ಒಟ್ಟು 37131 ಕಡೆಗಳಲ್ಲಿ , 139 ದಾಸರು , 11109 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಶಿವದನೇರೆಲ್ಲ ದಿವಸಿವ್ರತವ ಮಾಡಿರೇ ಶಶಿಧರನ ಮಡದಿಯಾ ಭಜಿಸಿ ಪಾಡಿರೇ ಪ ಕತ್ಲೆರಾಯನ ಪತ್ನಿಯೂ | ಸುಪುತ್ರನ್ನ ಪಡೆಯಲೂ ಇತ್ತಳು ವಸ್ತ್ರಗಳನ್ನು ಚೆಂದದಿ ದ್ವಿಜರಿಗೆ ಕೊಡಲೂ ಪಡೆದಳು ಪುತ್ರನಾ ಬುಧರು ಕಾಳಿಂಗ ನೆಂದು ಕರೆದರು ಪರಿ ಪರಿವಿಧದಿಂದ ರಾಜರು ಹರುಷಗರೆದರೂ 1 ಗಿರಿಕಾನನದಿ ಚಲಿಸಿ | ಮೃಗವ ಸಂಹರಿಸೀ ಬಾಲಕನೂ | ಬರುತಿರಲು ಬಾಲಕನು ವ್ಯಾಘ್ರದ ದನಿಕೇಳಿ ಮೂರ್ಛೆಗೈದು ಮೃತನಾದನು 2 ಮೃತನಾದ ಸುತಗೆ | ಸತಿಯ ಕೊಡಬೇಕೆಂದು ಸಾರಿಸಿದ ಸತತ ದ್ರವ್ಯ ಕೊಡುವೆನೆಂದು ಮಾತ ನಾಡಿದೆ ದ್ವಿಜನಸುತನ ಸತಿಯ ತ್ಯಜಿಸಿ ಹೋಗಿರಲು ನಿಜಸುತಗೆ ಭಗಿನಿಯ ಕೊಡುವೆನೆಂದು ನುಡಿದಾನು 3 ಬೆಳ್ಳಿ ಬಂಗಾರ ಸಹಿತ ನಮಗೆ ಇರುವೋದೂ ಕನ್ನಿಕೆಗೆ ಮಾಂಗಲ್ಯ ಬಂಧನ ಮಾಡಿಹೋದಾರು 4 ರಾಜನು ಹೋಗುವಾಗ | ಸೊಸಿಯಮನೆಗೇಳೆಂದನು ಪತಿಯ ಬಿಟ್ಟು ಹ್ಯಾಂಗೆ ಮನೆಗೆ ಬರುವೋದೆಂದಳು ಪತಿಯ ಬಿಟ್ಟು ಬಂದರೆ ಪತಿವ್ರತವು ಇರುವೋದೆ ಹಿತವು ಬಯಸಿ ಬಂದರೆ ಸದ್ಗತಿಯು ದೊರೆವುದೇ 5 ಒಂದು ದಿನ ಸುಂದರಿ ಬಂದವರ ಕೇಳಿದಳು ಇಂದು ದಿವಸಿ ವ್ರತವು ಅಂದರು ಹಿಂದೆ ಗೌರಿಪೂಜಿಸಿದೆ ಮುಂದೆ ವ್ರತವನು ಬಂಧು ಬಳಗೆ ಇಲ್ಲದಲೆ ಮಾಡುವುದೇನು 6 ನಾರುಬತ್ತಿ ನೀರು ಎಣ್ಣೆ ಗೌರಿಗೆ ಮಾಡಿದಳು ಅಪಾರ ಸದಿಗೆ ಮುರಿದುಗೌರಿ ಪೂಜಿಸಿದಳು ಹರತಾ ಭಂಡಾರ ಒಡೆದು ಹರುಷಗರೆದನು ವರ ಕಾಳಿಂಗ ಕ್ಷಣ ದೊಳೆದ್ದು ಮಾತಾಡಿದನು ಪತಿಯಸಹಿತಾಗಿ ತಮ್ಮ ಗೃಹಕೆ ಬಂದರು ಸತತ ನಾರಸಿಂಹನ ಸ್ಮರಣೆ ಮಾಡಿದರು 7
