ಒಟ್ಟು 56123 ಕಡೆಗಳಲ್ಲಿ , 139 ದಾಸರು , 12212 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುಟ್ಟಬೇಡ ಮುಟ್ಟಬೇಡ ಮುರಹರನ ದಾಸರನು ಪ ಕಟ್ಟು ಮಾಡಿದ ಯಮನು ತನ್ನ ದೂತರಿಗೆಅ ತಿರುಮಣಿ ತಿರುಚೂರ್ಣ ಶೃಂಗಾರ ಧರಿಸುವರಸಿರಿತುಳಸಿ ವನಮಾಲೆಯಿಂದೊಪ್ಪುವವರತಿರುಮಂತ್ರ ತೀರ್ಥಪ್ರಸಾದಕೊಳಗಾದವರತಿರುಪತಿ ಯಾತ್ರೆಯನು ಮಾಡುವ ಮಹಾತ್ಮರ 1 ಬಡವರಾಗಲಿ ಭಾಗ್ಯವಂತರಾಗಲಿ ಅವರುಕಡು ಕರ್ಮಿ ಘೋರಪಾತಕರಾಗಲಿನಡೆನುಡಿಗೆ ಮಾಧವನ ಬಿಡದೆ ಕೊಂಡಾಡುವರಗೊಡವೆ ಬೇಡೆಂದು ಯಮಧರ್ಮ ಸಾರಿದನು 2 ವಾಸುದೇವನ ವಾಸರವನಾಚರಿಸುವವರಬೇಸರಿಸದೆ ಹರಿಪ್ರಸಂಗ ಮಾಳ್ಪವರಶೇಷಶಯನ ಕಾಗಿನೆಲೆಯಾದಿಕೇಶವನದಾಸಾನುದಾಸರಿಗೆ ದಾಸರಾದವರ3
--------------
ಕನಕದಾಸ
ಮುಟ್ಟಲು ಮಾಯೆ ಹೋಯಿತು, ಗುರುರಾಯ ಪ ಜ್ಞಾನದ ಪ್ರಭೆಯು ತೋರಿತು ಅ-ಜ್ಞಾನ ನನ್ನದು ಹಾರಿತು 1 ಹರುಷಕೆ ಹರುಷವಾಯ್ತುನಿರಾಶೆಯು ಕಡೆಗಾಯಿತು 2 ಜ್ಞಾನಬೋಧನ ಪ್ರಭು ಯೋಗಿತಾನು ತಾನೆ ದಯವಾಗಿ3
--------------
ಜ್ಞಾನಬೋದಕರು
ಮುಟ್ಟಿಗಿಟ್ಟಿ ನೀ ನಮ್ಮ ಎಲೊ ಎಲೊ ಮುರಾರಿ ನೀ ನಮ್ಮ ಛೇಛುಮ್ಮ [?] ಎಲೊ ಎಲೊ ಪ ಮಡಿಯನುಟ್ಟು ಮೈತೊಳೆದು ಬಂದಿಹೆವೊ ಕೊಡಬ್ಯಾಡೆಂಜಲವ ನೀ ಬಹು ತುಂಟಾ 1 ನಿಜ ಪತಿವ್ರತೆಯರು ನಾವಲ್ಲವೇನೂ ಜಾರ ನೀ ಬಲು ಚೋರ 2 ಸೋದರತ್ತೆ ಮಗ ನೀ ನಮಗಲ್ಲ ಶ್ರೀದವಿಠಲ ಬಿಡು ಹಾದಿ ಸುಮ್ಮನೆ ಹೋದೀ 3
--------------
ಶ್ರೀದವಿಠಲರು
ಮುಟ್ಟು ದೋರಿತು ನಿನ್ನ ಗುಟ್ಟು ಹಾರಿತು ಪ ಸಿಟ್ಟುಗೊಳ್ಳಬೇಡವೆನ್ನ ದೃಷ್ಟಿಯಿಂದ ನೋಡಿ ಕಂಡೆ ಅಷ್ಟಸಿದ್ಧಿಗಳಿದ್ದರೂ ಒಂದಿಷ್ಟು ಕೊರತೆ ಕೃಷ್ಣನೆಂಬ ಅ.ಪ ಹೇಯಗುಣವಿಲ್ಲ ಮುನಿಗೇಯ ನಿನ್ನೊಳೆಂಬ ಜನರ ಬಾಯ ಮುಚ್ಚಿಸುವೆನೆಂದತ್ಯಾಯಸಪಡುವನೆಂಬ 1 ಸತ್ಯಕಾಮನಹುದು ನೀನು ಸತ್ಯಸಂಕಲ್ಪನು ನಿನಗೆ ಮಿಥ್ಯಾವಚನಿಲ್ಲವೆಂಬೊಂದಿತ್ಯಧಿಕ ಕೊರತೆಯೆಂಬ 2 ಜ್ಷಾನವಂತನೆಯ ಬಹುಮಾನವಂತನಾದರೂ ಅ ಜ್ಞಾನಶೂನ್ಯನೆಂಬ ದೊಡ್ಡ ಹಾನಿಯೊಂದಿರುವುದೆಂಬ3 ಎಲ್ಲ ವಸ್ತುಗಳುಂಟು ನಿನಗೆ ಪುಲ್ಲನಾಭ ನಿನ್ನ ಬಳಿಯೋ ಳಿಲ್ಲವೆಂಬ ಶಬ್ದಮಾತ್ರವಿಲ್ಲವೆಂಬ ಮಾತು ಬಂದಿಹ 4 ಪಾಪವೆಂಬ ಕತ್ತಲೆಗೆ ದೀಪನಾಗಿದ್ದರು ಜನರ ಪಾಪಗಳನಪಹರಿಪ ದೀಪನಾ ಬಿಡದು ಎಂಬ 5 ಜ್ಯೋತಿಗಳಿಗೆಲ್ಲ ಪರಂಜ್ಯೋತಿಯಾಗಿರಿವ ನಿನಗೆ ಆ ಜ್ಯೋತಿಗಳೆತ್ತಿದಾರತೀ ಪ್ರೀತಿಯೆಂದು ಜನರು ಪೇಳ್ವ 6 ಹಾನಿವೃದ್ಧಿ ಶೋಕಮೋಹ ಜ್ಞಾನ ನಿನ್ನೊಳಿಲ್ಲವೆಂಬ ಹೀನವಾಕ್ಯವ ಪೇಳ್ವರೆಲ್ಲ ಮಾನನಿಧಿಗಳೆಂತೆಂಬ 7 ನಿತ್ಯತೃಪ್ತನಾದರೂ ನಿಜ ಭೃತ್ಯರನು ಪಾಲಿಸುವ ನಿತ್ಯ ಕರ್ಮದಲ್ಲಿ ಕೃತಕೃತ್ಯನುನೀನಲ್ಲವೆಂಬ 8 ಕಷ್ಟಪಡಬೇಡವೆನ್ನೊಳೆಷ್ಟು ದುರ್ಗುಣಂಗಳಿಹ ವಷ್ಟನು ಒಪ್ಪಿಸಿ ನಿನಗಿಷ್ಟ ನಾಗಬೇಕೆಂಬ 9 ಕ್ಷೀರದಧಿನವನೀತ ಚೋರನಾಗಿರಲಿ ಗೋಪೀ ಜಾರನಾಗಿರಲಿ ಸಂಸಾರವೈರಿಯು ನೀನೆಂಬ 10 ಕೊರತೆಯೆಂಬಾ ಜನರಿಗೆಲ್ಲಾ ವರವನಿತ್ತು ಪೊರೆವೆನೆಂಬ ಸ್ಥಿರವಾಗಿ ಶ್ರೀ ವ್ಯಾಘ್ರಗಿರಿಯೊಳಿರುವ ವರದ ವಿಠಲನೆಂಬ11
--------------
ವೆಂಕಟವರದಾರ್ಯರು
ಮುತ್ತಿ ಎನಗೆ ಬಡಿತವ್ವ ಹರಿ ಭಕ್ತರ ಮನಿಯನ ದೆವ್ವ ಪ ಅತ್ತಿತ್ತಮಾಡಿ ಬೆನ್ನ್ಹತ್ತಿ ಬಿಡದೆ ಎನ್ನ ನೆತ್ತಿಕೊಂಡು ಓಡ್ಹೋಯ್ತವ್ವ ಅ.ಪ ಬಿದ್ದರೆ ಬೀಳಗೊಡಲಿಲ್ಲವ್ವ ಸುಮ್ಮ ನಿದ್ದರೆ ಇರಗೊಡಲಿಲ್ಲವ್ವ ಬುದ್ಧಿಭ್ರಮಿಸಿ ಬಲುಗದ್ದಲಮಾಡೆನ್ನ ಮುದ್ದಿಟ್ಟೆಬ್ಬಿಸಿಕೊಂಡ್ಹೋಯ್ತವ್ವ 1 ಉಟ್ಟದಟ್ಟಬಿಡಿಸೊಗಿತವ್ವ ಬಂದ ಎರವು ಮಾಡಿತವ್ವ ವೊಷ್ಟು ಬಿಡಿಸಿ ಎನ್ನ ಗಟ್ಟ್ಯಪ್ಪಿ ತಿರುಗದ ಬೆಟ್ಟಕ್ಕೆ ಎಳಕೊಂಡ್ಹೋಯ್ತವ್ವ 2 ಭೋರಿಟ್ಟತ್ತರು ಎನ್ನ ಬಳಗವ್ವ ಸಮೀ ಪಾರನು ಬರಗೊಡಲಿಲ್ಲವ್ವ ಸಾರಸೌಖ್ಯಕ್ಕಾಧಾರ ಶ್ರೀರಾಮಪಾದ ಸೇರಿಸಾನಂದಪದವೇರಿಸಿತವ್ವ 3
--------------
ರಾಮದಾಸರು
ಮುತ್ತಿನ ಆರತಿಯ ತಂದೆತ್ತೀರೆ ಲಕ್ಷ್ಮಿಗೆ ಮುತ್ತೈದೆಯರು ಜಯ ಪ ರತ್ನಮಂಟಪದೊಳು ವರ ಮಹ- ಲಕ್ಷ್ಮಿಯ ಕುಳ್ಳಿರಿಸಿ ಮುತ್ತಿನ್ಹಾರಗಳ್ಹಾಕಿ ಮುತ್ತೈದೆಯರು ಜಯ 1 ಮಿತ್ರೆ ಮಹಲಕ್ಷುಮಿಯ ಬಹು ಸಿಸ್ತಿಲಿ ಶೃಂಗರಿಸಿ ಉತ್ತಮಾಂಗನೆಗೀಗ ಮುತ್ತೈದೆಯರು ಜಯ2 ಕರ್ತೃ ಶ್ರೀಹರಿ ಎನ್ನುತ ಕಮಲನಾಭ ವಿಠ್ಠಲನರಸಿಗೀಗ ಎತ್ತಿ ಚಾಮರ ಬೀಸಿ ಮುತ್ತೈದೆಯರು ಜಯ3
--------------
ನಿಡಗುರುಕಿ ಜೀವೂಬಾಯಿ
ಮುತ್ತಿನಾರತೀ ತಂದೆತ್ತಿಪಾಡುವೆ ಚಿತ್ತಜಾತ ಜನಕ ರಂಗನಾಥದೇವಗೆ ಪ. ಭೂಮಿಪಾಲಗೆ ಶ್ರೀ ಭಾಮೆಯರಸಗೆ ದಾತ ಮನೋ ಮೋಹನಾಂಗಗೆ 1 ಕಾಳೀಮಡುವನು ಕಲಕಿ ಬಂದಗೆ ಬಾಲನಾಗಿ ಗೋವುಗಳನು ಕಾಯ್ದ ಗೊಲ್ಲಗೆ 2 ಮುರವಿರೋಧಿಗೆ ಕರುಣವಾರ್ಧಿಗೆ ತರಳ ಧ್ರುವನಿಗೊಲಿದು ಬಂದ ವರದರಾಜಗೆ 3 ಶರಣರಕ್ಷಣೆ ಸರಸಿಜಾಕ್ಷಗೆ ಪರಮ ಪಾವನ ಶೇಷಶೈಲ ಶಿಖರ ಧಾಮಗೆ 4
--------------
ನಂಜನಗೂಡು ತಿರುಮಲಾಂಬಾ
ಮುತ್ತು ಕೊಳ್ಳಿರೋ ಉತ್ತುಮರೆಲ್ಲ ಧ್ರುವ ಜ್ಞಾನ ಸಮುದ್ರಲಿನ್ನು ಧ್ಯಾನವೆಂಬ ಸಿಂಪಿನೊಳು ಘನಗುರುಕರುಣದ ಮಳಿಯಾದ ಮುತ್ತು ಕೊಳ್ಳಿರೋ 1 ಪಿಂಡ ಬ್ರಹ್ಮಾಂಡವೆಂಬ ಗಡ್ಡೆಯೊಳಿನ್ನು ಪುಟ್ಟಿ ಭಕ್ತಿಭಾವ ಹಡಗದೊಳು ಬಂದ ಮುತ್ತು ಕೊಳ್ಳಿರೋ 2 ಸಾಧುಸಜ್ಜನರೆಂಬ ಮುತ್ತಿನ ಜೋಹರೇರ ಕೈಯ ನಿಜಹಸ್ತಸ್ಪರ್ಶವಾದು ನೀವು ಮುತ್ತು ಕೊಳ್ಳಿರೋ 3 ಅತ್ತಲಿತ್ತಲಾಗದೆ ಈ ಮುತ್ತು ಜತನಮಾಡಿ ನಿಮ್ಮ ಚಿತ್ತ ಮನದೊಳು ಇಟ್ಟುಕೊಳ್ಳಿರೋ 4 ತನುಮನಧನವನರ್ಪಿಸಿಕೊಂಡಿಹ ಮುತ್ತು ಮಹಿಪತಿ ಇಹರಪವಸ್ತು ಮುತ್ತು ಕೊಳ್ಳಿರೋ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮುತ್ತು ಬಂತಿದೆ ದಿವ್ಯ ಮುತ್ತು ಕೊಳ್ಳಿರೋ ಪ ಮುತ್ತು ಬಂದಿಹುದೀಗ ನೀವೇತ್ತಿಕೊಳ್ಳಿರೆಲ್ಲ ಬಂದು ಉತ್ತಮ ವ್ಯಾಘ್ರಾದ್ರಿ ಪುರುಷೋತ್ತಮನೆಂಬುವ ದಿವ್ಯ 1 ಲೆಕ್ಕವಿಲ್ಲದ ಹಣವಿತ್ತರು ಸಿಕ್ಕದ ದುರ್ಲಭ ಮುತ್ತು ರೊಕ್ಕವಿಲ್ಲದೆ ಭಕ್ತರಿಗೆ ಪುಕ್ಕಟೆಯಲಿ ಸಿಕ್ಕುವಂಥ 2 ಧನವಂತರಿಗೆ ದೊರಕುವದಲ್ಲ ಜನರ ಕೈಗೆ ಸಿಕ್ಕುವದ್ಲ ಮನದಲ್ಲಿ ಧ್ಯಾನಮಳ್ಪ ಮುನಿಗಳ ಸ್ವಾಧೀನವಾದ 3 ಕ್ಷೀರಪಾರಾವಾರದಲ್ಲಿ ತೋರಿ ಮೆರೆವ ಮುತ್ತು ಶ್ರೀರಮಾ ಮನೋಹರನುದಾರ ವರದ ವಿಠಲನೆಂಬ 4
--------------
ವೆಂಕಟವರದಾರ್ಯರು
ಮುತ್ತು ಬಂದಿದೆ-ದಿವ್ಯ ಮತ್ತು ಕೊಳ್ಳಿರೋ ಪ ಮುತ್ತು ಬಂದಿಹುದೀಗನೀವೆತ್ತಿರೊಳ್ಳಿರೆಲ್ಲಬಂದು ಉತ್ತಮವ್ಯಾಘ್ರಾದ್ರಿಪುರುಷೋತ್ತಮನೆಂಬುವ ದಿವ್ಯ 1 ಲೆಕ್ಕವಿಲ್ಲದ ಹಣವಿತ್ತರು ಸಿಕ್ಕದದುರ್ಲಭ ಮುತ್ತು ರೊಕ್ಕವಿಲ್ಲದೆ ಭಕ್ತರಿಗೆ ಪುಕ್ಕಟೆಯಲಿ ಸಿಕ್ಕುವಂಥ 2 ಧನವಂತಗೆ ದೊರಕುವುದಲ್ಲ ಜನರ ಕೈಗೆ ಸಿಕ್ಕುವದಲ್ಲ ಮನದಲ್ಲಿ ಧ್ಯಾನಮಾಳ್ವಮುನಿಗಳ ಸ್ವಾಧೀನವಾದ 3 ಕ್ಷೀರಪಾರಾವಾರದಲ್ಲಿ-ತೋರಿ ಮೆರೆವ ಮುತ್ತು ಶ್ರೀರಮಾಮನೋಹರನುದಾರ ವರದ ವಿಠಲನೆಂಬ 4
--------------
ಸರಗೂರು ವೆಂಕಟವರದಾರ್ಯರು
ಮುತ್ತೈದೆ ಜಯ ಜಯ ಮುತ್ತೈದೆ ಜಯ ಜಯ ಮುತ್ತೈದೆಯರು ಪಾಡುತ ಜಯ ಜಯ ಮುತ್ತಿನಾರತಿ ಎತ್ತುತಾ ಪ ಪೃಥ್ವಿಗೊಡೆಯ ಪುರುಷೋತ್ತಮ ಹರಿಗೀಗ ಮುತ್ತಿನಾರತಿ ಎತ್ತುತಾ ಜಯ ಜಯ ಮುತ್ತೈದೆಯರು ಪಾಡುತಾ 1 ಮಿತ್ರೆ ರುಕ್ಮಿಣಿ ಸತ್ಯಭಾಮೆಯರರಸಗೆ ರತ್ನದಾರತಿ ಎತ್ತುತಾ ಜಯ ಜಯ ಮುತ್ತೈದೆಯರು ಪಾಡುತಾ 2 ಮಮತೆಯಿಂದಲಿ ಕಮಲನಾಭ ವಿಠ್ಠಲನಿಗೆ ಕನಕದಾರತಿ ಎತ್ತುತಾ ಜಯ ಜಯ ಮುತ್ತೈದೆಯರು ಪಾಡುತಾ3
--------------
ನಿಡಗುರುಕಿ ಜೀವೂಬಾಯಿ
ಮುದದಿ ನಕ್ರನ ಕೊಂದು ಸಲಹಿದ ಸದುಭಕುತರ ಬಂಧು 1 ನಾರಿಯು ತನ್ನ ಕರೆದಾ ಮಾತ್ರದಿ ಸೀರೆಯ ಮಳೆಗರೆದಾ ಕ್ರೂರ ಖಳರ ಮುರಿದಾ ಪಾಂಡವ- ರಾರಣ್ಯದಿ ಪೊರೆದಾ ನಾರಗೆ ಅಜಮಿಳ ನಾರಾಯಣನೆನೆ ಪಾರುಗಾಣಿಸಿದಪಾರಗುಣನಿಧಿಯಾ 2 ಒಂದು ಬಾರಿಗೆ ಶ್ರೀಶನ ನೆನೆದರೆ ದುರಿತ ನಾಶಾ ಬೆಂದದ್ದು ಬಹುಪಾಶಾ ಅವಗಿ- ನ್ನೆಂದಿಗಿಲ್ಲವೊ ಕ್ಲೇಶಾ ತಂದೆ ಕದರಂಡಲಗಿ ಹನುಮಯ್ಯನೊಡೆಯ ಗೋ- ವಿಂದನ ನೆನೆದವರೆಂದಿಗು ಧನ್ಯರು 3
--------------
ಕದರುಂಡಲಗಿ ಹನುಮಯ್ಯ
ಮುದದಿ ನಂಬಿದೆನೊ ಹಯವದನನೆ ಪ. ಭಕ್ತರನ್ನು ಭವಸಮುದ್ರದಿಂದ ನೂಕೊಇತ್ತ ಒಂದು ತಿಳಿಯಧ್ಹಾಗೆ ಹೀಗೆ ಇರುವರೊ 1 ಮಾಯಪಾಶದೊಶಕೆ ಕೊಟ್ಟ ಮಾಯಕಾರನ ತೋಯಜಾಕ್ಷ ನಾನಿದಕುಪಾಯ ಕಾಣೆನೊ2 ಸತ್ಯಸಂಧÀನೆಂಬೊ ಬಿರುದು ಎತ್ತಹೋಯಿತೊ ಹಸ್ತಿವರದನೆಂಬೋ ಕೀರ್ತಿ ಸುತ್ತಮೆರೆಸಿತೊ 3 ಗೂಢತನದಿ ಗುಡಿಯ ಮಾಡದಲ್ಲಿ ಇರುವರೆನಾಡಜನರು ನಿನ್ನ ಆಡಿಕೊಳದೆ ಬಿಡುವರೆ4 ಸಿರಿಹಯವದನ ಶೈನ (ಎನ್ನ?) ಗುರು ಶಿರೋಮಣಿಧರೆಯೊಳರಸಿದೆನೊ ನಿನಗೆ ಸರಿಯು ನಾ ಕಾಣೆ 5
--------------
ವಾದಿರಾಜ
ಮುದದಿ ಹರಿಯ ಧ್ಯಾನ ಮಾಡಿ ಸಾಧಿಸೊ ಸದಯ ಹೃದಯರಾದ ಸಂಗದೊಳಗೆ ನೀನು ಬೆರೆದು ಪ --ಕರ್ತನಾದ ದೇವ ಸದ್ಪಿಲಾಸನಾ ನಿಖರವಾಗಿ ಹೃದಯದಲ್ಲಿ ನಿಲ್ಲಿಸುವೆನಾ ಪ್ರಕಟಮಾಡಿ ಸ್ತುತಿಸುತಿರುವ ಬಿಡದೆ ಅನುದಿನ ಭಕುತಿಯಿಂದ ಕ--------ಭಕ್ತ ಜನರಕೂಡಿ 1 ಯೋಗಿಜನರ ಹೃದಯದೊಳು ನಿಖರವಾಗಿಇರುವ ಭೋಗಿಶಯನನಾಗಿ ಇರುವ ಪುಣ್ಯ ಪುರುಷನಾ ಸಾಗರಾನಸುತಿಯರಾಳ್ವ ಸಾರ್ವಭೌಮನ ಬೇಗ ಭಜಿಸಿ ಗತಿಯು ಕಾಣ್ವ ಭಾಗವತರ ಸಂಗದಲ್ಲಿ 2 ದುಷ್ಟ ಜನರ ಸಂಗವೆಂಬುದು ದೂರಮಾಡೋ ನೀ ಶಿಷ್ಟ ಜನರ ಪಾದ----------ಯಾಗೋ ನೀ ಇಷ್ಟದಿಂದ ವಿಷ್ಣು ಚಿಂತನೆ ಹಿತದಿ ಮನದಿ ನೀ ನಿಷ್ಠೆಯುಳ್ಳವನು ಆಗಿ ಕೃಷ್ಣ ಹೊನ್ನ ವಿಠ್ಠಲರಾಯನಾ 3
--------------
ಹೆನ್ನೆರಂಗದಾಸರು
ಮುದವ ಬೀರುವುದೊ | ಬದರಿಯ ನಿಲಯನೇ ಪ ಮುದವ ಬೀರುವುದು | ಬದರಿಯ ನಿಲಯ ಶ್ರೀವಿಧಿ ವಿಬುಧಾದ್ಯರ | ಮುದಕೆ ಕಾರಣನೇ ಅ.ಪ. ಪಾದ ಉರ | ಮಂದೀರದಲಿ ಧರಸುಂದರಾಂಗನೆ | ಗೋವಿಂದ 1 ಇಂದ್ರ ನಿನ್ನಯ ತಪ | ಕುಂದೀಸೆ ಅಪ್ಸರವೃಂದಾ ಕಳುಹೆ | ಗೋವಿಂದ ||ಚೆಂದಾದುಡಿಗೆ ಉಟ್ಟ | ಅಂದಾಭರಣ ತೊಟ್ಟಮಂದಾಗಮನೆರೆಲ್ಲ | ಗೋವಿಂದ || ಅಂದಿಗೆ ಕಾಲ್ಗೆಜ್ಜೆ ದಂಧಣಿರೆನ್ನ ಕುಣಿದುನೊಂದು ಶ್ರಮಗಳಿಂದ | ಗೋವಿಂದ ||ಕಂದರ್ಪ ಪಿತ ತನ್ನ | ಸುಂದರೂರುವಿನಿಂದಸುಂದರಿಯನ್ನೆ ಕೊಟ್ಟ | ಗೋವಿಂದ 2 ಮಂದಗಮನೆರೆಲ್ಲ | ಸುಂದರಿಯನ್ನೆ ಕೊಂಡುಇಂದ್ರಂಗೆ ಇತ್ತರು | ಗೋವಿಂದ ||ಎಂದೆಂದು ಕಾಣದ | ಸುಂದರಾಕೃತಿ ಕಂಡು ಕಂದೀತು ಇಂದ್ರ ಮುಖ | ಗೋವಿಂದ ||ವೃಂದಾರಕೇಂದ್ರನು | ಅಂದು ಪರಾಶರಜಗೊಂದಿಸಿ ಕ್ಷಮೆಯನು | ಬೇಡಿದ ||ಇಂದ್ರಾವರಜ ಗುರು | ಗೋವಿಂದ ವಿಠಲನದ್ವಂದ್ವ ಪಾದಂಗಳ್ಗೆ | ಶರಣೆಂದ 3
--------------
ಗುರುಗೋವಿಂದವಿಠಲರು