ಒಟ್ಟು 64 ಕಡೆಗಳಲ್ಲಿ , 30 ದಾಸರು , 62 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿನಾಮದರಗಿಣಿಯು ಹಾರುತಿದೆ ಜಗದಿ|ಪರಮಭಾಗವತರು ಬಲೆಯ ಬೀಸುವರು ಪಕೋಪವೆಂಬ ಮಾರ್ಜಾಲವು ಕಂಡರೆ ನುಂಗುವುದು |ತಾಪವೆಂಬ ಹುಲಿಯು ಕೊಂಡೊಯ್ವುದದನು ||ಕಾಪಾಡಿರದನು ಹೃದಯದೊಳಗಿಂಬಿಟ್ಟು |ಅಪತ್ತಿಗೊದಗುವುದು ಈ ಮುದ್ದು ಗಿಣಿಯು 1ದಾರಿಯ ನಡೆವಾಗ ಚೋರರ ಭಯವಿಲ್ಲ |ಮಾರಿಬಂದರದನು ಹೊಡೆದು ನೂಕುವುದು ||ಕ್ರೂರ ಯಮಭಟರನು ಮೂಗು ರೆಕ್ಕೆಯಲಿ ಬಡಿದು |ದಾರಿ ತೋರುವುದು ಮುರಾರಿಯ ಪಟ್ಟಣಕೆ 2ಎಷ್ಟೆಂದು ವರ್ಣಿಸಲಿ ಈ ಮುದ್ದು ಅರಗಿಣಿಯು |ಹೊಟ್ಟೆಯೊಳೀರೇಳು ಜಗವನಿಂಬಿಟ್ಟ ||ಸೃಷ್ಟೀಶ ಪುರಂದರವಿಠಲನ ನೆನೆ ನೆನೆದು |ಮುಟ್ಟಿ ಭಜಿಸುವುದು ಈ ಮುದ್ದು ಗಿಣಿಯು 3ಹರಿಯೆ................................................ ಪಹರಿನಿನ್ನ ಕೃಪೆಯೆನಗೆ ಚಂದ್ರ - ತಾರಾಬಲವು |ಹರಿನಿನ್ನ ಕರುಣವೇ ರವಿಯ ಬಲವು ||ಹರಿನಿನ್ನೊಲುಮೆಯೆನಗೆ ಗುರುಬಲವು ಭೃಗುಬಲವು |ಹರಿನಿನ್ನ ಮೋಹವೇ ಶನಿಯ ಬಲವು 1ಮಂಗಳಾತ್ಮಕ ನಿನ್ನ ಅಂಗದರುಶನವೆನಗೆ |ಮಂಗಳನ ಬಲವು ಎನ್ನಂಗಕೀಗ ||ರಂಗಯ್ಯ ನಿನ್ನ ಚರಣಾರವಿಂದವ ನೋಡೆ |ಹಿಂಗಿ ಪೋಪುದು ಅಘವು ಸೌಮ್ಯಬಲವು 2ಆದಿಪುರುಷನೆ ನಿನ್ನ ಅರಿಪುದೇ ಕೇತುಬಲ |ಅದಿಮೂಲನೆ ನಿನ್ನಗುಣಕಥನವ ||ಆದರಿಸಿ ಕೊಂಡಾಡುವುದೆ ಎನಗೆ ರಾಹುಬಲ |ಆದಿಮೂರುತಿ ಬ್ರಹ್ಮಪುರಂದರವಿಠಲ 3
--------------
ಪುರಂದರದಾಸರು
ಹಸಿವು ಬಹಳಾಗುತ್ತಿದೆ ಕೇಳಮ್ಮಯ್ಯಹಸನಾಗಿ ಉಣಬಡಿಸೇ ಪಬಿಸಿ ಬಿಸಿ ಕಡುಬು ಕಜ್ಜಾಯ ದೋಸೆಯು ಹುಗ್ಗಿಹಸನಾಗಿ ಬಡಿಸಮ್ಮ ಬಿಸಿ ಬಿಸಿಪರಮಾನ್ನಅ.ಪನೀರೊಳು ಮುಳುಗಿ ಬಂದೆ ಭಾರವ ಪೊತ್ತುಕೋರೆಲಿ ಧರಣಿ ತಂದೆಪೋರನೊಡನೆ ವೈರಿಯಾದ ದೈತ್ಯನ ಕರು-ಳ್ಹಾರವ ಮಾಡುತ್ತಭಾಳಬಳಲಿ ಬಂದೆ1ಪೊಡವಿ ದಾನವ ಬೇಡಿದೆ ರಾಜರ ಗೆದ್ದುಕೊಡಲಿ ಕಯ್ಯಲಿ ಪಿಡಿದೆಮಡದಿಯನರಸುತ ಅಡವಿಗಳ ಚರಿಸಿದೆಬಿಡದೆ ದೈತ್ಯರ ಸದೆ ಬಡಿದು ದಣಿದು ಬಂದೆ 2ವಿಷವನುಣಿಸಿದ ದೈತ್ಯಳ ಅಸುವನೆ ಹೀರಿಅಸುರ ಶಕಟನ ಸೀಳಿದೆವಸುದೇವ ಸುತನು ಈ ಅಸುರ ಮರ್ದನನಾಗಿಬಸುರೊಳು ಬ್ರಹ್ಮಾಂಡ ಧರಿಸಿದ ಕಾರಣ 3ಕಿಚ್ಚನುಂಗಿದ ಕಾರಣ ಹೊಟ್ಟೆಯ ಹಸಿವುಹೆಚ್ಚುತಲಿದೆ ನೋಡಮ್ಮಾಕಚ್ಚ ಬರುತಿಹ ಕಾಳಿ ಸರ್ಪನ ಹೆಡೆ ಮೇಲೆನರ್ತನ ಮಾಡುತಭಾಳಬಳಲಿ ಬಂದೆ4ಬತ್ತಲೆ ತಿರುಗಿ ಬಂದೆ ತೇಜಿಯನೇರಿಸುತ್ತಿದೆ ಧರಣಿಯನುಕರ್ತೃ ಶ್ರೀಹರಿಕಮಲನಾಭ ವಿಠ್ಠಲನಿಗೆತೃಪ್ತಿಯ ಪಡಿಸಮ್ಮ ಮುಕ್ತಿಪಥವನೀವೇ 5
--------------
ನಿಡಗುರುಕಿ ಜೀವೂಬಾಯಿ