ಸೀತಾದೇವಿಯೆ ಶ್ರಿತ ಸಂಜೀವಿಯೆ ಪ
ಮಾತೆಯೆ ಪಾಲಿಸು ಮೊರೆಯನು ಲಾಲಿಸು ಅ.ಪ
ಜನಕರಾಯನ ಪುತ್ರಿ ಜಗದೇಕ ಪವಿತ್ರಿ
ಜನನಿ ಜನಯಿತ್ರಿ ಘನ ಶೋಭನ ಗಾತ್ರಿ 1
ದುರ್ಜನ ದೈತ್ಯವಿದಾರೆ ದೂರೀಕೃತ ಸಂಸಾರೆ2
ಸಮ್ಮತದೊಳಿರಿಸು ದುರ್ಮತವ ಬಿಡಿಸು ಸು |
ಬ್ರಹ್ಮ ಜ್ಞಾನವ ಪಾಲಿಸು ಮರ್ಮವನು ಬೋಧಿಸು3
ವನಜದ ಸೇವೆ ಸದಾ ಎನಗೀಯೆ ತಾಯೆ 4
ಕಲುಷ ಪರಿಹಾರಿಣಿ ಕಮಲಪಾಣಿ ರುಕ್ಮಣಿ
ಜಲಜಾಕ್ಷ ಗುರುರಾಮ ವಿಠಲನ ಪಟ್ಟದ ರಾಣಿ5