ಒಟ್ಟು 80 ಕಡೆಗಳಲ್ಲಿ , 35 ದಾಸರು , 79 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಂಭೆ-ಊರ್ವಸಿ ರಮಣಿಯರೆಲ್ಲರು ||ಚೆಂದದಿಂ ಭರತನಾಟ್ಯವ ನಟಿಸೆ |ಝಂತಕ ತಕಧಿಮಿ ತದಿಗಣತೋಂ ಎಂದು |ಝಂಪೆತಾಳದಿ ತುಂಬುರನೊಪ್ಪಿಸೆ ||ಧಾಪಮಪಧಸರಿ ಎಂದು ಧ್ವನಿಯಿಂದ |ನಾರದ ತುಂಬುರು ಗಾನವ ಮಾಡಲು |ನಂದಿಯು ಚೆಂದದಿ ಮದ್ದಲೆ ಹಾಕಲು 1ಫಣಿಯ ಮೆಟ್ಟಿ ಬಾಲವ ಕೈಯಲಿ ಪಿಡಿದು |ಫಣಘಣಿಸುತ ನಾಟ್ಯವನಾಡೆ |ದಿನಪಮಂಡಲದಂತೆ ಪೊಳೆಯುವ ಮುಖದೊಳು ||ಚಲಿಸುತ ನೀಲಕೇಶಗಳಾಡೆ |ಕಾಲಲಂದಿಗೆ ಗೆಜ್ಜೆ ಘುಲುಘುಲು ಘುಲುಘುಲು |ಘುಲುರೆಂದು ಉಡಿಗೆಜ್ಜೆ ಗಂಟೆಗಳಾಡೆ ||ದುಷ್ಟ ಕಾಳಿಂಗನ ಮೆಟ್ಟಿ ಭರದಿಂದ |ಪುಟ್ಟಿ ಪಾದವನು ಇಟ್ಟ ಶ್ರೀಕೃಷ್ಣನು |ಮೆಟ್ಟಿದ ತದ್ಧಿಮಿ ತಧಿಗಣತೋಂ ಎಂದು 2ಸುರರುಪುಷ್ಪದ ವೃಷ್ಟಿಯ ಕರೆಯಲು |ಸುದತಿಯರೆಲ್ಲರು ಪಾಡಲು |ನಾಗಕನ್ನೆಯರು ನಾಥನ ಬೇಡಲು |ನಾನಾವಿಧ ಸ್ತುತಿ ಮಾಡಲು ||ರಕ್ಕಸರೆಲ್ಲರು ಕಕ್ಕಸವನೆ ಕಂಡು |ದಿಕ್ಕಿದಿಕ್ಕುಗಳಿಗೋಡಲು ||ಚಿಕ್ಕವನಿವನಲ್ಲ ಪುರಂದರವಿಠಲ |ವೆಂಕಟರಮಣನ ಬೇಗ ಯಶೋದೆ |ಬಿಂಕದೊಳೆತ್ತಿ ಮುದ್ದಾಡೆ ಶ್ರೀಕೃಷ್ಣನ 3
--------------
ಪುರಂದರದಾಸರು
ರಾಘವನಾಡಿದ ಮಾತಿಗಾಂಜನೇಯ ಬಿನ್ನವಿಸುವದು |ಈಗ ಪೇಳುವೆ ಸಜ್ಜನರಾಲಿಸುವದು ಪಆ ರವಿನಂದನನು ತಾ ಮೇರೆ ಮಾಡಿ ಅಟ್ಟಿದನು |ವಾನರರುಗಳನು ತಿಂಗಳು ಮೀರಿತಿಂದಿಗೆ ||ಮಾರುತಿ ಕೇಳೀ ಮಾತು ಇನ್ನಾರ ಕಾಣೆ ಬಲ್ಲಿದರ |ನಾರಿಯೆಲ್ಲಿಹಳೋ ವಾರ್ತೆ ತಾರೋ ನೀ ಪೋಗಿ 1ಸ್ವಾಮಿ ಪಾಲಿಸೊ ಅಪ್ಪಣೆ ನಾ ಮುಂಚೆ ಪೋಗುವೆ |ತಡವ ಮಾಡದೆ ಎಲ್ಲೀಗೆನ್ನ ಭೂಮಿಜಾ ರಮಣ ||ಈ ಮುದ್ರೆ ಕೊಂಡು ಪೋಗೋ ಶಾಮಲಾಪತಿ ದಿಕ್ಕಿಗೆ |ಸಮುದ್ರ ದಾಟಿ ವೇಗಪಾವಮಾನಿಕೇಳೋ 2ಭೂತಲಾಕಾಶ ಲೋಕಾದಿ ಪಾತಾಳದೊಳಗಿರಲಿ |ನಾ ತರುವೇನು ವಾರ್ತೆ ಜಗನ್ನಾಥಪರಾಕು||ಹೇತರಳತ್ರಿಲೋಕ ವಿಖ್ಯಾತನಾಗಿಹ ರಾವಣ |ಪಾತಕಕೊಂಡು ಪೋಗಿಹ ಸೀತೆಯ ಕೇಳು 3ಬುದ್ಧಿದೇವ ನೀ ಕೊಟ್ಟಂಥ ಬುದ್ಧಿಯಿಂದಲೇ ಅವನ |ಗುದ್ದಿ ಸರ್ವ ಬಲವನ್ನೂ ಒದ್ದು ಬರುವೆನೊ ||ಮುದ್ದು ಕಂದ ರಕ್ಕಸರವಧ್ಯರೋವರಪಡೆದು |ರುದ್ರನಿಂದ ಮಾಡದಿರೊ ಗದ್ದಲ ಕೇಳೋ 4ತಂದೆ ರಾಮಾ ನಿನ್ನ ದಯೆಯಿಂದ ಈಡಲ್ಲವೊ ಯನಗೆ |ನಂದಿಧ್ವಜಾ ಈ ರಕ್ಕಸರೊಂದು ತೃಣವೋ ||ಕಂದ ಈ ವೇಳೆಯೊಳೇನು ಬಂದುದನು ಭೋಗಿಸಿ ನಾನು |ಕೊಂದು ಹಾಕುವ ದಿನವೂ ಮುಂದುಂಟು ಕೇಳೋ5ದೇವಿಯ ನೋಡಿ ಬರುವಾಗ ತಾವಂತು ಕೆಣಕಲು ದಾ- |ನವರು ಸುಮ್ಮನಿರಲೇನು ದೇವದೇವೇಶ ||ಕೋವಿದಾಗ್ರೇಶನೆ ನೀನು ಸಾವಿರಾಳಿಗೆ ಒಬ್ಬನೇ |ಆ ವಿಚಾರ ಮನಕೆ ತರುವದೇ ಕೇಳೋ 6ಹೇಳಿದ ಮಾತು ಕಟ್ಟಿದ ಕೂಳು ನಿಲ್ಲವೊ | ಆ ವನ-ದೊಳೇನಹದೊ ಬಲ್ಲೆನೇ ಪ್ರಾಣೇಶ ವಿಠಲಾ ||ಬಾಲಕ ಹನುಮಂತ ನಿನ್ನೊಳಗೆನ್ನಾ ರಾಣಿಯಲ್ಲಿ- |ಹಳೋ ನೋಡಿ ಬರುವುದಕಾಲಸ್ಯ ಕೇಳೋ 7
--------------
ಪ್ರಾಣೇಶದಾಸರು
