ ಶ್ರೀ ನಾರಾಯಣನು 7ವರ್ಣಗಳು ನಿತ್ಯವು ವರ್ಣಾಭಿಮಾನಿಗಳೊಳ್ವರ್ಣಪ್ರತಿಪಾದ್ಯಹರಿ ಶ್ರೀ ಸಹ ಇಹನುಪೂರ್ಣ ಸುಗುಣಾರ್ಣವನುನಿರ್ದೋಷಸರ್ವಜಗತ್ಜನ್ಮಾದಿ ಕರ್ತನು ನಿಗಮೈಕವೇದ್ಯ 8ಶಬ್ದಗಳು ಸರ್ವವೂ ಮುಖ್ಯ ವೃತ್ತಿಯಲಿಮಾಧವನ್ನಲ್ಲಿಯೇ ವಾಚಕವಾಗಿವೆಯುವೈದಿಕ ಶಬ್ದಗಳು ಹರಿಗೇವೆ ಅನ್ವಯವುಸಂಸ್ತುತ್ಯ ದ್ರಷ್ಟವ್ಯ ಅನುಪಮೈಕಾತ್ಮ 9ಸತ್ಯಜ್ಞಾನಾನಂತಆನಂದಮಯಹರಿಯೆಶ್ರೋತವ್ಯ ಮಂತವ್ಯ ನಿಧಿ ಧ್ಯಾಸಿತವ್ಯವ್ಯಾಪ್ತನು ಸರ್ವತ್ರ ಸರ್ವದಾ ಸರ್ವಕ್ಕೂಆಧಾರ ಅಕ್ಷರನು ಕ್ಷರಾಕ್ಷರೋತ್ತಮನು 10ರಾಜಿಸುತಿಹ ನಮ್ಮ ದೇಹಾಖ್ಯ ರಥದಲ್ಲಿರಾಜರಾಜೇಶ್ವರನು ಶ್ರೀ ಹ್ರೀ ಸಮೇತಯುವರಾಜ ವಾಯುದೇವನ ಸೇವೆಕೊಳ್ಳುತಿಹರಾಜೀವೇಕ್ಷಣಹರಿಪ್ರಾಣನಾಮ11ಪ್ರಸ್ಥಾನತ್ರಯ ವೈದಿಕಶಾಸ್ತ್ರ ವಿಷಯಗಳುಇತಿಹಾಸಭಾಷಾತ್ರಯಪುರಾಣಗಳುಪ್ರತಿರಹಿತ ಸರ್ವೋತ್ತಮ ಸ್ವಾಮಿ ಶ್ರೀಶನ್ನಚಿಂತಿಸಿ ಕಾಣಲುಬಗೆ ತೋರಿಸುತಿವೆ 12ಆಚರಿಸಿ ಜ್ಞಾನ ಪೂರ್ವಕವಿಹಿತಕರ್ಮಅಚ್ಚಭಕ್ತಿಯಿಂದ ಚಿಂತಿಸಿ ಸ್ತುತಿಸೆಅಚ್ಚುತ ಸ್ವತಂತ್ರನು ಮುಖ್ಯ ಕಾರಣ ವಿಷ್ಣುಪ್ರೋಚ್ಯ ಸುಖವೀವನು ತೋರಿತಾ ಒಲಿದು 13ಮಧ್ವಮತ ಸಿದ್ಧಾಂತ ಪದ್ಧತಿ ಅನುಸರಸಿಸದನು ಸಂಧಾನ ಭಕ್ತಿ ಉನ್ನಾಹದಿಮಾಧವನ ಗುಣಕ್ರಿಯಾ ರೂಪಗಳ ಕೊಂಡಾಡಿಪದವಾಕ್ಯ ಶ್ಲೋಕ ಪದ್ಯಗಳ ನುಡಿಯುವುದು 14ಒಂದೊಂದು ಕೀರ್ತನೆ ಪದ್ಯ ಗ್ರಂಥಗಳಲ್ಲೂಇಂದಿರೇಶನು ತತ್ತತ್ ಪ್ರತಿಪಾದ್ಯ ಇಹನುಪದ್ಯ ಕೀರ್ತನೆ ಗ್ರಂಥ ವಿಷಯ ಶ್ರೀಹರಿಯಮಂತ್ರ ಚಿಂತಿಸಿ ಅರ್ಪಿಸಬೇಕು ರಚನೆ 15ಬೃಹತೀ ಸಹಸ್ರಸ್ವರ ವ್ಯಂಜನಾಕ್ಷರ ವಾಚ್ಯಶ್ರೀಹರಿಅಹರ್ನಿಶಿಕಾಯುವ ದಯಾಳುಅಹರಹ ಸದುಪಾಸ್ಯ ಬ್ರಹ್ಮ ಶಿವ ಈಡ್ಯನುದೇಹ ಒಳಹೊರಗಿಪ್ಪ ಸರ್ವಾಂತರ್ಯಾಮಿ 16ಸ್ವತಃ ಅವ್ಯಕ್ತನು ಸರ್ವದಾ ಸರ್ವತ್ರಸ್ವತಂತ್ರ ಪೂರ್ಣಜ್ಞಾನ ಆನಂದರೂಪಸ್ವಪ್ರಯತ್ನದಿ ಅಲ್ಲ ಮುಮುಕ್ಷುಗಳಿಗಪರೋಕ್ಷಮೋದಮಯ ಶ್ರೀಹರಿಯ ಪ್ರಸಾದದಿಂದಲೇ 17ಜ್ಞಾನಿಗೆ ಪ್ರತ್ಯಕ್ಷ ಹರಿಯ ಅವ್ಯಕ್ತತ್ವಅನ್ಯರಿಗೆ ವೇದ್ಯ ಸೂಕ್ಷ್ಮತ್ವಾನುಮಾನದಿತನ್ಮಾತ್ರ ತೇಜಸ್ಸು ಭೌತಿಕವು ಎಂಬಂಥಅಗ್ನಿಯ ಸೂಕ್ಷ್ಮತ್ವ ಸ್ಥೂಲತ್ವವೋಲ್ಲ 18ಎಲ್ಲೆಲ್ಲೂ ಎಂದೆಂದೂ ಏಕಪ್ರಕಾರದಲ್ಲಿಳಾಳಕನು ಅವ್ಯಕ್ತರೂಪ ಇರುತಿಹನುಇಲ್ಲ ಇವಗೆ ಎಂದೂ ಎಲ್ಲೂ ಪ್ರಾಕೃತರೂಪಒಲಿದು ಕಾಣುವ ತನ್ನ ಇಚ್ಛೆಯಿಂದಲೇ 19ಮೂಲರೂಪದಿ ಸೂಕ್ಷ್ಮತ್ವ ಅವತಾರಗಳಲಿಸ್ಥೂಲತ್ವವೆಂಬುವ ವಿಶೇಷವು ಇಲ್ಲಇಳೆಯಲ್ಲಿ ಕೃಷ್ಣಾದಿ ರೂಪಗಳ ಕಂಡದ್ದುಮಾಲೋಲನಿಚ್ಛೆಯೇ ಪುರುಷಯತ್ನದಿ ಅಲ್ಲ 20ಅರೂಪಮ ಕ್ಷರಂಬ್ರಹ್ಮ ಸದಾವ್ಯಕ್ತಂಆತ್ಮಾವರೇ ದ್ರಷ್ಟವ್ಯ ಎಂದುಈ ರೀತಿ ಅವ್ಯಕ್ತತ್ವ ಅಪರೋಕ್ಷತ್ವಎರಡು ಪೇಳುವಶ್ರುತಿವಿರೋಧವು ಇಲ್ಲ21ಆರಾಧನಾದಿ ಪ್ರಯತ್ನಕ್ಕೂ ಅವ್ಯಕ್ತಉರುಸುಖಮಯಅಪ್ರಾಕೃತಅವಿಕಾರಿಪರಮಪುರುಷ ಹರಿಯ ಇಚ್ಛಾಪ್ರಸಾದದಿಂಅಪರೋಕ್ಷಮೋಕ್ಷಗಳು ಲಭ್ಯಯೋಗ್ಯರಿಗೆ22ವನಜನಾಭನರೂಪಗುಣಮಹಿಮೆಕೇಳಿಅನುಭವಕೆ ಬರುವಂಥ ಮನನ ಸುಧ್ಯಾನಅನಘಹರಿಯಲಿ ಭಕ್ತಿ ಸುಖಬಾಷ್ಪ ಸುರಿಸೆತನ್ನಿಚ್ಚೆಯಿಂದಲೆ ಅಪರೋಕ್ಷವೀವ 23ಬ್ರಹ್ಮಪುರವನರುಹವೇಷ್ಮವ್ಯೋಮಸ್ಥದೇಹ ಸರ್ವಾಂಗಸ್ಥ ಸರ್ವನಾಡಿಸ್ಥಬಹಿರಂತರ ಸರ್ವಮೂರ್ತಾ ಮೂರ್ತಸ್ಥಮಹಾಮಹಿಮ ಹರಿಯು ಸರ್ವತ್ರ ಪ್ರಸಿದ್ಧ 24ಸರ್ವತ್ರ ವ್ಯಾಪ್ತನು ಸತ್ತಾದಿ ದಾತನುಸರ್ವದೊಳು ಸದಾಪೂರ್ಣಅಖಿಳಸಚ್ಛಕ್ತಸರ್ವೇಶ ಸರ್ವಾಧಾರನಾಗಿಹ ಸ್ವಾಮಿದೇವಿ ಲಕ್ಷ್ಮೀರಮಣ ವಿಷ್ಣು ನರಸಿಂಹ 25ಉಗ್ರವೀರನು ಮಹಾವಿಷ್ಣು ತೇಜಃಪುಂಜಸುಪ್ರಕಾಶಿಪ ಸರ್ವತೋಮುಖ ನೃಸಿಂಹಅರಿಗಳಿಗೆ ಭೀಷಣನು ಭಕ್ತರಿಗೆ ಇಷ್ಟಪ್ರದಸಂರಕ್ಷಕ ನಮೋ ಮೃತ್ಯುಗೇ ಮೃತ್ಯು 26ಪ್ರೋದ್ಯರವಿನಿಭದೀಪ್ತ ವರ್ತುಲ ನೇತ್ರತ್ರಯಹಸ್ತದ್ವಯ ಆಜಾನು ಮಹಾಲಕ್ಷ್ಮಿಯುತನುಸುದರ್ಶಿನಿ ಶಂಖಿಯುತ ಕೋಟ್ಯಾರ್ಕಾಮಿತತೇಜಉತ್ಕøಷ್ಟಅಖಿಳಸಚ್ಛಕ್ತ ನರಸಿಂಹ27ಇಂಥಾ ವಿಷಯಗಳ ಜಿಜ್ಞಾಸ ಉಪದೇಶಹಿತಮಾತ ಗೋಪಾಲದಾಸಾರ್ಯರಿಂದಮುದದಿಂದ ಶ್ರೀನಿವಾಸ ಆಚಾರ್ಯರು ಕೊಂಡುಪಾದಕೆರಗಿಹರಿಅಂಕಿತ ಬೇಡಿದರು28ವಾರಿಜಾಸನ ಪಿತನ ಪೂರ್ಣ ಪ್ರಜÕರ ಹೃತ್‍ಸ್ಥಶಿರಿ ಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರುಪುರಂದರವಿಜಯಗೋಪಾಲದಾಸಾರ್ಯರಚರಣರತ ಜಗನ್ನಾಥ ದಾಸಾರ್ಯ ಶರಣು 29- ತೃತೀಯ ಕೀರ್ತನೆ ಸಂಪೂರ್ಣಂ -
ಇಲ್ಲಿಯೇ ಕುಳಿತಿದ್ದ ಭೂತವು - ಒಂದುಹಲ್ಲಿಯು ನುಂತು ಹದಿನಾಲ್ಕು ಲೋಕವ............. ಪಸೂಳೆಯ ಮನೆಯಲಿ ಇದೆಯೊಂದು ಕೋಳಿ |ಕೋಳಿಯ ನಾಲಗೆ ಏಳು ತಾಳೆಯುದ್ಧ ||ಕೋಳಿ ನುಂಗಿತು ಏಳು ಕಾಳಿಂಗ ನಾಗನ |ಮೇಲೊಂದು ಬೇಡಿತು ಸಿಂಹದ ಮರಿಯ 1ಕಾನನದೊಳಗೊಂದು ಇರುವದು ಕೋಣ |ಕೋಣನ ಕೊರಳಿಗೆ ಮುನ್ನೂರು ಬಾವಿ ||ಕೋಣ ನೀರಿಗೆ ಹೋಗಿಕ್ಷೋಣಿ ಕಪಿಯ ಕೊಂದು |ಟೊಣ್ಣನ ಮನೆಯೊಳಗೌತನವಯ್ಯ...................... 2ವುಕ್ಷದಮೇಲೊಂದು ಸೂಕ್ಷ್ಮದ ಪಕ್ಷಿ |ಪಕ್ಷಿಭಕ್ಷಣವಾದ ಅಮೃತದ ಹೆಣ್ಣು ||ಪಕ್ಷಿ ನೋಡಲು ಬಂದ ರಾಕ್ಷಸ ಬ್ರಾಹ್ಮಣ |ಶಿಕ್ಷೆಯ ಮಾಡಿದ ಪುರಂದರವಿಠಲ............ 3
ಗರುಡಗಮನಬಂದನೋ-ನೋಡಿರೊ ಬೇಗಗರುಡಗಮನಬಂದನೋಪಗರುಡಗಮನಬಂದ ಧರಣಿಯಿಂದೊಪ್ಪುತಕರೆದು ಬಾರೆನ್ನುತ ವರಗಳ ಬೀರುತ ಅ.ಪಎನ್ನ ರಕ್ಷಿಪ ದೊರೆ ಇಲ್ಲಿಗೆ ತಾ ಬಂದಚಿನ್ನದೊಲ್ ಪೊಳೆವವಿಹಂಗರಥದಲಿ ||ಘನ್ನ ಮಹಿಮ ಬಂದsಚ್ಛಿನ್ನ ಮೂರುತಿ ಬಂದಸಣ್ಣ ಕೃಷ್ಣನು ಬಂದ ಬೆಣ್ಣೆಗಳ್ಳನು ಬಂದ 1ಪಕ್ಷಿವಾಹನ ಬಂದ ಲಕ್ಷ್ಮೀಪತಿಯು ಬಂದಕುಕ್ಷಿಯೊಳೀರೇಳು ಜಗವನಿಟ್ಟವ ಬಂದ ||ಸೂಕ್ಷ್ಮ-ಸ್ಥೂಲದೊಳಗಿರುವನು ತಾ ಬಂದಸಾಕ್ಷೀ ಭೂತನಾದ ಸರ್ವೇಶ್ವರ ಬಂದ 2ತಂದೆಪುರಂದರವಿಠಲರಾಯ ಬಂದಬಂದುನಿಂದುನಲಿದಾಡುತಿಹ ||ಅಂದು ಸಾಂದೀಪನ ನಂದನನ ತಂದಿತ್ತಸಿಂಧುಶಯನ ಆನಂದ ಮೂರುತಿ ಬಂದ3
ಘನಾನಂದ ನಿಬಿಡವು ತಾನೇ ತಾ |ಮನಬುದ್ಧಿಗಳು ಏನಿಲ್ಲಪಮಹಾಮಾಯಾಮಾಯಾಅವ್ಯಾಕೃತಿ |ಆಹಿರಣ್ಯಗರ್ಭವಿರಾಟಲ್ಲ1ಸ್ಥೂಲ ಸೂಕ್ಷ್ಮ ಕಾರಣ | ಮಹಾಕಾರಣಜಾಗ್ರತ್, ಸ್ವಪ್ನ, ಸುಷುಪ್ತಿಉನ್ಮನಿಬೆಳಕೆಲ್ಲ ||ಇದ್ದದ್ದು ಶಂಕರನ ಸುಖವಲ್ಲವೆ |ವಿದ್ಯಾ ಅವಿದ್ಯೆಯ ಕಲಕಿಲ್ಲ ||