ಒಟ್ಟು 332 ಕಡೆಗಳಲ್ಲಿ , 43 ದಾಸರು , 187 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೋರು ತೋರೆಲೊ ರಂಗಯ್ಯ ನಿನ್ನ ಪಾದ ತೋರು ತೋರೆಲೊ ಕೃಷ್ಣಯ್ಯ ಪ. ಇಂದಿರಾದೇವಿ ಆನಂದದಿ ಸೇವಿಪ ಮಂದರಧರ ನಿನ್ನ ಸುಂದರ ಚರಣವ 1 ಮತಿಹೀನಹಲ್ಯೆಯ ಪತಿವ್ರತೆಯೆನಿಸಿದ ಪತಿತ ಪಾವನ ಶ್ರೀರಾಮ ನಿನ್ನ ಪಾದ2 ಎಳೆದಳಿರನು ಪೋಲ್ವ ಚೆಲುವ ಕೃಷ್ಣನ ಪಾದ ಪಾದ 3 ಮಗುವೆಂದು ಗೋಪಿಗೆ ಜಗದ ಆಟಗಳಲ್ಲಿ ಪಾದ 4 ಅಂದಿಗೆ ಪಾಡಗದಿಂದಲೊಪ್ಪುವ ದಿವ್ಯ ಪಾದ 5
--------------
ಸರಸ್ವತಿ ಬಾಯಿ
ದಾರಿ ನೋಡುವನು ರಂಗಯ್ಯನಿಮ್ಮ ದಾರಿ ನೋಡುವನು ಮುರಾರಿ ಮುದ್ದು ವೈಯ್ಯಾರಿ ನಿನ್ನಯಮಾರಿ ತೋರೆಂದು ದಾರಿ ನೋಡುವನು ಪ. ಏಳು ಸಾವಿರ ಮನೆಯು ತೆರವೆಂದು ಹೇಳಿದನಿಮಗಾಗಿ ಜಾಳಿಗೆ ಮುತ್ತು ಜಡಿಸೆಂದ ಜಾಳಿಗೆ ಮುತ್ತು ರಂಗಯ್ಯ ಜಡಿಸೆಂದ ಪಾಂಡವರ ಆಳು ಮಂದಿಗಳ ತಂದು ಇಳಿಸೆಂದ 1 ಕುಂದಣ ಕುಂದಣ ರತ್ನ ರಚಿಸೆಂದ ರಂಗಯ್ಯಪಾಂಡವರ ಬಂಧುಗಳ ತಂದು ಇಳಿಸೆಂದ 2 ನೀಲಮೇಘಶ್ಯಾಮ ಮುತ್ತಿನ ಮಹಲು ರಚಿಸೆಂದಮ್ಯಾಲೆ ಮಾಣಿಕವ ರಚಿಸೆಂದ ಮ್ಯಾಲೆ ಮಾಣಿಕವ ರಚಿಸೆಂದ ರಂಗಯ್ಯ ಪಾಂಡವರ ಬಾಲಿಯರ ತಂದು ಇಳಿಸೆಂದ 3 ಸದನ ವಿಸ್ತರಿಸೆಂದಹದಿನದಿ ರತ್ನ ರಚಸೆಂದಹದಿನದಿ ರತ್ನ ರಚಸೆಂದ ರಂಗಯ್ಯಪಾಂಡವರ ಮುದದಿಂದ ತಂದು ಇಳಿಸೆಂದ 4 ಚದುರ ರಾಮೇಶನು ಮಡದಿಯರೆದುರಿಗೆಮುದದಿ ದ್ರೌಪತಿಯ ಕರೆಯೆಂದಮುದದಿ ದ್ರೌಪತಿಯ ರಂಗಯ್ಯ ಕರೆಯೆಂದ ವಜ್ರದ ಸದನದಿ ತಂದು ಇಳಿಸೆಂದ 5
--------------
ಗಲಗಲಿಅವ್ವನವರು
ದಾಸ ದಾಸರ ಮನೆಯ ದಾಸಿಯರ ಮಗ ನಾನುಸಾಸಿರ ನಾಮದೊಡೆಯ ರಂಗಯ್ಯನ ಮನೆಯ ಪ ಶಂಕು ದಾಸರ ಮನೆಯ ಮಂಕುದಾಸನು ನಾನುಮಂಕುದಾಸನು ನಾನು ಮರುಳುದಾಸಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ ಬಿಂಕದಿ ಬಾಗಿಲ ಕಾಯ್ವ ಬಡ ದಾಸ ನಾನಯ್ಯ 1 ಕಾಳಿದಾಸರ ಮನೆಯ ಕೀಳುದಾಸನು ನಾನುಆಳುದಾಸನು ನಾನು ಮೂಳದಾಸಫಾಲಾಕ್ಷ ಸಖ ನಿನ್ನ ಭಜಿಪ ಭಕ್ತರ ಮನೆಯಆಳಿನಾಳಿನ ದಾಸ ಅಡಿದಾಸ ನಾನಯ್ಯ 2 ಹಲವು ದಾಸರ ಮನೆಯ ಹೊಲೆಯ ದಾಸನು ನಾನುಕುಲವಿಲ್ಲದ ದಾಸ ಕುರುಬ ದಾಸಛಲದಿ ನಿನ್ನ ಭಜಿಪರ ಮನೆಯ ಮಾದಿಗ ದಾಸಸಲೆ ಮುಕ್ತಿ ಪಾಲಿಸೆನ್ನೊಡೆಯ ಕೇಶವನೆ 3
--------------
ಕನಕದಾಸ
ದಾಸನಾಗುವೆ ಭಜಿಪ ಭಕ್ತಿಯನು ನೀಡೆನ್ನ ನಾನೇನೂ ಮಾಡಲಾರೆ ರಂಗಯ್ಯ ನೀನೆನ್ನ ಸಲಹ ಬೇಕು ಪ ಗಾನಲೋಲನ ನಾಮ ಭಜನೆಯೊಂದುಳಿದು ನಾ ನನ್ಯರೀತಿಯ ಕಾಣೆ ಸಲಹಯ್ಯ ಹರಿಯೇ ಅ.ಪ. ತರಳಾ ಧ್ರವನಂತೆ ತಪನ ನಾನರಿಯನು ಸರಳೆ ದ್ರೌಪದಿಯಂತೆ ಸ್ತೋತ್ರವನರಿಯೇ ಹರಿದಾಸರಂತೆ ದಾಸತ್ವ ನಾನರಿಯೆನು ಪರಮ ಸೇವಕರಂತೆ ಸೇವೆಯ ನರಿಯೇ 1 ಅಸುರನಂದನನಂತೆ ಕೀರ್ತನೆಯರಿಯೆನು ವಸುಧೀಶನಂತೆ ನಾ ವ್ರತಗಳನರಿಯೇ ವಸುಮತಿಯಂತೆ ನಾ ಯಾಚನೆಯರಿಯೆನು ಋಷಿ ವೃಂದದಂತೆ ನಾ ಭಕ್ತಿಯನರಿಯೇ 2 ಸಿರಿಯಂತೆ ನಿನ್ನನು ಸೇವಿಸಲರಿಯನು ಕರಿಯಂತೆ ಸ್ಮರಣೆಯ ಮೊದಲು ನಾನರಿಯೆ ಸುರಮುನಿಯಂತೆ ನಾ ಗಾಯನವರಿಯೆನು ಸಿರಿ ಚನ್ನಕೇಶವ ಭಜನೆಯನರಿವೇ 3
--------------
ಕರ್ಕಿ ಕೇಶವದಾಸ
ದೂರ ನೋಡದಿರೆಲೊ ರಂಗಯ್ಯಾ ಪ. ಭವ ಮಡುವಿನೊಳಗಿರುವೆನೋ ಪಿಡಿಯೆನ್ನ ಕೈಯ ತಡಮಾಡ ಬ್ಯಾಡಯ್ಯ ಅ.ಪ. ಹಿಂದೇಸು ಜನ್ಮಂಗಳು ಬಂದು ಪೋದಾವಯ್ಯ ಮುಂದಿನಾಗತಿಯು ತೋರದಯ್ಯಾ ತಂದೆ ತಾಯಿ ಸರ್ವ ಬಂಧು ಬಾಂದವಾ ಕಂದರ್ಪ ಪಿತನೆ1 ಆರು ಕಾಯುವರಿಲ್ಲಾ ಮುರಾರಿ ನಿನಗೆ ಸಾರಿದೆನಲ್ಲಾ ಸೇರಿಸೋ ಸಾಧು ಜನರ ಸಹವಾಸಾ ಹರಿ ನಿನ್ನಲ್ಲಿ ಮನಸು ನಿಲ್ಲಿಸು ಶ್ರೀಶಾ ಶ್ರೀನಿವಾಸಾ 2 ಯೆಷ್ಟು ಹೇಳಲಿ ಯನ್ನ ಕಷ್ಟ ಕೇಳುವರಿಲ್ಲ ಅರಿಷ್ಟ ಸಂಸಾರದೊಳೂ ಕೆಟ್ಟು ಪೋಗುವೆನು ದೃಷ್ಟಿಯಿಂದಲಿ ನೋಡೆನ್ನ ಕಾಳಿಮರ್ಧನಕೃಷ್ಣವಾ 3
--------------
ಕಳಸದ ಸುಂದರಮ್ಮ
ದೂರ ನೋಡುವರೆ ರಂಗಯ್ಯ ಎನ್ನ ಪ ದೂರ ನೋಡುವರೇನೋ ಸಂಸಾರ ಶರಧಿಯೊಳಗೆ ಮುಳುಗಿ ದಾರಿಗಾಣದೆ ನೀನೆ ಗತಿ ಮು-ರಾರಿಯೆಂದು ಸಾರಿದ ಮೇಲೆ ಅ.ಪ ಆಸೆ ಬಿಡದೆಲೊ ಕಾಸುವೀಸಕೆ-ಕ್ಲೇಶ ಘನ್ನವೆಲೊ ಈಶ ಯಾರಿಗೆ ಪೇಳಲೊಶವೆಲೊ-ಶ್ರೀಶ ಎನ್ನ ಮನಸಿನಲ್ಲಿ ಬಹಳ ಘಾಸಿಪಟ್ಟೆನೊ-ದಾಶರಥಿ 1 ಭಕುತಿಯಿಲ್ಲವೊ ಅದರ ಹೊರತು-ಮುಕುತಿಯಿಲ್ಲವೊ ಯುಕುತಿಯಿಂದಲಿ ವಲಿವನಲ್ಲವೊ- ಮುಕುತಿದಾಯಕ ನಿನ್ನ ಕಾಣದೆ ಭಕುತಿಗೋಸುಗ ಪರರ ತುತಿಸಿ, ಕಕುಲಾತಿಯಿಂದಲೆನ್ನ- ಶಕುತಿಯೆಲ್ಲ ನಷ್ಟವಾಯಿತು 2 ಪೊರೆಯದಿರುವರೆ ಕರುಣಾಳುಯೆಂಬ-ಬಿರುದ ಬಿಡುವರೆ ಹರಿಯೆ ಯೆನ್ನ ಮರೆತು ಬಿಡುವರೆ- ಕರಿಯು ಹರಿಯೇ ಎಂದು ಕರೆಯೆ ಸಿರಿಗೆ ಪೇಳದೆ ಭರದಿ ಬಂದು, ಪೊರೆದೆಯೆಂಬ ವಾರ್ತೆಕೇಳಿ -ಮರೆಯ ಹೊಕ್ಕೆನೊ ವಿಜಯವಿಠ್ಠಲ 3
--------------
ವಿಜಯದಾಸ
ದೂರ ಮಾಡುವರೇ ರಂಗಯ್ಯ ರಂಗಾ ಪ ದೂರ ಮಾಡುವರೇನೊ ಶಿಖರಪುರದ ಧೊರಿಯೆಶ್ರೀ ಶ್ರೀನಿವಾಸ ದಯಾಶರಧಿ ಅ.ಪ. ಕ್ಲೇಶ ಪಡುತ ಬಾಯಿ ಬಿಡಲು ಕಂಡು ದುಷ್ಟ ಜನರು ನೋಡಿ ಕಷ್ಟಬಿಡಿಸುತಿರಲು ಕಂಡು 1 ಕರ್ಮ ಬಂದು ಒದಗಿತೋ ದೇವ ಈಸು ಬವಣೆಬಟ್ಟು ಬಿಡುತಿರಲು ಕಂಡು 2 ದಾಸಜನರ ದೋಷವೆಣಿಸಬಹುದೆ ರಂಗ ಈಶನೆನಿಸಿಕೊಂಡುಮನ್ನಿಸಿ ಕೇಳೋ ಎನ್ನ ಬಿನ್ನಪ ಫಣಿಶಯನ ತಂದೆವರದಗೋಪಾಲವಿಠಲ 5
--------------
ತಂದೆವರದಗೋಪಾಲವಿಠಲರು
ದೂರದಿ ನಿಲಿಸಯ್ಯ ರಂಗಯ್ಯ ದೂರದಿ ನಿಲಿಸಯ್ಯ ನಿನ್ನ ನೀರಜಪಾದವ ಈಕ್ಷಿಸುವಷ್ಟೇ ಪ ಸಾರಸಭವ ವಾಲ್ಮೀಕಿ ಪುರಂದರ ನಾರದರೆಲ್ಲ ನಿನ್ನ ಬಳಿಯೊಳೆ ಇರಲೀ ಅ.ಪ ಹನುಮ ಖಗೇಶ್ವರ ದನುಜ ವೈರಿಗಳೆಲ್ಲ ನಿತ್ಯ ಸೂರಿಗಳು ಘನ ವೇದಾಂತ ಸಂಗೀತ ಕೋವಿದರು ವನಜನಾಭನೆ ನಿನ್ನ ಸೇವಿಸುತಿರಲಿ 1 ಮಣಿದು ಮಣಿದು ನಿನ್ನ ಗುಣಗಳ ಬಣ್ಣಿಸಿ ಕುಣಿ ಕುಣಿದೆರಗುವ ಭಕ್ತರ ಬಳಿ ನಾ ತೃಣಕೆ ಸಮ ನಾನಿಣುಕಿ ಬಾಗಿ ಮಣಿವಂತೆ ಮಾಡೋ ಮಾಂಗಿರಿಯ ರಂಗಯ್ಯ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದೇವತಾ ಸ್ತುತಿ ರಾಧೆ ತಿಲಕದ ಒಲುಮೆ ಮೇಲು ರಾಧೇ ನಿನ್ನ ತಿಲಕದೊಲುಮೆ ಪ ತಿಲಕದೊಲುಮೆ ಹರಿ ಬಂಧ ಒಲುಮೆ ಘಿÀಲುಘಿÀಲುಕುಲು ಗೆಜ್ಜೆ ಕಾಲು ರಾಧೇ ನಿನ್ನ ಅ.ಪ. ಕುಂಕುಮ ಕರದು ಹಚ್ಚಿ ವಂಕಿ ಬಾಜು ಬಂದಿನಿಟ್ಟು ಪಂಕಜಾಕ್ಷನೆತ್ತಿಕೊಂಬೊ ತೋಳು ರಾಧೆ ನಿನ್ನ 1 ಉಟ್ಟುದು ಪೈಠಣಿ ಸೀರೆ ತೊಟ್ಟುದು ಬುಟ್ಟುದ ಕುಪ್ಪಸ ಮುಟ್ಟಿದರೆ ಮಾಸುವದು ಶಾಲು ರಾಧೇ ನಿನ್ನ 2 ಕೈಗೆ ಬಂಗಾರದ ಬಳೆ ಕಿವಿಗೆ ಪರಿಜನ ವಾಲೆ ರಂಗಯ್ಯ ಕರೆದರೆ ನೀ ಹೋ ಎಂಬೊ ರಾಧೆ ನಿನ್ನ 3 ಮಂಗಳಸೂತ್ರವು ಬೆಳದಿಂಗಳು ಪೊಳೆವಂತೆ ತೆಂಗು ಬ್ಯಾಳೆ ಮಣಿಯೆಣ್ಣೆ ನೂಲು ರಾಧೆ ನಿನ್ನ 4 ಪಿಲ್ಯ ಕಾಲುಂಗುರ ಕಿರು ಬಲ್ಯ ಆಣಿಮೆಂಟು ಧೈರ್ಯದಲಿ ಮೆರೆವ ಗಿಳಿಗೇಲು ರಾಧೆ ನಿನ್ನ 5 ಚೌರಿ ರಾಗಟಿ ಗೊಂಡೆ ಹೆರಳು ಬಂಗಾರವೂ ಚಂದಿರ ಪ್ರಫುಲ್ಲ ಮುತ್ತಿನ ಬಟ್ಟು ರಾಧೆ ನಿನ್ನ6 ದಿಟ್ಟ ಹಗಲೊಳು ಶ್ರೀದವಿಠಲನ್ನ ಯೇರಿಕೊಂಡು ಬಟ್ಟ ಬಯಲೊಳಗೆ ಕೇಳೇ ರಾಧೆ ನಿನ್ನ 7
--------------
ಶ್ರೀದವಿಠಲರು
ಧ್ಯಾನ ಮಾಡಿರೊ ರಂಗಯ್ಯನ ಪ ಗಾನ ವಿಲೋಲನ ದೀನಾರ ಪೊರೆವೊನ ಅ.ಪ. ಮೀನ ರೂಪವ ತಾಳಿ ದಾನವಾಖ್ಯನ ಸೀಳಿ ಮಾನವ ಪೊಂದಿದ ಜಾಣ ರಂಗೈಯ್ಯನ 1 ಕೂರ್ಮ ತಾನಾಗಿ ಗಿರಿಯ ಬೆನ್ನಲಿ ಪೊತ್ತು ಸುರರನ್ನೆ ಪೊರೆದ ಗಂಭೀರ ರಂಗೈಯ್ಯನ 2 ವರಾಹ ರೂಪದಿ ಕೋರೆಯ ಕೊನೆಯಲಿ ಧರಣಿಯನೆತ್ತಿದ ಶೂರ ರಂಗೈಯ್ಯನ 3 ನರಹರಿ ರೂಪದಿ ಘೋರ ದೈತ್ಯನ ಸೀಳಿ ತರಳನ ಸಲಹಿದ ಕರುಣಿ ರಂಗೈಯ್ಯನ 4 ಪುಟ್ಟ ಹಾರುವನಾಗಿ | ದಿಟ್ಟ ಬಲಿಗೆ ಒಲಿದು ಕೊಟ್ಟ ವರಗಳ ದಿಟ್ಟ ರಂಗೈಯ್ಯನ 5 ಪರಶು ಪಿಡಿದು ಭೂವರರ ಗೆಲಿದು ಭೂ ಸುರರನ್ನೆ ಸಲಹಿದ ಧೀರ ರಂಗೈಯ್ಯನ6 ಮಾನವ ರೂಪದಿ ದಾನವಾಂತಕನಾಗಿ ದೀನರ ಪೊರೆದ ಸುಜ್ಞಾನಿ ರಂಗೈಯ್ಯನ 7 ಕಂಸನ ವಂಶ ನಿರ್ವಂಶಾಕೋಸುಗ ಯದು ವಂಶದೊಳು ತಾನು ಜನಸಿದನು ಹಿಂಸೆ ಮಾಡುತಲಿರ್ದ ಹಂಸ ಡಿಬಿಕರನ್ನು ಧ್ವಂಸ ಮಾಡಿದ ಮುರಧ್ವಂಸಿ ಕೃಷ್ಣಗೆ 8 ಸತಿಯರ ವ್ರತದಿಂದ ಪತಿತರಳಿಯದಿರೆ ಗತಿ ತೋರದೆ ಭವಕಾತರಿಸೆ ಅತಿ ನಗ್ನದಿ ಬಂದು ವ್ರತಭಂಗ ಮಾಡಿದ ಸಿರಿ ಕಂಠÀನುತನಾದ ಸಿತವಾಹನ ಸಖನ 9 ವೇದ ಬಾಹಿತರನ್ನು ಭೂದೇವಿ ಧರಿಸದೆ ಮಾಧವ ಪೊರೆಯೆಂದು ಮೊರೆಯಿಡಲು ಚದುರತನದಿ ಸತಿಯ ಕುದುರೆಯ ಮಾಡಿತಾ ಕೊಂಡ ಕದನದಿ ಕೊಂದವನ 10 ಮಂಗಳ ಮಹಿಮನ ಶೃಂಗಾರ ಪ್ರಿಯನ ಅಂಗಜಾರಿಯ ಧನುರ್ಭಂಗನ ಅಂಗಳದೊಳು ಮೂರ್ಲೋಕಂಗಳ ತೋರಿದ ತುಂಗ ವಿಕ್ರಮನಾದ ರಂಗೇಶವಿಠಲನ 11
--------------
ರಂಗೇಶವಿಠಲದಾಸರು
ನಗುವಿನಿಂದಾರೋಗ್ಯ ಉಂಟೆಂಬರಯ್ಯ ನಗುವಿನಲಿ ಹಲವಾರು ಬಗೆಗಳುಂಟಯ್ಯ ಪ ನಗುವಿಂದ ಸನ್ಮಿತ್ರ ಹಗೆಯಪ್ಪುದುಂಟಯ್ಯ ನಗುತ ಬಾಳೆಂಬುದೇ ಸೊಗವೋ ರಂಗಯ್ಯ ಅ.ಪ ಗೊಳ್ಳೆಂಬ ನಗೆಯುಂಟು ಬಲ್ಲವನ ಸಭೆಯಲಿ ಕಳ್ಳನಗೆಯೊಂದುಂಟು ಪೊಳ್ಳುಕಡೆಗಳಲಿ ಸುಳ್ಳುನಗೆಯೊಂದುಂಟು ಜಳ್ಳು ಡಾಂಭಿಕರಲಿ ಮುಳ್ಳುಕಲ್ ನಗೆಯುಂಟು ಕಳ್ಳಕಾಕರಲಿ 1 ನಸುನಗೆಯು ಮನದ ಸಂತಸದ ಕುರುಹು [ಎಸೆ]ವ ರಸನೆ ನಗುವುದೇ ಹಾಸ್ಯವಯ್ಯಾ ರಸಪೂರ್ಣ ನಗುವುಂಟು ಬಿಸಜಾಕ್ಷನಲ್ಲಿ ಹೊಸದಾದ ನಗು ಮಾಂಗಿರಿನಲವಿನಲಿ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಾನಾಗಿ ನನಗಾಗಿ ನಮಿಸುವೆನು ಬಾಗಿ ನೀನಾಗಿ ಕೃಪೆಮಾಡೋ ದೀನಾನುರಾಗಿ ಪ ನಾನಿನ್ನ ಕೈಗೊಂಬೆ ನೀನೆಗತಿಯೆಂಬೆ ನೀನನ್ನ ಕರೆತಂದೆ ಶ್ರೀನಾಥ ನಾ ಬಂದೆ ಅ.ಪ ತರಳನ ಕರೆತಂದೆ ತರುಣಿಕೂಗಿ [ದರಿಕೆಬಿಡಿಸಿ ಮಾನಿನಿಯ ರಕ್ಷಿಸಿದೆ] ಹರಿಯೊಂದು ಜಲದಲಿ ನರಳಿದಕರೆಗೆ ಕರುಣದೊಳೋಡಿ ಬಂದು ಪೊರೆದೆ ನೀತಂದೆ 1 ಜ್ಞಾನಿಯು ನಾನಲ್ಲ ಮಾನಿಯುಮಲ್ಲ ಧ್ಯಾನದ ರೀತಿಯ ನಾನರಿತಿಲ್ಲ ನಾನಾ ಶಾಸ್ತ್ರಂಗಳ ಕಲಿತವನಲ್ಲ ನೀನೆ ಶರಣೆಂಬೆ ಮಾಂಗಿರಿಯ ರಂಗಯ್ಯ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಾನಿನ್ನ ತೆಗಳಿದೆನೇ ರಂಗಯ್ಯ ನಾನಿನ್ನ ಮಹಿಮೆಯ ಹೊಗಳಿದೆನಲ್ಲವೆ ಪ ನೀನೇತಕೆನ್ನೊಳು ದಯತೋರದಿರುವೆ ನಾನಿನ್ನ ಚರಣವ ದೃಢದಿ ನಂಬಿರುವೆ ಅ.