ಒಟ್ಟು 86 ಕಡೆಗಳಲ್ಲಿ , 35 ದಾಸರು , 79 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವ್ಯರ್ಥವಲ್ಲವೆ - ಜನುಮ ವ್ಯರ್ಥವಲ್ಲವೆ ಪ.ತೀರ್ಥಪದನ ಭಜಿಸಿ ತಾ ಕೃ - |ತಾರ್ಥನಾಗದವನ ಜನುಮ ಅಪಒಂದು ಶಂಖವುದಕದಿಂದ |ಚೆಂದದಲಭಿಷೇಕ ಮಾಡಿ ||ಗಂಧ - ಪುಷ್ಪ ಹರಿಗೆ ಅರ್ಪಿಸಿ |ವಂದನೆ ಮಾಡದವನ ಜನುಮ 1ಮುಗುಳುದೆನೆಯ ಎಳೆ ತುಳಸಿ ದ - |ಳಗಳ ತಂದು ಪ್ರೇಮದಿಂದ ||ಜಗನ್ಮೋಹನ ಪೂಜೆಯ ಮಾಡಿ |ಚರಣಕೆರಗದವನ ಜನುಮ 2ಕಮಲ ಮಲ್ಲಿಗೆ ಸಂಪಿಗೆ ಜಾಜಿ |ವಿಮಲ ಕೇದಗೆ ಪ್ರೇಮದಿಂದ ||ಕಮಲನಾಭನ ಅರ್ಚನೆ ಮಾಡಿ |ಕರವ ಮುಗಿಯದವನ ಜನುಮ 3ಪಂಚಭಕ್ಷ್ಯ ಪಾಯಸಘೃತ |ಪಂಚಾಮೃತ ಹರಿಗರ್ಪಿಸದೆ ||ಮುಂಚೆ ಉಂಡು ಹೊರಗೆ ತಾ ಪ್ರ - |ಪಂಚಮಾಡುವವನ ಜನುಮ 4ಸಜ್ಜನಸಂಗ ಮಾಡದವನ |ದುರ್ಜನ ಸಂಗವ ಬಿಡದವನಅರ್ಜುನಸಖಪುರಂದರ |ವಿಠಲನನ್ನು ಭಜಿಸಿದವನ 5
--------------
ಪುರಂದರದಾಸರು
ಸರ್ವ ಪರಬ್ರಹ್ಮ ಸರ್ವ ಪರಬ್ರಹ್ಮಸರ್ವ ಪರಬ್ರಹ್ಮ ತಾನೆ ಪರಬ್ರಹ್ಮಪಹುದುಗಲ್ಲ ಕಣುಕಲ್ಲ ಬೇಳೇ ಭಕ್ಷ್ಯವು ಅಲ್ಲಅದರೊಳಗಣ ಸಿಹಿ ಅದುವೆ ಪರಬ್ರಹ್ಮ1ತೊಳೆಯಲ್ಲ ಬೀಜಲ್ಲ ತೊಗಟಲ್ಲ ಹಣ್ಣಲ್ಲತಿಳಿಯೆ ರುಚಿಯು ಬೇರೆ ಅದುವೆ ಪರಬ್ರಹ್ಮ2ಹಾಲು ನವ ನೀತವಲ್ಲ ಮೊಸರು ಮಜ್ಜಿಗೆಯಲ್ಲಹಾಲೊಳಗಣಘೃತಅದುವೆ ಪರಬ್ರಹ್ಮ3ದೇಹವಲ್ಲ ತತ್ವವಲ್ಲ ಮನ ಬುದ್ಧೀಂದ್ರಿಯವಲ್ಲದೇಹದೊಳಗಣ ದೇಹಿ ಅದುವೆ ಪರಬ್ರಹ್ಮ4ಸರ್ವಮಾಯೆ ಮಾತುಮಿಥ್ಯಸರ್ವಬ್ರಹ್ಮವೇ ಸತ್ಯಸರ್ವ ಚಿದಾನಂದ ಸರ್ವ ಪರಬ್ರಹ್ಮ5
--------------
ಚಿದಾನಂದ ಅವಧೂತರು
ಸ್ಥಿರದಿ ಸ್ಥಿರದಿ ನಿತ್ಯಾನಂದ ಭರಿತವಾಗಿರಲುಭರಿತವಾದಾನಂದ ಭರಿಸುತಿರಲುಪಆದಿಶಕ್ತಿಯು ಎಂಬ ಆಕಳನೆ ಬರಿಸಿಸಾಧುಗುರು ಕರುವೆಂಬುದದನೆ ಮುಂದಿರಿಸಿವೇದನಾಲಕು ಎಂಬ ಮೊಲೆಗಳನೆ ತೊರೆಸಿಭೇದರಹಿತಾದವರು ಹಿಂಡಿಲನು ಕರೆಸಿ1ಸ್ಥೂಲತನುವೆಂದೆಂಬ ಪಾತ್ರೆಯನೆ ತಂದುಲೋಲಸಾಂಖ್ಯವು ಎಂಬ ಕ್ಷೀರವನೆ ಕರೆದುಮೂಲಭೂತವದೆಂಬ ಹೆಪ್ಪನೆರೆದುಜೋಲುಮನಸಿನ ಬಡತನವನೆಲ್ಲ ಹರಿದು2ಸಾಧಕಾಂಗಗಳೆಂಬ ಮೊಸರನ್ನು ಮಥಿಸಿವಾದಹರವೆಂದೆಂಬ ಬೆಣ್ಣೆಯನು ತೆಗೆಸಿಸಾಧು ಶಾಂತಜÕವೆಂಬ ಪುಟದ ಮೇಲಿರಿಸಿಆತಘೃತಚಿದಾನಂದ ಜ್ಯೋತಿಯೊಡ ಬೆರಸಿ3
--------------
ಚಿದಾನಂದ ಅವಧೂತರು
ಹಲವು ಜನ್ಮದಲ್ಲಿ ಹರಿಯ ನೆನೆಯಲಿಲ್ಲಕಲಿಗಳು ಆಗಿ ನೀ ಕೆಡಬೇಡ ಮನುಜ 1ನೀಚಜಾತಿಯಲಿ ಪುಟ್ಟಿ ಅಧಮನಾಗಿರಬೇಡಭಜಿಸು ಭಕ್ತಿಗಳಿಂದ ಮಹಾಮಹಿಮ ಕೃಷ್ಣರ 2ನಂದ ಭದ್ರಾ ಜಯರಿಕ್ತ ಪೂರ್ಣ ವೆಂಬೊಚೆಂದುಳ್ಳ ತಿಥಿಯಲ್ಲಿಘೃತನವನೀತದಧಿಕ್ಷೀರ3ನಂದದಿ ಸಕ್ಕರೆಘೃತನವನೀತದಧಿಕ್ಷೀರದಿಂದಲಿ ಅರ್ಚಿಸಿ ಸುಕೃತವಪಡಿ4ಶಯನಾದಿಗಳಿಂದ ಶಾಖಾದಿ ಫಲವ್ರತಭಯದಿಂದ ಮಾಡೋರೆ ಸತತ 5ಅದರಿಂದ ಚಾತುರ್ಮಾಸ ನಾಲ್ಕು ತಿಂಗಳುಉಳಿದಿನ ಬಂತಲ್ಲ ಭವನ ಪಾವಕ(?) ಭೀತಿ 6ಆಷಾಢÀ ಶುದ್ಧ ಏಕಾದಶಿ ಮೊದಲಾಗಿಕಾರ್ತಿಕ ಶುದ್ಧ ದ್ವಾದಶಿ ಪರಿಯಂತ್ರ 7ಶ್ರೀಕಾಂತ ಯೋಗನಿದ್ರೆಲಿ ತಾ ಪವಳಿಸಿಈಕ್ಷಿಸುತಿರುವೋನೆ ಭಕ್ತರ 8ಹರಿಮಲಗ್ಯಾನೆ ಎಂದು ಅಜ್ಞಾನದಲಿ ನೀವ್ ಕೆಡಬೇಡಿಪರಿಪರಿಕಲ್ಪೋಕ್ತದ ಪ್ರಕಾರದ ವ್ರತಗಳ ಮಾಡಿ9ಸ್ನಾನ ಸಂಧ್ಯಾವಂದನೆಯ ಕಾಲಕಾಲದಲಿ ಮಾಡಿಮನದಲ್ಲಿ ವಾಮನನ ನೆನದು ಸುಕೃತವಪಡಿ10ಅತಿಥಿಗಳ ಮನ್ನಿಸಿ ಅನಾಚಾರಗಳ ಬಿಡಿಸತಿಸುತರನೆ ಒಡಗೂಡಿ ವಿಹಿತವ್ರತಗಳ ಮಾಡಿ 11ಆಷಾಡಮಾಸದಲಿ ಶಾಕ ಹದ್ದಿನ ಮಾಂಸಭೂಷಣ ಶ್ರಾವಣದಲಿದಧಿನಾಯಿಶ್ಲೇಷ್ಮ12ಭಾದ್ರಪದ ಮಾಸದಲಿ ಪಾಲು ಸುರಾಪಾನ ಆಶ್ವೀಜಕಾರ್ತೀಕ ಮಾಸದಲಿ ಚಿತ್ರಕ್ರಿಮಿರಾಶಿದ್ವಿದಳಬಹುಬೀಜ13ಮಾಸನಿಷಿದ್ಧ ವಸ್ತುವನು ಕುದಿಸಿ ಬೇಯಿಸಿದರೆಅಸ್ತ್ರವನು ದೇವರ ಅಂಗದೊಳಿಟ್ಟಂತೆ 14ಮಾಸನಿಷಿದ್ಧ ವಸ್ತುವನು ದೇವರಿಗೆ ಸಮರ್ಪಿಸಿದರೆಬಹುಕಲ್ಪ ನರಕದೊಳದ್ದುವಿರಿ ಪಿತೃಗಳ 15ಧರ್ಮಜರು ನಾರದರು ಸ್ತುತಿ ಮಾಡುತಿರುವೋರುಧರ್ಮರಾದರ ಸಂವಾದ ಚಾತುರ್ಮಾಸದ ಸಂಕಲ್ಪ 16ಈ ಕಥೆ ವ್ರತವನೆಲ್ಲ ಅರಿತು ಯೋಚಿಸಿದವರಿಗೆಬೇಕೆಂಬೊ ಮುಕ್ತಿಯನು ಕೊಡುವ ಹಯವದನ 17
--------------
ವಾದಿರಾಜ