ಒಟ್ಟು 36191 ಕಡೆಗಳಲ್ಲಿ , 138 ದಾಸರು , 9678 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಧಿಸಿ ಗುರುಗುಟ್ಟು ಭೇದಿಸಿ ಮನವಿಟ್ಟು ವೇದಕೆ ನಿಲುಕದ ಹಾದಿಯದೋರುವ ಸದ್ಗುರು ದಯಗೊಟ್ಟು ಧ್ರುವ ಮಾತಿಲೆ ಆಡುವ ಙÁ್ಞನ ಯಾತಕ ಬಾಹುದೇನ ಆತ್ಮಕದೋರುವ ನಿಜಖೂನ ಪ್ರತ್ಯೇಕವಾದ ಸ್ಥಾನ 1 ಮಾತೆ ಆಗೇದ ಮುಂದೆ ರೀತ್ಯಡಗೇದ ಹಿಂದೆ ನೀತಿಯ ತೋರುವ ಗುರುತಂದೆ ಜ್ಯೋತಿಸ್ವರೂಪೊಂದೆ 2 ತಾಯಿತವಾಗೆದ ಗುಟ್ಟು ಧ್ಯಾಯಿಸಿ ರೀತಿ ಇಟ್ಟು ಆಯಿತು ನಿಜಗುಣ ಬಿಟ್ಟು ಹೋಯಿತು ಜನ ಕೆಟ್ಟು 3 ಗುಟ್ಟು ಕೇಳಿ ಪೂರ್ಣ ಮುಟ್ಟಿ ಮಾಡಿ ಮನ ಇಟ್ಟುಕೋ ಮಹಿಪತಿಗುರುಬೋಧ ನಿಜಧನ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧಿಸಿ ನೋಡಿ ನಿಜ ಖೂನ ಸದ್ಗುರು ಕೃಪೆಯಿಂದ ಸ್ವಸುಖದ ನಿಧಾನ ಧ್ರುವ ಸಹಜಾವಸ್ಥೆಗೆ ಬಂದು ನೋಡಿ ಸಹಜ ಸದ್ವಸ್ತು ಬಾಹುದು ತಾನೆ ಕೈಗೂಡಿ ದೇಹ ದಂಡನೆಂಬುದು ಬ್ಯಾಡಿ ಸಾಹ್ಯಮಾಡುವ ಗುರುಸೇವೆ ಪೂರ್ಣಮಾಡಿ 1 ಸಾಧನವೆಂಬುದೆ ಸಾಕ್ಷೇಪ ಭೇದಿಸಿ ನೋಡಲಿಕ್ಕಿದುವೆ ವಸ್ತು ತಾಂ ಸಮೀಪ ಆದಿ ಅನಾದಿ ಸ್ವರೂಪ ಸಾಧಿಸಿದವನೆ ತಾ ಮೂರುಲೋಕ ಆಪ 2 ಎಲ್ಲಕ್ಕೆ ಮೇಲು ಗುರುಭಕ್ತಿ ಅಲ್ಲೆಸಲ್ಲದು ಮತ್ತೆ ಮುಂದೆ ಬೇಕೆಂಬ ಉಕ್ತಿ ಇಲ್ಲೆ ತಿಳಿಕೋ ನೀ ಮಹಿಪತಿ ಸುಲಭದಿಂದ ಸಾಧಿಸಿಕೊಂಡು ನಿಜಯುಕ್ತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧಿಸಿ ನೋಡಿ ಸುವೃತ್ತಿ ಭೇದಿಸಿಕೂಡಿ ಸುಮುಕ್ತಿ ಧ್ರುವ ಹಿಡಿದು ಸಾರುವ ಶ್ರುತಿ ನಿಜಗೂಡಿ ಗೂಡಿನೊಳಗೆ ಬೆರೆದಾಡಿ ಇಡಾಪಿಂಗಳ ನಾಡಿ ನಡುವಾವಿನ ಜಾಡೆ ಹಿಡಿದು ಘನಗೂಡಿ 1 ಏರಿನೋಡಲು ಆರು ಚಕ್ರತಾಂ ದೋರುತದೆ ಸುಪಥ ತಿರುಗಿನೋಡಲು ತನ್ನೊಳು ತಾ ಅಮೃತ 2 ಹಿಡಿದು ಗುರುಪಾದಾರವಿಂದ ಪಡೆದ ಮಹಿಪತಿ ಅನಂದ ಗೂಢ ಗುರುತವಾಯಿತು ಬಲು ಚಂದ ಕಡಿದ್ಹೋಯಿತು ಭವಬಂಧ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧಿಸಿ ಪಡೆದಿದ್ದೀ ನರಜನುಮ ಸಂ ಪಾದಿಸಿ ಕೊಳ್ಳೆಲೆ ಹರಿನಾಮ ಪ ಪೋದಬಳಿಕ ಇಂಥ ಮಹಜನುಮ ಮತ್ತೆ ಸಾಧನ ಸಾಧ್ಯವಲ್ಲೆಲೊ ತಮ್ಮ ಅ.ಪ ಮಡದಿಮಕ್ಕಳೆಂಬ ಒಣಭ್ರಾಂತಿ ನಿನ ಗ್ಹಿಡಿದಿದೆ ಮಾಯದ ಘನಚಿಂತಿ ಒಡೆದು ತೋರುವ ಜಗಕ್ಷಣ ಸಂತಿ ಇದು ಕಡೆಗೆ ಒಂದು ಇಲ್ಲ ನಿನ್ನ ಸಂಗತಿ1 ಅರ್ಥಇಲ್ಲದೆ ನಾನಾ ಯೋನಿಯಲ್ಲಿ ನೀ ಸತ್ತುಹುಟ್ಟುತ ಬಹು ಬಳಲುವ್ಯಲೇ ಸತ್ಯ ನಿತ್ಯಸುಖ ತಿಳಿಮರುಳೇ ಕಾಂಬ ಮತ್ರ್ಯಭೋಗವೆಲ್ಲ ಸುಳ್ಳುಸುಳ್ಳೆ 2 ತೊಳಲುತ ಎಂಭತ್ತು ನಾಲ್ಕುಲಕ್ಷ ಜನ್ಮ ತಾಳುತ ಪಡೆದಿದ್ದಿ ಬಲುಶಿಕ್ಷೆ ಚೆಲುವ ಶ್ರೀರಾಮನೊಳು ಇಡು ಲಕ್ಷ್ಯ ನಿನಗೊಲಿದು ಕೊಡುವ ಸ್ವಾಮಿ ನಿಜಮೋಕ್ಷ 3
--------------
ರಾಮದಾಸರು
ಸಾಧಿಸು ಪರಲೋಕ ಮನವೆ ನೀ ಸಾಧಿಸು ಪರಲೋಕ ಪ ಮಾಧವನ ಮಹ ಪಾದದಾಸರಿಂದ ಶೋಧಿಸಿ ನಯದಿ ಸಂಪಾದಿಸಿ ಜ್ಞಾನವ ಅ.ಪ ಭೇದಬುದ್ಧಿ ಬಿಡೋ ಸುಜನರಿಂ ವಾದಿಸಿ ಕೆಡಬೇಡೋ ಆದರದಿಂದಲಿ ಸಾಧು ಸಂತರ ಸು ಬೋಧ ವಾಕ್ಯಗಳ ಮೋದದಿಂ ಕೇಳುತ 1 ರಾಗರಹಿತನಾಗೋ ಸಂಸಾರ ಭೋಗದಾಸೆ ನೀಗೋ ಯೋಗಿಗಳಿಗೆ ತಲೆವಾಗಿ ದಿಟದಿ ನೀ ಹೋಗಲಾಡಿಸಿ ಭವಬೇಗ ಸುಪಥಕ್ಹತ್ತಿ 2 ಕಾಮಿತಂಗಳ ಅಳಿಯೋ ತನುಧನ ಪ್ರೇಮಮೋಹ ಕಳೆಯೋ ಕಾಮಜನಕ ನಮ್ಮ ಭೂಮಿಜೆಪತಿ ಶ್ರೀ ರಾಮನಾಮಬೆಂಬ ವಿಮಾನವೇರಿ 3
--------------
ರಾಮದಾಸರು
ಸಾಧು ಆದವ ಸಾಧುರ ಬಲ್ಲನೋ | ಸಾಧು ವೇಷದಿ ಮೆರೆವವ ಸಲ್ಲನೋ ಪ ಧರಿಯೊಳು ಲೋಕದಿ ಸರೀ | ಹೊರವಳಿ ನಡತಿಯ ತೋರಿ | ಅವ | ತೋರಿ ತೋರದಲಿಹನೋ 1 ಯೋಗಿ | ಭೋಗಿಗೆ ಭೋಕ್ತನೂ ಆಗಿ | ಆವ | ಆಗಿ ಆಗದಲಿಹನೋ 2 ಗುರುವರ ಮಹಿಪತಿಸ್ವಾಮಿ ಅರಿತಾ ನಂದದ ಪ್ರೇಮಿ | ಅವ | ಪ್ರೇಮಿ ಪ್ರೇಮಿಗೆ ವಲಿವನೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಾಧು ನೀನಾಗೆಲೊ ಸ್ವಾಮಿ ತಾ ಕಾಣುವಾ ಪ ಮೇದಿನಿ ಅ.ಪ ಎಂದಿಗೆ ನಂದಿ ನಾನೊಂದುವೆನೆಂದು ನೀ ಸಂದೇಹ ಸಂವರಿಪನೊಲಿದು ತಾ 1 ತಾನಾದರೆ ತನ್ನದೇನು ಜಾಣ ತಾ ನೋಡುತಂ ಪ್ರಾಣನಾಥ ನೀನೆಂದಾಡುತಂ ಪಾಡುತ 2 ವಿಶ್ವದೊಳು ರಾಜಿಪ ಸಸ್ವರೂಪಾ ಗುರು ಅಸ್ಮದಾರ್ಯ ತುಲಸಿರಾಮದಾಸನಿತ್ತ 3
--------------
ಚನ್ನಪಟ್ಟಣದ ಅಹೋಬಲದಾಸರು
ಸಾಧು ಸಂಗತಿ ಮಾಡೋ ಎಲೆ ಮನಾ ಸಾಧು ಸಂಗತಿ ಮಾಡು ಪ ಘೋರತರದ ಸಂಸಾರ ಸಾಗರದಿ ಪಾರು ಮಾಡಿ ಮುರಾರಿಯ ಸ್ಮರಿಸುವ 1 ಕರ್ಮಫಲಾಪೇಕ್ಷಿಸದಲೇ ಮಾಡಿ ತಾ ನಿರ್ಮಲ ಚಿತ್ತದಿ ಹರಿಯನು ಪೊಗಳುವಾ 2 ತನ್ನ ಪಿತ ಹನುಮೇಶವಿಠಲಗೆ ಆತ್ಮಅರ್ಪಿಸಿ ಕೃತಾರ್ಥನಾದನು ಸಾಧು ಸಂಗತಿ ಮಾಡೋ 3
--------------
ಹನುಮೇಶವಿಠಲ
ಸಾಧು ಸಜ್ಜನ ಸತ್ಯಗುಣಕಿದಿರುಂಟೆಆದಿಕೇಶವನ ಪೋಲುವ ದೈವವುಂಟೆ ಪ ಸತ್ಯವ್ರತವುಳ್ಳವಗೆ ಮೃತ್ಯುಭಯವುಂಟೆಚಿತ್ತಶುದ್ಧಿಯಿಲ್ಲದವಗೆ ಪರಲೋಕವುಂಟೆವಿತ್ತವನರಸುವಂಗೆ ಮುಕ್ತಿಯೆಂಬುದುಂಟೆಉತ್ತಮರ ಸಂಗಕಿಂತಧಿಕ ಧರ್ಮವುಂಟೆ 1 ಸುತಲಾಭಕಿಂತಧಿಕ ಲಾಭವುಂಟೆಮತಿರಹಿತನೊಳು ಚತುರತೆಯುಂಟೆಪತಿಸೇವೆಗಿಂತಧಿಕ ಸೇವೆಯುಂಟೆಸತಿಯಿಲ್ಲದವಗೆ ಸಂಪದವೆಂಬುದುಂಟೆ 2 ಪಿಸುಣಗಿನ್ನಧಿಕ ಹೀನನುಂಟೆವಸುಧೆಯೊಳನ್ನದಾನಕೆ ಸರಿಯುಂಟೆಅಶನವ ತೊರೆದ ಯೋಗಿಗೆ ಭಯವುಂಟೆವ್ಯಸನಿಯಾದ ನೃಪನಿಗೆ ಸುಖವುಂಟೆ 3 ಧನಲೋಭಿಗಿನ್ನಧಿಕ ಹೀನನುಂಟೆಮನವಂಚಕ ಕಪಟಿಗೆ ನೀತಿಯುಂಟೆಸನುಮಾನಿಸುವ ಒಡೆಯಗೆ ಬಡತನವುಂಟೆವಿನಯವಾಗಿಹ ಸಂಗದೊಳು ಭಂಗವುಂಟೆ4 ಹರಿಭಕ್ತಿಯಿಲ್ಲದವಗೆ ಪರಲೋಕವುಂಟೆಪರಮಸಾತ್ತ್ವಿಕ ಗುಣಕೆ ಪಿರಿದುಂಟೆಪರನಿಂದೆಗಿಂತಧಿಕ ಪಾತಕವುಂಟೆವರದಾದಿಕೇಶವನಲ್ಲದೆ ದೈವವುಂಟೆ 5
--------------
ಕನಕದಾಸ
ಸಾಧುರ ಮಹಿಮೆಯು ಸಾಧಿಸದೆ ತಿಳಿಯದು ಭೇದಿಸದಲ್ಲದೆ ಹೊಳೆಯದಿದು ಧ್ರುವ ತೆಂಗಿನ ಫಲದಂತವರ ಸಂಗದಸುಖ ಹಿಂಗದಂತನುದಿನ ಅನುಭವಿಸುವದಲ್ಲದೆ 1 ಬಂಡೆಯೊಳಿದ್ದದ ತಾ ಒಡೆದು ಪ್ರಾಶಿಸಿದಂತೆ ಕಡಲೊಳಗಿದ್ದ ರತ್ನ ಮುಳುಗಿ ತೆಗೆದಂತೆ 2 ಅಂತರಾತ್ಮದ ಸುಖ ಮಹಾತ್ಮರಗಲ್ಲದೆ ಮೂಢಾತ್ಮರಿಗಿದು ಎಲ್ಲಿಹುದು 3 ಸಾಧು ಸಂತರ ನಿಜದಾಸ ಮಹಿಪತಿಗಿನ್ನು ಸಾಧು ಸಂಗತಿ ಜೀವನ್ಮುಕ್ತಿಯು 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧುಸಂಗ ಶೀಘ್ರಕೂಡಿಸೊ ಪ ಎಷ್ಟು ದಿನ ಕಷ್ಟಪಡುವದೋಈ ಭವದೊಳು ಈಸಲಾರೆನಯ್ಯ ಹರಿಯೇ ಇಷ್ಟು ದಿನ ಇದ್ದಂತೆ ಇರಲಾರೆನೆಂದು ಕರವ ಮುಟ್ಟಿ ಮುಗಿದು ಬೇಡಿಕೊಂಬೆ ಮುರಾರಿ ಕೃಷ್ಣ ನೀನೇ ಕಾಯೋ 1 ಹರಿಹರರು ಸಮಾನರೆನ್ನದಾ ಈ ಸಜ್ಜನರಾ- ಸಂಗದಿಂದ ಹೀನಾ ನಾನಾದೆ ಇನ್ನುಮ್ಯಾಲೆ ಇಲ್ಲವಯ್ಯ ಸೃಷ್ಟಿಗಧಿಕ ಶ್ರೀನಿವಾಸಾ ಇನ್ನು ನಿನ್ನ ಸ್ಮರಣೆಯಿಂದ ಇರುವೆನಯ್ಯ ಮುಕುಂದ 2 ಪೃಥ್ವಿಯಲ್ಲಿ ಪುಟ್ಟಿದಾ ಮೊದಲು ನಿನ್ನಾ ವೃತ್ತಾಂತ ಒಂದು ದಿನ ಮಾಡಲಿಲ್ಲವೋ ಎಂದು ಎನ್ನ ಮ್ಯಾಲೆ ಕ್ರೂರದೃಷ್ಟಿಯಿಂದಾ ನೋಡಾದೀರು ವಾಸುದೇವ ವೈಕುಂಠವಾಸ ಲಕ್ಷುಮಿ ರಮಣ3 ನಿತ್ಯದಲ್ಲಿ ವಿಪ್ರರಾ ವೃಂದಾದೊಳಗೆ ನಾ ಆ- ಸಕ್ತನಾಗಿ ಇರುವೆ ಮುಕುಂದಾ ಎಂಥ ಪಾಪಿ ಎಂದು ಉದಾಸೀನಮಾಡಿ ನೋಡಬೇಡ ನಿನ್ನ ಕಂದಾನೆಂದು ತಿಳಿದು ಪಾಲಿಸಯ್ಯ ನಾರಾಯಣ 4 ಹನುಮ ಭೀಮ ಮಧ್ವೇಶಾರಿಂದಾ ಸೇವಿತ ಪ್ರಿಯಾ ಶಾಂತಮೂರ್ತಿ ಶಾಮವರ್ಣನೇ ಶ್ರೀದವಿಠಲೇಶಾ ನಿನ್ನಾ ದಾಸನೆಂದು ಪಾಲಿಸೆನ್ನ ಸಾರಿ ಬೇಡಿಕೊಂಬೆನಯ್ಯ ರಾಮಚಂದ್ರ ರಾವಣಾಚಾರಿ5
--------------
ಶ್ರೀದವಿಠಲರು
ಸಾಂಬ ಶಿವ ಶರಣರಿಗೊಂದು ಶರಣಾರ್ಥಿ ಪ ನರಲೋಕದೊಳಗೆ ಸಂಚಾರವ ಮಾಡುವ ಪರಮಾತ್ಮ ಪರಿಪೂರ್ಣ ಎಲ್ಲ ಜೀವದೊಳೆಂದು ಅರಿತಂಥವನಿಗೊಂದು ಶರಣಾರ್ಥಿ ಮರೆಹೊಕ್ಕ ದೀನರನು ರಕ್ಷಿಪ ಪುಣ್ಯ ಪುರು ಪುರುಷ ಪ್ರಯತ್ನದಿಂದುದ್ಯೋಗವನು ಮಾಳ್ಪ ಸರಿವಂಥವರಿಗೊಂದು ಶರಣಾರ್ಥಿ 1 ಧಾರಣಿಯೊಳು ಪೆಸರೊಡೆದು ರಂಜಿಸುವಂಥ ಕಾರುಣಿಕರಿಗೊಂದು ಶರಣಾರ್ಥಿ ದವರಿಗೊಂದು ಶರಣಾರ್ಥಿ ನಿತ್ಯ ಕರ್ಮವ ರಚಿಸುವ ಚಾರು ಶೀಲರಿಗೊಂದು ಶರಣಾರ್ಥಿ ಸ್ಸಾರ ಮಾಡಿದಗೊಂದು ಶರಣಾರ್ಥಿ 2 ಕೆರೆಭಾವಿ ದೇವಾಲಯಗಳ ಕಟ್ಟಿಸಿ ದೇವರುತ್ಸವವನು ಬರಿಸುವಗೆ ದ್ಧರಿಸಿ ಭುಂಜಿಪಗೊಂದು ಶರಣಾರ್ಥಿ ಪರದಾರ ಪರದ್ರವ್ಯ ಪರದ್ರೋಹವಿಲ್ಲದ ಮಹಾ ಪುರುಷರಿಗೊಂದು ಶರಣಾರ್ಥಿ ಹರಿಹರರೊಳಗೆ ಭೇದವ ಮಾಡಿ ನಡೆಯದ ದುರಿತ ದೂರರಿಗೊಂದು ಶರಣಾರ್ಥಿ 3 ಸತ್ತು ಹುಟ್ಟುವ ಭವಶರಧಿಯ ಗೆಲುವಂಥ ಉತ್ತಮರಿಗೊಂದು ಶರಣಾರ್ಥಿ ನಿತ್ಯ ಸಾಲಿಗ್ರಾಮಂಗಳನು ಪೂಜಿಸಿ ಹರಿ ತೀರ್ಥಗೊಂಬನಿಗೊಂದು ಶರಣಾರ್ಥಿ ಕೃತ್ತಿ ವಾಸನ ಆಗಮೋಕ್ತದಿ ಪೂಜಿಪ ಭಕ್ತಿವಂತರಿಗೊಂದು ಶರಣಾರ್ಥಿ ತತ್ವ ವಿಚಾರ ವೇದಾಂತದ ಅರ್ಥವ ಯಾ ವತ್ತರಿದವಗೊಂದು ಶರಣಾರ್ಥಿ 4 ಅರವಟ್ಟಿಗೆಯನು ಚೈತ್ರದೊಳಿಕ್ಕಿ ಜನರಿಗೆ ನೀರೆರಸಿದವರಿಗೊಂದು ಶರಣಾರ್ಥಿ ಸಿರಿ ತುಳಸಿಯನ್ನು ನೇಮದಲಿ ಪೂಜಿಸುವಂಥ ಹರಿ ಶರಣರಿಗೊಂದು ಶರಣಾರ್ಥಿ ತರಣಿಯೆ ತ್ರಿಗುಣಾತ್ಮಕನೆಂದು ಹೃದಯದೊಳರಿ ದೆರಗುವಗೊಂದು ಶರಣಾರ್ಥಿ ಮರುಸುತನ ಕೋಣೆ ವಾಸ ಲಕ್ಷ್ಮೀಶನ ಚರಣ ಪಂಕಜಕೊಂದು ಶರಣಾರ್ಥಿ 5
--------------
ಕವಿ ಪರಮದೇವದಾಸರು
ಸಾಂಬಶಿವಾ ಜಯ ಸಾಂಬಶಿವಾ ಪ ಸುರರ ತೋರಿಕೆಗೆ ಬಂದು ಕೈಲಾಸ ಮಂದಿರ ಮಾಡೀ | ಧರೆಯೊಳು ಸರ್ವರ ಮನದಿರುವಾ 1 ತನ್ನವರನ್ನಯರು ಎಂಬಾ ಭಾವ ಭೇದವಿಲ್ಲದಲೆ ಉನ್ನಂತ ಸಂಪದ ಸಲಿಸುವಾ 2 ತಂದೆ ಮಹಿಪತಿ - ಪ್ರಭು ಶರಣೂ ಹೊಕ್ಕವರ ಚಿದಾ | ನಂದ ಸುಖಾಲಯ ಸೇರಿಸುವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಾಮಗಾಯನ ಲೋಲ ವಿಠ್ಠಲನೆ ಸಲಹೋ ಪ ಕಾಮಿತಾರ್ಥಗಳಿವಗೆ ಪ್ರೇಮದಲಿ ಕೊಡುತಲಿಶ್ರೀ ಮನೋಹರ ಹರಿಯೆ ಕಾಪಾಡೊ ಇವನಾ ಅ.ಪ. ಹರಿಗುರೂ ಸದ್ಭಕ್ತಿ | ತರತಮದ ಸುಜ್ಞಾನನಿರುತ ಕರುಣಿಸಿ ಅರಿಪು | ಮೂರೆರಡು ಭೇದಾಹರುಷ ಕ್ಷೇಶಾದಿಗಳು | ಹರಿಯಧೀನಗಳೆಂಬಅರಿವಿನಿಂದಲಿ ದ್ವಂದ್ವ | ಸಹನೆಗಳನೀಯೊ 1 ಲೌಕಿಕದಿ ನಿನ್ನಾನೇಕ ಬಗೆ ವ್ಯಾಪ್ತಿಗಳ ತೋಕನಿಗೆ ತಿಳಿಸುತ್ತ ಸಾಕಬೇಕಿವನಾಪ್ರಾಕ್ಕು ಕರ್ಮವ ಕಳೆದು ಗೋಕುಲಾನಂದ ಹರಿನೀಕೊಡು ಸತ್ಸಂಗ | ಏಕಾಂತಿಕರ ಪ್ರಿಯನೆ 2 ಎಲ್ಲ ಬಲ್ಲವಗಿನ್ನು ಸೊಲ್ಲುಂಟೆ ನಾಪೇಳಿಮಲ್ಲ ಮರ್ಧನ ದೇವ | ಪ್ರಹ್ಲಾದ ವರದಾಕ್ಷುಲ್ಲಕನ ಕರಪಿಡಿದು | ಬಲ್ಲಿದನ ಮಾಡೆಂದುಚೆಲ್ವ ಗುರು ಗೋವಿಂದ ವಿಠಲ ಪ್ರಾರ್ಥಿಸುವೇ 3
--------------
ಗುರುಗೋವಿಂದವಿಠಲರು
ಸಾಮಜ ವರದಗೆ ಮಾಮನೋಹರಗೆ ಕಾಮನ ಪಿತ ಶಾಮವರ್ಣ ಶ್ರೀಹರಿಗೆ ವಾಮದೇವನ ಸಖ ಸೋಮವದನ ಹರಿಗೆ ಕಾಮಿನಿ ಸತ್ಯಭಾಮ ಪತಿಗೆ ಹೊಸ ಹೇಮದಾರುತಿಯ ಬೆಳಗಿರೆ 1 ಲಕ್ಷ್ಮೀಯ ಅರಸಗೆ ಪಕ್ಷಿವಾಹನಗೆ ಮೋಕ್ಷದಾಯಕ ಪಾಂಡವ ಪಕ್ಷ ಶ್ರೀಹರಿಗೆ ವಕ್ಷಸ್ಥಳದಿ ಲಕ್ಷ್ಮೀಯ ಪೊರೆವ ಕುಕ್ಷಿವಳಗೆ ಜಗವ ರಕ್ಷಿಸುವ ಹರಿಗೆ ಲಕ್ಷದಾರತಿಯ ಬೆಳಗಿರೆ 2 ಭೋಗಿ ಶಯನಗೆ ಬೇಗದಿಂದಲಿ ಭಕ್ತರ ಪೊರೆವಗೆ ವಾಗೀಶವಂದ್ಯ ಶ್ರೀ ಗುರು ವಿಜಯವಿಠ್ಠಲ ಮಂಗಳ ಮಹಿಮ ತುಂಗ ಚರಿತ ಹರಿಗೆ ಮಂಗಳಾರುತಿಯ ಬೆಳಗಿರೆ 3
--------------
ವಿಜಯದಾಸ