ಒಟ್ಟು 79 ಕಡೆಗಳಲ್ಲಿ , 16 ದಾಸರು , 79 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀವಾಸ ಶ್ರೀವಾಸ ಭಜಿಸಿದೆ ನಿನ್ನನು ಪ ತ್ಯಜಿಸಿದಿರೆನ್ನನು ಭವತಾಮರತರು ಕುಜನವಿದೂರ ಅ.ಪ ತಂದೆತಾಯಿ ನಿಜ ಬಂಧು ಸಹೋದರ ನಂದನಾಪ್ತ ನೀನೆಂದು ನಂಬಿದೆ 1 ನಿನ್ನ ಮರೆತು ಬಹು ಜನ್ಮ ಜನ್ಮದೊಳು ಖಿನ್ನವಾಗಿ ನಿಜವನ್ನೆ ಕಾಣದೆ 2 ಕರುಣದಿಂದ ನಿಜ ಚರಣ ಸೇವಕರ ಪೊರೆವ ವ್ಯಾಘ್ರಗಿರಿವರದ ವಿಠಲ 3
--------------
ವೆಂಕಟವರದಾರ್ಯರು
ಸನ್ನುತ ಭೂಲಲಾಮ ರಾವಣಸಂಹರಣ ಅ.ಪ ವಿನುತ ಮರಕತ ಗೋಮೇಧಿಕ ಮಣಿಹಾರಾ | ಸನ್ನುತ ನಿಗಮಾಧಾರಾ || 1 ನಿರುಪಮ ಶೂರಾ ಪುಣ್ಯಶರೀರಾ | ಪರಮೋದಾರಾ ಮಾಂಗಿರಿವರ || 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸರ್ವಸಾರಭೋಕ್ತ ಸಕಲ ಮಂಗಲದಾಯಿ ವೆಂಕಟೇಶ ನಿರ್ವಹಿಸುವವ ನೀನೆ ನಿತ್ಯಕರ್ಮಗಳಿಂದ ವೆಂಕಟೇಶ ಪ. ದೇವರ್ಷಿ ಪಿತೃಗಣರೊಳಗಿದ್ದು ರಾಜಿಪ ವೆಂಕಟೇಶ ಭೂವರರಲ್ಲಿ ವಿಭೂತಿರೂಪನು ನೀನೆ ವೆಂಕಟೇಶ ಸೇವಕ ಜನರನು ಸುಲಭದಿ ಸಲಹುವ ವೆಂಕಟೇಶ ಪಾದ ಪದ್ಮವೆ ಗತಿ ಎಂಬೆ ವೆಂಕಟೇಶ 1 ಇಂದಿರಾಧವ ಯದುನಂದನನೆನಿಸಿದೆ ವೆಂಕಟೇಶ ಸುಂದರ ವಿಗ್ರಹ ಸುಗುಣೇರ ಒಲಿಸಿದೆ ವೆಂಕಟೇಶ ಹಿಂದೆ ಮುನ್ನ ಭವದಂದವನರಿಯೆನು ವೆಂಕಟೇಶ ಮಂದಮತಿಯ ಕರ್ಮಕುಂದನು ಕ್ಷಮಿಸಯ್ಯ ವೆಂಕಟೇಶ 2 ಸ್ವೋದರಗತ ಜಗದಾಧಾರಗುಣನಿಧಿ ವೆಂಕಟೇಶ ಭೂಧರಗಿರಿವರ ಶೋಭಿತ ಮೂರುತಿ ವೆಂಕಟೇಶ ಶ್ರೀಧರಾಕಾಂತ ನಿನ್ನಾಧಾರ ನಂಬಿದೆ ವೆಂಕಟೇಶ3
--------------
ತುಪಾಕಿ ವೆಂಕಟರಮಣಾಚಾರ್ಯ
ಸಲಹುದೈ ಸಲಹುದೈ ಸಲಹುದೈ ಎನ್ನಾ| ನೀ ಸಲಹುದೈ ಪ ಖಚರಜನುತ ರಜನೀಚರ ಕುಲಾರಿ| ಸುಚರಣಾರಾಧಿಪಾನುಚರ ಸಹಕಾರಿ 1 ಕುಮರ ಗೋಪಿಯ ಅಘತಮರವಿ ಶೌರಿ| ಭ್ರಮರ ಶ್ರೀ ಹರಿ 2 ಪರಮ ಸುಖದಾಯಕ ಗಿರಿವರಧಾರೀ| ಗುರು ಮಹಿಪತಿ ಜನ ಪೊರೆವ ಉದಾರಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಾಕು ಜನ್ಮದ ಸುಖವು ಸಾಕಿನ್ನು ಹರಿಯೇ ಪ ಅನೇಕ ಜನ್ಮದ ಸುಖ ಬೇಡ ಹರಿಯೇ ಅ.ಪ ಹದಿನೆಂಟು ಸಾಸಿರ ವಿಧವಿಧ ಜನ್ಮವ ಮೊದಲು ಕಳೆಯುತಲೀಗ ನರನಾಗಿ ಜನಿಸೀ ಕ್ರೋಧ ಲೋಭಗಳಿಂದ ಮದ ಮಾತ್ಸರ್ಯಗಳಿಂದ ಅಧಿಕ ಮೋಹಿತನಾದೆ ಪದುಮಾಕ್ಷ ಪರಂಧಾಮಾ 1 ನರಜನ್ಮ ಹಿರಿದೆಂದು ಅರಿತವÀರು ಪೇಳ್ವರು ಹರಿ ನಿನ್ನ ನುತಿಸಿ ಪಾಡುವ ಭಕ್ತ ಜನಕೆ ಪರಮಪಾತಕ ಗೈದು ನರಕಕೆ ಪೋಪೆನ್ನ ಮರಳಿ ಕಳುಹಲಿಬೇಡ ಧರಣಿಗೆ ದೇವ ದೇವ 2 ನರಕದೆ ಸುಖವುಂಟು ಧರೆಯಲ್ಲಿ ಸುಖವಿಲ್ಲ ಕರುಣಾಕರ ದೇವ ಸಿರಿಕಾಂತನೇ ಧರೆಯೊಳು ನಾನಿಹೆ ಅರೆಘಳಿಗೇ ನಿನ್ನ ಪರಮನಾಮಾವಳಿಯ ಸ್ಮರಣೆಯ ಕೊಡುಸಾಕು 3 ಗಂಗೆಯ ಜನಕನೆ ಮಂಗಳ ಮೂರುತಿ ಮಾಂಗಿರಿವರವಾಸ ಶ್ರೀಶ್ರೀನಿವಾಸ ಅಂಗಜಾತನ ತಾತ ಶೃಂಗಾರ ಪೂರಿತ ಭಂಗ ಮಾಡಿಸಬೇಡ ರಂಗೇಶ ಭವಬೇಡ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಾಕು ಸಾಕು ಬಿಡು ಬಡಿವಾರಾ ನಮ್ಮ ಶ್ರೀಕರ ದಾಸರ ಬಿಡಲಾರಾ ಪ. ಚಂಚಲಾಕ್ಷಿಯೊಳ್ ಚದುರತೆ ತೋರುತ ಮಂಚದ ಮೇಲ್ಕುಳ್ಳಿರಲಂದು ಮಿಂಚಿದ ಮೊರೆ ಕೇಳಿ ಮದಗಜನನು ಕಾಯ್ದ ಪಂಚ ಬಾಣ ಪಿತ ವಂಚಿಸನೆಂದಿಗು 1 ಶಂಭುಮುನಿಯು ಕೋಪಾಡಂಬರವನು ತೋರಿ ಅಂಬರೀಷಗೆ ಶಾಪವ ಕೊಡಲು ನಂಬಿದ ಭಕ್ತ ಕುಟುಂಬಿ ಸುದರ್ಶನ ನೆಂಬಾಯುಧದಿಂದ ಸಂಬಾಳಿಸಿದನು 2 ಎಲ್ಲ ವೇದಶಿರಗಳಲಿ ನೋಡೆ ಸಿರಿ- ನಲ್ಲ ವೆಂಕಟಗಿರಿವರ ಹರಿಗೆ ಎಲ್ಲವು ಸರಿಮಿಗಿಲಿಲ್ಲದೆ ತೋರುವ ಖುಲ್ಲ ದೈವಗಣವಿಲ್ಲೆ ಸೇರುವವು 3
--------------
ತುಪಾಕಿ ವೆಂಕಟರಮಣಾಚಾರ್ಯ
ಸಾಮವೇದವ ಶ್ರುತಿಗೊಳಿಪೆ ಪೂರ್ಣಕಾಮನೆ ಪರಮೇಶ ನೀ ವೇದರೂಪಿಸ್ವರವೆತ್ತಿ ಕರೆವದು ಸಾಮ ಅಗ್ನಿಬರಬೇಕು ಅಧ್ವರಕೆಂಬುದು ನೇಮಬರುವನಗ್ನಿಯು ದೇವಸ್ತೋಮ ಬಂದುಬರುಹಿಯಲಿಹನೆಂಬ ಬಿರಿದು ನಿಃಸೀಮ 1ತರತರದಲಿ ವೇದಗಳನೂ ನೀನುಸುರಿಯೆ ಸಹಾಯವ ಮಾಡಿ ಯಜ್ಞವನುಧ್ಧರಿಸಿದೆ ಧರ್ಮವರ್ಧನನು ಮೂರುಬೆರಸಲು ನಿಗಮವು ಮುಖ್ಯವೆಂದಿದನು 2ಮೂರು ಶ್ರುತಿಗಳೇಕದಲ್ಲಿ ಕ್ರತುವಪೂರಿತವನು ಮಾಡಿ ಕಾಲಕಟ್ಟಲೆಯಲಿಸೇರಿಸಿ ತಿರುಪತಿಯಲ್ಲಿ ನೀನೆತೋರಿದೆ ವೆಂಕಟಗಿರಿವರದಲ್ಲಿ 3ಓಂ ತ್ರಿಭಂಗಿನೇ ನಮಃ
--------------
ತಿಮ್ಮಪ್ಪದಾಸರು
ಸಾರಸಭವ ಮೋಹಿತೆ ದೇವಿ ಜಗನ್ಮಾತೆ ಪ ಚಾರುಕೀರ್ತಿ ಪರಿಶೋಭಿತೆ ಲಾವಣ್ಯಾಂಬರಭೂಷಿತೆ ಅ.ಪ ಸುರನುತೆ ಶಾರದೆ ಬುಧಗಣಸೇವಿತೆ ಮಯೂರರಂಜಿತೆ ವರ ಮಾಂಗಿರಿವರ ಭಾವಿತೆ ಪಾಹಿಮಾಂ ಲೋಕವಂದಿತೆ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸೇವಾಂ ದೇಹಿ ಚಂದ್ರಶೇಖರ ಸೇವಾಂ ದೇಹಿ ಸೇವಾಂ ದೇಹಿ ಸದಾವನತಾಖಿಲ ಜೀವ ದುರಿತಹರ ಪ ಪಾವನಚರಿತ ಸುರಾವಳಿ ಮುನಿಗುಣ ಭಾವಿತಚರಣ ಸುಪಾವಕ ನಯನಾ ಅ.ಪ ತುಂಬುರು ಗಾನವಿಡಂಬನ ಸುರಸರಿ ದಂಬುಕ ಭಕ್ತ ಹೃದಂಬುಜ ಭಾನೋ 1 ಪುರಹರ ಮುರಹರಧರ ಕರುಣಾಕರ ನರ ವರದಾಯಕ ನಿರುಪಮ ಹಿಮವದ್ ಗಿರಿವರಚಾಪ ಕು ಧರಜ್ಯಾಕರುಷಣ ಪರಮಕೃಪಾಳೋ 2 ಶಿವ ಶಿವ ಶಂಕರ ಭುವಿಭೂಧರವರ ಶಿವಗಂಗಾಧಿಪ ಭವ ಗಂಗಾಧರ ಅವ ಮಾಂ ಲಕ್ಷ್ಮೀಧವ ವೆಂಕಟ ಸಖದಿವಿಭವ ವಂದ್ಯಾ 3
--------------
ತಿಮ್ಮಪ್ಪದಾಸರು
ಸೈ ಸೈ ಶರಣಾಗತ ವತ್ಸಲ ನೀ ನೋಯಿಸಬಂದಸುರೆಗೆ ನಿರ್ಮಲ ಸುಖವಿತ್ತಿ ಪ. ಬೆನ್ನಿನ ಮೇಲೆ ಬೆಟ್ಟವ ಪೊರಿಸಿದ ಸುರ- ರನ್ನು ಕಾಪಾಡಿ ಸುಧೆಯನುಣಿಸಿದಿ ನೀ 1 ಹಂಜಿಯಂದದಿ ತಲೆ ನರತಿಹ ಬ್ಯಾಡತಿ ನಿರಂಜನ ಮೂರುತಿ2 ಅಟ್ಟಿ ಬರುತ ನಿನ್ನ ಕಟ್ಟಿದ ಗೋಪೆಗೆ ಪೊಟ್ಟೆಯೊಳಿಹ ಸರ್ವ ಲೋಕವ ತೋರಿದಿ 3 ಅಗ್ರಜ ಭಾರ್ಯಳನುಳುಪಿ ಕೊಲ್ಲಿಸಿದಂಥ ಸುಗ್ರೀವನ ಕೂಡೆ ಸಖ್ಯವ ಬೆಳಸಿದಿ 4 ಪಾತಕಿ ಪತಿಯಾದ- ಜಾಮಿಳನನು ತನ್ನ ನಿಲಯಕೆ ಕರೆಸಿದಿ 5 ವಿಧ ವಿಧದನ್ನವ ಕುರುಪತಿಯಲಿ ಬಿಟ್ಟು ಕುಡುತೆ ಪಾಲುಂಡುವ 6 ಕಂಡವರನು ಕೊಂದಿಹ ಕ್ರೂರನ ಮುನಿ ಮಂಡಲದಲಿ ಪ್ರಚಂಡನೆಂದೆನಿಸಿದಿ 7 ಕುಂತಿಯ ಕುವರನ ಕುದುರೆಯ ನಡೆಸುತ ಅಂತರಂಗ ಸಖ್ಯವ ಬೆಳೆಸಿದಿ ನೀ 8 ಖುಲ್ಲ ಚೇಷ್ಟೆಯ ಮಾಡಿ ಕಲ್ಲಾಗಿ ಬಿದ್ದ ಅ- ಹಲ್ಯೆ ಪತಿವ್ರತೆ ಎಂಬ ಬಿರುದ ಕೊಟ್ಟ್ಟಿ 9 ತಂದೆಯ ಕೊಲ್ಲಬೇಕೆಂದು ಸನ್ನಹಗೈದ ಕಂದನ ಸ್ವಾಂಕದೊಳಂದು ಕುಳ್ಳಿರಿಸಿದಿ 10 ಎಷ್ಟೊ ಪಾಪಗಳಟ್ಟುಳಿ ಬಿಡಿಸಿರೆ ಭ್ರಷ್ಟನೆಂದೆನ್ನೊಳು ನಿಷ್ಠುರವ್ಯಾತಕೆ 11 ಪನ್ನಗ ಗಿರಿವರ 12
--------------
ತುಪಾಕಿ ವೆಂಕಟರಮಣಾಚಾರ್ಯ
ಸ್ವಾಮಿ ಯಾತಕೆನ್ನೊಳುಪೇಕ್ಷೆ ಮಾಡುವಿ ದೀನನಾಥ ಸುಮ್ಮನೆ ನಿಂತು ನೋಡುವಿ ಪ. ನಡೆವನ ಕಣ್ಣ ಕಟ್ಟಿ ಕೆಡಹುವುದುಚಿತವೆ ಒಡೆಯ ನಿನ್ನಡಿಗಳ ಪೊಗಳುವ ಪಾಡಿ ನುಡಿವ ಕಾರ್ಯಕೆ ಬಾಡಿ ಬಳಲುತ ನಾ ನಿತ್ಯ ನೋಡುತ ಬಡವನ ಬಿಡದಿರು ಕಡಲಶಯನ ನಿಜ ಮಡದಿ ಸಹಿತನಾಗಿ ಶ್ರೀಶನೆ ಕೃಪೆ ಕಂಜಕರ ಶ್ರೀನಿವಾಸನೆ1 ಭಾವಜ ಪಿತ ನಿನ್ನ ಸೇವೆ ಮಾಳ್ಪರಿಗೆಂದು ನೋವ ನೀಡದೆ ಕಾವ ಬಿರುದನು ಭವ ಸಾರÀ ನೀ ಮರೆವುದು ನೀತಿಯೆ ಎನ್ನ ನೀ ವಿಧ ಮಾಳ್ಪುದು ಖ್ಯಾತಿಯೆ ಪಾವನ ಚರಿತ ಪುರಾಣ ಪುರುಷ ಮಹ ದೇವ ನೀ ಕರಪಿಡಿದೆನ್ನನು ಕರು- ಣಾವಲಂಬನವಿತ್ತು ಪೊರೆವುದು 2 ದುರುಳ ಭಾವನೆಯಿಂದ ಸರಿದು ಹೋಗುವ ಪಂಚ ಕರಣಕೆ ನೀನರಸನಲ್ಲವೆ ಭಕ್ತಾ- ಭರಣಕೆ ನಿನ್ನೊಳಿರಿಸು ಮಾರ್ಗವನಂತ:- ಕರಣಕೆ ತರಿದು ಪಾಪಗಳನು- ದ್ಧರಿಸೆನ್ನ ವೆಂಕಟಗಿರಿವರ ದೀನಾರ್ತಿ ಚಕ್ರಧರ ಸಕಲಾನಂದ ಕಾರಣ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹೆತ್ತವರಿಗೆರವಾಗಿ ಹೆರವರಿಗೆ ಮಗನಾಗಿ ಚಿತ್ತದೊಳು ನಲಿವವನೆ ಮತ್ತನಿವನೆ ತುಂಟತನದೊಳಗೆ ಸರಿಯುಂಟೆ ಈತಗೆ ಜಗದಿ ನಂಟರನು ಗೋಳಿಡುವ ತುಂಟನಿವನೆ ವಂಚಕರಿಗೆಲ್ಲರಿಗೆ ಸಂಚಕಾರವ ಕೊಡುವ ಚಂಚಲಾಕ್ಷಿಯರನ್ನೆ ವಂಚಿಸಿರುವ ಮಾನವರೊಳಿಂತಪ್ಪ ಮಾನಿಯಂ ನಾನರಿಯೆ ಮೀನಾಂಕ ಸಮರದೊಳ್ ಜಾಣನಿವನೆ ಜಾರರೋಳ್ ಕಡುಶೂರ ಮಾಯಕಾರ ಚೋರತನದೊಳು ವೀರ ಭಯವಿದೂರ ದಾರಿಕಾಯಲು ಧೀರ ಧೈರ್ಯಸಾರ ಮಾರಪಿತ ಶೇಷಗಿರಿವರನೆ ನೀರ
--------------
ನಂಜನಗೂಡು ತಿರುಮಲಾಂಬಾ
ಕಂಡೆ ತಿರುಪತಿ ವೆಂಕಟೇಶನಕಾರಣಾತ್ಮಕಸಾರ್ವಭೌಮನಕಾಮಿತಾರ್ಥವನೀವ ದೇವನ ಕರುಣನಿಧಿಯೆಂದೆನಿಸಿ ಮೆರೆವನ ಪಕೋಟಿ ಸೂರ್ಯ ಪ್ರಕಾಶವೆನಿಪ ಕಿರೀಟವನು ಮಸ್ತಕದಿ ಕಂಡೆನುನೋಟಕ್ಕಚ್ಚರಿಯೆನಿಪ ನಗೆಮೊಗನೊಸಲೊಳಗೆ ತಿರುಮಣಿಯ ಕಂಡೆನುಸಾಟಿಯಿಲ್ಲದ ಶಂಖ-ಚಕ್ರವ ಚತುರ ಹಸ್ತದಲೀಗ ಕಂಡೆನುಬೂಟಕದ ಮಾತಲ್ಲ ಕೇಳಿ-ಭೂರಿದೈವದ ಗಂಡನಂಘ್ರಿಯ 1ತಪ್ಪುಗಾಣಿಕೆ ಕಪ್ಪುಗಳನು ಸಪ್ತಲೋಕಗಳಿಂದ ತರಿಸುವಉಪ್ಪು ವೋಗರವನ್ನು ಮಾರಿಸಿಉಚಿತದಿಂದಲಿ ಹಣವ ಗಳಿಸುವ ||ಇಪ್ಪತ್ತು ದುಡ್ಡಿಗೆ ಸೇರು ತೀರ್ಥವ ಒಪ್ಪದಿಂದಕ್ರಯ ಮಾಡಿ ಕೊಡಿಸುವಸರ್ಪಶಯನನ ಸಾರ್ವಭೌಮನ ಅಪ್ಪವೆಂಕಟರಮಣನಂಘ್ರಿಯ 2ಉರದಿ ಶ್ರೀದೇವಿ ಇರಲು ಕಂಡೆನುಉನ್ನತದ ಕೌಸ್ತುಭವ ಕಂಡೆನುಗರುಡಕಿನ್ನರನಾರದಾದಿಗಳಿರಲು ಎಡಬಲದಲ್ಲಿ ಕಂಡೆನು ||ತರತರದಿ ಭಕ್ತರಿಗೆ ವರಗಳ ಕರೆದುಕೊಡುವುದ ನಾನು ಕಂಡೆನುಶರಧಿಶಯನನ ಶೇಷಗಿರಿವರಸಿರಿಪುರಂದರವಿಠಲನಂಘ್ರಿಯ3
--------------
ಪುರಂದರದಾಸರು
ಜಯ ಜಯತು ಹನುಮಂತ ಪವಿತ ಸಿಖ ಸಹಜಾತಜಯತು ಕಪಿರಾಜ ಯುವರಾಜ ಯತಿರಾಜ ಜಯತು ಪ.ಸುರರಿಗುತ್ತಮ ಜಗದಾಭರಣ ಶಿರೋಮಣಿ ಜಯತುಪರಮಅದ್ಭುತಚರಿತ ಸುವಟು ಜಯತುಧರಜೆಶೋಧಕ ನಿಶಾಚರಪುರದಹಕ ಜಯತುಜಯತು ವೈರಾಗಿ ಮಹಭೋಗಿ ಶುಭಯೋಗಿ ಜಯತು 1ಸುರರಿಪುಮಥÀನ ರಾಮಕಾರ್ಯಧುರಂಧರ ಜಯತುಚಿರಪ್ಲವಗ ಭವರೋಗಭೇಷಜ ಜಯತುಕರಿರಕರ್ಣ ದಶಮುಖಾಂಗ ಗಿರಿವರಕುಲಿಶ ಜಯತುಜಯತು ಅಕ್ಷಹರ್ತಾ ಕ್ರತುಕರ್ತಸುಖತೀರ್ಥಜಯತು2ತ್ರಿಕೋಟಿ ಪವನಾಖ್ಯರೂಪ ಪ್ರಕಟಾಪ್ರಕಟ ಜಯತುಅಕಳಂಕಾಮಿತರೂಪ ಮುಖ್ಯೇಶ ಜಯತುಶ್ರೀಕರ ಪ್ರಸನ್ವೆಂಕಟ ರಘುವೀರಾನುಮತ ಮತ ಜಯತುಜಯತು ಪರಸಿದ್ಧ ಬಕಮರ್ದ ಗುರುಮಧ್ವ ಜಯತು 3
--------------
ಪ್ರಸನ್ನವೆಂಕಟದಾಸರು
ಜಯಭೋ ಜಯಭೋ ಜಯ ವೆಂಕಟೇಶ ಪ್ರಭೊಜಯಕರ್ತಾ ಭಯಹರ್ತಾಭಯದಾಯಕ ಮೂರ್ತೆ ಪ.ಫಣಿಗಿರಿವರ ಫಣಮಂದಿರ ಪ್ರಣತಮನೋಹರಘನಸದ್ಗುಣಗಣಪೂರ್ಣಘನಶಾಮಲವರ್ಣಮನ್ಮಾನಸ ಮುನಿತಾಪಸ ಮನೋಮಾನಸ ಹಂಸದನುಸುತಹರ ಧನುಸಂಹರ ದಿನಮಣೀಶ ರುಚಿರ 1ವನಜಾಕ್ಷಾವನಿಜಾಂತಕ ವನಜಾಸನ ಜನಕಕನಕಾಕ್ಷಹ ಕನಕಾಲಯ ಕನಕಸ್ತ್ರೀಪ್ರಿಯವನಭ್ರಮಣಾವನಿರಮಣ ವಿನತಾತ್ಮಜಗಮನಅನಿಮಿತ್ತಜ ಅನಸೂಯಜ ಅನಿಮಿಷೇಂದ್ರಾನುಜ 2ಅರಿಧರಧರ ಅರಿಪರಿಹರ ಅರುಣಾಂಬರಧರಚಿರಮಣಿ ರುಚಿರಾಭರಣಾನುಚರಸುರತರುವೀರಸುರಪರಮಾಪ್ತನೆ ಸಾಸಿರ ಕ್ರೀಡಾಶ್ಚರ್ಯಗಾರಕಲಿಕಲುಷಹರ ಕರುಣಾಕರ ಪ್ರಸನ್ವೆಂಕಟೇಶ್ವರ 3
--------------
ಪ್ರಸನ್ನವೆಂಕಟದಾಸರು