ಒಟ್ಟು 39871 ಕಡೆಗಳಲ್ಲಿ , 136 ದಾಸರು , 11580 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿವ ದರುಶನ ವೆನಗಾಯಿತೂ | ನಮ್ಮಭವ ಭಯ ಪರಿಹರ ವಾಯಿತು ಪ ಹತ್ತು ಮತ್ತೊಂದೆಂಬ | ಇಂದ್ರಿಯದಭಿಮಾನಿಭಕ್ತರಿಗ್ಹರಿಯಲಿ | ಸಕ್ತಿಯ ಕೊಡುವಾ |ಉತ್ತಮ ತ್ರಯ ವೇದ | ಗ್ರಂಥವ ಪಠಿಸುತ್ತಹಸ್ತಗಳಭಿನಯ | ವಿಸ್ತರಿಸಿರುವಂಥ 1 ಮೂರ್ತಿ ಕರ್ತು ಶ್ರೀ ಹರಿ ಎಂಬಉತ್ತಮೋತ್ತಮ ಮತಿ | ಇತ್ತು ಪಾಲಿಪುದಯ್ಯ 2 ದುರಿತ ನಿಚಯವಪರಿಹರವರಿದಲ್ಲ | ಕರುಣಿ ಮೃತ್ಯುಂಜಯಕರುಣದಿ ತೋರೊ ಗುರು | ಗೋವಿಂದ ವಿಠಲನ 3
--------------
ಗುರುಗೋವಿಂದವಿಠಲರು
ಶಿವ ಮಹದೇವಗೆ ಶರಣೆಂಬೆನಾ ಮಾಯಾ ಶಿರ ಮಾಲಾಧರನಿಗೆ ಶರಣೆಂಬೆ ನಾ ಪ ಪಾರ್ವತಿ ರಮಣಗೆ ಶರಣೆಂಬೆ ನಾ ಭವತಾಪ ಸಂಹಾರಗೆ ಶರಣೆಂಬೆನಾ ಸರ್ವಕಾಲ ಬಿಡದೆ ಶರಣೆಂಬೆನಾ ಸಾಧು ಸಜ್ಜನರ ಪೊರೆವಗೆ ಶರಣೆಂಬೆನಾ 1 ನಂದಿವಾಹನಗೆ ಶರಣೆಂಬೆನಾ ನಾಗ ಭೂಷಣಗೆ ಶರಣೆಂಬೆನಾ ಸುಂದರ ಮೂರ್ತಿಗೆ ಶರಣೆಂಬೆನಾ ಸುರಮುನಿ ವಂದ್ಯಗೆ ಶರಣೆಂಬೆನಾ 2 ಗಜಚರ್ಮಧಾರಿಗೆ ಶರಣೆಂಬೆನಾ ಕೈಲಾಸ ವಾಸಿಗೆ ಶರಣೆಂಬೆನಾ ಭಯನಾಶ ಮಾಡ್ವವಗೆ ಶರಣೆಂಬೆನಾ ಭಕ್ತಿಭಾವ ಮಾನಸನಿಗೆ ಶರಣೆಂಬೆ ನಾ 3 ಲಯಕರ್ತ ಮೂರ್ತಿಗೆ ಶರಣೆಂಬೆನಾ ಕೈಲಾಸವಾಸಿಗೆ ಶರಣೆಂಬೆನಾ ಭಯನಾಶಮಾಡ್ವವಗೆ ಶರಣೆಂಬೆನಾ ಭಕ್ತಿಭಾವ ಮಾನಸನಿಗೆ ಶರಣೆಂಬೆ ನಾ 4 ಆಕಾರಶೂನ್ಯ ಪರೇಶಗೆ ಶರಣೆಂಬೆನಾ ಅಖಿಲಾಕಾರ ತಾನೆಂಬಗೆ ಶರಣೆಂಬೆನಾ ಲೋಕದೋಳ್ ಭಕ್ತರ ಪೊರೆವಗೆ ಶರಣೆಂಬೆನಾ ಶ್ರೀಲೋಲ ಹೆನ್ನೆವಿಠ್ಠಲ ಪ್ರಿಯಗೆ ಶರಣೆಂಬೆನಾ 5
--------------
ಹೆನ್ನೆರಂಗದಾಸರು
ಶಿವ ಶಿವ ನಿಮ್ಮ ನಾಮ ಅಡಿಗಡಿಗೆ ಬೇಕು ಪರಿಯಂತ ತಾನೊಂದೆ ಸಾಕು ಪ ಜಗವೆಲ್ಲ ಶಿವ ಮಯವು ಎಂದು ಕಾಣಲು ಬೇಕು ನಿಗಮ ದೂರನ ಹೃದಯ ದೊಳಗರಸಬೇಕು ಬಗೆಯರಿತು ಮಾನಸದಿ ಶಿವನ ಪೂಜಿಸಬೇಕು ನಿಗಮಾಗಮಸ್ತುತನ ಅಡಿಗೆರಗಬೇಕು 1 ಅನವರತ ಶಿವಮಂತ್ರವನು ಜಪಿಸುತಿರಬೇಕು ತನುಮನವ ವಸ್ತುವಿನೊಳಗಿರಿಸಬೇಕು ಘನ ಪರಂಜ್ಯೋತಿ ಸ್ವರೂಪವ ನರಿಯ ಬೇಕು ತನುಮಯ ಚಿದಂಬರನ ಕೂಡಬೇಕು 2 ನಾನು ನಾನೆಂದೆಂಬ ಹಮ್ಮ ಬಿಡಬೇಕು ಜ್ಞಾನಾಗ್ನಿಯಿಂದ ಜ್ಞಾನವನು ಸುಡುಲುಬೇಕು ಪವಮಾನ ಸುತ ಕೋಣೆ ಲಕ್ಷ್ಮೀಪತಿಯ ಕಡುಮಿತ್ರನಾದ ವನ ಪಾದವನು ಕೊಡಬೇಕು 3
--------------
ಕವಿ ಪರಮದೇವದಾಸರು
ಶಿವ ಶಿವ ಶಂಕರ ಮಹಾದೇವ ಭವ ಭಯಹರ ನಮೋ ಸದಾಶಿವ ಪ ಕಮನೀಯಾನನ ಸುಮನಸಪಾಲನ ಉಮೆಯ ರಮಣ ಘನಸುಮಶರದಹನ ವಿಮಲವಿಲೋಚನ ಶಮಾ ದಮಾ ಭವನ ಪ್ರಮಥಗಣಾನನ ಪಾವನಸದನಾ 1 [ಬಾಲ ಗಣಪಪಿತ ಸರ್ವೇಶ್ವರಾ] ನೀಲಕಂಠ ಸೋಮಶೇಖರಾ ಶೂಲಪಾಶಕರ ಫಾಲಾಂಬಕಹರ ಕರುಣಾಲವಾಲ ಹರ 2 ಸನ್ನುತ ಪಾವನಚರಣ ಸಕಲ ದನುಜಗಣ ಜೀವನಹರಣ ಸಕಲಾನತ ಮಾಂಗಿರಿಪತಿ ಕರುಣ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶಿವ ಶಿವ ಶಿವ ಎನ್ನಿರೊ - ಮೂಜಗದವರೆಲ್ಲಶಿವ ಶಿವ ಶಿವ ಎನ್ನಿರೊ ಪ ಆಗಮ ಸಿದ್ಧಾಂತ ಮೂಲದ ಜಪವಿದು ಶಿವಶಿವಶಿವ ಎನ್ನಿರೋ - ನಿಮ್ಮರೋಗದ ಮೂಲವ ಕೆಡಿಪ ಔಷಧವಿದು ಶಿವಶಿವಶಿವ ಎನ್ನಿರೊ 1 ಮನುಜ ಜನ್ಮದಿ ಹುಟ್ಟಿ ಮೈಮರೆದಿರಬೇಡಿ ಶಿವಶಿವಶಿವ ಎನ್ನಿರೋ - ನಿಮ್ಮತನುಮನ ಪ್ರಾಣವ ವ್ಯರ್ಥವ ಮಾಡದೆ ಶಿವಶಿವಶಿವ ಎನ್ನಿರೊ 2 ಅಪರಾಧಕೋಟಿ ತ್ಯಜಿಸಬೇಕಾದರೆ ಶಿವಶಿವಶಿವ ಎನ್ನಿರೋ - ಮುಂದೆಉಪಮಿತರೋರ್ಮಿತರರಿಯದ ಜಪವಿದು ಶಿವಶಿವಶಿವ ಎನ್ನಿರೊ3 ಜವನ ಬಾಧೆಯ ನೀವು ಜಯಿಸಬೇಕಾದರೆ ಶಿವಶಿವಶಿವ ಎನ್ನಿರೋ - ನಿಜಸವಿಮಲ ಮುಕ್ತಿಯ ಪಡೆಯಬೇಕಾದರೆ ಶಿವಶಿವಶಿವ ಎನ್ನಿರೊ 4 ಭುವನಕೆ ಬಲ್ಲಿದರಾಗಬೇಕಾದರೆ ಶಿವಶಿವಶಿವ ಎನ್ನಿರೋ - ನೀವುಭವನ ಪದವಿಯನು ಪಡೆಯಬೇಕಾದರೆ ಶಿವಶಿವಶಿವ ಎನ್ನಿರೊ 5 ಗುರುಲಿಂಗ ಜಂಗಮವ ಅರಿಯಬೇಕಾದರೆ ಶಿವಶಿವಶಿವ ಎನ್ನಿರೋ - ಮುಂದೆಪರಮಾತ್ಮನ ನೀವು ತಿಳಿಯಬೇಕಾದರೆ ಶಿವಶಿವಶಿವ ಎನ್ನಿರೊ6 ಪೃಥ್ವಿಗೆ ಸದ್ಗುರು ಆಗಬೇಕಾದರೆ ಶಿವಶಿವಶಿವ ಎನ್ನಿರೋ - ನೀವುತತ್ತ್ವಪತಿ ಆದಿಕೇಶವನ ಕೂಡಬೇಕಾದರೆ ಶಿವಶಿವಶಿವ ಎನ್ನಿರೊ7
--------------
ಕನಕದಾಸ
ಶಿವ ಶಿವ ಶಿವ ಶಿವ - ಶಿವರಾಯ | ನಮ್ಮಭವ ಭಯ ಪರಿಹರ ಮಹರಾಯ ಪ ಭವ | ಭಂಗಿಸಿ ಸುಜನರಸಂಗವ ಕೊಡಿಸೊ ನೀ | ಲಾಂಗನ ಪ್ರಿಯ ಸಖ 1 ಸಿರಿ | ಕರಿವರದನ ದಯನಿರುತ ನಿನ್ನೊಳಗುಂಟು | ಪೊರೆಯೊ ಮೃತ್ಯುಂಜಯ 2 ಸ್ವಾಪದಿ ಗರಸಹ | ರೂಪವ ತೋರ್ದೆ - ಸು-ರಾಪಗಧರ ಹರ | ತಾಪಸಿ ಶುಕನೇ |ಗೋಪತಿ ಗುರು ಗೋ | ವಿಂದ ವಿಠಲನರೂಪವ ತೋರಿಸಿ | ನೀ ಪರಿಪೋಷಿಸು 3
--------------
ಗುರುಗೋವಿಂದವಿಠಲರು
ಶಿವ ಶಿವಯನ್ನಿ ಮನದೊಳೂ ಹರಹರಯನ್ನಿಪ ತೃಯಂಬಕ ನೆನ್ನಿ 1 ಗಂಗಾಧರ ಜಿತ - ನುಂಗನುಯನ್ನಿ ಮಂಗಳಮಹಿಮ ಸಿತಾಂಗನುಯನ್ನಿ2 ಅದ್ರಿನಿವಾಸ ಕಪರ್ದಿಯೆಯನ್ನಿ ರುದ್ರಗುಣದ ಸಮುದ್ರನೆಯನ್ನಿ3 ಆಗಮ ವೇದ್ಯ ವಿರಾಗಿಯೆಯನ್ನಿ ಭೋಗ ಭೂಷಣ ಮಹಾಯೋಗಿಯೆಯನ್ನಿ4 ಸುರಮುನಿಧೇಯ ಸುಚರಣನುಯನ್ನಿ ಗುರುಮಹಿಪತಿಪ್ರಭು ಕರುಣನುಯನ್ನಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶಿವ-ಪಾರ್ವತಿ ಅಗಜೆ ನಿನ್ನೊಗತನಕೆ ಜಗ ನಗುವುದೇ ನಗರಾಜ ಈ ಮನೆಯ ಹೊಗಿಸಿದನೆ ಅಕಟಕಟ ಪ ಹೊಟ್ಟೆಗಿಲ್ಲದೆ ಹೋಗಿ ಹಾಲಾಹಲವನುಂಡ ತೊಟ್ಟ ತೊಗಲುಡುಗೆ ತಲೆಯೋಡು ಕೈಯ ಭೂತೇಶ ಬಲು ಸಿಟ್ಟಿನವನಂಗಸಂಗ ಬಯಸಬಹುದೆ 1 ಆರುಮೊಗದವನೊಬ್ಬ ಆರ್ತಜನು ಮೊಲೆಪಾಲು ಕಾರಿ ಕಡುಮುನಿದು ಕಂಡರೆ ಸೇರರು ಊರಿಗುಪಕಾರಿ ಒಡಲಹರಕ ಗಜಮುಖನು ನಾರಿ ಮೇನಕೆ ಮಗಳು ಕಂಡು ಹಿಗ್ಗುವಳಯ್ಯ 2 ಶಿವಶಕ್ತಿ ನಿನ್ನಂಥ ಸೌಭಾಗ್ಯವಂತೆಯಳ ಭುವನದೊಳಗಾವಲ್ಲಿ ಕಾಣೆನಿನ್ನು ಕವಿಜನಗಳೇನೆಂದು ಬಣ್ಣಿಸಿದರೊ ತಿಳಿಯೆ ಭವದೂರ ಶ್ರೀದವಿಠಲರಾಯ ಬಲ್ಲ 3
--------------
ಶ್ರೀದವಿಠಲರು
ಶಿವಕನ್ಯೇ ಗುಣರನ್ನೇ ಪ ತವಪದ ಪದುಮವ | ಜವದಲೆ ತೋರಿಸುಅ.ಪ. ಕಾಲಕೆ ಮಾನಿಯೆ | ಓಲೈಸುವೆ ಪದಕೀಲಾಲಜವನು | ಪಾಲಿಸು ಎನಗೇ 1 ಪವನ ಮತಾನುಗ | ರವನೆಂದೆನಿಪಗೆಭವ ಪರಿಹಾರಿಕ | ನವ ಭಕುತಿಪ್ರದೆ 2 ಮುಕುತಿಗೆ ಮಾರ್ಗವ | ಭಕುತಿಗೆ ಆಕರೆವ್ಯಕುತಿಯಗೈ ಹರಿ | ಭಕುತಿಗಳೆನ್ನಲಿ 3 ಸ್ತವ ಪ್ರಿಯ ನರಹರಿ | ಸ್ತವನವ ಗೈಯ್ಯುವಹವಣೆಯ ತೋರಿಸು | ಭವನಿಗೆ ಜನನಿಯೆ 4 ಗೋವ ಕಾವ ಗುರು | ಗೋವಿಂದ ವಿಠಲನಭಾವದಿ ತೋರಿಸು | ನೀ ಒಲಿದೆನಗೆ 5
--------------
ಗುರುಗೋವಿಂದವಿಠಲರು
