ಒಟ್ಟು 633 ಕಡೆಗಳಲ್ಲಿ , 86 ದಾಸರು , 550 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇವೆ ಗುರು ಘನ ಮಹಿಮೆ ಧ್ರುವ ಅಧ್ಯಾತ್ಮದಾನಂದದ ನೆಲೆನಿಭ ಮಹಾತ್ಮರು ಬಲ್ಲರು ಖೂನ ಹೊಳೆಯುತಿಹ್ಯದು ಅನುದಿನ ಚಿಂತಾಯಕ ಗುರು ಘನ ಪ್ರತಾಪವು ತುಂಬಿಹ್ಯದು ಪರಿಪೂರ್ಣ ಶುದ್ಧಾಂತ್ಮದ ಸೂತ್ರಾಂತ್ರದ ಗತಿಗಳ ಮೂಢಾತ್ಮರು ಬಲ್ಲವೇನ 1 ಮಹಿಮರು ಮನಿಮನಿಗಿಲ್ಲ ಮಹಿಮಾನಂದದನು ಸಂಧಾನ ಪರಮವಿರಕ್ತನೇ ಬಲ್ಲ ಜೀವನ್ಮುಕ್ತಾಗುವ ಗತಿ ಮಾರ್ಗವು ಎಂದಿಗೆ ದೊರೆವದಿದೆಲ್ಲ ಪೂರ್ವಕಲ್ಪನೆಯಲ್ಲ ಮಿಕ್ಕಿನಾ ನರಗುರಿಗಳಿಗಿದು ಇಲ್ಲ 2 ಹುರಳಿಲ್ಲದ ಕರ್ಮಾಚರಣೆಯೊಳು ಮರುಳಾದರು ಜನವೆಲ್ಲ ಸರ್ವರಿಗಾವುದಲ್ಲ ಪೂರ್ವಾ ಪಾರ ಮಹಾಗುರು ಯೋಗಮಾರ್ಗವು ಸ್ತುತಿಸಲೆನಗಳವಲ್ಲ ಸರ್ವಮಯವೆಲ್ಲ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇವೆ ನಿಜನೋಡಿ ನಮ್ಮ ನೇಮನಿತ್ಯ ಸಾಧು ಜನರಿಗೆ ನಡೆವದು ಸತ್ಯ ಧ್ರುವ ಅನುಸಂಧಾನ ತ್ರಿಕಾಲ ಸಂಧ್ಯಾನ ನಿತ್ಯ ನಿತ್ಯದಿತ್ಯರ್ಥದ ನಿಜಸುಷ್ಠಾನ 1 ದೇವದೇವೇಶನಾರಾಧನೆಯು ಭುವನತ್ರಯದಲಿದೆ ಸರ್ವಸಾಧನೆಯು 2 ಕರ್ಮಹರಿಸಿದ ನಿಮಿಷದೊಳಗೆ ಬ್ರಹ್ಮಾನಂದವಾಯಿತು ಮಹಿಪತಿಗೆ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇವೆ ಪೂಜೆಯ ನೋಡಿ ಹೃದಯದಲಿ ನಿಜ ಒಡಗೂಡಿ ಧ್ರುವ ನಾಮಸ್ವರೂಪದ ನಿಜಗುಹ್ಯವಾರ್ತಿ ವ್ಯೋಮಾಕಾರದ ಮನೆಮೂರ್ತಿ ಸ್ವಾಮಿ ಸದ್ಗುರುವಿನ ಕೀರ್ತಿ 1 ನಿತ್ಯ ನಿರ್ಗುಣ ನಿರ್ವಿಕಲ್ಪಾ ಸತ್ಯಸದ್ಗುರು ಸ್ವರೂಪಾ ನಿತ್ಯ ನಿತ್ಯರ್ಥ ಸುದೀಪಾ ತತ್ವಜ್ಞಾನ ಮನಮಂಟಪಾ 2 ಸ್ವಾದೋದಕ ಙÁ್ಞನ ಭಾಗೀರಥೀ ಅಭಿಷೇಕ ಮೌನಮೌನ್ಯವಸ್ತ್ರಾ ಮೋಲಿಕಾ ಧಾನ್ಯವೆಂಬುದೇ ಸೇವೆ ಅನೇಕಾ 3 ಗಂಧಾಕ್ಷತಿ ಪರಿಮಳವುಳ್ಳ ಪುಷ್ಪ ಬುದ್ಧಿಮನವಾಯಿತು ಸ್ವರೂಪಾ ಸದ್ವಾಸನ್ಯಾಯಿತು ಧೂಪದೀಪ ಸದ್ಭಾವನೆ ನೈವೇದ್ಯಮೋಪಾ 4 ಫಲತಾಂಬೋಲವೆ ಸದ್ಭಕ್ತಿ ಮ್ಯಾಲಭಿಭಾವನೆ ಮಂಗಳಾರ್ತಿ ಕುಲಕೋಟಿ ಉದ್ಧರಿಸುವ ಗತಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಲ್ಲೆವೆ ನಿಧಾನವು ಶ್ರೀಗುರುವೆ ನಿಮ್ಮಲ್ಲೆವೆ ನಿಧಾನವು ಎಲ್ಲರಿಗಿದು ತಾ ದುರ್ಲಭವಾಗಿಹ್ಯ ಸುಲಭದಲಿ ಒಲಿದಿಹ್ಯ ಸದ್ಗುರು ನಮಗಿಲ್ಲೆ ನಿಧಾನವು ಧ್ರುವ ಪಾದ ಪದ್ಮವ ತಿಳಿದು ವೇದಕಗೋಚರವು ಸದ್ಗತಿ ಸುಖ ಸಾಧಿಸುವವ ಧನ್ಯನು ಶೋಧಿಸಿ ಅತ್ಮದಿ ಬೋಧೆಯಲಿ ನಿಜ ಅದಿತತ್ವದ ಗತಿ ಭೇದಿಸಿ ತಿಳಿದವಗಿಲ್ಲಿವೆ 1 ಖುಲ್ಲ ಮನುಜರಿಗಿದು ತಿಳಿಯದೆ ಇಲ್ಲದಂತಾಗಿಹುದು ಎಲ್ಲಾ ದೈವದ ಮೂಲವು ಬಲ್ಲವಗಿದು ಸೊಲ್ಲಿನೊಳಗಿಹುದು ಕಲ್ಲಿನೊಳಿಹ ದೈವಿಲ್ಲವೆ ಇಹ್ಯ ಪ್ರಾಣದೊಲ್ಲಭ ಗುರುನೆಂದಿಲ್ಲೆವೆ ತಿಳಿದುವಗಿಲ್ಲೆವೆ 2 ಸುತ್ತೇಳು ಸಾಗರದ ಪೃಥ್ವಿಲಿಹ್ಯ ನಿತ್ಯವುಳ್ಳ ದೈವೀತನು ಸುತ್ತ ಸನಕಾದಿಗಳು ಮತ್ತೆ ದೇವರು ತೆತ್ತೀಸ ಕೋಟಿಗಳು ಹತ್ತಿಲೆ ಹೊಳೆಯುತ್ತ ಚಿತ್ತದ ತುದಿಯಲಿ ಸತ್ಯಕೈಲಾಸವೆ ಇತ್ತ ವೈಕುಂಠವು ಇಲ್ಲೆವೆ 3 ಕಾಶಿ ರಾಮೇಶ್ವರವು ಸಕಲ ಕ್ಷೇತ್ರವಾಸವಾಗಿಲ್ಲಿಹವು ದೋಷನಾಶನ ಕೃಷ್ಣೆಯು ಮಿಗಿಲಾದ ಏಸು ತೀರ್ಥಗಳಿಹ್ಯವು ವಾಸವಾಗಿಹವು ಸೂಸುತ ನದಿಗಳು ಈಶನ ಚರಣದಲಿ ಭಾಸುದು ಕಂಡವಗಿಲ್ಲೆವೆ 4 ಚೆಂದುಳ್ಳ ದ್ವಾರಕೆಯು ಗೋಕುಲ ವೃಂದಾವನ ಕುರುಕ್ಷೇತ್ರವು ಒಂದೊಂದೇ ಕ್ಷೇತ್ರದಲಿ ವಾಸವಾಗಿ ನಿಂದು ಮಾಡಿದ ಪುಣ್ಯವು ಹಿಂದಿನ ಕರ್ಮವು ಹೊಂದದೆ ಗಳಿಸುವ ಮಂದಾಕಿನಿ ನದಿಯಿಂದ ಫಲಿಲ್ಲಿವೆ 5 ಬ್ರಹ್ಮಾಂಡ ನಾಯಕನು ಅದ್ವೈತ ಸುಖವು ಉಂಡವಗಿದು ಪಿಂಡ ಬ್ರಹ್ಮಾಂಡೈಕ್ಯವು ಮಂಡಲದೊಳು ಪಿಂಡಾಂಡದಿ ಕಂಡವಗಿಲ್ಲ್ಲೆವೆ 6 ಸಂದೇಹ ವೃತ್ತಿ ಹರಿದು ಸದಮಲಾನಂದ ಮುಕ್ತಿಯಲಿ ಬೆರೆದು ಒಂದು ಪಥsÀವನರಿದು ಜಗದೊಳು ದ್ವಂದ್ವಗಳನೆ ಮರೆದು ಎಂದಿಗಗಲದಂತೆ ಶ್ರೀಪಾದವನಿಂದ ಮಹಿಪತಿಗೆ ಇಲ್ಲೆವೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಷ್ಟಲಿಂಗಾರ್ಚನವಾ | ಮಾಡುವರಾ | ಎಷ್ಟೆಂದ್ಹೇಳಲಿ ಭಾಗ್ಯವಾ | ಕಟ್ಟಿ ಉಡಲಾಗದೇನಟ್ಟುತ್ತ ಮಾಂಗದಿ | ಕಟ್ಟಲಿಲ್ಲದ ತೇಂಜಾಂಗುಷ್ಟದ ಲಿಪ್ಪಾ ಪ ಹೃದಯವೇ ಮಂದಿರವು | ಅಷ್ಟದಳ | ಪದುಮವೇ ಮಂಟಪವು | ವದಗಿ ಮರುಹು ಎಂಬುವದೇ ನಿರ್ಮಾಲ್ಯವ ಬಿಟ್ಟು | ಸದಮಲ ಅರುಹಿನಾ ಉದಕದ ಮಜ್ಜನದೀ 1 ಶ್ರೀ ವಿಭೂತಿಯ ನಿಟ್ಟು | ಭಾವಗಂಧ ಭಕ್ತೀವ ತಿಲಾಕ್ಷತೆ | ಸಾವಧಾನದಿ ತ್ರಿಗುಣವೇ ತ್ರಿದಳ ಬಿಲ್ವದಿ 2 ಪುಣ್ಯಗಂಧವೇ ಧೂಪವು ಸುಜ್ಞಾನದ | ರನ್ನ ಜೋತಿಯ ದೀಪವು | ತನ್ನನುಭವ ಸಂಪನ್ನ ನೈವೇದ್ಯವು | ಮುನ್ನೆ ತಾಂಬೋಲವಾನನ್ಯ ಚಿಂತನೆಯಂಬಾದಿ 3 ಕರಣ ದಾರತಿಗಳನ್ನು | ಬೆಳಗುವಾ | ಪರಿಚಾರ ಪ್ರಾಣಗಳು | ಸ್ಪುರಿತ ನಾಹತದ ವರವಾದ್ಯ ಘೋಷವು | ಪರಿಪರಿಯಾದ ಝೆಂಕರಿಸುವ - ರವದಿಂದಾ 4 ವೃಂದದಿ ಷಡ್ಡಸ್ಥಳದೀ ನುಡಿವ ಮಂತ್ರ | ವೆಂದು ಅಜಪ ಸೂತ್ರದೀ | ತಂದೆ ಮಹಿಪತಿ ನಂದನ ಪ್ರಭು ನಮೋ | ಯಂದು ನಿಷ್ಕಾವ್ಯದಾದ ಸಂದಿ ಸುಖಸುತ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಈ ಸೊಬಗು ಇನ್ನಾವ ಕ್ಷೇತ್ರದಲಿ ಕಾಣೆನಾ ಇಲ್ಲಿ | ವಾಸುದೇವ ಮುನಿಯಿದ್ದ ಕಾರಣ ಪ ರಾಜಧಾನಿಯ ನೋಡೆ ಇಂದ್ರಭವನಕೆ ಮೇಲು | ತೇಜದಲಿ ನೋಡೆ ಸೂರ್ಯನದೆ ಸೋಲು || ಪೂಜೆದಲಿ ನೋಡೆ ಸರ್ವ ಧರಣಿಗೆ ಮೇಲು | ಭೋಜನದಲಿ ನೋಡೆ ಅಮೃತಕೆ ಮೇಲು 1 ಉತ್ಸಾಹದಲಿ ನೋಡೆ ನಹಿ ಪ್ರತಿ ನಹಿ ಪ್ರತಿ | ಸತ್ಸಂಗತಿಯ ನೋಡೆ ಬುಧ ಸಂಗತಿ || ಸುಚರಿತೆಯ ನೋಡೆ ಶುದ್ಧ ಸತ್ವದ ನೀತಿ | ಮತ್ಸರ ಮೆರೆದು ನೋಡೆ ಇಲ್ಲೆ ಮುಕುತಿ 2 ಓಲಗದಲಿ ನೋಡೆ ಸತ್ಯಲೋಕಕೆ ಸಮ | ಪೇಳುವ ಕೀರ್ತನೆ ನೋಡು ವೇದಸ್ತೋಮ || ಬಾಲ ಉಡುಪಿಯ ಕೃಷ್ಣ ವಿಜಯವಿಠ್ಠಲರೇಯನ | ತಿಳಿದ ಮಾನವಗೆ ಫಲವು ನಿಷ್ಕಾಮಾ3
--------------
ವಿಜಯದಾಸ
ಈತ ಶ್ರೀಗುರು ಪರಬ್ರಹ್ಮನೆನ್ನಿ ಅತೀತವಾದ ಗುಣತ್ರಯ ಪರಮಾತ್ಮನೆನ್ನಿ ಧ್ರುವ ನಿರ್ಗುಣಾಂದನೆನ್ನಿ ನಿಗಮಗೋಚರನೆನ್ನಿ ಅಗಣಿತಗುಣ ಪರಿಪೂರ್ಣನೆನ್ನಿ 1 ಯೋಗಾನಂದಾತ್ಮನೆನ್ನಿ ಯೋಗಿವಂದಿತನೆನ್ನಿ ಯೋಗಿಹೃದಯವಾಸ ಯೋಗನಿಧಾನನೆನ್ನಿ 2 ಸಾಧುಸಹಕಾರನೆನ್ನಿ ಸದಾನಂದಾತ್ಮನೆನ್ನಿ ಸದ್ಬ್ರಹ್ಮಾನಂದ ಸದೋದಿತನೆನ್ನಿ 3 ಙÁ್ಞನಸಾಗರನೆನ್ನಿ ಙÁ್ಞನಾನಂದಾತ್ಮನೆನ್ನಿ ಙÁ್ಞನಿಗಳೊಂದಿಹ ಸುಙÁ್ಞನಸ್ವರೂಪನೆನ್ನಿ 4 ಪರಮಪುರಷನೆನ್ನಿ ಪರಮಪ್ರಕಾಶನೆನ್ನಿ ಪರಮಾನಂದಸ್ವರೂಪ ಪರಾತ್ಪರ ಪೂರ್ಣನೆನ್ನಿ 5 ಇಹಪರನೀತನೆನ್ನಿ ಗುಹ್ಯಗುಪಿತನೆನ್ನಿ ಬಾಹ್ಯಾಂತ್ರಪರಿಪೂರ್ಣ ತ್ರೈಲೋಕ್ಯನಾಥನೆನ್ನಿ 6 ಕಾವಕರುಣನೆನ್ನಿ ಭವಭಂಜನನೆನ್ನಿ ಜೀವಸಂಜೀವ ಮಹಿಪತಿ ಗುರುಮೂರ್ತಿಯೆನ್ನಿ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಉಂಬುವ ಬನ್ನಿರೋ ಅನಂದದೂಟವ ಹಂಬಲಿಸಿ ಸವಿದು ತುತ್ತು ಕೊಂಬ ಬನ್ನಿರೋ ಧ್ರುವ ಬಡಿಸಿಹಿದು ನೋಡಿ ಅನೇಕ ಪರಿಯಲಿ ಎಡಬಲಕೆ ನೋಡಲಾಗದಾನಂದ ಘನಲೀಲೆ 1 ಇಡಿದು ತುಂಬಿದೇ ನಿಧಾನದೂಟವು ನೋಡಲಿಕ್ಕೆ ತೃಪ್ತಿಗೈಸುತಿಹುದು ನೋಟವು 2 ಬೇಡಿಸಿಕೊಳ್ಳದೆ ಬಡಸುತಿಹ್ಯನು ಮೂಢ ಮಹಿಪತಿ ಒಡೆಯ ಭಾನುಕೋಟಿತೇಜನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಉಂಬುವ ಬನ್ನಿರೋ ನೀಟ ಅನುಭವದೂಟ ಧ್ರುವ ಎಡಿಯು ಬಡಿಸಿಪೂರ್ಣ ಗೂಡಿನೊಳಿಟ್ಟಿದೆ ಖೂನ ನೋಡಿ ನಿಮ್ಮೊಳು ನಿಧಾನ ಮಾಡಿ ಭೋಜನ 1 ತುತ್ತುಕೊಂಬುದು ಬ್ಯಾಗೆ ಸತ್ಸಂಗದಲಿ ನೀವೀಗ ಅತಿಶಯಾನಂದ ಭೋಗ ಉತ್ತಮ ಯೋಗ 2 ಕಲ್ಪನೆಂಬುದು ನೊಣ ಬೀಳಗೊಡದೆ ಜತನ ಬಳೆದುಕೊಂಡುಂಬುವ ಜಾಣ ಕಳೆದನುಮಾನ 3 ಸವಿಸವಿಮಾಡಿಕೊಂಡು ಸೇವಿಸುವದು ಮನಗಂಡು ಪಾವನಾಗಬೇಕು ಉಂಡು ಸವಿಸೂರೆಗೊಂಡು 4 ಉಂಡು ಮಹಿಪತಿ ನೋಡಿ ಕೊಂಡಾದಿಡಾನಂದಗೂಡಿ ಮಂಡಲದೊಳಿದೇ ಮಾಡಿ ಬಿಡದೆ ಸೂರ್ಯಾಡಿ5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಎ. ಬಿಡಿ ಹಾಡುಗಳು ವಿತ್ತ ವಿಚಾರ ವಿತ್ತವೇ ಸರ್ವ ಪ್ರಮತ್ತಮರ್ಥದಾ ಪ ವಿತ್ತವಿಲ್ಲದಿರೆ ಭಿತ್ತಿವರ ಬೊಂಬೆಯಂತೆ ಅ.ಪ. ವಿತ್ತವಿರಲು ಪ್ರಾಥರುತ್ಥಾಯ ಸ್ನಾನವುವಿತ್ತದಿಂದಲಿ ಮಾಗಳಾರ್ಥಿಗಳುವಿತ್ತದಿಂದಲಿ ಪತ್ನಿ ಪುತ್ರರು ಸ್ವಾಧೀನಾವಿತ್ತ ಹೀನಾಮೂಲ ವಸ್ತಿ ಮಾಡುವನು 1 ವಿತ್ತದಿಂದಲಿ ಪುರಾಣೋಕ್ತ ವ್ರತಗಳಗ್ನಿಹೋತ್ರಶ್ವಮೇಧಾನ್ನ ಸತ್ರಗಳುವಿತ್ತದಿಂದಲಿ ಮಧ್ಯಾನ್ಹೊತ್ತಿಲೀ ಬಹುಜನಾತಿಥ್ಯವು ಹರಿಪೂಜೆ ನರ್ತನಾ ತತಿಗಳು 2 ವಿತ್ತದೊಳಗೆ ಹರಿಪತ್ನಿಯೂ ಕುಣಿಯುವಳುವಿತ್ತದಿಂದಲಿ ಮಹಾಪತ್ತು ನಾಶಾವಿತ್ತದಿಂದಲಿ ಸುವಿರಕ್ತಿ ಭಕ್ತಿ ಜ್ಞಪ್ತಿವಿತ್ತಮಿಂದಿರೇಶ ನೊಕ್ತ್ರ ತೋರಿಸುವನು 3
--------------
ಇಂದಿರೇಶರು
ಎಂಥಾ-----------ಈಗ ಪಿಡಿಯೊ ಎನ್ನ ಕೈಯ್ಯ ಬೇಗ ಅನಂತಾ ಭಗವಂತಾ ಶ್ರೀಕಾಂತಾ ಜಗದಂತ ....... ಪ ಒಂದೊಂದು ದಿನವು ಎಂಬುದು ಒಂದೊಂದು ಯುಗವು ಆಗಿ ಬೆಂದು ಬಹಳ ಬೇಸರದಿಂದ ತಂದೆ ----------ಬಂದೀ ಕಂದನೆಂದು ಕರುಣದಿಂದ ---------ಗೋವಿಂದ ನಂದ ಮುಕುಂದಾ ಶ್ರೀ ಮಂದರಧರ 1 ಮಕ್ಕಳು ಮರಿಗಳು ಎಲ್ಲಾ ------ಕಾಣದ ದೇವಾ ಶುಷ್ಕ ಭೂತರಾಗಿ ಇನ್ನು ಸುಖವು ಕಾಣದೆ ---ನೆಗೊಂಡು ಬಹಳಘೋರ ನಾ ಬಡುವದು ಕಂಡು ನಿಕ್ಕಾಸಲಾರದೆ ನಿನ್ನ ಮೊರೆಯ ಹೊಕ್ಕ ಕಾಯಯ್ಯ ನೀನೆ --------- ಶ್ರೀ ಲೋಕನಾಯಕ ಹರಿಯೆ 2 ಮನಸು ನಿನ್ನ ಧ್ಯಾನವು ಬಿಟ್ಟು ತಿರಸೂ? ಚಿಂತನೆಗೊಳಗೆ ಆಗಿ ಕನಸಿನಲ್ಲಿ ಕಾಣೋನಿಲ್ಲಾ ಕಾಯದ ಸುಖವೆಂಬಾದಿನ್ನು ಅನಿಮಿತ್ತ ಬಂಧು ಕೃಷ್ಣ ಹರಿ 'ಹೊನ್ನ ವಿಠ್ಠಲ' ರಾಯ ಮನಸಿಜನಯ್ಯ ಮೋಹನ್ನ ನಿಧಾನಾ ಸುರಧೇನು ಸದ್ಗುಣಪೂರ್ಣ 3
--------------
ಹೆನ್ನೆರಂಗದಾಸರು
ಎಂದು ಕಾಂಭುವೆ ರಂಗಯ್ಯ ನಾ ಪ ಇಂದ್ರಾನುಜಗುಣ ಸಾಂದ್ರನ್ನಾ | ಉಪೇಂದ್ರನ್ನಾ | ಸುರ್ಯನ್ನಾ ಚಂದ್ರನನಾ 1 ಮಂದರಧರ ನಂದನ್ನಾ | ಸಂದನ್ನಾ ಮುಕುಂದನ್ನಾ 2 ವಾತಜಕೇತುಳ್ಳಾತನ ಸ್ಯಂದನಾ | ಸೂತ ತ್ರೈಜಗ ತಾತನ್ನಾ 3 ಭೂತಳ ಸಂತತ ಪೊತ್ತಿಹ | ಯಾದವ |ಸಾಧಾನಾಧಾನಾಡನ್ನಾ 4 ಮಿತಾನಂತಿ ಭಗಾತ್ರ ವಿರಾಜಿತ | ಪತ್ರಿ ಮುಕುಟಧ್ವಜ ಸೂತ್ರನ್ನಾ5 ಸತ್ರಿ ನೇತ್ರ ಮಿತ್ರ ವಿಧಾತೃ | ಪಿತೃ ವಿಚಿತ್ರ ಚರಿತನ್ನು 6 ಗುರುವರ ಮಹಿಪತಿ - ದೊರೆಯಾ | ಮುರ ಅರಿಯಾ ಸುಖವರ್ಯಾ ನರಹರಿಯಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಂದೂ ಹಿಡಿಯದಿರು ಗರ್ವಾ | ಗೋ ವಿಂದನಲೀಲೆಯ ಕಾಣೊ ಸರ್ವಾ ಪ ಕ್ಷಿತಿಯೊಳಧಿಕವೆನ್ನ ಕುಲವು | ಗುಣ | ವತಿ ಸುಲಕ್ಷಣೆಯಾದಾ | ಸತಿಯಳ ವಲವು | ಸುತನಲ್ಲಿ ಗುಣ ನಿಶ್ಚಲಿಪು | ಯನ | ಗತಿಶಯ ಭಾಗ್ಯದ ಧನ ಧಾನ್ಯ ಒಲವು 1 ಎಲ್ಲರೊಳಗ ಅಭಿಮಾನಿ | ಶಾಸ್ತ್ರ | ಬಲ್ಲಿದ ಯೌವ್ವನ ತ್ರಾಣಿ | ಯನ್ನು | ಸೊಲ್ಲು ಸೊಲ್ಲಿಗ್ಹೇಳುವ ಕವಿತೆಯ ವಾಣಿ 2 ಸುಂದರವಾದ ಮಂದಿರವು | ಯನ | ಗೊಂದು ಕೊರತೆಯಿಲ್ಲಾವೆಂಬುದೀ ಮರವು ಹೊಂದದೆ ಬಾಗಿರೆಚ್ಚವು | ಗುರು | ತಂದೆ ಮಹಿಪತಿ ಬೋಧಿಸಿದರಹು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎನ್ನ ನುಡಿ ಪುಸಿಯಲ್ಲ ಈ ಜಗದೊಳು ಪ ಅರವಿಂದವಿಲ್ಲದಿಹ ಕೊಳವು ತಾ ಕಂಗಳವುಹರಿಣಾಂಕನಿಲ್ಲದಿಹ ಇರುಳು ಮರುಳುಸ್ವರಭೇದವಿಲ್ಲದಿಹ ಸಂಗೀತವಿಂಗೀತಸರಸವಿಲ್ಲದಿಹ ಸತಿಯ ಭೋಗ ತನುರೋಗ 1 ಪಂಥ ಪಾಡುಗಳನರಿಯದ ಬಂಟನವ ತುಂಟಅಂತರವರಿಯದಾ ವೇಶಿ ಹೇಸಿದಂತಿಯಿಲ್ಲದ ಅರಸು ಮುರಿದ ಕಾಲಿನ ಗೊರಸುಅಂತಸ್ಥವಿಲ್ಲದ ಪ್ರಧಾನಿ ಮದ್ಯಪಾನಿ2 ಮಾಗಿಯಲಿ ಸತಿಯನಗಲಿದ ಕಾಂತನವ ಭ್ರಾಂತಪೂಗಣೆಯ ಗೆಲಿಯದಿಹ ನರ ಗೋಖುರಭೋಗಿಸದೆ ಇಹಪರಕೆ ಗಳಿಸಿದರ್ಥ ಅಪಾರ್ಥಕಾಗಿನೆಲೆಯಾದಿಕೇಶವನ ಭಕ್ತ ಮುಕ್ತ 3
--------------
ಕನಕದಾಸ
ಎಲೆ ಮನಸೆ ನಾಂ ಪೇಳ್ವ ಬುದ್ಧಿ ಮಾತುಗಳ ಕಲಿತು ಜಾಣನಾಗಿ ನಿಜಸುಖದಿ ಬಾಳು ಪ ಪರನಿಂದೆ ಬೆರೆಸದಿರು ನಿರುತರನು ಜರಿಯದಿರು ದುರಿತದೊಳಗುರುಳದಿರು ಪರಚಿಂತೆ ಮಾಡು ಗುರುಹಿರಿಯ್ಹರಳಿಯದಿರು ದುರುಳರೊಳಗಾಡದಿರು ಹರಿಯಶರಣರ ಸೇವೆ ಸ್ಥಿರವಾಗಿ ಮಾಡು 1 ಮರವೆ ಪರದೆಯ ಹರಿ ಅರಿವಿನಮೃತ ಸುರಿ ಸ್ಥಿರಜಾನ್ಞದೊಳು ಸೇರಿ ಹರಿಚರಿತ ಬರಿ ಹರಿದಾಟವನು ಮರಿ ಜರೆಮರಣದು:ಖ ತರಿ ಪರಮಹರುಷದಿ ಮರೆ ದುವ್ರ್ಯಸನ ತೂರಿ 2 ಕ್ರೋಧವನು ಕಡೆಮಾಡು ವಾದಬುದ್ಧಿಯ ದೂಡು ಸಾಧುಜನರೊಳಗಾಡು ಶೋಧನ ಮಾಡು ಖೇದವನು ಈಡ್ಯಾಡು ವೇದದರ್ಥವ ಮಾಡು ಪಾದಸೇವೆಯ ಮಾಡು ಮಾಧವನ ಕೂಡು 3 ಕಾಮಲೋಭವ ಕಡಿ ಭೂಮಿಮೋಹವ ತೊಡಿ ಭಾಮೆಯರ ಪ್ರೇಮ ಬಿಡಿ ಕ್ಷೇಮಪಥ ಪಿಡಿ ತಾಮಸದೂರಮಾಡಿ ಸಾವಧಾನದ್ಹಿಡಿ ಪಡಿ ನೇಮದ್ಹುಡುಕಾಡಿ 4 ಮೋಸಪಾಶವ ಗೆಲಿ ಕ್ಲೇಶಗುಣಗಳ ತುಳಿ ದಾಸಜನರೊಳು ನಲಿ ಶಾಶ್ವತವ ತಿಳಿ ಹೇಸಿಕ್ವಾಸನೆಯಳಿ ದೋಷರಾಸಿಯಿಂದುಳಿ ಶ್ರೀಶ ಶ್ರೀರಾಮನಲಿ ದಾಸನಾಗಿ ಸೆಳಿ 5
--------------
ರಾಮದಾಸರು