ಒಟ್ಟು 1734 ಕಡೆಗಳಲ್ಲಿ , 106 ದಾಸರು , 1498 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾವ ನೆಲೆಗೊಳ್ಳಿ ಸಾಧಿಸಿ ದೃಢದಲ್ಲಿ ದೈವ ಪ್ರಕಟಾಗಿ ಒಲಿವುದು ಘನದಲಿ ಧ್ರುವ ಮಾಡಿ ಚಿತ್ತಶುದ್ಧ ನೋಡಿ ಸ್ವತ:ಸಿದ್ಧ ಗೂಢ ಗುಪ್ತ ಘನ ಕೈಗೂಡಿ ತಾಂ ಪ್ರಸಿದ್ದ 1 ನಡಿಯ ಪಡಕೊಳ್ಳಿ ಸದ್ಗುರು ದಯದಲಿ ಕಡೆದು ಹೋಗುವದು ಭವಪಾಶ ಮನದಲಿ 2 ಭಾವಕತಿ ಪ್ರಿಯ ಭಾನುಕೋಟಿ ಉದಯ ಪಾವನ್ನಗೈಸುತಿಹ ನೋಡಿ ಮೂಢ ಮಹಿಪತಿಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಾವಜಾರಿವಿನುತ ಮಹಿತ ದಯಿತಾ ಸಮೇತಅ.ಪ ಶ್ರೀಭೂನೀಳಾ ಸಮೇತ ಸತತ ವಿಭವಯುತ ತ್ರಿಭುವನ ಸುಖದಾತ ಶುಭಚರಿತ 1 ರಾಜೇಂದ್ರಪುರಿಧಾಮ ರಘುರಾಮ ಘನಶ್ಯಾಮ ರಾಜಶೇಖರನುತನಾಮ ಜಗದಭಿರಾಮ ಪಾವನಗುಣಧಾಮ2
--------------
ನಂಜನಗೂಡು ತಿರುಮಲಾಂಬಾ
ಭಾವಭಕ್ತಿಗೊಲಿವ ತಾಂ ಶ್ರೀಹರಿ ಕಾವ ಕರುಣದಲಿ ಪರೋಪರಿ ಧ್ರುವ ಕಂದ ಪ್ರಹ್ಲಾದನ ಸದ್ಭಾವಕಾಗಿ ಸಂಧಿಸೊದಗಿ ಬಂದ ನರಸಿಂಹನಾಗಿ ತಂದೆ ತಾಯಿ ಬಂಧು ಸಮಸ್ತವಾಗಿ ಬಂದು ರಕ್ಷಿಸಿದ ಪ್ರತ್ಯಕ್ಷವಾಗಿ 1 ಭಾವದಿಂದ ದ್ರೌಪದಿಗಾಗ್ಯಧ್ಯಕ್ಷ ಠಾವಠಾವಿಲಿ ಕಾಯಿದೆ ಪ್ರತ್ಯಕ್ಷ ಭುವನದೊಳಾಗಿ ಪಾಂಡವಪಕ್ಷ ಜೀವ ಪ್ರಾಣಾಗಿ ಮಾಡಿದ ಸಂರಕ್ಷ 2 ಭಾವದಿಂದಾಗುವ ಭಕ್ತರಾಧೀನ ದೇವೋತ್ತಮದ ಬಿಟ್ಟು ಹಿರಿಯತನ ದಾವದೊಂದೇಕಾಗಿ ತಾಂ ಸಾವಧಾನ ಈವ್ಹಾಭಕ್ತರ ಮನಿಲ್ಯನುದಿನ 3 ಭಾವದಿಂದುದಿಸುವ ಸ್ವಯಂಭಾನು ಭಾವಿಕರಿಗಾಗುವ ಶ್ರಯಧೇನು ಭಾವದಿಂದಾಗುವ ಸಫಲ ತಾನು ಭಾವದಿಂದ ಭಾವ ಪೂರಿಸಿದನು 4 ಭಾವವೆಂಬಂಜನ ಕಣ್ಣಿಲೂಡಿ ಭಾವದಲುಂಬುದನು ಒಡಮೂಡಿ ಭಾವದಿಂದ ಮಹಿಪತಿ ಕೈಯಗೂಡಿ ಜೀವ ಪಾವನ್ನಗೈಸÀುತಿಹ್ಯ ನೋಡಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಿಕ್ಷೆ ನೀಡೆನಗೆ ಪಕ್ಷಿಗಮನ ನಿಮ್ಮ ನಾಮ ಭಿಕ್ಷೆನೀಡಿ ರಕ್ಷಿಸೆನ್ನ ಮೋಕ್ಷಪದಕಧ್ಯಕ್ಷ ನಾಮ ಪ ಅಂಬರೀಷನ ಕಾಯ್ದ ನಾಮ ಇಂಬು ಇವಗಿತ್ತ ನಾಮ ಶಂಭು ಕುಣಿದು ಕುಣಿದು ಪೊಗಳ್ವ ಕುಂಭಿನಿಯೊಳು ಮೆರೆವ ನಾಮ 1 ಕರಿಯ ಕಷ್ಟಕ್ಕಾದ ನಾಮ ತರಳನ್ನೆತ್ತಿ ಪೊರೆದ ನಾಮ ಪರಮಪಾವನೆ ಪರಮೇಶ್ವರಿ ಅರಸಿ ಶಿರವದೂಗ್ವ ನಾಮ 2 ಯಮನ ಬಾಧೆ ಗೆಲಿಪ ನಾಮ ಸುಮನಸರೊಳಾಡಿಸುವ ನಾಮ ಅಮಿತ ಶ್ರೀರಾಮ ನಿಮ್ಮಾನಂದ ನಾಮ 3
--------------
ರಾಮದಾಸರು
ಭೀಮಶೇನಾರ್ಯರು | ಭೂಮಿತ್ಯಜಿಸಿ ಪರಂ ಧಾಮವ ಸೇರಿದರು || ಶ್ರೀಮತ್ ಕಾರ್ಪರ ಕ್ಷೇತ್ರ | ಸ್ವಾಮಿಯ ಸಂಪೂರ್ಣ ಪ್ರೇಮ ಪಡೆದವರು | ಕೇಳಿದವರು ಪ ಪರಿಮಳ ಗಾತ್ರರ ಕರುಣ ಪ್ರಸಾದದಿ ಧರೆ ಸುರಾಗ್ರಣಿ ಎನಿಪ ವರ ಜಯಾರ್ಯರ ಪತ್ನಿ | ನರಸಾಂಬೆಯಗರ್ಭ ಶರಧಿಗೆ ಹರಿಣಾಂಕರು ಸುಶಾಂತರು 1 ಎಡರೇಸು ಬಂದರೂ ಬಿಡದೆ ಸ್ವಧರ್ಮವ ಕಡುಭಕ್ತಿ ಪೂರ್ವಕದಿ ಹುಡುಗನ ಮಾತಿಗೆ | ಒಡೆದುಸ್ತಂಭದಿ ಬಂದ ಒಡೆಯನರ್ಚಿಸಿದವರು | ಕೋವಿದರು 2 ಪಂಚಬಾಣನ ಗೆದ್ದು | ಪಂಚ ಭೇದವನರಿತು ಪಂಚಾಸ್ಸನುತ ಮಾನವ ಪಂಚಾಶ್ಯದಯದಿ ಪ್ರಪಂಚ ಸಾಗಿಸುವಂಥ ಪಾಂಚಾಲಿಪತಿ ಪ್ರಿಯರು | ನಿಷ್ಕಿಂಚನರು 3 ವತ್ಸರ ಪರಿಯಂತ ನಿಷ್ಟೆಯಲಿ ನಿರುತ ತಪ ಚಳಿ ಮಳೆ ಸಹಿಸಿ ಪರಮೇಷ್ಟಿ ಜನಕನ ನಿರುತ ಸೇವಿಸಿದವರು | ನಿರ್ಮಮರು 4 ವಿನಯ ಸುಶೀಲ ಸದ್ಗುಣದಿ ಭೂಷಿತರಾದ ತನಯರೀರ್ವರ ಕರೆದು ರಿಣವಿನು ತೀರಿತು ಎನುತ ಪೇಳುತ ದ್ವಿಜಗಣಿಕೆ ದಕ್ಷಿಣೆ ನೀಡಿ ನಮನ ಮಾಡಿ 5 ಹರುಷ ಭರಿತರಾಗಿ ಸರ್ವಜಿತು ನಾಮದ ವರುಷದೊಳ್ ಯುಗ ಮಾಸದಿ | ಶರದಪಕ್ಷ ಪ್ರತಿಪದ ಪ್ರಥಮ ಕಾಯ 6 ವರುಷಂ ಪ್ರತಿ ತಪ್ಪದೆ | ಚರಿಸುತ ದೇಶದೋ ಳಿರುವ ಸದ್ಭಕ್ತರಿಗೆ | ವರಶಾಮ ಸುಂದರ ನರಹರಿದರುಶನ | ಗರೆದ ಪಾಲಿಸಿದವರು ಪಾವನ್ನರು 7
--------------
ಶಾಮಸುಂದರ ವಿಠಲ
ಭೀಮಾತಟ ಹರಿ ವಿಠಲ | ಪೊರೆಯ ಬೇಕಿವಳಾ ಪ ಸಾಮಸನ್ನುತ ಹರಿಯೆ | ನಿಸ್ಸೀಮ ಮಹಿಮಾ ಅ.ಪ. ಗುರು ಕರುಣ ಇವಳಿಗಿದೆ | ಮರಳಿ ಹರಿ ಗುರುಭಕ್ತಿನೆರೆ ವೃದ್ಧಿ ಗೈಸುತಲಿ | ಪೊರೆಯೊ ಇವಳಾ |ಕರುಣನಿಧಿ ನೀನೆಂದು | ಆರು ಮೊರೆಯ ನಿಡುವೆನಾಪರಿ ಪರಿಯಲಿಂದಿವಳ | ಕೈ ಪಿಡಿಯೆ ಹರಿಯೇ 1 ಸಜ್ಜನರ ಸಂಗ ಕೊಡು | ದುರ್ಜನರ ದೂರಿರಿಸುಅರ್ಜುನನ ಸಾರಥಿಯೆ | ಮೂರ್ಜಗಕೆ ಒಡೆಯಾ |ಬೊಜ್ಜೆಯಲಿ ಬ್ರಹ್ಮಾಂಡ | ಸಜ್ಜು ಗೊಳಿಸಿಹ ಹರಿಯೆ |ಅರ್ಜುನಾಗ್ರಜ ವಂದ್ಯ | ಸಜ್ಜನರ ಪಾಲಾ 2 ತರತಮದ ಸುಜ್ಞಾನ | ಹರಿಯ ಸರ್ವೋತ್ತಮತೆಕರುಣಿಸೋ ಇವಳೀಗೆ | ಪರಮ ಪಾವನ್ನಾ |ಗರುಡ ಗಮನನೆ ಗುರೂ | ಗೋವಿಂದ ವಿಠ್ಠಲನೆಮೊರೆಯ ಲಾಲಿಸಿ ಇವಳ | ಪೊರೆಯೊ ಶ್ರೀ ಹರಿಯೇ 3
--------------
ಗುರುಗೋವಿಂದವಿಠಲರು
