ಹರಿ ಗೋವಿಂದ ವಿಠಲ | ಪೊರೆಯ ಬೇಕಿವಳಾ ಪ
ನಿರುತ ಹರಿ ಗುರುದಾಸ್ಯ | ಅರ್ಥಿಸುತ್ತಿಹಳಾ ಅ.ಪ.
ಸುಪ್ತೀಶತೋರ್ದಪರಿ | ಪ್ರಾಪ್ತಿ ಪ್ರಾಣನ ವಶವುಕ್ಲಪ್ತವಾಯ್ತಿವಳೀಗೆ | ಮುಕ್ತಿ ಸಾಧನಕೆ |ಎತ್ತ ನೋಡಿದರತ್ತ | ಆಪ್ತಮುಖ್ಯ ಪ್ರಾಣಪೊತ್ತಿಹನು ಸರ್ವತ್ರ | ವ್ಯಾಪ್ತಿ ಮೂರುತಿಯೇ 1
ಭವ ಹಾರೀ 2
ಭುವನ ಪಾವನ ನಿನ್ನ | ಸ್ತವನ ವೈಭವ ಕೇಳೆಸರ್ವದಾ ಸರ್ವತ್ರ | ಶ್ರವಣ ಸುಖದಲ್ಲೀನಿರ್ವಿಕಾರದ ತಿರಗಲೀಕೆಯ ಮನಸುಸರ್ವಾಂತರಾತ್ಮಕನೆ | ಸಾರ್ವಭೌಮ 3
ತಾಪ ಭಯಅಧ್ಯಕ್ಷ ಶ್ರೀಹರಿಯೆ ನೀನಾಗಿ ಕಳೆದೂ |ಮಧ್ವಾಂತರಾತ್ಮಕನ | ಹೃದ್ಗುಹದಿ ತೋರೆಂದುಬುದ್ಧಿ ಪೂರ್ವಕ ಬೇಡ್ವೆ | ಪದ್ಮನಾಭಾ 4
ಸಾಧನದ ಜೀವಿಗಳ | ಸಾಧನದ ಪ್ರತಿಭಂಧಸಾದರದಿ ವಾರಿಸುತ | ಮೋದಮನ ನೀಯೋ |ಮೋದಮುನಿ ವಂದ್ಯ ಗುರು | ಗೋವಿಂದ ವಿಠಲನೆನೀದಯದಿ ಪೊರೆ ಇವಳ | ಪ್ರಹ್ಲಾದ ವರದಾ 5