ರಾಮ ರಾಮ ಶ್ರೀ ರಘುರಾಮ ನೀಲಮೇಘ- ಶ್ಯಾಮ ನಿಸ್ಸೀಮ ಕಾಮಿತಾರ್ಥವಕರೆದತಿ- ಪ್ರೇಮದಿಂದ ಪಾಲಿಸುವುದು ನಿನ್ನ ನಾಮ ಪ ಕಲ್ಲೋದ್ಧಾರಕ ಕರುಣಾಳು ರಾಮ ಬಿಲ್ಲನೆತ್ತಿದ್ದ ಬಿರುದಾತ ರಾಮ ಸೊಲ್ಲು ಸೊಲ್ಲಿಗಿರಲು ಹರಿನಾಮ ಚೆಲ್ಲ್ಯಾಡುವ ದಯ ಅವರಲ್ಲಿ ಪ್ರೇಮ 1 ಧೀರಪುರುಷನೆ ದಿಗ್ವಿಜಯ ರಾಮ ವಾರಿಧಿಯ ಕಟ್ಟಿದ್ವನಜಾಕ್ಷ ರಾಮ ಕ್ರೂರರಾಕ್ಷಸರನು ಕೊಂದು ಲಂಕಾ ಸೂರೆಯನು ಮಾಡಿದಂಥ ನಿಸ್ಸೀಮ 2 ದುಷ್ಟರಾವಣಶತ್ರು ಶ್ರೀರಾಮ ಹುಟ್ಟಿ ಭಾನುವಂಶದಿ ಸೀತಾರಾಮ ಮುಟ್ಟಿಭಜಿಸೆ ಸಜ್ಜನರಿಗೆ ಭೀಮೇಶ- ಧಾಮ 3
ರಾಮ ವಂದಿಪೆ ಗುಣ ಧಾಮಾ ವಂದಿಪೆ ಘನ ಶ್ಯಾಮ ವಂದಿಪೆ ರಘು ರಾಮ ರಾಮ ರಾಮ ಪ ಬೋದ ಪ್ರದಾಯಕ ಸಾಧು ಜನಾವಳಿ ವೇದಾಂಗನುತ ರಘು ರಾಮ ರಾಮ ರಾಮ 1 ಇಂದ್ರಾದಿನುತ ಗುಣ ಸಾಂದ್ರಾನತಾವಳಿ ಮಂದಾರಧರ ಹರಿ ರಾಮ ರಾಮ ರಾಮ 2 ದಶರಥ ನಂದನ ದಶಶಿರ ಭಂಜನ ಶಶಿಕಲ ರಂಜನ ರಾಮ ರಾಮ ರಾಮ 3 ಸುಜನರ ಪಾಲನೆ ಕುಜನರ ಕಾಲನೆ ಭಜಕರ ಲೋಲನೆ ರಾಮ ರಾಮ ರಾಮ 4 ಅಂಬುಜನಯನನೆ ಅಬುಜೆರಮಣನೆ ನಂಬಿದೆ ತಾತನೆ ರಾಮ ರಾಮ ರಾಮ 5 ಪನ್ನಗಶಯನನೆ ಚಿನ್ಮಯ ರೂಪನೆ ಚನ್ನಕೇಶವ ರಾಮ ರಾಮ ರಾಮ 6
ರಾಮಕೃಪಾಕರ ರಾಮ ದಯಾಪರ ರಾಮದಿವಾಕರ ರಾಮ ರಾಮ ಪ ದಶರಥನಂದನ ಋಷಿಕುಲ ಪಾವನ ದಶಶಿರಭಂಜನ ರಾಮ ರಾಮ ರಾಮ 1 ಜನಕನ ಜೀವನ ಮುನಿಗಣ ಪಾಲನ ಧನುಜನಿವಾರಣ ರಾಮ ರಾಮ ರಾಮ 2 ವಾಲಿಯ ಮರ್ಧನ ವಾಲಿಜ ರಕ್ಷಣ ಬಾಲ ಸುಪೋಷಣ ರಾಮ ರಾಮ ರಾಮ 3 ಅಜರಾಮರ ಸಿರಿಭಜಕರವರಹರಿ ಅಜಪಿತ ನರಹರಿ ರಾಮ ರಾಮ ರಾಮ 4 ಚನ್ನಿಗರಾಯನೆ ಚಿನ್ಮಯ ರೂಪನೆ ಚೆನ್ನಕೇಶವನೆ ರಾಮ ರಾಮ ರಾಮ 5