ಒಟ್ಟು 84 ಕಡೆಗಳಲ್ಲಿ , 34 ದಾಸರು , 77 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಾ ಹಾ ಸಾಧುರು ಮೆಚ್ಚದನಕ ಹರಿಗುರು ಮೆಚ್ಚ ಪ.ನನ್ನ ಗುಣಕೆ ನಾ ಮೆಚ್ಚಿದೆ ಬರಿದೆಪುಣ್ಯವಂತನೆಂದನ್ಯರ ಜರಿದೆಉನ್ನತ ಸೂಕ್ಷ್ಮ ಸುಧರ್ಮವ ಕಾಣೆನನ್ನೊಳು ನಾ ವೃಥಾ ಹಿಗ್ಗಿದರೇನು 1ಜನದೊಳು ದಣಿಯದೆ ಜ್ಞಾನವನೊರೆದುಘನವೈರಾಗ್ಯಕೆ ಹಿಂದಕೆ ಸರಿದುತನು ಮನ ಕದ್ದು ಭಕುತಿಯೊಳಿದ್ದುಹೆಣಗಾಡುತ ಭಾಗವತೆನಿಸಿದ್ದು 2ಸಂತರು ಒಪ್ಪಿದ ಜ್ಞಾನಿಯವ ಸಂತಸಂತರಿಗಾಗದವಿರತಿಭ್ರಾಂತಿಸಂತರುಕೂಡಿದಭಕುತಿ ಮುಕುತಿಸಂತರ ಪ್ರಿಯ ಪ್ರಸನ್ವೆಂಕಟಯ್ಯ 3
--------------
ಪ್ರಸನ್ನವೆಂಕಟದಾಸರು
ಹೊರ ಹೋಗಿ ಆಡದಿರೊ ಹರಿಯೆ-|ಎನ್ನ ದೊರೆಯೆ ಪಮನೆಯೊಳಗಾಡುವುದೆ ಚೆಂದ - ನೆರೆ-|ಮನೆಗಳಿಗೇಕೆ ಪೋಗುವೆಯೊ ಮುಕುಂದ ||ವನಿತೆಯರು ಮೋಹದಿಂದ - ನಿನ್ನ |ಮನವಸಹರಿಸಿಕೊಂಬುವರೋ ಗೋವಿಂದ 1ಏನು ಬೇಡಿದರೂ ನಾ ಕೊಡುವೆ-ಕೆನೆ-|ಬೆಣ್ಣೆ ಕಜ್ಜಾಯವ ಕೈಯೊಳಗಿಡುವೆ ||ನಿನ್ನ ಗುಣಗಳನು ಕೊಂಡಾಡುವೆ - ನಿನಗೆ |ಚಿನ್ನ ರನ್ನದ ಅಲಂಕಾರಗಳಿಡುವೆ 2ಹೊಲಸು ಮೈಯವನೆನ್ನುವರೊ-ದೊಡ್ಡ |ಕುಲಗಿರಿಯನ್ನು ಪೊತ್ತವನೆನ್ನುವರೊ ||ಬಲುಕೇಶದವನೆನ್ನುವರೊ-ಆ |ಎಳೆಯನನೆತ್ತಿದ ಕುರೂಪಿಯೆಂಬುವರೊ 3ಭಿಕ್ಷೆಬೇಡಿದೆ ಎಂಬುವರೊ-ಭೂಮಿ |ರಕ್ಷಿಪ ರಾಯರ ಕದಡಿದೆಯೆಂಬುವರೊ ||ಲಕ್ಷ್ಮಿಯ ಕಳೆದೆಯೆಂಬುವರೊ-------ವೈ-|ಲಕ್ಷಣ ಬೆಣ್ಣೆಯ ಕದ್ದೆಯೆಂಬುವರೊ 4ಮಾನಬಿಟ್ಟವನೆನ್ನುವರೊ-ಮಹಾ |ಹೀನರ ಬೆನ್ನಟ್ಟಿ ಹೋದನೆಂಬುವರೊ ||ದಾನವವೈರಿಯೆಂಬುವರೊ-ಸುರ-|ರಾನತ ಪುರಂದರವಿಠಲನೆಂಬುವರೊ 5
--------------
ಪುರಂದರದಾಸರು