ಒಟ್ಟು 4120 ಕಡೆಗಳಲ್ಲಿ , 119 ದಾಸರು , 3273 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೂಗಿದವರ ಬಳಿ ರಾಗವ ಬೀರುವ ನಾಗಶಯನ ನಮ್ಮ ವೇಣುಗೋಪಾಲ ಪ ನಾಗನ ಕೂಗಿಗೆ ಜಗುಡುತೈದಿದ ತ್ಯಾಗಶೀಲನವ ಗೋಪಿಯ ಬಾಲ ಅ.ಪ ಕರದ ಮುರಳಿಯಲ್ಲಿ ಪರಿಪರಿಗಾನವ ಉರುಳಿಸಿ ನಾಟ್ಯಕೆ ಕಿರುನಗೆದೋರಿ ತರುಣ ತರುಣಿಯರ ಬರಸೆಳೆಯುವ ಮಾಂ ಗಿರಿ ಶಿಖರಾಗ್ರದಿ ಮಹಿಮೆಯ ತೋರಿ1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕೂಸಿನಲ್ಲಿ ಬಾಲಕೃಷ್ಣ ಕೇಶವಾರ್ಯ ಪುತ್ರನಲ್ಲಿವಾಸಮಾಡಿ ಸತತ ಮನವ ಪೋಷಿಸೂವನು 1 ತರುಣಿಯಲ್ಲಿ ಮಾಧವವಿರುವ ಶರಣರೊಳಗೆ ವಸುದೇವನರಿತು ತೋಷಿಸುವುದು ಸತತ ಹರುಷದಿಂದಲೀ 2 ವಾಸುದೇವ ಖಗವರೇಣ್ಯನು 3 ದಿವಿಜ ನಾರಾಯಣನು ವಸ್ತಿ ಮಾಡಿಹನು4 ಸುರಭಿಯಲ್ಲಿ ವಿಷ್ಣುರೂಪಿ ತುರಗದಲ್ಲಿ ವಾಮನಾತ್ಮಇರುವ ಸಂಕರ್ಷಣಾಖ್ಯ ಚರಮ ಜಾತಿಯಲೀ 5 ನಿತ್ಯ ವೈಶ್ಯ ಪ್ರದ್ಯುಮ್ನಭೃತ್ಯರಲ್ಲಿ ಮಹಿದ್ರಾಸ ಕೃತ್ಯ ನಡೆಸುವಾ 6 ಮಹಿಷಿಯಲ್ಲಿ ಉಪೇಂದ್ರ ಗಜದಲ್ಲಿ ಚಕ್ರಪಾಣಿಬೆಕ್ಕಿನಲ್ಲಿ ವಿಶ್ವರೂಪ ಸತತ ತಿಳಿವುದೂ 7 ಶುನಕ ಭೂತ ಭಾವನಸರ್ವರೊಳಗೆ ಅನಂತರೂಪ ಹರಿ ನಿವಾಸಿಪ 8 ನಿತ್ಯದಲ್ಲಿ ಹರಿಯು ಹೀಗೆ ಚಿತ್ತವಿಟ್ಟು ಲಕ್ಷಣೀಯುವರ್ತಿಸುತಲಿ ಯದುವರೇಣ್ಯನ ಪತ್ನಿಯಾದಳು 9 ಪರಮಪುರುಷನಮಲ ರೂಪ ಸ್ಮರಿಸುತಲೆ ಪೋಷ್ಯರಲ್ಲಿತೊರೆದು ಕರ್ಮಲೇಪ ಶಿರಿಯ ಹೋದುವಾ 10 ನಂದಸುತನ ತಿಳಿದು ಪೋಷ್ಯ ವೃಂದದಲ್ಲಿ ಭೋಗ ನೀಡಿಇಂದಿರೇಶ ನಮಗೆ ಮೋಕ್ಷಾನಂದ ಕೊಡುವನು 11
