ಒಟ್ಟು 65 ಕಡೆಗಳಲ್ಲಿ , 34 ದಾಸರು , 63 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಡುದಾನಧರ್ಮಪರಉಪಕಾರವ ಮರೆಯದಿರೆಚ್ಚರಿಕೆಪ.ಕೇಡ ನೆನೆಯಬೇಡ ನಂಬಿದವರ ಮೇಲೆ ಕೆಡುವೆ ನೀನೆಚ್ಚರಿಕೆ ||ಅ||ಬಾಳು ಬದುಕುಸಿರಿ ಇರುವಾಗ ಬಂಧು ಬಳಗಗಳೆಚ್ಚರಿಕೆ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಹಾಲು ಸಂಸಾರಕ್ಕೆ ಹಲವರ ಬಾಯ್ಗಳ ಬಡಿಯದಿರೆಚ್ಚರಿಕೆ 1ಮೂಢರ ಒಡನಾಡಿ ಮುಂದೆ ಕೆಡಲು ಬೇಡಮೋಸ ನೋಡೆಚ್ಚರಿಕೆನಾಡೊಳು ಸುಜನರ ನೋಡಿ ನಡೆಕಂಡ್ಯ ನಟನೆ ಬೇಡೆಚ್ಚರಿಕೆ 2ಚೆನ್ನಾಗಿ ಬದುಕಿದೆ ಗಳಿಸಿದೆ ನಾನೆಂಬ ಹೆಮ್ಮೆ ಬೇಡೆಚ್ಚರಿಕೆ |ನಿನ್ನಾಯು ಮುಗಿದಿರಲು ಯಮದೂತರುಬಂದು ಎಳೆಯುವರೆಚ್ಚರಿಕೆ 3ಒಬ್ಬರಂತೆಲ್ಲರ ನೋಡಿ ಸತ್ಕರ್ಮದಿ ಉಬ್ಬಬೇಡೆಚ್ಚರಿಕೆ |ಕಬ್ಬು ಬಿಲ್ಲನ ಪಿತನ ಏಕಾಂತ ಭಾವದಿಂನೆರೆನಂಬು ಎಚ್ಚರಿಕೆ 4ಹೆಣ್ಣು ಹೊನ್ನು ಮಣ್ಣು ನಿನ್ನನಗಲಿಸಿ ಹೋಗುವರೆಚ್ಚರಿಕೆ |ಮುನ್ನಮಾಡಿದ ಪುಣ್ಯ ಬೆನ್ಹತ್ತಿ ಬರುವುದುಮುಂದೆ ನೋಡೆಚ್ಚರಿಕೆ 5ತಿಂದೋಡಿ ಬಂಧುಬಳಗ ತಪ್ಪಿಸಿ ಕೊಂಬರೆಂದು ನೋಡೆಚ್ಚರಿಕೆ |ಎಂದೆಂದು ಅಗಲದ ಬಂಧು ಶ್ರೀಹರಿನಮಗೆಂದು ನೋಡೆಚ್ಚರಿಕೆ 6ಕಾಲನ ದೂತರು ಯಾವಾಗ ಎಳೆವರೋ ಕಾಣದು ಎಚ್ಚರಿಕೆ |ಬೇಲೂರು ಪುರವಾಸ ಪುರಂದರವಿಠಲನ ಆಳಾಗು ಎಚ್ಚರಿಕೆ 7
--------------
ಪುರಂದರದಾಸರು
ವೀರೆಯ ನೋಡಿರೋ ಅಸುರರ ಮಾರಿಯ ನೋಡಿರೋಶೂರಾದಿ ಶೂರರ ದಾರಿಯ ಹಚ್ಚಿಸಿಮುರಿದ ಮಹಿಷಾಸುರನ ತರಿದಪರಿಶಿಲೋಮನು ಶಕ್ತಿಯ ಪಡೆದು ನಡೆದು ಕಣ್ಕೆಂಪಿಡಿದುಮಸಗುತಲಿಡಲು ಶಕ್ತಿಯ ದೇವಿಯು ಹಿಡಿದೆ ಹಲ್ಲನು ಕಡಿದೆಕೊಸರಿಯೆ ಇಟ್ಟಳು ಅಸುರನ ಎದೆಗೆ ಹೊಯ್ದು ರಕ್ತದಿ ತೊಯ್ದುಬಸವಳಿಯುತ ರಿಶಿಲೋಮನು ಭೂಮಿಗೆ ಬೀಳೆ ಬಹು ಹುಡಿಯೇಳೆ1ವರರುದಗ್ರನು ಗದೆಯನು ಹೊತ್ತು ಬರಲು ದೇವಿಗೆರಗಲುಶರದಿಂದಲಿ ತಲೆಯುರುಳಿಸಿ ಶಿರ ಬೊಬ್ಬಿರಿದು ಡಿಂಬವು ನಡೆದುಭರದಲಿ ಹೊಯ್ದುದು ಗದೆಯಲಿ, ಶರ ಸೋನೆಯ ಸುರಿದು ಖಡ್ಗವಹಿರಿದು ಪರಮೇಶ್ವರಿ ಭಾಪೆನಲು ನಡೆದು ಬಿತ್ತು ಪ್ರಾಣ ಹೋಗಿತ್ತು2ದಳಪತಿಯಹ ಚಿಕ್ಷುರಗೆ ಸಮನೆ ತ್ರಿಣಯನ ಕಾಣೆನು ಎಣೆಯನಹೊಳಕಿದ ನಾನಾಪರಿಆಯುಧದಿ ಮುಂದೆ ಧಿರುಧಿರು ಎಂದೆಒಳ ಹೊಕ್ಕಿರಿದನು ದೇವಿಯ ಶೂಲದಿ ಎದೆಯ ಶೌರ್ಯ ಶರಧಿಯಬಳಿಯದ ದೇವಿಯು ತಪ್ಪಿಸಿ ಶೂಲದಿ ತಿವಿಯೆ ಕಂಗಳ ಮುಗಿಯೆ3ದುಷ್ಟ ಬಿಡಾಲನು ಶರಗಳ ಸುರಿದನು ಮುಚ್ಚೆ ಸುರರೆದೆ ಬಿಚ್ಚೆಎಷ್ಟನು ಹೇಳಲಿ ಮಾಯದಿ ಮುಸುಕಿ ಇರಿದ ಬಹು ಬೊಬ್ಬಿರಿದಮುಷ್ಟಿಯಲಿ ತಿವಿದನು ದೇವಿಯ ಕೋಪವು ಹೆಚ್ಚಿ ತಾನವುಡುಗಚ್ಚಿಬಿಟ್ಟನು ದೇಹವ ದೇವಿಯು ಶೂಲದಿ ತಿವಿಯೆ ರಿಪುಭವವಳಿಯೆ4ಎಡಬಿಡದಲೆ ರೌದ್ರದಿ ಮಹಿಷಾಸುರನೊತ್ತೆ ದೇವಿಯು ಮತ್ತೆಕಿಡಿಕಾರುತ ಹೊಕ್ಕೊದೆದಳು ಬೀಳಲು ಕವಿದು ಶೂಲದಿ ತಿವಿದುಕಡಿದಳು ಕೊರಳನು ತಲೆಯನು ಮೆಟ್ಟಿ ಓಡಿತು ಭಯ ಹಿಮ್ಮೆಟ್ಟಿಮೃಡಚಿದಾನಂದನು ತಾನಾದ ಬಗಳ ಕರುಣಿ ಭಕ್ತರಭರಣಿ5
--------------
ಚಿದಾನಂದ ಅವಧೂತರು
ಸಜ್ಜನರ ಸಂಗ ನಮಗೆಂದಿಗಾಗುವುದೊ |ದುರ್ಜನರ ಸಂಗದಿಂದಲಿ ನೊಂದೆ ಹರಿಯೆ ಪವಾಕು-ವಾಕಿಗೆ ಡೊಂಕನೆಣಿಸುವರು-ಮತ್ತೆ |ಪೋಕರಾಡಿದ ಮಾತು ನಿಜವೆಂಬರು ||ವಾಕ್‍ಶೂಲಗಳಿಂದ ನೆಡುವರು ಪರರ ನೀ |ಪೋಕುಮಾನವರಿಂದ ನೊಂದೆ ಹರಿಯೆ 1ತಾವೆ ತಮ್ಮನ್ನು ಕೊಂಡಾಡಿಕೊಳ್ಳುವರು |ನ್ಯಾಯವಿಲ್ಲದೆ ನುಡಿವರು ಪರರ ||ಭಾವಿಸಲರಿಯರು ಗುರುಹಿರಿಯರನಿಂಥ |ಹೇಯ ಮನುಜರಿಂದ ನೊಂದೆ ಹರಿಯೆ 2ಒಡಜನರನು ಕೊಂದು ಅಡಗಿಸಿಕೊಂಬರು |ಬಿಡಲೊಲ್ಲರು ಹಿಡಿದನ್ಯಾಯವ ||ನುಡಿದು ಕೇಡನು ಒಡನೆ ತಪ್ಪಿಸಿಕೊಂಬಂಥಕಡು ಮೂರ್ಖರಿಂದ ನಾ ನೊಂದೆನು ಹರಿಯೆ 3ತೊತ್ತಿನೊಡನೆ ತನ್ನ ಸ್ನೇಹ ಸರಸ ಮಾತು |ತೆತ್ತಿಗರೊಡನೆ ಪಂಥವ ನುಡಿವರು ||ಸತ್ತಬಳಿಕ ಸೃಷ್ಟಿ ಸಟೆಯೆಂಬರು ಇಂಥ |ಮತ್ತಮನುಜರಿಂದ ನೊಂದೆ ಶ್ರೀಹರಿಯೆ4ಇಷ್ಟುದಿನವು ನಿನ್ನ ನೆನೆಯದ ಕಾರಣ |ಕಷ್ಟಪಡುವ ಕೈಮೇಲಾಗಿ ||ಸೃಷ್ಟಿಗೊಡೆಯ ಶ್ರೀ ಪುರಂದರವಿಠಲನೆ |ಮುಟ್ಟಿ ಭಜಿಸಬೇಕು ಧೃಷ್ಟಮನವು ನಿನ್ನ 5
--------------
ಪುರಂದರದಾಸರು