ಒಟ್ಟು 1080 ಕಡೆಗಳಲ್ಲಿ , 100 ದಾಸರು , 861 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿ ನಿನ್ನೊಲುಮೆಯು ಆಗುವತನಕ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಅರಿತು ಸುಮ್ಮಗಿರುವುದೆ ಲೇಸು ಪ.ಮರಳಿ ಮರಳಿ ತಾ ಪಡೆಯದ ಭಾಗ್ಯವು |ಮರುಗಿದರೆ - ತನಗಾದೀತೆ ? ಅಪದೂರು ಬರುವ ನಂಬಿಗೆಯನು ಕೊಟ್ಟರೆ |ದುರ್ಜನ ಬರುವುದು ತಪ್ಪೀತೆ ||ದೂರ ನಿಂತು ಮೊರೆಯಿಟ್ಟು ಕೂಗಿದರೆ |ಚೋರರಿಗೆ ದಯ ಪುಟ್ಟೀತೆ |ಜಾರನಾರಿ ತಾ ಪತಿವ್ರತೆ ಎನ್ನಲು |ಜಾಣರಿಗೆ - ನಿಜ ತೋರೀತೆ ||ಊರ ಬಿಟ್ಟು ಬೇರೂರಿಗೆ ಹೋದರೆ |ಪ್ರಾರಬ್ಧವು ಬೇರಾದೀತೆ 1ಪಾಟುಪಡುವುದು ಪಣೆಯಲ್ಲಿರಲು |ಪಟ್ಟಮಂಚ ತನಗಾದೀತೆ ||ಹೊಟ್ಟೆಯಲ್ಲಿ ಸುತರಿಲ್ಲೆಂದು ಹೊರಳಲು |ಹುಟ್ಟು ಬಂಜೆಗೆ ಮಕ್ಕಳಾದೀತೆ ?||ಬೆಟ್ಟದ ನವಿಲಿಗೆ ಕಣ್ಣೀರು ಬಂದರೆ |ಬೇಟೆಗಾರಗೆ ದಯ ಪುಟ್ಟೀತೆ ||ಕೆಟ್ಟ ಹಾವು ತಾ ಕಚ್ಚಿದ ವಿಷವದು |ಬಟ್ಟೆಯಲೊರಸಲು ಹೋದೀತೆ 2ಧನಿಕನ ಕಂಡು ಪಾಡಿ ಪೊಗಳಿದರೆ |ದಾರಿದ್ರ್ಯವು ತಾ ಹಿಂಗೀತೆ ||ದಿನದಿನ ನೊಸಲೊಳು ನಾಮವನಿಟ್ಟರೆ |ದೇವರಿಗೆ ತೃಪ್ತಿಯಾದೀತೆ ||ಎಣಿಸಿಕೊಂಡು ಎಳ ಹಂಜಿಯ ನೂತರೆ |ಅಣೆಯದ ಸಾಲವು ತೀರೀತೆ |ಅನುದಿನದಲಿ ಶ್ರೀ ಪುರಂದರವಿಠಲನ |ನೆನೆಯದಿದ್ದರೆಭವಹಿಂಗೀತೆ3
--------------
ಪುರಂದರದಾಸರು
ಹರಿಕಥಾಮೃತ ಸವಿಯ ಹರಿದಾಸರಲ್ಲದೆದುರುಳಮಾನವರದರಪರಿಬಲ್ಲಿರೇನಯ್ಯಪ.ಸ್ತನ ಪಾನದ ರುಚಿಯ ಚಿಣ್ಣರು ಬಲ್ಲರಲ್ಲದೆಮೊಣ್ಣ ಬೊಂಬೆಗಳದರ ಬಗೆ ಬಲ್ಲುವೆ ||ಅನ್ನಪಾನದ ರುಚಿಯ ಕೊನೆ ನಾಲಿಗೆಯಲ್ಲದೆಅಣಿಮಾಡಿಕೊಡುವ ಆಕರಬಲ್ಲುದೇನಯ್ಯ1ನವನೀರದಾರ್ಭಟಕೆ ನವಿಲುಗಳು ನಲಿವಂತೆಕಾವು ಕಾವೆಂಬ ಕಾಕವು ಬಲ್ಲುದೆ ? ||ದಿವಸಕರನುದಯಿಸಲು ಅರಳುವಬ್ಜಗಳಂತೆದಿವಸಾಂಧ ಪಕ್ಷಿಗಳು ಬಗೆಬಲ್ಲುವೇನಯ್ಯ 2ಮೊಲ್ಲೆ - ಮಲ್ಲಿಗೆ ಮುಡಿಯಬಲ್ಲ ಮಾನವರಂತೆಭಲ್ಲೂಕಗಳು ಅದರ ಬಗೆ ಬಲ್ಲುವೆ ?ಫುಲ್ಲಾಕ್ಷ ಶ್ರೀ ಪುರಂದರವಿಠಲರಾಯನನುಬಲ್ಲ ಮಾನವರಲ್ಲದೆಲ್ಲರೂ ಬಲ್ಲರೆ ? 3
--------------
ಪುರಂದರದಾಸರು
ಹರಿಯ ನೆನೆಯದ - ನರಜನ್ಮವೇಕೆ ? ಶ್ರೀಹರಿಯ ಕೊಂಡಾಡದ ನಾಲಿಗೆಯಿನ್ನೇಕೆ ಪ.ಸತ್ಯ - ಶೌಚವಿಲ್ಲದ ಆಚಾರವೇಕೆ ?ಚಿತ್ತ ಶುದ್ಧಿಯಿಲ್ಲದ ಜ್ಞಾನವೇಕೆ ?ಭಕ್ತಿ - ಭಾನವಿಲ್ಲದ ದೇವಪೂಜೆ ಏಕೆ ?ಉತ್ತಮರಿಲ್ಲದ ಸಭೆಯು ಇನ್ನೇಕೆ ? 1ಕ್ರೋಧವ ಬಿಡದಿಹ ಸಂನ್ಯಾಸವೇಕೆ ?ಆದರವಿಲ್ಲದ ಅಮೃತಾನ್ನವೇಕೆ ?||ವೇದ - ಶಾಸ್ತ್ರವಿಲ್ಲದ ವಿಪ್ರತನವೇಕೆಕಾದಲಂಜುವನಿಗೆ ಕ್ಷಾತ್ರ ತಾನೇಕೆ ? 2ಸಾಲದಟ್ಟುಳಿಯೆಂಬ ಸಂಸಾರವೇಕೆ ?ಬಾಲಕರಿಲ್ಲದ ಭಾಗ್ಯವಿನ್ನೇಕೆ ?ವೇಳೆಗೆ ಒದಗದ ನೆಂಟರಿನ್ನೇಕೆ ? ಅನುಕೂಲವಿಲ್ಲದ - ಸತಿಯ ಸಂಗವೇಕೆ 3ಮಾತೆ - ಪಿತರ ತೊರೆದ ಮಕ್ಕಳಿನ್ನೇಕೆ ?ಮಾತು ಕೇಳದ ಮಗನಗೊಡವೆ ಇನ್ನೇಕೆ ||ನೀತಿ ತಪ್ಪಿದ ದೊರೆಯ ಸೇವೆ ಇನ್ನೇಕೆ ? ಅನಾಥನಾಗಿರುವಗೆ ಕೋಪವಿನ್ನೇಕೆ ? 4ಅಳಿದುಳಿದಿಹ ಮಕ್ಕಳುಗಳಿನ್ನೇಕೆ ?ತಿಳಿದು ಬುಧ್ಧಿಯ ಹೇಳಿದ ಗುರುತನವೇಕೆ ?ನಳಿನನಾಭ ಶ್ರೀ ಪುರಂದರವಿಠಲನಚೆಲುವ ಮೂರುತಿಯ ಕಾಣದ ಕಂಗಳೇಕೆ 5
--------------
ಪುರಂದರದಾಸರು
ಹಿಂದಿನ ಪುಣ್ಯ ಫಲವೆಂತೊಇಂದಿರೇಶಾನಂದದ ಲೀಲೆ ಅರುಹಿದ ಪ.ಚಿತ್ರವಿಚಿತ್ರ ಮಹಿಮೆಯ ತೋರುತಖಳದೈತ್ಯರನೆಲ್ಲ ಮಡುಹಿದದೈತ್ಯರನೆಲ್ಲ ಮಡುಹಿ ಬಳಲ್ದನೆಂದುಕಸ್ತೂರಿ ತೈಲವೆರಸಿ ತಂದು 1ಶಂಕಿನಿ ಪದ್ಮಿನಿಯರೊಂದಾಗಿ ಕೃಷ್ಣನಪಂಕಜಾಸನದಲಿ ಕುಳ್ಳಿರಿಸಿಪಂಕಜಾಸನದಲಿ ಕುಳ್ಳಿರಿಸಿ ತಮ್ಮ ಒಲ್ವಕಂಕಣಗೈಯ ಮೌಳಿಯೊಳಿಟ್ಟು 2ಈರೇಳು ಲೋಕದ ದೊರೆಯಾಗು ಭಕುತರಸಿರಿಯಾಗು ದಿತಿಜರರಿಯಾಗುಸಿರಿಯಾಗು ಭಕ್ತರ ದಿತಿಜಾರಿಯಾಗೆನುತಹರಸಿದರರ್ಥಿ ಮಿಗಿಲಾಗಿ 3ಕುಂಭಕುಚದ ಕಾಮಿನಿಯರು ಹರುಷದಿಅಂಬುಜಾಕ್ಷನ ಪೂಸಿ ಕಿರುಬೆಮರಿಅಂಬುಜಾಕ್ಷನ ಪೂಸಿ ಕಿರುಬೆಮರಿ ದಣಿಯದೆ ಕದಂಬ ಕಡಿದಟಕಾಳಿಯ ತಂದು 4ವಿಕ್ರಮಾನ್ವಿವತವಾದವ್ಯಾಕೃತ ಗಾತ್ರಕೆಅಕ್ಕರಿಂದೆ ತೈಲನಾಶನವಅಕ್ಕರಿಂದಲಿ ತೈಲನಾಶನವ ಪೂಸಿ ಜಗುಳಲುಘಕ್ಕನಂಬರವ ಬಿಗಿದುಟ್ಟ 5ಹದವಾದ ಬಿಸಿನೀರ ಪೊಂಬಂಡೆಯೊಳುತುಂಬಿಪದುಮಗಂಧೆಯರು ನೀರೆರೆದರುಪದುಮಗಂಧೆಯರು ನೀರೆರೆವ ಸಂಭ್ರಮಕ್ಕೆಮುದದಿಸುರರುಹೂಮಳೆಗರೆದರು6ಮುಂಬರಿಯುತ ಬಾಲೆಯರುತಕದಿಂದಅಂಬುಧಾರೆಯ ನಿಲ್ಲಗುಡದೆರೆದುಅಂಬುಧಾರೆಯ ನಿಲ್ಲಗುಡದೆರೆದುಜಾಂಬೂನದಾಂಬರವುಡಿಸಿ ಕರೆತಂದು 7ಚಿತ್ರಮಂಟಪಕೆ ನವರತ್ನ ತೆತ್ತಿಸಿದ ಕಂಭಕಸ್ತೂರಿ ಕಾರಣೆ ರಚನೆಯಕಸ್ತೂರಿ ಕಾರಣೆ ರಚನೆಯ ಮಧ್ಯದಿಮುತ್ತಿನ ಹಸೆಯೊಳು ಕುಳ್ಳಿರಿಸಿ 8ನೀಲಮಾಣಿಕಮೋಘದಿಂದಲೊಪ್ಪುವ ಪದಕಲೋಲನೇತ್ರೆಯರಳವಡಿಸಿದರುಲೋಲನೇತ್ರೆಯರು ಅಳವಡಿಸಿ ಅಂಗುಲಿಗೆಲ್ಲ ಮುದ್ರಿಕೆನಿಟ್ಟು ನಲಿದರು 9ಮುಕುಟಕೌಸ್ತುಭಮಣಿಯುಕುತ ಭೂಷಣವಿಟ್ಟುರುಕುಮಿಣಿ ಸತ್ಯರೆಡಬಲದಿರುಕುಮಿಣಿ ಸತ್ಯರೆಡಬಲದಿ ಕುಳ್ಳಿರೆನಿತ್ಯಮುಕುತಗಾರತಿಯ ಬೆಳಗಲು 10ಚಿನ್ನದ ಹರಿವಾಣದಿ ರನ್ನದಾರತಿಯಿಟ್ಟುಕನ್ನೇರು ಕಿರುನಗೆ ಬೀರಿದರುಕನ್ನೇರು ಕಿರುನಗೆ ಬಿರಿಯುತ ಪಣೆಯೊಳುಪೊನ್ನಿನಾಕ್ಷತೆಯಿಟ್ಟು ಲಲಿತವ 11ಜಯ ರಾಮ ತ್ರೈಧಾಮ ಜಯ ಜೀಮೂತಶಾಮಜಯ ಪೂರ್ಣಕಾಮ ಸಾಸಿರನಾಮಜಯ ಪೂರ್ಣಕಾಮ ಸಾಸಿರನಾಮನೆಂದುಭಯರಹಿತಗಾರತಿಯ ಬೆಳಗಿದರು 12ಚಿತ್ತಜನಯ್ಯಗೆ ಚಿನುಮಯ ದೇಹಗೆಉತ್ತಮಗುಣಗಣ ಭರಿತಗೆಉತ್ತಮಗುಣಗಣ ಭರಿತಗೆ ಪರಮಪವಿತ್ರೇರಾರತಿಯ ಬೆಳಗಿದರು 13ಪನ್ನಗಾದ್ರಿವಾಸ ಪ್ರಸನ್ನವೆಂಕಟೇಶಕನ್ನೆ ಲಕ್ಷ್ಮಿಯ ಕೂಡಿ ಆರೋಗಣೆಯಕನ್ನೆ ಲಕ್ಷ್ಮಿಯ ಕೂಡ ಆರೋಗಣೆಯ ಮಾಡಿತನ್ನ ಭಕ್ತರಿಗೆಲ್ಲ ಸುಖಪ್ರೀತ 14
--------------
ಪ್ರಸನ್ನವೆಂಕಟದಾಸರು
ಹೇಳೆಕಾಮಿನಿರಂಗಗೆ ಬುದ್ಧಿಯಹೇಳೆಕಾಮಿನಿರಂಗಗೆಪ.ಹೇಳಿದಂದದಿಕೇಳಿಕಾಲಿಗೆರಗುವಳಮ್ಯಾಲೆ ಕೋಪಿಸಿಕೊಂಡು ಬಾಲೇರ ನೆರೆವಂಗೆ ಅ.ಪ.ತನ್ನ ಮೈಗಂಪು ಕಸ್ತೂರಿಗಿಂದಧಿಕ ಕಂಡೆತನ್ನಧರದ ರಸಾಮೃತಗಿಂತ ಸವಿದುಂಡೆತನ್ನ ದಂತದ ಘಾಯಕೆ ಅಂಜದೆಕರಜನ್ನಟ್ಟಿಸಲು ಕುಚಕ್ಕೆ ಸುಂದರಿಯರನ್ನು ಮೆಚ್ಚಿದ ದಾನಕ್ಕೆ ಇನಿಯಳಿರೆಅನ್ಯರ ಮೋಹಿಪಗೆ ಕಲಿಮಾನವಗೆ 1ಸ್ನೇಹ ನೋಟಕೆ ಮೆಚ್ಚಿ ಸುಖಭಾರ ತನಗಿತ್ತೆಬಾ ಹೆಣ್ಣೆ ಎನಲು ಭಾಗ್ಯಾಂಬುಧಿಗೊಶವಾದೆತಾ ಹೊನ್ನಾಸೆಗೆ ಮಂಚದಿ ಘಾತಿಸಿದರೆನೇಹಿಯ ಬೆರದೆಕೆಲದಿಕರಾಳ ಚೇಷ್ಟೆಗೆನೇಹದಾರದಲೊಪ್ಪಿದೆ ಎನ್ನನು ಬಿಟ್ಟುಬಾಹು ಜೋರಿನಬುದ್ಧವಾಜಿಯಲ್ಲೇರ2ಚಪಲತೆಯಲ್ಲಿಕಪಟವಿದ್ಯದಲಿ ಭೂಪಕುಪಿತಾಶಾಯಿಲ್ಲ ಹೆಜ್ಜೆ ಹೆಜ್ಜೆಗೆ ಕಥೆಯಿಲ್ಲನೃಪಕೃಷ್ಣ ಸಲಹೆಂದರೆ ಎನ್ನಿಂದಾದಅಪರಾಧ ಕ್ಷಮಿಸೆಂದರೆ ಪ್ರಸನ್ವೆಂಕಟಕೃಪಿ ಧರ್ಮಿಯೆಂದರೆ ಇದಕೆ ತಾವಿಪರೀತ ತಿಳುಹನಂತೆ ಹಾಗಲ್ಲಂತೆ 3
--------------
ಪ್ರಸನ್ನವೆಂಕಟದಾಸರು
ಹ್ಯಾಗಾಹದು ಭವರೋಗಿಗಾರೋಗ್ಯಮ್ಯಾಗೆ ಮ್ಯಾಗಪಥÀ್ಯವಾಗುತಿದೆ ಕೃಷ್ಣ ಪ.ಗುಜ್ಜುಗಿರಿವ ಆಶಾಲಕ್ಷಣ ಚಳಿಲಜ್ಜೆಗೆಡಿಸುತಿವೆ ಗದಗದಿಸಿವಜ್ಜರಹೊದಪಿಲಿ ನಿಲವು ಕುಶಾಸ್ತ್ತ್ರದಗಜ್ಜರಿಕಾಯಿ ದಣಿಯೆ ಮೆಲುವವಗೆ 1ಮೊರಮೊರಸು ಮೂರ್ಪರಿ ಜ್ವರ ದಾಹದಿನಿರಸನ ರಸನಾಯಿತಿದರೊಳಗೆಅರಿಕಿಲ್ಲದಹ ಗಾರಿಗೆ ಕಾಮನಹರಿಬದನೆಕಾಯುಂಬುವಗೆ 2ಕಾಮಿನಿನೋಟದ ಕಾಮಾಲೆಯಾಯಿತುನೇಮದಿ ಸೊಬ್ಬೇರಿತು ಮೈಯಪ್ರೇಮದ ಚಕ್ಷುದೋಷ್ಯಾತರಲೈದದುಕಾಮತಪ್ತ ವರೇಣ್ಯವಗೆ 3ನಮ್ಮದು ನಮ್ಮದು ಕೋ ಕೋ ಎನ್ನುತಕೆಮ್ಮಿಗೆ ಖುಳಖುಳಸಿತುಕಾಯಹಮ್ಮುಗಳಕ್ಕರೆಯ ಖಣಿಯಾದ ಉಳ್ಳಿಯಹೆಮ್ಮೂಲಂಗಿಯ ತಿನುವವಗೆ 4ಜಗಸಟೆಯೆಂಬಗೆ ಸಂಗ್ರಹಣಿಯು ಅವನಿಗೆ ಪಾಂಡಿತ್ಯ ಪಾಂಡುರೋಗವಿಗಡಕುತರ್ಕ ಚಿಕಿತ್ಸದಿ ನೂಕುನುಗ್ಗೆ ತೊಂಡೆಕಾಯಿ ಸವಿವವಗೆ 5ಅಂಜದೆ ಸಲ್ಲದ ನಿಷಿಧಗÀಳುಂಡರೆನಂಜೇರದೆ ಬಿಡುವುದೆ ಬಳಿಕಾಕಂಜಾಕ್ಷನ ಬಿಟ್ಟಿತರ ಸುರಾಸುರರೆಂಜಲು ಮೈಲಿಗೆ ಬಿಡದವಗೆ 6ಹೃದ್ರೋಗವು ಹೋಗುವುದೆ ನಿಂಬ ಹರಿದ್ರದ ಹುಡಿ ತಲೆಗೊತ್ತಿದರೆನಿದ್ರಿಲ್ಲದೆಕರಪಂಜಲಿ ಕುಣಿದರೆರುದ್ರದುರಿತಹೊಡೆಯದೆ ಬಿಡುವುದೆ7ಇಂತೆ ದಿನಾಂತರ ಕ್ಷಯ ಮೇಲಿಕ್ಕಿತ್ತುಅಂತ್ಯೌಪದ ಯಮಪುರದೊಳಗೆಎಂತಾದರೆ ಮಾಡಿಸಿ ಕೊಂಡಳುತಿಹಭ್ರಾಂತ ಕಳಿಂಗದ ಪ್ರಿಯದವಗೆ 8ಮನ್ವಂತರ ಕಲ್ಪಾಂತರ ಈ ಕ್ಲೇಶಾನ್ವಯವೆಗ್ಗಳಭೋಗಿಸುತ ಪ್ರಸನ್ವೆಂಕಟಪತಿಗುರುಮಧ್ವೇಶಧನ್ವಂತ್ರಿಯ ಪದ ವಿಮುಖನಿಗೆ 9
--------------
ಪ್ರಸನ್ನವೆಂಕಟದಾಸರು