--------------
ಓರಬಾಯಿ ಲಕ್ಷ್ಮೀದೇವಮ್ಮ
ಶಾಂತನಾಗದೆ ಭವದ ಚಿಂತೆ ಬಿಡದಣ್ಣಾ ಪ ಭವ ಭವ ಭವಂಗಳೆಡೆ ಬಿಡದೂ 1 ಶಾಂತಿಯಿರದವಗೆ ದುರ್ಗತಿಗಳೊದಗುವದೂ 2 ಶಾಂತನಾದರೆ ಸದಾನಂದ ಸುಖವಹುದೂ 3
--------------
ಸದಾನಂದರು
ಶಾಂತನಾಗು ಮನಸೆ ನೀ ಶಾಂತನಾಗು ಕಂತುಪಿತನ ಅಂತರಂಗದಿ ಧ್ಯಾನಿಸುತ್ತ ಪ ಪೊಡವಿಜನರ ನಡೆಯ ಕಂಡು ಮಿಡುಕು ಗುಣವ ಕಲಿಯ ಬೇಡ ಕೊಡುವ ಸ್ವಾಮಿ ಬಡವನಿಹನೆ ದೃಢವಿಟ್ಟು ಅರಿದು ನೋಡು 1 ಭೂಮಿಯವರು ಕೈಯ ಬಿಡಲು ಸ್ವಾಮಿಕಾರ್ಯ ನಿಲ್ಲುತಿಹ್ಯದೆ ಪಾಮರಾಗದೆ ಸ್ವಾಮಿಸೇವೆ ನೇಮವಹಿಸಿ ಮಾಡು ಬಿಡದೆ 2 ಪಾಪಿನರರ ಮಾತಿಗಾಗಿ ಕೋಪಗೊಳ್ಳದೆ ಸತ್ಯನಾಗು ಗೋಪಾಳ ಸಣ್ಣದಲ್ಲ ನಂಬು ಭೂಪ ಶ್ರೀರಾಮನೊಲಿದು ಕೊಡುವ 3
--------------
ರಾಮದಾಸರು
ಶಾಂತಿನಿಲಯ ಸುಖದ ಪ ಭ್ರಾಂತನಾದೆ ಪರಿಭವದ ತಂತು ತಿಳಿಯದಕಟ ಶ್ರೀ ಕಾಂತ ಕಾಯೊ ಪಿಡಿದು ಕರು ಣಾಂತರಂಗ ಕುಸುಮನಾಭ 1 ಉದಧಿಯಂದದುಕ್ಕಿಬರುವ ಅಧಮನಕೆ ಕಲ್ಪನೆಗಳು ಒದಗಿ ವಿಧ ವಿಧ ನೋಯಿಪು ದಿದನು ಬೇಗ ಪರಿಹರಿಸು 2 ನಂಬಿಭಜಿಪ ಭಕುತಜನರಿ ಗಿಂಬು ನೀನೆ ಅಂಬುಜಾಕ್ಷ ಇಂಬುಗೊಟ್ಟು ಸಲಹು ಸದಾ 3
--------------
ರಾಮದಾಸರು
ಶಾಂತಿಯೆಂಬುದು ಸಕಲ ಸದ್ಗುಣಂಗಳ ಮುಕುಟ ಶಾಂತಿಯೊಂದಿರಲು ಕೃತಾಂತನಂಜಿಕೆಯಿಲ್ಲ ಪ ಶಾಂತಿಯೆ ಪ್ರದ್ವೇಷ ಕಾಂತಾರ ಪಾವಕವು | ಶಾಂತಿ ಕಾಂತಿಯು ದುರಿತಧ್ವಾಂತ ಓಡಿಸುವದು ಚಾಪ | ಮೊದಲಾದ ದು | ರಂತ ಶಸ್ತ್ರಾಯುಧಗಳು ಶಾಂತಿ ಖಡ್ಗಕೆ ಶರಣು ಹೊಡೆಯುತಿಹವು 1 ಶಾಂತಿಗೊಪ್ಪದ ಕುರುಪ ಭ್ರಾಂತಿಯಲಿ ತನ್ನ ಸಂತತ ಸಹಿತವಾಗಿ ಸಂಗರದಿ ಹತನಾದ ಶಾಂತಿಯಿಂದಲಿ ಧರ್ಮ ಚಿಂತೆಯನು ನೀಗಿದನು ಶಾಂತಿಯಿಂದಲಿ ಸತ್ಯ ಹರಿಶ್ಚಂದ್ರಗಾಧಿಪ ಜನ ಪೌರುಷÀವೆಲ್ಲ ನಿಸ್ತೇಜಗೊಳಿಸಿದನು 2 ಶಾಂತಿಯಲಿ ಭಕ್ತಿ ಮುಕ್ತಿ ಇಂತೆಂದು ವೇದಗಳು ಅಂತ್ಯದಲಿ ತ್ರೈವಾರ ಘೋಷಿಸುತಲಿಹವು ಶಾಂತಮೂರುತಿಯಾದ ಶ್ರೀ ಶಾಮಸುಂದರನು ಶಾಂತಿಗೆ ಮೆಚ್ಚಿ ಅಚ್ಯುತಪದವೀವಾ 3
--------------
ಶಾಮಸುಂದರ ವಿಠಲ
ಶಾಂತೇರಿ ಕಾಮಾಕ್ಷಿ ಲಕ್ಷ್ಮೀಕಾಂತನ ಸೋದರಿ ಸಂತಜನರ ಭಯನಿವಾರಿ ಕಂತುಸಹಸ್ರ ಸುಂದರಿ ಪ. ಬಂಗಧಿ ದೇವಿ ಸುಪ್ರಸಿದ್ಧೆ ಮಹೇಶ್ವರಿ ಶುದ್ಧ ಶ್ರೀಹರಿಭಕ್ತಿಜ್ಞಾನ ಶ್ರದ್ಧೆಯ ನೀಡಮ್ಮ ಶಂಕರಿ 1 ಪಂಚಾಸ್ಯನಾರಿ ಪಾವನೆ ಕಾಂಚನಾಭೆ ಗೌರಿ ಪಂಚ ಮಹಾಪಾಪವಿದಾರಿ ಪಾಹಿಮಾಂ ಶ್ರೀವಿಶ್ವಂಭರಿ 2 ಸುಕ್ಷೇತ್ರ ಕುಮಟಾಖ್ಯ ನಗರಾಧ್ಯಕ್ಷೆ- ದೇವಿ ಭವಾನಿ ತ್ರೈಕ್ಷನ ರಾಣಿ ಕಲ್ಯಾಣಿ ಲಕ್ಷ್ಮೀನಾರಾಯಣಿ3
--------------
ತುಪಾಕಿ ವೆಂಕಟರಮಣಾಚಾರ್ಯ
ಶಾಂಭವಿ ದಯಮಾಡೆ ಸಿಟ್ಟು ಬಿಡು | ಮುನಿಯದೆ ಎನ್ನ ಕೂಡ |ಕೋಪವು ಮಾಡಬೇಡ ಎನಗಾರ |ಕರುಣ ದೃಷ್ಟಿಲಿ ನೋಡ ಪ ಮೂರ್ತಿ 1 ರಜ ತಮ ಸಂಗದಲಿ ನಾ ಕೆಟ್ಟೆ | ನಿನ್ನ ಸ್ಮರಣೆಯ ಬಿಟ್ಟೆ | ಕಾಮ ಕ್ರೋಧದಲಿ ಬಹು ಸುಟ್ಟೆ |ತಿಳಿಯದು ನಿನ್ನ ಗುಟ್ಟೇ 2 ಮನಸಿಗೆ ತರದಿರೆ ಎನ್ನ ದೋಷ |ಮಾಡೆನ್ನ ದುರಿತವಿನಾಶಾ |ಕಲಿಕಾಲಸುತನಾ ಭವಪಾಶಾ | ಭಜಿಸುವೆ ನಿನ್ನ ಮಹೇಶಾ 3
--------------
ಭೀಮಾಶಂಕರ
ಶಾಂಭವಿ ಶೈಲಜೆ ಅಂಬಿಕೆ ದೇವಿ ಅಂಬುರು ಹಾಸನೆ ಪಾಲಿಸು ಪ್ರೇಮದಿ ಪ ಅಕ್ಷಯ ರಾಕ್ಷಸನಾಶಿನಿ ಯಕ್ಷಸುಪೋಷಿಣೆ 1 ದಿವ್ಯಸ್ವರೂಪೆ ಭವ್ಯಕಲಾಪೆ ಸ್ತವ್ಯ ಸ್ವರೂಪಿಣಿ ಗರ್ವ ವಿದಾರಿಣೆ 2 ಪಾಲಿಸು ಶಂಕರಿ ಗೌರಿ 3 ಪ್ರೇಮದಿ ಸ್ವರ್ನಸುಗಾತ್ರಿ 4 ಧ್ಯಾನವಗೈಯುವೆ ಧೇನುಪುರೀಶೆ 5
--------------
ಬೇಟೆರಾಯ ದೀಕ್ಷಿತರು
ಶಾಮ ಸುಂದರ ಪ್ರೇಮವÀ ತೋರೆಲೊ ಪ ತಾಮಸವಿಲ್ಲದೆ ಕಾಮಿತಗಳ ನೀಡೊ ಅ.ಪ ಹಿಂದೆ ಅಜಮಿಳ ಒಂದನರಿಯದೆ ಕಂದನನ್ನು ನಾರಾ ಎಂದು ಕರೆಯಲು ಬಂಧುವೆಂದರಿತು ಮಂದಹಾಸದಿಂದ ಬಂದು ರಕ್ಷಿಸಿದೆ ಎಂದು ಕೇಳಿರುವೆ 1 ಕ್ರೂರ ಶಾಸನ ನಾರಿ ದ್ರೌಪದಿಯ ಸೀರೆ ಸೆಳೆದು ಮಾನ ಸೂರೆಗೊಳುತಿರೆ ಸಾರಿ ಕೂಗಲು ಭೂರಿದಯವನು ತೋರಿರುವೆ ಎಂದು ಕೋರಿರುವೆ ನಿನ್ನ 2 ಮುನ್ನ ಮಾಡಿದ ಎನ್ನ ಪಾಪಗಳಿಗೆ ಖಿನ್ನನಾಗಿರುವೆ ಎನ್ನ ಮನದಲಿ ಮನ್ನಿಸುತ್ತ ಸುಪ್ರಸನ್ನನಾಗಿ ಸದಾ ಎನ್ನ ಹೃದಯ ಶುದ್ಧಿಯನ್ನೆ ಮಾಡಿ ಪೊರೆಯೊ 3
--------------
ವಿದ್ಯಾಪ್ರಸನ್ನತೀರ್ಥರು
ಶಾಮಸುಂದರ ಪೊರೆಯೊ ರಘುರಾಮಾ ಕಾಮಿತ ಫಲವಿತ್ತು ಪ ಸೋಮಧಾಮ ಸುತ್ತಾಮ ಸುರಾರ್ಚಿತ ಕರುಣದಿ ದಯವಿತ್ತು ಅ.ಪ. ತಟಿತ್ಕೋಟಿ ನಿಭ ಹಾಟಕಾಂಬರನೆ ಘಟಿತವಾದ ಈ ಜಟಿಲ ಶರಧಿಯೊಳು ನಟ ನಡುವೆ ಸಿಲುಕಿ ಗುಟಕ ನೀರು ಕುಡಿದ ಈ ಪುಟ [ಟ್ಟ] ಪುರುಷನ ಮೇಲೆ ದೃಷ್ಟಿ ಇಟ್ಟು ನೋಡಿದರೆ ಪಟುಲವೇನೋ ವಟಪತ್ರಶಯನನೆ ನಟವಳಿಯೊಳು ಈ ಭಕುತ ಕಟಕಿಯ ಮಾಡೆ 1 ಚಂಡ ವಿಕ್ರಮ ಕೋದಂಡ ದೀಕ್ಷಾ ಖಂಡ ಮಹಿಮಾರಾಮಾ ದುರಿತವೇಕೋ ಗಂಡ ಕಂಠೀರವನೆ ಡಿಂಗರಿಗಾತಿ ಪ್ರೇಮಾ ಅಂಡಜವಾಹನ ಪಾಂಡವ ಮೂರುತಿ ಕುಂಡಲಗಿರಿಧಾಮಾ 2 ಘನಚರಿತ ಪ್ರಸನ್ನ ದಯಾಂಬುಧಿ ಇನ್ನಾದರೂ ಈ ಚಿಣ್ಣಗೆ ಚೆನ್ನಾಗಿ ದೃಷ್ಟಿಯಿಟ್ಟು ಕೃಪೆಮಾಡು ಸನ್ನುತಿಸುವೆ ಮುನ್ನಾ ಕಣ್ಣೆತ್ತಿ ನೋಡದೆ ಅನ್ನ ದೈªಂಗಳ ಬಿನ್ನವಿಸುವೆ ನಿನ್ನಾ ಮನ್ಮಥಪಿತ ಭೋ ಮಹಾನಿಧಿವಿಠಲ ಅಹರಹದಿ ನಿನ್ನಾ ಚನ್ನಾ 3
--------------
ಮಹಾನಿಥಿವಿಠಲ
ಶಾಮಸುಂದರ ಮಾಮನೋಹರ ತಾಮರಸಾಕ್ಷ ಪ ಪ್ರೇಮದಿ ಕೊಡು ಕಾಮಿತಾರ್ಥವ ಭೂಮಿವಲ್ಲಭ ಅ.ಪ ಮಾನವಿಲ್ಲದೆ ಹೀನ ನೃಪರನು ನಾನಾ ಪರಿಯಲಿ ಶ್ವಾನನಂದದಿ ನಾನು ಸೇವಿಸಿ ದೀನನಾದೆನೊ 1 ದಾನ ಧರ್ಮಗಳೇನು ಮಾಡದೆ ಮಾನನೀಯರ ಸಾನುರಾಗದಿ ನಾನು ಕೂಡಿದೆ ಜ್ಞಾನವಿಲ್ಲಾದೆ 2 ದಾಶರಥಿ ನೀ ಬೇಸರೀಸುತ ಘಾಸಿಗೈಯ್ಯಲೂ ಘೋಷಿಪರ್ಯಾರೊ ವಾಸವನುತ ರಂಗೇಶವಿಠಲನೆ 3
--------------
ರಂಗೇಶವಿಠಲದಾಸರು
ಶಾಮಸುಂದರನೆ ನೀನು ಪ್ರೇಮಾದಿ ಕಾಯೊ ಪ ಧರೆಯೊಳು ನಾ ಬಂದು ಥರಥರದಲ್ಲಿ ನೊಂದು ಮರುಗಿದೆ ತೋರ್ನಿನ್ನ ಚರಣಕಮಲವಾ 1 ಅನ್ಯನೆಂದರಿಯದೆ ನಿನ್ನವನೆಂದೆನ್ನ ಬನ್ನ ಬಿಡಿಸು ಬಾರೋ 2 ಶ್ರೀವತ್ಸಾಂಕಿತ ನೀನು ಶರಣಾಗತ ನಾನು ಸರಸಿಜನಯನ ಬ್ಯಾಗ ಬಾರೊ ನಿನ್ನ 3
--------------
ಸಿರಿವತ್ಸಾಂಕಿತರು
ಶಾರದಾಂಬೆ | ಜಯ ಜಯ | ಶಾರದಾಂಬೆಪ. ಶಾರದಾಂಬೆ ಅ.ಪ ನಿರತವು ನೀ ಮನ| ವೊಲಿಯುತಲೆನ್ನಯ | ಕರುಣಿಯೆ ನೀ ದಯ | ದೋರುತ ಪೊರೆವುದು | ಶಾರದಾಂಬೆ 1 ಹರಿನಾಮಾಮೃತ | ವನುದಿನವೆನ್ನಯ | ರಸನೆಯು ಸೇವಿಸು | ವಂದದಿ ನೀ || ವರಗಳ ನೀ ವಾ| ಗ್ದೇವಿಯೆ ಕರುಣಿಸು | ಶಾರದಾಂಬೆ2 ಮರಣದ ಕಾಲದಿ | ಹರಿಯನು ಬಾಯೊಳು | ಸ್ಮರಿಸುವ ಜ್ಞಾನವ | ನೀಯುತಲಿ || ಶರಣನ ಪೊರೆವುದು | ಪರಮ ಕೃಪಾಕರಿ | ಶಾರದಾಂಬೆ 3 ಮಾಡು ನೀ ಕೃಪೆಯ | ನ್ನನವರತ || ಜೋಡಿಸಿ ಕೈಗಳ | ವಿನಯದಿ ಬೇಡುವೆ | ಶಾರದಾಂಬೆ 4 ವೀಣಾಪಾಣಿ | ಕೋಕಿಲ ವಾಣಿ | ಪನ್ನಗವೇಣಿ | ಬೊಮ್ಮನ ರಾಣಿ || ದೀನನ ನುಡಿಗಭಿ | ಮಾನವನೀವುದು | ಶಾರದಾಂಬೆ 5
--------------
ವೆಂಕಟ್‍ರಾವ್
ಶಾರದಾವರ ಪ ಸಾರಿ ಸಂನ್ನುತಿಪ್ಪಾ | ವರವ ನೀಯೆನ್ನಪ್ಪಾ ಅ.ಪ ಪರ ಕಷ್ಟ ಪರಿಸೊ | ಇಷ್ಟಾರ್ಥ ಪಾಲಿಸೊ 1 ಭಾರವೊಪ್ಪಿಸಿದೆನು | ಪಾರಗಾಣಿಸಿದನು 2 ಮರೆಯ ಹೊಕ್ಕೆನೂ | ವರಕವಿತ್ವವನ್ನೂ | ಮೆರೆಯಿಸಿ ಇರಿಸೆನ್ನಾ ಸತ್ಕೀರ್ತಿ | ಸ್ಥಿರ ಸದಾನಂದಾರ್ತಿ 3
--------------
ಸದಾನಂದರು
ಶಾರದೆ ನಿನ್ನ ಪಾದವ ಆರಾಧಿಸುವೆವುವಾರಿಜ ಭವಕ್ಕೆ ಸೇರಿಸು ಹರಸು ಪ. ನಿತ್ಯ ಭಜಿಸುವೆವುಸಚ್ಚಿದಾನಂದನ ಚಿತ್ತದಿ ನಿಲ್ಲಿಸ1 ರಂಭೆ ನಮ್ಮಯ ಹೃದಯ ಅಂಬರದೊಳು ನಿಂತುಅಂಬುಜನಾಭನ ತುಂಬಿಸು ಮನದಿ2 ಅರಿಷಿಣ ಕುಂಕುಮ ಬೆರೆಸಿದ ಪರಿಮಳಸರಸದಿ ಕೈ ಕೊಂಡು ಅರಸಿಯರ ಗೆಲಿಸ 3 ಅತ್ತಿ ಹೂವಿನಸೀರೆ ಮುತ್ತಿನಾಭರಣವಅರ್ಥಿಲೆ ಕೈ ಕೊಂಡು ಮಿತ್ರೆಯರ ಗೆಲಿಸ4 ಪತಿ ಸೌಭಾಗ್ಯವ ರಚಿಸಲುಶೀಘ್ರದಿ ತೋರಿಸೆ ಕುಗ್ಗದೆ ನಮಗೆ 5 ಪತಿ ನಿತ್ಯ ರಾಮೇಶನ ತತ್ವವ ರಚಿಸುವೆ ಸತ್ಯವ ನುಡಿಸೆ ಶಾರದಾದೇವಿ6
--------------
ಗಲಗಲಿಅವ್ವನವರು