ಒಟ್ಟು 102 ಕಡೆಗಳಲ್ಲಿ , 2 ದಾಸರು , 94 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾವ ಸಂಭ್ರಮವಿದೇ ವಾರಿಜ ವದನೆ ಶ್ರೀವೇಣುಗೋಪಾಲ ಮನೆಗೆ ಬಂದಿಹನೇ ಪ ದೇವ ದೇವನು ನಿನ್ನ ಪೂಜೆಗೊಪ್ಪಿದನೇ ಯಾವ ವಾತ್ಸಲ್ಯವ ನಿನಗೆ ತೋರಿದನೇ ಅ.ಪ ಗಾನ ನೃತ್ಯಗಳಿಂದ ಒಲಿಸಿದೆಯೇನೇ ಜೇನು ಸಕ್ಕರೆ ಬೆಣ್ಣೆಗಳನಿತ್ತೆಯೇನೇ ಸಾನುರಾಗದಿ ಪೂಜೆ ಮಾಡಿದೆಯೇನೇ ನಾನೇನಗೈದರೆ ಅವನೊಲಿಯುವನೇ1 ಪರಿಮಳ ಗಂಧಕೆ ಮೈ ತೋರುವನೇ ಕೊರಳಿಗೆ ಹಾರವ ನೀಡಲೊಪ್ಪುವನೇ ಮುರಳಿಯ ಗಾನವನೊಲಿದು ಕೇಳುವನೇ ಪರಮಪುರುಷ ಬಾರೆಂದರೆ ಬಹನೇ 2 ಕರಗಳ ಮುಗಿದರೆ ಕರುಣಿಪನೇನೇ ಚರಣಕೆ ಮಣಿದರೆ ಒಲಿಯುವನೇನೇ ಪರಿಪರಿ ಹೊಗಳಲು ನಲಿಯುವನೇನೇ ವರದ ಮಾಂಗಿರಿರಂಗ ದಯೆ ತೋರನೇನೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯಾವಪರಾಧ ಮಾಡಿದೆನೋ ರಂಗ ಈ ವಸುಧೆಯೊಳಿನ್ನು ಬಳಲುವೆನೋ ರಂಗ ಪ ಯಾವ ಪಕ್ಷಿಗೆ ಬಲೆ ಬೀಸಿದೆನೋ ರಂಗ ಯಾವ ಜೀವಿಗೆ ಗಾಳ ಹಾಕಿದೆನೋ ರಂಗ ಅ.ಪ ಯಾವ ಎಳಗೂಸನು ಬಾವಿಗೆ ತಳ್ಳಿದೆ ಯಾವ ತಪಸಿಗೆ ಭಂಗವಗೈದೆ ಯಾವ ದಂಪತಿಗಳ ಬೇರೆಗೈದೆನೊ ರಂಗ ಜೀವನು ನಾನೇನ ವಂಚನೆಗೈದೆನೊ 1 ಅಪರಾಧಂಗಳು ವಿಪರೀತವಾದರೂ ವಿಪುಲ ಕೃಪಾಕರ ನೀನಹುದಯ್ಯ ಅಪಕೃತಿಗೈದರೂ ಉಪಕೃತಿಗೈವೆ ನೀ ಕುಪಿತನಾಗದೆ ಕಾಯೋ ಮಾಂಗಿರಿರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರತ್ನದೊಳಗಿದು ರತ್ನ ನವರತ್ನಗಳೊಳಗಿದು ರತ್ನ ಪ ಚಿತ್ತಜಪಿತನೆಂಬ ರತ್ನ ನಮ್ಮ ನಿತ್ಯಮುಕ್ತರಂಗರತ್ನ ಅ.ಪ ಭಕ್ತಪಾಲಕನೆಂಬ ರತ್ನ ಸತ್ಯಾಸಕ್ತ ವರದನೆಂಬ ರತ್ನ ಮುಕ್ತಿದಾಯಕ ರಾಮರತ್ನ ನಮ್ಮ ಯುಕ್ತಿಭರಿತ ಕೃಷ್ಣರತ್ನ1 ಗೋಪಾಲಕೃಷ್ಣನೆಂಬ ರತ್ನ ವರತಾಪಸವಿನುತ ಮಾರತ್ನ ಶ್ರೀಪತಿಯೆಂಬ ಜೀವರತ್ನ ನಮ್ಮ ಪಾಪವಿನಾಶಕರತ್ನ 2 ಚಾರು ವೇದದೊಳಿಹ ರತ್ನ ನಮ್ಮಶ್ರೀರಮಣ ಎಂಬರತ್ನ 3 ಕರಿರಾಜವರದ ಸುರತ್ನ ನಮ್ಮ ಕರುಣಾಕರಯೆಂಬ ರತ್ನ ಶರಣ ಜನರ ಹಸ್ತರತ್ನ ನಮ್ಮ ತರಳಧ್ರುವನ ಕಾಯ್ದ ರತ್ನ 4 ಪ್ರೇಮರಸಾನ್ವಿತ ರತ್ನ ಇದು ಶ್ರೀಮಾಂಗಿರಿರಂಗರತ್ನ ನಮ್ಮ ರಾಮದಾಸಾರ್ಚಿತ ರತ್ನ5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಸನೆಗೆ ರಸವಿದು ತಾರಕನಾಮಾ ಅಸುವಿಗಸುವು ವಾಸುದೇವನ ನಾಮಾ ಪ ರಾವಣಾರಿಯ ನಾಮ ಭಾವದಿವ್ಯಾಮೃತ ಗೋವಳನಾಮವು ಜೀವಜೀವಾಮೃತ1 ಶಬರಿಗೊಲಿದ ನಾಮ ಅಭಯವೀಯುವ ನಾಮ ಕುಬುಜೆಗೊಲಿದ ನಾಮಾ ವಿಭವದ ನಾಮಾ 2 ಅಕ್ಷಯಪದ ನಾಮ ಪಕ್ಷಿವಾಹನ ನಾಮಾರಕ್ಷಕ ಮಾಂಗಿರಿರಂಗನ ನಾಮಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಾಮಮಂತ್ರದ ನೆನಪು ಮನಕಂಟಬೇಕು ರಾಮನಾಮದಿ ರಸನೆ ನಲಿಯುತಲಿರಬೇಕು ಪ ರಾಮಮೂರ್ತಿಯ ಕಣ್ಣು ಕಾಣುತಲಿರಬೇಕು ರಾಮಕಥೆಯ ಕಿವಿ ಕೇಳುತಲಿರಬೇಕು ಅ.ಪ ರಾಮಪಾದದ ತೀರ್ಥ ಕಂಠಕಿಳಿಯಬೇಕು ರಾಮ ಪ್ರಸಾದವು ತುಳಸಿಯಾಗಿರಬೇಕು ರಾಮನ ನಿಲಯವೇ ಕ್ಷೇತ್ರವೆನಿಸಬೇಕು ರಾಮನ ಭಜನೆಯೆ ದಿನಚರಿಯಾಗಬೇಕು 1 ರಾಮನಯೋಧ್ಯೆಯೆ ಹೃದಯವಾಗಲಿಬೇಕು ರಾಮಮಂತ್ರದ ಜಪ ಚಿತ್ತದಿ ನಿಲಬೇಕು ರಾಮನೇ ಮಾಂಗಿರಿರಂಗನೆನಲಿಬೇಕು ರಾಮಗೆ ಸಕಲವ ಅರ್ಪಿಸಬೇಕು2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಂದನೆಯು ವಂದನೆಯು ವಂದನೆಗಳು ನಂದಕುಮಾರ ಗೋವಿಂದನ ಚರಣಕೆ ಪ ವಂದನೆ ಇಂದಿನ ಬಂಧನ ನಾಶಕೆ ಮುಂದಿನ ಭವಗಳ ಮುಂದಿನ ಹರಣಕೆ ಅ.ಪ ಹುಟ್ಟು ಸಾವುಗಳ ಕಟ್ಟಳೆ ಅವನದು ಕೊಟ್ಟುದನು ಪಡೆಯುವದೃಷ್ಟ ನನ್ನದು ಬೆಟ್ಟದ ಗಾತ್ರದ ಪಾಪವು ನನ್ನದು ಇಷ್ಟನು ಕ್ಷಮಿಸುವ ದೃಷ್ಟಿ ಅವನದು 1 ಶರಣರ ಪೊರೆಯುವ ಬಲವಾತನದು ಪರಿಪರಿ ಪಾಪವ ಗಳಿಸುವುದೆನ್ನದು ಕರುಣೆಯ ತೋರುವ ಮನವಾತನದು ವರದ ಮಾಂಗಿರಿರಂಗ ನೀ ಶರಣೆಂಬುದು ನನ್ನದು2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಿಶೇಷ ಸಂದರ್ಭದ ಹಾಡುಗಳು ರಂಗನತೇರಿಗೆ ಬನ್ನಿರೋ ತೆಂಗು ಹೂ ಹಣ್ಣುಗಳ ತನ್ನಿರೋ ಬಂಗಾರದ ಗಿರಿಯಪ್ಪ ಎನ್ನಿರೋ ರಂಗ ಪರ್ಸಾದವ ಕೊಳ್ಳಿರೊ 1 ತೆಂಗಿನಮರ್ದುದ್ದ ತೇರೈತೆ ಅಲ್ಲಿ ರಂಗಿನ ಬಾವುಟ ಹಾರೈತೇ ಸಿಂಗಾರದಬಟ್ಟೆಯೇರೈತೇ ಹಂಗೂ ಹಿಂಗೂ ಜನ ಸೇರೈತೇ 2 ಬಾಳೆಕಂಬಗಳನು ಕಟ್ಟವ್ರೇ ತೋಳುದ್ದ ಹೂಸರ ಬಿಟ್ಟವ್ರೇ ತಾಳಮ್ಯಾಳ್ದೋರೆಲ್ಲಾ ನಿಂತವ್ರೇ ಬಾಳತುತ್ತೂರ್ಗೋಳನೂತ್ತವ್ರೇ 3 ತೇರಿನ ಗದ್ದುಗೆ ಬಂಗಾರ ತೋರಗಲ್ದಪ್ಪ ಅಲಂಕಾರ ಹಾರುವರ ಬಾಯಲ್ಲಿ ಓಂಕಾರ ರಂಗಪ್ಪಗಾಗೈತೆ ಸಿಂಗಾರ 4 ಭಟ್ಟರು ಮಂತ್ರವ ಹೇಳ್ತವ್ರೆ ಕಟ್ಟುನಿಟ್ಟಾಗಿ ನಿಂತವ್ರೇ ಬಟ್ಟಂದ ಹೂಗೊಳ ಹಾಕ್ತವ್ರೇ ಸಿಟ್ಟಿಲ್ಲದೆ ರಂಗ ನಗತವ್ನೇ 5 ಇಂಬಾಗಿ ಹೂರ್ಜಿಯ ಹಿಡಿದವ್ರೆ ದೊಂಬರೆಲ್ಲ ಕುಣಿತವ್ರೆ ಹಿಂಬದಿಯಲಿ ತೇರ ನಡೆಸವ್ರೇ 6 ಹಣ್ಣು ಜನ್ನವ ತೇರಿಗೆಸಿತಾರೆ ತಣ್ಣನೆ ಪಾನಕ ಕೊಡುತಾರೆ ಸಣ್ಣೋರೆಲ್ಲ ಕೈಮುಗಿತಾರೆ, ಹಣ್ಣು ಕಾಯ್ಗಳ ಗಾಲಿಗಿಡುತಾರೆ7 ತಕ್ಕೋ ಹಣ್ಕಾಯ ಎಂಬೋರು ಕೆಲವರು ನಕ್ಕು ಕುಣಿಯುವರೆಲ್ಲ ನೂರಾರು ಜನರು 8 ರಂಗಪ್ಪನ ತೆಪ್ಪ ತೇಲುತಿವೆ ಸಂಗೀತ ವಾದ್ಯ ಕೇಳುತಿವೆ ರಂಗುವiತಾಪು ಹೊಳೆಯುತಿವೆ ಮಂಗಳಾರತಿ ದೀಪ ಕಾಣುತಿವೆ 9 ಜೋಮಾಲೆ ಸರಗಳು ಹೊಳೆಯುತಿವೆ ನಾಮ ಮಂತ್ರಗಳೆಲ್ಲ ಮೊಳಗುತಿವೆ 10 ರಂಗಿನದೀಪ ಉರಿಯುವುದಣ್ಣ ಮಾಂಗಿರಿರಂಗನೆ ಬಲುಸೊಗಸಣ್ಣ 11
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಿಷ್ಣುಚಿತ್ತ ಸುಕುಮಾರಿ ಕೃಷ್ಣ ಕಥಾಂಬರ ಧಾರಿ ಪ ಕೃಷ್ಣ ಸುಖಂಕರಿ ಕರುಣಾಲಹರಿ ಪಾತಕ ಪರಿಹಾರಿ ಅ.ಪ [ಸೇವೆಗೆ ಕಟ್ಟಿದ ದೇವರ ಮಾಲೆಯಾ ಕಾವೊಳೋ]ಪಾದಿ ಮುಡಿ[ದಿ]ತ್ತವಳೇ ಮಣಿ ಪಾ ದಾವನು ಚೆಂಗಳೆ ಸೇರಿದಳೇ 1 ತವ ಪಾದಾಂಬುಜವೇ ಗತಿಯು ತವ ವಚನಾಮೃತವೇ ಮತಿಯು ತವ ಸಂಸ್ಮರಣವೆ ಪರಮಸುಖ [ತವ] ಮಾಂಗಿರಿರಂಗೇಶ ಸನ್ನಿಧಿಯೂ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶಕ್ತಿಗೊಲಿವೆಯೋ ರಂಗ ಯುಕ್ತಿಗೊಲಿವೆಯೋ ಪ ಶಕ್ತಿ ಯುಕ್ತಿಗೇ ಒಲಿವನಲ್ಲ ಭಕ್ತಿಯೆಂಬುದಿಲ್ಲದಿರಲು ಅ.ಪ ಸಕಲ ಭುವನಗಳೊಳು ಹುಡುಕಿ ವಿಕಲನಾದನಂದು ಕಶಿಪು ಭಕುತಿಯಲಿ ಪ್ರಹ್ಲಾದ ಕರೆಯೆ ಮರುಘಳಿಗೆಯೆ ಕಂಭದಿ ಬಂದೆ1 ಸೆರೆಯೊಳರಿಯು ಜನಿಸಲಂದು ಬರಿಯಮಾಯೆಯ ಸೆರೆಯೊಳಿರಿಸಿ ಭರದಿ ಗೋಕುಲಕೈದಿದೆಯಲ್ಲವೆ2 ಕರೆದ ಕೌರವರಿಗೊಲಿಯಲಿಲ್ಲ ಕರೆಯದಾವಿದುರಗೊಲಿದೆ ಅರಿಯಲರಿದು ಮಹಿಮೆಗಳ ಮಾಂಗಿರಿರಂಗ ಕರುಣಾಸಾಗರ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀ ಲಕ್ಷ್ಮೀಸ್ತುತಿ ಅಪರೋಕ್ಷಜ್ಞಾನ ಸಂಚಯೇ ಶ್ರೀಪದ್ಮನಾಭ ನಿಲಯೇ ಪ ತಪಯೋಗ ಭಕ್ತಿನಿಧಿಯೆ ಅಪಾರಮಹಿಮಾವಲಯೇ ಅ.ಪ ಕಮಲಾ ಕಮಲಸದನೆ | ಕಮಲನಯನೆ ಕಮಲವದನೆ ಕಮಲಾಂಬರೆ ಕುಂದರದನೆ | ಕಮಲಾಂಬಿಕೆ ಮನಮೋಹನೆ 1 ಸರಸೀರುಹಜಾತನಮಿತೆ | ವರ ಮಾಂಗಿರಿರಂಗಪ್ರೀತೆ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀವತ್ಸಾಂಕಿತ ಗರುಡ ತುರಂಗ ಕಾವೇರಿ ಜಲ ಪರಿವೃತ ರಂಗ ಪ. ದೇವೋತ್ತಮ ನುತ ಧರಿತ ರಥಾಂಗ ಪಾವನ ಚರಣ ಕೃಪಾಂಗ ಶುಭಾಂಗ ಅ.ಪ. ದೇವಕೀನಂದನ ಜಲದ ನೀಲಾಂಗ ಭಾವಜಪಿತ ದಯಾಜಲಧಿ ತರಂಗ ಶ್ರೀವನಮಾಲಾ ರಿಪುಮದ ಭಂಗ ಲಾವಣ್ಯಾಂಬರ ಕರುಣಾಪಾಂಗ 1 ರಾವಣ ಕುಲ ಸಂಹಾರಕ ರಂಗ ಶ್ರೀವಿಭೀಷಣ ಪೂಜಿತ ರಂಗ ಸನ್ನುತ ರಂಗ ಶ್ರೀವಸುಧಾನ್ವಿತ ಮಾಂಗಿರಿರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಕ್ಕರೆರುಚಿ ತಾಯಕ್ಕರೆ ಬಲುರುಚಿ ಚಿಕ್ಕರಂಗನ ಉಕ್ಕುವ ರುಚಿಯು ಪ ಸಕ್ಕರೆ ರಸನೆಗೆ ಅಕ್ಕರೆ ಮನಸಿಗೆ ಚಿಕ್ಕರಂಗನ ನಗು ಸಿಕ್ಕದೆಲ್ಲರಿಗೆ ಅ.ಪ ಜೇನು ಮಧುರ ಅಭಿಮಾನ ಮಧುರಬ್ರಹ್ಮ ಜ್ಞಾನ ಮಧುರ ಕೃಷ್ಣಾ ಎನಲತಿಮಧುರ ಜೇನು ಸಕ್ಕರೆಗಿಂತ ಮಾಂಗಿರಿರಂಗನ ಜ್ಞಾನಾಮೃತಪಾನ ನಿರುಪಮಮಧುರ1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸನಿಹದಲೆ ದೆಸೆದೆಸೆಗೆ ಪ ಇನಿತುಪಾದಗಳಿಂದ ಅನಿಲನ ಸೋಲಿಸಿ ಅ.ಪ ಕಾಮಕ್ರೋಧಗಳೆಂಬ ನೇತ್ರಗಳಿದಕಿದೆ ವ್ಯಾಮೋಹ ಲೋಚನ ಎಂಬ ಕರ್ಣಂಗಳಿವೆ ದುರ್ಮದವೆಂಬುವ ಪುಚ್ಚವೊಂದಿಹುದಯ್ಯ ಈ ಮದಹಯಕೆ ಮಾತ್ಸರ್ಯ ನಾಸಿಕವಯ್ಯ1 ಮೃಡನು ತಾ ಎಂಬುವ ಕಡಿವಾಣದ ಹಿಡಿ ದೃಢಭಕ್ತಿಯೆಂಬ ಪಾಶ ಕೊರಳೊಳಗಿರಲಿ ಎಡಗೈಯೊಳು ಹರಿಯೆಂಬ ಕೊಳಲನು ಹಿಡಿ ತಡವೇಕೆ ಮನುಜ ಓಡಿ ಹಯವ ತಡಿ 2 ಆಡಲು ನಿಲಬೇಡ ನೋಡಿ ನಲಿಯಬೇಡ ಓಡಾಡಿ ತುರಗವ ಹಿಡಿ ಹಿಡಿ ಮನುಜ ಓಡಿ ಹಯವ ಪಿಡಿದು ಬಂಧಿಸದಿದ್ದರೆ ಕಾಡಿಗೈದಿ ದೊಡ್ಡ ಮಡುವ ಸೇರುವುದು 3 ನರಹರಿಯೆಂಬ ಕುಣಿಕೆಯ ಗೈದು ತ್ವರಿತದಿ ತುರಗದ ಕೊರಳಿಗೆ ಬಿಗಿದು ಕರದೊಳಗಿರುವ ಕಡಿವಾಣ ಒಂದಿಡಿ ನೆರೆ ಭಕ್ತಿಪಾಶದಿ ತುರಗವ ಸೆರೆಗೈ 4 ನಾರಾಯಣಾ ಎಂಬ ನೀರ ಕುಡಿಸುತಲಿ ಶ್ರೀರಮಣ ಎಂಬ ಹುರಳಿಯ ನಿಡುತೆ ಮಾರ[ಮಣ] ಎಂಬ ತೃಣವನೆಣಿಸಿ ದಿವ್ಯಾ ಕಾರದಿ ಮಾಂಗಿರಿರಂಗಗರ್ಪಿಸಿರೋ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಾಮಾಜಿಕ ಹಿಂಗಿಲ್ಲದವನಿಗೆ ವನವಾಸ ಪ ಹಂಗುಳ್ಳವನಿಗೆ ಉಪವಾಸ ಅ.ಪ ಕಳ್ಳಿಯ ಬೇಲಿಗೆ ನುಗ್ಗಬೇಡಣ್ಣ ಸುಳ್ಳು ಹೇಳುವುದ ಸುಡಬೇಕಣ್ಣ 1 ನೇಮನಿಷ್ಠೆಗಳ ಸಡಿಲಿಸಬೇಡ ರಾಮಧ್ಯಾನವ ಬಿಡಲೂಬೇಡ 2 ಹಾರುವ ಮನವನು ಹಿಡಿಯಬೇಕಣ್ಣ ಶ್ರೀರಂಗನಾಥನ ಮರೆಯಬೇಡಣ್ಣ3 ಹಂಸ ತಾವರೆಗಳಂತಿರಬೇಕಣ್ಣ ಕಂಸಾರಿಯ ಭಕ್ತನೆಂದೆನಿನಿಣ್ಣ 4 ಮಂಗನ ಚೇಷ್ಟೆಯ ಮಾಡಬೇಡಪ್ಪಾ ಮಾಂಗಿರಿರಂಗನ ಮರೆಯಬೇಡಪ್ಪಾ5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಾಮಾಜಿಕ-ಲೋಕನೀತಿ ಸ್ತುತಿಗಳು ಅಳುವವರಿಲ್ಲದ ಜಗವಿಲ್ಲ ಪ ಅಳುವಿಲ್ಲದವಗೆ ನಲವಿಲ್ಲಾ ಸದಾ ಅಳುವವನಿಗೆ ಸದ್ಗತಿಯಿಲ್ಲಅ.ಪ ಅಳಿವಿಂಗಳುವುದು [ಅಸಹಾಯಾರ್ಥ] ಬಳಲಿಕೆಗಳುವುದು ಬಹುವ್ಯರ್ಥ ಘಳಿಗೆಯೊಂದಾದರೂ ನಳಿನನಾಭನಕೃಪೆ ಗಳುವುದೇ ಮನುಜಗೆ ನಿಜದರ್ಥ 1 ಸ್ವಾಮಿಯ ಬಳಿಯಲಿ ಕಾಮಿತವಿಲ್ಲದ ನಾಮಭಜನೆಯೊಳು ಇರಬೇಕು ಶ್ರೀಮಹಿತಾಂಗ ಮಾಂಗಿರಿರಂಗಯ್ಯನ ಪ್ರೇಮಕಳುವ ಮನವಿರಬೇಕು 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್