ಒಟ್ಟು 3371 ಕಡೆಗಳಲ್ಲಿ , 119 ದಾಸರು , 2565 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಂದು ತೋರೆ ಮಂದರಧರ ಮು -ಕುಂದ ಮುರಹರನ ಪ. ಬೇಗದಿ ಪೋಗೆ ನೀ ಸಾಗರದೊಳಗೆಭೋಗಿ ಭೋಗದೊಳಿಪ್ಪ ಸೊಬಗುಮೂರುತಿಯ 1 ಸಾರಿದ ಸುಜನರ ಸಲಹುವ ಧೀರನನೀರೆ ನಿಗಮಸ್ತೌತ್ಯ ನಿರ್ಮಲರೂಪನ 2 ಮಂಗಳಮೂರುತಿ ಸಿರಿಹಯವದನನಸಂಗಿಸು ಎನ್ನೊಳು ಸಖಿ ಸುಖಮಯನ3
--------------
ವಾದಿರಾಜ
ತಂದು ತೋರೆ ಮಂದಹಾಸನ | ಕಾಮಿನಿ | ತಂದು ತೋರೆ ಮಂದಹಾಸ | ನಂದ ಕಂದ ಶ್ರೀಮುಕುಂದ | ವಂದಿತಾಮರೇಂದ್ರ ವಂದ್ಯನ | ಕಾಮಿನಿ ಪ ಉರವನಿತ್ತಗುರುಮೊಮ್ಮನುದರಲಿ ಬಂದ ಮಾತೆ ಮಗನ | ಶರದ ಭರಕೆ ಫಣಿಲಿ ತಾಳ್ದಾನಾ | ಕಾಮಿನಿ 1 ಸರಳದಿಂದ ಪ್ರಾಣ ತೊರಿದನಾ | ಪ್ರೀತಿಯಾ | ಸರಳಕಾದು ಅಳಿದನಯ್ಯನ | ಸರಳಗದೆಯ ಕೈಯ್ಯಲಿಂದ | ಸರಳತ್ರಯನ ಕೊಲಿಸಿದಾತನ | ಕಾಮಿನಿ 2 ಶತಕಮೃಗನ ಭೋಜ್ಯವಾಹನ | ಸಖಉರಭಕಾಗಿ ನಿಲ್ಲದೇ | ಅಖಿಲದೋಳಗೆನುಸಲುತಿಹನಾ | ರಾಶಿಯ | ಪಕವನಳಿದನರಿಯಸುತನ | ರಕ್ಷಕಮಹೀಪತಿನಂದನ| ಮುಖದಿ ತನ್ನ ಚರಿತೆನುಡಿಪನ ಕಾಮಿನಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತಂದು ತೋರೆ ಶ್ರೀ ಮುಕುಂದನ ಗೋವಿಂದನಎಂದೆಂದುಡುಪಿಲಿ ನಿಂದನ ಗೋವಿಂದನ ಪ. ದಂಡಪಾಶಧರನು ಭೂಮಂಡಲದಿ ಮುನಿಗಳಹೆಂಡರಿತ್ತ ಭಿಕ್ಷೆಯುಂಡನ ಚೆಲ್ವಕುಂಡಲ ಮಂಡಿತ ಗಂಡನ ಉ -ದ್ದಂಡ ಕಠೋರ ಪ್ರಚಂಡನ ಗೋವಿಂದನ 1 ಹಾರ ಪದಕ ಕಂಕಣ ಕಿರುಗೆಜ್ಜೆ ಉಡು -ದಾರ ವೀರ ಪೆಂಡ್ಯಗಳಿಟ್ಟನ ತನ್ನಸೇರ್ದರಿಗಿಷ್ಟವ ಕೊಟ್ಟನನೀರಸ ಜನರ ಬಿಟ್ಟನ ಗೋವಿಂದನ2 ಮಂದಹಾಸವೆಂಬ ನವಚಂದ್ರಿಕೆಯಿಂದೆಸೆವ ಮುಖಇಂದುವಿನ ನೀರಜಾಕ್ಷನ ನವಚಂದನ ಕರ್ಚಿತವಕ್ಷನಎಂದೆಂದು ಭಕ್ತರ ಪಕ್ಷನ ಗೋವಿಂದನ 3 ಮಂದಜಜಾಂಡಾದಿಂದ್ರ ಮುಖ್ಯ ವೃಂದಾರಕರೊಡೆಯನಇಂದಿರೆಯಪ್ಪುವ ತೋಳ್ಗಳ ಶುಭಕುಂದ ಕುಟ್ಮಲ ಪಲ್ಗಳಅಂದುಗೆ ಒಪ್ಪುವ ಕಾಲ್ಗಳ ಗೋವಿಂದನ 4 ಇಂದು ಹಯವದನನ್ನ ಸಂದೇಹವ ಕಳೆಯುತ್ತ ಆ-ನಂದದಿಲ್ಲಿಗೆ ಬಂದನಚಂದದಿ ವೇದವ ತಂದನ ಆನಂದನ ರಾಣಿಯ ಕಂದನ ಗೋವಿಂದನ 5
--------------
ವಾದಿರಾಜ
ತಂದು ಬೆಳಗಿರೆ ಛಂದದಿ ಕುಂದಣಾದಾರುತಿ | ನಂದಕುಮಾರ ಗೋವಿಂದಗೆ ಪ ಪಂಚಾಶ್ಯನಮಿತಗೆ | ಪಾಂಚಾಲಿ ವರದಗೆ ಪಂಚಬಾಣನಪಿತ ಶೌರಿಗೆ 1 ಕುಂಡಲಿ ಶಯನಗೆ ಪುಂಡರೀಕಾಕ್ಷಗೆ | ತೋಂಡವತ್ಸಲ ಪಾಂಡುರಂಗಗೆ ತಂದು ಬೆಳಗಿರೆ 2 ಯಾಮಿನಿಚರವೈರಿ ಶಾಮಸುಂದರನಿಗೆ | ಕಾಮಿನಿಯರು ರಘುರಾಮಗೆ ತಂದು ಬೆಳಗಿರೆ 3
--------------
ಶಾಮಸುಂದರ ವಿಠಲ
ತಂದೆ ನಿನ್ನೊಲುಮೆಯೊಂದೆ ಎನ್ನ ಬಯಕೆ ಪ ಬಂದ ಕಷ್ಟಗಳೆಲ್ಲ ಎನ್ನಭ್ಯುದಯಕೆ ಅ.ಪ ಆಸೂರಿಯಾದರೂ ಈ ಸೂರಿಯಾದರೂ ಏಸೂರಿಗ್ಹೋದರೂ ವಾಸಿಯಿಲ್ಲ ಕೂಸುಗಳ ಪಡೆದರೂ ಆಸೆಗಳ ತೋರಿದರೂ ಹೇಸಿಕೆ ಬೇಳಲೆದರೂ ಲೇಸಾಗಲಿಲ್ಲ 1 ಈ ವೂರಿನೈವತ್ತು ಆ ವೂರಿನೈವತ್ತು ದೇವರ್ಕಳಿಗೆ ನಾಮ ಹರಕೆ ಹೊತ್ತು ಬೇವಿನಲಿ ಸಿಹಿಯ ನೀನೀವುದೆಂದತ್ತತ್ತು ಜೀವಿತವು ಬರಿದಾಯ್ತ ಬಾಧಿಸುವುದೈಮುಪ್ಪು 2 ತಂದೆ ಗೋವಿಂದನಯ್ಯ ಒಂದುನೂರ್ವಂದನೆಯ ಇಂದರ್ಪಿಸುವೆನಯ್ಯ ಕೈಹಿಡಿಯಯ್ಯ ಕುಂದ ಕಳೆಗಾಣಿಸಯ್ಯ ಬಂಧನವ ಬಿಡಿಸಯ್ಯ ಇಂದಿರಾನಂದ ಮಾಂಗಿರಿಯ ರಂಗಯ್ಯ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತಂದೆ ನೀನಹುದೆಂಬುದೆಂದಿಗು ದಿಟವಯ್ಯ ಇಂದಿರೆಯರಸ ಜೀಯಾ ಕುಂದುಕೊರತೆಗಳನೊಂದು ನೋಡದೆ ಕೃಪೆ ಯಿಂದ ನಿನ್ನಂತೆ ರಕ್ಷಿಪರುಂಟೆ ರಘುರಾಯ ಪ. ತನಗನುವಾಗಿರೆ ತೋಷಬಡುವ ತಾತ ಕೊನರಿಕೊಂಬುವ ಕಷ್ಟಕಾಲದಲಿ ವನರುಹದಳನೇತ್ರ ವಾರ್ಧಿಬಂಧನ ನೀನು ನೆನೆದಬೀಷ್ಟವ ಕೊಟ್ಟು ನಿರ್ಮಲ ಪದವೀವಿ 1 ಅಘಟಿತಾಘಟಕನೆ ಆದಿ ಪರುಷಮಹ- ದಘನಿವಾರಣ ಶಕ್ತ ಗುಣವಾರಿಧೆ ಸ್ವಗತ ಮಾನಸ ಶಬರಿಯ ಸಲಹಿದ ನಮ್ಮ ರಘುಕುಲತಿಲಕ ರಾವಣವೈರಿ ಸುಖಕಾರಿ 2 ಮುಪ್ಪುರ ಹರ ಜಪಿಸುವ ಮೂಲ ಮಂತ್ರೇಶ ಅಪ್ಪ ನೀನಹುದೆಂಬ ನಿರ್ಣಯವ ತಪ್ಪದೆ ಬಿನ್ನಹ ಒಪ್ಪಿಲ್ಲಿ ನೆಲೆಯಾಗು ಸರ್ಪಾದ್ರಿನಿಲಯಾ ತಿಮ್ಮಪ್ಪ ಚಿಂತಿತದಾತ 3
--------------
ತುಪಾಕಿ ವೆಂಕಟರಮಣಾಚಾರ್ಯ
ತಂದೆ ಪ್ರಾಣೇಶವಿಠ್ಠಲರಾಯ ಒಲಿದು ಆ |ನಂದ ಕೊಡು ಈ ಭಕ್ತಗೆ ||ಪೊಂದಿಕೊಂಡಿಹ ನಿನ್ನನೆಂದು ನಾ ಪ್ರಾರ್ಥಿಸುವೆ ಮಂದರೋದ್ಧರ ಮುಕುಂದಾ | ನಂದಾ ಪ ವೈರಿ ನಿನ್ನವರಡಿಗೆ ನಡಿಯೆ ಪದವನುಕೂಲವಾಗಿರಲೀ ಬರಲಿ1 ಇವನ ಕವನಾ ಕೇಳಿ ಹರುಷಯುತರಾಗಿ ಸತ್ಕವಿಗಳೂ ತಲಿದೂಗಲಿ |ಪವನ ಮತದಲಿ ಪೇಳಿದಂತೆ ಅದನನುಸರಿಸಿ ಕವಿತೆಯು ಬಂದೊದಗಲಿ ||ನವರಾಗಗಳಿಂದೊಪ್ಪಿ ಲಘು ದೀರ್ಘ ಮೊದಲು ಮರ್ಮವ ತಿಳಿದು ಪೇಳುತಿರಲಿ |ಭುವನದೊಳಗುಳ್ಳ ಸುಜ್ಜನರು ಶೋಧಿಸಿ ಆಶುಕವಿಯೆಂದು ಕರೆಯುತಿರಲಿ | ಮೆರೆಯಲಿ || ಚಿರಕಾಲ ಬಾಳಿ ಬಹು ಕೀರ್ತಿಯುತನಾಗಿ ಈ ಧರಿಯೊಳಗೆ ಸುಖಿಸುತಿರಲಿಪರಮ ಭಕುತಿಯು ಪೆಚ್ಚಿ ಸೋತ್ತುಮರ ಪದಗಳಿಗೆ ಎರಗಿ ಕರುಣವ ಪಡೆಯಲಿ ||ಮರೆಯದಲೆ ಇಹಪರದಿ ಸುಖಗಳನು ಕೊಟ್ಟು ಶ್ರೀ ಹರಿಯೆ ಪೊರೆಯಂದಾಡಲಿ |ಮರುತಾಂತರ್ಯಾಮಿ ಗುರು ಪ್ರಾಣೇಶ ವಿಠಲನೆ ಶರಣ ಜನ ಕಾಮಧೇನೂ ನೀನು 3