ಹರಿಯೆ ನೀನಲ್ಲದಾರ ಕಾಣೆ ಕಾಯ್ವರಮರೆ ಹೊಕ್ಕವರ ಭಯ ಪರಿಹಾರವನು ಮಾಡಿ ಪಶಿವಭಕ್ತಾಗ್ರಣಿ ಬಾಹ್ರ್ಯದ್ರಥ ಗಂಜಾಲೆಮಜಾ ನಿ- |ನ್ನವನಿಂದಳಿಸಿದೆ, ಬಾಣನ ಬಾಗಿಲೂ ||ಭವಕಾಯ್ದಿರಲು ನೀ ತೋಳ್ಗಳನು ಛೇದಿಸುವಾಗ |ಲವಮಾತ್ರ ಪ್ರತಿಕೂಲನಾಗಲಿಲ್ಲ ಶಂಕರನು 1ಹರಿಯೆಂದುದಕೆ ತಾಳದಲೆ ಬಾಧಿಸುತಲಿರೆ |ತರಳನ ಮೊರೆಕೇಳಿಕಂಭದಿಂದ ||ಉರಿಯುಗುಳುತ ಬಂದು ಖಳನುದರವ ಬಗೆದು |ಶರಣ ಪಾಲಕನೆಂಬ ಬಿರುದು ದಕ್ಕಿಸಿಕೊಂಡೆ 2ಸ್ಥಾಣುವಿನವರಬಲದಿಂದಮರರ ಕಾಡೆ |ದಾನವಾನ್ವಯ ಕೊಂದೆ ಭಸ್ಮಾಸು- ||ರನು ಪಾಣಿಯ ತಲೆಯೊಳಿಡುವೆನೆಂಬೊ ಭರದಿ ಬರಲು |ಪ್ರಾಣೇಶ ವಿಠಲ ನೀ ಶಂಕರನನುಳುಹಿದಿ 3
--------------
ಪ್ರಾಣೇಶದಾಸರು
ಹರಿಯೆನ್ನಿ ಹರಿಯೆನ್ನಿ ಹರಿಯೆನ್ನಿರೈಹರಿಯೆಂದವರಿಗೆಲ್ಲಿದುರಿತದಂದುಗವುಪ.ಹರಿಯೆಂದಜಾಮಿಳಗೆ ನರಕ ತಪ್ಪಿತಾಗಲೆಹರಿಯೆಂದ ಕರಿಗೆ ಕೈವಲ್ಯಾಯಿತುಹರಿಯೆಂದ ತರಳಗೆಉರಗಹಾರಾದವುಹರಿಯೆಂದವಅಕ್ಷಯಸಿರಿಪಡೆದ1ಹರಿಸೇವೆಯನೆ ಮಾಡಿ ವಿರಿಂಚಪದವನುಂಡಹರಿಸೇವೆಯಲಿ ನಿಶಾಚರರಸಾದಹರಿಸೇವೆಯಲಿ ಹರಿವರರ್ಮುಕ್ತರಾದರುಹರಿಸೇವೆಯಲಿ ಮತ್ರ್ಯರು ಸುರರಾದರು 2ಹರಿಪಾದ ಸೋಕಲು ಸ್ಥಿರ ಪಾತಾಳದ ಪಟ್ಟಹರಿಪದ ಸೋಕಿದಅರೆಪೆಣ್ಣಾಗೆಹರಿಪಾದ ಸೋಕಿ ಕಾಳುರಗ ಪಾವನನಾದಹರಿಪಾದ ಸೋಕುವಾತುರವಿಡಿದು ಹರಿಯೆನ್ನಿ 3ಮಂಡೂಕಹಿ ಮುಖದಿ ಕಂಡ ಮಕ್ಷಕವ ತಾನುಂಡೇನೆಂಬುವಪರಿಮೃತ್ಯುವಿನಕುಂಡದಿ ವಿಷಯದಹಿಂಡುವಿಚಾರ್ಯಾಕೆಪುಂಡರೀಕಾಕ್ಷಾಂಘ್ರಿ ಕೊಂಡಾಡಿ ಮನದಿ 4ಯುವತಿ ಮಕ್ಕಳು ಮಂದಿರವನಗಲಿಸುವರುಜವನ ಬಂಟರು ಈ ಕಾಯವ ನೆಚ್ಚದೆಅವಿರಳ ಪ್ರಸನ್ವೆಂಕಟವರದ ರಂಗನಸವಿ ನಾಮಾಮೃತದಾಸ್ವಾದವನುಂಬ ದೃಢದಿ 5
--------------
ಪ್ರಸನ್ನವೆಂಕಟದಾಸರು