ಒಟ್ಟು 107 ಕಡೆಗಳಲ್ಲಿ , 4 ದಾಸರು , 78 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ಮರಿಸಿ ಸುಖಿಸೆಲೊ ಮಾನವಾ ಪ ಸ್ವಾನುಭಾವದಿಂದ ಸುಖವಬಡಿಪ ಗೋಪಾಲದಾಸ ರಾಜರಡಿಗಳನುದಿನಾ ಅ.ಪ. ಅಪಾರ ಜನುಮದ ದಾಸ್ಯಹರಿಸಿ ಸುಖಸಾರ ಸುರಿಪರನುದಿನಾ 1 ಸತ್ಯವಾದ ವಚನ ಸತ್ವಜೀವರಿಷ್ಟಗರೆವ ಚಿತ್ತದೊಳಗನುದಿನಾ 2 ಸರ್ವ ವಿಧದಿ ತೋಷಬಡಿಪ ತಂದೆವರದಗೋಪಾಲವಿಠಲನೇ ಸಾಕ್ಷಿಯಾಗಿಪ್ಪನನುದಿನಾ 3
--------------
ತಂದೆವರದಗೋಪಾಲವಿಠಲರು
ಸ್ಮರಿಸುವೊ ಜನರಿಗೆ ಸಲಹುವ ದೊರೆಗಳಿನ್ನುಂಟೇವೆಂಕಟೇಶಾ ಪ ಕರುಣಾನಿಧಿ ಮಹಾಮಹಿಮ ನೀನೆಂದು ನಾ ನಂಬಿದೆವೆಂಕಟೇಶಾ ಅ.ಪ. ಬರಿದು ದಂಡಿಸಿ ನಿನ್ನ ಪದ ಹೊಂದುವ ಬಗೆ ತೋರೋವೆಂಕಟೇಶಾ ಬಾಧೆಯ ತಾಳದೆ ಹಾದಿಯ ತಪ್ಪಿದೆ ವೆಂಕಟೇಶಾ 1 ಮಾರಿ ಮುಸುಕಿ ಎನ್ನ ಗಾರು ಮಾಡದೆ ವೆಂಕಟೇಶಾಘೋರ ಜಾರದ ವಾರಿಧಿಯಲಿ ನಾ ಮುಳುಗಿದೆ ವೆಂಕಟೇಶಾ 2 ಪಾರುಗಾಣದೆ ನಿನ್ನ ಮರೆಹೊಕ್ಕೆನೋ ವೆಂಕಟೇಶಾನಾನಾಗಿ ನಿನ್ನ ಗಣ್ಮ್ರತಗರಿಯೊ ವೆಂಕಟೇಶಾ 3 ಚೋರರ ಬಾಧೆಗೆ ಚೀರಿ ಚೀರುತಲಿಹೆನೊ ವೆಂಕಟೇಶಾದೂರ ನೋಡದಿರು ದಾಸರ ದೂತ ವೆಂಕಟೇಶಾ 4 ಹತ್ತು ಒಂಬತ್ತು ವತ್ಸರದಿಂದ ಕುಂಭಿಯೊಳಿದ್ದೆ ವೆಂಕಟೇಶಾಇನ್ನೆಂತು ಪೊಗಳಲಿ ನಿನ್ನ ಕರುಣವು ಬಾರದೆ ವೆಂಕಟೇಶಾ 5 ಕುಂಕುಮ ಅಂಕಿತ ಪದಪಂಕಜ ಶೋಭಿತ ವೆಂಕಟೇಶಾಕಂದನೆಂದು ಪೊರೆಯದಿರೆ ಬಿರಿದುಂಟೆ ವೆಂಕಟೇಶಾ 6 ಜ್ಞಾನದಿ ನಿನ್ನ ಧ್ಯಾನಿಪಲೊಲ್ಲೆ ವೆಂಕಟೇಶಾತೇಜ ತಂದೆವರದಗೋಪಾಲವಿಠಲ ವೆಂಕಟೇಶಾ 7
--------------
ತಂದೆವರದಗೋಪಾಲವಿಠಲರು
ಹೊಡೀ ನಗಾರಿ ಮೇಲೆ ಕೈಯಾ ಕಡ ಕಡ ಪ ದೃಢಮತಿಯಲಿ ಕಡು ವಾದಿರಾಜರು ರುಜುಗುಣಪರೆಂದ್ಹೊಡೇ ಅ.ಪ. ಕಾಮನಯ್ಯನ ನೇಮದಿ ಸ್ಮರಿಸುವ ಕಾಮರಹಿತ ನಿಷ್ಕಾಮ ಕರೆವರೆಂದ್ಹೊಡೀ 1 ಅವನಿಯೊಳಗೆ ತಾ ಬಂಧುರ ಕುಲೇಂದ್ರಿನಿ ಗೊಲಿದವ ನಿಂದ್ಯಂದ್ಯರೆಂದೊಡಿ2 ಮೋದ ಮುನಿಯ ಮತ ಮೋದದಿ ಸಾಧಿಪ ಸದ್ವಾದಿರಾಜ ಗುರು ಮೋದತೀರ್ಥರು ಸಮರೆಂದ್ಹೊಡಿ 3 ಶೋಣಿತ ಶೂನ್ಯರಿವತೆಂದ್ಹೊಡಿ4 ಕಾಮಿನಿಗೋಸುಗ ಪ್ರೇಮದಿ ಕುಸುಮವ ತಂದಿಟ್ಟತುಳ ಭೀಮನ ಸರಿಸಮರಿವತೆಂದ್ಹೊಡಿ 5 ಸೀತೆಯಗೋಸುಗ ಸೇತುವೆಗಟ್ಟಿದ ರಘುನಾಥನ ಪ್ರೀತಿಯ ಘನವಾತನಪದ ಪೊಂದುವರೆಂದ್ಹೊಡಿ 6 ಇಂದಿರೇಶನ ಪದಮಂದಿರದಲಿ ಭಜಿಸುವ ನಂದಿವಾಹ ಮುಖವೃಂದ ವಂದ್ಯರೆಂದ್ಹೊಡಿ 7 ವೃಂದಾವನದೊಳು ಕೂತುಚ್ಛಂದದಿ ದ್ವಿಜರಿಗೆ ಬೋಧಿಪರಿವರೆಂದ್ಹೊಡಿ 8 ಕಂತುವಿನಲಿ ತಾನಿಂತು ಜಪಿಸುವ ತಂದೆವರದಗೋಪಾಲವಿಠಲನ ಪ್ರೀತಿಮಂತ್ರಿಯೆನಿಪವರೆಂದೊಡಿ 9
--------------
ತಂದೆವರದಗೋಪಾಲವಿಠಲರು