ಒಟ್ಟು 1371 ಕಡೆಗಳಲ್ಲಿ , 103 ದಾಸರು , 1210 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಂದಿಪೆ ಶ್ರೀಮನ್ನಾರಾಯಣಗೆ ವಂದಿಪೆ ಅಮ್ಮ ಲಕ್ಷ್ಮೀದೇವಿಗೆ ಪ ವಂದಿಪೆ ವಿಶ್ವಕ್ಸೇನರಿಗೆ ಕುಂದದಿರಲಿ ಎನ್ನ ಸನ್ಮತಿ ಎಂದು ಅ.ಪ ವಂದಿಪೆ ನಾ ಮೊದಲಾಳ್ವಾರರಿಗೆ ಅಂದದಿ ಹರಿಯ ತೋರಿಕೊಟ್ಟರಿಗೆ ಕಂದಮಿಳಲಿ ಸೊಲ್ವ ನುಡಿಗಳಿಗೆ ಪ್ರ- ಬಂಧದಿವ್ಯಗಳ ಬೆಳಗಿಸಿದವರಿಗೆ 1 ವಂದಿಪೆ ವಂದಿಪೆ ಆಚಾರ್ಯರಿಗೆ ಚಂದದಾ ಯತಿತ್ರಯರುಗಳಿಗೆ ಸುಂದರ ಶ್ರೀವೈಷ್ಣವ ತತ್ವಗಳನು ಹೊಂದಿಸಿ ಬಂಧಿಸಿ ಸ್ಥಾಪಿಸಿದವರಿಗೆ 2 ಇನ್ನು ವಂದಿಪೆ ಗುರುಪೀಠಕ್ಕೆ ಚೆನ್ನ ತಿರುನಾರಾಯಣಪುರಕೆ ಉನ್ನತ ರಂಗದಾಸಯತಿವರ್ಯಗೆ ಸನ್ನುತ ಪಿತಾನುಜ ಶಾಮದಾಸರಿಗೆ 3 ಸಾಜದಲೆನ್ನಲಿ ಅರಿವನು ಮೂಡಿಸಿ ಓಜನನಾಗಿಸೆ ಕೇಶವ ನಾಮದಿ ಆರ್ಜಿಸಿ ಉಪಾದಾನದಿ ಬಳಲಿದ ಪೂಜ್ಯಪಿತ ವೆಂಕಟರಂಗಾರ್ಯರಿಗೆ 4 ವಂದಿಪೆ ಕೊನೆ ಮೊದಲಿಲ್ಲದೆ ವಂದಿ- ಪೆಂ ದಾಸನ ಮಾಡಿದ ದೇವನಿಗೆ ತಂದೆ ಜಾಜಿಪುರಾಧೀಶನಿಗೆ ಮುದ- ದಿಂದ ಶ್ರೀ ಚೆನ್ನಕೇಶವಗೆ 5
--------------
ನಾರಾಯಣಶರ್ಮರು
ವಂದಿಸು _ ಶ್ರೀ ಹರಿಯ ಪ ಇಂದಿರೆನಾಥ ಮಹೇಂದ್ರ ಪರಾತ್ವರ ಸುಂದರ ಜಗಪಿತ ನಂದ ಮಹೋದಧಿ ಸಿಂಧು ಶಯನ ಅರ- ವಿಂದ ಸುನಾಭ ಮುಕುಂದ ಮುರಾರಿಯ ಅ.ಪ. ವೇದಸುಗೋಚರ _ ಖೇದವಿವರ್ಜಿತ _ ಸಾದರನುತಿಪರ ಖೇದವಿಮೋಚಕ ಮಾಧವ ಗೀತಾ _ ಬೋಧಕ ವಿಧಿಗುರು 1 ನಿರಂಜನ _ ಪಕ್ಷಿ ಧ್ವಜ ಜಗ ಕುಕ್ಷಿ ಪರಾಮೃತ _ ರಕ್ಷಿಸಿ ಜಗವಂ ಭಕಿÀ್ಷಪಧೋಕ್ಷಜ _ ಸಾಕ್ಷಿ ನಿರಪೇಕ್ಷ ಸುಪಕ್ಷನ2 ಸತ್ಯಾಧಾರ ವಿಚಿತ್ರ ಗುಣಾರ್ಣವ _ ಸತ್ಯವ್ರತ ಪುರು ಷೋತ್ತಮ ನಿರ್ಮಲ_ ಸತ್ಯವತೀಸುತ _ ನಿತ್ಯತೃಪ್ತ ಮ ಹಾತ್ಮಜಗಾತತ _ ಭೂತಿದ ಹೃಸ್ಥನ 3 ಭೂಮಿಯ ವರಜಯ ಧಾಮಸಖಖಳಭ್ರಾಮಕ ಕಲ್ಕಿಯೆ4 ಮಾಯಾ ಪರ- ಮೇಷ್ಠ ಜನಕ- ಶ್ರೀ ಕೃಷ್ಣವಿಠಲಪದ ನಿಷ್ಠರ ಸೇರಿ ವಿಶಿಷ್ಠ ಸಮರ್ಪಿಸಿ 5
--------------
ಕೃಷ್ಣವಿಠಲದಾಸರು
ವಂದಿಸುವೆ ನಂದಪುತ್ರ ಇಂದಿರಾಮನೋಹರ ಇಂದಿರಾ ಮನೋಹರ ಪೂರ್ಣೇಂದು ಕೋಟಿ ಸುಂದರ ಪ ನೀಲವಾರಿವಾಹಗಾತ್ರ ಲೋಲಚೇಲ ಭಾಸುರ ಲೋಲ ಚೇಲಭಾಸುರ ವಿಲೋಲ ನೀಲಕುಂತಲ 1 ದೇವ ದೇವಾಧೀಶ ಶೂರ ದೇವಕೀ ಪ್ರಿಯಂಕರ ದೇವಕೀ ಪ್ರಿಯಂಕರ ವಿಭಾವನೈಕ ಗೋಚರ 2 ಧೇನುಪುರ ವರವಿಹಾರಿ ಸೂನಭಾಣ ಜನಕನೆ ಸೂನ ಭಾಣ ಜನಕನೆ ವಿನೋದ ವೇಂಕಟೇಶನೆ 3
--------------
ಬೇಟೆರಾಯ ದೀಕ್ಷಿತರು
ವಂದಿಸುವೆ ಭಾರ್ಗವೀಶ ಸುಂದರಾಂಗ ಲೋಕಾಧೀಶ ಪ ವಂದ್ಯಮಾನ ಪಾದಕಮಲ ಇಂದಿರಾ ಮನೋವಿಹಾರ ಅ ಪ. ಅಷ್ಟಮೂರ್ತಿ ಕಷ್ಟಹರಣ ಕೃಷ್ಣಮೂರ್ತಿ ಶ್ರೀ ಕೇಶವ ದುಷ್ಟದನುಜ ಕುಲವಿನಾಶ ಸೃಷ್ಟಿಪಾಲದೇವಾಧೀಶ 1 ನಿನ್ನ ಪಾದವನ್ನು ಭಜಿಪೆ ಚೆನ್ನಕೇಶವ ಪಾಲಿಸೆನ್ನ ಇನ್ನೂ ಭವದಿ ಶೋಕಗೊಂಬೆ ನಿನ್ನ ಹೊರತಿನ್ಯಾರ ಕಾಣೆ 2 ಪುಟ್ಟ ಧ್ರುವಗೆ ಪಟ್ಟಗಟ್ಟಿ ದಿಟ್ಟತನದಿ ಪೊರೆದ ನೀನು ಕಷ್ಟದಿಂದಜಾಮಿಳನು ಕೂಗೆ ಇಷ್ಟವರವ ನಿತ್ತೆ ದೇವ 3 ಕಾನನದಿ ಸ್ನಾನಗೈದು ಜಪವ ಮಾಡಲಾರೆ ನಾನು ಧೇನುನಗರ ಪತಿಯೆ ನಿನ್ನ ಧ್ಯಾನದಿಂದ ಜ್ಞಾನವೆಂದು 4
--------------
ಬೇಟೆರಾಯ ದೀಕ್ಷಿತರು
ವಂದಿಸುವೆ ಸುಂದರಾಂಗ ನಿಜಸೌಂದರ್ಯಜಿತಾನಂಗ ಬೃಂದಾರಕಾದಿ ಮುನಿ ಬೃಂದವಂದಿತ ಮುಕುಂದ ಗೋವಿಂದ ನಂದ ಮೂರುತಿ ಹರೆ ಪ ದೇವಾದಿ ಜೀವ ಸುಪ್ರಭಾವ ಭಾಸಿತ ಮುಖ ದೇವಕೀ ವಸುದೇವ ಭಾವನಾ ಗೋಚರ 1 ಹಾರಕುಂಡಲ ಮನ ಮಾಲಾವಿರಾಜಿತ ಕ್ಷೀರಾಬ್ದಿ ಕನ್ಯಕಾ ಲೋಲಾ ಮುರಾಂತಕ2 ಧೇನುನಗರ ಪರಿಪಾಲಕ ವೇಂಕಟೇಶ ಸಾನುರಾಗದಿ ಪೊರೆ ಗಾನವಿನೋದ ಹರೆ 3
--------------
ಬೇಟೆರಾಯ ದೀಕ್ಷಿತರು
ವಂದಿಸುವೆನನವರತ ಇಂದಿರೇಶಾ ಪ ನೊಂದು ಬಳಲಿದೆನಯ್ಯ ಸಲಹೋ ಶ್ರೀಶಾ ಅ.ಪ ಇಂದು ನರಜನುಮದೊಳು ನೊಂದೆನಯ್ಯ ಮುಂದಿನಾ ಜನುಮಗಳ ಸಂದಣಿಗಳೊಳು ನಿನ್ನ ಸುಂದರ ಪಾದಾಂಬುಜವನೆಂದೆಂದು ತೋರೆಂದು1 ನರಜನ್ಮ ಹಿರಿದೆಂದು ಅರಿತವರು ಪೇಳುವರು ನರನಾಗಿ ನಾ ಜನಿಸಿ ಗರುವದಿಂದಾ ಸಿರಿಯಾಸೆಯಿಂದ ಮದ ಪರವೈರ ಲೋಭಗಳ ದುರಿತಗಳನಾರ್ಜಿಸಿದೆ ಪೊರೆಯೊ ದೇವ 2 ಕಡುಪಾಪ ಕೂಪದೊಳಗಡಗಿರ್ಪೆನೈ ಹರಿಯೆ ಅಡಿಗಳಿಗೆ ಎಡೆಯಿಲ್ಲ ನುಡಿವರಿಲ್ಲಾ ಪಿಡಿವುದಕೆ ತೃಣವಿಲ್ಲ ದಡಕೆ ದಾರಿಯು ಇಲ್ಲ ತಡವೇಕೆ ಎನ್ನ ಕೈಪಿಡಿಯೊ ಗೋಪಾಲ 3 ಖಗರಾಜ ಪೊತ್ತಿಹನು ಸುಗತಿದಾಯಕನೆಂದು ಹೊಗುಳುವವು ಶೃತಿ ಶಾಸ್ತ್ರ ನಗಧರನೆ ನಿನ್ನತಾ ನಗಪುತ್ರಿ ನುತಿಸಿಹಳು ನಗಬೇಡವೈ ಪಾದಯುಗಗಳನು ತೋರೆಂದು4 ನಿನ್ನ ನಾಮದ ಭಜನೆ ಎನ್ನ ರಸನೆಯೊಳಿರಲಿ ಮುನ್ನಿಗಿಂತೆಂಟುಮಡಿ ಜನುಮ ಬರಲಿ ಮುನ್ನ ನಾವಾರ್ಜಿಸಿದ ಘನಪಾಪನಶಿಸಲಿ ಚೆನ್ನ ಮಾಂಗಿರಿವಾಸ ನನ್ನ ಹೃದಯದೊಳಿರಲಿ5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಂದಿಸುವೆನು ರಘುವರನಾ ಸುರವಂದಿತ ಚರಣಾಂಬುಜನ ಪ ತಂದೆ ಮಾತಿಗೆ ವನಕ್ಹೋಗಿ ಬಂದವನಾಸುಂದರ ಸಹ ಸೀತೆಯಿಂದ ಅನುಜನಾ ಅ.ಪ ಚಾಪ ಭಂಜಕನಾ 1 ವಾರಿಧಿ ಸೇತು ಬಂಧಕನಾ ಸೀತಾ -ಚೋರನ ಶಿರವಳಿದವನಾಚಾರು ಸಿಂಹಾಸನವೇರುತ ಸರಯು -ತೀರದ ಅಯೋಧ್ಯಾ ವಿಹಾರ ಸುಂದರನಾ2 ಕೇಸರಿ ಸುತಗೆ ತನುಧನಮಣಿಆಶ್ರಯವನು ಕೊಟ್ಟವನಾಕೋಸಲ ಜನರಿಗೆ ಮೋಕ್ಷವವಿತ್ತವನಾಇಂದಿರೇಶ ಸುಖಾತ್ಮ ನಿರ್ದೋಷ ಪುರುಷನಾ 3
--------------
ಇಂದಿರೇಶರು
ವಂದಿಸೋ ಎಲೆ ಮಾನವಾ ಮಾಣದೆ ಸದಾ ಒಂದೆ ಮನದಿ ಶ್ರೀವಿದ್ಯಾಮಾನ್ಯ ಮುನೀಂದ್ರರ ಪ ಧರಣಿಯಂದದಿ ಕ್ಷಮಾಭರಿತ ಮಂಗಲದಾತ | ಶರಧಿಯಂದದಿ ದಯಾಗುಣಶೀಲರೋ | ಸುರ ನದಿಯಂದದಿ ದುರಿತಪರಿಹಾರಕರು | ತರಣಿ ಭಾರ ತಿಮಿರನೋಡಿಸುವರೋ 1 ಈಶನಂದದಿ ಜಿತಪೂಶರವರ | ಕಮ | ಲಾ ಸನನಂತೆ ಭೂಸುರ ಶ್ರೇಷ್ಟರು | ಸಾಸಿರ ಮುಖನಂತೆ ಯೋಗಸುಸಾಧಕರು ಭೇಶನಂದದಿ ಸುಧಾಕರರಾಗಿ ತೋರ್ಪರೋ 2 ಶಾಮಸುಂದರವಿಠಲಸ್ವಾಮಿ ಉಪಾಸನೆ | ನೇಮದಿಂದಲಿ ಸತತಗೈಯುತಲಿ ಶ್ರೀಮಧ್ವಾರ್ಯರ ಶಾಸ್ತ್ರ ಸೋಮಪಾನದ ಸುಖ | ಪ್ರೇಮದಿಂದಲಿ ದ್ವಿಜಸ್ತೋಮಕೆಗರೆವರು 3
--------------
ಶಾಮಸುಂದರ ವಿಠಲ
ವಂದೇ ಶ್ರೀ ಗೌರಿನಂದನ ಸುರನರ ವೃಂದವಂದಿತಚರಣ ಗಜಾನನ ಪ. ಶಂಕರೋಲ್ಲಾಸ ಪಾಶಾಂಕುಶಧರ ಕರ ಪಂಕಜ ಸುವಿರಾಜ ರವಿತೇಜ 1 ಜಂಭಾರಿಸಂನುತ ಜಾಹ್ನವೀಧರಸುತ ಲಂಬೋದರ ಸುಂದರ ಕೃಪಾಕರ 2 ಸುಕ್ಷೇಮಧಾಮ ಶ್ರೀ ಲಕ್ಷ್ಮೀನಾರಾಯಣನ ಪಕ್ಷೈಕಪಾವನ ಸುಧೀಷಣ 3
--------------
ತುಪಾಕಿ ವೆಂಕಟರಮಣಾಚಾರ್ಯ
ವಂದೇ ಹಂ ಶ್ರೀವರ ಕರಿವರದಂ ವೃಂದಾರಕನುತ ಸುಂದರಪಾದಂ ಪ ಈಶ ಭಕ್ತ ಭವಪಾಶನಾಶ ವಾಗೀಶ ಜನಕ ಲಕ್ಷ್ಮೀಶ ಪರೇಶ 1 ರಾಮತ್ರಿಜಗದಭಿರಾಮ ನೀರದ ಶ್ಯಾಮ ಸುರಾರಿಸ್ತೋಮ ವಿರಾಮ 2 ವಿಹಂಗ ಗಮನಯದು ಪುಂಗವ `ಹೆನ್ನೆರಂಗ ' ಕೃಪಾಂಗ 3
--------------
ಹೆನ್ನೆರಂಗದಾಸರು
ವಂದೇಹಂ ಕಮಲಾದ್ರಿನಿವಾಸಂ-ಪಲ್ಲವೀಶಂ-ಇಂದೀವರಭಾಸಂಪ ಗಣಾನಂದ ವಿಲಾಸಂ ಅ.ಪ ಪರಿ ಶಿಷ್ಟಶಿಖರಿವಿಹಾರಂ ಅಷ್ಟಮೂರ್ತಿಪರಮೇಷ್ಟಿಸಮರ್ಚಿತ- ಮಷ್ಟಸಿದ್ಧಿದಾತಾರಮುದಾರಂ 1 ಅಂಬುಜಭವಪಿತ ಮಂಬುಜ ಪತ್ರ ವಿಡಂಬಿನಯನ ಯುಗಳಂ ಘಟ ಚರಣಾಂಬುಜಯುಗಳಂ 2 ನಂದ ಗೋಕುಲಾನಂದ ಕಾರಣ ನಂದೋಪವರ ಕರುಣಂ ಮಂದಹಾಸ ವಿಜಿತೇಂದು ಕಿರಣಮತಿ- ಸುಂದರಾಂಗಮಾನಂದ ವಿತರಣಂ 3 ಮೋಹನ ವೇಣುನಿನಾದಂ ಲಲನಾಜನಸಂಮಿಳಿತವಿನೋದಂ 4 ಧರಣೀಭರ ಪರಿಹರಣೋಚಿತವರ ಕರುಣಾಯತನಿಜವೇಷಂ ವಿಠಲಾ ನತಪದ ಶರಣ ಸುಪೋಷಂ 5
--------------
ಸರಗೂರು ವೆಂಕಟವರದಾರ್ಯರು
ವಧು ವರರ ಯದ್ಧರಿಸೊ ಉದಧಿಶಯನ ಒದಗಿಸುತಲಾಯುರಾರೋಗ್ಯ ಸುಜ್ಞಾನ ಪ ಯತಿಪೂಜೆ ಕ್ಷಿತಿದೇವ ತತಿಸೇವೆ ತಿಥಿತ್ರಯದ ವೃತನೇಮ ಮೊದಲಾದ ಸತ್ಕಕರ್ಮವ ಮತಿಯಿಂದ ಗೈಯುತಲಿ ಪತಿತಪಾವನ ನಿನ್ನ ಕಥೆಗಳನು ಕೇಳ್ವದಕೆÉ ರತಿಯಿತ್ತು ಪ್ರತಿದಿನದಿ 1 ಹಿರಿಯರಲಿ ವಿಶ್ವಾಸ ಗುರುಮುಖದಿ ಉಪದೇಶ ಮರುತ ಸಚ್ಛ್ಯಾಸ್ತ್ರದಔಯಾಸವ ಸ್ಥಿರವಾದ ಮನವಿತ್ತು ಮರಿಯದಲೆ ಮಾರಮಣ 2 ಸಾಮಗಾನವಿಲೋಲ ಶಾಮಸುಂದರವಿಠಲ ಸ್ವಾಮಿಮನ್ನಿಸಿ ಎನ್ನ ಎನ್ನ ವಿಜ್ಞಾಪನೆ ಯಾಮಯಾಮಕೆ ನಾಮಸುಧೆಯನು ಸವಿಪ ಈ ಮಹಾಸುಖ ಗರೆದು ಪ್ರೇಮದಿಲಿ ಕೈಪಿಡಿದು 3
--------------
ಶಾಮಸುಂದರ ವಿಠಲ
ವನಜಾತಾಂಬಕತೇನಮೋನಮೋ ಪ ಪುರುಹೂತ ಸಹೋದರ ನಮೋನಮೋ ಅ.ಪ ನಮೋನಮೋ ನಮೋನಮೋ 1 ರಾಮಯ ನಿರ್ಮಲ ನಮೋನಮೋ ಮುಜ್ವಲ ನಮೋನಮೋ 2 ಸುಂದರ ನಮೋನಮೋ ನಮೋ ನಮೋ 3 ನಮೋನಮೋ ನಮೋನಮೋ 4 ನಮೊನಮೋ ನಮೋನಮೋ 5
--------------
ಸರಗೂರು ವೆಂಕಟವರದಾರ್ಯರು
ವರದ ನರಹರಿ ವಿಠಲ | ಪೊರೆಯ ಬೇಕಿವಳ ಪ ಕರಿವರದ ಶ್ರೀ ಹರಿಯೆ | ಕರುಣಿ ನೀನೆಂದರಿತುಮೊರೆಯಿಡುವೆ ನಿನ್ನಡಿಗೆ | ಮರುತಾಂತರಾತ್ಮಾ ಅ.ಪ. ದಾಸದೀಕ್ಷೆಯಲಿ ಮಹ | ದಾಶೆಯನು ಉಳ್ಳವಳಲೇಸಾಗಿ ಕೈಪಿಡಿದು | ನೀ ಸಲಹ ಬೇಕೋವಾಸವಾನುಜ ದಾಸ | ವೇಷದಿಂ ಸ್ವಪ್ನದಲಿಸೂಸಿ ಸೂಚಿಸಿದ ಉಪ | ದೇಶವಿತ್ತಿಹೆನೋ 1 ಮಧ್ವಮತ ಪದ್ಧತಿಗ | ಳುದ್ಧರಿಸಿ ಇವಳಲ್ಲಿಶ್ರದ್ಧೆಯಿಂ ತವಪಾದ | ಪದ್ಮಗಳ ಭಜಿಸೇಶುದ್ಧ ತತ್ವ ಜ್ಞಾನ | ಸದ್ಭಕ್ತಿ ವೈರಾಗ್ಯಮಧ್ವಾಂತರಾತ್ಮ ಅನಿ | ರುದ್ಧ ಪಾಲಿಪುದೋ 2 ಪತಿಯ ಕೈಂಕರ್ಯವನು | ಹಿತದಿಂದ ಮಾಳ್ಪಂಥಮತಿಯ ನೀ ಕರುಣಿಸುತ | ಕೃತ ಕೃತ್ಯಳೆನಿಸೋಕ್ಷೀತಿಭಾರಹರಣ ಶ್ರೀ | ಪತಿಯೆ ನೀ ಒಲಿದಿವಳಅತುಳ ವಿಭವದಿ ಮೆರೆಸಿ | ಗತಿಪ್ರದನು ಆಗೋ 3 ಸಂತತದಿ ತವನಾಮ | ಚಿಂತಿಸುವ ಸೌಭಾಗ್ಯವಂತೆಯೆಂದೆನಿಸಿವಳ | ಕಾಂತೆಯ ಸಖನೇಅಂತರಾತ್ಮಕ ನೀನೆ | ಅಂತರಂಗದಿ ತೋರಿಸಂತಸವ ನೀಡಯ್ಯ | ಪಂಥಭಿಧ ಹರಿಯೇ 4 ಸರ್ವಜ್ಞ ಸರ್ವೇಶ | ಸರ್ವವ್ಯಾಪಕ ದೇವನಿರ್ವಿಕಾರನೆ ಹರಿಯೆ | ದುರ್ವಿ ಭಾವ್ಯಾಸರ್ವವಿಧ ಪರತಂತ್ರ | ದರ್ವಿ ಜೀವಿಯ ಕಾಯೋಸರ್ವಸುಂದರ ಗುರೂ ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವರದಾತೀರದಿ ನೆಲಸಿಹ ಗುರುವರನ್ಯಾರೆ ಪೇಳಮ್ಮಯ್ಯ ಪ ವರದಾಯ ಶ್ರೀ ರಾಘವೇಂದ್ರರ ಕರುಣ ಪಡೆದ ಸುಶೀಲೇಂದ್ರ ಮುನಿಪನೆ ಅ.ಪ ದರಪೋಲುವ ಕಂಧರದಿ ತುಲಸಿ ಮಣಿಹಾರ | ಪೇಳಮ್ಮಯ್ಯ ಅರಶಶಿಸಮ ಸುವಿಶಾಲ ಫಾಲದಲಿ ತಿಲಕ ಪೇಳಮ್ಮಯ್ಯ ಪರಿ ಪರಿ ವಿಭವದಿ ಮೆರೆದ ಕರುಣವರ ಪುಣ್ಯ ಪುರುಷನ 1 ಮಾರ್ಗಣ ತೃಣ ಸಮವೇಣಿಸಿಹನು ಪೇಳಮ್ಮಯ್ಯ | ಅನಿಮಿಷ ಲೋಚನೆ ಅನುಮಾನಿಸದಿರು ಅನಿಮಿಷಾಮಶರಿವರನನುದಿನ ಸೇವಿಸು 2 ಯತಿ ಶಿರೋಮಣಿ ಧೀರೇಂದ್ರರ ಹಿತಕತಿ ಪಾತ್ರ ಪೇಳಮ್ಮಯ್ಯ ಅತುಳ ಮಹಿಮೆ ಸುಕೃತೀಂದ್ರ ಹೃದಯಶತಪ್ರ ಪೇಳಮ್ಮಯ್ಯ ಸತತ ರವಿ ಎನಿಸಿ ಶಾಮಸುಂದರನ ಅತಿ ಭಕುತಿಲಿ ತುತಿಪ ಗುಣನಿಧಿ 3
--------------
ಶಾಮಸುಂದರ ವಿಠಲ