ಒಟ್ಟು 32858 ಕಡೆಗಳಲ್ಲಿ , 139 ದಾಸರು , 10357 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣು ಬಂದೆನೊ ಹರಿಯೆ ಶರಣು ಬಂದೆನೊ ಪ ಕರುಣದಿ ನೋಡೆನ್ನ ಸಲಹು ಎಂದೆನೊ ಅ.ಪ. ಜನನ ಮರಣ ಸುಳಿಗಳಲಿ ತೊನೆದು ಬಳಲಿ ನೊಂದೆನೊಘನಭವದಲಿ ಮೂರುತಾಪಗಳಲಿ ಸಿಲುಕಿ ಬೆಂದೆನೊ 1 ಧನಕೆ ಮೆಚ್ಚಿ ನಿನ್ನ ಮರೆತು ಕಹಿಯ ಫಲವ ತಿಂದೆನೊಅನುದಿನ ಘನ ಚಿಂತೆಯಿಂದ ಮನದ ಶಾಂತಿ ಹೊಂದೆನೊ 2 ವನಿತೆ ಸುತರು ಪೊರೆವರೆಂಬ ಭ್ರಮದೊಳಾತ್ಮ ಕೊಂದೆನೊಕೊನೆಗೆ ಗದುಗು ವೀರನಾರಾಯಣನೆ ಗತಿಯೆಂದೆನೊ 3
--------------
ವೀರನಾರಾಯಣ
ಶರಣು ಭಾರತಿರಮಣ ಶಮಲವರ್ಜೀತ ಚರಣ ಕೆರಗಿ ಬೇಡುವೆ ವರವ ಪಿಡಿಯೆನ್ನ ಕರವಾ ಪ ಇಪ್ಪತ್ತೊಂದು ಸಾವಿರದಾರುನೂರು ಜಪ ತಪ್ಪದೆಲೆ ಸಕಲ ಜೀವರೊಳು ಜಪಿಸಿ ಮುಪ್ಪಿಲ್ಲದ ಜನ ಪದವಿಯನೈದಿ ಭಜಕರಿಗೆ ಸುಪ್ತಿ ಸ್ವಪ್ನವ ಬಿಡಿಸಿ ಮುಕ್ತರನು ಮಾಳ್ಪೆ 1 ಪವಮಾನರಾಯಾ ನೀ ಸಲಹದಿರೆ ಪಾಲಿಸುವ ದಿವಿಜರಿನ್ನುಂಟೇನೋ ಲೋಕದೊಳಗೆ ಯವನರಿಂದಲಿ ಬಂದ ಭಯವ ಪರಿಹರಿಸಿ ನಿ ನ್ನವರ ಸಂತೈಸು ಸರ್ವಕಾಲದಲೀ 2 ಲೋಗರಿಗೆ ಬೇಡಿದಿಷ್ಟಾರ್ಥಗಳ ಕೊಟ್ಟು ಚ ನ್ನಾಗಿ ಸಂತೈಪೆನೆಂದನು ದಿನದಲೀ ಭೋಗಪುರದಲಿ ಬಂದು ನೆಲೆಸಿದೆಯ ನೀ ಪರಮ ಭಾಗವತ ತಿಲಕ ಪಾಲಕ ವೀತಶೋಕ 3 ಭಾನುನಂದನಗೆ ನೀ ಒಲಿದ ಮಾತ್ರದಲಿ ರಘು ಸೂನು ಸಂರಕ್ಷಿಸಿದ ಸುರಪತನಯಾ ವಾನÀರೋತ್ತಮ ವಾಲಿಯನು ಸದೆದ ನಿನ್ನ ದಯ ಕಮಲ ಸಂಭವನ ಪದಕೆ ಯೋಗ್ಯ 4 ಶುಚಿನಾಮಕನೆ ಎನಗೆ ಹರಿಕಥಾ ಶ್ರವಣದಲಿ ರುಚಿಪುಟ್ಟುವಂತೆ ಮಾಡುನುಗಾಲದೀ ಮುಚುಕುಂದ ವರದ ಜಗನ್ನಾಥವಿಠಲನ ಗುಣ ರಚನೆಗೈವ ಸಮರ್ಥ ನೀನೇ ಸುಕೃತಾರ್ಥ 5
--------------
ಜಗನ್ನಾಥದಾಸರು
ಶರಣು ವಾಯು ತನುಜ ಶರಣು ಭಾಸ್ಕರÀ ತೇಜ | ಶರಣು ರಾಜಾಧಿರಾಜ | ಶರಣು ಗೋಸಹಜ | ಶರಣಾರ ಸುರಭೋಜ ಪ ಸೂತ್ರನಾಮಕ ದೇವ | ಸ್ತೋತ್ರ ಮಾಳ್ಪರ ಕಾವ | ಚಿತ್ರ ಮಹಿಮರ ಕಾವ ವಿ | ಚಿತ್ರ ಶರೀರ ಸ | ಹೇಮ | ಪಾತ್ರಿಯೊಳಗೆ ಸವಿದು ಶ್ರೀಪತಿಯ ಶತ | ಪತ್ರ ಪಾದವ ಕಾ | ಲತ್ರಯ ನೆನೆಸುವನೆ 1 ಇದೆ ಭಾಗ್ಯ ನಾನಾವದೂ ಒಲ್ಲೆ | ಆ ನಾಮದ ಸೊಲ್ಲೆ ಮೇಣು ಪಾಲಿಪುದು ಮುಖ್ಯ | ಪ್ರಾಣಪಾವನ ಲೀಲ | ದಾನವರ ಕುಲಕಾಲ | ಏನೇನು ಮಾಳ್ಪಾಧಿಷ್ಠಾನದಲಿ | ನೀನೇ ನಾನೆಲ್ಲಿ ಎಣೆಗಾಣೆ2 ವಂದಿಸುವೆ ಜಗದ್ಗುರುವೆ | ಎಂದು ನಿನ್ನನು ಕರೆವೆ | ಮುಂದೆ ಈ ಜನ್ಮವು | ಹಿಂದೆ ಮಾಡಿ ನೇಮವು | ಪೊಂದಿಸು ಮೇಲುಗತಿ | ತಂದೆ ತಾಯಿ ಮಿಕ್ಕ | ನಿತ್ಯ | ವೆಂದೆ ಬಂದೆ ಸತ್ಯ ಕುಂದದೆ ಉದ್ಧರಿಸು 3 ದಾತ | ರೋಮ ರೋಮ ಕೋಟಿ ಕಾಮ ಸಂಹಾರನೇ | ಭೂಮಂಡಲಧರನೆ ಭೀಮಶೈನ | ಭೀಮ ರಿಪು ಗಂಟಲಗಾಣ | ತಾಮಸ ಜ್ಞಾನವಳಿ | ಸುಳಿ | ಶ್ರೀ ಮದಾನಂದತೀರ್ಥ4 ಶ್ರೀ ಸಪುತ ಕುಜನರ | ಭಾಷ್ಯ ಮುರಿದ ಧೀರ | ಭಾಸುರ ಕೀರ್ತಿ ಹಾರಾ | ದೋಷರಾಶಿ ದೂರ | ಹ್ರಾಸವಿಲ್ಲದ ಮಹಿಮ | ಶ್ರೀಶ ವಿಜಯವಿಠ್ಠಲನ್ನ | ದಾಸರೊಳಧಿಕ ನಿನ್ನ ಲೇಶವಾದರು ಬಿಡೆ | ನಾ ಸರ್ವಥಾ ಕರೆ | ತೋಷದಲಿಡುವುದೆನ್ನ 5
--------------
ವಿಜಯದಾಸ
ಶರಣು ವೆಂಕಟ ರಮಣ ಭಕ್ತ ಸಂಕಟ ಹರಣ ಶರಣು ಶೇಷಾದ್ರೀಶ ಪರಿಹೃತನೆ ಭವಪಾಶ ಶರಣು ಸರ್ವರಿಗಾದ್ಯ ಅಜಭವಸುರಾರಾಧ್ಯ ಶರಣು ವೇದಾಂತ - ವೇದ್ಯ ಪ ದುರಿತ ನಾಮ ವಿಶ್ವಂಭರಿತ ಶರಣು ಘನಕಾರುಣಿಯೆ ದೇವ ಚೂಡಾಮಣಿಯೆ ಶರಣು ಮಹಿಪತಿ ನಂದ ನೋಡಿಯ ಪರಮಾನಂದ ಶರಣು ಶ್ರೀ ಹರಿಮುಕುಂದಾ 1
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶರಣು ಶಂಕರ ಭೂಷಣಾದ್ರಿಗೆ ಶರಣು ಅಭಯಾಚಲನಿಗೆ ಪ ಶರಣು ಖಗಮೃಗ ತರುಲತಾಂಕಗೆ ಶರಣು ವಿಂಶತಿ ನಾಮಗೆ ಅ.ಪ. ವರಹ ನೀಲಾಂಜನ ಕನಕಋಷಿ ಗರುಡ ಘನ ನಾರಾಯಾಣಾ ಉರಗ ತೀರ್ಥಾನಂದ ಶ್ರೀ ಪು ಷ್ಕರ ವೃಷಭ ವೈಕುಂಠಗೆ 1 ಜ್ಞಾನ ಪರ್ವತ ಮೇರು ಶೃಂಗಗೆ ಶ್ರೀನಿವಾಸ ಸುಕ್ರೀಡಗೆ ಪಂ ಚಾನನಾಹ್ವಯ ವೆಂಕಟಾದ್ರಿಗೆ ಕ್ಷೋಣಿಯೊಳು ಸುರಮಾನ್ಯಗೆ 2 ರತುನ ಕಾಂಚನ ಶ್ರೀನಿವಾಸನ ಪ್ರತಿಮೆಯಂದದಿ ಪೊಳೆವಗೆ ಕೃತಿರಮಣ ಜಗನ್ನಥವಿಠಲಗೆ ಅತುಳ ಮಂಗಳನೆನಿಪಗೆ 3
--------------
ಜಗನ್ನಾಥದಾಸರು
ಶರಣು ಶಂಕರಿ ಪ ಣಾರವಿಂದಕೆ ನಮೋ ಅ.ಪ ಪೊರೆಯೆ ನೀನೆ ಸ್ಥಿರಸುಖದೊಳು 1 ಕೆಟ್ಟೆವಲ್ಲವೇ ಭವಾನಿ 2 ಮಾಯಾ ಕಾಯ್ದು (ನೀ) ಆದರಿಸವ್ವ 3 ಕಾಂತೆ ಸಲಹೆಮ್ಮನು 4 ಮಣಿದು ಪ್ರಾರ್ಥಿಸುವೆನು 5 ನಿರ್ವಾರಿಸಲುಸುರಿದೆವು 6 ಜಾಯೆ ನಮೋ ಸರ್ವೇಶ್ವರಿ 7
--------------
ಸದಾನಂದರು
ಶರಣು ಶರಣು ಕೃಷ್ಣಕೃಷ್ಣ ಶರಣು ಶರಣು ರಾಮ ರಾಮ ಶರಣು ಶರಣು ಶ್ರೀನಿವಾಸ ಶರಣು ಶರಣು ಶ್ರೀ ಹರೇ ಪ ಗುರುಸು ಭಕ್ತಿ ನೀಡಿ ಎನಗೆ ವರಿಸಿ ಶುದ್ಧ ದಾಸನೆಂದು ಕರುಣ ತೋರೊ ಕೇಶವ ಅನಂತ ರೂಪಿಯೇ ಅ.ಪ ಲೇಸಿನಿಂದ ಬ್ರಹ್ಮಶಿವರ ಪ್ರೇರಿಸುತ್ತ ಜಗವ ಪೊರೆವೆ ದಾಸನೆಂದು ಮೊರೆಯ ಹೊಕ್ಕೆ ಕಾಯೊ ಕೇಶವಾ 1 ವಾರಿನಿಲಯ ದೋಷದೂರ ಪೂರ್ಣಕಾಮ ಮುಕ್ತರೀಶ ಶರಧಿ ನಾರಾಯಣ 2 ವೇದಮಾತೆ ಶೃತಿ ಸುಗೀತೆ ವೇದಮಾನಿ ಲಕ್ಷಿರಮಣ ಶೂನ್ಯ ಮಾಧವ 3 ವಿನುತ ಸಾರ ವೇದಬಲ್ಲ ಸಾಧು ಪ್ರಾಪ್ಯ ವೇದಪಾಲ ಶರಣು ಗೋವಿಂದ 4 ವಿಶ್ವಜನಕ ವಿಶ್ವಪಾಲ ವಿಶ್ವವ್ಯಾಪ್ತ ವಿಶ್ವಭೋಕ್ತ ವಿಶ್ವಜೂತಿ ವಿಶ್ವಬಲನೆ ಶರಣು ವಿಷ್ಣುವೆ 5 ಆದಿ ದೈತ್ಯರನ್ನು ಕೊಂದು ಮೇದಿನೀಯ ಪೊರೆದ ದೇವ ಬಾಧೆ ಹರಿಸು ಮೂರು ವಿಧಧ ಮಧುಸೂದನ 6 ಲೋಕತ್ರಯವ ನಳೆದ ನೇಕ ಏಕನಿನಗೆ ಸಾಟಿಯಾರು ಜೋಕೆಯಿಂದ ಸಾಕಬೇಕು ತ್ರಿ-ವಿಕ್ರಮ 7 ಸೋಮ ಹಳಿದ ಕಾಂತಿಧಾಮ ನೇಮದಿಂದ ಬಲಿಯ ಕಾಯ್ದೆ ಹೇಮ ಜ್ಯೋತಿ ಪೂರ್ಣ ಸುಖಿಯೆ ಶರಣು ವಾಮನ 8 ಬೊಮ್ಮಶಿವರ ಕುಣಿಸಿ ಆಳ್ವ ಅಮ್ಮ ಪ್ರಕೃತಿಯನ್ನು ಧರಿಸಿ ಸುಮ್ಮಗೇನೆ ಜಗವ ಕಾವೆ ಶರಣು ಶ್ರೀಧರ 9 ಕರಣ ವ್ರಾತದಲ್ಲಿ ನಿಂತು ಕರಣಕಾರ್ಯಗಳನು ನಡಿಸಿ ಕರಣ ಪತಿಗಳನ್ನು ಪೊರೆವೆ ಹೃಷಿಕೇಶನೆ 10 ಉದರದಲ್ಲಿ ಜಗವ ಪೊತ್ತು ಸದರದಿಂದ ಒಪ್ಪಿಕೊಂಡೆ ಉದರದಲ್ಲಿ ರಜ್ಜುಭಂಧ ದಾಮೋದರ 11 ಚೊಕ್ಕವಿಧಿಯ ಹಾಗೆ ಜಗವ ಕುಕ್ಷಿಯಲ್ಲಿ ಪಡೆದ ದೇವ ಶರಧಿ ಶಯನ ಪದ್ಮನಾಭನೆ12 ಭಕ್ತಜನರ ಪಾಪಸೆಳೆವ ಶಕ್ತ ಪ್ರಲಯ ಸ್ತುತಿಗೈವ ದೇವ ಮುಕ್ತಿದಾತ ವಿಶ್ವಕುಕ್ಷಿ ವಾಸುದೇವನೆ 14 ಮೇರೆಯಿರದ ಕಾಂತಿಮಯನೆ ಸೇರಿ ಭಾಸ ಕೊಡುವೆ ರವಿಗೆ ಬೀರಿ ಜ್ಞಾನ ಭ್ರಾಂತಿ ಹರಿಸು ಪ್ರ-ದುಮ್ನನೆ 15 ನೀ ನಿರೋಧ ಕಾಣೆ ಎಂದು ನೀನೆ ಸಿಗುವೆ ಭಕ್ತಿ ಬಲೆಗೆ ಕೃಪಣ ಕ್ಷಮಿಸು ಅನಿ-ರುಧ್ಧನೆ 16 ಕ್ಷರರು ಜೀವ ರಾಶಿ ಎಲ್ಲಕ್ಷರ ವಿರುಧ್ಧ ಲಕ್ಷ್ಮಿತಾನು ವರನು ಭಿನ್ನ ಉಭಯರಿಂದ ಪುರುಷೋತ್ತಮ 17 ಕರಣಗಳಿಗೆ ಸಿಗುವನಲ್ಲ ಕರಣಗಳಲಿ ಭೇದವಿಲ್ಲ ಕರಣಜಯವ ಸಿಧ್ಧಿಸೆನಗೆ ಅ-ಧೋಕ್ಷಜ18 ದೋಶರಹಿತ ಮುಕ್ತರೀಶ ನಾಶರಹಿತ ಲಕ್ಷ್ಮಿರಮಣ ಈಶಬಿಂಬ ಜೀವ ಹೃಸ್ಥ ನಾರಸಿಂಹನೆ 19 ಜೀವರೊಡನೆ ವಿತತ(ಇರುವೆ) ಅಚ್ಯುತ 20 ಇಂದ್ರನನುಜ-ನಿಜಮಹೇಂದ್ರ ತಂದೆ ಸುಖವ-ದಿವಿಜಣಕೆ ವಂದ್ಯ ವಂದ್ಯ-ವಂದಿಸುವೆನು ಶ್ರೀ- ಉಪೇಂದ್ರನೆ 21 ಸೃಷ್ಠಿಗೈದು ಜಗವ ಲಯಿಪೆ ದುಷ್ಟದಮನ ಶಿಷ್ಟವರದ ಹುಟ್ಟು ಸಾವು ಕಟ್ಟು ಬಿಡಿಸೊ ಶ್ರೀ ಜನಾರ್ದನ 22 ಯಜ್ಞಭೋಕ್ತ ಮನುವ ಪೊರೆದೆ ಭಗ್ನಗೈಸಿ ದೋಷವೆನ್ನ ಜ್ಞಾನ ನೀಡೋ ಸುಜ್ಞನೆನಿಸು ವಾಜಿವದನ ಶರಣು ಶ್ರೀಹರೇ 23 ವಿಭವ ಮೂರ್ತಿ ಭಕ್ತಮನವ ಪಾಪ ಸೆಳಿವೆ ರಿಕ್ತನಾನು ಸರ್ವವಿಧಧಿ ಕಾಯೊ ಶ್ರೀಕೃಷ್ಣ 24 ಸರ್ವ ಶಬ್ದವಾಚ್ಯ “ಶ್ರೀಕೃಷ್ಣವಿಠಲ”ನನ್ನು ನೆನೆಯೆ ಸರ್ವಸುಖಗಳಿತ್ತುಕಾವ ಜಿಷ್ಣು ತೆರದಿ ಸತ್ಯಹೋ 25
--------------
ಕೃಷ್ಣವಿಠಲದಾಸರು
ಶರಣು ಶರಣು ಪ ಶರಣುಮತ್ಸ್ಯನೆ ಕೂರ್ಮಕ್ರೋಡನರಹರಿ ವಟುಭಾರ್ಗವಶರಣುರಾಘವ ಕೃಷ್ಣ ಬುದ್ಧಶರಣು ಕಲ್ಕಿ ರೂಪನೆ1 ನಂಬಿದೆ ನಾನಿನ್ನ ಕೇಶವನಾರಾಯಣನೇ ಮಾಧವಅಂಬುಜಾಕ್ಷ ಗೋವಿಂದ ವಿಷ್ಣುಸಂಭ್ರಮದಿ ಮಧುಸೂದನ2 ಕರುಣದಲಿ ರಕ್ಷಿಸು ತ್ರಿವಿಕ್ರಮಕಲಿತ ವಾಮನ ಶ್ರೀಧರಪರಮಪಾವನ ಹೃಷೀಕೇಶನೆಪದ್ಮನಾಭ ದಾಮೋದರ 3 ಅನಿರುದ್ಧ ಅಧೋಕ್ಷಜ 4 ಶ್ರುತಿಗಗೋಚರ ನಾರಸಿಂಹಾ-ಚ್ಯುತ ಜನಾರ್ದನುಪೇಂದ್ರನೆಚತುರವಿಂಶತಿ ನಾಮದಲ್ಲಿಹಚತುರ ಹರಿ ಶ್ರೀಕೃಷ್ಣನೆ 5
--------------
ವ್ಯಾಸರಾಯರು
ಶರಣು ಶರಣು ಲಿಂಗಾ | ಶರಣು ಶ್ರೀ ಭಸಿತಾಂಗಾ | ಶರಣು ಗಗನ ಗಂಗಾಧರ ಗೋರಾಜ ತುರಂಗ | ಗುರುಕುಲೋತ್ತುಂಗಾ ಪ ಪುರಹರ | ಸಂತರ ಮನೋಹರ | ಅಂತಕನ ಗೆದ್ದೆ | ದಂತಿ ಚರ್ಮವ ಪೊದ್ದೆ | ಕಂತು ಮುನಿಯ ಗೆಲಿದೆ ಮಂತ್ರಿವಂದಿತ ಶೀಲ | ಸಂತತಿಗಳ ಪಾಲ | ಅಂತರಂಗದಲೆನ್ನ ಗ್ರಂಥಿಯ ಹರಿಸಿ ನಿರಂತರ ಸಂತರಿಸೋ 1 ಶುಕ ಯತಿಯೆ | ವನದೊಳು ರಾಯನ | ವನುತಿಯ ಮಾಡಿದ | ಘನ ಶೌರ್ಯನ ಶಿವನೆ || ಸನಕಾದಿಗಳ ಪರಿಯ | ಅನುದಿನದಲಿ ಗಿರಿಯ | ಫಣಿಭೂಷಣ ಶಂಭೋ 2 ಅಹಂಕಾರಾತ್ಮನೆ ಶರ್ವ | ಮಹಾಕೇಶ ವಿಷಗ್ರೀವ | ಬಹುದೂರ ಕೂಟ | ಮಹಿಧರ ನಿವಾಸನೆ | ಮಹಿಧರ ತೀರದಿ || ಮಹಿಮೆಯ ಬೀರುತ್ತ | ರಹಸ್ಯದಲಿ ಮೆರೆವ | ಶ್ರೀಹರಿ ವಿಜಯವಿಠ್ಠಲ ಸವೋತ್ತಮ | ನಹುದೆಂದು ಧೇನಿಪನೆ3
--------------
ವಿಜಯದಾಸ
ಶರಣು ಶರಣು ವಾದಿರಾಜ ಶರಣ ಜನಕೆ ಕಲ್ಪ ಭೂಜ ಪ ಪಂಕಜ ಭವ್ಯತೇಜ ಅ.ಪ ಯೋಗಿವರ ವಾಗೀಶ ಕುವರ ಬಾಗಿ ನಮಿಸಿ ಮುಗಿಯುವೆ ಕರವ ಭೋಗ ರಾಗ ದೂರ ಧೀರ ಭಾಗವತ ಕುಲಾಬ್ಜ ಭಾಸ್ಕರ 1 ಸಿರಿ ವಿಲಸಿತ ಪರಿಪರಿ ಸದ್ಗ್ರಂಥ ರಚಿತ ವರಕವೀಂದ್ರ ಕೀರ್ತಿಸಾಂದ್ರ ಪರಮ ಕುಲಾಂಬುಧಿ ಚಂದ್ರ 2 ಹಯಾಸ್ಯ ಚರಣ ಕವಿ ಜನಾವಳಿ ಭೂಷಣ ಭಾಸುರಾಗ ಪಾಲಿಸು ಕರಿಗಿ ಕಮಲ ಚರಣ3
--------------
ವರಾವಾಣಿರಾಮರಾಯದಾಸರು
ಶರಣು ಶರಣು ಶರಣು ಶ್ರೀ ಗಣನಾಥ ಪಶರಣು ಶ್ರೀಶಾರದೆಯೆ ಶರಣು ವೆಂಕಟರಮಣ ಶರಣು ಸದ್ಗುರುವೆಅ.ಪಶರಣು ಮಾತೆಯ ಪಿತನೆ ಶರಣು 'ತಬೋಧಕನೆಶರಣು ಬುದ್ಧಿಪ್ರದನೆ ಶರಣು ಸುಖಕರನೆಶರಣು ವೇದಾಂತೋಪವೇಶನೆ ಪೋಷಕನೆಶರಣು ಚನ್ನಾಂಬೆ ಶ್ರೀ ನಾರಾಯಣಾರ್ಯ 1Àರಣು ನಾರಾಯಣಾರ್ಯ ಸದ್ಗುರುವರ್ಯಶರಣು ಶ್ರೀವಾಸುದೇವಾರ್ಯ ಸದ್ಗುರುವೆಶರಣು ಶ್ರೀ ಕೃಷ್ಣಯೋಗೀಂದ್ರ ಸದ್ಗುಣಸಾಂದ್ರಶರಣು ಶ್ರೀ ವೆಂಕಟದಾಸಾರ್ಯ ಗುರುವರ್ಯ 2ಶರಣು 'ಪ್ರೋತ್ತಮನೆ ಶರಣು ಪ'ತ್ರೆಯರೆಶರಣು ಹರಿಹರ ಭಕುತರೆ ಮಹಾತ್ತಮರೆಶರಣು ಶ್ರೀ ಚಿಕ್ಕನಾಗಪುರವಾಸ ವೆಂಕಟೇಶಶರಣು ಮರೆಹೊಕ್ಕೆ ನಿಮ್ಮ ನಾನು ತಿಮ್ಮದಾಸ 3ಸಂಕೀರ್ಣ ಕೃತಿಗಳು
--------------
ತಿಮ್ಮಪ್ಪದಾಸರು
ಶರಣು ಶರಣು ಶ್ರೀ ದತ್ತಾತ್ರೇಯಾ ಶರಣು ಸಕಲಾ ಭುವನಾಶ್ರಯಾ ಶರಣೆಂಬೆ ಸಿಂಹಾಚಲ ನಿಲಯಾ ಸುರಜನ ರೇಯಾ ಸಲಹಯ್ಯಾ 1 ವನರುಹ ಸಂಭವ ತ್ರಿಲೋಚನ ಸನಕಾದಿ ಮುನಿ ವಂದಿತ ಚರಣ ಜನವನ ವಿಜನ ವ್ಯಾಪಕ ಘನ ಅನಸೂಯಾ ನಂದನ ಯೋಗೀಶಾ 2 ತತ್ವಯೋಗ ಸಿದ್ಧಿ ಬುದ್ಧಿ ದಾತಾರಾ ಸತ್ವ ಗುಣಾಲಂ ಕೃತ ಜ್ಞಾನ ಸಾಗರಾ ಸತ್ಯ ಸನಾತನೇ ಮುನಿ ದಿಗಂಬರಾ ಭಕ್ತ ಸಹಕಾರಾ ಅವಧೂತಾ 3 ಕಂದರ್ಪ ಕೋಟಿ ಸುಂದರಾಕಾರಾ ಹೊಂದಿದಾಭರಣಾನೇಕ ಶೃಂಗಾರಾ ಇಂದು ಸೂರ್ಯಾನಳ ತೇಜ ವ್ಯಾಪಾರಾ ಎಂದೆಂದೆಚ್ಚರಾ ಕಂಡು ನಿನ್ನಾ 4 ಮಂದಮತಿ ಬಾಲನ ಬಿನ್ನಾಹದ ಸ್ತುತಿ ಬಂದು ಅರ್ಪಿಸಿಕೋ ದುದಿ ಶ್ರೀಪತಿ ಇಂದು ಮೊರೆ ಹೊಕ್ಕೆನು ಅನನ್ಯಾಗತಿತಂದೇ ಮಹಿಪತಿ ಸುತ ಸ್ವಾಮೀ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶರಣು ಶರಣು ಶ್ರೀ ರಾಮಚಂದ್ರನೆ ಶರಣು ಸುರಮುನಿ ವಂದ್ಯನೆ ಪ. ಶರಣು ಶ್ರೀ ರಘುಕುಲಾಬ್ಧಿಚಂದ್ರನೆ ಶರಣು ಸದ್ಗುಣ ಸಾಂದ್ರನೆ ಅ.ಪ ಕಮಲನಾಭನೆ ಕಮಲನೇತ್ರನೆ ಅಮರವಂದಿತ ವಿಮಲಚರಿತನೆ ಕುಮುದಸಖಸಮಾನ್ಯನೆ 1 ಅಂಬುಜಾಸನ ಶಂಭುವಂದಿತ ಶಂಬರಾರಿಯ ಜನಕನೆ ಕಂಬುಕಂದರ ನಂಬಿ ಭಜಿಸುವೆ ಬೆಂಬಿಡದಲೆ ಪಾಲಿಸೈ 2 ಪಕ್ಷಿವಾಹನ ರಕ್ಕಸಾಂತಕ ಲಕ್ಷ್ಮೀರಮಣ ಶುಭಲಕ್ಷಣ ಲಕ್ಷ್ಮಣಾಗ್ರಜ ಸತ್ಯವಿಕ್ರಮ ರಕ್ಷಿಸೈ ಪುರುಷೋತ್ತಮ 3 ಪರಮಪಾವನ ಶೇಷಗಿರಿಯೊಳು ನಿರುತ ನೆಲೆಸಿಹ ಶ್ರೀಶಗೆ ಶರಣ ಜನರ ಸಚ್ಚರಿತೆಯೋದುವ ವರವ ಪಾಲಿಸು ದೇವನೇ 4
--------------
ನಂಜನಗೂಡು ತಿರುಮಲಾಂಬಾ
ಶರಣು ಶರಣು ಹರ ಸುಂದರ ಶಂಕರ | ಹೊರೆಯೋ ನಾ ನಿಮ್ಮ ಬಾಲನು ಪ ಪತಿ - ಧರ | ಸರ್ವ ಜನರ ಸಹಕಾರೀ || ಅಘ ಕುಲಿಶ ನೆ | ಪರ್ವತ ಸುತೆ ಮನೋಹಾರಿ 1 ಭವ ಭ್ರಮ | ಪಂಚಾಕ್ಷರ ಸುಖದಾತಾ || ವಂಚನಿಲ್ಲವದರ ವಾಂಛಿತ ಪೂರಿತ | ಅಂಚೆ ಗಮನೆ ಸನ್ಮತಾ 2 ಮಹಿತಳ ವ್ಯಾಪಕ ಮಹಿಮನು - ಪಮ್ಯನೆ | ಮಹಿಪತಿ ನಂದನ ಪ್ರಭೋ | ಅಹಿಯಾ ಭರಣನೆ ಅಹವರಾನಳವಿದು | ವಿಹಿತಾಂಬಕ ತೃಯ ಶಂಭೋ || 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶರಣು ಶರಣುಪ. ಶರಣು ಸಕಲೋದ್ಧಾರ ಅಸುರಕುಲ ಸಂಹಾರಅರಸು ದಶರಥಬಾಲ ಜಾನಕಿಯ ಲೋಲವಾಲಿಸಂಹಾರ ವಾರಿಧಿಗೆ ನಟುಗಾರಏಕಪತ್ನಿಯಶೀಲ ತುಲಸಿವನಮಾಲ ಅ.ಪ. ಬಂಟ ಈ ಭಾಗ್ಯಇನ್ಯಾವದೇವರಿಗುಂಟು ಮೂರ್ಲೋಕದೊಳಗೆ1 ಉಟ್ಟಪೀತಾಂಬರವು ಉಡಿಗಂಟೆವೊಡ್ಯಾಣತೊಟ್ಟ ನವರತ್ನದಾಭರಣ ರಸಕರುಣಕೊಟ್ಟ ನಂಬಿಕೆ ತಪ್ಪ ಕರುಣದಲಿ ರಕ್ಷಿಸುವಸೃಷ್ಟಿಯೊಳಗೆಣೆಗಾಣೆ ಕೌಸಲ್ಯರಾಮ 2 ಭಾವಿಸಲು ಅಯೋಧ್ಯಪಟ್ಟಣದ ಪುರವಾಸಬೇಡಿದವರಿಗೆ ವರವÀ ನೀಡುವೆನೆಂದುರೂಢಿಯೊಳಧಿಕ ಚುಂಚನಕಟ್ಟೆಯಲಿ ನೆಲೆಸಿದಸ್ವಾಮಿ ಶ್ರೀ ಹಯವದನ ಪಾಲಿಸೊ ನಿಸ್ಸೀಮ 3
--------------
ವಾದಿರಾಜ