ಒಟ್ಟು 1253 ಕಡೆಗಳಲ್ಲಿ , 106 ದಾಸರು , 1051 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುನಾಮ ಗುರುವಂದಿತ ಶ್ರೀರಾಮ ಪ ಅಹಿಭೂಷಣ ನುತರಾಮ | ಮಹಿಜಾಪ್ರಿಯ ಶ್ರೀರಾಮ ಅ.ಪ ದಶರಥೇಂದ್ರ ಸುಕುಮಾರ | ನಿಶಿಚರಾಳಿ ಸಂಹಾರ | ಕೌಶಿಕ ಭಯ ಪರಿಹಾರ | ಪರಮಶೂರ ಶ್ರೀರಾಮ 1 ಮುನಿಗೌತಮ ಸತಿಪಾವನ | ಜನಕಾತ್ಮಜ ಮನಮೋಹನ | ಮುನಿಸನ್ನುತ ಸುರಜೀವನ | ವನಜೇಕ್ಷಣ ಶ್ರೀರಾಮ 2 ಜನಕಜಾ ಸುಮಿತ್ರಜಾಯುತ | ವನವನಾಂತರ ಸಂಚರಿತ | ಸನಕಾನತ ಶ್ರೀರಾಮ 3 ಭರತಾನತ ಪೂಜ್ಯಪಾದ | ಪರಮಾದ್ಭುತ ಶರ ವಿನೋದ | ಸುರಭೀಕರ ದೈತ್ಯಸೂದ | ಅಭಯಪ್ರದ ಶ್ರೀರಾಮ 4 ಖಚರಾಧಿಪ ಪ್ಲವಗೇಶ್ವರರಾಮ ವರದಾಯಕ ಭಯಹಾರಕ ರಾಮ | ಶುಭಕಾರಕ ಶ್ರೀರಾಮ 5 ನಿಶಿಚರ ಕಾಲಾಂತಕ ರಣಭೀಮ | ಸನ್ನುತ ಶ್ರೀರಾಮ 6 ಭುವನೋದ್ಧಾರಣ ಕಂಕಣ ರಾಮಾ | ಭುವನಾನಂದದ ಶ್ರೀರಾಮಾ 7 ದಾವಾನಲ ಸಮರಂಜಕ ರಾಮಾ | ರಾವಣಕುಲ ವಿಧ್ವಂಸಕ ರಾಮಾ | ಸೀತಾನಾಯಕ ಶ್ರೀರಾಮಾ 8 ರಾಕಾಚಂದ್ರ ಸುಧಾಕರ ರಾಮಾ | ಏಕಚಕ್ರಾಧಿಪ ರಘುರಾಮ | ಲೋಕಸುಖಂಕರ ಶ್ರೀರಾಮ 9 ಅಂಗದ ಹನುಮತ್ಸೇವಿತರಾಮ | ಮಂಗಳಕರ ಸೀತಾರಾಮ | ಮಾಂಗಿರಿನಿಲಯ ಶುಭಾನ್ವಿತ ರಾಮ | ಜಗವಂದಿತ ಶ್ರೀರಾಮ10
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸುರನರವಂದಿತ ಪಾಹಿ ಮುಕುಂದ ಶರಣರ ಪಾಲಕ ತ್ರಾಹಿ ಗೋವಿಂದ ಪ ಅಶನವಸನ ನೀಡಿ ಪಾಹಿ ಮುಕುಂದ ಅಜಹರ ಪೂಜಿತ ಪಾಹಿ ಮುಕುಂದ ಭಜಿಸುವೆ ಚರಣವ ತ್ರಾಹಿ ಗೋವಿಂದ 1 ಶಂಖ ಚಕ್ರಾಂಕಿತ ಪಾಹಿ ಮುಕುಂದ ಪಂಕಜ ಲೋಚನ ತ್ರಾಹಿ ಗೋವಿಂದ 2 ಇಂದಿರ ರಮಣನೇ ಪಾಹಿ ಮುಕುಂದ ಚಂದದಿ ದಾಸನ ತ್ರಾಹಿ ಗೋವಿಂದ 3 ಪನ್ನಗಶಯನನೇ ಪಾಹಿ ಮುಕುಂದ ಚನ್ನಕೇಶವ ಸ್ವಾಮಿ ತ್ರಾಹಿ ಗೋವಿಂದ 4
--------------
ಕರ್ಕಿ ಕೇಶವದಾಸ
ಸುಲಲಿತ ಮಧುಕರ ಕೊಳಲನೂದುವುದನು ಕಲಿಸಿದರಾರೇ ನಳಿನಮುಖೀ ರಾಧೇ ಪ ಬಲಿಸಂಹಾರನು ಲೋಕದ ನಾರಿಯ ರಲಸದೆ ಗಾನವ ಕಲಿಸಿದನೇನೇ ಅ.ಪ ಕರು ತುರುಗಳ ಬಳಿ ಸರಸವನಾಡುತ ಮುರಳಿಯನೂದುವ ಸರಸಿಜನಾಭ ಕರೆಕರೆದು ನಿನ್ನ ಬೆರಳಿಗುಂಗುರವಿಟ್ಟು ಸ್ವರಗಳ ಬೋಧಿಸಿ ನಲಿನಲಿದಿಹನೇನೇ 1 ಬೃಂದಾವನದಲಿ ನಂದಕುಮಾರನ ವಂದಿಸೆ ನಾರದ ಬಂದುಹಾಡಿದನೇ ಅಂದದ ಕಲಿಕೆಯ ತುಂಬುರ ನಿನಗಾ ನಂದದಿ ಗಾನವ ಕಲಿಸಿದನೇನೆ 2 ಅಂಗಜಪಿತನಿಗೆ ಮಂಗಳಗಾನವ ಅಂಗನೆ ಶಾರದೆ ಪಾಡಿದಳೇನೇ ಮಾಂಗಿರಿರಂಗ ಮಾತಂಗವರದನಂತ ರಂಗದರಾಣಿ ನೀ ಕಲಿಯೆಂದನೇನೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸೂರ್ಯ ಯತಿವರ್ಯ | ಮ ಧ್ವಾರ್ಯರ ಸುಮತ ಸರೋಜಕೆ ಸುಶೀಲೇಂದ್ರ ಪ ಬುಧಜನ ವಂದಿತ ಸುಧಿ ಸುವೃತೀಂದ್ರರ ಸದಮಲ ಘನ ಸದ್ ಹೃದಯಾ ಕಾಶಕೆ 1 ಧರಣಿ ಸುರಾಗ್ರಣಿ ಗುರು ಸುವೃತೀಂದ್ರರ ಸುರಚಿರ ಸರಸಿಜಕರ ಪೂರ್ವಾದ್ರಿಗೆ 2 ಭೂಸುರ ಸೇವಿತ ಪೂಶರ ನಿರ್ಜಿತ ಭಾಸುರ ವರ ಸನ್ಯಾಸ ಸುಚ್ಭಾಯಕೆ 3 ಬಗೆ ಬಗೆಯಿಂದಲಿ ನಿಗವೋಕ್ತಿಯಲಿ ರಘುವರನರ್ಚಿಪ ಸುಗುಣವೆಂಬ್ಹಗಲಿಗೆ 4 ಶಾಮಸುಂದರನ ನಾಮ ಪೊಗಳಿದ ಪಾಮರ ಮತಿ ಜನಸ್ತೊಮ ಯಾಮಿನಿಗೆ 5
--------------
ಶಾಮಸುಂದರ ವಿಠಲ
ಸೃಷ್ಟಿಯೊಳಗೆಲ್ಲ ದುಷ್ಟರ ಪ್ರಭೆಯಾಗಿ ನಿಷ್ಠರುದೋರದಂತಾದರು ಮಾ ಧ್ರುವ ಭ್ರಷ್ಟರು ಬೂಟಿಕಿ ಶಿಷ್ಠರೆ ಕೈಕೊಂಡು ನಿಷ್ಠರಿಗಾಟ್ಲಿ ತಂದರು ಮಾ ತುಟ್ಟಿಲೆ ಮಿಸುಕದೆ ಗುಟ್ಟಿಲಿದ್ದವರ ಬಟ್ಟೆಗ್ಯಳದಿನ್ನು ತಾಹರು ಮಾ ಹೊಟ್ಟೆಯೊಳು ಹೊಕ್ಕು ಕಟ್ಟಲೆ ಕುಳಿತಿನ್ನು ನೆಟ್ಟ ನೇರಿಷ್ಟ ನೇಮಿಸುರು ಮಾ ಇಟ್ಟ ತೊಟ್ಟವರನು ಕೆಟ್ಟದೃಷ್ಟಿಲೆ ನೋಡಿ ದಿಟ್ಟತನದಿ ಪ್ರಾಣಕೊಂಬರು ಮಾ 1 ಕೊಟ್ಟು ಹಣಹೊನ್ನು ಇಟ್ಟದ್ದು ಬೇಡಲು ಕುಟ್ಟಿ ಅವನಬಾಯಿ ಹಾರರು ಮಾ ತುಟ್ಟಿಲೆ ವಂದಾಡಿ ಹೊಟ್ಟಲೆ ವಂದಿಟ್ಟು ನೆಟ್ಟನೆ ಘಾಸಿಮಾಡರು ಮಾ ಗಂಟುಳ್ಳವರ ಕಂಡು ಕಟ್ಟಿದಂಡಗಳನ್ನು ನಷ್ಟತನದಿ ಹೊಟ್ಟೆ ಹೊರುವರು ಮಾ ಬಟ್ಟಿಲೆ ತೋರಲು ಬಿಟ್ಟಿಯ ಹಿಡಿದಿನ್ನು ಹೆಟ್ಟಿ ಅವನ ಮುಂದೆ ನಡೆಸುರು ಮಾ 2 ಶುದ್ದಿಯು ಇಲ್ಲದೆ ರಾಜ್ಯಾಧಿಪತಿಗಳು ಇದ್ದು ಇಲ್ಲದಂತಾದರು ಮಾ ಮಂದಮತಿಗಳು ಅಂದಣವೇರಿನ್ನು ಬುದ್ಧಿವಂತರೀಗ್ಹೀನತಂದರು ಮಾ ಮುದ್ರಾಧಾರಿಗಳೆಲ್ಲ ಕ್ಷುದ್ರದೃಷ್ಟಿಯು ಮಾಡಿ ಕ್ಷುದ್ರತನದಿ ಕೆಡುತಿಹರು ಮಾ ಸಿದ್ಧಸಾಧಕರೆಲ್ಲ ಗುದ್ದನೇ ಹೊಕ್ಕರು ಇದ್ದರೆ ಬುದ್ಧಿಹೀನರು ಮಾ 3 ಉಳಿಯಮುಟ್ಟಿದ ದೈವ ಉಳಿಯದೇ ಹೋದವು ಉಳಿಗಾಲ ವಿಲ್ಲದಂತಾಯಿತು ಮಾ ತಿಳಿವಳಿಕುಳ್ಳವರೆಲ್ಲ ತಲೆಮುಸಕ್ಹಾಕಿನ್ನು ಕಳ್ಳರೆ ಸಾಜರು ಆದರು ಮಾ ಒಳ್ಳೆಯವರ ನುಡಿ ಎಳ್ಳಷ್ಟು ಮಾಡುತ ಸುಳ್ಳರು ನಿಜನುಡಿವೆಂಬುರು ಮಾ ಉಳ್ಳವರು ಖಳಬುದ್ಧಿ ಕೈಕೊಂಡು ಇಳೆಯೊಳು ಧರ್ಮವ ಜರೆದರು ಮಾ 4 ಸಾಧುಸಜ್ಜನರೆಲ್ಲ ಭೇದವ ಅಡಗಿಸಿ ಮೇಧಿನಿಯಲು ಗುಪ್ತರಾದರು ಮಾ ಇದ್ದರ ಘನಸುಖ ಸಿದ್ಧರ ನೆರೆಯಲಿ ಬುದ್ಧಿಹೀನರು ತಾವು ಅರಿಯರು ಮಾ ಸದ್ಗುರು ಕೃಪೆಯಿಂದ ಸದ್ಬ್ರಹ್ಮದ ನೆಲೆಯ ಸತ್ ಶಿಷ್ಯಮಹಿಪತಿ ತಿಳಿದನು ಮಾ ಎಂದಿಗೆ ಬೇಡಿನ್ನು ದುರ್ಜನರ ಸಂಗವು ತ್ರಾಹಿ ತ್ರಾಹಿ ತ್ರಾಹಿ ಎಂದನು ಮಾ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸೇವಕನೆಲೊ ನಾನು ನಿನ್ನಯ ಪಾದಸೇವೆ ನೀಡೆಲೊ ನೀನು ಪ. ಸೇವಕನೆಲೊ ನಾನು ಸೇವೆ ನೀಡೆಲೊ ನೀನುಕಾವದೇನೆಲೊ ಶ್ರೀವಧೂವರ ರಾವಣಾಂತಕ ರಕ್ಷಿಸೆನ್ನನುಗೋವರ್ಧನ ಗಿರಿಧರ ದೇವ ಗೋವುಗಳ ಕಾವಶ್ರೀಮಹಾನುಭಾವ ವರಗಳನೀವ ದೇವಶ್ರೀವಲ್ಲಭ ದಯಮಾಡೆನ್ನನುಈ ವ್ಯಾಳೆಗೆ ಇಂದಿರೆರಮಣ ಅ.ಪ. ರಾಮ ದಶರಥನಂದನ ರಘುಕುಲಾಬ್ಧಿಸೋಮ ಸುಂದರವದನವಾಮನ ಪರಿಪೂರ್ಣಕಾಮ ಕೌಸಲ್ಯರಾಮಸ್ವಾಮಿ ಶ್ರೀರಂಗಧಾಮ ದೈತ್ಯವಿರಾಮಶ್ರೀಮದನಂತ ನಾಮಭೀಮ ಮುನಿಜನಸ್ತೋಮರಮ್ಯಗುಣಧಾಮ ರಣರಂಗಭೀಮಕೋಮಲಶ್ಯಾಮ ಹೇಸಾಮಜವರದ ನೀನನುದಿನಕಾಮಿತಫಲವನು ಕರುಣಿಸಿ ಕಾಯೊ 1 ಶಂಕರ ಸುರಸೇವಿತ ಶೇಷಗರುಡಾ-ಲಂಕಾರ ಮಣಿಶೋಭಿತಪಂಕಜನಯನ ಮೀ-ನಾಂಕ ಜನಕ ಪಾದ-ಪಂಕಜಾಸನವಿನುತ ತಿರುಪತಿವೆಂಕಟ ಬಿರುದಾಂಕ ಜಯ ಜಯಶಂಖಚಕ್ರಗದೆ ಪಂಖ ಪಿಡಿದಕಳಂಕ ಚರಿತ ತಾ-ಟಂಕಗೊಲಿದ ನಿಶ್ಶಂಕಲಂಕಾಧಿಪರಿಪು ರಘುಪತಿಕಿಂಕರರಿಗೆ ಕಿಂಕರ ನಾನೆಲೊ 2 ಮಾಧವ ಮಧುಸೂಧನನಂದಮಂಗಳ ವಿಗ್ರಹಬಿಂದುಮಾಧವ ಶ್ರೀಮುಕುಂದ ಶ್ರೀಮದಾ-ನಂದ ವಂದಿತಾಮರವೃಂದ ಶ್ರುತಿಗಳ ತಂದ ತುರಗವನೇರಿ ಬಂದವೃಂದಾವನದೊಳಗಿಂದ ಯಶೋದೆಯಕಂದ ಹರಿಗೋ-ವಿಂದ ಶೇಷಗಿರಿಯಲಿ ನಿಂದಮಂದಾಕಿನಿ ಪಡೆದೆಲೊ ಧ್ರುವಗೊಲಿ-ದಂದದಿ ಎನಗೊಲಿಯೊ ಹಯವದನ 3
--------------
ವಾದಿರಾಜ
ಸೋಜಿಗ ಸೋಜಿಗ ಗೋವಿಂದನ ಸೋಜಿಗ ಗೋಪಾಲನ ಸೋಜಿಗ ಪ ಇಂದಿರೆ ರಮಣ ಈ ಪರಬ್ರಹ್ಮ | ಮಂದರೋದ್ಧಾರ ಈ ದೇವಾ | ತಂದೆ ತಾಯಿ ತ್ರೈಲೋಕ್ಯಕ್ಕೆ ತಾನಾಗಿ ನಂದ | ಆನಂದ ಯಶೋದೆಗೆ ಮಗನಾದ ನೋಡಮ್ಮ || ಸೋಜಿಗ 1 ಸದಮಲ ಸ್ವರೂಪ ಸಚ್ಚಿದಾನಂದನು |ಮುನಿಜನ ವಂದಿಪನು ಈ ದೇವ ಮುನಿಜನ ವಂದಿಪನು |ಪದುಮನಾಭ ಪೀತಾಂಬರಧರ ದೇವ ವಿದುರನ | ಆವಿದುರನ ಮನೆಯಲ್ಲಿ ಉಂಡದ್ದು ನೋಡಮ್ಮ ಸೋಜಿಗ2 ನಾನಾ ದೇವರ ದೇವ ನಾರಾಯಣ ಹರಿ ನಿಜಸುರ ವಂದಿ-ಪನು ಈ ದೇವ | ಭಾನು ಕೋಟಿ ತೇಜ ಜ್ಞಾನ-ಬೋಧನ ಸ್ವಾಮಿ | ತಾನಾಗಿ ಭಕುತಿಗೆ ಒಲಿದದ್ದುನೋಡಮ್ಮ ಸೋಜಿಗ 3
--------------
ಜ್ಞಾನಬೋದಕರು
ಸ್ಕಂದ ದೇವನಿಗೆ - ಜಯ ಜಯ ವೆಂದು ಪಾಡುತ ವಂದಿಸುವೆ ಮು- ಕುಂದ ಮಿತ್ರನಿಗೆ ಪ ನಂದ ಮೂರುತಿ ಸುಂದರಾಂಗ ಅ.ಪ ಮಾರರೂಪಗಪಾರ ಮಹಿಮಗೆ 1 ಪುಲ್ಲನಯನನಿಗೆ - ಆನತ ನಲ್ಲನಿಗೆ ಖಳದಲ್ಲಣಗೆ ಸುರ- ರೊಲ್ಲಿಭಗೆ ವಿಶ್ವಕೆಲ್ಲ ಒಡೆಯನಿಗೆ 2 ಪಾವಂಜೆ - ಪುರದಧೀಶಗೆ ಗಿರಿಜೆ ತನುಜಗೆ 3
--------------
ಬೆಳ್ಳೆ ದಾಸಪ್ಪಯ್ಯ
ಸ್ಕಂದಗುರು ಸ್ಕಂದಗುರು ಸುರ- ವೃಂದ ಮುನಿಜನರು ವಂದಿಪರುಪ. ಮಂದರಧರ ಗೋವಿಂದನ ಶರಣರ ಸಂದೋಹಕಾವ ವೃಂದಾರಕತರುಅ.ಪ. ತಾಮಸರು ದ್ವೇಷ ಬೇಡುವರು ಕಾಮಿತ ಕೇಳ್ವರು ರಾಜಸರು ಸ್ವಾಮಿ ಶ್ರೀಹರಿಯ ಭಕ್ತಿಜ್ಞಾನವ ಪ್ರೇಮದಿ ಕೇಳ್ವರು ಸಾತ್ವಿಕರು1 ವಿಘ್ನಹರನು ನಿನ್ನಗ್ರಜನು ವಿಬು- ಧಾಗ್ರಣಿಯೆನಿಸುವೆಯೊ ನೀನು ಉಗ್ರ ತ್ರಿಯಂಬಕತಾತನು ಖ್ಯಾತನು ದುರ್ಗಾದೇವಿಯೆ ಜನನಿ ನಿರುಪಮಳು2 ತಾರಕಾಂತಕ ನಿಶ್ಯೋಕ ಲಕ್ಷ್ಮೀ- ನಾರಾಯಣನಿಗೆ ಸಖ ಭೂರಿನಿಗಮಾರ್ಥಸಾರ ಕೋವಿದನೆ ಧೀರನೆ ವೀರ ಮಹಾರಣಶೂರನೆ3
--------------
ತುಪಾಕಿ ವೆಂಕಟರಮಣಾಚಾರ್ಯ
ಸ್ಕರ ಕೋಟಿ ತೇಜನೆ ನೀ ಬಾರೋ ಪ ದುರಿತ ಕರುಣಿಗಳರಸನೆ ನೀ ಬಾರೋ ಅ.ಪ ಅರ ಯುಗ್ಮ ಕುಂದರದನ ಸುರ ವೃಂದ ವಂದಿತ ನಿತ್ಯಾ - ನಂದ ಚಿನ್ಮಯ ರೂಪ ನೀ ಬಾರೋ 1 ಅಗಣಿತ ಮುನಿ ವಂದ್ಯ ನೀ ಬಾರೋ 2 ನೀಲ ಸೇವಕ ದಾಸನಿಗೊಲಿ ಬಾರೋ ಶರಣ3
--------------
ಬೆಳ್ಳೆ ದಾಸಪ್ಪಯ್ಯ
ಸ್ಮರಿಸುವರ ಪಾಲಿಪ ಬಿರುದು ಭಕುತರ ಪೊರೆವ ಕರುಣಿಯೆಪ ಪರಿಪರಿವಿಧದಲಿ ಪರಿತಪಿಸುವರನು ಕರವಿಡಿದುದ್ಧರಿಸುತ ಸಂತೈಸುವ ಉರಗಾದ್ರಿವಾಸ ವಿಠ್ಠಲ ಸಂತೈಸು ಚರಣಕಮಲಗಳಿಗೆರಗಿ ಭಿನ್ನೈಸುವೆ1 ಮಂದಮತಿಯು ನಾನೆಂದು ವಂದಿಪರ ಬಂಧನ ಕಳೆಯುತ ಮುಂದೆ ಗತಿಯು ತೋರಿ ತಂದೆ ವೆಂಕಟೇಶ ವಿಠ್ಠಲ ಭಕುತರ ಸಂದಣಿ ಪೊರೆಯುವರೆಂಬ ಬಿರುದು ದೇವ 2 ಆಶಾಪಾಶಗಳಿಗೊಳಗಾಗಿಹ ಮನ- ದಾಸೆ ಪೂರೈಸುತ ನೀ ಸಲಹೈ ಗುರು ವಾಸುದೇವ ವಿಠ್ಠಲ ಹರಿ ಭಕುತರ ದಾಸ್ಯವ ಕೊಟ್ಟು ಉಲ್ಲಾಸ ಒದಗಿಸುತ 3 ಮೊದಲೆ ನಿನ್ನಯಪಾದ ಹೃದಯದಿ ಭಜಿಸದೆ ಒದಗಿದ ಪಾಪದಿ ಹೆದರÀುತಲಿದೆ ಮನ ಪದುಮಜಾಂಡ ಸೃಜಿಸಿದ ಪರಮಾತ್ಮನಿ- ಗದ್ಭುತವೇ ಪಾಮರರನು ಪೊರೆವುದು 4 ಮಣಿದು ಬಿನ್ನೈಸುವೆ ಪವನಮತವÀ ತೋರಿ ಬಿನಗು ಬುದ್ಧಿಗಳ ಗಮನಕೆ ತಾರದೆ ಕಮಲನಾಭ ವಿಠ್ಠಲ ತವ ಕರುಣದಿ ಮನದ ಕ್ಲೇಶಗಳ ಕಳೆದು ಉದ್ಧರಿಸುತ 5
--------------
ನಿಡಗುರುಕಿ ಜೀವೂಬಾಯಿ
ಸ್ವಾ'ುಲಾಲೀ ತುಲಸೀ ರಾಮಲಾಲೀಪ್ರೇಮತುಲಸೀನಳಿನಾಕ್ಷಧಾಮ ಲಾಲೀ ಪಪ್ಲವಂಗಾಷಾಢಬಹುಳದಶಿ'ುಭಾರ್ಗ' ಲಾಲೀಭು'ಯವತಾರ ಸಾಯಂತ್ರಂ ಮೃಗಶಿರಯುತ ಲಾಲೀ 1ವೇಂಕಟಲಕ್ಷಾಂಬೋದರಪಯೋಧಿಸೋಮ ಲಾಲೀಪಂಕಜಲೋಚನ ಪ್ರಥಮಾಶ್ರಮವ್ರತನೇಮ ಲಾಲೀ 2ಸಿದ್ಧವಟಾ'ರ್ಭವ ವೈಷ್ಣವ ದೇವ ಲಾಲೀ ಇದ್ದರತುಲಸೀಕುಲಕೊಂಡಾರ್ಯಪ್ರಿಯಸುತ ಲಾಲೀ 3ಸಕಲಾಗಮ ಶಾಸ್ತ್ರಾರ್ಥಪರಿಶ್ರಮಸೇಯು ಲಾಲೀಶುಕವಾಗಝ ಸಂಶೋಭಿತ ಚರಿತ ಸತ್ಕ' ಲಾಲೀ 4ಶಮದಮಸದ್ಗುಣ ಶಾಂತಪ್ರತಿಭಸೂನೃತ ಲಾಲೀತೆಮಲಕನೆಪ್ಪುಡು ತಾರಕಮಂತ್ರುಪದೇಶಿ ಲಾಲೀ 5ಶ್ರೀಮದಹೋಬಿಲಸ್ವಾ'ುಯತೀಂದ್ರಸೇವಕ ಲಾಲೀಕೋಮಲಭಾತಕ'ಜನವಂದಿತ ಕೌಶಲ ಲಾಲೀ6ರಾಮಕೃಷ್ಣಪರಬ್ರಹ್ಮಮಹೋತ್ಸವರುಚಕೃತ ಲಾಲೀನೇಮರ'ತಮೂರ್ಖಾದಿಪತಿತೋದ್ಧಾರ ಲಾಲೀ 7ತವಗುಣಜಿತಕೇಯೂರಸತ್ವಾಭರಣ ಲಾಲೀಸುವರ್ಣಮಣಿಮಯಭೂಷಣ ಸ್ವಾರ್ಥತ್ಯಾಗ ಲಾಲೀ 8ಪುರಪುರಭಜನಾಗಾರಾ ಗಣಿತಸ್ಥಾಪಿತ ಲಾಲೀಪರಮೋದಾರಪರ ಚಿಂತನ ಕರುಣಾಕರ ಲಾಲೀ 9ಧರಮ'ಸೂರ್ಪುರವರ ಪ್ರಭುಪೂಜಿತ ಸ್ಮರಜಿತಲಾಲೀತಿರುರಾಮೋತ್ಸವ ತುಲಸೀವನಪ್ರತ್ಟಿತ ಲಾಲೀ 10ದುರಿತನಗಾಸಿನಿ ಸುಮತಮುಖ ಧಾರ್ಮಿಕಲಾಲೀಭರತಪುರಿಯರ್ಚಾವತಾರ ಭಾ'ಕ ಲಾಲೀ 11ಆಧಾರಭ್ರೂಮಧ್ಯಾಂತರ್ಬ' ವೇದ್ಯ ಲಾಲೀಖೇದಮೋದರ'ತ ಬ್ರಹ್ಮಾನಂದ ಲಾಲೀ 12ಪುತ್ತಡಿಗುರುಧರಲಕ್ಷ್ಮಿ ಸಂಪದ್ಯುಕ್ತ ಲಾಲೀಚಿತ್ತುಅಚಿತ್ತೀಶ್ವರ ತತ್ವತ್ರಯ ಶೇ ಲಾಲೀ 13ಸಿರಿಮುಳುಬಾಗಲಸನ್ನಿಧಿ ಸ್ಥಾಪನಚೇಯು ಲಾಲೀಧರರಂಗಸ್ವಾ'ುದಾಸ ಜೀವೋದ್ಧಾರಕ ಲಾಲೀ 14
--------------
ಮಳಿಗೆ ರಂಗಸ್ವಾಮಿದಾಸರು
ಸ್ವಾನುಭವದ ಸುಖ ಸಾಧಿಸಿ ನೋಡಿರೋ ನೇಮದಿಂದ ಘನ ಗುರು ಕೃಪೆಯಿಂದ ಅನುಭವಿಸಲು ಬ್ರಹ್ಮಾನಂದ ಧ್ರುವ ಶಿಖಾಮಧ್ಯದಲಿ ಪೂರ್ಣ ಸುಖಗರವುತಲ್ಯದೆ ಸಂತ್ರಾಧಾರಿ ಸಕಲವೆಲ್ಲಕೆ ಸನ್ಮತವಾಗಿ ತೋರುವದೊಂದೇ ಪರಿ ಶುಕಾದಿ ಮುನಿಗಳು ಪ್ರಕಟಿಸಿ ಹೇಳಿಹರು ಖೂನದೋರಿ ಬೇಕಾದರೆ ಇದು ನೋಡಬೇಕು ಷಡುಚಕ್ರವೇರಿ 1 ಸಾಮಾನ್ಯವಲ್ಲವಿದು ಸಹಸ್ರ ಕೋಟಿಗೊಬ್ಬ ಬಲ್ಲ ಖೂನ ಕಾಮಾಂಧದೊಳಗಿದ್ದ ಮನುಜ ಪ್ರಾಣಿಗಳು ಬಲ್ಲವೇನ ತಾಮಸಿಗಳಿಗಿದು ತಾರ್ಕಣ್ಯವಾಗುವದಲ್ಲ ಗಮ್ಯಸ್ಥಾನ ಸ್ವಾಮಿ ಸದ್ಗುರು ದಯಮಾಡಿದರಹುದು ಸಮ್ಯಗಜ್ಞಾನ 2 ಶಿರೋರತ್ನವಾಗಿ ವಂದಿಸಿಕೊಂಬುವದಿದೆಲ್ಲಕೆ ಪೂಜ್ಯ ಹರುಷಗೈಸುವ ಪುಣ್ಯ ಪರಮ ಭಕ್ತರಿಗಿದೆವೆ ಸಾಯೋಜ್ಯ ತರಳ ಮಹಿಪತಿಗಿದೆ ಸ್ವ ಸುಖದೋರುವ ಸುಸಾಮ್ರಾಜ್ಯ ಶಿರದಲಿ ಕರವಿಟ್ಟು ತೋರಿದ ಗುರು ಭಾನುಕೋಟಿತೇಜ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ನೀನೆ ಸಕಲಾಧಾರ ಸದ್ಗುರುದಾರ ಧ್ರುವ ಅಣುರೇಣು ಪರಿಪೂರ್ಣ ನೀನೆ ಶ್ರೀನಾರಾಯಣ ತನುಮನಕರಣ ಪ್ರಾಣದೊಳು ವ್ಯಾಪಕ ಗುಣಜನಮನ ಸ್ಥಾನದೊಳು ನಿಜಾಧಿಷ್ಠಾನ ನಾನಾ ಪರಿಯ ಖೂನ ನೀನೆ ಚೈತನ್ಯ ಘನ 1 ಪಾರಾವಾರ ದೂರ ಸುರಜನರ ಮಂದಾರ ಕರುಣಾಕರ ಸ್ಥಿರ ಪರಮ ಙÁ್ಞನ ಗಂಭೀರ ದುರುಳ ಜನ ಸಂಹಾರ ಸಾರ ಗುರು ನೀನೆ ಸಾಕಾರ 2 ದಾತ ನೀನೆ ವಿಶ್ವವಂದಿತ ಗುಣಾತೀತ ಸ್ವತ:ಮುನಿಜನರ ಸ್ವಹಿತ ಅನುದಿನ ಸದೋದಿತ ದಾತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವೀಕರಿಸೈ ಕರುಣಾಕರ ಶ್ರೀವರ ಲೋಕವಂದಿತ ಪ್ರಭುವೆ ಪ ಮಾಕಮಲಾಸನ ನಾಕಪಾಲವಂದ್ಯ ಮಾತುಳಾಂತಕ ಮಧುಸೂದನ ಶ್ರೀಹರಿ ಅ.ಪ ಮಾವು ಮಾದಳ ದ್ರಾಕ್ಷ ಬಾಳೆ ಕಿತ್ತಳೆ ಮೊದಲಾದ ಫಲಗಳೆಲ್ಲ ಮಾಧವ ನೀನಿದನಾರೋಗಣೆ ಮಾಡು ಶ್ರೀ ರಮಣಿಯ ಪ್ರಿಯ ಶ್ರೀನಿವಾಸನೆ ಬೇಗ 1 ನಾನಾ ವಿಧದ ಫಲ ಹಾಲು ಸಕ್ಕರೆ ಬೆಣ್ಣೆ ನಾರಾಯಣ ನಿನಗೆ ಬಾಲೆ ಲಕುಮಿ ಪರಮಾದರದಿಂದಲಿ ಸೇವೆಗೆ ಪರಮಾನ್ನವನರ್ಪಿಸುವಳು2 ತನುವೆಂಬೊ ತಟ್ಟೆಯೊಳಿರಿಸಿ ಫಲವ ನಿ- ರ್ಮಲಮನವೆಂಬ ವಸ್ತ್ರವನ್ಹೊದಿಸಿ ಸನ್ಮತವೆಂಬ ಸಾರಣೆಮಾಡಿ ನಮ್ಮ ಗುರುಕರುಣದ ರಂಗವಲಿಯನ್ಹಾಕುವೆ 3 ನವವಿಧ ಭಕುತಿಯ ನಳನಳಿಸುವ ವೀಳ್ಯ ಚಲುವ ಶ್ರೀ ಹರಿ ನಿನಗೆ ಸವಿನಯ ನುಡಿಗಳ ಮಂತ್ರ ಪುಷ್ಪಗಳು ಸನಕಾದಿವಂದ್ಯ ಸರ್ವೇಶ ಶ್ರೀ ಕೃಷ್ಣ 4 ಕ್ಷೀರ ಸಾಗರವಾಸಿ ಶ್ರೀ ಭೂರಮಣನೆ ಮಾರಜನಕ ಹರಿಯೆ ಕಾರುಣ್ಯಸಾಗರ ಕಮಲನಾಭ ವಿಠ್ಠಲ ಪಾರುಗಾಣಿಸೊ ಭವಸಾಗರದಿಂದಲಿ5
--------------
ನಿಡಗುರುಕಿ ಜೀವೂಬಾಯಿ