ಒಟ್ಟು 184 ಕಡೆಗಳಲ್ಲಿ , 44 ದಾಸರು , 118 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರೆತಿರಲಾರೆ ಮನಸಾರೇ ಹರೇ ಪ ಮರೆತಿರಲಾರೆ ನಾ ಮಹಿತಚಾರಿತ್ರನ ಸರಸಿಜಪತ್ರ ನೇತ್ರನ ಅ.ಪ ಬಗೆಬಗೆ ರತಿಯಲಿ ಜಗವನು ಮೋಹಿಪ ಸುಗುಣನ ಜಗತ್ಪ್ರಾಣನ 1 ಚೇತನರಿಗೆ ಸುಖದಾತನ ದುಃಖ ವಿ ಘಾತನ ಲಕ್ಷ್ಮೀನಾರಾಯಣನ 2 ದಾಸರ ಹೃದಯನಿವಾಸನ ದೋಷನಿರಾಸನ ಶ್ರೀನಿವಾಸನ 3 ವೆಂಕಟರಮಣನ ಕಿಂಕರಶರಣನ ಸಂಕಟಹರ ನಿಷ್ಕಳಂಕನ 4 ಮಾನಿನಿಯ ಅಭಿಮಾನವ ಕಾಯ್ದನ ದೀನರ ಹರ್ಷನಿಧಾನನ 5 ರಾಮನ ದೈತ್ಯವಿರಾಮನ ಪಾವನ ನಾಮನ ಹೃದಯಾರಾಮನ 6 ಧರೆಯೊಳುತ್ತಮಪುಲಿಗಿರಿಯೊಳು ನೆಲಸಿಹ ವರದ ವಿಠಲವರದನ ದೇವನ 7
--------------
ವೆಂಕಟವರದಾರ್ಯರು
ಮರೆತಿರಲಾರೇ-ಮನಸಾರೇ ಹರೇ ಪ ಸರಸಿಜ ಪತ್ರನೆತ್ರನ ಅ.ಪ. ಬಗೆ ಬಗೆರತಿಯಲ್ಲಿ ಜಗವನ್ನುಮೋಹಿಪ ಸುಗುಣನ ಜಗತ್ಪ್ರಾಣನ 1 ಚೇತನರಿಗೆ ಸುಖದಾತನ ದುಃಖ ವಿಘಾತನ ಲಕ್ಷ್ಮೀನಾಥನ 2 ದಾಸರ ಹೃದಯ ನಿವಾಸನ ದೋಷನಿರಾಸನ ಶ್ರೀನಿವಾಸನ3 ವೆಂಕಟರಮಣನ ಕಿಂಕರಶರಣನ ಸಂಕಟಹರ ನಿಷ್ಕಲಂಕನ 4 ಮಾನಿನಿಯ ಅಭಿಮಾನವ ಕಾಯ್ದನ ದೀನರ ಹರ್ಷನಿಧಾನನ5 ರಾಮನ ದೈತ್ಯವಿರಾಮನ ಪಾವನ ನಾಮನ ಹೃದಯಾರಾಮನ 6 ಧರೆಯೊಳುತ್ತಮ ಪುಲಿಗಿರಿಯೊಳು ನೆಲಸಿಹ ವರದ ವಿಠಲವರದನ ದೇವನ7
--------------
ಸರಗೂರು ವೆಂಕಟವರದಾರ್ಯರು
ಮುತ್ತು ಕೊಳ್ಳಿರೋ ಉತ್ತುಮರೆಲ್ಲ ಧ್ರುವ ಜ್ಞಾನ ಸಮುದ್ರಲಿನ್ನು ಧ್ಯಾನವೆಂಬ ಸಿಂಪಿನೊಳು ಘನಗುರುಕರುಣದ ಮಳಿಯಾದ ಮುತ್ತು ಕೊಳ್ಳಿರೋ 1 ಪಿಂಡ ಬ್ರಹ್ಮಾಂಡವೆಂಬ ಗಡ್ಡೆಯೊಳಿನ್ನು ಪುಟ್ಟಿ ಭಕ್ತಿಭಾವ ಹಡಗದೊಳು ಬಂದ ಮುತ್ತು ಕೊಳ್ಳಿರೋ 2 ಸಾಧುಸಜ್ಜನರೆಂಬ ಮುತ್ತಿನ ಜೋಹರೇರ ಕೈಯ ನಿಜಹಸ್ತಸ್ಪರ್ಶವಾದು ನೀವು ಮುತ್ತು ಕೊಳ್ಳಿರೋ 3 ಅತ್ತಲಿತ್ತಲಾಗದೆ ಈ ಮುತ್ತು ಜತನಮಾಡಿ ನಿಮ್ಮ ಚಿತ್ತ ಮನದೊಳು ಇಟ್ಟುಕೊಳ್ಳಿರೋ 4 ತನುಮನಧನವನರ್ಪಿಸಿಕೊಂಡಿಹ ಮುತ್ತು ಮಹಿಪತಿ ಇಹರಪವಸ್ತು ಮುತ್ತು ಕೊಳ್ಳಿರೋ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಯಾರಿಗೆ ಯಾರಿಹರೋ ಜಗದಲಿ ನಾರಾಯಣ ನೀನಲ್ಲದೆ ಬಾಂಧವ ಪ ಜನನಿ ಜನಕ ಸತಿಸುತ ಸಹಜರುಗಳು ಮನೆ ಮಠ ಧನಕನಕಾಧಿಗಳೆಲ್ಲವು ಅನಿಮಿತ್ತ ಬಾಂಧವ ನೀನಲ್ಲದೆ ಹೊಣೆ 1 ದೇಹಬಿಟ್ಟು ಪರದೇಹವ ಸೇರಲು ಬಾಹರೇ ಲೋಕದ ಬಂಧುಗಳು ದೇಹ ದೇಹದಲೂ ಕ್ಷಣವಗಲದೆ ಎಂದು ಸಾಹಚರ್ಯ ಜಗಮೋಹನಗಲ್ಲದೆ 2 ಸಂತೆಗೆ ಸೇರುವ ಗಂಟುಕಳ್ಳರುಗಳ ತಂಟೆಯು ಬೇಡೆಂದು ಲೌಕಿಕಕೆ ಅಂಟದಿದ್ದರೆ ದೊಡ್ಡ ಗಂಟನು ಹೊರಿಸುವ ನಂಟನು ಭಕ್ತ ಪ್ರಸನ್ನ ತಾನಲ್ಲದೆ 3
--------------
ವಿದ್ಯಾಪ್ರಸನ್ನತೀರ್ಥರು
ರಕ್ಷಿಸೋ ಶ್ರೀಶ ಶ್ರೀ ಶ್ರೀನಿವಾಸ ಅಕ್ಷಯ ಗುಣಪೂರ್ಣ ಪಕ್ಷಿವಾಹನ ದೇವ ಅಕ್ಷರೇಶಾತ್ಮಕ ಮೋಕ್ಷ ದಾತನೆ ಹರಿ ಪ ರಕ್ಷಿಸೀಕ್ಷಣ ಲಕ್ಷ್ಮೀರಮಣ ಈಕ್ಷಿಸೀಗಲೆ ರಕ್ಷಿಸೆಮ್ಮನು ಕುಕ್ಷಿಯೊಳು ಜಗ ರಕ್ಷಿಸುವ ಹರಿ ಸೂಕ್ಷ್ಮ ಸ್ಥೂಲದೊಳಿರುವ ದೇವ ಅ.ಪ ಇಂದಿರೆರಮಣ ಗಜೇಂದ್ರವರದ ಹರಿ ಮಂದಹಾಸದಿ ಭಕ್ತವೃಂದವ ಪಾಲಿಪ ನಂದಕಂದನೆ ಬಂದು ರಕ್ಷಿಸು ಇಂದಿರಾ ಭೂದೇವಿ ರಮಣನೆ ಸುಂದರಾಂಗನೆ ಸುಮನ ಸರ ಹೃ- ನ್ಮಂದಿರದಿ ಶೋಭಿಸುವ ದೇವ 1 ನಂದನಕಂದ ಮುಕುಂದ ಹರೇ ಕೃಷ್ಣ ಕಂದರ್ಪ ಜನಕನೆ ಕರುಣಾನಿಧೆ ಹರಿ ಮದನ ಜನಕÀ ಸುಂದರಾಂಗ ಶ್ರೀಸುಮನಸರ ಪ್ರಿಯ ಬಂಧಮೋಚಕ ಭವವಿದೂರನೆ ಸಿಂಧುಶಯನ ಸರ್ವೇಶ ಶ್ರೀಹರಿ 2 ಕನಕ ಗರ್ಭನ ಪಿತ ಕರುಣಿಸೊ ನಿನ್ನಧ್ಯಾನ ಕನಸುಮನಸಲಿ ನಿನ್ನ ಸ್ಮರಣೆ ಎನಗಿತ್ತು ಕನಲಿಕೆಯ ಕಳೆದೆಮ್ಮ ಕ್ಷಣ ಬೆಂ- ಬಿಡದೆ ಕಾಪಾಡೆನ್ನುತ ಪ್ರಾರ್ಥಿಪೆ ಕಮಲನಾಭವಿಠ್ಠಲನೆ ಕರುಣದಿಕಮಲ ಮುಖಿಯೊಡಗೂಡಿ ಹರುಷದಿ 3
--------------
ನಿಡಗುರುಕಿ ಜೀವೂಬಾಯಿ
ರಥವೇರಿ ಬರುತಿಹ ಗುರುರಾಯ ನಾ ನೋಡಮ್ಮಯ್ಯ ಪ ಅತಿಸದ್ಭಕುತಿಲಿ ಸ್ತುತಿಸುವರಿಗೆ ಸತ್ಪಥವನೆ ತೋರುವ ಕ್ಷಿತಿಪತಿದಾಸರೆ ಅ.ಪ ತಿದ್ದಿಹಚ್ಚಿದ ನಾಮ ಮುದ್ರೆಗಳಿಂದಲೋಪ್ಪುತಿಹರೇ ನೋಡಮ್ಮಯ್ಯ | ಕ್ಷುದ್ರರ ಮುಖಕೆ ಬೀಗ ಮುದ್ರೆಯ ನೊತ್ತುತ ಸದ್ವೈಷ್ಣವರ ನುದ್ಧರಿಸಿದ ಕರುಣೀ 1 ವರಶ್ರುತಿ ಸಮ್ಮತರಥ ನಿರ್ಮಿತವಾಗಿಹುದೇ ನೋಡಮ್ಮಯ್ಯ || ಸ್ಮರಪುರಹರ ಸಾರಧಿಯಾಗಿಹರೆಂದರಿತವರಿಗೆ ಶುಭಗರೆವ ದಯಾನಿಧೇ 2 ಶಾಮಸುಂದರನ ನಾಮಸುಧಾರಸವ ನೋಡಮ್ಮಯ್ಯ ಶ್ರೀಮಾನ್ ಮಾನವಿ ಕ್ಷೇತ್ರವೆ ತವನಿಜ ಧಾಮವೆಂದೆನಿಸಿ ಸುಸ್ತಂಭದೊಳಿಹರೇ 3
--------------
ಶಾಮಸುಂದರ ವಿಠಲ
ರಮಾ ಮನೋಹರ ಶ್ಯಾಮಸುಂದರ ವಿಮಾನ ಶೋಭಿತ ಹರೇ ಹರೇ ಪ ಕುಮಾರಪಿತನುತ ಶವi ದಮಾಯುತ ಸಮಾನ ವಿರಹಿತ ನಮೋ ನಮೋಅ.ಪ ಸುರೇಶ ಪಶುಪತಿ, ನಾರಾಯಣಾ ಧರೇಶ ರಘುಪತಿ ಲಾವಣ್ಯಮೂರುತಿ ಹರೀಶ ಮಾರುತಿ ಪಾರಾಯಣ 1 ಗೋಪಾಂಗನಾ ಪ್ರಿಯ ಗೋಪಾಲ ಬಾಲ ಚಾಪಾಂಬುಕರ ಭಯಹಾರ ಪ್ರಮೇಯ ಶ್ರೀಪಾದ ಚಿನ್ಮಯ ಸೌಂದರ್ಯ ಶೀಲ ಭೂಪಾಲ ಮಾಂಗಿರಿ ಶೃಂಗಾರ ನಿಲಯ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಮೆಯರಸ ರಕ್ಷಿಸೋ ನಮಿತಜನರ ಕಲ್ಪದ್ರುಮ ಸುಮನೋಹರ ಪ ಅಮಿತ ಸುಗುಣ ಪೂರ್ಣ-ಶಮಲವರ್ಜಿತ ಹೃ- ತ್ಕಮಲ ದ್ಯುಮಣಿ ನಿಸ್ಸೀಮಮಹಿಮ ಸಂಪೂರ್ಣಕಾಮ ಹರಿ1 ಅಘ ಸಂ- ಕಷ್ಟಹರಿಸಿ ಸಂತುಷ್ಟಿಯನೀವ ನಿರ್ದುಷ್ಟಫಲಪ್ರದ 2 ಉರಗಾದ್ರಿವಾಸವಿಠಲ ದೇವ ಹರೇ ಕರೆ ನಿನ್ನ ಬಳಿ ಸಿರಿ ವೆಂಕಟೇಶನೆ ದೊರೆ-ಪೊರೆ ನಿನ್ನ್ಹೊರತು ನಾನರಿಯೆ 3
--------------
ಉರಗಾದ್ರಿವಾಸವಿಠಲದಾಸರು
ರಾಮ ರಾಮ ರಾಮ ಹರೇ ರಘೂ ಪ ರಾಮ ಜಾನಕಿ ಪ್ರೇಮ ಕೃಪಾಂಬುಧಿ ಸ್ವಾಮಿ ಪರಂಧಾಮ ಸಾರುಚಿವರದಾ ಅ.ಪ ಪತಿತಪಾವನದೇವಾ ಸದ್ಭಕ್ತರ ಸತತ ಬಿಡದೆ ಕಾಯುವಾ ಮಹಾನುಭಾವ- ನತಿಶಯದಲಿ ಮನಹಿತದಲಿ ಅನುದಿನ ಸ್ತುತಿಯನು ಮಾಡುವರಿಗೆ ಗತಿ ಕಾಣಿಸುವಂಥ 1 ಅಂಡಜವಾಹನನೆ ಅನೇಕ ಭೂ ಮಂಡಲ ನಾಳುವನೆ ಮಣಿಯ ಮುಕುಟಧರನೆ ಉದ್ದಂಡ ರಕ್ಕಸರಳಿದ ಚಂಡಪರಾಕ್ರಮಿ2 ಪನ್ನಗಾದ್ರಿಯವಾಸಾ ಭಜಕರ ಪೋಷಾ ಶ್ರೀ ಹೆನ್ನವಿಠ್ಠಲ ವೇಶಾ ಪರಮೋಲ್ಹಾಸಾ ಚಿನ್ಮಯ ಮೂರುತಿ ಶ್ರೀ ಗೌರೀವರಪ್ರಿಯ ಮದನ ಜನಕ ಹರೆ 3
--------------
ಹೆನ್ನೆರಂಗದಾಸರು
ವಾಸುದೇವ | ಸಂಕಟ ಹರಣ ಶಂಖ ಚಕ್ರಧಾರಿ ಹರಿ | ವೆಂಕಟಾಚಲಾಧೀಶಾ ಪ ಪಾಹಿ ಪರಮ ಹಂಸವಿನುತ | ಪಾಹಿ ಪರಮ ವೇದಚರಿತ ಪಾಹಿ ಕಮಲಜಾತ ನಮಿತ | ಪಾಹಿಮಾಂ ಹರೇ ಪಾಹಿ ಪರಮ ಕರುಣದಿಂ ಪಾಹಿ ಮಾಂಗಿರಿವಾಸ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಾಸುದೇವ ಸಾಮಾನ್ಯ ನೀನಲ್ಲವೊ ಪ ನವನೀತ ಇಷ್ಟು ತಿನ್ನುವಿ ಭೂತಗಳಿರುವುವೇನೊ ಉದರದೊಳು 1 ಕುದಿಯುವ ಪಾಲನು ಮುದದಿಂದ ಕುಡಿಯುವೆ ಉದಕದ ರಾಶಿ ಜಿಹ್ವೆಯೊಳಿಹುದೇನೊ 2 ರಾತ್ರಿ ವೇಳೆಯಲಿ ನೀ ಸುತ್ತುವಿ ಮನೆ ಮನೆ ನೇತ್ರದೊಳ್ ಸೂರ್ಯಚಂದ್ರರು ಇಹರೇನೊ 3 ಶಿಕ್ಷೆಮಾಡಲು ಬೆನ್ನು ಪಾಶ್ರ್ವದಲ್ಲಿಹ ನಮ್ಮ ಈಕ್ಷಿಸುವುದಕೆ ವಿಶ್ವತ ಚಕ್ಷುವೇನೊ 4 ನಿನ್ನ ಚರಿತೆ ಎಮಗೆ ಚೆನ್ನಾಗಿ ತಿಳಿಸಿ ಪ್ರ ಸನ್ನನಾಗದಿರೆ ಮನ್ನಿಸೆವೋ ನಿನ್ನ 5
--------------
ವಿದ್ಯಾಪ್ರಸನ್ನತೀರ್ಥರು
ವೇದವಿದಿತ ಮಾರಮಣ ಹರೇ ಪ ಸನ್ನುತ ಚರಣ ಶ್ರೀಧರ ಗಂಗಾಪಾದ ನಾರಯಣ ಅ.ಪ ಸಾರಯೋಗಿ ಕವಿತಾರಸ ತೋಷಿತ ಕೈರವ ಸುಮಭವ ವಾಣಿ ವಿಭೂಷಿತ ಭವ ವಾಗ್ರಂಜಿತ ನಾರಾಯಣ ತೇ ನಮೋ ನಮೋ 1 ಭೋಗ ಮಂಟಪೋಲ್ಲಾಸ ಮುಕುಂದ ತ್ಯಾಗ ಮಂಟಪೋಲ್ಲಾಸ ಗೋವಿಂದ ನಾಗಶಯನ ಶರಣಾಗತ ಬೃಂದ ಯೋಗ ಮಂಟಪ ಮಾಂಗಿರಿಪತಿ ನಮೋ ನಮೋ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವೇದವೇದ್ಯರೂಪ ವಿಶ್ವವ್ಯಾಪಕನೇ (ರಾಮ) ನಾದರೂಪಪ್ರೀತ ವಿಶ್ವರಕ್ಷಕನೇ ರಾಮ ಪ ಆದಿಮಧ್ಯರಹಿತದೇವ ನಾದರಂಜಿತನೇ ರಾಮ | ಮಾಧವಾ ಮಧುಸೂದನ ಹರೇ ಮಧುರಭಾಷಿತನೇ ರಾಮ ಅ.ಪ ಕಮಲಸದನ ಕಮಲಶೋಭಿತ ಕಮಲಜಾಪ್ರಿಯನೇ ಕಮಲಸಂಭವಾದಿ ನಮಿತ ಕಮಲಾರಾಧಿಕನೇರಾಮ 1 ಸನ್ನುತ ಭೃಂಗಕುಂತಳ ಮಾಂಗಿರೀಶ ರಂಗನಾಥನೇ ರಾಮ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವೇದವ್ಯಾಸಾ ಶ್ರೀ ಹರೇ | ನಿನ್ನ ಶ್ರೀಪಾದಉದಕೇಜ - ತೋರಿಸೋ ಪ ಹರಣ ಪ್ರಬೋಧ ಮುದ್ರಾಂಕನ ಅ.ಪ. ಕಾಲ | ಸಕಲ ಸದ್ಗುಣಧಾಮ - ಶ್ರೀ ಭೂಮಿ ದುರ್ಗೆ ಲೋಲ ||ಧೃತ - ಕಾಮ ಜನಕ ನಿಸ್ಸೀಮ ಮಹಿಮ - ತ್ರಿಧಾಮದಲಿ ಭಕ್ತಸ್ತೋಮ ವಿರಿಸಿದೆ - ಶ್ರೀರಾಮಾ - ಸುಧಾಮ - ರಿಪು ಭೀಮಾ | ಸುರಸಾರ್ವಭೌಮ 1 ವಿಧಿ ಪುತ್ರಾನ್ವಿತಗೋತ್ರಾರಿ ಪ್ರಿಯ ಸತ್ಯಾವಲ್ಲಭಚಿತ್ರಾ - ಸುವಿಚಿತ್ರಾ - ಸಮಗಾತ್ರಾ | ತೋರಿಸುತವಗಾತ್ರ 2 ಚಿನುಮಯಗುಣ ವಪುಷಾ | ಅನಂತ ಶೀರ್ಷಾಅನಿಲ ಹೃದಯಾಂತರ್ಗತ ||ಧೃತ - ಮನಸಿಜ ಪಿತ ಗುರುಗೋವಿಂದ ವಿಠಲನೆತನುಮನಧನವೆಲ್ಲ ನಿನದಾಗಿರುವುದೊಮುನಿವಂದ್ಯಾ - ಮುಕುಂದ - ಗೋವಿಂದ | ಕೊಡು ಎನಗಾನಂದ3
--------------
ಗುರುಗೋವಿಂದವಿಠಲರು
ಶರಣಾಗು ಸಂಪೂರ್ಣ ಶರಣಾಗು ಜಿತಾರ್ಣ ಕರ ನೀಲವರ್ಣ ಪ ಅತಸೀ ಕುಸುಮಗಾತ್ರ ಅರವಿಂದ ನೇತ್ರ ಚಾರು ಚರಿತ್ರ ಧೃತ ಗೋವರ್ಧನ ಗೋತ್ರ ದಿವಿಜೇಂದ್ರ ಸ್ತೋತ್ರ ಶತಯಾಗಸುತಮಿತ್ರ ಸೌಪರ್ಣಯಾತ್ರ 1 ಸ್ಮರಕೋಟಿ ಲಾವಣ್ಯ ಪುರಜಿದ್ವರೇಣ್ಯ ಪುರುಹೂತಾದಿ ಶರಣ್ಯ ಪುರುಷಾಗ್ರಗಣ್ಯ ದುರಿತಾಪಹರೇಣ್ಯ ದಾನ ಸಾದ್ಗುಣ್ಯ ಪರಿಣತ ಲಾವಣ್ಯ ಪರಮಕಾರುಣ್ಯ 2 ಕಮಲರಮ್ಯವಿಲಾಸ ಕೌಸ್ತುಭೋದ್ಭಾಸ ಕಮನೀಯ ಸುವಿಭೂಪ ಕರಪೀತವಾಸ ಅಮಿತೇಂದು ರುಚಿಹಾಸ ಆದಿಶೇಷೋಲ್ಲಾಸ ಸುಮನಸಪುರವಾಸ ಪಾಹಿ ಲಕ್ಷ್ಮೀಶಾ 3
--------------
ಕವಿ ಲಕ್ಷ್ಮೀಶ