ಒಟ್ಟು 21209 ಕಡೆಗಳಲ್ಲಿ , 136 ದಾಸರು , 8951 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

208ಎಂಥ ಚೆಲುವೆಗೆ ಮಗಳನು ಕೊಟ್ಟನುಗಿರಿರಾಜನು ನೋಡಮ್ಮಮ್ಮ |ಕಂತುಹರಶಿವ ಚೆಲುವನೆನ್ನುತ ಮೆಚ್ಚಿದನೇ ನೋಡಮ್ಮಮ್ಮಪಮನೆಯೆಂಬುದು ಸ್ಮಶಾನವು ನೋಡೇಗಜಚರ್ಮಾಂಬರವಮ್ಮಮ್ಮ |ಹಣವೊಂದೆಂಬುದು ಕೈಯೊಳಗಿಲ್ಲವುಕಪ್ಪರವಿದೆ ನೋಡಮ್ಮಮ್ಮ 1ಮೋರೆಗಳೈದು-ಮೂರು ಕಣ್ಣಗಳುವಿಪರೀತವ ನೋಡಮ್ಮಮ್ಮಘೋರವಾದ ರುಂಡಮಾಲೆಉರಗಭೂಷಣವನು ನೋಡಮ್ಮಮ್ಮ 2ಭೂತ ಪ್ರೇತ-ಪಿಶಾಚಿಗಳೆಲ್ಲಾ ಪರಿವಾರವು ನೋಡಮ್ಮಮ್ಮ |ಈತನ ನಾಮವು ಒಂದೇ ಮಂಗಳಕರವುಹರನ ನೋಡಮ್ಮಮ್ಮ 3ತಲೆಯೆಂಬುದು ನೋಡಿದರೆ ಜಡೆಯುಹೊಳೆಯುತಿದೆ ನೋಡಮ್ಮಮ್ಮಹಲವು ಕಾಲದ ತಪಸಿ ರುದ್ರನಮೈಬೂದಿಯು ನೋಡಮ್ಮಮ್ಮ 4ನಂದಿವಾಹನನ ನೀಲಕಂಠನ ನಿರ್ಗುಣನನು ನೋಡಮ್ಮಮ್ಮ |ಇಂದಿರೆರಮಣನ ಪುರಂದರವಿಠಲನಹೊಂದಿದವನ ನೋಡಮ್ಮಮ್ಮ 5
--------------
ಪುರಂದರದಾಸರು
211ಶೃಂಗಾರವಾಗಿದೆ ಸಿರಿರಂಗನ ಮಂಚಅಂಗನೆಮಹಲಕುಮಿಯರಸ ಮಲಗುವ ಮಂಚಪಬಡಿಗ ಮುಟ್ಟದ ಮಂಚ | ಮಡುವಿನೊಳಿಹ ಮಂಚ |ಮೃಡನ ತೋಳಲಿ ನೆಲಸಿಹ ಮಂಚ ||ಹೆಡೆಯುಳ್ಳ ಹೊಸಮಂಚ ಪೊಡವಿ ಹೊತ್ತಿಹ ಮಂಚ |ಕಡಲ ಶಯನ ಶ್ರೀ ರಂಗನ ಮಂಚ 1ಕಣ್ಣು-ಮೂಗಿನ ಮಂಚ ಬೆನ್ನು ಬಾಗಿದ ಮಂಚ |ಹುಣ್ಣಿಮೆಯ ಚಂದ್ರಮನ ಅಡ್ಡಗಟ್ಟುವ ಮಂಚ ||ಬಣ್ಣ ಬಿಳುಪಿನ ಮಂಚ ಹೊನ್ನು ಕಾದಿಹ ಮಂಚ |ಚೆನ್ನಿಗ ಪರೀಕ್ಷೀತನ ಪ್ರಾಣವಕೊಂಡಮಂಚ2ಕಾಲಿಲ್ಲದೋಡುವ ಮಂಚ | ಗಾಳಿ ನುಂಗುವ ಮಂಚ |ನಾಲಗೆಯೆರಡುಳ್ಳ ವಿಷದ ಮಂಚ ||ಏಳು ಹೆಡೆಯ ಮಂಚ | ಮೂಲೋಕದೊಡೆಯನ ಮಂಚ |ಕಾಳಗದಲಿ ಕಿರೀಟಿಯ ಮುಕುಟಕೊಂಡಮಂಚ3ಹಕ್ಕಿಗೆ ಹಗೆಯಾದ ಮಂಚ | ರೊಕ್ಕ ಮುಟ್ಟದ ಮಂಚ |ರಕ್ಕಸರೆದೆದಲ್ಲಣನ ಮಂಚ ||ಸೊಕ್ಕು ಪಿಡಿದ ಮಂಚ | ಘಕ್ಕನೆ ಪೋಗುವ ಮಂಚ |ಲಕ್ಕುಮಿ ರಮಣ ಶ್ರೀ ಹರಿಯ ಮಂಚ 4ಅಂಕುಡೊಂಕಿನ ಮಂಚ | ಅಕಲಂಕ ಮಹಿಮ ಮಂಚ |ಸಂಕರುಕ್ಷಣನೆಂಬ ಸುಖದ ಮಂಚ |ಶಂಕರನ ಕೊರಳಿಗೆ ಪದಕವಾಗಿಹ ಮಂಚ |ವೆಂಕಟಪುರಂದರವಿಠಲ ರಾಯನ ಮಂಚ5
--------------
ಪುರಂದರದಾಸರು
215ಅಗಲಿ ಸೈರಿಸಲಾರದೀ ಮನ |ಅಗಲದಿಪ್ಪುದೆ ಜೀವನ ||ಪೊಗರೊಗೆವ ನಗೆಮೊಗದ ಸೊಬಗಿನ |ಸುಗುಣಸಿರಿ ಗೋಪಾಲನ ಪಮುನ್ನ ಸಂಸ್ಕøತಿಪಾಶದೊಳು ಬಿದ್ದನ್ಯಥಾರಕ್ಷಕರ ಕಾಣದೆ |ಬನ್ನಬಡುತಿಹ ಜನರನೀಕ್ಷಿಸಿ ಪೂರ್ಣ ಕರುಣಕಟಾಕ್ಷದಿ ||ತನ್ನ ನಾಮದ ಸುಧೆಯನುಣ್ಣಿಸಿ ತನ್ನ ಭಜನೆಯಸುಖವ ತೋರಿಸಿ |ತನ್ನ ದಾಸರ ಮಾಡಿ ಕೊಂಡಿಹ ಚೆನ್ನಸಿರಿಗೋಪಾಲನ 1ಶೀಲಗುಣ ಕಥನಗಳನರಸದೆ ಕೀಳು ಚಾರಿತ್ರ್ಯಗಳ ಬಗೆಯದೆ |ಲೋಲಚಿತ್ತದಿ ಮಾಡುತಿಹ ಅಘಜಾಲ ಕೋಟಿಗಳೆಣಿಸದೆ ||ಕಾಲದಿಂ ಬಹುನಂಬಿದವರನು ಲೀಲೆಯಿಂದಭಿಮಾನಿಸುತ-ಪರಿ-|ಪಾಲಿಸುತ್ತಿಹ ಮಂಗಳಾತ್ಮಕ ಶೀಲ ಕಂಠಮೂರ್ತಿಯ 2ಭಕ್ತಿ ಕರ್ಮಜಾÕನ ಯೋಗ ವಿರಕ್ತಿಯೆಂಬುದನೇನು ಕಾಣದೆ |ಮತ್ತೆ ಕೇವಲ ಮೂಢ ಭಾವದ ಚಿತ್ತದಲಿನೆರೆನಂಬಿದ ||ಆರ್ತರನು ಅಬಲರ ಅನಾಥರಜ ಮೃತುೈಮುಖದಿಂದವರತಾನೊಲಿ-|ದೆತ್ತಿ ಸಲಹುತಲಿಪ್ಪ ಸೊಬಗಿನ ಕೀರ್ತಿವಂತ ಮಹಾತ್ಮನ 3ಕರುಣದಿಂದೆಳಗಂದಿ ಕರುವಿನ ಮೊರೆಯ ಲಾಲಿಸಿ ಬಿಡದೆ ತೃಪ್ತಿಯ |ಕರೆದು ಮಾಡುವ ಪರಿಯೆ ತನ್ನಯ ಸ್ಮರಿಸುತಿಹ ಕಡುದೀನರ ||ಹೊರಗೆ ಶಿಕ್ಷಿಸಿ ಒಳಗೆ ರಕ್ಷಿಸಿ ಪಿರಿದು ತನ್ನಯ ನಿಜನವರಿಗೆ |ತೆರುವ ಕರುಣಾಳುಗಳ ದೇವನ ಶರಣಜನ ಮಂದಾರನ 4ನೇಮದಲಿ ನಂಬಿದರ್ಗೆ ಸೂಚಿಸಿ ಕಾಮವಾಸನೆಗಳನು ಖಂಡಿಸಿ |ಪಾಮರರ ಪಂಡಿತರ ಮಾಡಿ ಮಹಾಮಹಿಮೆಗಳ ತಿಳಿಸುತ ||ರಾಮರಮಣಿಯ ಸಹಿತ ಸಾಲಿಗ್ರಾಮದಲಿನೆರೆನೆಲಸಿ ಭಕುತರ |ಪ್ರೇಮದಿಂದಲಿ ಪೊರೆಯುತಿಹ ಸುಖಧಾಮ ಪುರಂದರವಿಠಲನ 5
