ರಾಮ ನಿಮ್ಮ ನಾಮಧ್ಯಾನ ಜಿಹ್ವೆ ಮೇಲೆ ನಿಲಿಸು ಪ ಜಗದಭಿಮಾನ ಬಿಡಿಸಿ ಸುಗುಣ ಸಂತಸಂಗ ಪಾಲಿಸಿ ಸುಗುಣಾಂತರಂಗ ನಿನ್ನ ಸಗುಣ ಪೊಗಳಿಸೆನ್ನ ಮುಖದಿ 1 ಮದಮತ್ಸರಗಳನು ಬಿಡಿಸಿ ಸದಮಲ ಜ್ಞಾನಾನಂದದಿರಿಸಿ ಸದಮಲಾತ್ಮ ನಿಮ್ಮ ಮೂರ್ತಿ ಸದಾಯೆನ್ನ ನೇತ್ರದೊಳ್ನಿಲಿಸು 2 ಕಾಮಿತಂಗಳ ಕಡೆಹಾಯ್ಸಿ ಭೂಮಿ ಸೀಮೆ ಮೋಹ ತೊರೆಸಿ ಸ್ವಾಮಿ ಮಮಪ್ರಾಣದಾರ್ಯ ಶ್ರೀ ರಾಮದಾಸನೆನಿಸು ಒಲಿದು 3
ರಾಮ ಭಜನೆ ಮಾಡೋ ಮನುಜ ರಾಮ ಭಜನೆ ಮಾಡೋ ಪ ರಾಮ ರಾಮ ಜಯ ರಾಘವ ಸೀತಾ ರಾಮನೆಂದು ಸುಸ್ವರದಲಿ ಪಾಡುತಅ.ಪ ತಾಳವನು ಬಿಡಬೇಡ ಮೇಳವನು ಮರೆಬೇಡ ತಾಳಮೇಳಗಳ ಬಿಟ್ಟು ನುಡಿದರೆ ತಾಳನು ನಮ್ಮ ಇಳಾಸುತೆಯರಸನು 1 ಭೃತ್ಯ ಮನೋಭಾವದಲಿ ಸತ್ಯ ಜ್ಞಾನ ಅನಂತ ಬ್ರಹ್ಮನು ಹೃದ್ಗತನೆಂದರಿಯುತ ಭಕುತಿಯಲಿ 2 ಭಲರೆ ಭಲರೆಯೆಂದು ತಲೆದೂಗುವ ತೆರದಿ ಕಲಿಯುಗದಿ ವರಕೀರ್ತನೆಯಿಂದಲಿ ಸುಲಭದಿ ಹರಿಯ ಪ್ರಸನ್ನತೆ ಪಡೆಯಲು 3
ರಾಮ ರಾಮ ರಾಮ ರಾಮಯೆಂದು ರಾತ್ರಿ ಹಗಲು---ಪ್ರೇಮದಿಂದ ಇಲ್ಲಿ ಬಂದು ಪ್ರತಿಗತಿ ಪಡಿಸಿಯಿಂದೂ ಪ ಕಾಮಿತ ಫಲದಾಯಕನೆಂದೂ ಕಮಲಗರ್ಭನ ಪಿತನೀತೆಂದೂ ನಿತ್ಯ ಕರ್ಮದಿಂದ 1 ಒಂದು ನಿಮಿಷ ಮರೆಯದೆಂದು ವಾಸುದೇವಾನಂದ ನೆಂದೂ ನಾಮ ನರೆ ತಂದೂ 2 ಸಿಂಧು ಶಯನ ಶ್ರೀನಿವಾಸ `ಹೊನ್ನವಿಠ್ಠಲೇಶಾ’ 3
ರಾಮ ರಾಮ ಶ್ರೀ ರಘುರಾಮ ನೀಲಮೇಘ- ಶ್ಯಾಮ ನಿಸ್ಸೀಮ ಕಾಮಿತಾರ್ಥವಕರೆದತಿ- ಪ್ರೇಮದಿಂದ ಪಾಲಿಸುವುದು ನಿನ್ನ ನಾಮ ಪ ಕಲ್ಲೋದ್ಧಾರಕ ಕರುಣಾಳು ರಾಮ ಬಿಲ್ಲನೆತ್ತಿದ್ದ ಬಿರುದಾತ ರಾಮ ಸೊಲ್ಲು ಸೊಲ್ಲಿಗಿರಲು ಹರಿನಾಮ ಚೆಲ್ಲ್ಯಾಡುವ ದಯ ಅವರಲ್ಲಿ ಪ್ರೇಮ 1 ಧೀರಪುರುಷನೆ ದಿಗ್ವಿಜಯ ರಾಮ ವಾರಿಧಿಯ ಕಟ್ಟಿದ್ವನಜಾಕ್ಷ ರಾಮ ಕ್ರೂರರಾಕ್ಷಸರನು ಕೊಂದು ಲಂಕಾ ಸೂರೆಯನು ಮಾಡಿದಂಥ ನಿಸ್ಸೀಮ 2 ದುಷ್ಟರಾವಣಶತ್ರು ಶ್ರೀರಾಮ ಹುಟ್ಟಿ ಭಾನುವಂಶದಿ ಸೀತಾರಾಮ ಮುಟ್ಟಿಭಜಿಸೆ ಸಜ್ಜನರಿಗೆ ಭೀಮೇಶ- ಧಾಮ 3