ಮನ್ನಿಸು ಅಪರಾಧ ಮನ್ಮಥ ಜನಕನೆ ಪ
ಸನ್ನುತ ಗುಣಸಂಪನ್ನ ಮಹಿಮ ತಾ
ರುಣ್ಯ ಪಯೋನಿಧಿ ಬಿನ್ನಪ ಲಾಲಿಸಿ ಅ.ಪ
ಅಮರ ಶಿರೋಮಣಿ | ಆಶ್ರಿತ ರಕ್ಷಾಮಣಿ
ರಮಣಿ ರುಕ್ಮಿಣಿ ಮುಖಕಮಲ ಗಗನಮಣಿ
ನಮಿಪೆ ಭಕ್ತರ ಚಿಂತಾಮಣಿ ತವ ಚರಣಕೆ
ಮಣಿಯದೆ ಮೂಢ ಶಿಖಾಮಣಿಯಾದೆನು 1
ಕಾಮಜನಕ ಪರಿಪೂರ್ಣ ಕಾಮ | ಭಕ್ತ
ಕಾಮಧೇನು ಕೋಟಿಕಾಮ ಲಾವಣ್ಯನೆ
ಶ್ರೀ ಮನೋಹರ ಕೌಸ್ತುಭಮಣಿಹಾರ ನಿ
ಮಣಿ ಅಧಿಕವೆ 2
ಶರಣ ಶರಣ್ಯನೆ ಶಾಶ್ವತ ಸುಖದನೆ
ಪರಮ ಪುರುಷನೆ ಪಾವನಚರಿತ
ಕರಿಗಿರೀಶನೆ ಕರುಣಾಭರಣನೆ
ಕರಿವರದನೆ ಕರುಣವ ತೋರಿಸಿ 3