ಶಿವನ ನಾಮಾಮೃತವ ಸವಿದು ಧನ್ಯರಾಗಿರೊ ಜಗದೊಳು ಪ ಶಿವ ಶಿವ ಎಂಬೊ ಎರಡಕ್ಷರವು ಭವರೋಗಕೆ ಇದು ಮೂತೌಷಧವು ಜವನಾಳ್ಗಳ ಭಯ ಲವಲೇಶವಿಲ್ಲವು ಇದು ಸತ್ಯವು 1 ಪಾತಕ ಪಹರಿನಿತು ಪೋತ ಮಾರ್ಕಂಡೇಯಗಾಯುವ ನೀಡಿತು ಭೂತೇಶನ ಪದವಾರಿಜ ಧ್ಯಾನದಿ ಧನ್ಯರಾಗಿರೋ 2 ಹರನ ದಿವ್ಯಪದವಾರಿಜ ಧ್ಯಾನ ಪರ ಚರ ಮುಕುತಿ ಪಥಕೆ ಸೋಪಾನ 3
--------------
ಶಾಮಸುಂದರ ವಿಠಲ
ಶಿವಮಂತ್ರವ ಜಪಿಸೋ ಮೂಢಶಿವಮಂತ್ರವ ಜಪಿಸೋಶಿವನೇ ನೀನಾಗುವೆಯೆಂದು ನಂಬುತ ಪ ಸ್ನಾನ ಬೇಡ ಸಂಧ್ಯಾಕರ್ಮವು ಬೇಡಧ್ಯಾನ ಬೇಡ ಧಾರಣೆ ಬೇಡಮೌನ ಬೇಡ ಮಣಿಮಾಲಿಕೆ ಬೇಡಧ್ಯಾನ ಬೇಡ ಪಶುವಧೆಗಳು ಬೇಡ 1 ದೇಶಕಾಲ ಪಾತ್ರವ ನೋಡಬೇಡಕಾಷಾಯಾಂಬರ ಧಾರಣೆ ಬೇಡಭಾಸುರ ಜಡೆಯನು ಬೆಳೆಸಲು ಬೇಡಈ ಶರೀರವನೆ ದಂಡಿಸಬೇಡ 2 ಕಾಲನ ದೂತರು ಎಳೆಯದ ಮುನ್ನನಾಲಿಗೆ ತನ್ನಾಧೀನವಾಗಿರುವಾಗಏಳುಕೋಟೆ ಮಂತ್ರಕೆ ಮಣಿಯಾದ ವಿ-ಶಾಲ ಕೆಳದಿ ರಾಮೇಶ್ವರನೆ ಗತಿಯೆಂದು 3
--------------
ಕೆಳದಿ ವೆಂಕಣ್ಣ ಕವಿ
ಶಿವಶಿವ ಜಯಜಯ ಶಿವ ಸರ್ವೋತ್ತಮಕಾಯ ಶಿವ ದೂರಿಕೃತಮಾಯ ಶಿವಶರಣಾಗತಪ್ರಿಯ ಪ ಸನಕಾದಿ ಮುನಿಹೃದಯ ವನಜಸ್ಥಾಪಿತಸೂರ್ಯ ದನುಜ ವಿಮರ್ದನ ವೀರ್ಯ ಸುಗುಣನಿರಾಕೃತ ಕೋಪ 1 ಚಾಪ ನಿಗಮಾಗೋಚರ ರೂಪ ಜಗದಂತಃಸ್ಥಿತದೀಪ ಸುಗುಣನಿರಾಕೃತ ಕೋಪ 2 ಪರಮಪಾವನ ಕಾಮಹರ ಕಕುದ್ಗಿರಿಧಾಮವರ ಗಂಗಾಧರನಾಮ ತಿರುಪತೀಶ್ವರ ಪ್ರೇಮ 3
--------------
ತಿಮ್ಮಪ್ಪದಾಸರು
ಶಿವಸ್ತುತಿ ಫಾಲ ಭವ ಪ ರುಂಡಮಾಲ ಸರ್ವಭೂತಾಳಿ ಸೇವಿತ | ಶೂಲಪಾಣಿಹರ ಅ.ಪ ಭೀಮಬಲ ಸುತ್ರಾಮವಂದಿತ | ಕಾಮನಾಶ ಹರ 1 ನಾಗ ಚರ್ಮಧರ ಚಿನ್ಮಯ | ನಾಗ ಭೂಷವರ ಸರ್ವವೇ - ಯೋಗಿ ವಂದ್ಯ ಹರ 2 ಅನುದಿನ | ದಾಸರನು ಕಾವ - ಪಾಂಂ ಜೇಶನ ಪಿತ ಶ್ರೀಶ ಸಖ ಗಿ | ರೀಶ ಶರ್ವ ಹರ 3
--------------
ಬೆಳ್ಳೆ ದಾಸಪ್ಪಯ್ಯ
ಶಿವಸ್ತುತಿ ಶಂಕರನೇ ಸೌಖ್ಯದಾತ ಸಂಕಟ ನಿವಾರಣ ಶಿವ ಪ ತನುಮನಕಾಧಾರನಾದ ಘನಪರಾನಂದಾರ್ತ ವಿನಂಯದಿಂದ ನೋಡಲಕ್ಷ ಚಿನುಮಯಾತ್ಮನೇ ನೀ 1 ಚಿದ್ದಿಲಾಸ ಜಗವಿದೆಲ್ಲಾ ಅದ್ವಯಾನಂದಾಖ್ಯನೇ ಸಿದ್ಧನಾಗಿ ತೋರುತಿರುವಬಿದ್ರೂಪಾರ್ತನೇ ನೀ 2 ವಾಗ್ಮನಗೋಚರನೇ ಸಂಗರಹಿತ ಸ್ವಪ್ರಕಾಶ ಮಂಗಳಾತ್ಮ ಜ್ಯೋತಿರ್ಮಯ ಗಂಗಾಧರನೇ ನೀ 3 ಅಂತರಾನಂದಾರ್ತ ಜ್ಞಾನ ಸಂತ ಸಾದು ಸಾಧ್ಯನೇ ಶಾಂತಿ ಪದವನಿತ್ತ ಗುರು ಶಾಂತರೂಪನೇ ನೀ 4
--------------
ಶಾಂತಿಬಾಯಿ
ಶಿಶುಗಳಪರಾಧಕೆ ಶಿಕ್ಷೆ ಕಣ್ಣೀಲಲ್ಲದೇ ಯಶವ ಬಡಿಗೋಲವನು ಎತ್ತುವರೇ ರಂಗಾ ಪ ಇಲಿಗೆ ಹೆಬ್ಬುಲಿಯಾಕೆ|ಮೊಲಕೆ ಮದಗಜವ್ಯಾಕೆ| ಕಳೆತ ಹಣ್ಣಿಗೆ ಮತ್ತೆ ಕರಗಸ್ಯಾಕೆ| ಕಲೆ ಬಿದ್ದ ಕನ್ನಡಿಗೆ ಗುದ್ದಲಿಯ ತರಲೇಕೆ| ಗುಳಲಿ ಕಾಯಿಗೆ ಹೊತ್ತಗಲ್ಲ ವ್ಯಾಕೆ 1 ಹಳ್ಳಗೆ ಹಡಗವ್ಯಾಕೆ|ಕೊಳ್ಳಿಗೆ ಕೊಡ ಜಲವ್ಯಾಕೆ| ಮುಳ್ಳು ಮುರಿದುದಕ ಮೊನೆ ಹಾರಿ ಯಾಕೆ| ಮಲ್ಲಿಗೆ ಹೋವಿಗೆ ಬಂಧ ಹಗ್ಗದಲ್ಯಾಕೆ| ಹಲ್ಲಿ ಬೆದರಿಸೆ ಹೊಡೆವ ಭೇರಿಯಾಕೆ 2 ಜ್ಞಾನಹೀನರ ನಮ್ಮ ತಪ್ಪನೆಣಿಸಿದುರಿತ| ಮೊನೆಗಾಣಿಸುತ ಬನ್ನಿ ಬಡಿಸುವುದುಚಿತವೇ| ದೀನವತ್ಸಲ ತಂದೆ ಮಹಿಪತಿ ಸುತ ಪ್ರಭುವೇ| ನ್ಯೂನಾರಿಸದೇ ನಿನ್ನವನೆಂದು ಸಲಹೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು