ಒಟ್ಟು 42091 ಕಡೆಗಳಲ್ಲಿ , 138 ದಾಸರು , 11652 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರಗೊಡವೆ ನಮಗಿನ್ಯಾಕೊ ಹರಿ ಅ ಪಾರ ಮಹಿಮನ ದಯವೊಂದೆ ಸಾಕೊ ಪ ಮಾರಿಗೀರಾಗಲಿ ದೂರಿ ಸಕಲರೆನ್ನ ಸಾರಸಾಕ್ಷನ ಬಲವೊಂದೆ ಬೇಕೊ ಅ.ಪ ಜಗಜನ ಕಂಡಂತೆ ಬೊಗಳಲಿ ಬೊಗಳಿ ಬೊಗಳಿ ನಮ್ಮ ಶಪ್ಪರಿಯಲಿ ನಿಗಮಾಗಮನುತ ಜಗಜೀವೇಶನ ಸೊಗಸಿನ ಕೃಪೆಯೊಂದೆ ನಮಗಿರಲಿ 1 ದುರುಳ ಕೃತ್ತಿಮನೆಂದು ಜರಿಯಲಿ ಜರಿಜರಿದು ಮರೆದ್ಹೋಗಲಿ ಚರಣದಂತಿ ಪರಮ ಪಾವನಂಘ್ರಿ ಕರುಣಾಮೃತವೊಂದೆ ನಮಗಿರಲಿ 2 ಕ್ಷೇಮ ತುಸು ಕಾಣದಳಿದ್ಹೋಗಲಿ ಕಾಮಜನಕ ನಮ್ಮ ಸ್ವಾಮಿ ಶ್ರೀರಾಮನ ನಾಮಧ್ಯಾನವೊಂದೇ ನಮಗಿರಲಿ 3
--------------
ರಾಮದಾಸರು
ಆರತಿ ಎತ್ತಿರೆ ವೈಯ್ಯಾರಿಯರರಸಗೆ ಶ್ರೀ ರಮಾಕಾಂತ ಶ್ರೀ ಶ್ರೀನಿವಾಸನಿಗೆ ಪ ಕೇಶವ ನಾರಾಯಣ ಮಾಧವನಿಗೆ ಶ್ರೀಶ ಗೋವಿಂದ ವಿಷ್ಣು ಮಧುಸೂದನಗೆ ಆಸೆಲಿ ತ್ರಿವಿಕ್ರಮ ವಾಮನ ಶ್ರೀಧರಗೆ ಸÉೂೀಸಿಲಿ ಹೃಷಿಕೇಶ ಪದ್ಮನಾಭನಿಗೆ 1 ಧರಣಿಜಪತಿ ದಾಮೋದರ ಸಂಕರ್ಷಣನಿಗೆ ವಾಸುದೇವ ಪ್ರದ್ಯುಮ್ನ ಅನಿರುದ್ಧನಿಗೆ ಅಧೋಕ್ಷಜ ನಾರಸಿಂಹಗೆ ಸರಸಿಜಾಕ್ಷ ಅಚ್ಚುತ ಜನಾರ್ದನಗೆ2 ಮಮತೇಲಿ ಸುಜನರ ಪೊರೆವ ಉಪೇಂದ್ರನಿಗೆ ಶ್ರಮ ಪರಿಹರಿಸುವ ಹರಿ ಶ್ರೀ ಕೃಷ್ಣನಿಗೆ ಕಮಲದಳಾಕ್ಷಗೆ ಕಮನೀಯ ರೂಪಗೆಕಮಲನಾಭವಿಠ್ಠಲಗೆ ತರುಣಿಯರು 3
--------------
ನಿಡಗುರುಕಿ ಜೀವೂಬಾಯಿ
ಆರತಿ ಗುರುರಾಯಾ :ಸ್ವಾನಂದ ಚಂದ್ರೋದಯಾ ದೋರಲು ಭವತಾಪಾ :ಹೋಯಿತು ನಿಶ್ಚಯಾ ಪ ಚಿತ್ತಚಕೋರಕಿಂದು :ಬೋಧಾಮೃತವನುಣಿಸೀ ಮತ್ತಹೃದಯನೈದಿಲಿಗೆ :ಸುಖವಿತ್ತೆ ಕರುಣಿಸಿ 1 ಜ್ಞಾನಚಂದ್ರ ಕಾಂತಿಯಲ್ಲಿ :ರಾಮರಸವಿಸೀ ತಾನೇಪದ ರೂಪದಿಂದಾ :ನೆಲಿಸಿತು ಧನ್ಯಗೈಸಿ 2 ಶರಧಿ :ಹೊರಚೆಲ್ಲಿ ತೈಯಿಂದು ತಂದೆ ಮಹಿಪತಿ ಸ್ವಾಮಿ :ಕಂದನುದ್ಧರಿಸೆಂದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆರತಿ ಬೆಳಗುವೆ ವಾರಿಧಿಶಯನಗೆ ಮಾರನಪಿತನಿಗೆ ನಾರದಸುತಗೆ ಪ ಸಾರಸನಾಭಗೆ ನೀರಜಗಾತ್ರಗೆ ಶ್ರೀರಮೆಯರಸಗೆ ನಾರಿಯರೊಡನೆ ಅ.ಪ ಮುರಳಿಯನೂದುವ ತರಳ ಶ್ರೀಕೃಷ್ಣಗೆ ಶರಣರ ದುರಿತವ ಪರಹರಿಸುವಗೆ ಕರುಣಜಲಧಿ ಮಾಂಗಿರಿರಂಗಯ್ಯಗೆ ಸರಸತಿ ಪಾರ್ವತಿ ತರುಣಿಯರೊಡನೆ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಆರತಿ ಬೆಳಗುವೆ ಶ್ಯಾಮಸುಂದರ ಶ್ರೀ ಮಾರಜನಕನಿಗೆ ಮುದದಿಂದ ಪ ಮೂರುತಿ ಪರಮನಿಗೆ ಅ.ಪ ಭವ ಶರಣರಿಗೊಲಿಯುವ ಶಾಂತನಿಗೆ ಮೃಗಮದತಿಲಕದ ಮುಖದವಗೇ1 ಒಲೆವ ಮುತ್ತು ರತ್ನದ ಮಾಲೆಗಳ ಒಲಿದುಧರಿಸಿಹ ವೈಜಯಂತಿಯಲಿಲ ನಲಿಯುವ ಪಂಕಜನಾಭನಿಗೆ 2 ಪರತರ ಪದ್ಮವ ಪಿಡಿದಿರುವ ಕಿರು ನಡುಗೊಡ್ಯಾಣವ ನಿಟ್ಟಿಹಗೇ 3 ಶಿರಮಣಿ ಪಚ್ಚೆಯ ಪದಗಳಿಗೆ ಜಾಜೀಶ ಕೇಶವಗೆ4
--------------
ಶಾಮಶರ್ಮರು
ಆರತಿ ಬೆಳಗುವೆನಾ | ಅಸುರವಂದ್ಯಗೆ ಕಾರುಣ್ಯ ವೇದವ್ಯಾಸ ಮುಕುಂದಗೆ ಪ ಸತ್ಯವತೀ ಸುತನಾಗ್ಯವತರಿಸಿದ | ಸತ್ಯ ಸನಾತನ ಮೂರುತಿಗೆ 1 ಅಖಿಲದೋಳಗೆ ಭಾರತ ಭಾಗವತವ ಸಕಲ ಪುರಾಣವ ರಚಿಸಿದವಗೆ 2 ತಾನಿಜಗತಿ ಪದ ದೋರಿದಗೆ 3 ಶರಣಜನರಿಷ್ಟಾರ್ಥವ ನೀಡುತ ಗುರುಮಹೀಪತಿಸುತ ಸಾರಥಿಗೆ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆರತಿ ಮಾಡೆ ನೀರೆ ಭಾರತಿ- ಗಾರತಿ ಮಾಡೆ ನೀರೆ ಗಾರತಿ ಮಾಡೆ ನೀರೆ ಪ ಅರಸು ಭೀಮರಾಯಗ್ಹೊಂದಿ ಕುಳಿತಿರೆ ಕೃಷ್ಣೆ ಅರಿಷಿಣ ಕುಂಕುಮ ಹಚ್ಚಿ ಹರುಷದಿ ದ್ರೌಪದಿ1 ಸುಂದರ ಭೀಮಸೇನ ತಂದ ಸುಗಂಧ ಕುಸುಮ ಗಂಧ ಪರಿಮಳ ಹಚ್ಚಿ ಮುಡಿಸಿ ಮಲ್ಲಿಗೆ ಕೃಷ್ಣೆ 2 ವಾಸವಾಗಿ ಬೊಮ್ಮಗಟ್ಟಿಲಿ ಕುಳಿತ ಭೀ - ಸತಿ 3
--------------
ಹರಪನಹಳ್ಳಿಭೀಮವ್ವ
ಆರತಿಪದ ಆರುತಿಯ ಮಾಡುವೆನೆ ಮಾರಜನನಿಯೆ ಲಕ್ಷ್ಮೀ ಪ ಭಂಗಾರದ ತಾಟಿನೊಳು ಶೃಂಗಾರದಾರುತಿ ಪಿಡಿದುರಂಗನಂಗನೀಯ ಲಕ್ಷ್ಮೀ ಮಂಗಳ ಪದವಪಾಡಿ 1 ಮುತ್ತಿನಾರತಿ ನಿನಗೆ ಎತ್ತಿನಿಂತೆನೆ ತಾಯಿಭಕ್ತಹೃದಯೆ ಇತ್ತಕಡೆ ನೋಡೆ ದೇವಿ 2 ಇಂದಿರೇಶನ ರಾಣಿ ಸುಂದರ ಸರೋಜವದನೆಇಂದುರಂಗ ರಾಮಕೃಷ್ಣರನ್ನು ತೋರಿಸಮ್ಮಾ ರಾಮೆ 3
--------------
ಇಂದಿರೇಶರು
ಆರತಿಯನು ಎತ್ತಿರಮ್ಮ ವರ ಮಹಾಲಕ್ಷುಮಿಗೆ ಚಾರುಮತಿಗೆ ವರವನಿತ್ತಪಾರ ಕರುಣಾಂಬುಧಿಗೆ ಪ ಶ್ರಾವಣ ಶುಕ್ರವಾರದಲಿ ಸಾವಧಾನ ಮನದಿ ನಿತ್ಯ ಸೇವಿಸುವರಿಗೊಲಿದು ಭಾಗ್ಯವೀವ ಮಹಾಲಕ್ಷುಮಿಗೆ 1 ಹೆತ್ತತಾಯಿ ತನ್ನ ಶಿಶುವನರ್ಥಿಯಿಂದ ಸಲಹುವಂತೆ ಭೃತ್ಯವರ್ಗವನ್ನು ಪೊರೆದು ನಿತ್ಯಲೋಕ ಮಾತೆಗೀಗ 2 ಚಿಂತಿತಾರ್ಥನೀವ ಲಕ್ಷ್ಮೀಕಾಂತನುರ ಸ್ಥಳದಿ ನಿಂತು ದಂತಿವರದನನಂತ ಗುಣಗಳನಂತಗಾಣದಿರುವಳಿಗೆ 3
--------------
ಲಕ್ಷ್ಮೀನಾರಯಣರಾಯರು
ಆರತಿಯನು ನಾನು ಬೆಳಗುವೆ ನಮ್ಮಪ್ರೇರಿಪ ಪ್ರಭುವ ಪಡೆವೆನೆಂಬ ಪವಿಷಯಂಗಳಾರತಿ ವಿಸ್ತರಿಸಲು ಬಹುವಿಷಮಮಾರ್ಗವ ಕಾಬ ವೊಡಲಿತ್ತವುವಿಷವಾುತಾ ಸುಖ ವಿವಿಧ ಭೋಗಂಗಳುಮೃಷೆಯೆಂದು ಹರಿಯನ್ನೆ ಮಚ್ಚಿಕೊಂಬ 1ಲೋಕಂಗಳೈದಲು ಲೋಪವಾದವುಯೆಲ್ಲಸಾಕಾುತವರಲ್ಲಿ ಸಂಚರಿಸಿಈ ಕುಹಕವ ನಂಬಲೆಲ್ಲವು ಬಹು ದುಃಖಶ್ರೀಕಾಂತನ ಕೂಡಿ ಸುಖವಿರುವ 2ಹದಿನಾಲ್ಕು ಕರಣದ ಹವಣಿನಾರತಿಯಲ್ಲಿಹುದುಗಿಸಿ ಜ್ಞಾನದ ಹೊಸ ದೀಪವಹೃದಯಕಮಲದಲ್ಲಿ ಹೊಂದಿಹ ತಿರುಪತಿಸದನ ವೆಂಕಟಗೆತ್ತಿ ಸುಖಿಯಾಗುವ 3ಓಂ ಶಿಶುಪಾಲ ಶಿರಶ್ಛೇತ್ರೇ ನಮಃ
--------------
ತಿಮ್ಮಪ್ಪದಾಸರು
ಆರತಿಯನೆತ್ತಿರಿ ಅಚ್ಯುತನಿಗೆ ಅನಂತನಿಗೆ ಗೋವಿಂದನಿಗೆ ಪ ಕಾಲ ನಿಯಾಮಕ ಕಾಲೋತ್ಪಾದಕ ಕಾಲಾತ್ಮನಿಗೆ1 ನೊಂದು ಕೌಂಡಿಣ್ಯನು ಮುಂದೋರದಲಿರೆ ಕರವ ಪಿಡಿದಾನಂದವಿತ್ತಗೆ 2 ಸಂತತ ನಡೆಯುವರಂತರ ಬಿಡಿಸುವ- ನಂತ ಮಹಿಮ ಜಯವಂತ ಶ್ರೀಕಾಂತಗೆ 3
--------------
ಲಕ್ಷ್ಮೀನಾರಯಣರಾಯರು
ಆರತಿಯನೆತ್ತಿರೆಲ್ಲ ಆನಂದಗೆಆರತಿಯನೆತ್ತಿರೆಲ್ಲ ಸ್ವಾನಂದಗೆ ಪ ಸದನ ಸದನ ಬಿಟ್ಟಿಹಗೆತೋರುತಿಹ ಬ್ರಹ್ಮರಂಧ್ರ ತುರೀಯ ರೂಪಗೆ 1 ಕಣ್ಣಿನೊಳಗೆ ಕಣ್ಣು ತೆರೆದು ನಿರೀಕ್ಷಿಪಗೆಕಣ್ಣ ಬೊಂಬೆಯೊಳಗೆ ಕುಳಿತು ನೋಡುತಿಹಗೆಭಿನ್ನವಿಲ್ಲದ ಆನಂದ ಸುಖದಿ ರಮಿಸುತಿಹನಿಗೆಹೊನ್ನ ತಗಡಿನಂತೆ ಥಳಥಳಿಸುತಿಹಗೆ 2 ಉಕ್ಕುವ ತೇಜಗಳೆಲ್ಲ ತಾವೊಂದಾಗಿ ಕೂಡಿಮಿರು ಹರಿವ ಬೆಳದಿಂಗಳಂತೆಯಿಹಗೆಲೆಕ್ಕವಿಲ್ಲದಲೆಯುತಿಹ ಸುಖದ ರಾಶಿಗೆಮುಕ್ತಿ ಮೂರುತಿ ಶ್ರೀ ಚಿದಾನಂದ ಗುರುವಿಗೆ 3
--------------
ಚಿದಾನಂದ ಅವಧೂತರು
ಆರತಿಯನೆತ್ತುವೆ ಪ ಸಾರಸನೇತ್ರಗೆ ಮುತ್ತಿನ ಅ.ಪ ನೀಡುತ್ತಯನ್ನನು ಕೂಡಿ ಸುಖಪಡಿಸುವವಗೆ 1 ಅನುದಿನದಲಿ ಎನ್ನ ಘನ ಬೋಧೆ ಪೇಳುವವಗೆ 2 ಪಾಮರತ್ವವ ಬಿಡಿಸಿ ಕ್ಷೇಮಾವಕೊಡುವ ಗುರು ರಾಮ ವಿಠ್ಠಲನಿಗೆ 3
--------------
ಗುರುರಾಮವಿಠಲ
ಆರತಿಯನೆತ್ತುವೆನು ವಾರಿಜಾಕ್ಷ ಕೃಷ್ಣ ನಿನಗೆ ಪ ಮಾರಸುಂದರ ಮೋಹನಾಂಗ ಸಾರಸಾಕ್ಷ ಕೃಪಾಪಾಂಗ ಕಮಲ ನಯನ ಹರಿಯೆ ನಿನಗೆ ವಿಮಲಮುತ್ತಿನ ಆರತಿಯ ಕಮಲ ಮುಖಿಯು ಕರದಿ ಪಿಡಿದು ಕಮಲವದನ ಕೃಷ್ಣ ನಿನಗೆ 2 ಜಾಣ ಪ್ರಾಣನಾಥ ವಿಠಲ ಆಣಿ ಮುತ್ತಿನ ಆರತಿಯ ಜಾಣತನದಿ ಕರದಿ ಪಿಡಿದು ಪ್ರಾಣಕಾಂತ ಕೃಷ್ಣ ನಿನಗೆ 3
--------------
ಬಾಗೇಪಲ್ಲಿ ಶೇಷದಾಸರು
ಆರತಿಯೆತ್ತಿದರು ಅಪ್ರಮೇಯಗೆ ಪ ಸಾರಸಮುಖಿಯರು ಸಂತೋಷದಿಂದ ಅ.ಪ ತರಳಗೋಸುಗ ಕಂಬ ಬಿರಿದು ಅವತಾರಗೈದು ದುರುಳನುದುರವ ಸೀಳಿ ಕರುಳ ಧರಿಸಿದವಗೆ 1 ದಾದಿ ಕಾರಣ ಪೂರ್ಣ ಭೋದಾಮೃತಮಯಗೆ 2 ಕಾಮುಕರನು ಕೊಂದು ಭೂಮಿ ಭಾರವನಿಳುಹಿ ಸ್ವಾಮಿಯಾಗಿ ಮೆರೆವ ಶ್ರೀ ಮನೋಹರನಿಗೆ 3 ಸ್ವಸ್ತಿಯಾಗಲಿ ಎಂದು ಹಸ್ತಿನಿಯರು | ಹವಳದ 4 ಕಿಂಕರ ಜನಮನ ಸಂಕಟಹರ ನಿಷ್ಕ ಳಂಕ ನೀನೆನ್ನುತ ಶಂಕಿನಿಯರು | ರತ್ನದ 5 ಭೃತ್ಯವತ್ಸಲನೆಂದು ಚಿತ್ತಿನಿಯರು | ಮುತ್ತಿನ 6 ಕುಂದಣ 7 ಸೌಪರ್ಣಿ ವಾರುಣಿ ರ್ವಾಣಿÉ ಸ್ಮರನ ರಾಣಿ ಯಿಂದ್ರಾಣಿ ಮುಖ್ಯರು | ಹುವ್ವಿನ 8 ಪುರಹರ ವೈರಿ ಮುಖ್ಯ ಸುರವಂದ್ಯ ಶರಣ ಶ್ರೀ ಗುರು ರಾಮವಿಠಲಗೆ 9
--------------
ಗುರುರಾಮವಿಠಲ