ದಾಸನಾಗಬೇಕು ಶ್ರೀಕಾಂತನ ದಾಸನಾಗಬೇಕು ಪ
ವಾಸುಕಿ ಶಯನನ
ಸಾಸಿರ ನಾಮದಿ ಮೆರೆವ ಕೇಶವನ ಅ.ಪ.
ಶಂಖ ಚಕ್ರಗಳನ್ನು ಕರದೊಳು ಧರಿಸಿದ
ಪಂಕಜ ರಮಣ ಶ್ರೀ ಗೋವಿಂದನ
ಪಂಕಜ ಲೋಚನ ಪರಮ ಪಾವನನ
ಪಂಕಜೋದ್ಭವ ಪಿತನಾದ ಶ್ರೀಧರನ 1
ನವನೀತ ಚೋರನ ವಸುದೇವ ತನಯನ
ಭವರೋಗ ವೈದ್ಯನ ಶರಣ ರಕ್ಷಕನ
ಪವನಜನೊಡೆಯನ ಜಾನ್ಹಕಿ ಪ್ರಿಯನ 2
ದನುಜರ ತರಿಯುವ ಪ್ರಣವ ಸ್ವರೂಪನ
ಅನುದಿನ ಭಕ್ತರ ಪೊರೆವ ಮಾಧವನ
ಚಿನುಮಯ ರೂಪನ ಕನಕ ಸೇವಿತನ
ಸನಕಾದಿ ವಂದಿತ ಚನ್ನಕೇಶವನ 3