ಒಟ್ಟು 65 ಕಡೆಗಳಲ್ಲಿ , 38 ದಾಸರು , 62 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಕಲವೆಲ್ಲವು ಹರಿಸೇವೆಯೆನ್ನಿರುಕುಮಿಣಿಯ ರಮನ ವಿಠಲನಲ್ಲದಿಲ್ಲವೆನ್ನಿ ಪ.ನುಡಿಗಳೆಲ್ಲವು ನಾರಾಯಣನ ಕೀರ್ತನೆಯೆನ್ನಿನಡೆವುದೆಲ್ಲವು ಹರಿಯಾತ್ರೆಯೆನ್ನಿ ||ಕೊಡುವುದೆಲ್ಲವು ಕಾಮಜನಕಗರ್ಪಿತವೆನ್ನಿಎಡೆಯ ಅನ್ನವು ಶ್ರೀ ಹರಿಯ ಪ್ರಸಾದವೆನ್ನಿ 1ಹೊಸವಸ್ತ್ರ ಉಡುವಲ್ಲಿ ಹರಿಯ ಬೆಳ್ಳುಡೆಯೆನ್ನಿಕುಸುಮ ಪರಿಮಳವು ಕಂಜನಾಭಗೆನ್ನಿ ||ಎಸೆವಾಭರಣವು ಯಶೋಧೆನಂದನಗೆನ್ನಿಶಶಿಮುಖಿಯರ ಕೂಟ ಸೊಬಗು ಗೋವಳಗೆನ್ನಿ 2ಆಟಪಾಟಗಳೆಲ್ಲ ಅಂತರ್ಯಾಮಿಗೆಯೆನ್ನಿನೋಟ ಬೇಟಗಳೆಲ್ಲ ನಾಟಕಧಾರಿಗೆನ್ನಿ ||ನೀಟಾದ ವಸ್ತುಗಳೆಲ್ಲ ಕೈಟಭ ಮರ್ದನಗೆನ್ನಿಕೋಟಲೆ ಸಂಸಾರ ಕಪಟನಾಟಕಗೆನ್ನಿ 3ನಿದ್ರೆ ಜಾಗರವು ಸಮುದ್ರಶಯನಗೆನ್ನಿಭದ್ರಗಜನಿಧಿ ವರದಗೆನ್ನಿರೌದ್ರದಾರಿದ್ರವು ರಾಘವನ ಮಾಯೆಯೆನ್ನಿ ಶ್ರೀಮುದ್ರೆ ಧರಿಸಿದವ ಹರಿದಾಸನೆನ್ನಿ 4ಅಣುರೇಣು ತೃಣಕಾಷ್ಠ ಪರಿಪೂರ್ಣನಹುದೆನ್ನಿಎಣಿಸಬಾರದನಂತ ಮಹಿಮನೆನ್ನಿಸೆಣಸುವ ರಕ್ಕಸರ ಶಿರವ ಚಂಡಾಡುವಪ್ರಣವಗೋಚರ ಪುರಂದರವಿಠಲರಾಯನೆನ್ನಿ 5
--------------
ಪುರಂದರದಾಸರು
ಸಂಸಾರ ಕನಸಣ್ಣ ಸಕಲರಿಗೆ ಹೇಳುವೆನಣ್ಣಸಂಸಾರ ಸತ್ಯವೆಂಬುವನ ಬಾಯಲ್ಲಿ ಹೊರೆ ಮಣ್ಣಣ್ಣಪಹೆಂಡತಿಯು ಕನಸಣ್ಣ ಗಂಡನೂ ಕನಸಣ್ಣಗಂಡು ಮಗ ಸೊಸೆ ಸಹೋದರರು ಬಂಧುಗಳು ಕನಸಣ್ಣ1ದನಕರು ಕನಸಣ್ಣ ದವಲತ್ತು ಕನಸಣ್ಣಮನೆ ಮದುವೆ ಮಂಟಪ ಮಹಾಲಕ್ಷ್ಮೀ ಕನಸಣ್ಣ2ವೈಯ್ಯಾರ ಕನಸಣ್ಣ ವಸ್ತುಗಳು ಕನಸಣ್ಣಮೈಯಲ್ಲಿಹ ಬಲವದು ಮತ್ತೆ ಮುರಿ ಮೀಸೆ ಕನಸಣ್ಣ3ನಾನಿಹುದು ಕನಸಣ್ಣ ನೀನಿಹುದು ಕನಸಣ್ಣಶಾಣೆತನ ಮಾನಾಪಮಾನಗಳು ಸೈನ್ಯ ಕನಸಣ್ಣ4ಸಂಸಾರ ಮಾಡಿದರಣ್ಣ ಸಾಕ್ಷಿಯಾಗಿರಬೇಕಣ್ಣಹಂಸ ಚಿದಾನಂದ ಸದ್ಗುರು ಹೊಂದಲು ಸರಿವುದು ಜನನವಣ್ಣ 5
--------------
ಚಿದಾನಂದ ಅವಧೂತರು