--------------
ಇಂದಿರೇಶರು
ಕೃತ ಕೃತ್ಯನಾದೆನಿಂದಿನ ದಿನದೊಳು ಕ್ಷಿತಿಸುತ ವೆಂಕಟರಾಮಾರ್ಯರನ ಕಂಡು ಪ ಭೂಮಂಡಲದೊಳುಳ್ಳ ಸಕಲ ತೀರ್ಥಸ್ನಾನ ಹೇಮಾದ್ರಿ ಮೊದಲಾದ ಕ್ಷೇತ್ರ ಯಾತ್ರೆ ನೇಮ ಜಪತಪ ವ್ರತಾದಿಗಳ ಮಾಡಿದ ಪುಣ್ಯ ಈ ಮಹಾತ್ಮರ ಕಂಡ ಮಾತ್ರ ಸಮನಿಸಿತು 1 ಪರಿಯಂತ ಹರಿಮಹಿಮೆಗಳ ಸನ್ನುತಿಯಲೀ ಶ್ರುತಿಸ್ಮøತಿಗಳಿಂದ ಧನ್ಯರೆಂದೆನಿಸಿ ಮಹಿಯೊಳಗೆ ಪೂರಿತರಾದ ಪುಣ್ಯಚರಿತರ ದಿವ್ಯ ಪಾದವನೆ ನಾ ಕಂಡು 2 ಹೀನ ಜನರೇ ಬಹಳ ಕ್ಷೋಣಿಯ ಮೇಲೆ ಸು ಜ್ಞಾನಿಗಳು ದುರ್ಲಭರು ಕಲಿಯುಗದಲಿ ಆನತೇಷ್ಟಪ್ರದ ಜಗನ್ನಾಥ ವಿಠಲ ತಾನೆ ಕರೆತಂದು ತೋರಿ ಪುನೀತನ ಮಾಡ್ದ 3
--------------
ಜಗನ್ನಾಥದಾಸರು
ಕೃತಕೃತ್ಯನಾದೆನಿಂದಿನ ದಿನದಲಿ ವ್ರತಿ ಕುಲೋತ್ತಂಸ ಭುವನೇಂದ್ರರಾಯರ ಕಂಡು ಪ ಗಂಗಾ ಪ್ರಯಾಗ ಗಯಾ ನೈಮಿಷಾರಣ್ಯ ಕುರು ಜಾಂಗಳಾದ್ಯಖಿಳ ಸುಕ್ಷೇತ್ರಗಳಲಿ ಸಾಂಗ ಕರ್ಮಗಳ ಹರಿಗರ್ಪಿಸಿದ ಫಲವು ಮುನಿ ಪುಂಗವರ ಕಂಡ ಮಾತ್ರದಿ ಸಮನಿಸಿತೆನಗೆ 1 ಹಿಂದೆ ಬಹು ಜನ್ಮದಿ ಮಾಡಿದ ಸುಕೃತಕೆ ಕ ಪಾದ ಕಮಲ ಸಂದರ್ಶನವೆ ಮಹತ್ಪಲವಾಯಿತೆನಗೆ ಗೋ ವಿಂದನ ಪ್ರತಿಬಿಂಬರಾದ ಕಾರಣದಿಂದ 2 ಅನ್ಯಸಾಧನೆಗಳಿನ್ನಾಚರಿಸಲ್ಯಾಕೆ ಮ ತ್ತನ್ಯರಾರಾಧನೆಯ ಮಾಡಲ್ಯಾಕೆ ಸನ್ನುತ ಮಹಿಮ ಜಗನ್ನಾಥ ವಿಠಲನ ಕಾ ರುಣ್ಯ ಪಾತ್ರರಾ ಕರುಣವಾಯಿತೆನ್ನೊಳಿಂದು 3
--------------
ಜಗನ್ನಾಥದಾಸರು
ಕೃತಿ 5 ಇಂದು ಎನಗೆ ಗೋವಿಂದ ನಿನ್ನ ಪಾದಾರ ವಿಂದವ ತೋರೊ ಮುಕುಂದ ಪ ಸುಂದರ ವದನನೆ ನಂದಗೋಪನ ಕಂದ ಮಂದರೋದ್ಧರ ಆನಂದ ಇಂದಿರಾ ರಮಣ ಅ.ಪ ನೊಂದೆನಯ್ಯ ಭವಬಂಧನದೊಳು ಸಿಲುಕಿ ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು ಕಂದನು ಎಂದೆನ್ನ ಕುಂದುಗಳೆಣಿಸದೆ ಕಂದರ್ಪ ಜನಕನೆ 1 ಮೂಢತನದಿ ಬಹು ಹೇಡಿ ಜೀವ ನಾನಾಗಿ ದೃಢಭಕುತಿಯನು ಮಾಡಲಿಲ್ಲವೊ ಹರಿಯೆ ನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆ ಗಾಡಿಕಾರ ಕೃಷ್ಣ ಬೇಡಿಕೊಂಬೆನೊ ನಿನ್ನ 2 ಧಾರುಣಿಯೊಳು ಭೂಭಾರ ಜೀವ ನಾನಾಗಿ ದಾರಿತಪ್ಪಿ ನಡೆದೆ ಸೇರಿದೆ ಕುಜನರ ಆರೂ ಕಾಯುವರಿಲ್ಲ ಸೇರಿದೆ ನಿನಗಯ್ಯ ಧೀರ ವೇಣುಗೋಪಾಲ ಪಾರಗಾಣಿಸೊ ಹರಿಯೆ 3
--------------
ವಿಜಯೀಂದ್ರತೀರ್ಥರು
ಕೃಪಾಳೊ ಗುರುವರ ಶ್ರೀಪವಮಾನ ಭವಹಾರಿ ಸ್ಮರಹರನುತ ದೀನಜನಮಂದಾರ ಅ.ಪ ಕಾವಕರುಣಿ ಜೀವವರೇಣ್ಯ ವಿನುತ ಜಯಶೀಲಾ ವಿಧಿ ದುರಿತೌಷ ಹಾರಿ 1 ಆದಿಪುರದಿ ಮೆರೆವನಾಥಾ ಸದಯ ಭಕ್ತ ಜನಕೆ ಶುಭದಾತ ಬುಧರಾರಿ ಸಜಾತ ಭ್ರಾತಾ ಸದಯ ಧರ್ಮಾನು ಜಾತಾ 2 ಪ್ರೇಮಶರಧಿ ವಾನರೇಶಾ ಅಮಿತ ಸತ್ವಯತಿ ಮಹಿಮಯತಿರಾಜಾ ರೋರೋಮ ವ್ಯೋಮಕೇಶಾ ಶಾಮಸುಂದರನ ಮೋಹದ ದಾಸಾ 3
--------------
ಶಾಮಸುಂದರ ವಿಠಲ
ಕೃಪೆ ನಿಮ್ಮದಾಗಬೇಕು ಸ್ವಾಮಿ ನಿಮ್ಮರಿಯಲಿಕ್ಕೆ ಅಪಾರ ಮಹಿಮೆ ನಿಮ್ಮ ಸುಂಪಾದ ತಿಳಿಯಲಿಕ್ಕೆ ಧ್ರುವ ಭ್ರಾಂತಗೆಲ್ಲಿಹುದಯ್ಯ ಪೂರ್ಣನಿಂತ ನಿಲಕಡೆಙÁ್ಞನ | ಎಂತುಹೇಳಿದರ ಖೂನ ಶಾಂತಹೊಂದದಯ್ಯಮನ | ಪಂಥ ಪರಮ ಗುಹ್ಯಸ್ಥಾನ ತಂತುವಿಡಿಯಲು ನಿರ್ಗುಣ | ಅಂತು ಇಂತು ಎಂಬುಂದೆ ನಾನಂತ ಗುನ ನಿಧಾನ 1 ಖೂನ ತಿಳಿಯಲಿಕ್ಯಗಾಧಗುರು ನಿಮ್ಮಶ್ರೀಪಾದ | ಬೋಧ ನೀಡಬೇಕು ಸುಪ್ರಸಾದ | ನೀನೆವೆ ನಿತ್ಯವಾದ ವಸ್ತು ಪರಿಪೂರ್ಣ ಸದಾ | ದೀನ ಬಂಧು ದಯದಿಂದ ಖೂನದೋರೊ ಆಶ್ರಯದ 2 ಮಂದ ಮತಿ ನಾನು ಭಕ್ತಿ ಮಾಡಲರಿಯೆನು ಒಡಿಯನಹುದಯ್ಯ ನೀನುಮಹಿಪತಿಯ ಕಾಮಧೇನು ಕೊಡಲಿಕ್ಕೆ ಪೂರ್ಣ ನೀನು ಸ್ವಾಮಿ ಕಾವ ಕರುಣನು ಪಿಡಿದಿಹ್ಯ ನಿಮ್ಮ ನಾನು ದಿವ್ಯ ಪಾದಪದ್ಮವನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೃಷ್ಣ ಕಲಿಯ ಕಾಯ್ದ ಕರುಣಿ ಜಿಷ್ಣುಸಖನೆ ಕೃಷ್ಣನೆ ಪ. ಕೃಷ್ಣ ಪೊರೆಯೊ ಎನ್ನ ವಿಷಯತೃಷ್ಣೆಯಿಂ ಸಾಯಲೆ ದಮ್ಮಯ್ಯ ಅ.ಪ. ಹಿಂದೆ ಮಾಡಿದ ಕರ್ಮದಡವಿಯೊಂದಿಗೆ ಸವರುವೆನೊ ಗೋ-ವಿಂದ ನಿನ್ನ ಕರುಣಸುಧೆ ಇನ್ನೆಂದು ಪಡೆದು ಸುಖಿಪೆನೊಇಂದು ಮಾಡಿದ ಅಘಗಳು ಬಲು ದಂದುಗಕೊಳಗಾದೆ ನೀನುಕುಂದು ಕುಜನದೂರ ನಿನ್ನ ಕಂದನೆಂದು ಸಲಹೊ ತಂದೆ1 ಕಾಮವೆನ್ನ ಕಮಲನಾಭ ಸೀಮೆಗಾಣಲಿಯ್ಯದೊ ನಿ-ಸ್ಸೀಮಮಹಿಮ ಕ್ರೋಧ ಎನ್ನ ಸಾಮವ ನಡುಗಿಸುತಿದೆಭ್ರಮಿತನಾದೆ ಬಲುಪ್ರೇಮವ ತಪ್ಪಿಸಿ ಸುರಕ್ತಾನು ಹೆ ದೈವ ಎನ್ನಆ ಮಹಾಭಯವ ನಿವಾರಿಸೊ2 ಅನುದಿನ 3
--------------
ವಾದಿರಾಜ
ಕೃಷ್ಣ ಕೃಪಾಲ ಕರುಣಾದಾಯಕ ಕರುಣಾದಾಯಕ ದುಷ್ಟಮರ್ದನ ಶಿಷ್ಟಜನಪಾಲಕ ಧ್ರುವ ಮಾಧವ ಮಧುಸೂದನ ಮಧುಸೂದನ ಪಂಕಜನಾಭ ಪತಿತಪಾವನ ಶಂಖಚಕ್ರಧರ ಸಂಕರುಷಣ ಸಂಕುರಷಣ ಪತಿ ರಾಜೀವನಯನ 1 ಕಸ್ತೂರಿತಿಲಕ ಕೌಸ್ತುಭಭೂಷಣ ಕೌಸ್ತುಭಭೂಷಣ ಮಸ್ತಕ ಮುಗುಟ ಮದನಮೋಹನ ಭಕ್ತವತ್ಸಲ ಹರಿ ನಾರಾಯಣ ನಾರಾಯಣ ವಸ್ತುಪರಾತ್ಪರ ನಿಜನಿರ್ಗುಣ 2 ಗರುಡಗಮನ ಉರಗಶಯನ ಉರಗಶಯನ ಸುರಬ್ರಹ್ಮಾದಿ ವಂದಿತಚರಣ ಕರುಣಾನಂದ ಪರಿಪೂರಣ ಪರಿಪೂರಣ ತರಳ ಮಹಿಪತಿ ಜೀವಜೀವನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೃಷ್ಣ ಕೃಷ್ಣ ಬಾಂಧವ ಸೃಷ್ಟ್ಯಾದಷ್ಟ ಕರ್ತ ಭವ ನಷ್ಟವಗೈಸೋದು ಅಷ್ಟರೊಳಗೆ ಹರಿ ವಿಷ್ಣು ಸರ್ವೋತ್ತಮ ಇಷ್ಟೆ ಪೇಳುವದಕೆ ನಿಷ್ಟಿಯನೀಯೊ ಪ ಈ ಸುದಿನವಾರಭ್ಯ ಕ್ಲೇಶದೊಳಗೆ ಬಿದ್ದಾ ಯಾಸ ಬಡುತಲಿದ್ದೆ ಲೇಶವಾದರು ಸುಖ ಲೇಶಗಾಣದಿರಲು ಏಸು ಜನ್ಮದ ಪುಣ್ಯ ಸೂಸಿತೋ ನಿನ್ನಯ ದರುಶನ ಲಾಭವಾಗೆ ದೇಶದೊಳಗೆ ನಿನ್ನ ದಾಸರ ದಾಸನೆನಿಸಿಕೊಂಬ ಈ ಸುಲಭ ವೊಂದಿಸನುದಿನ ದು ರಾಶೆಯ ಬಿಡಿಸೆಂದು ನಾಶರಹಿತ ಗುಣರಾಶಿ ರಮೇಶ 1 ವೇದಪರಾಯಣ ಸಾಧುಗಳರಸಾ ವಿ ನೋದಿಗಾ ಪಳ್ಳಿಗನೆ ಆದಿದೈವವೆ ತೀರ್ಥ ಪಾದ ಜಗತ್ಯೆಂತ ಭೇದಾ ಶೃಂಗಾರ ವೇಣು ನಾದ ಸನಕಾದಿ ಮುನಿವಂದಿತಾ ಮಾಧವ ಮಹಿಧರ ಯಾದವ ಕರುಣ ಪ ಯೋಧದಿ ಎನ್ನಪರಾಧವನೆಣಿಸದೆ ಸಾಧನ ಕೆಡಿಸುವ ಕ್ರೋಧವ ಬಿಡಿಸಾರಾಧನೆ ತಿಳಿಯದು ಭೂದೇವರೊಡಿಯಾ 2 ಕರವಾ ಬಿಡದಿರೆನ್ನ ಕರಣ ಶುದ್ಧವ ಮಾಡು ಕರದ ಮಾತಿಗೆ ಭಯಂಕರವ ಓಡಿಸಿ ಮಂದ ಕರಿಯ ಕಾಯಿದ ಶುಭಕರ ಕಾಳಿ ಮಥನ ಸಂ ನಿತ್ಯ ಕರ ಪತಿ ಕುಲ ರತುನಾ ಕರಕೆ ಉಡುಪ ಮಕರಧ್ವಜಪಿತ ತೋರಿಸೊ ಭಜಕರರೊಳಗಿಡುವುದು 3
--------------
ವಿಜಯದಾಸ
ಕೃಷ್ಣದ್ವೈಪಾಯನ ಗುರುರಾಜರ ಚರಣ ಕಮಲಕಾನಮಿಪೆ ಶಿರಬಾಗಿ ಬಿನ್ನೈಪೆ ಪ ವೇದವ್ಯಾಸರ ಕರಕಮಲಜರೆನಿಸಿ ವೇದೇಶರ ಮುಖದಿ ವೇದಾಂತ ಸುಶಾಸ್ತ್ರ ಜ್ಞಾನವ ಘಳಿಸಿ ಮೇದಿನಿಯೊಳು ಚರಿಸಿ ಮೇದಿನಿ ಸುರರಿಗೆ ಮೋದವ ಗರೆದ 1 ಧರಿಜಾರಮಣನ ಪದಪೂಜಿಸಿದಂಥ ಶ್ರೀ ವ್ಯಾಸರ ಮಂತ್ರ ಧರಿಯೊಳು ಜಪಿಸಿದರಿವರೆ ಮಹಾಂತರೆನಿಸಿದರತಿ ಶಾಂತ ವರುಣಿಸಲೊಶವೆ ಗುರುವರ ಮಠದಲಿ ಸುರಗಂಗೆಯು ಬಂದಿರುವ ಮಹಿಮೆಯನು 2 ವರ ಭೀಮಾತಟದಿ ವಿರಾಜಿಸುವಂಥ ಕುಸುಮೂರುತಿ ಸಂಸ್ಥ ಶರಣಾಗತ ಜನರಿಗೆ ಸಕಲಾಭೀಷ್ಟ ಗರಿಯುವ ಸುಸಮರ್ಥ ಧರೆಯೊಳು ಮೆರೆಯುವ 'ಶಿರಿ ಕಾರ್ಪರ ನರಹರಿ' ಯ ನೊಲಿ-ಸಿರುವ ಪರಮ ಮಹಾತ್ಮ3
--------------
ಕಾರ್ಪರ ನರಹರಿದಾಸರು
ಕೃಷ್ಣನ್ನ ಬಲೂತ್ಕøಷ್ಟನ್ನ ವಿಶಿಷ್ಟನ್ನ ಸ್ತುತಿಸಿ ತುಷ್ಟನ್ನ ಪ ಗೋಪಳ್ಳಿಯೊಳಗಂದು ನಿಂದನ್ನಬಲುಗೋಪಿಯರ ಕೂಡ ನಂದನಾಗೋಪಿ ಚಂದನದಿಂದ ಬಂದನ್ನಾನಮ್ಮಗೋಪಾಲ ವಿಷ್ಣು ಗೋವಿಂದನ್ನ 1 ಅಪಾರ ಮಹಿಮ ನೆನೆಸುವನ್ನಾಭüಕುತ ಗಾಪತ್ತಬರಲು ಮಾಣಿಸುವನ್ನಾತಾಪಸಿಗಳಿಗೆ ಕಾಣಿಸುವನ್ನಾದಶರೂಪವ ಧರಿಸಿ ಜನಿಸುವನಾ 2 ರಜತಪೀಠ ಪುರವಾಸನ್ನಮಹರಜನೀಚರರ ವಿನಾಶನ್ನತ್ರಿಜಗದೊಳಗೆ ಪ್ರಕಾಶನ್ನನಮ್ಮವಿಜಯವಿಠ್ಠಲ ಮಾನಿಸನ್ನ 3
--------------
ವಿಜಯದಾಸ
ಕೃಷ್ಣರಾಯನೆ ನಿನ್ನ ಕೃತ್ಯಗಳೆಲ್ಲ ಸೃಷ್ಟಿಯೊಳಗೆ ನಾ ಬೀರಲ್ಯಾ ಪ ಕಷ್ಟ ಬಿಡಿಸದೆ ಸುಮ್ಮನಿದ್ದೆಯಾ ಸ್ವಾಮಿ ಅ.ಪ. ಜನನ ಮರಣ ಶೂನ್ಯನೆನಿಸಿಕೊಂಡು ಗೋಪಿ ತನಯನಗಿದ್ದುದ ಹೇಳಲ್ಯಾ ಸನಕಾದಿಸೇವ್ಯ ಪೂಜ್ಯನೆ ತುರುಗಳ ಹಿಂಡು ವನದಲ್ಲಿ ಕಾಯ್ದದ್ದು ಹೇಳಲ್ಯಾ ನಾನು 1 ದನುಜ ಭಂಜನನಾದ ‌ಘನ ಮಹಿಮನೆ ಮಾಗ ಧನಿಗಂಜಿ ಓಡಿದ್ದು ಹೇಳಲ್ಯಾ ಎಣೆಯಿಲ್ಲದಾ ಶೂರ ರಣದೊಳು ಪಾರ್ಥಗೆ ಅನುಗನಾಗಿದ್ದದ್ದು ಹೇಳಲ್ಯಾ ನಾನು 2 ಸತತ ತೃಪ್ತನಾಗಿ ಕ್ಷಿತಿಯೊಳು ಬೆಣ್ಣೆಯ ಮಿತವಾಗಿ ಕದ್ದದ್ದು ಹೇಳಲ್ಯಾ ಕೃತಿದೇವಿರಮಣನೆ ಅತಿ ಪ್ರೀತಿಯಲಿ ಗೋಪ ಸತಿಯರ ಕೂಡಿದ್ದು ಹೇಳಲ್ಯಾ ನಾನು 3 ಶ್ರುತಿತತಿಗಳಿಗಭೇದ್ಯ ಪ್ರತಿಯಿಲ್ಲದೆ ದೇವ ಸತಿಗೊಶನಾದದ್ದು ಹೇಳಲ್ಯಾ ಶತಕೃತು ವಿಧಿವಂದ್ಯ ಸುತರಾಪೇಕ್ಷಿಸಿ ಭೂತ ಪತಿಯನ್ನು ಬೇಡಿದ್ದು ಹೇಳಲ್ಯಾ ನಾನು 4 ಭೂತಳದೊಳು ದೇವತೆಗಳೊಡÀನೆ ಇಂಥ ರೀತಿಲಿ ಚರಿಸಿದ್ದು ಹೇಳಲ್ಯಾ ಭೀತಿರಹಿತ ಜಗನ್ನಾಥವಿಠ್ಠಲನೆ ಅ ದ್ಭುತ ಮಹಿಮನೆಂದು ಹೇಳಲ್ಯಾ ನಾನು 5
--------------
ಜಗನ್ನಾಥದಾಸರು
ಕೃಷ್ಣವೇಣಿ ಕಲ್ಯಾಣಿ ನಿತ್ಯ ಸಾಗರನ ರಾಣಿ ಪ ಅಜನ ನಿರೂಪದಲಿ ಜಾಬಾಲಿಮುನಿ ಬಂದು ಭಜಿಸಿದನು ನಿನ್ನ ಬಲುದಿವಸಂಗಳು ನಿಜವಾಗಿ ಹರನ ಜಡೆಯಲ್ಲಿ ಉದ್ಭವಿಸಿದೆ ತ್ರಿಜಗದೊಳಗೆ ಮೆರೆದೆ ತ್ರಿದಶಾಮರವಂದಿತೆ 1 ಕನ್ಯಾರಾಶಿಗೆ ಜೀವ ಬಂದು ಪ್ರಾಪುತನಾಗೆ ಹನ್ನೆರಡು ವರುಷಕೆ ಒಮ್ಮೆ ಬಿಡದೇ ಮನ್ನಿಸಿ ಭಕುತಿಯಿಂದ ಒಂದು ಮಜ್ಜನಮಾಡೆ ಧನ್ಯನ ಮಾಳ್ಪೆ ಬಲು ಘನ್ನ ತರಂಗಿಣಿ 2 ಎತ್ತ ನೋಡಿದರತ್ತ ನಾಲ್ಕುವರೆ ಯೋಜನವು ಕ್ಷೇತ್ರ ಪುಣ್ಯದೇವಿಯೆನಿಸಿಕೊಂಬೆ ಸ್ತುತಿಸಲಳವೇ ನಿನ್ನ ಮಹಿಮೆಯ ಅನುಗಾಲ ಮತ್ತಗಜಗಮನೆ ಮಲದೂರೆ ಮುಕ್ತಿಧಾರೆ 3 ಪೋಗದ ಪಾಪಗಳಿರಲು ನಿನ್ನ ದರುಶನವು ಬಾಗಿಲ ಕಾಯ್ವ ಭಾಗ್ಯವ ಕೊಡು ಕರುಣದಲಿ 4 ಕಲಿಯುಗಕೆ ನೀನೇ ವೆಗ್ಗಳವೆಂದು ಬುಧಜನರು ಒಲಿದು ಕೊಂಡಾಡುವರು ಸತತದಲ್ಲಿ ಜಲನಿಧಿಯ ಎರಡು ಮೊಗದಲಿ ಮೆರೆದೆ ಮಹತಟಿನಿನೆಲೆಗೊಳಿಸು ವಿಜಯವಿಠ್ಠಲ ಚರಣದಲ್ಲಿ 5
--------------
ವಿಜಯದಾಸ
ಕೃಷ್ಣಾ ಎಣಿಕ್ಯಾಕೈಯ್ಯ ನಮ್ಮ ಕೂಡ ತುಟ್ಟಿ ಮಿಸುಕಬಾರದು ನೋಡಬ್ಯಾಡ ಇಷ್ಟರಮೇಲೆ ತಿಳಿಯದ ನಾ ಮೂಢ 1 ಅಂದು ಏನಾಗಿತ್ತೈಯ್ಯ ನಿಮ್ಮ ಬುಧ್ದಿ ಬಂದು ಗೊಲ್ಲರೊಡನೆ ಕೂಡ್ಯಾಕಿದ್ದಿ ಸಂಧಿಸ್ಯವರುಚ್ಚಿಷ್ಟವೆಂದು ನೀ ಮೆದ್ದಿ ಇಂದು ಬ್ಯಾರೆ ನೋಡಲಿಕ್ಕೆ ಮರದ ಸುದ್ದಿ 2 ಕುಬ್ಜೆ ಕೂಡಿಕೊಂಬಾಗ ನೋಡಲಿಲ್ಲಿ ನಿಜಪದಕ ಯೋಗ್ಯಳ ಮಾಡಲಿಲ್ಲಿ ಅಜಮಿಳನೆಷ್ಟೆಂದು ಅರಿಯಲಿಲ್ಲಿ ಸೋಜಿಗೆಲ್ಲಾನು ನಿಮ್ಮದು ನಾ ಬಲ್ಲೆ 3 ಸುಮ್ಮನಿರಬೇಕೆನ್ನ ನೀ ಕೂಡಿಕೊಂಡು ನಿಮ್ಮ ಮಾತು ಒಡಿಯದು ಉದ್ದಂಡು ಇಮ್ಮನಾಗದಲ್ಲಿಂದ ಮನಗಂಡು ಬ್ರಹ್ಮಾನಂದ ಕೊಂಡಾಡುವೆ ಘನನುಂಡು 4 ಹಿಂದೆ ಭಕ್ತರೇನು ತಾಂ ಕೊಟ್ಟರಯ್ಯ ಇಂದು ನಾ ಕೊಡುವದೇನು ಹೇಳಯ್ಯ ಕಂದ ಮಹಿಪತಿ ನಾ ನಿಮ್ಮ ನಿಶ್ಚಯ ಎಂದು ಬಿಡದೆ ಸಲಹೊ ನೀ ನಮ್ಮಯ್ಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು