ಒಟ್ಟು 4300 ಕಡೆಗಳಲ್ಲಿ , 124 ದಾಸರು , 3042 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಜಯಜಗತ್ಪ್ರಾಣತ್ರಾಣ ಜನನ ಮರಣಕ್ಲೇಶಹರಣ ಜಯ ಪಾವನ ದಿವ್ಯಚರಣ ಪ. ಸರ್ವದೇವತಾಗ್ರಗಣ್ಯ ಸರ್ವಜೀವೋತ್ತಮ ಶರಣ್ಯ ಪೂರ್ವಾಮರಪುರದಹನ ಪೂರ್ಣಗುಣಗಣ 1 ವೈಷ್ಣವ ಜನ ಶಿರೋರತುನ ವಿಶ್ವಾಂತರ್ಗತಭಾವನ ತೀಕ್ಷ್ಣಮನೋದುಷ್ಟದಮನ ಶಿಷ್ಟಜೀವನ 2 ಭಕುತಿಜ್ಞಾನನಿಧಿ ಕಲ್ಯಾಣ ಭಜಕಜನಭವಾಬ್ಧಿತರಣ ಲಕುಮಿನಾರಾಯಣಶರಣ ಬಕವಿದಾರಣ 3
--------------
ತುಪಾಕಿ ವೆಂಕಟರಮಣಾಚಾರ್ಯ
ಜಯ ಜಯರಾಘವೇಂದ್ರ ಸಜ್ಜನಪಯೋನಿಧಿಚಂದ್ರ ಜಯದೇವ ಭೂಸುರವೃಂದ ಸುಗುಣಸಾಂದ್ರ ಪ. ದಶಕಂಠ ಕುಲಕಾಲ ದಾನಶೀಲ ಶಶಿಮೌಳಿಧನುರ್ಭಂಗ ಭುವಿಜಾ ಮನೋಹರಾಂಗ [ಋಷಿ] ಮನೋಂಬುಜಭೃಂಗ ಕರುಣಾಂತರಂಗ 1 ಶ್ರೀಕಾಮಿನೀಸದನ ಭೂವೈಕುಂಠ [ಕಾರಣ] ಶ್ರೀ ಕೌಸ್ತುಭಾ ಭರಣ ಶೇಷಗಿರಿರಮಣ 2
--------------
ನಂಜನಗೂಡು ತಿರುಮಲಾಂಬಾ
ಜಯ ಜಯವೆನ್ನಿ ಕೈಯ ಮುಗುಬನ್ನಿ ದಯವುಳ್ಳ ಮಹಿಮಗಾರುತಿ ಮಾಡುವ ಬನ್ನಿ ಧ್ರುವ ಮನವೆ ಬತ್ತಿ ತನುವಾರತಿ ಘನಕೆ ಮಾಡವ ಬನ್ನಿ ನೆನವು ತುಪ್ಪ ಙÁ್ಞನದೀಪವನ್ನು ಬೆಳಗುವ ಬನ್ನಿ 1 ಭಾವಗುಟ್ಟು ಠಾವಿಲಿಟ್ಟು ದೈವ ನೋಡು ಬನ್ನಿ ಮಾವಮಕರಗುಣ ಬಿಟ್ಟು ಸೇವೆಮಾಡು ಬನ್ನಿ 2 ಮಹಿಪತಿಸ್ವಾಮಿಗಿನ್ನು ಜಯಜಯವೆನ್ನಿ ಬಾಹ್ಯಾಂತ್ರ ಬೆಳಗಿ ಪೂರ್ಣ ಧನ್ಯವಾಗು ಬನ್ನಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯವೆನ್ನಿ ಗುರು ಜಗದೀಶಗೆ ಜಯ ಜಯ ಜಗತ್ರಯ ಪಾವನಗೆ ಧ್ರುವ ಆನಂದೊ ಬ್ರಹ್ಮ ಆನಂದ ಕಂದಗೆ ಅನುದಿನ ಜಯ ಜಯ ಅನುಪಮಗೆ ಸನಕ ಸನಂದನ ವಂದಿತಗೆ ಮುನಿಜನ ಹೃದಯ ನಿವಾಸಗೆ 1 ನಿತ್ಯ ನಿರ್ಗುಣಗೆ ಅಗಣಿತಗುಣ ಪರಿಪೂರ್ಣಗೆ ಝಗಿಝಗಿಸುವ ಜಗನ್ಮೋಹನಗೆ ಜಗಜ್ಜೀವ ಜಗದಾತ್ಮಗೆ 2 ಜಯ ಜಯ ಮಂಗಳ ಮಹಾಮುನಿಗೆ ಮಹಿಮಾನಂದ ಗುರುಮೂರ್ತಿಗೆ ಮಹಿಪತಿ ಸ್ವಾಮಿ ಸರ್ವೋತ್ತಮಗೆ ಜಯ ಜಯವೆನ್ನಿರೊ ಜಗದೊಳಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯವೆನ್ನಿರೊ ಶ್ರೀ ಗುರುವಿಗೆ ದಯಾಸಿಂಧು ಶ್ರೀಸ್ವಾಮಿ ಸದ್ಗುರುವಿಗೆ ಧ್ರುವ ಗುಹ್ಯಗುರುತ ದೋರುವ ಗುರುಮಣಿಗೆ ಮಾಯರಹಿತ ನಿರಾಳ ನಿರ್ವಾಣೆಗೆ ತ್ರೈಲೋಕ್ಯವಂದಿತ ವರಮುನಿಗೆ ದಯಯುಳ್ಳ ಶ್ರೀ ದೇವಶಿಖಾಮಣಿಗೆ 1 ತ್ರಿಗುಣಾತೀತ ತಾರಕ ನಿರಂಜನಗೆ ಝಗಿ ಝಗಿಸುವ ಜಗನ್ಮೋಹನಗೆ ಜಾಗಿಸುವ ಜಗತ್ರಯ ಜೀವನಿಗೆ ಯೋಗಿಜನ ಧ್ಯಾಯಿಸುವ ನಿರ್ವಾಣೆಗೆ 2 ಜಯ ಜಯವೆನ್ನಿರೊ ಗುರುಮೂರ್ತಿಗೆ ಇಹಪರ ಪೂರ್ಣ ಪರಂಜ್ಯೋತಿಗೆ ಬಾಹ್ಯಾಂತ್ರ ಭಾಸುವ ಶ್ರೀಪತಿಗೆ ಮಹಿಪತಿಯ ಶ್ರೀ ಸ್ವಾಮಿ ಜಗತ್ಪಿತಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯಾ ದೇವ ದೇವಾ ಮಾರ್ತಾಂಡ ಭೈರವಾ ದಯದಿಂದ ಪಾಲಸೆನ್ನಾ ಭಕ್ತರನುದಿನಕಾವಾ ಪ ಶರಣರ ಮೊರೆಯ ಕೇಳಿ | ಶಿವ ಅವತಾರವ ತಾಳಿ ಭವರೂಪಮಣಿಮಲ್ಲನಾ | ಮರ್ಧಿಸಿದೆ ತನುಶೀಳಿ 1 ವಿವೇಕಹಯವನೇರಿ | ಭೋಧನಾಸ್ತ್ರವನು ದೋರಿ ಅವಗುಣ ಬಲಮುರಿದೇ | ಜಗಕಭಯವ ಬೀರಿ 2 ಮ್ಯಾಲಕರದಿಂದ ಉಘೇ | ಯನ್ನಲು ಕೂಗಿ 3 ಘನಗುರು ಮಹಿಮಪತಿ | ಸುತ ಪ್ರಭು ಮಾಪತಿ ಮನದೊಳು ಜ್ಞಾನ ದೀಪಾ | ದಿಂದಬೆಳಗುವೆ ಆರತಿ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯ ಜಯಾನಂದ ಕಂದ ಜಯ ನಿರ್ಗುಣ ನಿದ್ರ್ವಂದ್ವ ಧ್ರುವ ಒಳಗೆ ಹೊರಗೆ ನೀನೆ ಪೂರ್ಣ ಬೆಳಗಿ ಬೆಳಗಾಗಿಹುದ ಥಳಥಳಿಸುವ ಗುಣ ಹೊಳವು ಸುಳವು ಪಾವನ 1 ದೇವಾಧಿದೇವ ದೇವ ಭುವನತ್ರಯಕೆ ಜೀವ ಭಾವಿಕರಿಗೆ ಕಾವ ಭವನಾಶಗೈಸುವ 2 ಅಜ ಸುರವರ ಮುನೀಂದ್ರ ನಿಜಘನಸುಖಮುದ್ರ ರಾಜ ರಾಜರಾಜೇಂದ್ರ 3 ಮುನಿಜನರ ಪ್ರಾಣಪದಕ ಅನುಭವದ ನಿಜಸುಖ ಖೂನ ವಿಶ್ವತೋಮುಖ ಅಣುರೇಣು ವ್ಯಾಪಕ 4 ಮೂರು ಗುಣಕೆ ರಹಿತ ಗುರುಮೂರ್ತಿ ಸಾಕ್ಷಾತ ತರಳ ಮಹಿಪತಿದಾತ ಹೊರಿಯೊ ನೀ ಸದೋದಿತ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ದೇವ ಜಯ ದೇವ ಜಯ ಗುರು ನಾಗೇಶ ದಯಗುಣದಲಿ ನೀ ಮಾಡೊ ಭವತಾಪ ನಾಶ ದ್ರುವ ಜನ್ಮ ಮರಣಗಳೆಂಬ ಖಚ್ಚಿಖವಡಿಗಳು ನಿಮ್ಮ ನಾಮಸ್ಮರಣಿಲೆ ಓಡುದು ದುರಿತಗಳು ಬ್ರಹ್ಮಾನಂದದ ಸುಖ ಭಾಸುದು ಮನದೊಳು ನಮ್ಮ ಸ್ವಾಮಿ ನೀನೆ ಅಹುದೊ ಕೃಪಾಳು 1 ತಾಪತ್ರಯವೆಂಬುದು ಬಲು ಪೀಡಿಯ ಗುಣ ಆಶೆÀ ನೀನೆ ಪರಿಹಾರ ಮಾಡೊ ಘನ ಕರುಣ ಕೋಪತಾಪವೆಂಬುದು ತದ್ದುದುರೀಯ ಗುಣ ಕೃಪೆಯಿಂದಲಿ ಮಾಡುದು ನಿಮ್ಮ ಶ್ರಮ ನಿರ್ವಾಣ 2 ದುರಿತ ಸಂಹಾರ ಸುರಜನ ಸಹಕಾರ ಕರುಣಾಕರ ಗುರುಮೂರ್ತಿ ಮುನಿಜನ ಮಂದಾರ ತರಳ ಮಹಿಪತಿಸ್ವಾಮಿ ಘನ ಕೃಪಾಕರ ಶರಣ ರಕ್ಷಕ ಪೂರ್ಣ ನೀ ಜಗದೋದ್ಧಾರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ದೇವ ಜಯ ದೇವ ಜಯ ಜಗನ್ನಾಥ ದಯಗುಣದಲಿ ಪರಿಪೂರ್ಣ ಶ್ರೀಗುರು ಮನ್ನಾಥ ಧ್ರುವ ಅಂದಿಗಿಂದಿಗೆ ನೀನೆ ನಿತ್ಯನುಭವದಿಂದ ತಂದಿ ತಾಯಿ ನೀನೆ ಶ್ರೀಹರಿ ಮುಕುಂದ ಬಂಧುಬಳಗ ನೀನೆ ಕುಲಕೋಟಿಗಳಿಂದ ಎಂದೆಂದೆನಗೆ ನೀನೆ ಫಲದೊಲವಿಂದ 1 ಸೃಷ್ಟಿ ಜನ ಪಾಲಕ ನೀನೆ ಸದ್ಗುರು ರನ್ನ ಸೃಷ್ಟಿಯಲಿ ಪೊಗಳುತಲಿ ಶ್ರುತಿಸ್ಮøತಿಗಳು ನಿನ್ನ ಇಷ್ಟ ಕುಲದೈವಗಳೆಂಬುದು ನೀ ಎನ್ನ ದೃಷ್ಟಿಸಿ ಮಾಡುವ ಭಕ್ತಜನರಿಗೆ ಪಾವನ್ನ 2 ಮನೋಹರ ಮಾಡುವ ಮಂಗಳಕರಮೂರ್ತಿ ಘನ ಸುಖದಾಯಕ ನೀನೆ ಜ್ಞಾನದ ನಿಜಸ್ಫೂರ್ತಿ ಭಾನುಕೋಟಿತೇಜ ನೀನೆ ಸಕಲಸಾರ್ಥಿ ಅನುದಿನ ಮಾಡೊ ಮಹಿಪತಿ ಶ್ರೀಪಾದಕೆ ಆರ್ತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ದೇವ ಜಯ ದೇವ ಜಯ ನಿರಂಜನ ಭಂಜನ ಗುರು ತಾರಕ ಋಷಿಮುನಿ ಜೀವನ ಧ್ರುವ ಅನಂತ ಗುಣ ಪರಿಪೂರ್ಣ ಅನಂದಮಯ ಘನ ಸ್ವಾನಂದ ಸದೋದಿತ ಸದ್ಗುರು ನಿಧಾನ ಅನಾದಿ ಮಹಿಮಾನಂದ ಸುಙÁ್ಞನಾಂಜನ ಅನೇಕ ಸಕಲಾಗುಮಪೂಜಿತ ಸೇವಿತ ತ್ರಿಭುವನ 1 ಕಲ್ಪತರು ಚಿಂತಾಯಕ ಅನಾಥ ರಕ್ಷಣ ತ್ರಿಜಗ ಜೀವನ ಅತೀತ ಸುಙÁ್ಞನ ಭಕ್ತ ಕೃಪಾನಿಧಿ ವಿಶ್ವವಂದನ 2 ಸಜ್ಜನ ಸಂಜೀವನ ಸದ್ಗುರು ಚಿದ್ಫನ ಸಗುಣ ನಿರ್ಗುಣ ಸಹಕಾರ ಸುರಮುನಿ ರಂಜನ ಮಹಿಪತಿ ತಾರಕ ಗುರು ಪತಿತಪಾವನ ಸದ್ಬ್ರಹ್ಮಾನಂದ ಸದೋದಿತ ಸದ್ಗತಿ ಸಾಧನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ದೇವ ಜಯ ದೇವ ಜಯ ಮಂಗಳ ಮಹಿಮ ದಯಗುಣದಲಿ ನಿಸ್ಸೀಮ ಜಯಗುರು ನಿರುಪಮ ಧ್ರುವ ಅನುಭವಕಾಗುವ ಚಂದ ಸ್ವಾನುಭವದÀ ಕಂದ ಜ್ಞಾನ ವಿಜ್ಞಾನಂದ ಘನಮಯ ನಿದ್ರ್ವಂದ್ವ ದ್ವಂದ್ವನಿರ್ದೂಂದ್ವ ತಾನೆ ತನ್ನಿಂದ ಎಂದೆಂದಿಗೆ ಬ್ಯಾರಿಲ್ಲ ದೋರುದು ನಿನ್ನಿಂದ 1 ದ್ವೈತಾದ್ವೈತಕೆ ರಹಿತಾಶ್ರಯಗುರು ನಿಜದಾತ ತ್ರೈಗುಣಾತೀತ ಶಾಂತ ನಿರ್ಗುಣ ನಿಶ್ಚಿಂತಾ ನಂತಾನಂತಕೆ ಸಂತತ ನೀನೆ ಏಕಾಂತ ಪಂಥ ಪರಮಗುಹ್ಯಾನಿಹ ಶ್ರೀ ಅವಧೂತ 2 ಸ್ವಸಂವೇದ್ಯ ನೀ ಪೂರ್ಣಋಷಿಮುನಿಗಳ ಧ್ಯಾನ ಲೇಸುಲೇಸಾಗಿಹ ಆತ್ಮನುಭವ ಖೂನ ಈಶ ನೀನೊಬ್ಬನಾಗಿಹ ಅನುದಿನ ದಾಸ ಮಹಿಪತಿ ಪ್ರಾಣ ಭಾಸ್ಕರ ಘನಕರುಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಮಂಗಳಂ ಸತ್ಯಧೀರತೀರ್ಥರಿಗೆ ಶುಭಮಂಗಳಂ ಯತೀ ಗುಣಮಣಿಗೆ ಪ ಜಗದುದರಧರನಾದ ಜಗವ ಸೃಷ್ಟಿಸಿದಂಥ ಜಗವ ಪಾಲಿಸುವ ಶ್ರೀ ಜಗದೀಶನಾ ತ್ರಿಗುಣಮಾನಿಯಳಿಂದ ಬಗೆ ಬಗೆಯ ಸ್ತುತಿಗೋಳ್ವ ರಘುವರನ ದಿವ್ಯ ಚರಣಗಳ ಸೇವಿಪಗೆ 1 ಜಗದೀಶನಾಜ್ಞೆಯಿಂ ಜಗಕೆ ಗುರುವೆನಿಸಿ ನಾ- ಲ್ಮೊಗನೈಯ್ಯ ಸರ್ವಪರಿಹಾರನೆನಿಸಿದವಗೆ ಜಗದೊಳಿರುವ ಅಜ್ಞ ಜನರುಗಳಿಗೆ ಪಂಚಮು- ದ್ರೆಗಳನೇ ಇತ್ತು ಪಾಪಗಳ ತರಿದವಗೆ 2 ಸತ್ಯವೀರರು ಕರಗಳೆತ್ತಿ ಉತ್ತಮಪದವ ಇತ್ತದ್ದೆ ಪುಸಿಯೆಂದು ನುಡಿದವರ ಮುಖಕೆ ಮೃತ್ತಿಕೆಯನು ಹಚ್ಚಿ ಹತ್ತುಯಂಟೋ ರೂಪ ಸ- ರ್ವೋತ್ತಮನ ಪೂಜಿಸಿದ ಸತ್ಯಧೀರರಿಗೆ 3 ಪುರಕಾಶಿಯಿಂದ ರಾಮೇಶ್ವರದ ಪರಿಯಂತ ಇರುವ ಕ್ಷೇತ್ರಗಳಲ್ಲಿಯ ಮಹಿಮೆಯಾ ದುರುಳ ಕಲಿಯಲಿ ಕಡಿಮೆಯಾಗಬಾರದು ಮನುಜ ಸಿರಿರಾಮನಾಶ್ರಯದಿ ಜನಿಸಿ ಬಂದವಗೆ 4 ಕರುಣಾಸಾಗರನಿಗೆ ಕರೆದಲ್ಲಿ ಬರುವಗೆ ಶರಣುಬಂದವರ ಪರಿಪಾಲಿಸುವಗೆ ವರಗುರು ಮಧ್ವರಾಯರ ಪೀಠಪಾತ್ರಗೆ ಧೀರ ಹನುಮೇಶವಿಠಲ 5
--------------
ಹನುಮೇಶವಿಠಲ
ಜಯ ರಮಾದೇವಿ ಸಾಗರ ಕನ್ನಿಕೆ ಪ ಪದ್ಮ ಪದ್ಮಾಲಯೇ ಪದ್ಮದಳಲೋಚನೆ | ಪದ್ಮಪ್ರಿಯೆ ದಿವ್ಯ ಪದ್ಮವದನೆ | ಪದ್ಮವಕ್ಷೋಜಾತಿ ಪದ್ಮಕಲ ಶೋಭಿತೆ | ಪದ್ಮಾಸನಾದೆನುತ ಪದ್ಮಚರಣೆ 1 ಮಂಗಲಾತ್ಮಕ ನೀಲಭ್ರಂಗ ಕುಂತಲಶಶಿ ಪ- ತಂಗ ಸನ್ನಿಭ ಕೋಮಲಾಂಗಿ ವರದೆ || ಗಾಂಗೆಯ ವಸನ ಸರ್ವಾಂಗ ರತ್ನಾಭರಣೆ | ಅಂಗಜಾಜನನಿ ಶ್ರೀರಂಗಪ್ರಿಯೆ 2 ಸತತ ಜಗದುತ್ಪತೆ ಸ್ಥಿತಿಯಂತೆ ಕಾರಿಣೆ | ನುತಗುಣ ಮಹಿಮಾಯ ಶ್ರುತಿ ಪೂಜಿತೆ || ಪತಿತಪಾವನ ಮಹೀಪತಿನಂದನಿಷ್ಟ | ದೇ ವತಿ ಭಕ್ತ ಜನಸುಖದಿ ಮತಿದಾಯಿತೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯ ವಾಯು ಹನುಮಂತ ಜಯ ಭೀಮ ಬಲವಂತ ಪ ಜಯಪೂರ್ಣ ಮತಿವಂತ ಜಯ ಸಲಹೊ ಸಂತ ಅ.ಪ. ಅಂಜನೆಯಲಿ ಹುಟ್ಟಿ ಅಂದು ರಾಮನ ಸೇವೆನಂದದಿಂದಲಿ ಮಾಡಿ ಕಪಿ ಬಲವ ಕೂಡಿಸಿಂದು ಲಂಘಿಸಿ ಖಳರ ವನ ಭಂಗಿಸಿ ಸೀತೆ-ಗುಂಗುರವ ಕೊಟ್ಟೆ ಲಂಕಾಪುರವ ಸುಟ್ಟೆ 1 ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿಶರಧಿಯನು ಕಟ್ಟಿ ಅರಿಬಲವ ಕುಟ್ಟಿಉರಗ ಬಂಧನದಿಂದ ಕಪಿವರರು ಮೈಮರೆಯೆಗಿರಿಯ ಸಂಜೀವನವ ತಂದು ಬದುಕಿಸಿದೆ 2 ದ್ವಾಪರಾಂತ್ಯದಿ ಪಾಂಡು ಭೂಪನಾತ್ಮಜನೆನಿಸಿಶ್ರೀ ಪಾರ್ಥಸಾರಥಿಯ ಭಜಕ ನೀನಾದೆಪಾಪಿ ಮಾಗಧ ಬಕ ಕೀಚಕ ಹಿಡಿಂಬಕರಕೋಪದಿಂದಲಿ ತರಿದೆ ಮೂಜ್ಜಗದಿ ಮೆರೆದೆ 3 ಧsÀುರದಲಿ ದುರ್ಯೋಧನನ ಬಲವನು ತರಿದೆಅರಿತು ದುಶ್ಶಾಸನನ ಒಡಲನ್ನು ಬಗೆದೆಉರವ ತಪ್ಪಿಸಿ ಕೌರವನ್ನ ತೊಡೆಗಳ ಮುರಿದೆಹರಿಯ ಕಿಂಕರ ಧುರಂಧರಗಾರು ಸರಿಯೆ ಕಲಿಯುಗದಲಿ ಕಳ್ಳರುದಿಸಿ ದುರ್ಮತಗಳನುಬಲಿಸಿ ಶ್ರೀಹರಿಯ ಗುಣಗಳನು ಮರೆಸಿಕಲಿಯನನುಸರಿಸಲು ಗುರುವಾಗಿ ಅವತರಿಸಿಖಳರ ದುರ್ಮತ ಮುರಿದೆ ಶ್ರೀಕೃಷ್ಣಪರನೆಂದೆ
--------------
ವ್ಯಾಸರಾಯರು
ಜಯ ಸದ್ಗುರು ಮೂತಿ ದಯವುಳ್ಳ ನಿಮ್ಮ ದಯ ಕೀರ್ತಿ ಧ್ರುವ ದಯಗುಣದಲಿ ಬಲು ಉದಾರ ತ್ರೈಲೋಕ್ಯಕೆ ನೀನೆ ಆಧಾರ ಜಯ ಸದ್ಗುರು ಮಾಮನೋಹರ ಇಹಪರ ಸಹಕಾರ 1 ಮುನಿಜನರಿಗೆ ನೀ ಪ್ರತಿಪಾಲ ಸ್ವಾನುಭವದ ಸುಖದ ಕಲ್ಲೋಳ ಘನಗುರು ನೀನೆ ಕೃಪಾಲ ದೀನದಯಾಳ 2 ಜೀವದ ಸುಪ್ರಾಣ ಪರಮಾಮೃತದ ನಿಧಾನ ಹೊರಿಯೊ ನೀ ಕರುಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು