ಒಟ್ಟು 21209 ಕಡೆಗಳಲ್ಲಿ , 136 ದಾಸರು , 8951 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುದಿನಭವಾಬ್ಧಿಯಲ್ಲಿ ಭವತರಂಗ ರಾಶಿಯಲ್ಲಿಮುಳುಗುತಿಹೆ ಕೈಯ ಪಿಡಿಯೊ ಜನಕ ಕೃಷ್ಣಯ್ಯ ಪ.ಶ್ರೀನಿವಾಸ ನಿನ್ನ ಭಕ್ತಿ ಮಾಡದ ಅಘವಂತನೆಂದುಹೀನ ಜನರ್ಪಾಳಕಿಟ್ಟರೇನ ಹೇಳಲೊನೀನು ಪಾಲಿಪ ರಾಜ್ಯದಲ್ಲಜ್ಞಾನಿ ದೇಶಿಗನೊಬ್ಬ ಕೆಡಲುಹಾನಿ ಹೆಚ್ಚಳ ನಿನ್ನದಲ್ಲೆ ದೀನದಯಾಳು 1ಚಿತ್ತವೇಗಕ್ಕವಧಿ ಇಲ್ಲ ಹೊತ್ತುಕೊಂಡು ಕಂಡ ಕಡೆಗೆಸುತ್ತುತಿದೆ ತನ್ನ ದಳವ ಕೂಡಿ ರಂಗಯ್ಯಕರ್ತನಿನ್ನ ಪಾದದೆಡೆಯೆ ಒತ್ತಿ ನೀನಿದನಾಳಬೇಕುಹೆತ್ತ ತಾಯಿ ನೀನೆ ಗಡಾನೆತ್ತಿಕೊಳ್ಳಯ್ಯ 2ಹಳುವಗಳು ದಾರಿಕಾಣೆ ಸೆಳವಿನೊಳಾಶ್ರಯ ಕಾಣೆನಳಿನನೇತ್ರ ನೀನೆ ಕಾಯೊ ಸುಲಭರೊಡೆಯನೆಲೆಯ ತೋರಾತಂಕಹಾರಿ ಒಲಿದು ವರಾಭಯವ ಬೀರಿಒಲಿಯೊ ಪ್ರಸನ್ವೆಂಕಟಾದ್ರಿನಿಲಯ ಉದಾರಿ 3
--------------
ಪ್ರಸನ್ನವೆಂಕಟದಾಸರು
ಅಪಮಾನವಾದರೆ ಒಳಿತು |ಅಪರೂಪ ಹರಿನಾಮ ಜಪಿಸುವ ಮನುಜಗೆ ಪಮಾನದಿಂದಲಿ ಅಭಿಮಾನ ಪುಟ್ಟವುದು |ಮಾನದಿಂದಲಿ ತಪ ಹಾನಿಯಾಯಿತು ಹಾನಿಯಾಗುವುದು ||ಮಾನಿ ಕೌರವನಿಗೆ ಹಾನಿಯಾಯಿತು-ಅನು-|ಮಾನವಿಲ್ಲವು ಮಾನ-ಅಪಮಾನ ಸಮರಿಗೆ 1ಅಪಮಾನದಿಂದಲಿ ತಪವೃದ್ಧಿಯಾಹುದು |ಅಪಮಾನದಿಂ ಪುಣ್ಯ ಸಫಲವಾಗುವುದು ||ಅಪಮಾನದಿಂದಲಿನೃಪಧ್ರುವರಾಯಗೆ |ಕಪಟನಾಟಕ ಕೃಷ್ಣ ಅಪರೋಕ್ಷನಾದನು2ನಾನೇನ ಮಾಡಲಿ ಆರಲ್ಲಿ ಪೋಗಲಿ |ಕಾನನಚರರಾರಾಧ್ಯ ನೀನಿರಲು ||ದೀನರಕ್ಷಕ ನಮ್ಮ ಪುರಂದರವಿಠಲನೆ |ಏನು ಬೇಡೆನಗಪಮಾನವೆ ಇರಲಿ 3
--------------
ಪುರಂದರದಾಸರು
ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ |ಕಪಟನಾಟಕ ಸೂತ್ರಧಾರಿ ನೀನೆಪನೀನು ಆಡಿಸಲು ಜಡವೊನಕೆ ಅಭಿನಯಬೊಂಬೆಏನು ಬಲ್ಲದು ಬೇರೆ ಕೃತಿಯನೊಂದ ||ನೀನಿಟ್ಟ ಸೂತ್ರದಿಂದಲುಗೆ ಕೈಕಾಲುಗಳು |ನೀನೆ ಮಗ್ಗಿಸಲು ಮಗ್ಗುವ ದೇಹ ತಾನಾಗೆ 1ಒಂದೆಂಟು ಬಾಗಿಲುಗಳುಳ್ಳ ಪಟ್ಟಣಕೆ ತನ-ಗೆಂದು ಇಪ್ಪತ್ತಾರು ಮನೆಯಾಳ್ಗಳ ||ತಂದು ಕಾವಲುನಿಲಿಸಿ ಎನ್ನ ನೀನೊಳಗಿಟ್ಟುಮುಂದೆ ಭವಭವದಿ ದಣಿಪುದು ನಿನ್ನದನ್ಯಾಯ 2ಯಂತ್ರವಾಹಕನೀನೆ ಒಳಗೆ ಇದ್ದೂ ಎನ್ನ-ಸ್ವತಂತ್ರನೆಂದೆನಿಸಿ ಕೊಲಿಸುವರೆ ಹೇಳೊ ||ಕಂತುಪಿತ ಲಕ್ಷ್ಮೀಶ ಎಂತಾದಡಂತಹುದನಂತ ಮೂರುತಿ ನಮ್ಮಪುರಂದರವಿಠಲ3
--------------
ಪುರಂದರದಾಸರು
ಅರಿಯಧಮನ ಸಂಗ ಕರಗಿದ್ದ ಹಿತ್ತಾಳೆಒರೆದು ನೋಡಲು ಬಣ್ಣ ಬರುವುದೇ ಹೇಳಿ ಪ.ಮಂಜುನೀರನೆ ತಂದು ತಂದನವ ಹದಮಾಡಿಒಂದಾಗಿ ಕೂಡಿ ಪರಿಮಳವ ಬೇಗಹಂದಿಯನು ಕರೆದು ಸೆಲೆ - ಪೊಸಲು ಅದು ತನ್ನಗಂಜಲವ ನೆನೆನೆನೆದು ಹೋಹಂತೆ ರಮಣಿ 1ಚೀನಿಕೋಲನೆ ತಂದು ಕೊರೆದು ತುಂಡನೆ ಮಾಡಿಶ್ವಾನನನು ಕರೆದು ಬಾಯೊಳಗಿರಿಸಲುತಾನದನು ಸವಿಸವಿದು ನೋಡಲರಿಯದ ತನ್ನದನದ ಮೂಳೆಯ ನೆನೆದು ಹೋಹಂತೆ ರಮಣಿ 2ಅಂತರವನರಿಯದಲೆ ಮಿಯಾ ಹೋಗುವುದರಿಂದಅಂತೆ ಇರುವುದೇ ಲೇಸು ಬಹು ಪ್ರೌಢರುಚಿಂತಿತಾರ್ಥವನೀವ ಸುಗುಣ ಪುರಂದರವಿಠಲನೆಂತೆಂತು ಭಜಿಸಿದರೆ ಅಂತಂತೊಲಿವನಲ್ಲರೆ 3
--------------
ಪುರಂದರದಾಸರು
ಅರಿಯರು ಮನುಜರು ಅರಿತೂ ಅರಿಯರುಧರೆಗೆ ಒಡೆಯ ಶ್ರೀ ಹರಿಯಲ್ಲದಿಲ್ಲವೆಂದು ಪಶಿವಬಲ್ಲ ಧ್ರುವಬಲ್ಲ ದ್ರೌಪದಿ ಬಲ್ಲಳುಅವನಿ ಪಾಲಿಪ ಜನಕನೃಪ ಬಲ್ಲನು ||ಯುವತಿಗೆ ಶಾಪವಿತ್ತ ಗೌತಮ ಬಲ್ಲನುಭವರೋಗ ವೈದ್ಯ ಶ್ರೀಹರಿಯಲ್ಲದಿಲ್ಲವೆಂದು 1ನಾರದ ಮುನಿ ಬಲ್ಲವಾರಿಜೋದ್ಭವ ಬಲ್ಲಪಾರಾಶರನು ಬಲ್ಲ ಮನು ಬಲ್ಲನು ||ಧೀರ ಭೀಷ್ಮನು ಬಲ್ಲ ಪಾರ್ವತಿ ಬಲ್ಲಳುಕಾರಣಕರ್ತ ಶ್ರೀಹರಿಯಲ್ಲದಿಲ್ಲವೆಂದು 2ದಿಟ್ಟ ಪ್ರಹ್ಲಾದ ಮೊರೆಯಿಟ್ಟ ಗಜೇಂದ್ರ ಬಲ್ಲದೃಷ್ಟಾಂತ ಕಂಡ ಭೃಗುಮುನಿ ಬಲ್ಲನು ||ಕೊಟ್ಟ ಬಲಿಯು ಬಲ್ಲ ಕೆಟ್ಟಜಾಮಿಳ ಬಲ್ಲಸೃಷ್ಟಿಗೆ ಪುರಂದರವಿಠಲನಲ್ಲದಿಲ್ಲವೆಂದು 3
--------------
ಪುರಂದರದಾಸರು
ಅವನೆ ಜೀವಾಂಕಿತ ಪ್ರೇತ ನೋಡಿಭುವಿಗೆ ಭಾರನು ಅವನುಹರಿಹಗೆಯನುಪ.ಹರಿಕಥೆಗೆ ಬೇಸತ್ತು ಹರಟೆಯನೆ ಕೇಳುವವಹರಿಯಗುಣ ಹೊಗಳದೊಣಪಂಟ ಬಡಿವವಹರಿಮರೆದು ಮಲಭಾಂಡವನು ತುಂಬಿಕೊಳುವವಹರಿಭಟರ ನಡೆನುಡಿಗೆ ಸೈರಿಸದವ 1ಹರಿಪ್ರಿಯರ ನೆರೆಗಾರದತ್ತತ್ತ ಜಾರುವವಹರಿಯವರಿಗುಣಿಸದೆ ಧನ ಕಳೆವವಹರಿಯಾತ್ರೆಗಂಜಿ ಬಲವನೆ ಕೊಳುವವಹರಿವ್ರತವ ಬಿಟ್ಟಿತರ ವ್ರತ ಕೊಳುವವ 2ಹರಿಪದಾಂಬುಜವಜರಿದುಹಲವು ನೀರ್ಕುಡಿವವಹರಿಲಾಂಛನಿಲ್ಲದ ಚೆಲುವಿಕೆಯವಹರಿಪ್ರಸನ್ವೆಂಕಟೇಶನ ಪಾದಾಬ್ಜವ ಭಜಿಸಿಹರಿಪರದೈವವೆನ್ನದ್ಹೊಲೆಮನದವ3
--------------
ಪ್ರಸನ್ನವೆಂಕಟದಾಸರು
ಆ ಸುಖ ಹರಿಮರೆದವಗಯ್ಯದೋಷಾಂಧಃತಮದೊಳಗೇನು ಸುಖ ಪ.ಕಂಠತ ವ್ಯಸನ ಹೊಲಬಿಲ್ಲದೆ ಧರ್ಮಕಂಟಕಶಾಸ್ತ್ರವಿಚಾರಕಗೆಎಂಟುವೃಷಭಹೂಡಿ ಮಹಾಶ್ರಮಿಸಿ ಬರೆದಂಟು ಬೆಳೆದವನಿಗೇನು ಸುಖ 1ಅನಿರುದ್ಧಗಖಿಳವರ್ಪಿಸಿದಾನಲ್ಪಗುಣದೆ ಮತಿ ದೃಢವಿಲ್ಲದ ಮಾನವಗೆಹಣ ವೆಚ್ಚಿಸಿ ರಿಣದೆಗೆದಿಟ್ಟ ಧಾನ್ಯವತೃಣಸಮ ವಿಕ್ರಿಸಲೇನು ಸುಖ 2ಶಂಖಪಾಣಿಯ ನಿಂದಿಸಿ ಕರ್ಮಶಕ್ತಿಯಶಂಕರ ರವಿಗಣೋಪಾಸಕಗೆಸಂಖ್ಯೆ ಇಲ್ಲದ ವಸ್ತು ನಿಶ್ಶೇಷದಿಸುಂಕಕೆ ತೆತ್ತಿದರಾವ ಸುಖ 3ಆಧ್ಯಾತ್ಮಾನುಭವ ಗುರುಕೃಪೆ ಇಲ್ಲದೆವಿದ್ಯೋನ್ಮತ್ತ ದಯಾಶೂನ್ಯಗೆನದ್ಯೋಲ್ಲಂಘಿಸಿ ದಡದಲಿ ನಾವೆ ಮುಳುಗಿದರೆ ಪ್ರಾಣಿಗಳಿಗೇನು ಸುಖ 4ಪ್ರಸನ್ನವೆಂಕಟ ಪದಸರೋರುಹಗಳಪ್ರಸನ್ನೀಕರಿಸದೆ ಸಾಹಸಬಡುವಅಶುಭದನುಜರು ತಪಮಾಡಿ ತುದಿಯಲಿವಿಷಮಗತಿಗ್ಹೋಗಲೇನು ಸುಖ 5
--------------
ಪ್ರಸನ್ನವೆಂಕಟದಾಸರು
ಆಕಳ ಕಾಯ್ದ ಗೋಕುಲವಾಸನುಆಕಳ ಕಾಯ್ದ ಗೋಕುಲವಾಸನನೇಕ ಗುಣನಿಧಿನಾಕೇಶವಿನುತಪುರದಲ್ಲಿದ್ದಂಥ ಕೇರಿಯ ಮಕ್ಕಳ ನೆರಹಿ ಯಾದವ ಪರಿವಾರವೆಲ್ಲನಳಿನಕೇತಕಿ ಎಳೆಯ ಮಾವಿನ ತಳಿಲ ವನದ ಒಳಗೆ ರಂಗನುತೊಂಡರೊಡಗೂಡಿಪುಂಡರೀಕಾಕ್ಷಗೋವಿಂದ ಕಾಳಿಯ ದಂಡೆಯಲ್ಲಿರಿಸಿಕಡು ತೃಷದಿ ಆ ಮಡುವಿನುದಕ ಕುಡಿದು ಗೋವುಗಳೆಲ್ಲ ನಡುಗಿ ಬೀಳಲುಹೊಕ್ಕ ಭರದಿ ದೇವಕಿ ಸುತನ ಸಿಕ್ಕಿಸಿಕೊಂಡು ಬಾಲಕೆ ಬಿಗಿಯಲುಇಂದಿರಾಪತಿ ಆನಂದದಿಂದಾಡಲು ಬಂದುಬೊಮ್ಮವಾಯುಉರಗಾಂಗನೆಯರ ಮೊರೆಯ ಲಾಲಿಸಿ ಕರುಣಿ ಅವರಿಗೆ ಗರುಡನ ಭಯಗರಳಭಯದಿ ಧರೆಗೆ ಬಿದ್ದಂಥ ತುರುಗಳಿಗೆಲ್ಲ ಸ್ಮರಣೆ ಬಪ್ಪಂತೆಮಂಗಳ ಮೂರುತಿ ಪೊಂಗೊಳಲೂದುತ್ತ ತಿಂಗಳಿನಂದದಿ
--------------
ಗೋಪಾಲದಾಸರು
ಆಗಮವ ತಮನೊಯ್ಯೆ | ಅವನ ಪಾತಾಳದಲಿ |ತಾಗಿದಲೆವರಿದು ವೇದಾವಳಿಗಳಾ |ಆಗ ತಂದ್ದತ್ತ ಮಚ್ಛಾಮಾರನೆ ವುದಯವಾಗುತಿದೆವುಪ್ಪುವಡಿಸೊ ಪಹರಿಯ ಭಾಗೀರಥಿ ಪಿತನೆ |ಭಾಗವತ ಜನಪ್ರಿಯನೆ |ಯೊಗಧೆಯ ವಪ್ಪುವಡಿಸೊ ಹರಿಯೆ | ಭಾಗೀರಥಿ ಪಿತನೆ 1ದೇವಾಸುರರು ಶಿಂದ್ಧು | ಮಥನದಲಿ ಗಿರಿ ಮುಳುಗೆ |ದೆವಾ ರಾಕ್ಷಿಸುತಾ ಕ್ಷಿಶನ ಉಳಿದೂ |ಆನೊಯಲು ವಾಗಿರಿಯ | ನಂತ ಕೂರ್ಮನೆ ವುದಯವಾಗುತಿದೆವಪ್ಪುವಡಿಸೊ ಹರಿಯೆ 2ಭೂತಳವ ಕಾದ್ದೊಯಿದ | ಹರಂಣ್ಯಕ್ಷನೆಂಬ ನರಪಾತಳದ |ಲೊರಶಿನಿಲಿಶಿದ ಜಗಂಗಳಾ | ಖ್ಯಾತಿ ಪಡೆದ ಪ್ರತಿಮ |ವರಹಾರೂಶಪನೆ ಸುಪ್ರಭಾತದಲಿವುಪ್ಪವಡಿಸೊ ಹರಿಯೇ 3ಭೂದೇವದೆವರನು | ಭಾಜಿಸುವ ಶಿವುವ ಪ್ರಹ್ಲಾದಗಾ | ಗಾಹವನುಕವಲುಗಿಶಿ ಉಗದೆ | ತೂದ ಕರುಳಿನಮಾಲೆ |ಯಪ್ಪನರಶಿಂಹ ಕಾರುಣೋದಯದೊ ವಪ್ಪವಡಿಸೊ ಹರಿಯೆ 4ಬರಿ ಭಕತಿಯಿಂದ ಮೊರಡಿನೆಲನ ಮಾತು ಕೂಡೆ |ನೆಲ ನಭನೆ ನೀರಡಿಯ ಮಾಡಿ ಬೆಳೆದೆ |ನಳಿನ ಜಾಂಡವನೊಡದೆ | ವಾಮನ ತ್ರಿವಿಕ್ರಮನೆಬೆಳಗಾಯಿತುಪ್ಪವಡಿಸೋಹರಿಯೆ 5ಕಾತ್ರ್ತವಿಯ್ರ್ಯಾರ್ಜುನನ ಕಡಿದು ಕ್ಷತ್ರಿಯ ಕುಮುದು |ಮಾತ್ರ್ತಂಡನಾದೆ ಮಾತೆಯ ಮಾತಿಗೆ ಆತ್ರ್ತಜನಬಂಧುವೆ | ಪರಶುರಾಮನೆ ಬ್ರಾಹ್ಮಿ ಮೂಹೋರ್ತದಲ್ಲಿವುಪ್ಪವಡಿಸೊ ಹರಿಯೆ 6ಪಂಪಾದಿಪನವರದ | ಅಮರಪತಿಯಾದ ಷ್ಕಂಪ್ಪರಾವಣನಗೆಲಿದವನನುಜಗೆ ಸಂತ್ಪಾರಂಪರೆಯಯಿತ್ತರಘುರಾಮದೆಶೆ | ಕೆಂಪಾಯಿತುಪ್ಪ ವಡಿಸೊಹರಿಯೆ 7ಯಿಂದು ರವಿಕುಲಗಳಲಿ | ಜನಿಶಿದಮಜರಾಜ| ಬೃಂದಾರಿಯಾಗಿಭೂಭರವಿಳಿಪಿದೆ | ನಂದನಂದನ ಕೃಷ್ಣ |ಆಂಗಯಗರಗಾಣ ಬಂದವಿದವುಪ್ಪ ವಡಿಸೊ ಹರಿಯೇ 8ತ್ರಿಪುರದಮಕಾರಿಗಳ | ಸತಿಯರಿಗೆವುಪಸತಿಗಳುಪದೆಶಗಳ ತೊಟ್ಟುಭ್ರಮಗೊಳಿಶಿದುತ್ರಿಪುರ ಹತಗಂಬಾದೆ |ತ್ರಿಪುರ ಸಾಧಕ ಜಾದ್ಕ ತಪ ನವಿದೆವುಪ್ಪವಡಿಸೊ ಹರಿಯೆ9ಆಶಿ ಖಾಡವಿಡಿದಾಶ್ವವೇರಿ ಕೋಪದಿ ವಿಷ್ಣು |ಯಶಶಿನಲಿ ಕಲ್ಕ್ಯಾವ | ತಾರನಾದೆ |ಕುಶಿರಿದರಿದಶಸುವೇಪದಶ್ಯೂಗಳಗೆಲಿದೆ | ಬಿಶಿಲಾಯಿತುಪ್ಪವಡಿಸೊ ಹರಿಯೆ 10ಯಿಂದ ಚಂದ್ದ್ರ್ಯಾದಿಗಳ್ ಬ್ರಹ್ಮ ರುದ್ದ್ರಾದಿಗಳುಪೇಂದ್ರಜಯ |ಜಯಯೆನುತ ಬಂದೈಧರೆ | ವೀಂದ್ದ್ರವಾಹನ ಪುರಂದರವಿಠಲಸೌಭಾಗ್ಯ ಸಾಂದ್ದ್ರನಿಧಿ ವುಪ್ಪವಡಿಸೊ ಹರಿಯೆ 11
--------------
ಪುರಂದರದಾಸರು
ಆಗಲಿ ಹರಿಕೃಪೆ ಭಾಗವತರ ಸಂಗನೀಗುವೆ ನಿಮ್ಮ ದುರಿತಗಳಿರ ಪ.ಹರಿನಂಟರೋಲೈಸಿ ಜ್ಞಾನಾಸ್ತ್ರ ಗಳಿಸುವೆಹರಿನಾಮ ವಜ್ರಕವಚ ತೊಡುವೆಹರಿನಿರ್ಮಾಲ್ಯದ ಉತ್ತಮಾಂಗಾಭರಣವಿಟ್ಟುನೆರೆನಿಮ್ಮ ನಾಮ ನಿರ್ನಾಮವ ಮಾಳ್ಪೆ1ಶ್ರೀಲೋಲನಂಘ್ರಿ ಸಮ್ಮದ ಸೈನ್ಯವ ಕೂಡಿತಾಳ ದಂಡಿಗೆ ಗೀತಾಯುಧಗಳಿಂದಕಾಲಕಾಲಕೆ ನಿಮ್ಮ ಮೇಳವ ಮುರಿದಾಡಿಹಾಳು ಮಾಡುವೆ ಕೈಯಲಿಕಡ್ಡಿಕೊಡುವೆ2ಇಕ್ಷುಸ್ವಾದಾದರೆ ಬೇರಸಹಿತ ನೀವುಭಕ್ಷಿಸಬೇಡಿ ಬಾರದೆ ಮರಳಿಪಕ್ಷಿಗಮನ ಪ್ರಸನ್ನವೆಂಕಟೇಶನಪಕ್ಷದವರಹಗೆಹೊಲ್ಲಸಲ್ಲ3
--------------
ಪ್ರಸನ್ನವೆಂಕಟದಾಸರು
ಆಗಲೆ ಕಾಯಬೇಕು ಅಂಬುಜಾಕ್ಷನೆ ಎನ್ನ |ಈಗ ನೀ ಕಾಯ್ದರೇನು ಕಾಯದಿದ್ದರೇನು ಪಹೊನ್ನು ಹಣ ಎನಗುಂಟು ಹೆಸರಾದ ಮನೆಯುಂಟು |ಚಿನ್ನ-ಚೀನಾಂಬರವುಂಟು ಚೆಲುವುಪ್ಪರಿಗೆಯುಂಟು ||ಮೊನ್ನೆ ಹುಟ್ಟಿದ ಗಂಡು ಮಗು ಒಂದು ಎನಗುಂಟು |ಸನ್ನೆ ಶಕ್ತಿಗುಂದಿದಾಗ ಸಂಗಡಲೊಬ್ಬರ ಕಾಣೆ 1ನಂಟರಿಷ್ಟರು ಉಂಟು ನೆರೆ-ಹೊರೆ ಎನಗುಂಟು |ಎಂಟು ಭಾಗ್ಯಗಳುಂಟು ಬಂದು ಹೋಗುವರುಂಟು ||ಕಂಠಕೆ ಹೊದ್ದಿದ ಕಾಂತೆಯರೆನಗುಂಟು |ಒಂಟಿಯಾಗಿ ಹೋಗುವಾಗ ಸಂಗಡೊಬ್ಬರನು ಕಾಣೆ 2ಒಂದು ಕ್ಷಣ ಮೊದಲಾದವಾತಘಾತಗಳಿಂದ |ಅಂದಿನ ವ್ಯಾಧಿಗಳು ಬಾಧಿಸುತಿರಲು ||ಇಂದಿರೇಶನೆ ನಿನ್ನ ಸಂಗವೆಲ್ಲವೆ ಬಿಟ್ಟೆ |ಬಂದಿನ್ನು ಕಾಯಬೇಕೊ ಪುರಂದರವಿಠಲ 3
--------------
ಪುರಂದರದಾಸರು
ಆಚರಸ ನೀ ಬಾಚರಸ ನೀ ಈಚಿಯೊಳುಕಟ್ಟಿರುವ ಪೆಸರಿದ ನೆರೆದು ಸುವಾಚ್ಯ ಸಂಪನ್ನಸತ್ಕೀರ್ತಿಕರನೆನಿಪ ಲಿಂಗರಸ ಪೂರ್ಣ ಪುರುಷ |ಶ್ರೀಚಂದ್ರಮೌಳಿಪದಾಂಬುಜಮಧುಪ........... ದೇ ನಾಮ ಗುಜಾಯಿ ಗರ್ಭಜ......... ಸಪ್ತ ಋಷಿಗಳವತಾರನೆಂಬ ತೇಜೆನಿಸಿದ ರಾಶಿಗೆ1xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'(ಹಿರಿಯ) ಮಗ ಮುದ್ದಣ ಖೊಬ್ಬರಸ ಕಮಲರಸ.............ಹಿ ರಮಣ ಮೋಬರಸ ಬಾಲರಸ ತಿಪ್ಪರಸಸಿರಿವಂತರಿವರು ಪೂರ್ವಜ ಲಿಂಗರಸನಸತಿಗುಜಾಯಿಕುವರರೆನಿಸಿ | ಮೆರೆವ ಸಿಂಧಾಪುರದಿ ಕರಣಿಕಿರ್ಪಪ್ರತಿಸೃಷ್ಟಿ ಕರ್ತಾ ವಿಶ್ವಾಮಿತ್ರ ಗೋತ್ರಜ ಸಂಗಮೇಶ್ವರನ ಕೃಪಾಪಡೆದಹರ್ನಿಶಿ ಭಕ್ತರೆನಿಸಿಹನರಲೋಕದಿ2
--------------
ಜಕ್ಕಪ್ಪಯ್ಯನವರು
ಆಜೆÕಯಿಂದಾಳಬೇಕಣ್ಣ -ಗಂಡ <?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ನಾಜೆÕಯ ಮೀರಿ ನಡೆವ ಲಂಡಹೆಣ್ಣ ಪ.ಅತ್ತೆ - ಮಾವನಿಗಂಜದವಳ - ತನ್ನಉತ್ತಮ ಪುರುಷನಜರಿದು ಝಂಕಿಪಭೃತ್ಯರ ಕಂಡು ಬಾಧಿಪಳ - ನಡುನೆತ್ತಿಯಿಂದಲೆ ಮೂಗ ಕೆತ್ತಬೇಕವಳ 1ಹಟ್ಟಿ - ಹಟ್ಟಿ ತಿರುಗುವಳ - ತನ್ನಗಟ್ಟಿತನದಿ ಮಾಕು ಮಲುಕು ನುಡಿಯುವಳಬಿಟ್ಟಕುಚವ ತೋರಿಸುವಳ - ಇನ್ನುಹುಟ್ಟು ಹುಟ್ಟಿಲಿ ಬಾಯಿ ಕುಟ್ಟಬೇಕವಳ 2ಎಂದೂ ಈ ಪರಿಯಿರುವವಳ - ಇನ್ನುಕೊಂದು ಮಾಡುವುದೇನು ಬಿಡಬೇಕವಳಒಂದಿಷ್ಟು ಗುಣವಿಲ್ಲದವಳ - ಪುಪುರಂದರವಿಠಲರಾಯನಗಲ್ಲದವಳ 3
--------------
ಪುರಂದರದಾಸರು
ಆದಿಗುರುರಾಯ ನಮ್ಮ ಮುಖ್ಯ ಪ್ರಾಣಭವವ್ಯಾಧಿ ಕೋಟಿ ಭೇಷಜನೆಮುಖ್ಯಪ್ರಾಣಪ.ಜೀವ ತೊರೆದ ಪ್ಲವಗಗಣಕೆಮುಖ್ಯಪ್ರಾಣಸಂಜೀವನ ತಂದೌಷಧವನಿತ್ತಮುಖ್ಯಪ್ರಾಣಹೇವಿನ ರಕ್ಕಸರಮಾರಿಮುಖ್ಯಪ್ರಾಣಹನುಮದೇವ ದೇವ ರಾಘವಪ್ರಿಯಮುಖ್ಯಪ್ರಾಣ1ಸೋಜಿಗದಿ ಕೀಚಕನ ಕೊಂದಮುಖ್ಯಪ್ರಾಣಭೀಮಆಜನುಮ ಅಸಹಾಯಶೂರಮುಖ್ಯಪ್ರಾಣರಾಜಸೂಯಕೆ ಮುಖ್ಯಕರ್ತಾಮುಖ್ಯಪ್ರಾಣಕ್ಷಾತ್ರತೇಜಪೂರ್ಣ ಕೃಷ್ಣಾಂಕಿತನೆಮುಖ್ಯಪ್ರಾಣ2ರೌಪ್ಯಪೀಠದಿ ಕೃಷ್ಣಾರ್ಚಕನೆಮುಖ್ಯಪ್ರಾಣಮಧ್ವ ಸಾರೂಪ್ಯ ಮುಖ್ಯದ ಮುಕ್ತಿದಾತಮುಖ್ಯಪ್ರಾಣಗೌಪ್ಯ ಶ್ರುತ್ಯಜ್ಞಾಚಾರ್ಯನೆಮುಖ್ಯಪ್ರಾಣದೇದೀಪ್ಯ ಪ್ರಸನ್ವೆಂಕಟಪತಿಪ್ರಿಯಮುಖ್ಯಪ್ರಾಣ3
--------------
ಪ್ರಸನ್ನವೆಂಕಟದಾಸರು
ಆನಂದಂ ಮಹದಾನಂದಂಹರಿಯ ಭಜನ ಬ್ರಹ್ಮಾನಂದಂ ಪಸತ್ಯ ನುಡಿಯುವುದೆ ಆನಂದಂ ತನ್ನಗುರ್ತ ತಿಳಿಯುವುದೆ ಆನಂದಂನಿತ್ಯನಿರ್ಮಲನ ಸತ್ಯ ಗುಣಂಗಳನುಭಕ್ತಿಯಿಂ ಭಜಿಸೆ ನಿತ್ಯಾನಂದಂಸತ್ಯ ಸತ್ಯ ಸರ್ವೋತ್ತಮ ಹರಿಯೆಂದುಅರ್ತಿಯಿಂ ಭಜಿಸೆ ಅತ್ಯಾನಂದಂ 1ಆಶ ನೀಗುವುದೆ ಆನಂದಂಭವಪಾಶಗೆಲಿಯುವುದೆ ಆನಂದಂಶ್ರೀಶ ಕೇಶವನ ಸಾಸಿರ ನಾಮದಧ್ಯಾಸದಿರುವುದೆ ಲೇಸಾನಂದಂದೋಷದೂರ ಭವಪಾಶಹರನ ಅನುಮೇಷ ಪÀಠಿಸೆ ಸ್ಥಿರದಾನಂದಂ 2ಹಮ್ಮನಳಿವುದೇ ಆನಂದಂ ತಾಸುಮ್ಮನಿರುವುದೆ ಆನಂದಂಕರ್ಮರಹಿತನಾಗಿ ಬ್ರಹ್ಮಪಿತನಪಾದಒಮ್ಮನದೊಳಗಸಮಾನಂದಂಧರ್ಮವಿಡಿದು ಪರಬ್ರಹ್ಮ ಶ್ರೀರಾಮನಮರ್ಮ ತಿಳಿಯೆ ನಿರ್ಮಲಾನಂದಂ 3
--------------
ರಾಮದಾಸರು