ಒಟ್ಟು 1218 ಕಡೆಗಳಲ್ಲಿ , 91 ದಾಸರು , 892 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರು ಬಾರರು ಸಂಗಡಲೊಬ್ಬರು |ನಾರಾಯಣನ ದಿವ್ಯನಾಮ ಒಂದಲ್ಲದೆ ಪಹೊತ್ತು ನವಮಾಸಪರಿಯಂತಗರ್ಭದಲಿ |ಅತ್ಯಂತ ನೋವು ಬೇನೆಗಳ ತಿಂದು ||ತುತ್ತು ಬುತ್ತಿಯ ಕೊಟ್ಟು ಸಲಹಿದ ತಾಯಿಯು |ಅತ್ತು ಕಳುಹುವಳಲ್ಲದೆ ಸಂಗಡ ಬಾಹಳೆ 1ನೆರೆದಿದ್ದ ಪುರಜನ ವಿಪ್ರರಗ್ನಿಯ ಸಾಕ್ಷಿ |ಕರವಿಡಿದು ಕೈಧಾರೆ ಎರಸಿಕೊಂಡ ||ತರುಣಿ ತನ್ನಯ ಗಂಡನನು ಮುಟ್ಟಲಮ್ಮದೆ |ನೆರೆಏನುಗತಿತನಗೆ ಹೇಳಲಮ್ಮಳಲ್ಲದೆ2ಮನೆ-ಮಕ್ಕಳಿವರೆನ್ನ ತನುವು ಒಡವೆ ಎರಡು |ಘನವಾಗಿ ನಂಬಿರೆ ನನ್ನವೆಂದು |ಅನುಮಾನವೇತಕೆ ಜೀವ ಹೋದಬಳಿಕ |ಘನಹೊತ್ತು ಮನೆಯಲಿ ಇರಿಸಿಕೊಳ್ಳರೊ ದೇವ 3ಆತ್ಮ ಬಳಲಿದಾಗ ಬಂಧುಗಳು ಬಂದು |ಹೊತ್ತು ಹೊರಗೆ ಹಾಕು ಎಂತೆಂಬರು ||ಹೊತ್ತುಕೊಂಡು ಹೋಗಿ ಅಗ್ನಿಯಲ್ಲಿ ಬಿಸುಟು |ಮತ್ತೆ ಬೆನ್ನನು ತಿರುಗದಲೆ ಬಾಹೋರಲ್ಲದೆ 4ಹರಣಹೋಗದ ಮುನ್ನ ಹರಿಯ ಸೇವೆ ಮಾಡಿ |ಪರಲೋಕಸಾಯುಜ್ಯಪಡೆದುಕೊಂಡು |ಕರುಣಿ ಕೃಪಾಳು ಶ್ರೀ ಪುರಂದರವಿಠಲನ |ನೆರೆನಂಬಿ ಭಜಿಸಿ ನೀ ಸುಖಿಯಾಗೊ ಮನುಜಾ 5
--------------
ಪುರಂದರದಾಸರು
ಆವ ಕುಲವಾದರೇನು ಪ.ಭಾವದ ಎಲ್ಲಾನ ತಿಳದವನಿಗೆ ಮತ್ತೇ ಅಪಅಸುಡೊಂಕು ಕಬ್ದು ಇರಲು - ಅದರೊಳಗಿದ್ದರಸ ತಾನು ಡೊಂಕೇನಲೊ - ಮರುಳೆವಿಷಯಭಾವನೆ ಬಿಟ್ಟು ನೀ ಹೋಗಿ ಗುರುಗಳಹಸನಾಗಿ ಕೇಳು ಕಾಣೋ - ಮನುಜಾ 1ನಾನಾವರ್ಣದ ಆಕಳ - ಕ್ಷೀರದಲಿನಾನಾವರ್ಣಗಳಹುದೆ - ಮನುಜಾಹೀನ ಭಾವನೆಗಳನಿಂದಿಟ್ಟು ನೀ ಪೋಗಿಜ್ಞಾನಿಗಳ ಕೇಳು ಕಾಣೋ - ಮನುಜಾ 2ಶರಧಿಯೊಳ ತೆರೆನೊರೆಗಳಾ - ಪರಿಯಂತೆಶರೀರವಲ್ಲದೆ ಬೇರಿಹುದೇ ?ವರಪುರಂದರವಿಠಲನ ಸ್ಮರಿಸುತಿರಲು ನಿನಗೆಸಿರಿಯನು ಮುಕುತಿಯಹುದು - ಮನುಜಾ 3
--------------
ಪುರಂದರದಾಸರು
ಆವಳಂಜಿಸಿದವಳು ಪೇಳು ರಂಗಮ್ಮ ನಾನವಳಗಾರುಮಾಡುವೆ ನಡೆ ಕೃಷ್ಣಮ್ಮಪ.ದೂರುವಿರಾದರೆ ಮಗನ ದಾರಿಗೆ ಹೋಗದಿರಿ ಎಂದುಸಾರಿ ಕೈಯಕಡ್ಡಿಕೊಟ್ಟೆ ಜಾರೆಯರಿಗೆಸಾರಿ ಸಾರಿಗೆ ನಿನ್ನನು ರಟ್ಟು ಮಾಡುವ ಮಾತೇನುಆರಿಗೆ ಮಕ್ಕಳಿಲ್ಲೇನೊ ನಾನೇ ಹಡೆದವಳೇನೊ 1ಇದ್ದರಿರಲಿ ಕೂಸಿನ ಆಡುವಾಟಕೊಪ್ಪಿದರೆಎದ್ದು ಹೋದರೆ ಹೋಗಲಿ ಆವಪಳ್ಳಿಂದಕದ್ದು ತಿಂದನೆಂದಾವಾಗ ಕೂಗುವ ಕಾರಣವೇನೊಮುದ್ದೆ ಬೆಣ್ಣೆ ಕೈಯಲಿತ್ತರೊಲ್ಲದೆ ಚೆಲ್ಲುವೆ ಕಂದ 2ಏಸುಪುಣ್ಯರಾಶಿ ಕೂಡಿತೆಂದು ನಿನ್ನಾಟವ ನೋಡಿಬೀಸಿ ಬಿಗಿದಪ್ಪುವಂಥ ಭಾಗ್ಯವನುಂಡೆಕೂಸೆ ನಿನ್ನ ಕಂಡಸೂಯೆಬಡುವರಳಿಯಲಮ್ಮದಾಸರಿಗೆ ಲೇಸಾಗಲಿ ಪ್ರಸನ್ವೆಂಕಟ ಕೃಷ್ಣ 3
--------------
ಪ್ರಸನ್ನವೆಂಕಟದಾಸರು
ಇ. ಶ್ರೀಹರಿ ಲಕ್ಷ್ಮಿಯರುಅಂಗಳದೊಳಗಾಡೋ ರಂಗಪರಹೆಂಗಳ ಮನೆಗ್ಹೋಗ ಬ್ಯಾಡೋ ನೀಲಾಂಗ ಪದಧಿಘೃತಚೋರನೆನ್ನುವರು ನಿನ್ನಬೆದರಿಸಿ ಜರೆವರು ಪದುಮನೇತ್ರೆಯರುವಿಧವಿಧದಲಿ ಬಾಧಿಸುವರು ಕೊರಳಪದಕದ ಸರವನ್ನು ಸೆಳೆದುಕೊಳ್ಳುವರು 1ಕಿರುಕುಳ ....ನಿನ್ನ ಮನಕರಕರಿಸುವದೆನಗಿನಿತು ಕೇಳಣ್ಣಕರುಗಳ ಬಿಡ ಹೇಳಿ ಮುನ್ನಾ ಬಲುಹಗರಣಗೈಯ್ಯುವರೆನ್ನಾ ಸಂಪನ್ನಾ 2ನುಡಿಯಲಾಲಿಸುಮುದ್ದು ಕಂದಾ ನಿನ-ಗಿಡುವೆನಕ್ಷತೆ ವಸ್ತ್ರಾಭರಣ ಸುಗಂಧಾಕೊಡುವೆನುದಧಿಘೃತದಿಂದಾ ಕಾೈದಕಡಬು ಕಜ್ಜಾಯ ಅತಿರಸವಾ ಗೋವಿಂದಾ 3
--------------
ಗೋವಿಂದದಾಸ
ಇಕ್ಕಲಾರೆ ಕೈಯಂಜಲು - ಚಿಕ್ಕಮಕ್ಕಳು ಅಳುತಾವೆ ಹೋಗೋ ದಾಸಯ್ಯ ಪ.ಮಡಿಕೆ ತೊಳೆಯುತೇನೆ ಮನೆಯ ಸಾರಿಸುತ್ತೇನೆಒಡೆಯರಿಲ್ಲ ಕಾಣೋ ಹೋಗೋ ದಾಸಯ್ಯತೊಡೆಯ ಮೇಲಣ ಕೂಸು ಮೊಲೆ ಹಾಲನುಣಿಸುತಿದೆನಡೆನಡೆ ಕರಕರೆ ಮಾಡದೆ ದಾಸಯ್ಯ 1ಅಟ್ಟದ ಮೇಲಿನ ಅಕ್ಕಿ ತೆಗೆಯಲಾರೆಹೊಟ್ಟೆನೋವು ಕಾಣು ಹೋಗೋ ದಾಸಯ್ಯಮುಟ್ಟಾಗಿ ಕುಳಿತೇನೆ ಮನೆಯವರಿಲ್ಲವೊಕಟ್ಟುಗ್ರ ಮಾಡದೆ ಹೋಗೋ ದಾಸಯ್ಯ 2ವೀಸದ ಕಾಸಿದ ದವಸವ ತಂದಾರೆಕೂಸಿಗೆ ಸಾಲದು ಹೇಗೋ ದಾಸಯ್ಯಆಸೆ ಮಾಡಲು ದೋಷಕಾರ್ತಿ ಬೇಡ ನಾನುಶೇೀಷಾದ್ರಿ ಪುರಂದರವಿಠಲದಾಸಯ್ಯ 3
--------------
ಪುರಂದರದಾಸರು
ಇನ್ನಾದರೂ ಹರಿಯ ನೆನೆಯೊ ನೀ ಮನುಜಾ |ಮುನ್ನಾದ ದುಃಖಗಳು ನಿಜವಾಗಿ ತೊಲಗುವುವು ಪ.ಊರೂರ ನದಿಗಳಲಿಬಾರಿ ಬಾರಿಗೆ ಮುಳುಗಿ |ತೀರದಲಿ ಕುಳಿತು ನೀ ಪಣೆಗೆನಿತ್ಯ ||ನೀರಿನಲಿ ಮಟ್ಟಿಯನು ಕಲಸಿ ಬರೆಯುತ ಮೂಗು - |ಬೇರನ್ನು ಪಿಡಿದು ಮುಸುಕಿಕ್ಕಲೇನುಂಟು 1ನೂರಾರು ಕರ್ಮಂಗಳನ್ನು ಡಂಭಕೆ ಮಾಡಿ |ಆರಾರಿಗೋ ಹಣದ ದಾನಕೊಟ್ಟು |ದಾರಿದ್ರ್ಯವನು ಪಡೆದು ತಿರಿದಿಂಬುವುದಕೀಗ |ದಾರಿಯಾಯಿತೆ ಹೊರತು ಬೇರೆ ಫಲವುಂಟೇ? 2ಕಾಡುದೈವಗಳನ್ನು ಚಿನ್ನ - ಬೆಳ್ಳಿಗಳಿಂದೆ |ಮಾಡಿಕೊಂಡವರ ಪೂಜೆಯನೆ ಮಾಡಿ |ಕಾಡುಕಳ್ಳರು ಬಂದು ಅವುಗಳನು ಕೊಂಡೊಯ್ಯೆ |ಮಾಡಿಕೊಂಡಿರ್ದುದಕೆ ಬಾಯಬಡಕೊಳ್ಳುವೆ 3ಮಗನ ಮದುವೆಯು ಎಂದು ಸಾಲವನು ಮಾಡಿ ನೀ |ಸುಗುಣಿಯೆನ್ನಿಸಿಕೊಳಲು ವ್ಯಯ ಮಾಡಿದೆ ||ಹಗರಣವ ಪಡಿಸಿದರೆ ಸಾಲಗಾರರು ಬಂದು |ಬಗೆಬಗೆಯೊಳವರ ಕಾಲ್ಗೆರಗಿ ಬಿದ್ದಿರುವೆ 4ಕೆಟ್ಟುವೀ ಕೆಲಸಗಳ ಮಾಡಿದರೆ ಫಲವೇನು ? |ತಟ್ಟನೇ ಶ್ರೀಹರಿಯ ಪದವ ನಂಬಿ ||ದಿಟ್ಟ ಪುರಂದರವಿಠಲನೆ ಎಂದರೆ |ಸುಟ್ಟು ಹೋಗುವುವಯ್ಯ ನಿನ್ನ ಕಷ್ಟಗಳು 5
--------------
ಪುರಂದರದಾಸರು
ಇರಬರಲಿಲ್ಲ ಬಂದರು ಇರಲಿಲ್ಲ ಈಶರೀರ ಯಮನವಶಹರಿಮೊರೆ ಹೋಗು ನೀಪ.ಘಟಪಟಗಳಿವು ದಿಟಕೀಟಕ ಹೂವು ಕಪಟನಾಟಕನಪಾದಬಿಟ್ಟು ಕೆಟ್ಟೆಯಲ್ಲೊ1ನಗುನಗುತಭವಸೊಗಸೆಂದು ಸವಿವೆ ಬಹುತಗೆಬಗೇಸಯ್ಯ ನಿನಗೆ ಭವದ ಭಯ 2ಶರಣರ ಕಂಡು ಜರಿದರೆ ಕೇಡು ತಂದೆಸಿರಿಪ್ರಸನ್ನವೆಂಕಟ ಅರಸನ್ನ ನಂಬು 3
--------------
ಪ್ರಸನ್ನವೆಂಕಟದಾಸರು
ಇಲ್ಲಿಯೇ ಕುಳಿತಿದ್ದ ಭೂತವು - ಒಂದುಹಲ್ಲಿಯು ನುಂತು ಹದಿನಾಲ್ಕು ಲೋಕವ............. ಪಸೂಳೆಯ ಮನೆಯಲಿ ಇದೆಯೊಂದು ಕೋಳಿ |ಕೋಳಿಯ ನಾಲಗೆ ಏಳು ತಾಳೆಯುದ್ಧ ||ಕೋಳಿ ನುಂಗಿತು ಏಳು ಕಾಳಿಂಗ ನಾಗನ |ಮೇಲೊಂದು ಬೇಡಿತು ಸಿಂಹದ ಮರಿಯ 1ಕಾನನದೊಳಗೊಂದು ಇರುವದು ಕೋಣ |ಕೋಣನ ಕೊರಳಿಗೆ ಮುನ್ನೂರು ಬಾವಿ ||ಕೋಣ ನೀರಿಗೆ ಹೋಗಿಕ್ಷೋಣಿ ಕಪಿಯ ಕೊಂದು |ಟೊಣ್ಣನ ಮನೆಯೊಳಗೌತನವಯ್ಯ...................... 2ವುಕ್ಷದಮೇಲೊಂದು ಸೂಕ್ಷ್ಮದ ಪಕ್ಷಿ |ಪಕ್ಷಿಭಕ್ಷಣವಾದ ಅಮೃತದ ಹೆಣ್ಣು ||ಪಕ್ಷಿ ನೋಡಲು ಬಂದ ರಾಕ್ಷಸ ಬ್ರಾಹ್ಮಣ |ಶಿಕ್ಷೆಯ ಮಾಡಿದ ಪುರಂದರವಿಠಲ............ 3
--------------
ಪುರಂದರದಾಸರು
ಇವನ ಹಿಡಿದುಕೊಂಡು ಹೋಗಲೊ ಜೋಗಿ |ಇವ ನಮ್ಮ ಮಾತು ಕೇಳದೆ ಪುಂಡನಾದನು ಪಆಡುಲಾಡುತ ಬಂದು ಮಡುವಿನೊಳ್ ಮುಳುಗಿದ |ಬೇಡವೆಂದರೆ ಬೆಟ್ಟ ಬೆನ್ನಲಿ ನೆಗಹಿದ ||ಓಡುತೋಡುತ ಬಂದು ದಾಡೆಯಿಂದ ಸೀಳ್ವ |ನೋಡ ಹೋದರೆ ಕಣ್ಣ ತರೆದಂಜಿಸುವ 1ಹುಲ್ಲಲಿ ಬ್ರಾಹ್ಮಣನ ಕಣ್ಣು ಕುಕ್ಕಿದ ಬುದ್ಧಿ ||ಅಲ್ಲವೆಂದರೆ ಕೊಡಲಿಯ ಪಿಡಿದೆತ್ತಿದ ||ಬಿಲ್ಲನು ಎಡದ ಕೈಯಿಂದಲಿ ಎತ್ತಿದ |ಬಲ್ಲಿದಮಾವನ ಶಿರವನರಿದು ಬಂದ2ಬತ್ತಲೆ ಕುದುರೆಯ ಹತ್ತಬೇಡೆಂದರೆ |ಹತ್ತುವ ಶ್ರೀಕೃಷ್ಣ ಚೆಂದದಿಂದ ||ಭಕ್ತವತ್ಸಲ ನಮ್ಮ ಪುರಂದರವಿಠಲನ |ಅತ್ತ ಹಿಡಿದು ಕೊಂಡು ಹೋಗಯ್ಯ ಜೋಗಿ 3
--------------
ಪುರಂದರದಾಸರು
ಈ ಪರಿಯ ಅಧಿಕಾರ ಒಲ್ಲೆ ನಾನು |ಶ್ರೀಪತಿಯೆ ನೀನೊಲಿದು ಏನ ಕೊಟ್ಟುದೆ ಸಾಕು ಪಚಿರಕಾಲ ನಿನ್ನ ಕಾಯ್ದು ತಿರುಗಿದುದಕೆ ನಾನು |ಕರುಣದಲಿ ರಚಿಸಿ ನೀ ಈ ದುರ್ಗದಿ ||ಇರ ಹೇಳಿದುದಕೆ ನಾ ಹೊಕ್ಕು ನೋಡಿದೆ ಒಳಗೆ |ಹುರುಳ ಲೇಶವು ಕಾಣೆ ಕರಕರೆಯು ಬಲುನೋಡು 1ದಾರಿಯಲಿ ಹೋಗಿ ಬರುವವರಉಪಟಳಘನ|ಚೋರರಟ್ಟುಳಿಗಂತೂ ನೆಲೆಯೆ ಇಲ್ಲ ||ವೈರಿವರ್ಗದ ಜನರು ಒಳಗೆ ಬಲು ತುಂಬಿಹರು |ಮಿರಿ ನಿನ್ನಲಿ ಮನವನೂರಿ ನಿಲಗೊಡರು 2ಸರಿಬಂದ ವ್ಯಾಪಾರ ಮಾಡಿ ತಾವೆನ್ನನ್ನು |ಬರಿಯ ಲೆಕ್ಕಕೆ ಮಾತ್ರ ಗುರಿಯ ಮಾಡಿ ||ಕರಕರೆಯ ಬಡಿಸಬೇಕೆಂದು ಯೋಚಿಸುತಿಹರು |ಕರೆದು ವಿಚಾರಿಸಿ ನ್ಯಾಯ ಮಾಡಿಸು ದೊರೆಯೇ 3ನಾಮಾಂಕಿತಕೆ ಮಾತ್ರ ಅಧಿಕಾರವೆನಗಿತ್ತೆ |ಸ್ವಾಮಿತ್ವವೋನೋಡುಮನೆಮನೆಯಲಿ ||ಭೀಮ ವಿಕ್ರಮರವರು ದುರ್ಬಲಾಗ್ರಣಿ ನಾನು |ಗ್ರಾಮ ಒಪ್ಪಿಸೆ ನಮಿಪೆ ಸಂಬಂದ ತೆರಮಾಡು 4ಕಾಲಕ್ಕೆ ಕರೆಯ ಬಂದವರಿಗೆ ಒಳಗಾಗಿ |ಪಾಳೆಯವನೊಪ್ಪಿಸಿ ಕೊಡುವೆವೆಂದು ||ಆಲೋಚಿಸಿಹರಯ್ಯ ಈಗಲೆನಗೆ ನಿನ್ನ |ಆಳುಗಳ ಬಲಮಾಡಿ ಎನ್ನ ರಕ್ಷಿಸು ದೊರೆಯೆ 5ಕ್ಷಣಕೆ ನೂರುಪಟಳ ಈ ಕೋಟೆಗೆಲೊ ರಾಯ |ಅನುವಾದ ದಿವಸವೊಂದಾದರಿಲ್ಲ ||ಮೊನೆಗಾರ ಜನವಿಲ್ಲ ಇದ್ದವರು ವಶವಿಲ್ಲ |ಕೊನೆಗೊಂಡು ಗ್ರಾಮ ಕಾಪಾಡುವ ತೆರನೆಂತೊ 6ಎನಗೆ ಈ ಬಹುನಾಯಕರ ಕೊಂಪೆಯೊಳು ವಾಸ-|ವನು ಬಿಡಿಸಿ ನಿನ್ನ ನಿಜ ಪಟ್ಟಣದೊಳು ||ಮನೆ ಮಾಡಿಕೊಡಲು ನಾನಿನ್ನ ನೋಡಿಕೊಳುತ |ಅನುಗಾಲಬದುಕುವೆನೊ ಪುರಂದರವಿಠಲ7
--------------
ಪುರಂದರದಾಸರು
ಈ ಪರಿಯ ಅಧಿಕಾರ ಒಲ್ಲೆ ನಾನುಶ್ರೀಪತಿಯೆ ನೀನೊಲಿದು ಏನು ಕೊಟ್ಟುದೆ ಸಾಕುಚಿರಕಾಲ ನಿನ್ನ ಕಾದು ತಿರುಗಿದುದಕೆ ನೀನುದಾರಿಯಲ್ಲಿ ಹೋಗಿ ಬರುವುದಕ್ಕೆಉಪಟಳಘನ್ನನಾಮಾಂಕಿತಕೆ ಮಾತ್ರ ಅಧಿಕಾರವೆನಗಿತ್ತೆಸರಿಬಂದ ವ್ಯಾಪಾರ ತಾವು ಮಾಡಿ ಎನ್ನಕಾಲಕ್ಕೆ ಕರೆಯ ಬಂದವರಿಗೆ ಒಳಗಾಗಿಕ್ಷಣಕೆ ನೂರುಪಟಳ ಈ ಕೋಟೆಗೆಲೊ ರಾಯಇನಿತನಾಯಕದ ಕೊಂಪೆ ಒಳಗಿನವಾಸ-
--------------
ಗೋಪಾಲದಾಸರು
ಈ ಶರೀರದ ಭ್ರಾಂತಿ ಇನ್ನೇಕೆ ಮನವೆ |ವಾಸುದೇವನ ನೆನೆದು ಸುಖಿಯಾಗು ಮನವೆ ಪ.ಕಾಲು ಜವಗುಂದಿದುವು ದೃಷ್ಟಿಗಳು ಹಿಂಗಿದುವು |ಮೇಲೆ ಜವ್ವನ ಹೋಗಿ ಜರೆಯಾದಗಿತು ||ಕಾಲ - ಕರ್ಮಾದಿಗಳು ಕೂಡಿದಾಕ್ಷಣದಲಿ |ಬೀಳುವೀ ತನುವಿನೊಳ್ ಇನ್ನಾಸೆಯ ಮನವೆ 1ದಂತಗಳು ಸಡಿಲಿದುವು ಧಾತುಗಳು ಕುಂದಿದುವು |ಕಾಂತೆಯರುಜರಿದು ಓಕರಿಸುವರು ||ಭ್ರಾಂತಿ ಇನ್ನೇಕೆ ಈ ತನುವು ಬೀಳದ ಮುನ್ನ |ಸಂತತ ಶ್ರೀ ಹರಿಯ ನೆನೆ ಕಾಣೊ ಮನವೆ 2ನೀರಬೊಬ್ಬುಳಿಯಂತೆ ನಿತ್ಯವಲ್ಲ ಈ ದೇಹ |ಸಾರುತಿದೆ ನೀ ಮೆಚ್ಚಿ ಮರುಳಾಗದೆ ||ಶ್ರೀರಮಣ ಪುರಂದರವಿಠಲನ ನೆನೆ ನೆನೆದು |ಸೂರೆಗೊಳ್ಳಿರೊ ಸ್ವರ್ಗ ಸುಮ್ಮನಿರಬೇಡಿ 3
--------------
ಪುರಂದರದಾಸರು
ಈಗಲೆ ಭಜಿಸಲೆಜಿಹ್ವೆ - ನೀ - |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಜಾಗುಮಾಡದೆಶ್ರೀ ಹರಿಪಾದಾಂಬುಜವಪ.ದೇಹದೇಹ ಸಂಬಂಧಿಗಳು - ಅವರು |ಮೋಹಬದ್ಧರಾಗಿ ಕುಳಿತಿಹರು ||ಆಹಾರ ಗುಹ್ಯೇಂದ್ರಿಯವೆಂಬ ಎರಡರ |ಬೇಹಾರದಲಿ ನೀನು ಮುಳುಗಿಸದಲೆ ಮನ 1ಮರಣ ತೊಡಗಿ ನಾಲಗೆಯುಡುಗಿ - ನಿನ್ನ - |ತರುಣಿ ಪುತ್ರ ಮಿತ್ರರಳುತಿರಲು ||ಕೊರಳೊಳು ಗುರುಗುರು ಗುರುಗುಟ್ಟುವಾಗನರ - |ಹರಿಯ ನಾಮವೆನ್ನಗೊಡದೆಲೊ ಪ್ರಾಣಿ 2ಅಸಿಪತ್ರವನದೊಳು ಹೊಗಿಸಿ - ನಿನ್ನ - |ಬಸೆವಸೆಖಂಡ ಹೊರವೊಡಿಸಿ |ಬಿಸಿಬಿಸಿ ನೆತ್ತರು ಬಸಿದು ಹೋಗುವಾಗ |ಕುಸುಮನಾಭನ ನಾಮ ನೆನೆಯಗೊಡದು ಮನ 3ತಪ್ತಲೋಹದ ಮೋಲೊರಗಿಸಿ - ನಿನ್ನ - |ಕತ್ತರಿಸಿದ ಖಂಡ ಬೇಯಿಸುವರು ||ನೆತ್ತಿಯ ಕೊರೆದು ನಾಲಗೆ ಹಿರಿದೊಗೆವಾಗ |ಚಿತ್ತಜನಯ್ಯನ ನೆನೆಯಗೊಡದು ಮನ 4ಕುಂಭಿಪಾಕದೊಳಗೆ ಕುದಿಸಿ - ನಿನ್ನ |ಅಂಬುಮೊನೆಗಳಿಂದಿರಿಯಿಸಿ ||ಅಂಬರಕೊಗೆಯ ಕಾಗೆಯು ಕಚ್ಚಿ ಕಡ್ಞಿಗ |ಅಂಬುಜಾಕ್ಷನ ನಾಮ ನೆನೆಯಗೊಡದು ಮನ 5ದುರುಳ ಯವದೂತರಾರ್ಭಟಿಸಿ - ನಿನ್ನ - |ಎರಕದ ಕಾಯ್ದ ಕಂಬಕೆ ತಕ್ಕೆಗೆಯ್ಸಿ ||ಪರಿಪರಿ ಭವದೊಳು ಬಳಲಿಸುತಿರುವಾಗ |ಪುರುಷೋತ್ತಮನ ನಾಮ ನೆನೆಯಗೊಡದು ಮನ 6ದುರಿತಕೋಟಿಗಳ ಹರಿಸುವ - ನಿನ್ನ - |ನರಕಬಾಧೆಗಳ ತಪ್ಪಿಸುವ ||ಪರಮ ಪುರುಷ ನಮ್ಮ ಪುರಂದರವಿಠಲನ |ನಿರುತದಿ ನೆನೆದು ನೀ ಸುಖಿಯೊಗೋ ಮನವೆ 7
--------------
ಪುರಂದರದಾಸರು
ಈಗಾಗೋ ಇನ್ನಾವಾಗೋ ಮತ್ತೀಗಾತ್ರ ಅಸ್ಥಿರವಣ್ಣಹೇಗಾದರು ಹೊಗಳಾಡಲಿ ಬೇಕುನಾಗಾರಿಗಮನನ್ನ ಪ.ಮನಹರಿದತ್ತಲೆ ಹರಿಹರಿದಾಡಿದಿನ ಹೋದವು ವೃಥಾ ನೋಡಿ ದುರ್ಧನದಾಸೆಲಿ ಬಾಡಿ ದುರ್ಜನರಾರಾಧನೆ ಮಾಡಿ ಈತನು ಚಪಲತೆ ಹೋಗಾಡದೆ ಶ್ರೀಹರಿಗುಣಕುಣಿದು ಕೊಂಡಾಡಿ1ತುಂಬಿದಸಿರಿಬಿಡಿಸಿ ಸೆರೆ ಒಯಿವರು ವಿಲಂಬಿಲ್ಲದೆ ಜವನವರು ಕೃಪೆಯೆಂಬುದ ಅರಿಯರು ಅವರುಹಲವ್ಹಂಬಲಿಸಿದರೊದೆವರು ಸುಡುನಂಬಲಿಬಾರದು ಸಂತೆಯವರಅಂಬುಜನಾಭನ ಸಾರು 2ಸಕಳಾಗಮ ವೇದೋಕ್ತಿ ವಿಚಾರಕೆಮುಖವೆನಿಸುವುದಾಚಾರ ಆಸುಖವೇ ಧರ್ಮದಸಾರಈಅಖಿಳಕೆ ಪ್ರಭು ಯದುವೀರಭಕ್ತವತ್ಸಲ ಪ್ರಸನ್ವೆಂಕಟರಾಯನಸಖ್ಯವಿಡಿದರೆ ಭವದೂರ 3
--------------
ಪ್ರಸನ್ನವೆಂಕಟದಾಸರು
ಈಸಬೇಕು ಇದ್ದು ಜಯಿಸಬೇಕುಹೇಸಿಕೆಸಂಸಾರದಲ್ಲಿ ಲೇಶ ಆಶೆ ಇಡದ ಹಾಗೆಪ.ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳುಸ್ವಾಮಿರಾಮನೆನುತ ಪಾಡಿ ಕಾಮಿತವ ಕೈಕೊಂಬರೆಲ್ಲ 1ಗೇರು ಹಣ್ಣಿನಲ್ಲಿ ಬೀಜ ಸೇರಿದಂತೆ ಸಂಸಾರದಿಮೀರಿ ಆಶೆ ಮಾಡದ ಹಾಗೆ ಧೀರ ಕೃಷ್ಣನ ನೆನೆಯುವರೆಲ್ಲ 2ಮಾಂಸದಾಶೆಗೆ ಮತ್ಸ್ಯವು ಸಿಲುಕಿ ಹಿಂಸೆ ಪಟ್ಟಪರಿಯೊಳುಮೋಸ ಹೋಗದೆ ಪುರಂದರವಿಠಲ ಜಗದೀಶನೆನುತ ಕೊಂಡಾಡುವರೆಲ್ಲ 3
--------------
ಪುರಂದರದಾಸರು