ಒಟ್ಟು 646 ಕಡೆಗಳಲ್ಲಿ , 54 ದಾಸರು , 590 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೋ ಶಿವ ಬಂದಾ ವೇದಾಂತ ವೇದದಯೋದದಿ ಬಂದಾ ಪ ಇಂದುಧರನು ಬಂದಾಕಂದುಗೋರಳ ಬಂದಾ ನಂದಿವಾಹನ ಚಿದಾನಂದನು ಬಂದಾ1 ಶಂಭುಶಂಕರ ಬಂದಾ ಜಂಭಾರಿಸುತ ಬಂದಾ ಅಂಬಿಕಾರಮಣ ತ್ರಯಂಬಕ ಬಂದಾ2 ಕಂತುಹರನು ಬಂದಾ ಅಂತರಾತ್ಮನು ಬಂದಾ ಚಿಂತಿತಾರ್ಥೀವ ತ್ರಿಪುರಾಂತಕ ಬಂದಾ 3 ಗಂಗಾಧರನು ಬಂದಾ ಮಂಗಳಾಂಗನು ಬಂದಾ ಸಂಗ ರಹಿತ ಮಹಾಲಿಂಗನು ಬಂದಾ4 ಉರಗ ಭೂಷಣ ಬಂದಾ ಸುರರ ಪೋಷಣ ಬಂದಾ ಗುರು ಮಹಿಪತಿ ಪ್ರಭು ಕರುಣದಿ ಬಂದಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇದ್ದರೇನು ಇಲ್ಲದಿದ್ದರೇನು ಬುದ್ಧಿಯಿಲ್ಲದವನು ಬಾಳಿದ್ದರೇನು ಪ ಮಕ್ಕಳಿಲ್ಲದ ಮನೆಯು ಅರಮನೆ ಆದರೇನು ತಕ್ಕ ದಾನವ ಕೊಡದ ಧನವಿದ್ದರೇನು ದುಃಖ ಸುಖಗಳನು ಕೇಳದ ನೆಂಟರಿದ್ದರೇನು ಅಕ್ಕರದಿ ತಾನೊಬ್ಬ ಉಂಡರಾಗುವುದೇನು 1 ನರಜನ್ಮ ದೊರೆತಾಗ ಹರಿಯ ನೆನೆಯದಿರೇನು ಪಾತಕಿ ಆಗಿ ಬಾಳಿದ್ದರೇನು ದುರಿತ ಕಾರ್ಯದೊಳಿದ್ದ ಬುದ್ಧಿಹಾಕಿದರೇನು ಕರುಣರಹಿತನು ತಾನು ಅರಸಾದರೇನು 2 ಮಾತು ಕೇಳದ ಮಗನು ಮನೆಯಲ್ಲಿ ಇದ್ದರೇನು ಸೋತು ನಡೆಯದ ಬಂಟತನವಿದ್ದರೇನು ನೀತಿ ತಿಳಿಯದೆ ಹರಿಯ ಕಥೆಯ ಕೇಳಿದರೇನು ಹೋತಿನ ಕೊರಳೊಳಗೆ ಮೊಲೆ ಇದ್ದರೇನು 3 ವೇದವನೋದದಾ ವಿಪ್ರನಾದರು ತಾನು ದ್ವಾದಶಿ ನಾಮವನು ಬಡಕೊಂಡರೇನು ಹಾದರಕೆ ಮೆಚ್ಚಿದಾ ಚಲ್ವೆ ಆದರೇನು ಆದಿ ತಿಳಿಯದೆ ಬೂದಿ ಬಡಕೊಂಡರೇನು 4 ಶರಣು ಬಂದವರ ಅನ್ಯರಿಗೊಪ್ಪಿಸದೇ ತಾನು ಕೊರಳ ಕೊಯಿದವನ ಧನ ಸೆಳೆದರೇನು ವರದ ಹನುಮೇಶ ವಿಠಲನಂಘ್ರಿಗಳ ನುತಾ ಸ್ಮರಿಸದಲೇ ನೂರೊರುಷ ಬಾಳಿದರೇನು 5
--------------
ಹನುಮೇಶವಿಠಲ
ಇರಬೇಕು ಲಕ್ಷ್ಯ ಇರಬೇಕುಈ ಧರಣಿ ಮೇಲೆ ಶರೀರವಿರುವ ತನಕ ಪ ನಿತ್ಯ ಸಾಕ್ಷಿ ವಿಷಯದಲಿ1 ನಿತ್ಯ ವಿಷಯದಿಂದ2 ನಭವು ಇರುತಲಿರೆ ನಭದಿ ಮೇಘವು ಹುಟ್ಟಿನಭದೊಳಗೆ ಮೇಘವು ಅಡಗುವಂತೆಈ ಭುವನವೆನ್ನಲಿ ಪುಟ್ಟಿ ಎನ್ನಲಿಲಯವೆಂದುಪ್ರಭು ಚಿದಾನಂದ ತಾನೆಂಬ ವಿಷಯದಲಿ 3
--------------
ಚಿದಾನಂದ ಅವಧೂತರು
ಇಲ್ಲವಿಲ್ಲವು ಮಾಯೆಯಿಲ್ಲ ಬ್ರಹ್ಮರ ಹೊಳೆವುಬಲ್ಲವನರಿಯಲವ ಬ್ರಹ್ಮವಿನಾ ಜಗವಿಲ್ಲ ಪ ಕಾಷ್ಟದಲಿ ರೂಪು ನಾಮಗಳೆಷ್ಟು ಆದರೇನುಕಾಷ್ಟದಾ ಹೊರತು ಮತ್ತಿನ್ನೊಂದು ಉಂಟೇಶ್ರೇಷ್ಠ ಮೊದಲಾಗಿ ತೃಣವರೆಗೆ ದಿಕ್ಕುಗಳೆಲ್ಲಶಿಷ್ಟಬ್ರಹ್ಮವಲ್ಲದೆ ಬೇರೆ ಜಗವಿಲ್ಲ1 ಸುರರು ಯಮುನೆ ಪರ್ವತವೆಲ್ಲಘನಬ್ರಹ್ಮವಲ್ಲದಲೆ ಬೇರೆ ಜಗವಿಲ್ಲ 2 ಬ್ರಹ್ಮ ಆಧಾರದಲಿ ತೋರುತಡಗುವುದು ಮಾಯೆಸುಮ್ಮನೆಯೆ ಮೃಗಜಲವು ತೋರಡಗಿದಾತಹೆಮ್ಮೆ ತಾನೆಷ್ಟು ಮಾತಿನ ಮಾತ್ರವಲ್ಲದಲೆನಿರ್ಮಲ ಚಿದಾನಂದ ವಿನಾ ಜಗವಿಲ್ಲ 3
--------------
ಚಿದಾನಂದ ಅವಧೂತರು
ಇಲ್ಲವೋ ಮುಕ್ತಿ ಇಲ್ಲವಿಲ್ಲವೋ ಮೆಲ್ಲ ಮೆಲ್ಲನೆ ದೃಷ್ಟಿನಿಲ್ಲಿಸಿಮೇರು ಶಿಖರವ ನೋಡುವತನಕ ಪ ಚಕ್ರವಾರ ಮೆಟ್ಟಿನಿಂತು ಚಂಚಲಿಸದಂತೆ ದೃಷ್ಟಿಯಿಟ್ಟುವಿಕ್ರಮದಲಿ ಬ್ರಹ್ಮರಂದ್ರ ಪೊಕ್ಕು ತೇಜ ಕಾಣುವತನಕ 1 ದೃಢಚಿತ್ತದಲಿದ್ದು ಮಾರುತನ ಮೇಲಕೆ ಊದಿಒಡನೆ ಕೂಡಿಸಿ ವಾಯುಮನವನು ಅಸುವನು ಕಾಣುವತನಕ2 ಓಂಕಾರ ಧ್ವನಿಯ ಕೇಳಿ ಒತ್ತೊತ್ತು ಬೆಳಗಿನೊಳುಶಂಕರನೆನಿಪ ಚಿದಾನಂದ ಬ್ರಹ್ಮವನೆ ಕಾಣುವ ತನಕ 3
--------------
ಚಿದಾನಂದ ಅವಧೂತರು
ಇಹವಸ್ತುವೊಂದೇ ಜಗದೊಳಗೆ ಇಹವಸ್ತುವೊಂದೇಸೋಹಂ ಸೋಹಂ ಸೋಹಂ ಸೋಹಂಸೋಹಂ ಸೋಹಂ ಸೋಹಂ ಎಂದೇ ಪ ಸಂಗ ದೂರೆನಿಸಿ ಸಂಗವೆ ತಾನೆನಿಸಿಮಂಗಳ ಮಂಗಳ ಮಂಗಳ ಮಂಗಳಮಂಗಳ ಮಂಗಳ ಮಂಗಳವೆಂದೇ 1 ಜ್ಞಾನವೆ ತಾನಾಗಿ ಅಜ್ಞಾನಕೆ ತಾದೂರಾಗಿತಾನೇ ತಾನೇ ತಾನೇ ತಾನೇತಾನೇ ತಾನೇ ತಾನೇ ಎಂದು2 ವರ್ಣಂಗಳು ಆರು ಮೀರುವರ ಚಿದಾನಂದ ಗುರುಪೂರಣ ಪೂರಣ ಪೂರಣ ಪೂರಣಪೂರಣ ಪೂರಣ ಪೂರಣವೆಂದು 3
--------------
ಚಿದಾನಂದ ಅವಧೂತರು
ಈ. ಹನುಮಂತ ದೇವರು ಧನ್ಯನಾದೆನು ಮುಖ್ಯ ಪ್ರಾಣಾ | ನೀ ಪ್ರ- ಸನ್ನನಾದೆಯೆನಗೆ ಇನ್ನೇನನುಮಾನಾ ಪ ನಿನ್ನವನೆನಿಸಿದೆ ಗುರುವೆ ಮತ್ಪ್ರಾಣಾ ಅ.ಪ ತ್ರೈಭುವನಕಾಧಾರ ಸದ್ಗುರು ಕೃಪೆಯಾಯ್ತು 1 ಸಾಸೀರ ಪಿತೃಗಳಾ ತಾನುದ್ಧರಿಸಿದಾ 2 ಎನ್ನ ಬಂಧು ಬೆಳಗುವ ಸಚ್ಚಿದಾನಂದನಾಗೀ 3
--------------
ಸದಾನಂದರು
ಈಗಿದ್ದ ಇರವೇ ಮನುಜರಿಗೆ ಈಗಿದ್ದ ಇರವೇ ? ಪ ಮಾಯಾಪ್ರಪÀಂಚದ ಬಲೆಯ ಪಾಶಕ್ಕೆ ಸಿಕ್ಕಿ ಕಾಯದೊಳಿಹ ಪರಮಾತ್ಮನನರಿಯದೆ ಅ.ಪ. ನರರ ಯೋನಿಗೆ ಬಂದು ನಡತೆ ಸಜ್ಜನರೆಂದು ಬರಿಯ ಬನ್ನಣೆಯೊಳು ಬೆರೆತಿಹರಲ್ಲದೆ ಶರೀರ ಸುಖವನ್ನೆಲ್ಲ ಮರೆತು ತನ್ನಾತ್ಮನೊಳಿರುವ ಸುಖವು ತಾನು ಬಯಸಬೇಕಲ್ಲದೆ ಈಗಿದ್ದ 1 ಮಂದಮತಿಗಳಾಗಿ ಮಮತೆಮಾರ್ಗಕೆ ತಾಗಿ ಅಂದಣದೈಶ್ವರ್ಯ ಬಯಸುವವರಲ್ಲದೆ ಹೊಂದಿಸಿ ಸಚ್ಚಿದಾನಂದ ಬ್ರಹ್ಮದಿಮನ ಬಂದಾಗಿ ನಲಿಸಿ ವಿರಕ್ತಿಯ ಬಂದಿಯೊಳ್ಬಲಿಸಿ ನಿಂದು ನಿಜದ ನಿರುಪಮನೆ ನಿತ್ಯಾತ್ಮನೆ ಎಂದು ಕುಂದದೆ ಸಹಜಾನಂದನಾಗದ ಮೇಲೆ ಈಗಿದ್ದ 2 ಪರಮಪುರುಷರಾದ ಪ್ರಹುಢ ಸಂತರ ಪಾದ ಸ್ಮರಣೆಯ ನಿರುತ ಮಾಡಿರಬೇಕಲ್ಲದೆ ಪರತತ್ವಮಯನಾದ ಗುರುಮಹಾರಾಯನ ಕರುಣವ ಪಡೆದು ಕಣ್ಣಿನೊಳು ಶ್ರೀ ಚರಣವ ಪಿಡಿದು ಬರಿಯಮಾತಲ್ಲವೆಂದರಿತು ಪೂರ್ಣ ಬ್ರಹ್ಮ ಗುರುವಿಮಲಾನಂದ ಭರಿತನಾಗದ ಮೇಲೆ ಈಗಿದ್ದ 3
--------------
ಭಟಕಳ ಅಪ್ಪಯ್ಯ
ಉಗಾಭೋಗ ಅರ್ಚಿಪೆನೆಂಬಾಸೆ ಘನವಯ್ಯ ಹರಿ ನಿನ್ನಮೆಚ್ಚಿಸಿ ಬದುಕುವೆನೆಂಬ ಮನದಾಸೆ ಘನವಯ್ಯಹೆಚ್ಚು ಬಾರಿ ಬಾರಿ ಎನ್ನ ಬೆಚ್ಚಿಸುವುದು ಉದರ ಕಿಚ್ಚುಕಚ್ಚುವ ಬಲು ಹುಲಿಯಂತೆಹುಚ್ಚುಮಾಡಿ ಕೊಲ್ಲುತಿದೆ ಅಚ್ಚ ಸರ್ವೋಚ್ಚನಿಚ್ಚಟದಿಂದಲಾಚ್ಯುತ ನಿನ್ನ ಮೆಚ್ಚಿಬಂದೆನು ನಾಸಚ್ಚಿದಾನಂದ ಹಯವದನಕೊಚ್ಚಿ ನಾನಾವ್ಯಾಧಿಗಳ ದುಶ್ಚಿತ್ತವ ಬಿಡಿಸು ಬೇಗಸಚ್ಚರಿತ್ರ ಸಲಹಯ್ಯ
--------------
ವಾದಿರಾಜ
ಉದ್ದಂಡ ಚಿದಾನಂದ ಪ ಅವರಿಗೆ ನಾ ಮರುಳಾಗಿ ತನಯರೈವರ ಬಿಟ್ಟೆ ನಾಲ್ವರು ಭಾವಂದಿರನು ಬಿಟ್ಟೆ ಸನುಮ-ತವಾಗಿದ್ದ ಸರಿವರ್ಗತನವ ಬಿಟ್ಟೆನಿನಗೆ ಮಾಡಿದ ಲೇಸ ಎನ್ನಲೇಸನು ನೀನು1 ಅರಸನೊಳ್ಳಿದನೆಂದು ಆರಣ್ಣರ ಬಿಟ್ಟೆಹಿರಿಯ ಮಮತೆಯಲ್ಲಿದ್ದ ಅಕ್ಕಂದಿರನು ಬಿಟ್ಟೆಸರಿಹೋಗಿ ಎನಗಿಷ್ಟದ ಸವತಿ ಮೂವರ ಬಿಟ್ಟೆಕರುಣಾಕರನು ಕೈ ವಿಡಿಯ ಲಂತಾದುದಾ2 ಅತಿಮೋಹ ಮಾಡುವ ಅಷ್ಟಾಪ್ತರನು ಬಿಟ್ಟೆಪಿತರೀರ್ವರನು ನಾನು ಹೇವರಿಸಿ ಬಿಟ್ಟೆಸತತ ಚಿಂತಿಪ ಹತ್ತು ಸಖಿಯರನು ನಾ ಬಿಟ್ಟೆಮತಿ ಎನಗಿನ್ನೇನೆ ಮಂದಗಮನೆ ಹೇಳೆ 3 ನಿತ್ಯ ಕಾಲದಿ ಅವನ ನಿಜಸೇವೆ ಮಾಡುತಿಹೆಸತ್ಯ ಸತ್ಯವೆ ಎಂಬ ತೆರದಿಂದಲಿಪ್ರತ್ಯಗಾತ್ಮನು ತನ್ನ ಕೀರ್ತಿವಾರ್ತೆಯ ನೆಲ್ಲಕೂರ್ತು ಮರೆಯಾದಂತೆ ಎನಗೆ ಮಾಡಿದುದ ನೀನು4 ಎನ್ನ ಸುಖದುಃಖ ಫಲ ಎನ್ನ ಕೈ ಮೇಲುಂಟೆನೆಚೆನ್ನ ಚಿದಾನಂದ ಗುರುವಿನಿಂದಉನ್ನತ ನಂಬುಗೆ ಎಂಬುದಿಂತಾಯಿತೇಬಣ್ಣಿಸಲೇನವ್ವ ಬಯಲ ಕೂಡಿಸಿ ಬಿಟ್ಟ 5
--------------
ಚಿದಾನಂದ ಅವಧೂತರು
ಉದ್ಧರಿಸಿರೋ ನೀವು ನಿಮ್ಮ ತಿಳಿಯಬೇಕು ಪರಬೊಮ್ಮ ಪ ಮನುಜ ಜನ್ಮಕೆ ಬಂದು ಮರೆತರೆ ಕಷ್ಟವು ಮುಂದುಇನಿತು ವಿಚಾರವಿಲ್ಲ ಇದುವೆ ವಿವೇಕವದಲ್ಲ 1 ಕೊನಬುಗಳೆಲ್ಲವ ಬಿಡಿರೋ ಕೋಪವನೆಲ್ಲವ ಸುಡಿರೋತನು ಸುಖವಾಗಿಹುದಲ್ಲ ತಪ್ಪಿದರೆ ಬಳಿಕೆಲ್ಲ 2 ಭ್ರಮೆಯೆಲ್ಲವ ಬಿಡಬೇಕು ಬಂಧನ ಹರಿಯಲು ಬೇಕುನಮಗಿದು ನೀತಿಯಿದಲ್ಲ ನಾಚಿಕೆ ಕಿಂಚಿತ್ತು ಇಲ್ಲ 3 ತನ್ನ ತಿಳಿದರೆ ತಾ ಬಂಧು ತನ್ನ ಮರೆತರೆ ಶತ್ರುವಹಸನ್ನುತವಚನವಿದೀಗ ಸಾಧಿಸುವುದು ಬಹುಬೇಗ4 ಚೆನ್ನಾಗಿ ಶ್ರವಣದ ಕೇಳಿ ಚಿತ್ತ ಶುದ್ಧಿಯ ತಾಳಿಚಿನ್ಮಯನನು ನೀವು ಧರಿಸಿ ಚಿದಾನಂದ ತಾವೆಂದು ಸ್ಮರಿಸಿ5
--------------
ಚಿದಾನಂದ ಅವಧೂತರು
ಉಪವಾಸ ಬೀಳುವುದ್ಯಾಕೋ ಮನುಜಉಪವಾಸ ಬೀಳುವುದ್ಯಾಕೋಉಪವಾಸ ಬೀಳಲಿಕೆ ನಿನಗೆ ಗ್ರಹಚಾರ ಸಾಲದೆ ಬೇಕೋ ಪ ಅಂಗದಿ ತತ್ವಾಭಿಮಾನವು ಇರಲಿಕೆ ಆಹಾರವರ್ಜಿಪುದ್ಯಾಕೋಮಂದ ಮತಿಗಳು ಕೂಡಿಯೆ ನೀನು ಮಂದಮತಿಯಾದೆ ಯಾಕೋ 1 ದೇಹದಿ ವೈಶ್ವಾನರನಿರಲಿಕೆ ದೇಹವ ದಂಡಿಪುದ್ಯಾಕೋಮಹಾವ್ರತವೆಂದು ಮೊಸರ ಬಿಟ್ಟು ಮಣ್ಣನೆ ಮುಕ್ಕುವಿಯಾಕೋ 2 ನಿತ್ಯಾತ್ಮನು ಚಿದಾನಂದ ತಾನಿರೆ ನಿರಾಹಾರವದ್ಯಾಕೋಮತ್ತೇಕಾದಶಿ ಶಿವರಾತ್ರೆನ್ನುತ ಬಿಣ್ಣನೆ ಬಳಲುವಿಯಾಕೋ 3
--------------
ಚಿದಾನಂದ ಅವಧೂತರು
ಉಪಾಧಿ ಬೇಡಆತ್ಮನೆಂಬುದೇ ಕಾಂಬುದು ನಿಮ್ಮ ಮಹಾತ್ಮರಾದವರು ಪ ಕುಂಭಗಳು ಇರುತಲಿರೆ ಅಂಬರದ ಚಂದ್ರನುಕುಂಭಗಳೊಳಗೆ ಹಲವಾಗಿ ಬಿಂಬಿಸುವ ತೆರದಿಅಂಬುಜಾಸನ ಮೊದಲು ಜೀವ ಕಂಬದೊಳು ದೃಷ್ಟಿಯಿಟ್ಟು ಇಂಬಾಗಿ ಇರುವನೊಬ್ಬ ಚೇತನಾತ್ಮಕನು1 ಕನ್ನಡಿ ಪಳುಕಿನ ಗೃಹದಿ ಸನ್ನಿಧಿಯಲೊಂದು ದೀಪವಿಡೆಕನ್ನಡಿಯೊಳಗೆ ದೀಪ ಹಲವಾದ ತೆರದಿಉನ್ನತ ಜೀವರಾಶಿಯ ತನ್ನ ಛಾಯೆ ಹೊಳೆ ಹೊಳೆದುತನ್ನ ತಾನೇ ಇರುವನೊಬ್ಬ ಚೇತನಾತ್ಮಕನು2 ಒಬ್ಬನಾ ಕಾಂತಿಯಿಂ ಹಬ್ಬಿಕೊಂಡಿದೆ ಲೋಕಒಬ್ಬನೆಂದೇ ತಿಳಿದಡೆ ತಾನೊಬ್ಬನೇ ಇಹನೀಹರನುಒಬ್ಬನನೊಯ್ದು ನೀವು ಹಾಗಿಬ್ಬರ ಮಾಡಲಾಗದುಒಬ್ಬನೇ ಚಿದಾನಂದನು ಚೇತನಾತ್ಮಕನು3
--------------
ಚಿದಾನಂದ ಅವಧೂತರು
ಊಟ ಮಾಡಿದೆನು ಬ್ರಹ್ಮಾನಂದದ ಊಟವಆರು ಅರಿಯದ ಯೋಗ್ಯರು ಎಂಬ ಊಟ ಪ ಸದ್ಗುರು ಎಂದೆಂಬ ಅನ್ನಪೂರ್ಣ ತಾನುಶುದ್ಧ ಹೃದಯವೆಂಬ ಹರಿವಾಣದೊಳಗೆಸಿದ್ಧನೆಂಬ ನಾನಾ ಭಕ್ಷ್ಯ ಭೋಜ್ಯ ಪಾಯಸವಸಿದ್ಧ ಗುರುವೇ ತಂದು ಎನ್ನ ಮುಂದಿಡಲು1 ಆತ್ಮ ಎಂಬ ಅನ್ನಕ್ಕೆ ಅಷ್ಟಾಂಗ ತೊವ್ವೆಯನು ಹಾಕಿಸ್ವಾತ್ಮ ಸುಖವೆಂದೆಂಬ ತುಪ್ಪವನೆ ಹೊಯ್ದುಆತ್ಮ ನಾನೆರಡಲ್ಲವೆಂಬ ಸಮರಸವ ಕಲಸಿಎತ್ತಿ ಸವಿದೆನು ನಾನು ಅನುಭವದ ತುತ್ತ 2 ಸಾರಾಮೃತವೆಂಬ ಸಾರನೇ ಸುರಿಯುತತೋರುತಿಹ ಚಿದ್ಬಿಂದು ಹಿಂಡಿಯನೆ ನಂಜಿಮೀರಿದಾನಂದಗುಳ್ಹೂರಿಗೆಯ ಮಂಡಿಗೆಯತೋರುವೆಚ್ಚರು ಮರೆತು ಹಾಯೆನುತಲುಂಡು 3 ಹೇಳಬಾರದ ಪರಮಾತ್ಮ ಪರಮಾನ್ನ ಸುರಿದುಮೇಲೆ ಗುರುದಯದ ಉದಕವನೆ ಕುಡಿದುಮೂಲನಾದವ ಘೋಷ ಸುತ್ತೆಲ್ಲ ಪಸರಿಸಲುಗೋಲ ನಾನಾ ತೇಜ ದೀಪ ಬೆಳಕಿನಲ್ಲಿ 4 ಇಂತೂಟವನೆ ಉಂಡು ನಿಜ ತೃಪ್ತಿಯದಾಗೆಅಂತು ಕಳೆದೆನು ಅವಿದ್ಯದ ಕಡು ಹಸಿವನುಚಿಂತಯಕ ಚಿದಾನಂದ ಅನ್ನ ಪೂರ್ಣನು ಎಣಿಸೆಎಂತು ಹೇಳಲಿ ಮರೆತೆ ಸರ್ವವನು ತೃಪ್ತಿಯಲಿ5
--------------
ಚಿದಾನಂದ ಅವಧೂತರು
ಊರ ದೇವರ ಮಾಡಿ ಊರ ಶಾಂತಿಯಾಗಲಿಊರದೇವತೆ ಗುರು ಚಿದಾನಂದ ತಾನೆನುತ ಪ ಶುದ್ಧ ಸುನಾದವೆನಿಸುವ ಡಂಗುರವ ಸಾರಿಸಾಧು ಶಮೆ ದಮೆ ಎಂಬ ಮೊಳಕೆ ಹೊಯ್ದುವೇದಾಂತವೆಂದೆಂಬ ಹಂದರವನೆ ಹಾಕಿವಾದಾತೀತಾತ್ಮದೇವಿಯ ಎದುರುಗೊಂಡು 1 ಹಲವು ನಾದಗಳೆಂಬ ವಾದ್ಯಗಳನೇ ನುಡಿಸಿಬೆಳಗುತಿಹ ತೇಜಃಪುಂಜಗಳ ಮುಟ್ಟಿಸಿಯೆಹೊಳೆಯುತಿಹ ನಾನಾ ಕಳೆ ಬರಿಸು ಬತ್ತಿಯ ಹಚ್ಚಿಬಳಿಕ ಚಿತ್ಕಳೆ ಎಂಬ ದೇವಿಯನು ಮೆರೆಸುತ್ತ 2 ಅಡ್ಡಾಡುವ ಮನವ ಹಿಡಿ ತಂದು ಕಟ್ಟಿದೊಡ್ಡ ಅಹಂಕಾರದ ಕೋಣವನು ಕಡಿಸಿಹೆಡ್ಡ ಕಾಮವದೆಂಬ ಕುರಿಯ ತಲೆ ಕಡಿಸಿಗೊಡ್ಡು ಗುಣಗಳು ಎಂಬ ಚೆರುಗ ಚೆಲ್ಲಿಸುತ್ತ3 ಸಿದ್ಧ ತಾನೆಂದೆಂಬ ಅಡುಗೆಯದು ಆಗಲುಸಿದ್ಧ ಪುರುಷರು ಎಲ್ಲ ಉಣಲು ಕುಳ್ಳಿರೆಶುದ್ಧ ತೃಪ್ತಿಯು ಎಂಬ ಔತಣವು ಮುಗಿಯಲುಅದ್ದಿಸಿರಿ ಆನಂದದಲಿ ಊರ ಜನರ 4 ಊರೆಂಬುದು ನಿಮ್ಮ ದೇಹವೇ ತಿಳಿಯಿರೋಊರ ದೇವತೆ ನೀನು ನಿಜವನರಿಯೋಊರ ದೇವರ ಮಾಡಿ ಆನಂದಪಡೆಯೋಇದಕೆ ತಾ ಸಾಕ್ಷಿ ಚಿದಾನಂದನರಿಯೋ 5
--------------
ಚಿದಾನಂದ ಅವಧೂತರು