ಪ ಮೀನಾಗಿ ನಾಲ್ಕುಮಕ್ಕಳ ಹೊತ್ತು ತಂದೆ ನೀನೇ ಕಮಠನಾಗಿ ನಗವೆತ್ತಿ ನಿಂದೆ ದಾನವ ಸಂಹಾರಕಾಗಿ ಸೂಕರನಾದೆ ನೀನೇ ನರಹರಿಯೆಂದು ನುತಿಸಿದೆನಲ್ಲದೆ 1 ಭೂಮಿಯನಳೆದವನೆಂದೆ ನೀನೇ ಭೂಮಿಪರನು ಕೊಂದೆ ಎಂದೆ ಭೂಮಿಜೆಯರಸ ರಾವಣವೈರಿಯೆಂದೆ ಕಾಮಪಾಲನು ಹಲಧರನೆಂದೆನಲ್ಲದೆ 2 ತರುಣಿದ್ರೌಪದಿಗಾಗಿ ಕುರುಕುಲವಿರಿದೆ ತುರಗವನೇರಿ ದುಷ್ಟರನೆಲ್ಲ ತರಿದೆ ಶರಣ ಜನರಿಗಾಗಿ ಹರಿಹರ ನೀನಾದೆ ವರದ ಮಾಂಗಿರಿರಂಗ ನೀನೆಂದೆನಲ್ಲದೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಾನೇನು ಬೇಡಿದೆನೋ ರಂಗಯ್ಯ ನೀನೆನ್ನ ನೋಡವಲ್ಲ್ಯಾಕೋ ಪ ಹಾನಿ ಮಾಡೆ ಮಹಹೀನಭವಸಾಗರ ಮಾನದಿಂ ಗೆಲಿಸೆಂದು ನಾನಿಷ್ಟೇ ಬೇಡುವೆ ಅ.ಪ ನಿಗ್ರಹಿಸಿ ಸ್ಥಿರಪದನುಗ್ರಹಿಸಿ ಪೊರೆಯೆಂದೆನೆ ಸುಗ್ರೀವನಂತೆನ್ನ ಆಗ್ರಜನ ಕೊಂದು ಕಪಿ ದುರ್ಗಕ್ಕಧಿಪತಿಯೆನಿಸೆಂದಾಗ್ರಬಟ್ಟೆನೊ ನಿನಗೆ 1 ಕುಲವ ನಿರ್ಮೂಲ ಮಾಡಿ ಇಳೆ ಪಟ್ಟಕ್ಕೆ ಸ್ಥಿರವಾಗಿ ನಿಲಿಸು ಎನಗೆಯೆಂದು ಸುಲಭದಿಂ ಬೇಡಿದೆನೆ ಒಲಿದು ಸಾರಥಿಯಾಗಿ ಕುಲದವರ ಸವರೆಂದು ನಳಿನಾಕ್ಷ ತವಪಾದದೊಳು ಬೇಡಿದೆನೇನೋ 2 ಚಿತ್ತಜಪಿತ ನಿನ್ನ ಸತ್ಯ ಬಿರುದುಗಳು ನಿತ್ಯ ನಿತ್ಯದಿ ಬಿಡದೆ ಶಕ್ತಿಯಿಂ ಪೊಗಳುವೆ ಭಕ್ತಿದಾಯಕ ನಿನ್ನ ಯುಕ್ತ್ಯಾರುಬಲ್ಲರು ಮುಕ್ತಿ ದಯಮಾಡೆಂದು ಪ್ರಾರ್ಥಿಪೆ ಶ್ರೀರಾಮ 3
--------------
ರಾಮದಾಸರು
ನಿನಗೇಕೆ ದಯಬಾರದೋ ಪ ನಿನಗಾಗಿ ಕಾದಿರುವೆ ಮನಸಾರೆ ವಂದಿಸುವೆ ವನಜಾಕ್ಷ ಕರುಣಾಳು ನೀನಲ್ಲವೇ ಅ.ಪ ಮನಸಲ್ಲಿ ಕ್ರಿಯೆಯಲ್ಲಿಯಾವಾಗಲೂ ತನುಧ್ಯಾನ ಮನವೆಲ್ಲ ನಿನಗೆ ಅರ್ಪಿತವಯ್ಯ [ಅನುದಿನವು ಕೈಪಿಡಿಯೋ ಮಾಂಗಿರಿರಂಗಯ್ಯ] 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್