ಭೀಷ್ಟದಾಯಕ ಕರುಣದಿ ಪಿಡಿ ಕೈಯಾ ಪ ರಾಮಕೃಷ್ಣ ಪವನಾತ್ಮಜನಂಘ್ರಿ ತಾಮರಸವ ಧೇನಿಸು ಪರಿವ್ರಾಜಾ ಭೀಮತೀರ ಪಿಪ್ಪಲ ಭೂಜ ಮೂಲ ಸೀಮೆಯೊಳಗೆ ರಾಜಿಸುವ ಯತಿರಾಜ 1 ಭೇದ ಮತಾಂಬುಧಿ ಚಂದಿರಾ ಗುರು ವೇದವ್ಯಾಸ ಮುನಿವರ ಸುಕುಮಾರಾ ಸಾಧು ಸದ್ಗುಣಗಣ ಗಂಭೀರನಾದ ಬಾದರಾಯಣನಾಮದಲಿಪ್ಪ ಧೀರಾ 2 ದೇವ ಜಗನ್ನಾಥ ವಿಠಲನ್ನ ಪಾದ ಸೇವಕ ಭೇಡುವೆ ಹರಿಮೂರ್ತಿ ಧ್ಯಾನ ಕೇವಲ ಭಕುತಿ ನಿರ್ಮಲ ಜ್ಞಾನ ವಿತ್ತು ಪಾವನ್ನ ಮಾಡಿ ಪಾಲಿಸೋ ಪ್ರತಿದಿನ 3
--------------
ಜಗನ್ನಾಥದಾಸರು
ಭುವನವಿಖ್ಯಾತೆ|| ಪಾಲಿಸು ಪರತರ| ಪಾವನೆ ಮಾತೆ ಪ ಕಾಳಿಯೆ ಕರುಣಿಯೆ| ಶೀಲಸಂಪನ್ನೆಯೆ|| ಖಳಕುಲನಾಶಿನಿ | ಜಲಜಾಂಬಿಕೆಯೆ ಅ.ಪ ಸುರ ನರ ಕಿನ್ನರ| ಉರಗರು ಸೇವೆಯ|| ನಿರುತವು ಸಲಿಸುವ| ಪರಮೇಶ್ವರಿಯೆ 1 ಚರಣವ ಭಜಿಸುವ| ಶರಣರ ಪೊರೆವ|| ಬಿರುದನು ಪಡೆದ| ಕರುಣಾಕರೆಯೆ2 ಶಂಕರಿ ಶುಭಕರಿ|| ಶಂಕರಪ್ರಿಯಕರಿ|| ಕಿಂಕರಪಾಲಯೆ| ಪಂಕಜಮುಖಿಯೆ 3 ಕರಿವರಗಮನೆಯೆ| ಕರಿಮುಖಜನನಿಯೆ|| ಕರುಣದಿ ಪಾಲಿಸು| ಕಟಿಲೇಶ್ವರಿಯೆ4
--------------
ವೆಂಕಟ್‍ರಾವ್
ಭುವನೇಂದ್ರತೀರ್ಥರ ಸ್ತೋತ್ರ ಭುವನೇಂದ್ರ ಯತಿ ರನ್ನ ಭುವನ ಪಾವನ್ನತವಕದಿಂ ವ್ಯಾಸರಾಯರ ಭಜಿಪ ಘನ್ನ ಪ ಅದ್ವೈತ ಮತ ಕೋಲಾಹಲ ಸುಜ-ನಾಬ್ಧಿ ಸಮೃದ್ಧಿ ಎಂದೆನಿಪ ಮುನಿಪ ||ಸದ್ಧರ್ಮ ಸತ್ತಾಪಸ ಸಕಲ ವಿದ್ಯಾಲಾಪಅದ್ವೈತ ತ್ರಯ ವರ ಪ್ರವರ್ತಕನೇ1 ತಂತ್ರ ಸಾರಾಂತ ಆದ್ಯಂತಗಳ ಅರ್ಥವ ನಿ-ರಂತರದಲಿ ಪೇಳಿ ಹರುಷದಿಂ ||ಮಂತ್ರೋಪದೇಶವಂ ಮಾಡಿ ಮುದ್ರೆಯನಿತ್ತುಯಂತ್ರವಾಹಕನ ತೀರ್ಥವನೆರೆದ ಧೀರ 2 ಮುನಿ ಕುಲೋತ್ತಮ ಶ್ರೀ ವರದೇಂದ್ರ ತೀರ್ಥಕರಕಮಲ ಸಂಜಾತ ಭುವನ ವಿಖ್ಯಾತ ||ಅನಿಮಿತ್ತ ಬಂಧು ಗುರು ಮೋಹನ್ನ ವಿಠಲನ್ನಕ್ಷಣ ಬಿಡದೆ ಧೇನಿಸುವ ಗುರುವೇ ಸುರತರುವೇ 3
--------------
ಮೋಹನದಾಸರು
ಭೂಷಣ ಮಾಡಲು ಹಿಗ್ಗೇನೋ ಜನ ದೂಷಣಮಾಡಲು ದು:ಖೇನೋ ಪ ದೋಷನಾಶ ಜಗದೀಶ ಕೇಶ ತನ್ನ ದಾಸರಭಿಮಾನ್ಯೆಂದು ಶಾಶ್ವತರಿತವರಿಗೆ ಅ.ಪ ವಂದನೆಮಾಡಿ ಕೊಡುತಿಹ್ಯರೇನೋ ಮತ್ತು ನಿಂದೆಯನಾಡಿ ಕಸುಕೊಳ್ಳುವರೇನೋ ನಿಂದೆವಂದನಗಳೊಂದೇಯೆಂದು ಆ ನಂದನಕಂದನ್ನಾನಂದದಿ ಭಜಿಪರ್ಗೆ 1 ಸತಿಸುತರೊಲಿದರೆ ಬಂತೇನೋ ಮತ್ತು ಹಿತದಪ್ಪಿ ನಡೆದರೆ ಹೋಯ್ತೇನೋ ಗತಿಪ ಕ್ಷತಿಯ ಹಿತಾಹಿತಸ್ಥಿತಿ ಸಮವೆಂದು ಪತಿತಪಾವನ ಸತತದಿ ನುತಿಪರ್ಗೆ 2 ನೀತಿವಂತನೆನೆ ಬಂದ ಭಾಗ್ಯೇನೋ ಜಗ ಪಾತಕನೆನೆ ಬಂದ ಕುಂದೇನೋ ಪಾತಕಹರ ಭವಭೀತಿವಿನಾಶ ಜಗ ನ್ನಾಥ ಶ್ರೀರಾಮನ ಪ್ರೀತಿ ಪಡೆದವರಿಗೆ 3
--------------
ರಾಮದಾಸರು
ಭ್ರಷ್ಟನೆಂದಿಸಿದೆಯಾ ಕೃಷ್ಣನೇ ಎನ್ನ ಪ ಭ್ರಷ್ಟನೆಂದಿನಿಸಿದ್ಯಾ ಸೃಷ್ಟಿಗೀಶನೆ ಪರ ಮೇಷ್ಟಿ ಜನಕ ದಿವ್ಯ ದೃಷ್ಟಿ ಕೊಡದಲೆನ್ನ ಅ.ಪ ನರರ ಸಂದಣಿಯಲಿ ವಿರತಿ ಮಾತಾಡಿಸಿ ಮಾರನಾಟದಿ ಮನವೆರಗುವಂದದಿ ಮಾಡಿ 1 ಕಾಷಾಯ ದಂಡಿ ವೇಷವ ಧರಿಸಿ ಮುನ್ನ ಮೋಸಪಡಿಸಿ ಸ್ತ್ರೀಯರಾಸೆ ಬಿಡಿಸಿದೆನ್ನ 2 ಸೀಲರಂದಲಿ ಜಪಮಾಲೆ ಕೈಯಲಿ ಪಿಡಿಸಿ ಕಾಳಿಮರ್ಧನ ದೇವ ಮಲಿನ ಮನವನಿತ್ತು 3 ಕರವಶವನೆ ಮಾಡಿ ಸರಸದಿಂದ ಕಲೆಹಾಕಿ ಮರೆಸಿ ನಿನ್ನನೆ ಕೃಷ್ಣ ನಿರಯಭಾಗಿಯ ಮಾಡಿ4 ಕರುಣವಾರಿಧಿ ಎನ್ನ ಮರುಳುಗೊಳಿಸಿ ವಿಷಯ ಶರಪಂಜರದಿ ಬಿಗಿದು ಚರಣ ತೋರಿಸದೆಲೆ 5 ಮದ ಮತ್ಸರ ಕಾಮ ಕ್ರೋಧ ಲೋಭ ಮೋಹ ಮಾಧವ 6 ಪತಿತಾಗ್ರಣಿಯು ನಾನು ಪತಿತ ಪಾವನ ನೀನು ಸತತ ನಿನ್ನಯ ಸಂಸ್ಮøತಿಯ ನೀಡದಲೆನ್ನ 7 ದ್ವಿಜ ಅಜಮಿಳ ನಿಜನಾಮದಿಂದಲಿ ಸುಜನನೆಂದೆನಿಸಿದ್ದು ನಿಜತೋರದಲೆನ್ನ 8 ಹೀನರೊಳೆನ್ನೆಂಥ ಹೀನ ಜನರ ಕಾಣೆ ಸಾನುರಾಗದಿ ಕಾಯೊ ಶ್ರೀ ನರಹರಿಯೆ 9
--------------
ಪ್ರದ್ಯುಮ್ನತೀರ್ಥರು
ಮಂಗಲಂ ಗುರುರಾಜಗೆ ಮಂಗಲ ಪರಮಾನಂದಸ್ವರೂಪಗೆ ಪ ಜೀವÀಪರಮರೈಕ್ಯವ ತಿಳುಹಿಸುವಾ ದೇವನೆ ನೀನೆನ್ನುತ ಬೋಧಿಸುವಾ ಸಾವು ಸಂಕಟಗಳ ಮೂಲವ ಕಡಿಯುವಾ ಪಾವನಾತ್ಮ ಘನಜ್ಞಾನರೂಪಗೆ 1 ಶೋಧಿಸಿ ದೇಹತ್ರಯಗಳ ಕಳಹಿ ಬಾಧರಹಿತ ಪರಮಾತ್ಮನ ಅರಿವನು ಬೋಧಿಸಿ ಅನುಭವದಲಿ ನೆಲೆಸಿದಗೆ 2 ತೋರಿಕೆ ಅನಿಸಿಕೆ ಎನಿಸುವ ದ್ವೈತವ ಧೀರತನದಿ ಸುಳ್ಳೆಂದು ತಿಳಿಸುವಾ ನಾರಾಯಣಗುರುವರನ ಕೃಪಾಪ್ರಿಯ ಪೂರಣಬ್ರಹ್ಮಸ್ವರೂಪ ಶಂಕರಗೆ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಮಂಗಲಂ ಜಯ ಶುಭಮಂಗಲಂ ಪ. ಶ್ರೀಗೌರೀಸುಕುಮಾರನಿಗೆ ಯೋಗಿವರೇಣ್ಯ ಶುಭಾಕರಗೆ ರಾಗ ಲೋಭ ರಹಿತಗೆ ರಜತೇಶಗೆ ಭಾಗೀರಥಿಸುತ ಭವಹರಗೆ 1 ಪಾಶಾಂಕುಶ ವಿವಿಧಾಯುಧಗೆ ಪಾಶದರಾರ್ಚಿತ ಪಾವನಗೆ ವಾಸರಮಣಿಶತಭಾಸಗೆ ಈಶಗೆ ಭಾಸುರ ತನಕ ವಿಭೂಷಣನಿಗೆ2 ಶೀಲ ಸುಗುಣಗಣ ವಾರಿಧಿಗೆ ನೀಲೇಂದೀವರಲೋಚನೆಗೆ ಲೋಲ ಲಕ್ಷ್ಮೀನಾರಾಯಣ ರೂಪಗೆ ಶಾಲಿ ಪುರೇಶ ಷಡಾನನಗೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಲಂ ಜಯಮಂಗಲಂತ್ರಿಜಗಂಗಳ ಪೊರೆವ ಶ್ರೀಮೂಕಾಂಬೆಗೆ ಪ ಗೌರಿಗೆ ಗುಹಜನನಿಗೆ ಗಿರಿಜಾತೆಗೆಧೀರಮಹಿಷ ದೈತ್ಯಮರ್ದಿನಿಗೆಕಾರುಣ್ಯನಿಧಿಗೆ ಕಾಮಿತಫಲದಾತೆಗೆನಾರದನುತೆಗೆ ನಾರಾಯಣಿಗೆ 1 ಶರದಿಂದುಮುಖಿಗೆ ಶಂಕರಿಗೆ ಶರ್ವಾಣಿಗೆದುರಿತ ದಾರಿದ್ರ್ಯಹರ್ತೆಗೆ ದುರ್ಗಿಗೆಪರಮೇಶ್ವರಿಗೆ ಪಾವನಚರಿತೆಗೆ ಶುಭಕರಿಗೆ ಸಮಸ್ತಮಂತ್ರೇಶ್ವರಿಗೆ 2 ರಾಜಶೇಖರಿಗೆ ರಾಜೀವನೇತ್ರಗೆ ರಕ್ತಬೀಜ ಶಾಸಿನಿಗೆ ಭುವನಮಾತೆಗೆತೇಜೋಮಯಿಗೆ ತರಣಿಕೋಟಿ ಭಾಷೆಗೆಶ್ರೀ ಜನಾರ್ದನನ ಸಹೋದರಿಗೆ 3 ಕಾಳಿಗೆ ಕಾಮರೂಪಿಣಿಗೆ ಕೌಮಾರಿಗೆಕಾಳರಾತ್ರಿಗೆ ಕಾತ್ಯಾಯನಿಗೆವ್ಯಾಳಭೂಷಿಣಿಗೆ ಯೋಗಿನಿಗೆ ರುದ್ರಾಣಿಗೆಭಾಳನೇತ್ರೆಗೆ ಭಯಹಾರಿಣಿಗೆ4 ಚಂಡಿಗೆ ಚಕ್ರಪಾಣಿಗೆ ಚಾತುರ್ಭುಜೆಗೆಮುಂಡಿಗೆ ಧೂಮ್ರಲೋಚನಹತ್ರ್ರೆಗೆಚಂಡಮುಂಡಾಸುರರಸುರಣರಂಗದಿದಿಂಡುದರಿಂದ ಸರ್ವಮಂಗಲೆಗೆ5
--------------
ಕೆಳದಿ ವೆಂಕಣ್ಣ ಕವಿ
ಮಂಗಲಂ ಮಂಗಲಂ ಭವತು ತೇ ಮಂಗಲಂ ಪ. ವಿಜ್ಞಾನಶಕ್ತಿ ಪ್ರಕಾಶಗೆ ಈಶಗೆ ಸಜ್ಜನನಿವಹಾರಾದಿತಗೆ ಅಜ್ಞಾನತಿಮಿರಮಾರ್ತಾಂಡ ಪ್ರಚಂಡಗೆ ಮೂಜದೊಡೆಯ ಮನೋಜ್ಞ ಮೂರುತಿಗೆ 1 ಚಂದ್ರಶೇಖರಸುಕುಮಾರಗೆ ಮಾರನ ಸುಂದರರೂಪ ಪ್ರತಾಪನಿಗೆ ನಿಂದಿತ ಖಲಜನವೃಂದವಿದಾರಗೆ ಸ್ಕಂದರಾಜ ಕೃಪಾಸಿಂಧು ಪಾವನಗೆ 2 ತಾರಕದೈತ್ಯಸಂಹಾರಗೆ ಧೀರಗೆ ಶೂರಪದ್ಮಾಸುರನ ಗೆಲಿದವಗೆ ಸೇರಿದ ಭಕ್ತರ ಸುರಮಂದಾರಗೆ ನಾರದಾದಿ ಮುನಿವಾರವಂದಿತಗೆ 3 ವಲ್ಲೀವಲ್ಲಭನಿಗೆ ಒಲಿದರ್ಗೆ ವರದಗೆ ಎಲ್ಲ ಭೂತಾಶ್ರಯ ಬಲ್ಲವಗೆ ಖುಲ್ಲದಾನವರಣಮಲ್ಲ ಮಹೇಶಗೆ ಬಿಲ್ಲುವಿದ್ಯಾಧೀಶ ಭೀಮವಿಕ್ರಮಗೆ 4 ಕಂಜಾಕ್ಷ ಲಕ್ಷ್ಮೀನಾರಾಯಣ ತೇಜಗೆ ಮಂಜುಳಕಾಂತಿ ವಿರಾಜನಿಗೆ ನಂಜುಂಡನ ಕರಪಂಜರಕೀರ ಪಾ- ವಂಜೆ ಕ್ಷೇತ್ರಾದಿವಾಸ ಸುರೇಶನಿಗೆ 5
--------------
ತುಪಾಕಿ ವೆಂಕಟರಮಣಾಚಾರ್ಯ