--------------
ಪುರಂದರದಾಸರು
3. ತುಳಸಿರಾಮದಾಸರ ತೆಲಗುಮಿಶ್ರಿತ ಕೀರ್ತನೆಗಳು498ನೀಪಾದ ಭಜನಚೇ ನಾಪಾಪಮತಮಾಯೆನ್ಗೋಪಾಲ ಶ್ರೀ ರಂಗನಾಥಾ ಪರಾಪು ಜೇಯುಟ ನೇಲನಾಪದÀಲನು ದೀರ್ಚುಗೋಪ ವೇಷಖುಡೈನ ಶ್ರೀಪತಿಯೆನುಟಾಯೆ ಅ.ಪಪಿಚ್ಚಿವಾಡನೈ ನೇನೊಚ್ಚಿ ವೇಡಿತಿನಯ್ಯಾಅಚ್ಚುತಾನಂತರೂಪಹೆಚ್ಚೈನ ಮೀಧ್ಯಾನಂಬಿಚ್ಚಾಯಂಚಿನಾನೂವೊಚ್ಚಿ ದಾಸುಡು ವೇಡಿಯಿಚ್ಚಿ ಬ್ರೋವರ ತಂಡ್ರಿ 1ಪಂಕಜಾಕ್ಷ ನಾಪೈ ಪಂತಮೇಲರ ಸಾಮಿಕಿಂಕರುನಿಗನೇಲುಮಾಶಂಕರವಿನುತ ನಾ ಸಂಕಟ ಮುಲು ದೀರ್ಚುಲಂಕಾಧಿಪತಿ ವೈರಿಗುರುಡೆ ತುಲಶಿರಾಮಾ 2
--------------
ತುಳಸೀರಾಮದಾಸರು
435(ಅ)ನಮೋ ಯತಿಕುಲಶಿಖಾಮಣಿಯೆ ಸುಗುಣನಿಧಿಯೆಮತಿಮತಾಂವರ ಮಾನಿನೇ ಪ.ಭುವನೇಂದ್ರತೀರ್ಥ ಯತಿಪ್ರವರಕರಸಂಜಾತಸುವಿವೇಕಿ ವರದೇಂದ್ರಕರಸಂಭವಾಯಅವಿಕಳಾನಂದ ವೈಷ್ಣವನಿವಹಗೀರ್ವಾಣತ-ರವ ಸುಕೃತೇಂದ್ರ ಸದ್ಗುರುವೆ ನಮೋಸ್ತುತೇ 1ಕಾಶೀಮಠಾದಿಪತಿಯೇ ಸುಸನ್ಯಾಸಿಯೇ ಸ(ತ್ತ್ವ) ಗುಣಭೂಷಾಯ ತೇವ್ಯಾಸ ರಘುಪತಿಚರಣದಾಸವತ್ಪೂಜಕ ವಿ-ಶೇಷಭಕ್ತಿಜ್ಞಾನಶಾಲಿನೇ ತುಭ್ಯಂ2ಆಜಾನುಬಾಹುವೇ ಗೌಡಸಾರಸ್ವತ ಮ-ಹಾಜನಸಮಾಜಮಂಡಲವಾಸಿನೇರಾಜೀವನಯನಾಯ ನಮಿತಜನನಿಕರ ಸುರಭೂಜಾಯಭೂರಿರವಿತೇಜಸ್ವಿನೇ3ತುಷ್ಟಾಯ ಭಾಗವತನಿಷ್ಟಾಯ ದ್ವಿಜಕುಲವರಿಷ್ಠಾಯ ಷಡ್ವರ್ಗಜಿಷ್ಣವೇ ತುಭ್ಯಂದುಷ್ಟ ಜನ ದೂರಾಯ ಧೀರಾಯ ಭಕ್ತದ-ತ್ತೇಷ್ಟಾಯ ಮಹತೇ ಸಹಿಷ್ಣವೇ ಮಹತೇ 4ಬ್ರಹ್ಮಚರ್ಯಾದಿ ವ್ರತಧರ್ಮಾತ್ಮನೇ ವಿಹಿತಕರ್ಮಣೇ ಸುಕೃತೇಂದ್ರ ಶರ್ಮಣೇ ತುಭ್ಯಂಬ್ರಹ್ಮಪಿತ ಲಕ್ಷ್ಮೀನಾರಾಯಣಾಂಘ್ರಿಧೃತಿ ಸು-ನಿರ್ಮಲಾಂತಃಕರಣ ಕರುಣನೀರಧಯೇ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
45ಅನುದಿನದಲಿ ಬಂದು ತನುವ ಸೂರೆಯಗೊಂಡು |ಎನಗೊಂದು ಮಾತ ಪೇಳೊ ಜೀವವೆ ! ಪಘನಕೋಪದಲಿ ಬಂದು ಯಮನವರಳೆದೊಯ್ವಾಗ |ನಿನಕೂಡಿನ್ನೇತರ ಮಾತೂ ಕಾಯವೆ! ಅ.ಪಬೆಲ್ಲದ ಹೇರಿನಂತೆ ಬೇಕಾದ ಬಂಧು - ಬಳಗ |ನಿಲ್ಲೊ ಮಾತನಾಡತೇನೆ ಜೀವವೆ ||ನಿಲ್ಲಗೊಡದೆ ಬಂದು ಯಮನವರೆಳೆದೊಯ್ವಾಗ |ಬೆಲ್ಲ ಬೇವಾಯಿತಲ್ಲೋ ಕಾಯವೆ ! 1ಸತ್ಕರೆ ಹೇರಿನಂತೆ ಸವಿದುಂಡು ಪಾಯಸವ |ದಿಕ್ಕೆಟ್ಟು ಹೋಗುತೀಯೋ ಜೀವವೆ ||ದಕ್ಕಗೊಡದೆ ಬಂದು ಯಮನವರೆಳೆದೊಯ್ವಾಗ |ಸಕ್ಕರೆ ವಿಷವಾಯ್ತೋ ಕಾಯವೆ ! 2ಅಂದಣದೈಶ್ವರ್ಯ ದಂಡಿಗೆ - ಪಲ್ಲಕ್ಕಿ |ಮಂದಗಮನೆಯರು ಜೀವವೆ ||ಮಂದಗಮನೆ ಯಾರೊ - ಮಡದಿ - ಮಕ್ಕಳು ಯಾರೋ -ಬಂದಂತೆ ಹೋಗ್ತೀನಿ ಕಾಯವೆ ! 3ಸೋರುವ ಮನೆಯಲಿ ಧ್ಯಾನ - ಮೌನಾದಿಗಳು |ಬೇರಿತ್ತು ನಿನ್ನ ಮನಸು ಜೀವವೆ ||ನೀರಮೇಲಣ ಗುಳ್ಳೆ ತೋರಿ ಹಾರಿದಂತೆ |ಯಾರಿಗೆ ಯಾರಿಲ್ಲ ಕಾಯವೆ ! 4ಹುಟ್ಟಿದ್ದು ಹೊಲೆಯೂರು ಬೆಳದದ್ದು ಮೊಲೆಯೂರು |ಇಟ್ಟದ್ದು ಈ ಊರು ಜೀವವೆ ||ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ |ಗಟ್ಟ ಪೂಜೆಯ ಮಾಡೊ ಕಾಯವೆ ! 5
--------------
ಪುರಂದರದಾಸರು
ಅ. ಗಣಪತಿ ಸರಸ್ವತಿಯರು261ಶ್ರೀ ಗಣನಾಥನಿಗೆ | ಶಾರದಾಂಬಿಕೆಗೆಶ್ರೀ ಗೌರಿ ಭೂದೇವಿ ಶ್ರೀದೇವಿಗೆ |ಶ್ರೀಗುರುಮಹಾವಿಷ್ಣು ಬ್ರಹ್ಮರುದ್ರಾದ್ಯರಿಗೆಸಿರಿಚರಣ ಪಂಕಜಗೆ ನಮಿಸಿ ನುತಿಸುವೆನು 1ಅಷ್ಟ ದಿಕ್ಪಾಲರಿಗೆ ಶಿಷ್ಯಮರುದ್ಗಣಗಳಿಗೆಅಷ್ಟವಸು ಸಪ್ತಋಷಿ ನವಗ್ರಹಾದ್ಯರಿಗೆ |ಶ್ರೇಷ್ಠ ಹನುಮಂತನಿಗೆ ಕನಕಾದಿ ದಾಸರಿಗೆಸೃಷ್ಟಿಯೊಳು ಕವಿಜನಕೆ ಕೈಮುಗಿವೆನು 2ವಿಪ್ರಕುಲ ಸಂಜಾತ ಮಯ್ಯೂರ ಮಡಿಪುರದೊ-ಳಿಪ್ಪ ವೆಂಕಟರಾಯ ಗೋಳೇರ ಸುಕುಮಾರ |ಸರ್ಪಶಯನನ ದಾಸ ಗೋವಿಂದನೆಂಬವನುಜಲ್ವಿಸಿಯೆ ವಿರಚಿಸಿದೆನೀ ಕೃತಿಯನು 3ಯತಿಗಣ ಪ್ರಾಸ ವಿಷಮಾಕ್ಷರಗಳೊಂದರಿಯೆಕೃತ ದೋಷ ರಾಗ ಲಯ ಭೇದವನು ತಿಳಿಯೆ |ಪೃಥುವಿಯೊಳು ಕವಿಗಳಂತಗ್ಗಳನು ನಾನಲ್ಲಅತಿಶಯದ ನ್ಯೂನತೆಯ ಬಲ್ಲ ಶ್ರೀನಲ್ಲ 4ತಪ್ಪು ಸಾವಿರವಿರಲು ತಿದ್ದಿ ಬಲ್ಲವರಿದನುಒಪ್ಪುವಂದದಿ ಜಗದಿ | ಮೆರೆಸಿ ವಾಚಕರುಸರ್ಪಶಯನನ ಕೃಪೆಗೆ ಪಾತ್ರರಾಗುತ ನೀವುಕ್ಷಿಪ್ರದಲಿ ಗೋವಿಂದದಾಸ£À£Àು ಪರಸಿ ಮನ್ನಿಪುದು 5
--------------
ಗೋವಿಂದದಾಸ
ಅಂಕಿತ ಪದ (ಶ್ರೀ ಪ್ರಸನ್ನ ಭೂವರಾಹ)142ಶ್ರೀಶ ಪ್ರಸನ್ನ ಭೂವರಾಹ ಚಿನ್ಮಯದೇವ -ಬಿಸಜಜ ಸಮೀರಾದಿ ಸುರವೃಂದ ವಂದ್ಯ -ಬಿಸಜಜಾಂಡದ ದೊರೆ ಸಹಸ್ರನಾಮನೆ ದಯ -ದಿಂಸಲಹೋ ಜ್ಞಾನಾದಿ ಧನವಿತ್ತು ಇವನ ಪಶ್ರೀಧರನೆ ಸುಖಮಯನೆ ಭೂಧರನೆ ಭೀತಿಹರವೇಧಮನುವಿಗೆ ಒಲಿದ ಶ್ವೇತವರಾಹ ||ದಿತಿಜಹರ ವಸೂಮತೀಯ ಉದ್ಧರಿಸಿ ಕಾಯ್ದಿಯೋನೀದಯದಿ ಸುಮತಿಯನು ಇತ್ತು ಪಾಲಿಪುದು 1ಕಾಲಗುಣಕರ್ಮನಿಮಿತ್ತ ಬಂದಿಹ ಇವನಬಲವಂತ ಕಷ್ಟಗಳ ಉಪಶಮಿಸಿ ಇವನಿಂ ||ಒಳ್ಳೇಸಾಧನ ಮಾಡಿಸುವದು ನೀಕೃಪೆಯಿಂದ |ಬಾಲೇಂದುಧರವಿನುತಭಕ್ತವತ್ಸಲ2ಭೂಮ ಉರುಗುಣ ಪೂರ್ಣನಿರ್ದೋಷಶ್ರೀರಮಣಶ್ಯಾಮ ವರ್ಣನೆ ಚಕ್ರ ಶಂಖ ಭೂಧರನೆ ||ಕಾಮಪಿತ ವೇಧಪಿತ ಭೂವರಾಹ ನಮೋ |ನಮೋ ಶ್ರೀ ಪ್ರಸನ್ನ ಶ್ರೀನಿವಾಸ ಸಲಹೆಮ್ಮ
--------------
ಪ್ರಸನ್ನ ಶ್ರೀನಿವಾಸದಾಸರು
ಅಂಜನಾಸಂಜಾತ ಮುಖ್ಯ -ಪ್ರಾಣನೇ ಹನುಮಂತನೇ ಪ್ರಾಣನೇ ಹನುಮಂತನೇಪ್ರಾಣನೇ ಹನುಮಂತನೇ ಬಹು ಬಲವಂತನೇಪರಾಘವನಾಜೆÕಯ ತಾಳ್ದು ಸಾಗರವ ದಾಟಿದನೇ |ಸಾಗರವ ದಾಟಿದನೇ ಬೇಗ ಲಂಕಿಣಿ ಗೆಲ್ದನೇಚಬೇಗ ಲಂಕಿಣಿ ಗೆಲ್ದನೇ |ಪೋಗಿ ಲಂಕೆಯೊಳ್ ತಿರಿದನೇ1ಧರಣಿಸುತೆಯನು ಹುಡುಕಿ ಕಾಣದೆ |ಪುರವನೊಯ್ಯುವೆನೆಂದನೆ |ಪುರವನೊಯ್ಯುವೆನೆಂದನೆ |ಮರಳಿ ಸೀತೆಯ ಕಂಡನೇ |ಮರಳಿ ಸೀತೆಯ ಕಂಡನೇ |ಯೆರಗಿ ಉಂಗುರವಿತ್ತನೇ2ಚೂಡಕವ ಕೈಗೊಂಡು ಬರಲಾ |ನೋಡಿ ಬನವನು ಮುರಿದನೇ |ನೋಡಿ ಬನವನು ಮುರಿದನೇಖೋಡಿದೈತ್ಯರ ಗೆಲಿದನೇ |ಖೋಡಿದೈತ್ಯರ ಗೆಲಿದನೇ |ಕೈಗೂಡಿ ಸುಮ್ಮನೆ ಕುಳಿತನೆ3ಪುರವನೆಲ್ಲವ ಸುಟ್ಟು ದಹಿಸುತ |ತಿರುಗಿ ರಾಮನ ಕಂಡನೇ |ತಿರುಗಿ ರಾಮನ ಕಂಡನೇ |ಚೂಡಕವ ಕೈಗಿತ್ತನೇ |ಚೂಡಕವ ಕೈಗಿತ್ತನೇ |ಗೋವಿಂದ ದಾಸನ ಪೊರೆವನೆ4
--------------
ಗೋವಿಂದದಾಸ
ಅಂಜರು ಹರಿಭಟರು ದುರಿತಾರಿಗಂಜರು ಹರಿಭಟರುಮಂಜಿನ ದಂಡೋಡಿಪ ಮೂಡಣವರಕಂಜಸಖನ ಪೋಲ್ವವರು ಪ.ಅಗ್ಗಳಿಕೆಯೈಗಣೆಯನ ಬಲದಲಿಮುಗ್ಗದೆ ಕುಲಿಶೆದೆಯಲ್ಲಿ ವೈರಾಗ್ಯಾಸ್ತ್ರದಿ ಈರೈದಾಳಾಣ್ಮನಕುಗ್ಗಿಸಿ ಸೆರೆ ತರುವವರು 1ಮೂರರಾಯುಧ ಹತಿಭಯಜರಿದುವಾರಣನಾಕೆರಡಿರಿದು ಶೃಂಗಾರದ ರಾಹುತರೆಂಟರ ಸದೆವರುವೀರಹರಿಧ್ವನಿಯವರು2ಎರಡೊಂಬತ್ತು ನಾದಿಕಾಭೇರಿಎರಡು ಕಹಳೆಯ ಚೀರಿಸರಕುಮಾಡಿ ನವಕಲಿ ಸಂಜಿತರುಹರಿಮಂಡಿತ ನವರಥರು3ಒಂದೆ ನಿಷ್ಠೆಯ ರಣಧ್ವಜ ಮೇರೆಗೆಹಿಂದಾಗದೆ ಮುಂದಾಗಿಒಂದಿಪ್ಪತ್ತರಿ ವ್ಯೂಹ ಕೆಡಹುವರುಕುಂದದ ಧೃತಿ ಮತಿಯವರು 4ಹಂಗಿನ ಸ್ವರ್ಗವ ಸೂರ್ಯಾಡುವರುಡಂಗುರ ಹೊಯ್ಯುವ ಮಹಿಮರುರಂಗ ಪ್ರಸನ್ವೆಂಕಟಪತಿ ಭಟರುಮಂಗಳಪದ ಲಂಪಟರು 5
--------------
ಪ್ರಸನ್ನವೆಂಕಟದಾಸರು
ಅಂಜಲೇತಕೆ ಮನವೆ ಅನುಗಾಲವುಕಂಜನಾಭನ ಭಕುತಿ ಕೈಕೊಂಡ ಬಳಿಕ ಪನಾರಾಯಣನೆಂಬ ನಾಲ್ಕು ಅಕ್ಷರದಿಂದಘೋರಪಾಪವನೆಲ್ಲ ಕಳೆಯಬಹುದು ||ಶ್ರೀ ರಾಮನಾಮವೆಂಬ ಸಿಂಗಾಡಿ ತಕ್ಕೊಂಡುವೈರಿಷಡ್ವರ್ಗಗಳ ವಧೆ ಮಾಡಬಹುದು 1ಶ್ರೀ ಕೇಶವನೆ ಎಂಬ ಸಿದ್ಧ ಮಂತ್ರಗಳಿಂದಕಾಕುಕರ್ಮಗಳನ್ನು ಕಳೆಯಬಹುದು ||ವೈಕುಂಠಪತಿ ಎಂಬ ವಜ್ರವನೆ ತಕ್ಕೊಂಡುನೂಕಿ ಯಮಬಂಟರನು ನುಗ್ಗು ಮಾಡಲುಬಹುದು 2ಹರಿವಾಸುದೇವನೆಂಬ ಅಮೃತಪಾನಗಳಿಂದಮರಣ ಜನನಗಳೆರಡ ಜಯಿಸಬಹುದು ||ಅರಿತರೆ ಮನದೊಳಗೆ ಪುರಂದರವಿಠಲನಸರಸ ಸದ್ಗತಿಯನ್ನು ಸವಿಗಾಣಬಹುದು 3
--------------
ಪುರಂದರದಾಸರು
ಅಜ್ಞಾನಿಗಳ ಕೂಡ ಅಧಿಕ ಸ್ನೇಹಕ್ಕಿಂತಸುಜ್ಞಾನಿಗಳ ಕೂಡ ಜಗಳವೇ ಲೇಸು ಪ.ಡಂಭಕರ ಮನೆಯಪಮಾನದೂಟಕ್ಕಿಂತತುಂಬಿದ ಪಟ್ಟಣದಿ ತಿರಿದುಂಬುವುದೆ ಲೇಸು |ಹಂಬಲಿಸಿ ಹಾಳು ಹರಟೆ ಹೊಡೆವುದಕಿಂತನಂಬಿ ಹರಿದಾಸರೊಳಾಡುವುದೆ ಲೇಸು 1ಒಡಲ ಹಂಗಿಸುವರ ಮನೆಯ ಓಗರಕಿಂತಕುಡಿನೀರ ಕುಡಿದುಕೊಂಡಿಹುದೆ ಲೇಸು |ಬಿಡದೆ ಕಡಿದಾಡುವರ ನೆರೆಯಲಿಹುದಕಿಂತಅಡವಿಯೊಳಜ್ಞಾತವಾಸವೇ ಲೇಸು 2ಮಸೆದು ಮತ್ಸರಿಸುವನ ಬಳಿಯಲಿಹುದಕಿಂತಹಸನಾದ ಹಾಳುಗುಡಿಗಳೆ ಲೇಸು |ಬಿಸಜಾಕ್ಷ ಪುರಂದರವಿಠಲನ ನೆನೆನೆನೆದುವಸುಧೆಯೊಳು ಚಿರಕಾಲವಿರುವುದೆ ಲೇಸು 3
--------------
ಪುರಂದರದಾಸರು
ಅಡಗುವದುಘನಅಡಗುವದುತೋರದಡಗದು ದೃಷ್ಟಿಯಲ್ಲಿಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಮಡದಿ ಮಕ್ಕಳು ಮನೆಯ ಬಲ್ಲಿತೊಡಕಿದೆ ಮನ್ಮಥನ ಬಲೆಯಲ್ಲಿ1ನಾನೀನೆಂಬಭಿಮಾನದಲಿಸ್ವಾನುಭವದ ಸುಖ ವ್ಯರ್ಥವೇ ಅಲ್ಲಿ2ದೀಪಕ ಶಂಕರನ ಪ್ರಭೆಯಲ್ಲಿದೀಪ ಕೀಟಕ.................3
--------------
ಜಕ್ಕಪ್ಪಯ್ಯನವರು
ಅಂತಕನ ದೂತರಿಗೆ ಕೃಪೆಯಿಲ್ಲವದರಿಂದ |ಚಿಂತೆಯನು ಬಿಟ್ಟು ಶ್ರೀ ಹರಿಯೆ ನೆನೆ ಮನವೆ ಪ.ದಿವರಾತ್ರಿಯೆನ್ನದೇ ತಿರುಗಿ ಲಂಪಟನಾಗಿ |ಸವಿಗಂಡ ಊಟಗಳ ಉಣಲರಿಯದೆ |ಅವನ ಕೊಂದು ಇವನ ಕೊಂದು ಅರ್ಥವನು ಗಳಿಸಿಕೊಂಡು |ಜವನ ದೂತರು ಬಂದು ಎಳೆವ ಹೊತ್ತರಿಯೆ 1ಮೊನ್ನೆ ಮದುವೆಯಾದೆ ಕರೆವುವು ಒಂದೆರಡಮ್ಮೆ |ನಿನ್ನೆ ಕೊಂಡೆನು ಕ್ಷೇತ್ರ ಫಲಬಾಹೊದು ||ಹೊನ್ನು ಹಣವುಂಟೆನಗೆ ಸಾಯಲಾರೆನು ಎನಲಾ |ತನ್ನ ದೂತರು ಬಂದು ಎಳೆವ ಹೊತ್ತರಿಯೆ 2ಹೊಸ ಮನೆಯ ಕಟ್ಟಿದೆನು ಗೃಹಶಾಂತಿ ಮನೆಯೊಳಗೆ |ಬಸಿರೆ ಹೆಂಡತಿ ಮಗನ ಮದುವೆಯು ನಾಳೆ ||ಹಸನವಾಗಿದೆ ಬದುಕು ಸಾಯಲಾರೆನು ಎನಲು |ವಿಷಮ ದೂತರು ಬಂದು ಎಳೆವ ಹೊತ್ತರಿಯೆ 3ಪುತ್ರ ಹುಟ್ಟಿದ ದಿವಸ ಹಾಲು ಊಟದ ಹಬ್ಬಮತ್ತೊಬ್ಬ ಮಗನ ಉಪನಯನ ನಾಳೆ ||ಅರ್ಥಿಯಾಗದೆ ಬದುಕು ಸಾಯಲಾರೆನು ಎನಲು |ಮೃತ್ಯು ಹೆಡತಲೆಯಲಿ ನಗುತಿಹುದರಿಯೆ 4ಅಟ್ಟಡಿಗೆ ಉಣಲಿಲ್ಲ ಇಟ್ಟ ನೀರ್ಮೀಯಲಿಲ್ಲ |ಕೊಟ್ಟ ಸಾಲವ ಕೇಳ್ವ ಹೊತ್ತ ಕಾಣೆ ||ಕಟ್ಟಕಡೆಯ ದಿವಸ ತಂಬಿದ ಬಳಿಕಿರಲಿಲ್ಲ |ಇಷ್ಟರೊಳು ಪುರಂದರವಿಠಲನ ನೆನೆಮನೆವೆ 5
--------------
ಪುರಂದರದಾಸರು
ಅಂತರಂಗದಲಿ ಹರಿಯ ಕಾಣದವ ತಾ ಹುಟ್ಟುಗುರುಡನೊಸಂತತ ಶ್ರೀ ಕೃಷ್ಣಚರಿತೆ ಕೇಳದವ ಜಡಮತಿಯೆ ಕಿವುಡನೊ ಎಂದೆಂದಿಗೂ ಪ.ಹರುಷದಿಂದಲಿ ಮುರಹರನ ಪೂಜೆಯ ಮಾಡದವನೆ ಕೈ ಮುರಿದವನೊಕುರುವೀರ ಸೂತನ ಮುಂದೆ ಕೃಷ್ಣ ಎಂದುಕುಣಿಯದವನೆ ಕುಂಟನೊ ||ನರಹರಿ ಪಾದೋದಕ ಧರಿಸದ ಶಿರ ನಾಯುಂಡ ಹಂಚು ಕಾಣೊಸುರವರ ಕೃಷ್ಣ ಪ್ರಸಾದವಿಲ್ಲದ ಊಟಸೂಕರಭೋಜನವೋ1ಅಮರೇಶ ಕೃಷ್ಣಗರ್ಪಿತವಲ್ಲದಕರ್ಮ ಅಸತಿಯ ವ್ರತನೇಮವೊರಮೆಯರಸಗೆ ಪ್ರೀತಿಯಿಲ್ಲದ ವಿತ್ತವು ರಂಡೆ ಕೊರಳಸೂತ್ರಕಮಲನಾಭನ ಪೊಗಳದಸಾರ ಸಂಗೀತ ಗಾರ್ದಭರೋದನವೊಮಮತೆಯಿಂದಲಿ ಕೇಶವಗೆ ನಮಸ್ಕಾರ ಮಾಡದವನೆ ಮೃಗವೊ 2ಜರೆ ಹುಟ್ಟು ಮರಣವ ತಡೆವ ಸುದ್ದಿಯ ಬಿಟ್ಟುಸುರೆಯ ಸುರಿಯ ಬೇಡವೊಸುರಧೇನು ಇರಲಾಗಿ ಶ್ವಾನನ ಮೊಲೆಹಾಲಕರೆದು ಕುಡಿಯಬೇಡವೊಕರಿ ರಥ ತುರಗವೇರಲು ಇದ್ದು ಕೆಡಹುವ ಕತ್ತೆ ಏರಲಿಬೇಡವೊಪರಮ ಪುರುಷ ಪುರಂದರವಿಠಲನಿರಲು ನರರ ಭಜಿಸಬೇಡವೊ 3
--------------
ಪುರಂದರದಾಸರು