ಒಟ್ಟು 77 ಕಡೆಗಳಲ್ಲಿ , 28 ದಾಸರು , 68 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುಪ್ಪಿನ ಗಂಡನ ಒಲ್ಲೆನೆ |ತಪ್ಪದೆ ಪಡಿಪಾಟ ಪಡಲಾರೆನವ್ವ............ ಪ.ಉದಯದಲೇಳಬೇಕುಉದಕ ಕಾಸಲು ಬೇಕು |ಹದನಾಗಿ ಬಜೆಯನು ಅರೆದಿಡಬೇಕು ||ಬದಿಯಲಿ ಎಲೆ ಅಡಿಕೆ ಕುಟ್ಟಿಡಬೇಕು |ಬಿದಿರಕೋಲು ತಂದು ಮುಂದಿಡಬೇಕು 1ಪಿತ್ತವೋಕರಿಕೆ ಮುದುಕರಿಗೆ ವಿಶೇಷವು |ಹೊತ್ತುಹೊತ್ತಿಗೆ ಜೊಲ್ಲ ಚೆಲ್ಲಬೇಕು ||ಮೆತ್ತನವೆರಡು ಮುದ್ದಿಯ ಮಾಡಲುಬೇಕು |ಒತ್ತೊತ್ತಿ ಕೂಗಿ ಕರೆಯಲುಬೇಕು ....... 2ಜಾಡಿ ಹಾಸಬೇಕು ನೋಡಿ ಬಾಡಬೇಕು |ಅಡಗಡಿಗೆ ಕಣ್ಣೀರ ಸುರಿಸಬೇಕು ||ಒಡೆಯ ಶ್ರೀ ಪುರಂದರವಿಠಲನ ನೆನೆಯುತ |ಮಿಡಿಗೊಂಡು ಮೂಲೆಗೆ ಒರಗಬೇಕು 3
--------------
ಪುರಂದರದಾಸರು
ವನಜನಾಭನ ಧಾಳಿ ಘನವಾಯಿತಿಂದಿಲಿಂದಮನೆಯೊಳು ನಿಲ್ಲಲಾರೆವಮ್ಮ ಪಚಿನ್ನನ ಸುದ್ದಿನಿತ್ಯಹೇಳುವರು ಹತ್ತರಗೂಡಾ |ಹನ್ನೊಂದೆನ್ನ ಬೇಡವಮ್ಮ ||ಅನ್ಯಾಯದ ಮಾತುಹುಸಿಹುಟ್ಟಿಸಿಯಾಡಿದರೆ ನಮ್ಮ |ಸಣ್ಣವರಾಣೆ ಗೋಪೆಮ್ಮ 1ಪೋರರಾಟಿಕೆಯಾದರೆ ಜನನೋಡೆ ನಿರ್ಭಯದಿ |ಕ್ಷೀರವ ಕುಡಿಯಬೇಕಮ್ಮ ||ಆರೂ ಮನೆಯೊಳಿಲ್ಲದ ಸಮಯದಲ್ಲಿ ಪಾಲು |ಸೋರೆ ಕದ್ದೊಯ್ಯುತಿದ್ದನಮ್ಮ2ಚಿಕ್ಕವರನ್ನು ರಂಬಿಸಿ ಸಕ್ಕರೆ ಕೊಟ್ಟು ಕದ್ದು |ರೊಕ್ಕವ ತನ್ನಿರೆಂಬುವನಮ್ಮ ||ಮಕ್ಕಳಾಟಿಕೆ ಆದರಾಯಿತೆ ನಿನ್ನ ಕಂದ |ರೊಕ್ಕವನೇನು ಮಾಡ್ಯಾನಮ್ಮ 3ಏಕಾಂತ ಮನೆಯೊಳು ಸರು ಹೊತ್ತಿನಲ್ಲಿ ಬಂದು |ಶ್ರೀಕಾಂತನಡಗಿದ್ದನಮ್ಮ ||ಹೇ ಕಾಂತೆ ನಿನ್ನ ಸಲಿಗಿಲ್ಲದೆಂತು ಬಂದನೆಂದು |ಆ ಕಾಂತ ಸಂಗ ಬಿಟ್ಟನಮ್ಮ 4ನೀರೊಳು ನೆರಳೆಂದು ತಿಳಿಯದ ಮಗುವಿಗೆ |ಪೋರನೆಳೆದು ತಾಯಂಬೊನಮ್ಮ ||ಹಾರುತಿರಲು ಸ್ವಾಮಿಯ ದಯೆಯಿಂದ ಕಂಡು ಒಬ್ಬ |ನಾರಿ ಕರಕೊಂಡು ಬಂದಳಮ್ಮ 5ತರಳರಿಗೆಲ್ಲ ಇದರಂತೆ ಹತ್ತಿರೆಂದು ಹೇಳಿ |ಹರಿವಂದು ಹತ್ತಿಕೊಂಬೊನಮ್ಮ ||ಕರುಗಳೆಲ್ಲವು ಹೀಗೆ ಹತವಾಗಿ ಪೋಪವು |ತುರುಗಳ ಗಡಹವಮ್ಮ6ಬಾಲನ ಮನೆಯೊಳಗಿರ ಹೇಳಿ ಉದಕವ |ವಾಲಯಕೆ ತರಹೋದೆನಮ್ಮ ||ಮೂಲೇಶ ಹುಡುಗನ ಕೈಯಕಟ್ಟಿಮನೆಯೆಲ್ಲ |ಹಾಳು ಮಾಡಿಯೇನೋ ತಂದನಮ್ಮ 7ಹುಡುಗರ ಅಂಬೆಯಾಗಿಯೇರಿಸಿಕೊಂಡಾಡಿಸಿ |ಕೆಡಹಿ ಕೈಕಾಲು ಮುರಿದನಮ್ಮ ||ಬಡವರೆಂದರೆ ಪುನಃ ಬಿಡದಲೆ ತಾ ಹತ್ತಿ |ನಡುವ ನೋಯಿಸೀಹ ನೋಡಮ್ಮ 8ಬಾಲೆ ಅದೇನು ಕಾರಣವೋ ತಿಳಿಯದು ನಮ್ಮ |ಮೂಲೆಯಲಡಗಿದ್ದನಮ್ಮ ||ಛೀ ಲಕುಮೀಶ ನಡೆಯೆಂದೆ ಕೈ ಸಂಧಿಸದಾಕಳ |ಮೊಲೆ ಉಂಡಿದ್ದನಮ್ಮ 9ಗಂಡಅತ್ತೆಯ ಮನೆಘೋಗಿ ನಡುವ ಹೆಣ್ಣಾ |ಪುಂಡ ಬಂದಪ್ಪಿಕೊಂಡನಮ್ಮ ||ಕಂಡು ನಾನಿದು ತರವೇನೆಲೆ ರಂಗಾಯೆನ್ನಲು |ಭಂಡು ಮಾಡಿದನು ನೋಡಮ್ಮ 10ಭ್ರಷ್ಟ ಮಾತಲ್ಲವೆ ಬಾಣಂತಿ ಮಂಚದಡಿ ಕೆಂಡ- |ವಿಟ್ಟರೆ ಕಾಸಿಕೊಂಡನಮ್ಮ ||ಥಟ್ಟನೆ ಕಂಡಂಜಿ ಪ್ರಾಣಾಂತಿಕ ಆಯಿತು ಪ್ರಾಣೇಶ |ವಿಠಲನಿಂಥವ ಕಾಣಿರಮ್ಮ 11
--------------
ಪ್ರಾಣೇಶದಾಸರು
ವೃಂದಾವನದೇವಿ ನಮೋನಮೋ-ಚೆಲ್ವ-|ಮಂದರಧರನ ಮನಃ ಪ್ರಿಯಳೆ ಪನಿನ್ನ ಸೇವಿಸಿ ಉದಕವನು ಎರೆಯಲು |ಮುನ್ನ ಮಾಡಿದ ಪಾಪವಳಿಯುವುದು ||ಎನ್ನ ಇಪ್ಪತ್ತೊಂದು ಕುಲದವರಿಗೆ ಎಲ್ಲ |ಉನ್ನತ ವೈಕುಂಠಪದವೀವಳೆ 1ಒಂದೊಂದು ದಳದಲಿ ಒಂದೊಂದು ಮೂರುತಿ |ಸಂದಣಿನೆವೆ ಬಹು ಗುಪಿತದಲಿ ||ಬಂದು ಕುಂಕುಮ ಶಂಖಚಕ್ರವಿರಿಸಿದರೆ |ತಂದೆ ನಾರಾಯಣ ಕರೆದೊಯ್ಯುವ 2ಹರಿಗೆ ಅರ್ಪಿಸಿದ ತುಳಸಿ ನಿರ್ಮಾಲ್ಯವ |ಕೊರಳೊಳು ಧರಿಸಿ ಕರ್ಣದೊಳಿಟ್ಟರೆ ||ದುರಿತರಾಶಿಗಳೆಲ್ಲ ಅಂಜಿ ಓಡುವುವು ಶ್ರೀ-|ಹರಿಯು ತನ್ನವರೆಂದು ಕೈಪಿಡಿವ 3ಹತ್ತು ಪ್ರದಕ್ಷಿಣಿ ಹತ್ತು ವಂದನೆ ಮಾಡೆ |ಉತ್ತಮ ವೈಕುಂಠ ಪದವೀವಳು ||ಭಕ್ತಿಯಿಂದಲಿ ಬಂದು ಕೈಮುಗಿದವರನು |ಕರ್ತೃನಾರಾಯಣ ಕರೆದೊಯ್ವನು 4ಆವಾವ ಪರಿಯಲಿ ಸೇವೆಯ ಮಾಡಲು |ಪಾವನ ವೈಕುಂಠಪದವೀವಳೆ ||ದೇವ ಶ್ರೀಪುರಂದರವಿಠಲರಾಯನ |ದೇವಿ ನಿನ್ನ ಮುಟ್ಟಿತ್ರಾಹಿಎಂಬೆ5
--------------
ಪುರಂದರದಾಸರು
ಶೋಭನವೇ ಶೋಭನವೇಶೋಭನ ಗುರುವಿಗೆ ಬಗಳಾಂಬಳಿಗೆಪಉರಿಬಿಟ್ಟಗ್ನಿಯು ಇಲ್ಲದಂತೆಉರಿಯು ಅಗ್ನಿಯು ಒಂದೆಂಬಂತೆಗುರುವು ಬಗಳಾಂಬನು ತಾನು ಕೂಡಿಯೆತರಣಿಶತಕೋಟಿಯಲಿ ಹೊಳೆಯುತಿದೆ1ಬಂಗಾರದಿ ಮಾಡಿಹ ಒಡವೆಗಳಂತೆಬಂಗಾರ ಒಡವೆ ಒಂದೆ ಎಂಬಂತೆಮಂಗಳಗುರುಬಗಳಾಂಬನು ಕೂಡಿಯೆತಿಂಗಳ ಶತಕೋಟಿಯಲಿ ಹೊಳೆಯುತಿದೆ2ತೆರೆ ಬಿಟ್ಟ ಉದಕವು ಇಲ್ಲದಂತೆತೆರೆ ಉದಕವು ಒಂದೆಂಬಂತೆಗುರುಚಿದಾನಂದ ಶ್ರೀ ಬಗಳೆ ಕೂಡಿಯೆಶರಣರ ಹೃದಯದಿ ಥಳಥಳಿಸುತಿರೆ3
--------------
ಚಿದಾನಂದ ಅವಧೂತರು
ಶ್ರೀ ಪ್ರಸನ್ನ ಶ್ರೀನಿವಾಸದಾಸರ ಶ್ರೀಹರಿ ಪ್ರಾದುರ್ಭಾವಗಳುಪ್ರಸನ್ನ ಶ್ರೀ ಮತ್ಸ್ಯಾವತಾರ4ಲೀಲಾವತಾರನೇ ಪ್ರಳಯಾಬ್ದಿ ಸಂಚರನೇಮಾಲೋಲ ಸುಖಚಿತ್ ತನು ಮತ್ಸ್ಯರೂಪಬಾಲಾರ್ಕ ಕೋಟ್ಯಮಿತ ಜ್ಯೋತಿರ್ಮಯ ಸುಂದರನೇಕಾಲಗುಣದೇಶ ಅಪರಿಚ್ಛಿನ್ನ ಪೂರ್ಣ ಸುಗುಣಾರ್ಣವನೇ ಶರಣು ಪಪ್ರಳಯದಲಿ ಭೂರಾದಿ ಲೋಕಂಗಳುಮುಳಗಿರಲು ಹುಯಗ್ರೀವನಾಮ ದಾನವನುಸೆಳೆದು ವೇದಗಳ ತನ್ನೊಳ್ ಅಡಗಿಸಿದ್ದವನಸೀಳ್ದಿ ನೀ ಬಂದು ವೇದೋದ್ಧರನೇ ಮತ್ಸ್ಯ 1ಗೋವಿಪ್ರಸುರ ಸಾಧು ಜನರ ವೇದಂಗಳ-ಕಾವಸರ್ವೇಶ್ವರನೇ ಪುರುಷಾರ್ಥದಾತಸರ್ವರಿಗೂ ಸುಖವೀವುದು ನಿನ್ನ ಸುಚರಿತ್ರೆಶ್ರೀವರನೇ ಮತ್ಸ್ಯರೂಪಿಯೇ ಶರಣು ಶ್ರೀ ಕೃಷ್ಣ 2ಹಂಸ ಐರಾವತ ತಿತ್ತಿರಾ ಶುಕಗಳುಈ ಪಕ್ಷಿಗಳಲ್ಲಿ ತರತಮ ಉಂಟುಸುಸುಖ ಐಶ್ವರ್ಯೋನ್ನಾಹ ಅದರಂತೇವೇಈ ಸುನುಡಿಗಳ ಪಠನ ಮಾಳ್ಪ ಸುಜನರಿಗೆ 3ಗುರುರ್ಗುರ್ರೋಗುರುಮನುಶುಕಮಧ್ವಾಂತಸ್ಥಪರಮಾತ್ಮಹರಿವಿಷ್ಣೋ ಉದ್ದಾಮಸಾಮಅರದೂರಅನಂತೋರು ನಿಜಶಕ್ತಿ ಪರಿಪೂರ್ಣಉರು ಸುಗುಣ ನಿಧಿಯೇ ಶಫರಿರೂಪ ಮಾಂಪಾಹಿ 4ಸರ್ವೋತ್ತಮನು ನಾರಾಯಣನೇ ಎಂದರಿತುದ್ರವಿಡ ದೇಶಾಧಿಪನು ಸತ್ಯವ್ರತರಾಯಸುವಿವೇಕದಿ ನಿನ್ನ ಕುರಿತು ತಪವಚರಿಸಿದನುಭಾವಶುದ್ಧನು ಸಲೀಲಾಶನ ದೃಢವ್ರತನು5ವಿವಸ್ವಾನ್ ಮಗ ಶ್ರಾದ್ಧದೇವನು ಪ್ರಖ್ಯಾತವೈವಸ್ವತಮನುವೇ ಇಂದಿನ ಮನುವುಪೂರ್ವದಲಿ ಈತನೇ ಸತ್ಯವ್ರತ ಸಾಮ್ರಾಟ್0ಅವನಿಗೆ ನಮೋ ಎಂಬೆ ನಿನ್ನವನೆಂದು 6ರಾಜ ಋಷಿ ಈ ಮಹಾನ್ ಕೃತಮಾಲಾ ನದಿಯಲ್ಲಿನಿಜ ಭಕ್ತಿಯಿಂದ ಜಲತರ್ಪಣವ ಚರಿಸೆಅಂಜಲಿಉದಕದಲಿ ಮುದ್ದು ಮರಿ ಮೀನೊಂದುಸರಿಜ್ಜಲ ಸಹಿತದಿ ಬಂದದ್ದು ಕಂಡ 7ಅರಸ ಕರುಣದಲಿ ಅದನು ನದಿಯಲಿ ಬಿಡಲಿರೆಅರುಹಿತು ತನ್ನ ವೃತ್ತಾಂತವ ಆ ಮೀನುಪರಿಪರಿಯಾಗಿ ತನ್ನ ಸಜಾತೀಯರ ಭಯ ತನಗೆ ಎಂದುನೀರು ಪ್ರವಾಹದಲ್ಲಿ ತನ್ನ ಬಿಡಬೇಡವೆಂದು ಪ್ರಾರ್ಥಿಸಿತು ರಾಜನ್ನ 8ನಾರಾಯಣಾದಿ ಸುಮಂತ್ರಿತ ಅಭಿಯಂತ್ರಿತ ತನ್ನಸ್ಫುರತ್ ಕಲಶ ಕಮಂಡಲು ನೀರಲ್ಲಿ ಮೀನು ಮರಿ ಇಟ್ಟುಕೊಂಡುಆಶ್ರಮಕೆ ಕೃತ ಕೃತ್ಯ ಮನದಿ ರಾಜನು ಬಂದಮರುದಿನ ಉದಯದಲಿ ಕಂಡ ಆಶ್ಚರ್ಯವ 9ಕಮಂಡಲ ಕಲಶ ಪೂರಾವು ಏಕ ರಾತ್ರಿಯಲ್ಲೇವೇಆಮತ್ಸ್ಯಮರಿ ಬೆಳೆದಿದ್ದು ಆಶ್ಚರ್ಯ ಕಂಡಕಮಂಡಲು ಸಾಲದೇ ವಿಸ್ತಾರವಾದ ಸ್ಥಳನಿರ್ಮಾಣ ಮಾಡಿ ನೀರು ತುಂಬಿಸಿ ಅದರೊಳ್ ಮೀನನ್ನ ಬಿಟ್ಟ 10ಉದಕತುಂಬಿದ ಕುಂಟೆ ಸರೋವರವನ್ನುಮತ್ಸ್ಯವು ಪೂರ್ಣ ವ್ಯಾಪಿಸಿದ ಆಶ್ಚರ್ಯಅತಿಶಯ ಲೀಲಾ ವಿನೋದವ ಕಂಡ ರಾಜಉದಧಿಯಲಿ ಬಿಡಲು ನಿಶ್ಚಯಿಸಿ ಕ್ರಮಗೊಂಡ 11ಮಹೋದಧಿಯಲ್ಲಿರುವ ಮಕರಾದಿಗಳು ತನ್ನ ನುಂಗುವನೆಂದುಮಹಾರಾಜನಿಗೆ ಆ ಮೀನು ಹೇಳಿ ತಾನುಆದರೂ ರಾಜನು ಅಷ್ಟರಲ್ಲೇ ಉದಧಿಯೊಳು ಬಿಟ್ಟನುಮೀನನ್ನು ಆಗ ದೊಡ್ಡ ಆಶ್ಚರ್ಯವೊಂದನ್ನ ಕಂಡ ಆಮೀನು ಮತ್ತೂ ದೊಡ್ಡದಾಯಿತು 12ಶತಯೋಜನ ಮಹಾವೀರ್ಯ ಜಲಚರಗಳುಯಾವುದೂ ಕಂಡಿಲ್ಲ ಕೇಳಿಲ್ಲ ಜಗದಿಅತಿ ಅದ್ಭುತ ಮಹಾ ಮೀನರೂಪನು ಸಾಕ್ಷಾತ್ಉದಧಿಶಾಯಿ ಶ್ರೀಮನ್ನಾರಾಯಣ ನೀ ಎಂದ 13ಜೀವರುಗಳಿಗೆ ಅನುಗ್ರಹ ಮಾಡಲಿಕ್ಕೇವೇದೇವ ನೀ ಮತ್ಸ್ಯರೂಪ ಪ್ರಕಟಿಸಿರುವಿಕಾವಕಾರುಣಿಯೇ ಪುರುಷಶ್ರೇಷ್ಠ ಸರ್ವೋತ್ತಮನೇಸರ್ವದಾ ನಮೋ ಜಗಜ್ಜ£್ಮ್ಞಧಿಕರ್ತ14ಶ್ರವಣ ಸಂಸ್ತುತಿಸಿ ಮನನ ಧ್ಯಾನಾದಿಗಳು ಮಾಡಿಶ್ರೀವರನೇ ನಿನ್ನ ಮಹಾತ್ಮ್ಯಾ ಜ್ಞಾನಪೂರ್ವಕ ನಿನ್ನಲ್ಲಿ ಸುಸ್ನೇಹರತನಾದವಿವೇಕಿ ಪ್ರಪನ್ನರ ಸಲಹಿಗತಿಈವಿ15ಯಥಾರ್ಥ ಜ್ಞಾನವ ಭಕ್ತಿಮಾನ್ ರಾಜನು ಸ್ತುತಿಸಲುಮುದದಿಂದ ಇನ್ನೂನು ನಿನ್ನವೃತತಿಜೇಕ್ಷಣ ಜಗತ್ಪತಿಯೇ ನೀನು ಆಮತಿವಂತನಿಗೆ ಪೇಳಿದಿ ಅವತಾರಕಾರ್ಯ 16ಏಳುದಿನವಾಗಲು ಭೂರಾದಿ ಲೋಕಗಳುಪ್ರಳಯಜಲದಲ್ಲಿ ಮುಳುಗಿ ಹೋಗುವವುಒಳ್ಳೇ ಓಷಧಿ ಸರ್ವವೀರ್ಯತರ ಬೀಜ -ಗಳಸಪ್ತಋಷಿ ಸಹ ಕಾದಿರು ಎಂದಿ17ಕಾದುಕೊಂಡು ಇರುವಾಗ ವಿಶಾಲ ನೌಕವು ಒಂದುಶ್ರೀದ ನೀ ಕಳುಹಿಸೆ ಜಲದ ಮೇಲ್ ಬರುವದುಅದರಲಿ ಅರೋಹಿಸಬೇಕು ಬೀಜಗಳಸಪ್ತಋಷಿ ಸಹ ರಾಜ ಎಂದು ಬೋಧಿಸಿದಿ 18ಎಲ್ಲೆಲ್ಲೂ ಪ್ರಳಯಜಲತುಂಬಿತುಳಕಾಡುವುದುಲೋಲ್ಯಾಡುವುದು ನೌಕ ಗಾಳಿರಭಸದಲಿಅಲ್ಲಿ ಸಮೀಪಿಸುವ ಮತ್ಸ್ಯರೂಪನ ನಿನ್ನಹೊಳೆವ ಶೃಂಗದಿ ನಾವೆಯನು ಕಟ್ಟು ಎಂದಿ 19ನಾವೆಯನು ಬಂಧಿಸಲುರಜ್ಜುಸರ್ಪವು ಎಂದುಸುವ್ರತ ರಾಜನಿಗೆ ಉಪಾಯ ಪೇಳಿದಸರ್ವಗುಣ ಪರಿಪೂರ್ಣ ನಿರ್ದೋಷ ಪರಬ್ರಹ್ಮವಿಶ್ವವಿಷ್ಣೋ ಸೃಷ್ಟಾ ಪಾತಾ ರಮೇಶ20ಈ ರೀತಿ ಆ ಮಹಾನ್ ಸತ್ಯವ್ರತರಾಜನಿಗೆಹರಿನೀನು ಬೋಧಿಸಿ ಅಂತರ್ಧಾನವು ಆಗೇಆ ರಾಜಋಷಿ ತಾನು ಮತ್ಸ್ಯರೂಪ ಹೈಷಿಕೇಶಸಿರಿವರನೇ ನಿನ್ನನ್ನೇ ಧ್ಯಾನಿಸುತಲಿದ್ದ 21ಯುಕ್ತ ಕಾಲವು ಬಂತು ಉಕ್ಕಿತು ಸಮುದ್ರವುಸುತ್ತು ಮುತ್ತು ಎಲ್ಲೂ ಪೊಕ್ಕಿತು ಭೂಮಿಯಲಿಅತ್ತ ಇತ್ತ ಇಲ್ಲೂ ಸುತ್ತಿ ಸುಳಿವ ನೀರುಭೀತಿಕರ ನೆನೆಯಲಿಕೆ ನೋಡೆ ಮತ್ತೆಷ್ಟೋ 22ಚಂಡಮಾರುತ ಪ್ರಚಂಡ ಮೇಘವುಕರಿಸೊಂಡಲಂತೆ ಹನಿ ಕಂಡಿಲ್ಲ ಇಂಥಾ ಮಳೆಕಂಡು ನಾವೆಯ ರಾಜಕೊಂಡು ಬೀಜಗಳಕರಕೊಂಡು ಋಷಿಗಳ ಏರಿಕೊಂಡನು ಬೇಗ 23ಕೇಶವನೇ ನಿನ್ನ ಧ್ಯಾನಿಸಲು ಆಗಕೌಶೇಯ ಶೃಂಗಿ ಮಹಾಮತ್ಸ್ಯ ನೀ ಬರಲುಈಶ ನಿನ್ನಯ ಶೃಂಗಕ್ಕೆ ನೌಕವಕಟ್ಟಿಸಂಸ್ತುತಿಸಿದನು ಮಧುಸೂಧನನೇ ನಿನ್ನ 24ಶ್ರೀ ಭಾಗವತಾಷ್ಟಮ ತ್ರಯೋವಿಂಶತ್ ಅಧ್ಯಾಯಶುಭತಯವಿಜ್ಞಾನಬೋಧಕವು ಅದರಸೊಬಗರಿತು ಯೋಗ್ಯರು ಪಠಿಸೆ ಪ್ರೇರಿಸು ಸ್ವಾಮಿಸೌಭಾಗ್ಯಪ್ರದ ಶ್ರೀಶ ಮಾಂಪಾಹಿ 25ಏಕಶೃಂಗಧರ ಸ್ವರ್ಣ ಮತ್ಸ್ಯನಿಗೆ ಸರ್ಪದಿಂಲಕ್ಷ ಯೋಜನೆ ಮೇಲಿನ ವಿಸ್ತಾರದಿ ಬಂಧಿಸಿದಸತ್ಯವ್ರತ ರಾಜನು ಸಂತೋಷದಲಿ ಸ್ತುತಿಸಿದಅನಾದಿಅವಿದ್ಯಾಪೀಡಿತ ಜನ ಸಂರಕ್ಷನ್ನ26ಪರಮಹಂಸನ ಮೂಲ ಗುರೋ ಲಕ್ಷ್ಮೀಹಯವದನಮೇರು ಇತರಾ ದೇವಹೂತಿ - ಸುತ ಶರಣುಘೋರಸಂಸಾರ ಬಂಧಮೋಚಕಹರಿಯೇವರಸುಖಪ್ರದ ಸಂರಕ್ಷಕ ಮಾಂಪಾಹಿ27ಶಕ್ರಾದಿ ಜಗತ್ತಿಗೆಗುರುಗಂಗಾಧರನುಗಂಗಾಧರನಿಗೆಗುರುಪ್ರಾಣ ಪದ್ಮಜರುಪಂಕಜಾಸನ ಪ್ರಾಣರಿಗೆಗುರುರಮೇಶನು ಹರಿಯೇಆಗುರುಮೂಲಗುರು ಪರಮಗುರ್ರೋಗುರುವು28ನಿನ್ನ ಅನುಗ್ರಹ ಹೊಂದಿದರು ನೀ ಪರಮಗುರುಎಂದು ತಿಳಿದುಬದ್ಧಜೀವರ ಮೋಕ್ಷ ಪುರುಷಾರ್ಥಅವಿದ್ಯಾsಜ್ಞಾನ ಕಳೆದು ಪುಟವಿಟ್ಟಸ್ವರ್ಣರಜತಪೋಲ್ ಶುಚಿ ಆಗಿಸುವಿ ದಯದಿ 29ಸರ್ವಲೋಕ ಜನರಿಗೆ ಹಿತಕರ ಸುಹೃತ್ ನೀನೇಪ್ರಯೇಶ್ವರ ಆತ್ಮಾಗುರು ಜ್ಞಾನ ಅಭೀಷ್ಟಸಿದ್ಧಿಯುನೀ ಸುಹೃತ್ ಅಂದರೆ ಪ್ರತ್ಯುಪಕಾರ ಶೂನ್ಯನುಇನ್ನೂ ಬಹು ವಿಧದಿ ಪರಮಸಾಧು ಸ್ತುತಿಗೈದಿ 30ಸರ್ವಲೋಕಕೆ ನೀನೇ ಸುಹೃತ್ ಪ್ರಯೇಶ್ವರನುಶರ್ವಅಜಶಕ್ರಾದಿಗಳ ನಿಯಾಮಕನುಸರ್ವಾದಾನಂದಮಯ ಗುಣನಿಧಿ ಆತ್ಮನುಸರ್ವಾಭೀಷ್ಟಪ್ರದ ಜ್ಞಾನಸಿದ್ಧಿದನು 31ದೇವದೇವೋತ್ತಮನೇ ಆದಿಪೂರುಷ ಶ್ರೀಶವಿಶ್ವೇಶ್ವರ ಮತ್ಸ್ಯರೂಪ ಭಗವಂತನೀ ವಿಹಾರವು ಮಾಡಿ ಪ್ರಳಯಾರ್ಣವದಲಿಕವಿವರ್ಯ ರಾಜನಲಿ ಸುಪ್ರೀತನಾದಿ 32ವೇದ ಉದ್ಧರಿಸಿದಿ ಹಿಂದೆ ಅಸುರನ್ನ ಕೊಂದುಯುಕ್ತ ಕಾಲದಿ ಈಗ ಪ್ರಳಯವು ತೀರೆಸಾಧುವರ್ಯನು ಜ್ಞಾನವಿಜ್ಞಾನ ಕೋವಿದನುಸತ್ಯವ್ರತನಿಗೆ ಮನು ಪದವಿಯನು ಇತ್ತಿ 33ಮತ್ಸ್ಯಾವತಾರ ಸಂಕೀರ್ತನೆ ಮಾಳ್ಪರಿಗೆಸಿಧ್ಧಿ ಆಗುವುದು ಸರ್ವೇಷ್ಟ ಸದ್ಗತಿಯುಎಂದು ಪೇಳಿರುವಿ ಶುಕಪದ್ಮಭವಪತಿ ಶ್ರೀಶಸಾತ್ಯವತಿ ಮೀನ ವೇಧಪಿತ ಪ್ರಸನ್ನ ಶ್ರೀನಿವಾಸ 34- ಇತಿ ಶ್ರೀ ಮತ್ಸ್ಯಾವತಾರ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಮಧ್ವಮತವೆಂಬಕ್ಷೀರಪಾರಾವಾರ|ಸೋಮನೆನಿಸುತಿಹ ವರದೇಂದ್ರ ಕರಸಂಜಾತ |ನೀ ಮಹಿಯೊಳಾವಾವಪರಿಕಾಣಿಸುವ ನೋಡಿರಾಮ ಪದ ಜಲಜ ಭೃಂಗ ಪಕುಂಡಲಿಯೊ ಭಾರತಿಯೊ ಈಶನೊ ಎಂದುದ್ವಿಜ|ಷಂಡ ತುತಿಸುವುದು ಶ್ರೀ ಭುವನೇಂದ್ರ ರಾಯರಾ |ಕಂಡು ಪದಯುಕ್ತ ಪುರುಷಾಕಾರ ಶಿಖಾರಹಿತ ಕೂಡದಿದುಯೆನಲು ಪೇಳ್ವೆ ||ದಂಡಧರ ಯೋಗದಾಢ್ರ್ಯದೊಳು ತಾ ಅಹಿಯಂತೆ |ಪಂಡಿತೇಶನು ವಾಗ್ಬಲದಲಿ ಭಾರತಿಯಂತೆ |ರುಂಡಮಾಲಿಯ ತೆರದಿ ತೋರುವರು ವೈರಾಗ್ಯದಲಿ ನಿರುತ ಭಜಿಸುವರಿಗೆ 1ವಿಧಿಯೊ ಅರ್ಕನೊ ಇಂದ್ರನೋ ಎಂಬ ತೆರದಿಂದ |ಬುಧಜನಕೆ ತೋರ್ವನಾಲ್ಮೊಗಖಗಸಹಸ್ರಾಕ್ಷ |ಇದು ಯೆಂತು ಸಾಮ್ಯವೆನೆ ಸರ್ವಜನ ಯೋಗ್ಯತೆಯನರಿವಂತೆ ಧಾತನಂತೇ ||ಮದಡಜ್ಞಾನಾಖ್ಯ ತಮವಳಿವಲ್ಲಿ ರವಿಯಂತೆ |ಪದುಮೇಶನ ಗುಣವ ವಿಚಾರಿಸಲನೇಕಾಕ್ಷ |ಚದುರನೆನುವ ಬಗೆಯಿಂದೊಪ್ಪುತಿಹ ನಮ್ಮ ಗುರುವ ತುತಿಸುವೊದಕ್ಕೆನ್ನ ವಶವೆ 2ಕಡಲೊ ಸುರಧೇನವೊ ಹಂಸನೋ ಯೆಂಬಂತೆ |ಪೊಡವಿಗೆ ವಿರಾಜಿಸುವ ಉದಕಮಯವಾಗಿಹದು |ಕಡು ಚತುಷ್ಪಾದಿಅಂಡಜಜಂತು ಈ ಸಾಮ್ಯ ಸಲ್ಲದೆನೆ ಸಲ್ವ ವಿವರ ||ಒಡಲಿನೊಳು ಪ್ರಾಣೇಶ ವಿಠಲಮಣಿಪೊಳೆವುತಿದೆ |ಕೊಡುವ ಬೇಡಿದ ವರವ ಅಮರರಾಕಳಿನಂತೆ |ಕುಡಿವಂತೆ ಹಂಸ ಪಯ ಜಲವುಳಿದು ದೋಷವೆಣಿಸದೆ ಬಿನ್ನಪವ ಲಾಲಿಪ 3
--------------
ಪ್ರಾಣೇಶದಾಸರು
ಹರಿದಿನದಲಿ ಉಂಡ ನರರಿಗೆ -ಘೋರ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ನರಕ ತಪ್ಪದು ಎಂದುಶ್ರುತಿಸಾರುತಲಿದೆಪ.ಗೋವ ಕೊಂದ ಪಾಪ, ಸಾವಿರ ವಿಪ್ರರ |ಜೀವಹತ್ಯದ ಮಾಡಿದ ಪಾಪವು ||ಭಾವಜನಯ್ಯನ ದಿನದಲುಂಡವರಿಗೆ |ಕೀವಿನೊಳಗೆ ಹಾಕಿ ಕುದಿಸುವ ಯಮನು 1ಒಂದೊಂದು ಅಗಳಿಗೆ ಕೋಟಿ ಕೋಟಿ ಕ್ರಿಮಿಗಳು |ಅಂದಿನ ಅನ್ನವು ನಾಯ ಮಾಂಸ ||ಮಂದರಧರನ ದಿನದಲುಂಡವರನು |ಹಂದಿಯ ಸುಡುವಂತೆ ಸುಡುವನು ಯಮನು 2ಅನ್ನ -ಉದಕ ತಾಂಬೂಲ - ದರ್ಪಣಗಳು |ಚೆನ್ನವಸ್ತ್ರಗಳೆಲ್ಲ ವರ್ಜಿತವು ||ತನ್ನ ಸತಿಯ ಸಂಗ ಮಾಡುವ ಮನುಜನ |ಬೆನ್ನಲಿ ಕರುಳ ಉಚ್ಚಿಸುವನು ಯಮನು 3ಜಾವದಜಾಗರಕ್ರತು ನಾಲ್ಕು ಸಾವಿರ |ಜಾವ ನಾಲ್ಕರ ಫಲಕೆ ಮಿತಿಯಿಲ್ಲವು ||ದೇವದೇವನ ದಿನದಿ ನಿದ್ರೆಗೈದರೆ ಹುರಿ - |ಗಾವಿಲಿಯೊಳು ಹಾಕಿ ಹುರಿಯುವ ಯಮನು 4ಇಂತು ಏಕಾದಶಿ ಉಪವಾಸಜಾಗರ |ಸಂತತ ಕ್ಷೀರಾಬ್ಧಿಶಯನನ ಪೂಜೆ ||ಸಂತೋಷದಿಂದಲಿ ಮಾಡಿದ ಜನರಿಗ - |ನಂತ ಫಲವನೀವ ಪುರಂದರವಿಠಲ 5
--------------
ಪುರಂದರದಾಸರು
ಹೇಗೆ ಅರ್ಚಿಸಲಿ ಮೆಚ್ಚಿಸಲಿ ನಿನ್ನನಾಗಶಯನ ನಾರದವಂದಿತನೆ ದೇವಾ ಪಮಂಗಳಾಭಿಷೇಕಕೆಉದಕತರುವೆನೆನೆಗಂಗೆಯ ಅಂಗುಟದಿ ಪಡೆದಿಹೆಯೊ ||ಸಂಗೀತ ಕೀರ್ತನೆ ಪಾಡುವೆನೆಂದರೆಹಿಂಗದೆ ತುಂಬುರ ನಾರದರು ಪಾಡುವರೊ 1ಪುಷ್ಪವ ತಂದು ನಿನಗರ್ಪಿಸುವೆನೆಂದರೆಪುಷ್ಪ ಫುಲ್ಲಯಿಸಿದೆ ಹೊಕ್ಕುಳಲಿ ||ಮುಪ್ಪತ್ತು ಮೂರ್ಕೋಟಿ ದೇವತೆಗಳು ನಿನಗೊಪ್ಪಯಿಸೆ ನೈವೇದ್ಯ ನಿತ್ಯತೃಪ್ತನು ನೀನು 2ಕೋಟಿಸೂರ್ಯರ ಕಾಂತಿ ಮಿಗಿಲಾದವನಿಗೊಂದುಮೋಟು ದೀವಿಗೆ ಬೆಳಗೆ ಬೆಳಕಹುದೆ? ||ಸಾಟಿಗಾಣದಸಿರಿಉರದೊಳು ನೆಲಸಿರೆಪೋಟುಗಾಸನು ಎಂತು ಕಾಣಿಕೆಯಿಡಲಯ್ಯ 3ಹಾಸಿಗೆಯನು ನಿನಗೆ ಹಾಸುವೆನೆಂದರೆಶೇಷನ ಮೈಮೇಲೆ ಪವಡಿಸಿಹೆ ||ಬೀಸಣಿಕೆಯ ತಂದು ಬೀಸುವೆನೆಂದರೆಆಸಮೀರಣ ಚಾಮರವ ಬೀಸುತಿಹನೋ4ನಿತ್ಯಗುಣಾರ್ಣವ ನಿಜಸುಖ ಪರಿಪೂರ್ಣಸತ್ತು ಚಿತ್ತಾನಂದ ಸನಕಾದಿ ವಂದ್ಯ ||ಮುಕ್ತಿದಾಯಕ ನಮ್ಮಪುರಂದರವಿಠಲನುಭಕ್ತಿಪ್ರಿಯನು ಎಂದು ಭಜಿಸಿ ಕೊಂಡಾಡುವೆ 5
--------------
ಪುರಂದರದಾಸರು