ಒಟ್ಟು 1208 ಕಡೆಗಳಲ್ಲಿ , 105 ದಾಸರು , 1001 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕೆ ಮೈ ಮರೆದೆ ನೀನು - ಜೀವನವೇ - |ಏಕೆ ಮೈಮರೆದೆ ನೀನು ಪಏಕೆ ಮೈಮರೆದೆ ನೀ - ಲೋಕಾರಾಧ್ಯನ ಪಾದ|ಬೇಕೆಂದು ಭಜಿಸು ಕಾಣೋ - ಜೀವನವೇ ಅ.ಪ.ಮದ್ದಾನೆಗಳೆಂಟು ಸೊಕ್ಕಿನಿಂ ಬರುವಾಗ |ಎದ್ದು ಕುಳ್ಳಿರಬಾರದೆ - ಜೀವನವೇ ||ಅಧ್ಯಾತ್ಮಕಾ ಹರಿನಾಮವ ಶ್ರುತಿಮಾಡಿ |ಒದ್ದು ಬಿಸಾಡು ಕಣೊ - ಜೀವನವೇ 1ಕಂದರ್ಪನೆಂಬವ ಕಾದುತ ಬರುವಾಗ |ನಿಂದಿಸುತಿರಬಾರದೆ - ಜೀವನವೇ ||ಒಂದೇ ಮನಸು ಎಂಬ ವಜ್ರಾಯುಧವ ಪಿಡಿದು |ಕೊಂದು ಬೀಸಾಡು ಕಾಣೊ - ಜೀವನವೇ 2ವಿಷಯದಿ ಸುಖಕಾಣೆ ಪಶುಜನರೊಳು ದೇಹ |ಹಸನುಗಳೆಯಲು ಬೇಡವೋ - ಜೀವನವೇ||ಬಿಸಜಾಕ್ಷ ಪುರಂದರವಿಠಲನೊಲಿಯೆ ಸುಖ -|ರಸದಿ ಲೋಲಾಡು ಕಾಣೋ - ಜೀವನವೇ 3
--------------
ಪುರಂದರದಾಸರು
ಏನ ಮಾಡಲಿ ಶ್ರೀಹರಿ- ಇಂಥ |ಮಾನವಜನ್ಮ ನಚ್ಚಿಸಬಹುದೆ? ಪಮಾತನಾಡದೆ ಮೌನದೊಳಿದ್ದರೆ-ಮೂಕ-|ನೀತನೆಂದು ಧಿಕ್ಕರಿಸುವರು ||ಚಾತುರ್ಯದಿಂದಲಿ ಮಾತುಗಳಾಡಲು |ಈತನು ಬಲು ಬಾಯ್ಬಡಿಕನೆಂಬುವರಯ್ಯ 1ಮಡಿ ನೇಮ ಜಪ-ತಪಂಗಳ ಮಾಡುತಿದ್ದರೆ |ಬಡಿವಾರದವನೆಂದಾಡುವರು ||ಮಡಿ ನೇಮ ಜಪ-ತಪಂಗಳ ಮಾಡದಿದ್ದರೆ |ನಡತೆ ಹೀನನೆಂದು ಬಲು ನಿಂದಿಸುವರಯ್ಯ 2ಗಟ್ಟಿಯಾಗಿ ಒಪ್ಪತ್ತಿನೂಟದೊಳಿದ್ದರೆ |ನಿಷ್ಟೆಯೇನು ಸುಟ್ಟಿತೆಂಬರು |ಗಟ್ಟಿಯಾಗಿ ಎರಡು ಮೂರು ಬಾರಿಯುಂಡರೆ |ಹೊಟ್ಟೆ ಬಾಕನೆಂದು ತೆಗಳಾಡುವರಯ್ಯ 3ಒಲಪಿನೊಳ್ಚೆನ್ನಿಗತನವನು ಮಾಡಲು |ಬಲು ಹೆಮ್ಮೆಗಾರನೆಂದಾಡುವರು ||ಸುಲಭತನದಿ ತಾ ನಿಗರ್ವಿಯಾಗಿದ್ದರೆ |ಕಲಿಯುಗದಲಿ ಮಂದಮತಿಯೆಂಬುವರಯ್ಯ 4ನರಜನ್ಮದೊಳಗಿನ್ನು ಮುಂದೆ ಪುಟ್ಟಿಸಬೇಡ |ಮೊರೆ ಹೊಕ್ಕೆ ಮತ್ಸ್ಯಾವತಾರ ನಿನ್ನ ||ಧರೆಯೊಳಗಿಹ ಪರಿಯಂತರ ಸಲಹೆನ್ನ |ಕರುಣವಾರಿಧಿ ಶ್ರೀಪುರಂದರವಿಠಲ5
--------------
ಪುರಂದರದಾಸರು
ಒಲಿಯಯ್ಯಾ ರಂಗ ಒಲಿಯಯ್ಯಾನೆಲೆಗಾಣದಭವಜಲದೊಳು ಮುಳುಗುವೆಪ.ಮಾಯದ ಕೈಯಲಿ ಮೇಲೆ ಮೇಲೆ ಸುತ್ತಿಆಯಾಸಬಡುತಿದೆ ಪ್ರಾಣದಾತಬಾಯೆತ್ತಿ ಗೋವಿಂದ ಹರಿಯೆನ್ನಲೀಸದುಕಾಯೊ ದಯಾಳು ಕರಿವರದ ಕೃಷ್ಣ 1ಮನ ನೀರಾನೆಯ ಕಟ್ಟಿನೊಳಗೆ ಸಿಕ್ಕಿಕ್ಷಣ ಕ್ಷಣ ದೈನ್ಯದಿ ಒರಲುತಿದೆತನತನಗೆಳೆದು ದಣಿಸುವ ಇಂದ್ರಿಯ ಜಂತುಮುನಿಸೇವ್ಯ ನಿನ್ನೂಳಿಗಕ್ಕೆ ದೂರಾದೆ ಕೃಷ್ಣ 2ಬುದ್ಧಿ ತಪ್ಪಿದವಗೆ ಅಬದ್ಧ ನಡೆವವಗೆಶುದ್ಧ ಕಾರಣ ದಿವ್ಯನಾಮವಲ್ಲವೆಉದ್ಧರಿಸು ಬೇಗ ಪ್ರಸನ್ವ್ವೆಂಕಟ ಕೃಷ್ಣತಿದ್ದಿಟ್ಟುಕೊಳ್ಳೊ ನಿನ್ನವಗೆ ನಿರ್ಣಯ ನೀನೆ 3
--------------
ಪ್ರಸನ್ನವೆಂಕಟದಾಸರು
ಕಂಡೆ ಕಂಡೆ ಕಂಡೆನಯ್ಯಾ ಕಂಗಳ ದಣಿಯುವ ತನಕಮಂಗಳ ಮೂರುತಿ ಮನ್ನಾರು ಕೃಷ್ಣನ ಪಉಟ್ಟ ಪೀತಾಂಬರ ಕಂಡೆ ತೊಟ್ಟ ವಜ್ರದಂಗಿ ಕಂಡೆದಕ್ಷಿಣದ ದ್ವಾರಕಿ ಮನ್ನಾರು ಕೃಷ್ಣನ 1ಕಡೆವ ಕಡೆಗೋಲ ಕಂಡೆ ನಡುವಿನೊಡ್ಯಾಣ ಕಂಡೆಕಡು ಮುದ್ದು ಮನ್ನಾರು ಕೃಷ್ಣನ ಕಂಡೆ 2ದೇವಕಿ ದೇವಿಯರ ಕಂಡೆ ಗೋಪಿಯರ ಮುದ್ದಾಟ ಕಂಡೆಮಾವ ಕಂಸನ ಮರ್ದನ ಶ್ರೀ ಕೃಷ್ಣನ 3ಆಕಳ ಕಾವುದ ಕಂಡೆ ಗೋಪಾಲಕೃಷ್ಣನ ಕಂಡೆವೈಕುಂಠವಾಸನ ಮನ್ನಾರು ಕೃಷ್ಣನ 4ಶೇಷನ ಹಾಸಿಕೆಯ ಕಂಡೆ ಸಾಸಿರ ನಾಮನ ಕಂಡೆಶ್ರೀಶಪುರಂದರವಿಠಲ ಕೃಷ್ಣರಾಯನ5
--------------
ಪುರಂದರದಾಸರು
ಕಂಡೆ ನಾ ಗೋವಿಂದನಪುಂಡರೀಕಾಕ್ಷಪಾಂಡವ ಪಕ್ಷನಪಕೇಶವ ನಾರಾಯಣ ಶ್ರೀ ಕೃಷ್ಣನವಾಸುದೇವಅಚ್ಯುತಾನಂತನ ||ಸಾಸಿರ ನಾಮದ ಶ್ರೀ ಹೃಷಿಕೇಶನಶೇಷಶಯನ ನಮ್ಮ ವಸುದೇವ ಸುತನ 1ಮಾಧವಮಧುಸೂದನ ತ್ರೀವಿಕ್ರಮನಯಾದವ ಕುಲಜನ ಮುನಿವಂದ್ಯನ ||ವೇದಾಂತ ವೇದ್ಯನ ಶ್ರೀಇಂದಿರೆರಮಣನ-ನಾದಿ ಮೂರುತಿ ಪ್ರಹ್ಲಾದವರದನ 2ಪುರುಷೋತ್ತಮ ನರಹರಿ ಶ್ರೀಕೃಷ್ಣನಶರಣಾಗತ ವಜ್ರಪಂಜರನ ||ಕರುಣಾಕರ ನಮ್ಮಪುರಂದರವಿಠಲನನೆರೆನಂಬಿದೆನು ಬೇಲೂರ ಚೆನ್ನಿಗನ3
--------------
ಪುರಂದರದಾಸರು
ಕರುಣಾಕರ ನೀನೆಂಬುವುದೆತಕೊ |ಭರವಸೆ ಇಲ್ಲೆನಗೆ ಪಕರಿಧ್ರುವಬಲಿಪಾಂಚಾಲಿ ಅಹಲ್ಯೆಯ |ಪೊರೆದವ ಭವದಲಿ ನೀನಂತೆ ||ಅರಿತು ವಿಚಾರಿಸಿ ನೋಡಲಿದೆಲ್ಲವು |ಪರಿಪರಿ ಕಂತೆಗಳಂತಿದೆ ಕೃಷ್ಣ 1ಕರುಣಾಕರ ನೀನಾದರೆ ಈಗಲೆ |ಕರಪಿಡಿದೆನ್ನನು ನೀ ಕಾಯೊ ||ಸರಸಿಜಾಕ್ಷನೇ ಅರಸು ನೀನಾದರೆ |ದುರಿತಗಳೆನ್ನನು ಪೀಡಿಪುದುಂಟೆ 2ಮರಣ ಕಾಲದಲಿ ಅಜಮಿಳಗೊಲಿದೆಯೊ |ಗರುಡಧ್ವಜನೆಂಬ ಬಿರುದಿನಿಂದ ||ವರಬಿರುದುಗಳ್ನಿನಗುಳಿಯಬೇಕಾದರೆ |ತ್ವರಿತದಿ ಕಾಯೋ ಪುರಂದರವಿಠಲ 5
--------------
ಪುರಂದರದಾಸರು
ಕರುಣಿಸೆನಗೆ ಶಂಭೋ ಕರುಣಿಸಯ್ಯಾಶರಣಾರಂದದಿ ನಿನ್ನ ಮನದಿರವರಿಯೆನುಕರವಜೋಡಿಸಿ ದೇವಾ ಚರಣಕೊಂದಿಪೆನು ಪಕ್ಷೋಣಿಯೊಳ್ ಮಾರ್ಕಾಂಡೆಯಂತೆ ಪೂಜಿಸಲಾರೆಮೀನಾಕ್ಷಿಯಂತೆ ಕಾದಿ ಪರಿಸಲಾನರಿಯೇಬಾಣಾಸುರನಂತೆ ತಪಗೈಯ್ಯಲಾರೆ ನಾನುರಾವಣನಂತೆ ಸಾಮಗಾನವನರಿಯೇ 1ಶಿರದಿ ಚಂದಿರನಂತೆ ಶೋಭಿಸಲಾರೆ ಭಕ್ತಿಸ್ಥಿರವರಿಯೆನು ಭೀಮಸೇನನಂತೆಉರಗನಂದದಿ ಕೊರಳಾಭರಣವಾಗಿರಲಾರೆಗಿರಿಜೆಯಂದದಿ ನೆರೆದು ಮುದ್ದಿಸಲರಿಯೆ 2ಮಂದಾಕಿನಿಯಂತೆ ಜಡೆಯಾಲಂಕರಿಸೆನುನಂದೀಶನಂತೆ ಪೊತ್ತು ತಿರುಗಾಡಲರಿಯೆಇಂದ್ರನಂದನನಂತೆ ಭರದಿ ಮೆಚ್ಚಿಸಲಾರೆಬಂದೆನ್ನ ಸಲಹೋ ಗೋವಿಂದನ ಸಖನೆ 3
--------------
ಗೋವಿಂದದಾಸ
ಕಲ್ಲು ಬೀಳಲಿ ಮೇಲ್ಮುಗಿಲ್ಲು ಬೀಳಲಿಫುಲ್ಲನಾಭನಿನ್ನ ಪಾದಪಲ್ಲವ ಛಾಯೆಯ ಬಿಡೆಪ.ಶೂಲಕೋಟಿಗಂಜೆಕರವಾಳಘಾತಿಗಂಜೆವಿಶ್ವಪಾಲಕ ನಿನ್ನ ದಿವ್ಯನಾಮಮಾಲಿಕೆ ವಜ್ರಾಯುಧುಂಟು 1ಪೋಕಜನಕಂಜೆ ದುರಿತಾನೀಕ ಬರಲಂಜೆ ಜಗದೇಕ ನಿನ್ನ ಶ್ರೀಪದಾರಾಧಕರ ಬಲ ಉಂಟೆನಗೆ 2ಅಂದು ಅಪಮೃತ್ಯು ಬಂದೆನ್ನಂದಗೆಡಿಸಲು ಎನ್ನತಂದೆ ಪ್ರಸನ್ವೆಂಕಟೇಶ ಬಂದು ಕಾಯಿದ ಹವಣು ಬಲ್ಲೆ 3
--------------
ಪ್ರಸನ್ನವೆಂಕಟದಾಸರು
ಕಾಯೆ ಭಾರತೀ ನಿನ್ನ ಆರಾಧಿಸುವೆ ಯನ್ನ |ಮಾಯಾಮಂದಿರನವರ ಕಿಂಕರನು ಯೆನಿಸೇ ಪವ್ಯೋಮಜ ರಮಣಿನಳಿನಭವಜಾತೆಕೃತಿಪುತ್ರೆ |ಸಾಮಜಗಮನೆ ಉರಗವೇಣಿ ಕಾಳೀ ||ಸೋಮಮುಖಿ ಬೇರೊರಸಿ ಯನ್ನ ದುರ್ಮತಿಯಳಿದು |ರಾಮಧ್ಯಾನದಲಿ ಮನ ನಿಲ್ಲಿಸುವದನಿಶ 1ಲೋಕನಾಯಿಕೆ ಶೈಲಜಾಪತಿ ಮುಖ ಪೂಜಿತಳೆ |ನೀ ಕರುಣದಲಿ ನೋಡಿಕರವಪಿಡಿಯೇ ||ಕಾಕುಮನುಜರ ಸಂಗವನು ಕೊಡದೆಯೊಂದಿನಕು |ಲೌಕಿಕವ ಸಂಪಾದಿಸಿಸಬೇಡವಮ್ಮ 2ಕೃಷ್ಣೆ ನಳನಂದಿನಿ ದ್ರುಪದ ತನುಜೆ ಶಿವಕನ್ಯೆ |ದುಷ್ಟ ಜನ ಗಿರಿಕುಲಿಶೆ ಸ್ವರ್ಣಗಾತ್ರೆ ||ಕೊಟ್ಟ ಮಾತಿಗೆ ತಪ್ಪದಲೆ ಕಾಯ್ವ ಪ್ರಾಣೇಶ |ವಿಠಲನ ಚರಣಯುಗ ಸರಸೀರುಹ ಭೃಂಗೆ3
--------------
ಪ್ರಾಣೇಶದಾಸರು
ಕೆಂಡಕ್ಕೆ ಗೊರಲಿ ಮುತ್ತುವುದುಂಟೆಪಾಂಡುರಂಗನ ದಾಸರಿಗೆ ಭಯವುಂಟೆ ? ಪ.ಆನೆ ಸಿಂಹನ ಕೂಡ ಅಣಕವಾಡುವುದುಂಟೆಶ್ವಾನಗೆ ಹುಲಿಯೊಳು ಸರಸವುಂಟೆ ?||ಏನೆಂಬೆ ಎರಡಿಲ್ಲದಿರುಳು ಹಗಲು ನಿನ್ನಧ್ಯಾನ ಮಾಡುವರಿಗೆ ನರಕವುಂಟೆ ? ಸ್ವಾಮಿ ? 1ಕತ್ತಲೆ ರವಿಯನು ಕವಿದು ಮುಚ್ಚುವುದುಂಟೆಹತ್ತಿ ಸರ್ಪನ ಕಪ್ಪೆ ನುಂಗುವುದುಂಟೆ ? ||ಅತ್ತಿತ್ತ ಮನವನು ಹರಿಬಿಡದಲಿ ಏಕಚಿತ್ತದಿ ನೆನೆವಗೆ ನರಕವುಂಟೆ ಸ್ವಾಮಿ 2ಆ ಮಾರುತನ ಗುದ್ದಿ ಹದ್ದು ನೋಯಿಸಲುಂಟೆಹೇಮಗಿರಿಗೆವಜ್ರ ಸಿಡಿಯಲುಂಟೆ ?ಸ್ವಾಮಿ ಶ್ರೀ ಪುರಂದರವಿಠಲರಾಯನೆ ನಿನ್ನನಾಮಧಾರಿಗಳಿಗೆ ನರಕವುಂಟೆ ಸ್ವಾಮಿ ? 3
--------------
ಪುರಂದರದಾಸರು
ಕೇಶವನೊಲುಮೆಯು ಆಗುವ ತನಕ ಹರಿದಾಸರೊಳಿರು ಮನವೆಕ್ಲೇಶ ಪಾಶಗಳ ಹರಿದು ವಿಳಾಸದಿ ದಾಸರ ನುತಿಗಳ ಪೊಗಳುತ ಮನದೊಳು ಪ.ಮೋಸದಿ ಜೀವಿಯಘಾಸಿ ಮಾಡಿದ ಫಲಕಾಶಿಗೆ ಹೋದರೆ ಹೋದೀತೆದಾಸರ ಕರೆ ತಂದು ಕಾಸು ಕೊಟ್ಟ ಫಲ ಲೇಸಾಗದೆ ಸಸಿನಿದ್ದೀತೆಭಾಷೆಯ ಕೊಟ್ಟು (ನಿ) ರಾಸೆಯ ಮಾಡಿದಫಲ ಮೋಸವು ಮಾಡದೆ ಬಿಟ್ಟೀತೆಶಶಿವದನೆಯ ಅಧರಾಮೃತ ಸೇವಿಸಿ ಸುಧೆಯೆಂದಡೆ ನಿಜವಾದೀತೆ 1ಕನಕದ ಪಾತ್ರದ ಘನತೆಯ ಪ್ರಭೆಗಳು ಶುನಕನಮನಸಿಗೆ ಸೊಗಸೀತೆಹೀನ ಮನುಜನಿಗೆ ಜಾÕನವ ಭೋಧಿಸೆ ಹೀನ ವಿಷಯಗಳು ಹೋದಿತೇಮಾನಿನಿ ಮನಸು ನಿಧಾನವು ಇಲ್ಲದಿರೆಮಾನಭಿಮಾನ ಉಳಿದೀತೆಭಾನುವಿಕಾಸನ ಭಜನೆಯ ಮಾಡದ ದೀನಗೆ ಮುಕುತಿಯು ದೊರಕೀತೆ 2ಸತ್ಯದ ಧರ್ಮವ ನಿತ್ಯವು ಭೋಧಿಸೆ ತೊತ್ತಿನ ಮನಸಿಗೆ ಸೊಗಸೀತೆತತ್ವದ ಅರ್ಥ ವಿಚಿತ್ರದಿ ಪೇಳಲು ಕತ್ತೆಯ ಮನಸಿಗೆ ತಿಳಿದೀತೆಪುತ್ಥಳಿ ಬೊಂಬೆಯ ಚಿತ್ರದಿ ಬರೆದಿರೆ ಮುತ್ತುಕೊಟ್ಟರೆ ಮಾತಾಡೀತೆಕತ್ತುರಿ ತಿಲಕವನೊತ್ತಿ ಫಣೆಯೊಳಿಡೆ ಅರ್ತಿಯುತೋರದೆ ಇದ್ದೀತೆ 3ನ್ಯಾಯವ ಬಿಟ್ಟು ಅನ್ಯಾಯ ಪೇಳುವ ನಾಯಿಗೆ ನರಕವು ತಪ್ಪೀತೆತಾಯಿ ತಂದೆಗಳ ನೋಯಿಸಿದ ಅನ್ಯಾಯಿಗೆ ಮುಕ್ತಿಯು ದೊರಕೀತೆಬಾಯಿ ಕೊಬ್ಬಿನಿಂದ ಬೈಯುವ ಮನುಜಗೆ ಘಾಯವುಆಗದೆ ಬಿಟ್ಟೀತೆಮಾಯಾವಾದಗಳ ಕಲಿತಾ ಮನುಜಗೆ ಕಾಯಕಷ್ಟ ಬರದಿದ್ದೀತೆ 4ಸಾಧು ಸಜ್ಜನರನು ಬಾಧಿಸಿದಾ ಪರವಾದಿಗೆ ದೋಷವು ತಪ್ಪೀತೆಬಾಧಿಸಿ ಬಡವರ ಅರ್ಥವ ಒಯ್ವವಗೆ ವ್ಯಾಧಿ ರೋಗಗಳು ಬಿಟ್ಟೀತೆಬದ್ದ ಮನುಜ ಬಹು ಕ್ಷುದ್ರವ ಕಲಿತರೆಬುದ್ದಿ ಹೀನನೆಂಬುದು ಹೋದೀತೆಕದ್ದು ಒಡಲ ತಾ ಪೊರೆವನ ಮನೆಯೊಳಗೆಇದ್ದುದು ಹೋಗದೆ ಇದ್ದೀತೆ 5ಅಂಗದ ವಿಷಯಂಗಳನು ತೊರೆದಾತಗೆ ಅಂಗನೆಯರಬಗೆ ಸೊಗಸೀತೆಸಂಗ ಸುಖಂಗಳು ಹಿಂಗಿದ ಮನುಜಗೆ ಶೃಂಗಾರದ ಬಗೆ ಸೊಗಸೀತೆಇಂಗಿತವರಿಯುವ ಸಂಗ ಶರೀರ ವಜ್ರಾಂಗಿಯಾಗದೆ ಇದ್ದೀತೆಮಂಗಳ ಮಹಿಮನ ಅಂಘ್ರಿಯ ಕಾಣದ ಭಂಗಗೆ ಮುಕ್ತಿಯು ದೊರಕೀತೆ 6ಕರುಣಾಮೃತದಾ ಚರಣವ ಧರಿಸಿದ ಪರಮಗೆ ಸರಳಿ ಬಂದೀತೆಕರಣ ಪಾಶದುರವಣೆ ತೊರೆವಾತಗೆ ಶರಣರ ಪದ್ಧತಿ ತಪ್ಪೀತೆಆರುಶಾಸ್ತ್ರವನು ಮೀರಿದ ಯೋಗಿಗೆತಾರಕ ಬ್ರಹ್ಮವು ತಪ್ಪೀತೆವರದ ಪುರಂದರವಿಠಲನ ಚರಣಸ್ಮರಿಸುವವನಿಗೆ ಸುಖ ತಪ್ಪೀತೆ * 7
--------------
ಪುರಂದರದಾಸರು
ಕೇಳು ಶ್ರೀ ಕೃಷ್ಣ ಕಥೆಯ ಬಾಳು ವೈಷ್ಣವರಪಾಳಿಕೆ ಭಕುತಿಯಿಂದಾಳಾಗಿ ಎಲೆ ಮನುಜ ಪ.ಖೂಳರೊಳು ಮಾತಾಡದೇಳು ಹರಿಭಟರಡಿಗೆಬೀಳು ಭಗವಜ್ಜನರ ಮ್ಯಾಳದೆದುರಿನಲಿಹೇಳು ಕೀರ್ತನೆ ನಾಮದೋಳಿಗಳ ತನುಮನದಿಊಳಿಗಮಾಡುಬಿಡದಾಳು ಕರಣಗಳ1ಕೂಳು ಕಾಸಿನ ಸವಿಗೆ ಕೀಳು ಮಾನಿಸರ ಹೊಗಳಿಕೋಳು ಬಂಧನ ಹೋಗದಿರು ಮನದಾಳಿಗೊಳಗಾಗಿಏಳೆರಡು ಭುವನಗಳ ಆಳುವ ಪಿತನಗುಣದೇಳಿಗೆಗೆ ಹರುಷವಂ ತಾಳು ಅನ್ಯವ ಮರೆದು 2ಗಾಳಿಯಸೊಡರುದೇಹ ನಾಳೆಗೆನ್ನದೆ ಸುಧೆಯಮೇಳೈಸಿಕೊಂಡು ಭವವೇಳಿಲಿಸು ನೀಜಾಳು ಭಾಷ್ಯಗಳಗತಿಹಾಳೆಂದು ಗುರುಮಧ್ವಹೇಳಿದಂತಿರುತಲಿ ದಯಾಳು ಪ್ರಸನ್ವೆಂಕಟನ 3
--------------
ಪ್ರಸನ್ನವೆಂಕಟದಾಸರು
ಕೈಯ ತೋರೋ ಕರುಣಿಗಳರಸಾ-ಕೈಯ ತೋರೊ |ಕೈಯಲಿ ಬೆಣ್ಣೆಯ ಮುದ್ದೆಯ ನೀಡುವೆ-ಕೈಯ ಪಅಂಗುಲಿಯೊಳು ಪೊನ್ನುಂಗುರವೊಪ್ಪುವ ಕೈಯ ತೋರೊ |ಶೃಂಗಾರದಿ ಶಂಖಚಕ್ರವ ಧರಿಸಿದ ಕೈಯ ತೋರೊ ||ಅಂಗೈಯಲಿ ಧ್ವಜಪಧ್ಮವಿರಾಜಿಪ ಕೈಯ ತೋರೊ |ಅಂಗನೆಯರಉತ್ತುಂಗಕುಚದಲಿಟ್ಟ ಕೈಯ ತೋರೊ1ಬಡಬ್ರಾಹ್ಮಣನವಲಕ್ಕಿಯ ಬೇಡಿದ ಕೈಯ ತೋರೊ |ಕೊಡೆ ಮಾಡಿ ಗಿರಿಯೆತ್ತಿ ಗೋಗಳ ಕಾಯ್ದ-ಕೈಯ ತೋರೊ ||ಕಡುಹಿರಣ್ಯಾಖ್ಯನ ಒಡಲನು ಬಗೆದ-ಕೈಯ ತೋರೊ |ಧೃಡ ಪ್ರಹ್ಲಾದನ ಮಂಡೆಯೊಳಿಟ್ಟ ಕೈಯ ತೋರೊ 2ಅಲ್ಲಿ ಪೂತನಿಯ ಅಸುವನೆ ಹೀರಿದ ಕೈಯ ತೋರೊ |ಬಲ್ಲಿದಮಲ್ಲರ ಮರ್ದಿಸಿ ಬಂದ-ಕೈಯ ತೋರೊ ||ಮೆಲ್ಲನೆ ಕುಬುಜೆಯ ಡೊಂಕನೆ ತಿದ್ದಿದ ಕೈಯ ತೋರೊ |ಬಿಲ್ಲನು ಎಡಗೈಯಲಿ ಮುರಿದಿಟ್ಟ ಕೈಯ ತೋರೊ 3ಬಲಿಯನು ವಂಚಿಸಿ ದಾನವ ಬೇಡಿದ ಕೈಯ ತೋರೊ |ಫಲಪುಷ್ಪ ಪಾರಿಜಾತವ ತಂದ ಕೈಯ ತೋರೊ ||ಒಲಿದು ಪಾರ್ಥಗೆ ರಥವನು ನಡೆಸಿದ ಕೈಯ ತೋರೊ |ಮಲ್ಲಿಗೆ ಜಾಜಿಯ ತುರುಬಿಗೆ ಮುಡಿಸಿದ ಕೈಯ ತೋರೊ 4ಆಕಾಶದ ಚಂದ್ರಮನನು ಕರೆದ-ಕೈಯ ತೋರೊ |ನಾಕಪತಿಗೆ ಅಭಯವನಿತ್ತ-ಕೈಯ ತೋರೊ |ನೇಕ ಬಗೆಯಲಿ ಕೊಳಲನೂದುವ-ಕೈಯ ತೋರೊ |ಶ್ರೀಕಾಂತ ನಮ್ಮ ಪುರಂದರವಿಠಲ-ಕೈಯ ತೋರೊ 5
--------------
ಪುರಂದರದಾಸರು
ಕೋಲುಹಾಡುಕೋಲು ಮುಕ್ತಿ ಮಾರ್ಗದ ಕೋಲು ದುಷ್ಟಶಾಸನಕೋಲು ಸುಖತೀರ್ಥಯತಿರಾಯನ ಕರದಂಡುಕೋಲು ಕೋಲೆ ಪ.ಕಂಬುಗೇಹನ ಸೀಳ್ದ ಕಲ್ಲ ಬೆನ್ನಲಿ ತಾಳ್ದಕುಂಭಿನಿತಂದ ಕಂಬದಿ ಬಂದನಮ್ಮಯ್ಯಕೊಂಬುವರಿಲ್ಲ ತ್ಯಾಗವೆಂಬ ಬಲಿಯೊತ್ತಿದಡಂಬಕಕ್ಷತ್ರೇರ ಕಂಠದರಿ ನೋಡಮ್ಮಯ್ಯ1ಅಂಬುಧಿಯ ದಾಟಿದ ರಂಭೆರೊಳೋಲ್ಯಾಡಿ ದಿಗಂಬರ ತಿರುಗಿ ಪಶುವೇರಿದ ನಮ್ಮಯ್ಯಅಂಬುಜಜಾಂಡ ಒಳಕೊಂಬ ಒಡಲ ಚೆಲುವಕೊಂಬು ಕೊಳಲೂದುವರ್ಥಿಯ ನೋಡಿರಮ್ಮಯ್ಯ 2ಸರ್ವಜÕರಾಯನ ಪೂರ್ವದ್ವಾದಶಸ್ತವನಕೋರ್ವನೆ ಮೆಚ್ಚಿ ಉಡುಪಿಲಿ ನಿಂದನಮ್ಮಯ್ಯಉರ್ವಿಗುಬ್ಬಸ ಮತವ ಪೂರ್ವಪಕ್ಷವ ಮಾಡಿದಸರ್ವೇಶ ಪ್ರಸನ್ವೆಂಕಟ ಕೃಷ್ಣ ಕಾಣಮ್ಮಯ್ಯ 3
--------------
ಪ್ರಸನ್ನವೆಂಕಟದಾಸರು
ಕೋಲೆಂದು ಪಾಡಿರೆಕೋಮಲೆಯರೆಲ್ಲಗೋಪಾಲರಾಯನಮಡದಿಯರುಕೋಲಪ.ಶ್ರೀದೇವಿಯರ ಕೂಡ ವಾದ ಸರಸವೆಆದರದಿ ಪಾದಕ್ಕೆರಗಿಕೋಲಮಾಧವನರಸಿಯರ ಮೋದದಿಕರೆಯೆ ವಿನೋದವ ನುಡಿದಾನುರಾಯ 1ಸರಿಯ ರಾಣಿಯರ ಕೂಡ ತರವೇನು ಸರಸವುಕರವಜೋಡಿಸಿ ಕಮಲಾಕ್ಷಿಕೋಲಎರಗಿ ದೇವಿಯರಿಗೆ ಕರಿಯೆ ಬ್ಯಾಗಎಂದುಹರದೆಯರಿಗೆ ನುಡಿದ ಭೀಮನು ಕೋಲ 2ಕೀರ್ತಿವಂತರ ಕೂಡ ಯಾತಕ್ಕೆ ಸರಸವುಮಾತಿನ ಸುಖದ ವಾಣಿಯರಕೋಲಸ್ತೋತ್ರವ ಮಾಡುತ ಪ್ರೀತಿಲೆ ಕರೆಯೆಂದುಪಾರ್ಥ ಮಾತಾಡಿದ ಸತಿಗೆ ಕೋಲ 3ಸಕಲ ಗುಣಾಢ್ಯರ ಸಖಳೆಂದು ಕರೆಸಿಕೊನಕಲಿ ಮಾತಾಡಬ್ಯಾಡಕೋಲಮುಖವ ನೋಡುತ ಅತಿ ಸುಖವ ಪಡಿರೆಂದುನಕುಲಮಾತಾಡಿದ ಸತಿಗೆಕೋಲ4ಇಂತು ರಾಮೇಶನ ಕಾಂತೆಯರ ಕರೆಯೆವೇದಾಂತ ವೇದ್ಯಳೆ ದ್ರೌಪತಿಕೋಲಪಂಥವ ಬಿಟ್ಟು ಸಂತೋಷದಿ ಕರೆಯೆಂದುಕಾಂತೆಗೆ ನುಡಿದ ಸಹದೇವ 5
--------------
ಗಲಗಲಿಅವ್ವನವರು