--------------
ಗುರುಪ್ರಾಣೇಶವಿಠಲರು
ತಂದೆ ಮುದ್ದು ಮೋಹನ್ನಾ ನಿನ್ನಯದ್ವಂದ್ವ ಪಾದವ ತೋರಣ್ಣಾ ಪ ಕಂದನ ಕುಂದನು ಒಂದನು ಎಣಿಸದೆಬಂದು ನಿಲ್ಲೊ ಮನ ಮಂದಿರದೊಳು ನೀ ಅ.ಪ. ಪರಾಕು ಪೇಳುವೆ ಓಹೋ |ಸಾಕು ಮಾಡು ಈ ಭವದ ಸಂಗವನು |ಸ್ವೀಕರಿಸೆನ್ನ ಕೃಪಾಕರ ಮೂರುತಿ 1 ವಾಸವ ಗುರವೇ ಪೋಷಿಸು ಎನ್ನನು ಮೀಸಲೆನಿಸಿ ಮನ ಶ್ರೀ ಶನ ಪದದಲಿ 2 ಚಾರು ಚರಣವನು 3
--------------
ಗುರುಗೋವಿಂದವಿಠಲರು
ತಂದೇ ಮುದ್ದು ಮೋಹನ್ನ ವಿಠಲ ದಾಸಾರ್ಯ ಪ ಇಂದಿರೆಯ ಪತಿಪಾದ | ಮನ್ಮನದಿತೋರುತಲಿಬಂಧುರಾತ್ಮ ಜ್ಞಾನ | ಛಂದದಲಿ ತಿಳಿಸೋ ಅ.ಪ. ಸಿರಿ ವೆಂಕಟನ | ನಂದದಲಿ ಭಜಿಸುವರಅಂದ ಸಹವಾಸವನು | ಸಂಧಿಸಿದೆ ದಯದೀ 1 ಸಾರ ಸುಖ ಸಾಂದ್ರಾ 2 ಕುಂಡಲ ಭೂಷ | ತೋರೊ ಹೃದ್ವಾರಿಜದಿಧೀರ ಗುರು ಗೋವಿಂದ | ವಿಠಲ ಪದಪದ್ಮಾ 3
--------------
ಗುರುಗೋವಿಂದವಿಠಲರು
ತನುಮನದಲ್ಲಿ ಯೋಚನೆ ಮಾಡೀ ಎಣಿಸಿ ಗುಣಿಸಿ ಮನಸಿಜನ್ನ ಜನಕನ ಲೀಲೆ ಪ ನರನಾರಾಯಣನೀತ ಕೃಷ್ಣ ಹರಿ ಹೃದ್ಭಾನು ಕಪಿಲನೀತ ಹರಿನಾರಾಯಣೇನೀತ ಯೋಗೀ ಶ್ವರ ತಾಪಸ ವೈಕುಂಠನೀತ ಹರನಸಖ ಸ್ವಧಾಮನೀತ ಕರುಣಿ ಸಾರ್ವಭೌಮನನೀತಾ 1 ಅಜಿತಯಜ್ಞನಾಮನೀತ ಅಜಗೆ ಪೇಳಿದ ಹಂಸನೀತ ಸುಜನಪಾಲ ವ್ಯಾಸ ವೀ ರಜ ಮಹಿದಾಸ ದತ್ತನೀತ ನಿಜ ಮಹಿಮ ಧನ್ವಂತ್ರಿ ಈತ ತ್ರಿಜಗವಳೆದುಪೇಂದ್ರನೀತ ಭಜಕರೊಡಿಯ ವಿಷಕ್ಸೇನ ಭುಜಗಶಾಯಿವಿಭುವೆ ಈತ 2 ಚಲುವ ಧರ್ಮಶೇತು ಈತ ಬಲುವುಳ್ಳ ಶಿಂಶುಮಾರನೀತ ಮತ್ಸ್ಯ ಕೂರ್ಮವರಹ ಲಲಿತನರಸಿಂಹನೀತ ಬಲಿಗೊಲಿದ ವಾಮನ್ನನೀತ ಕುಲವೈರಿ ರಘರಾಮನೀತ ಕಲಕಿ ರೂಪನಾದನೀತಾ 3 ವಾಸುದೇವ ಜಯಪತಿ ಸುಂ ದರ ಪ್ರದ್ಯುಮ್ನ ಈತ ನಿರಂತರ ಅನಿರುದ್ಧನೀತ ಚ ತುರ ವಿಂಶತಿ ಮೂರುತಿಯೇ ಈತ ಮೆರೆವ ಅಜಾದಿ ನಾಮಕನೀತ ವರ ಪಂಚಮೂರುತಿಯೇ ಈತಾ ಎರಡೈದು ಮೇಲೊಂದನೀತ 4 ಪರಿಪರಿ ರೂಪ ಉಳ್ಳನೀತ ಹೊರಗೆ ಒಳಗೆ ವ್ಯಾಪ್ತನಾಗಿ ಸರಿಸರಿ ಬಂದ ತೆರದಿ ಜಗವ ಸರಸದಲಿ ಆಡಿಪನೀತ ಸ್ಮರಣೆ ಮಾಡಲು ಸಕಲ ಇಷ್ಟವ ಕರೆÀದು ಕೊಡವನೀತ ಮರಣ ಜನನರಹಿತ ನೀತ 5
--------------
ವಿಜಯದಾಸ
ತನುವೆನ್ನದು ಚೇತನವೆನ್ನದು ಎಂದು ಅನುದಿನ ಪೋಷಣೆಯನು ಮಾಡಿದೆ ಹರಿ ಪ ಚಿನುಮಯ ನಿನ್ನನು ನೆನೆವೆನೆಂದರೆ ಮನ ತನುಮಧ್ಯೆಯರ ತನುವಿನೊಳಿರುತಿಹುದು ಅನಘ ನಿನ್ನನು ನೋಡುವೆ ನಾನೆನ್ನಲು ದೃಷ್ಟಿ ಕನಕಾಂಗಿಯರ ಕುಂಭಸ್ತನದ ಮೇಲಿಹುದಯ್ಯ1 ಚರಣದ ಪೂಜೆಯೊಳಿರುವೆನೆಂದರೆ ಕರವರೆಡು ಕೋಮಲೆಯರನರಸುವುವು ಹರಿಕಥಾಶ್ರವಣದೊಳಿರೆ ಈ ಕಿವಿಗಳು ಹರಿಣಾಕ್ಷಿಯರ ಕಂಠಸ್ವರಕೆ ಮೋಹಿಪವಯ್ಯ 2 ದುರಿತದೂರನ ನಾಮ ಸ್ಮರಿಸದು ನಾಲಿಗೆ ಸರಸಿಜಾಕ್ಷಿಯರೊಳು ಸರಸೋಕ್ತಿ ಪಡೆದು ಚರಣಶ್ರೀತುಳಸಿಯನರಿಯದೆ ನಾಸಿಕ ತರುಣಿಯ ಮೈಗಂಪನರಸಿ ಹಿಗ್ಗುವದಯ್ಯ 3 ನಿನ್ನಂಘ್ರಿಗೆರಗದೆ ಕುನ್ನಿಶರೀರವಿ ದುನ್ನುತಸ್ತನವುಳ್ಳ ಕನ್ನೆಯರೊಳ್ ತನ್ನ ಸುರತಸುಖವನೆ ಚಿಂತಿಸುವದು ಎನ್ನಾಧೀನದೊಳಿಲ್ಲ ನೀನೆ ಬಲ್ಲೆ 4 ಎರವಿನ ಸಿರಿಯಂತೆ ಕರಣಕಳೇವರ ಬರಿದೆ ನನ್ನದು ಎಂದು ಮೆರೆದೆ ನಾನು ಹರಿ ನಿನ್ನದೇ ಸರಿ ದುರಿತಸುಕೃತಕೆನ್ನ ಗುರಿಮಾಡದೆ ಕಾಯೋ ವರದವಿಠಲ ಕೃಷ್ಣ 5
--------------
ವೆಂಕಟವರದಾರ್ಯರು
ತನುವೆನ್ನದು ಚೇತನವೆನ್ನದು ಎಂದು ಅನುದಿನ ಪೋಷಣೆಯನು ಮಾಡಿದೆ ಹರಿ ಪ ಚಿನುಮಯ ನಿನ್ನನು ನೆನೆವೆಂನೆಂzರÀಮನ ತನುಮಧ್ಯೆಯರತನು ವಿನೊಳಿರುತಿಹುದು ಅನಘ ನಿನ್ನನು ನೋಡುವೆ ನಾನೆನ್ನಲು ದೃಷ್ಟಿ ಕನಕಾಂಗಿಯರ ಕುಂಭಸ್ತನದ ಮೇಲಿಹುದಯ್ಯ 1 ಚರಣದ ಪೂಜೆಯೊಳಿರುವೆನೆಂದರೆ ಕರವೆರಡು ಕೋಮಲೆಯರ ನರಸುವುವು ಹರಿಕಥಾಶ್ರವನದೊಳಿರದೆ ಈ ಕಿವಿಗಳು ಹರಿಣಾಕ್ಷಿಯರ ಕಂಠ ಸ್ವರಕೆಮೋಹಿಪವಯ್ಯ 2 ದುರಿತದೂರನ ನಾಮಸ್ಮರಿಸದು ನಾಲಿಗೆ ಸರಸಿಜಾಕ್ಷಿಯರೊಳು ಸರಸ್ತೋಕ್ತಿಪಡೆದು ಚರಣ ಶ್ರೀ ತುಳಸಿಯ ನರಿಯದೆ ನಾಸಿಕ ತರುಣಿಯ ಮೈಗಂಪನರಸಿ ಹಿಗ್ಗುವದಯ್ಯ 3 ನಿನ್ನಂಘ್ರಿಗೆರಗದೆ ಕುನ್ನಶರೀರ ವಿದುನ್ನತಸ್ತನವುಳ್ಳ ಕನ್ನೆಯರೋಳ್ ತನ್ನ ಸುರತಸುಖವನ್ನ ಚಿಂತಿಸುವದು ಯನ್ನಾಧೀನದೊಳಿಲ್ಲ ನೀನೇ ಬಲ್ಲಿ 4 ಎರವಿನ ಸಿರಿಯಂತೆ ಕರಣಕಳೇವರ ಬರಿದೆ ನನ್ನದು ಎಂದು ಮೆರೆದೆ ನಾನು ದುರಿತ ಕೃತಕೆನ್ನ ಗುರಿಮಾಡದೆ ಕಾಯೋ ವರದ ವಿಠಲ ಕೃಷ್ಣ 5
--------------
ಸರಗೂರು ವೆಂಕಟವರದಾರ್ಯರು
ತನ್ನ ಮನೆಯಲ್ಲಿ ಬಣ್ಣದ ಭೊಗರಿ ಚಂಡು ಯಿಲ್ಲಾ | ಹಾಸಿಕೆ ಹಾಸಿಕೆ ಎತ್ತ | ಕಾಸೆ ಬಿಸಿ ನೀರು | ದಾಸನ ಕರಿಯೆ | ಸೊಲ್ಲು ಗೋಪಿ 1 ಕುಪ್ಪಸÀ ಕೊಡಬೇಡ ನೀ | ಅಪ್ಪನ ನೋಡ ಬೇಡ | ಚಪ್ಪರದೊಳಗೆ ಕುಳಿತು ಕಾಳು | ಕುಪ್ಪೆ ನಾಡುವ ಈಗ ಪೋಗಿ 2 ಹೊತ್ತು ಹೋಯಿತು ಮಸರುಕಟಿಯಲಿಲ್ಲ್ಯಾಕೆ | ಬಿತಿ ಬಿತಿ ಬೂವಾ ಉಂದೇನು ತುತ್ತು 3 ಅನ್ನಯ್ಯಾ ಬಂದ ತಾರೆ ತನ್ನ ತಲಗೀಯ | ನಿನ್ನೆ ಮಾಡಿದ ವಬ್ಬತು ಕೊದು ಎನ್ನ ಬಟ್ಟಲೊಳಗೆ ಹಾಕ 4 ಹೊಲಗೆ ಅನ್ನಯ್ಯ ಬಿದ್ದಾನೆ ತಲಿಯಲ್ಲೆ ಮನ್ನು | ಶಲಗಿಲಿ ವಲಿಗಿಸುವೇಗ ಬಂದು ತೊಲಿಯೆ ಬಿಸಿ ನೀರಿಂದ ಕೆತರು 5 ಕೆಲಿಗೆ ಹೋದೆನು ಕುಂತಿ ತಾಲೆ ಗೋಪಮ್ಮ | ಕಾಲಿಗೆ ಪಾಪೋತು ಆ ಮೆತ್ತನೆ ವಾಲೆಕಂತ ಕೈಯಲಿ ಹಿದಿಸೊ6 ತೊದಲ ಮಾತಾ ಕೇಳಿ ಮಗನ ವದನ ಮುದ್ದಾ | ಯದುಕುಲ ಪಾವನ ವೆಂದಳು ಗೋಪಿ7
--------------
ವಿಜಯದಾಸ
ತನ್ನೊಳು ತಿಳಿಯೊ ಪ್ರಾಣಿ ಪುಣ್ಯಸಾಧನಿ ಧ್ರುವ ತನ್ನಿಂದಲೆ ತಾ ನೋಡುವ ಖೂನ ಚೆನ್ನಾಗ್ಯದನುಭವ ಜ್ಞಾನ ಸನ್ಮತ ಸುಖದೋರುವ ಚಿದ್ಫನ ಭಿನ್ನವಿಲ್ಲದೆ ನೋಡುವದುನ್ಮನ 1 ಮೂಲವಿಡಿದು ನಿಜ ನೋಡುವದರಿಂದ ಮ್ಯಾಲೆ ದೋರುತಲದೆ ಬ್ರಹ್ಮಾನಂದ ಕೀಲು ತಿಳಿದರೆ ಸದ್ಗುರು ಕೃಪೆಯಿಂದ ಒಲಿದು ಬಾಹನು ತಾ ಮುಕುಂದ 2 ಸೆರಗವಿಡಿದು ನೋಡುಲು ಗುರುಮುಖ ಮೂರು ಲೋಕಕ ಬಲು ಪರಮ ವಿವೇಕ ತರಳ ಮಹಿಪತಿ ಆತ್ಮಾನುಭವ ಸುಖ ದೋರುತಲದೆ ತಾ ಘನ ಕೌತುಕ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಪ್ಪು ಕ್ಷಮೆ ಮಾಡೊ ಕೃಪೆಯಿಂದ ನೋಡೊ ಧ್ರುವ ನೀನೆ ದಯಾನಿಧಿ ನಾನೆ ಅಪರಾಧಿ ಖೂನ ದೋರು ಹಾದಿ ಸ್ಥಾನ ನಿಜಗಾದಿ 1 ಅನಾಥನೆಂದು ನೋಡಿ ಸುನಾಥ ಎನ್ನ ಮಾಡಿ ಸ್ವಾನಂದ ಸುಖ ನೀಡಿ ಮನ್ನಾಥ ನಿಜಗೂಡಿ 2 ಹೆಳಲಾರೆ ಬಹಳ ಕೇಳೋ ನೀ ದಯಾಳ ತಾಳಿ ಎನ್ನ ತೋಳ ಬಾಳ ವಿಶ್ವಪಾಲ 3 ಸೇವೆ ಇದೆ ನಮ್ಮ ಭಾವಿಸುದು ನಿಮ್ಮ ಪಾವನಗೈಸು ವರ್ಮ ಸುವಿದ್ಯ ಪರಬ್ರಹ್ಮ 4 ಬಂದ ಮ್ಯಾಲೆ ಶರಣಕುಂದಬ್ಯಾಕೊ ಪೂರ್ಣ ಕಂದ ಮಹಿಪತಿ ಗುಣ ಚಂದಮಾಡೊ ಕರುಣ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು