ಒಟ್ಟು 4120 ಕಡೆಗಳಲ್ಲಿ , 119 ದಾಸರು , 3273 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಣಬಹುದಕೆ ಕನ್ನಡಿಯಾಕೆ ಭಿನ್ನವಿಲ್ಲದೆ ನೋಡಿ ತನ್ನೊಳು ಘನಬ್ರಹ್ಮವಿರಲಿಕ್ಕೆ ಅನುಮಾನವು ಬ್ಯಾಡಿಧ್ರುವ ಕುಂಭಿನಿಯೊಳು ಘನಹೊಳೆಯುತ ತುಂಬಿತುಳುಕುತಲ್ಯಾದೆ ಉಂಬವರಿಗಿದಿರಿಡುತ ಬಿಂಬಿಸುತಲ್ಯಾದೆ ಹಂಬಲಿಸಿದರೆ ತನ್ನೊಳಗೆ ತಾ ಗುಂಭಗುರುತವಾಗ್ಯಾದೆ ಇಂಬು ತಾನೆ ಆಗ್ಯಾದೆ 1 ಹೇಳುವ ಮಾತಿನ ಮಾತಿಲ್ಲ ಕೇಳಿರಯ್ಯಾ ಚೆನ್ನಾಗಿ ಒಳ ಹೊರಗಿದು ಭಾಸುತಿ ಹ್ಯ ದೆಲ್ಲಾ ಸುಳವು ಬಲ್ಲಾತ ಯೋಗಿ ಕಳೆಕಾಂತಿಗಳ ಅನುಭವವೆಲ್ಲಾನು ತಿಳಿಯಬಲ್ಲವ ಭೋಗಿ ಹೊಳೆವುತಿಹ್ಯದು ಸರ್ವಮಯವೆಲ್ಲಾ ಮೊಳೆಮಿಂಚು ತಾನಾಗಿ 2 ಇಲ್ಲೆವೆ ಎರಡು ಹಾದಿಯ ಕಟ್ಟಿಗುಲ್ಲುಮಾಡದೆ ನೋಡಿ ಗೋಲ್ಹಾಟ ಮಂಡಲವನು ದಾಟಿ ಅಲ್ಲಿಯೆ ಮಹಿಪತಿ ನೋಡಿ ಅಲ್ಲಿಯೆ ಮನ ತಾಂ ಮನಿಕಟ್ಟಿ ಫÀುಲ್ಲನಾಭನ ಕೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಣಬಾಹ ಸಾಧನ ಒಂದೇ ಮಾಡಿ ಅಣುರೇಣುದೊಳಗಾನೆ ಗುರು ನೋಡಿ ಧ್ರುವ ಖೂನ ಮಾಡಲಿಕ್ಯದ ಒಂದಭ್ಯಾಸ ಅನುದಿನ ಸದ್ಗುರು ನಿಜಧ್ಯಾಸ ಸುಜನರಿಗಿದೆ ತಾ ಉಲ್ಲಾಸಾ ಜನುಮದೊಳಿದೆ ಸುಪ್ರಕಾಶ 1 ಕೋಟಿಗೊಂದೆ ಸಾಧನವಿದೆ ಸಾಕು ಅಟಾಆಟಬಡುವದ್ಯಾತಕೆ ಬೇಕು ಘಟಮಠ ಎಂಬುವದೆಲ್ಲ ಹೋಕು ನಿಟಿಲ ಭ್ರೂಮಧ್ಯ ನೋಡಿ ಥೋಕು 2 ಸಾಧನವೆಂಬುದು ಗುರುದಯ ಇದೆ ಪಡಕೊಂಡವಗೆ ವಿಜಯ ಬೋಧಿಸಿದ ಭಾನು ಕೋಟಿ ಉದಯ ಸದ್ಗೈಸಿದ ನೋಡಿ ಮಹಿಪತಿಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಣಲಿಲ್ಲೇ ದೇವರ ನೋಡಲಿಲ್ಲೇ ಪ ವಿಶ್ವದೋಲಾಡುವ ವಿಶ್ವಂಭರಿತ ಹರಿ1 ದೂರಿಹನೆ ನ್ನದೆ ಸಾರೆವೆ ಭಾವಿಸಿ 2 ಗುರುಮಹಿಪತಿ ಪ್ರಭುಗುರುತಕತದೊಮ್ಮೆ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಣಿ ಖೂನ ಕಂಡ ಮ್ಯಾಲ ಖಂಡ ಮಾಡಿಕೊಂಬುದೆ ಸುಜ್ಞಾನ ಧ್ರುವ ಕಾಣುವನು ಕಾಣಿಯೇನಾಗಿದೊ ಪ್ರಾಣಿ ಕಾಣದೆ ಹೋದರನೇಕ ಜನ್ಮ ನಾನಾಯೋನಿ 1 ಕಾಣುವನ ಸ್ಥಾನ ಕಾಣದಿಹುದೇನ ಜ್ಞಾನಗುರುವಿನ ಕೈಯ ಕೇಳಿಕೊ ನೀ ಖೂನ 2 ಕಂಡು ಕಾಂಬುವನ ಅಖಂಡ ಮಾಡೋಧ್ಯಾನ ಪಿಂಡ ಬ್ರಹ್ಮಾಂಡಕ್ಕೆ ಇದೆ ವಸ್ತು ನಿಜಘನ 3 ಕಾಣುವನ ಕೂಡಿ ಸ್ವಾನುಭವ ಮಾಡಿ ದೀನ ಮಹಿಪತಿಗಿದೆ ಘನ ಸುಖನೋಡಿ4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಂತೆ ದ್ರೌಪತಾದೇವಿಗೆಂತು ಮರುಳಾದಿರಿಭ್ರಾಂತಿ ಹಿಡಿತೇನೊ ಏ ಹೀನ ಎಂಥ ನ್ಯಾಯವಯ್ಯಈ ಮಾತಿಗಿನ್ನೆಂತು ನಕುಲರಾಯ ಪ. ಹೆಣ್ಣು ಮಕ್ಕಳು ಹೊಳೆವೋದುತಪ್ತ ಸುಣ್ಣದಂತೆ ತಿಳಿವೋದುಸಣ್ಣವರೆನೀವು ಅಣ್ಣನ ಮಡದಿಗೆ ಕಣ್ಣು ಹಾಕುವರೇನೊ ಏ ಹೀನಾ 1 ಜಾತಿ ಮಾಣಿಕ ಮಾಲೆ ಕೊಡಲು ತಂದು ಕೋತಿ ರಾಜನ ಕೈಲಿಚಾತುರ್ಯದ್ವಸ್ತವು ನೀತಿಲೆ ಹಿಡಕೊಂಡುಆತುರ ಮಾಡಿದಂತೆ ನಿಮ್ಮಂತೆ2 ನಕುಲರಾಯನೆ ಕೇಳೊಸುಂದರಿಯಲ್ಲೆ ಕಕುಲಾತÉ ಭಾಳೊಸುಖಚಂದ್ರವದನಳೆ ಸಕಲರು ಬೆರೆಯಲು ನಕಲಿ ಆಯಿತು ಕಾಣೊನಿನ್ನಾಣೆ 3 ಅದ್ಬುತ ಮಹಿಮಳೊ ಧರ್ಮರಾಯಗೆಮುದದಿಕೊಟ್ಟರು ಕೇಳೊಅದ ತಾಳಲಾರದೆ ಇದು ನಿಮಗೈವರುಸುದತಿಯ ಬೆರೆಯುವರೇನೊ ಏ ಹೀನ4 ಪತಿ ನಗುವನು ಭಾಳೆ ಏ ತಾಳೊ 5
--------------
ಗಲಗಲಿಅವ್ವನವರು
ಕಾಮಧೇನುಗರವುತಲ್ಯದೆ ನಮ್ಮ ಮನಿಯಲಿ ನೋಡಿ ಬ್ರಹ್ಮಾನಂದದೋರುತದೆ ಪರಮಾಮೃತ ಸೂರ್ಯಾಡಿಧ್ರುವ ಭೋರ್ಗರೆವುತಲ್ಯದೆ ಇರುಳ ಹಗಲಿ ತಾ ಕರಕೊಳ್ಳಲಿ ವಶವಲ್ಲ ಅಮೃತ ದುರುಳರಿಗಿದು ಅರಿಕಿಲ್ಲ ಸುರಿ ಸುರಿದು ಸಾರಾಯ ಚಪ್ಪರಿದನುಭವ ನಿಜಸುಖ ತಾ ಬಲ್ಲ ಸುರಮುನಿಜನರಾನಂದದಿ ಸೇವಿಸಿ ಅರಹುತರಾದರು ಎಲ್ಲ 1 ಕಾಸಿ ಕಡಿಯದೇ ಭಾಸುತಲ್ಯದೆ ಲೇಸಾಗಿ ನವನೀತ ಮೋಸಹೋಗದನುಸರಿಸಿಕೊಂಬುದು ವಸುಧಿಯೊಳಗೆ ತ್ವರಿತ ಋಷಿಮುನಿಗಳು ಸ್ವಹಿತ ತುಸುಕೊರತಿಲ್ಲದೆ ಪಸರಿಸಿ ತುಂಬೆದ ವಿಶ್ವದೊಳಗೆ ಸನ್ಮತ2 ಅನುದಿನ ಮಹಿಪತಿಗಿದು ನಿಜ ನೋಡಿ ಮಹಾಮಹಿಮೆಯ ಸವಿಗೂಡಿ ಶಿರದಲಭಯವ ನೀಡಿ ಇಹಪರದೊಳು ಗುರುನಾಮವೆ ಕಾಮಧೇನುವಿದೆ ಕೊಂಡಾಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಮಿತವನು ಪಡಿಯೋ ಪ ಈ ಮಹಿಯೊಳು ರಘುವೀರ ತೀರ್ಥರ ಕರ- ತಾಮರಸೋದ್ಭವರೆನಿಸಿ ಮೆರೆದ ಗುರು ಅ.ಪ ಧರೆಸುತ ಮಂಡಿತ ಸುರಪುರದಲಿ ದ್ವಿಜ ವರ ಕುಲದಲಿ ಜನಿಸಿಯಳಿಮೇ- ಲಾರ್ಯರ ಬಳಿಯಲಿ ಶಬ್ದಾವಳಿ ಶಾಸ್ತ್ರವ ಪಠಿಸಿ ಇಳಿಸುರನುತ ಕರ ಜಲಜೋದ್ಭವ ರೆನಿಸಿ ಕಲಿತು ಗುರುಮುಖದಿ ಮರುತ ಶಾಸ್ತ್ರವನು ತಿಳಿಸುತ ಬುಧಜನ ರೊಲಿಸಿದಂಥ ಗುರು 1 ಹೇಮಮಂಟಪದಿ ಭೂಮಿ ಸುತಾನ್ವಿತ ರಾಮನ ಪೂಜಿಸು ತಾ ಶ್ರೀಮನ್ಮಧ್ವಕ ರಾಬ್ಜಾದಾಗತ ಸೌಮಿತ್ರಿಯ ಸಹಿತ ಸಾಮವ ಪಠಿಸುವ ಭೂಮಿಸುರಜನ ಸ್ತೋಮದಿ ಶೋಭಿಸುತ ಧೀಮಜನರಿಗೆ ಪ್ರೇಮದಿಂದ ಮೃಷ್ಟಾನ್ನದಾನ ಸನ್ಮಾನ ಮಾಡುತಿಹ 2 ಭೂತಳದಲಿ ಸುಕ್ಷೇತ್ರ ಬಹು ಆರ್ಥ ಯಾತ್ರಿಗಳಾ ಚರಿಸಿ ಭೂತಬಾಧೆ ರೋಗಾತುರ ಜನಗಳ ಭೀತಿಯ ಪರಿಹರಿಸಿ ಶಾಸ್ತ್ರಸುಧಾರಸ ಸತ್ಯಮೋದ ಯತಿ- ನಾಥರಿಂದ ಗ್ರಹಿಸಿ ಖ್ಯಾತ ಕಾರ್ಪರ ಕ್ಷೇತ್ರದಿ ನರಮೃಗನಾಥನ ಪ್ರೀತಿಗೆಪಾತ್ರರೆನಿಸಿರುವ 3
--------------
ಕಾರ್ಪರ ನರಹರಿದಾಸರು
ಕಾಯ ಪ ದಾನವಾರಣ್ಯಪಾವಕ ವೀತಶೋಕ ಅ.ಪ. ಆನತೇಷ್ಟ ಪ್ರದಾಯಕ ನಮಿಸುವೆನು ಸದಾ ಮೈನಾಕಿಧರ ಬಿಂಬ ಸುರಮುನಿಕದಂಬ ಧ್ಯಾನಗಮ್ಯನೆ ಭಕ್ತರಾಪತ್ತು ಕಳೆ ಶಕ್ತಾ ನೀನೆ ಗತಿಯೆಂಬೆ ಮುನಿಮನ ವನಜ ತುಂಬೆ 1 ಶ್ರವಣ ಮಂಗಳನಾಮಧೇಯ ನಿರ್ಜಿತಕಾಮ ಸವನ ದ್ವಿತಿಯರೂಪ ವಿಗತಕೋಪ ಸ್ವವಶ ಸ್ವಾತಂತ್ರ್ಯ ವಿಖನಸ ಪೂಜ್ಯವಜ್ರನಖ ಪವಿ ದಂಷ್ಟ್ರದರ್ಶ ಭಾರ್ಗವಿರಮಣಗಶನಾ 2 ಆದಿದೇವಾನಂತ ಮಹಿಮನೇ ನಿಶ್ಚಿಂತಾ ಕಾದುಕೋ ನಿನ್ನವರ ವಿಬುಧ ಪ್ರವರಾ ಮೋದಮಯ ಶ್ರೀ ಜಗನ್ನಾಥವಿಠಲರೇಯ ವೈದಿಕವ ನುಡಿಸು ಲೌಕಿಕ ಮಾರ್ಗವ ಬಿಡಿಸು 3
--------------
ಜಗನ್ನಾಥದಾಸರು
ಕಾಯ ಪ ಗತಿ ನೀನೆ ಎನಗೆ ಸಂತತ ಪರಂಧಾಮಾ ಅ ಕೃಪಣ ವತ್ಸಲನೆ ಎಮ್ಮಪರಾಧಗಳ ನೋಡಿ ಕುಪಿತನಾಗುವರೇನೋ ಸುಫಲದಾಯೀ ನೃಪಗನಿರುದ್ಧ ಬಿನ್ನಪವ ಮಾಡುವೆ ನಿನಗೆ ಚಪಲ ಚಿತ್ತರಾದ ಕಾಶ್ಯಪಿಸುರರನ ಕಾಯೋ 1 ಮಾನ್ಯಮಾನದನೆ ಬ್ರಹ್ಮಣ್ಯದೇವ ನೀನೆಂದು ಉನ್ನತ ಶ್ರುತಿಗಳು ಬಣ್ಣಿಸುವುವು ಸನ್ನುತ ಮಹಿಮನೆ ನಿನ್ನ ಪೊಂದಿದವರ ಬನ್ನ ಬಡಿಸುವುದು ನಿನಗಿನ್ನು ಧರ್ಮವು ಅಲ್ಲ 2 ಹಲವು ಮಾತುಗಳಾಡಿ ಫಲವೇನು ಬ್ರಾಹ್ಮಣರ ಕುಲಕೆ ಮಂಗಳವೀಯೋ ಕಲುಷದೂರ ಸುಲಭ ದೇವೇಶ ನಿನ್ನುಳಿದು ಕಾವರ ಕಾಣೆ ಬಲಿಯ ಬಾಗಿಲ ಕಾಯ್ದ ಜಗನ್ನಾಥ ವಿಠಲಾ 3
--------------
ಜಗನ್ನಾಥದಾಸರು
ಕಾಯ ರಾಘವೇಂದ್ರ ರಾಘವೇಂದ್ರ ದುರಿತೌಫ ಪರಿಹರಿಸಿ ರಾಘವೇಷನ ಪಾದಮೌಘ ನುತಿಪ ಗುರು ಪ ಇಂದು ಕಿರಣಪೊಲುವ ಪಾದ ಇಂದು 1 ಸಾಕುವುದು ಎನ್ನನೇಕ ಮಹಿಮ ಗುರು2 ಸಿರಿವಿಜಯವಿಠ್ಠಲ ಪರದೈವವೆ ಯೆಂದು ಸ್ಥಿರವಾಗಿ ಸ್ಥಾಪಿಸಿ ಮೆರೆದ ನಿರ್ಮಳಕಾಯ 3
--------------
ವಿಜಯದಾಸ
ಕಾಯ ಇಂದಿರೆ ರಮಣ ಆಗಲೂ ನೀ ಕಾಯಬೇಕೋ ಅರವಿಂದ ನಯನ ಪ. ಈಗ ಈ ಜನ್ಮದಲ್ಲಿ ಭವ ದಾಟುವಲ್ಲಿ ಅ.ಪ. ಮಾನವ ನಾನಾಗಿ ಪುಟ್ಟಿ ಕಾಲ ಕಳೆದು ದೀನನಾಗೀಗ ಇನ್ನು ನೀನೆ ಗತಿಯೋ ಎನಲು ಶ್ರೀನಾಥ ನಿನ್ನ ನಾಮ ಎನ್ನ ನಾಲಗೆಯಲಿ ನುಡಿಸಿ 1 ಮಾಯಾಪತಿಯೆ ಕೇಳೋ ಆ ಯಮಭಟರು ಎಳೆದು ನೋಯಿಸುತ್ತಿರಲು ಎನ್ನ ಬಾಯಬಿಡುತಲಿ ತೋಯಜಾಂಬಕನೆ ಎನ್ನ ಕಾಯೋ ಎಂದೆನುತ ಒದರೆ ಆ ಯಮಬಾಧೆ ಬಿಡಿಸಿ ಸಾಯದಾ ಸೌಖ್ಯವನಿತ್ತು 2 ವೈಷ್ಣವ ಜನ್ಮವ ನೀನು ಇತ್ತುದು ಪಿರಿಯದಲ್ಲೊ ವೈಷ್ಣವ ಜ್ಞಾನವ ನೀಡೊ ಸುಭಕ್ತಿ ಸಹಿತ ಕೃಷ್ಣಮೂರುತಿಯೆ ನೀನು ಅಷ್ಟದಳÀ ಪದ್ಮದಲಿ ನಿಂತು ಉಷ್ಣ ಶೀತ ದ್ವಂದ್ವ ಸಹಿಷ್ಣುತೆ ವಿರಕ್ತಿಯೊಡನೆ 3 ತ್ರಿಗುಣದಿಂದ ಬದ್ಧವಾದ ವಿಗಡದೇಹ ತೊಲಗುವಂತೆ ಬಗೆಬಗೆಯ ನಿನ್ನ ಲೀಲೆ ಅಂತರದಿ ತಿಳಿಸಿ ಜಗದಾವರಣ ತೊಲಗುವಾಗ ಬಗೆಬಗೆಯ ಲಯದ ಚಿಂತೆ ತಗಲಿ ಮನಕೆ ನಿನ್ನ ಮಹಿಮೆ ಆನಂದವಾಗುವಂತೆ 4 ಗೋಪಾಲಕೃಷ್ಣವಿಠಲ ನೀ ಪರದೈವನೆನಿಸಿ ಆಪಾದಮೌಳಿ ನಿನ್ನ ರೂಪವ ತೋರಿ ಅಪವರ್ಗದಲಿ ಎನಗೆ ಶ್ರೀಪಾದಾಸ್ಥಾನವಿತ್ತು ಈ ಪರಿಯಿಂದ ಉಭಯ ವ್ಯಾಪಾರದಲ್ಲಿ ಹರಿಯೆ 5
--------------
ಅಂಬಾಬಾಯಿ
ಕಾಯಬೇಕೆನ್ನ ನೀ ಸದ್ಗುರು ರನ್ನಾ ಕಾಯೋ ನಂಬಿದೆ ನಾನು ಪ ಮರಹು ಮುನಿಯನು ಸೇರಿದೇ ನಾ ನನ್ನೊಳಗ ಅರವಪಥಜರಿದೇ ಕರುಣಾ ಸಾಗರ ನೆಂದು ಮೊರೆಯ ಹೊಕ್ಕೆನುಬಂದು ತರಣೋಪಾಯವೆನ್ನೊಳು ಸಾರಿ ಉದಾರೀ ದಯ ಬೀರಿ 1 ಆರರಿಗಳ ಕಾಟದೀ ಅವರಾಕೂಡೀ ಮೀರಲಾರೆನೋ ನಾನು ಶ್ರೀರಮಣನ ದಯದೊಲವಾ ನಿಶ್ಚಲವಾ ಕಳವಳವಾಗಳವಾ 2 ಮೀರಿದ ತೂರ್ಯಾಗಾರವ ಸುಖದಿಂದಲಿ ಸಾರುವಂದದಿ ಮತಿ ಬೀರೊ ಶ್ರೀಮಹಿಪತಿ ತಾರಿಸೋ ಕೊಟ್ಟು ನಿನ್ನೆಚ್ಚರವೆ ಘನ ಬೆರುವೆ ನಿಜದರುವೇ ಸುರತರುವೆ ಗುರುವೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯಬೇಕೆನ್ನ ನೀನು ಶ್ರೀ ಗುರು ಎನ್ನ ಧ್ರುವ ಪಕ್ಷ ಪಾಂಡವ ಪ್ರಿಯ ಅಕ್ಷಯಾಪದನಿಶ್ಚಯ ಲಕ್ಷುಮಿ ಸುಹೃದಯ ರಕ್ಷಿಸೊ ನೀ ಎನ್ನಯ್ಯ 1 ಪವಿತ್ರ ಪ್ರಣವರಿಸಿ ಸುವಿದ್ಯದೊಳು ಬೆರಸಿ ಭವ ಭಯವು ಹಿಂಗಿಸಿ 2 ಸೋಹ್ಯ ಸೊನ್ನೆಯದೋರಿ ದಯಮಾಡೊ ಮುರಾರಿ ಸಾಹ್ಯ ಮಾಡೊ ಸಹಕಾರಿ ಮಹಿಪತಿ ಸ್ವಾಮಿ ಶ್ರೀಹರಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯಬೇಕೆನ್ನ ಶ್ರೀ ದೇವಾಧಿದೇವಿಣಿ ದಯವುಳ್ಳಸ್ವಾಮಿ ಸಹಕಾರಿ ನಾರಾಯಣಿ ಧ್ರುವ ಕರುಣಾನಂದಗುಣ ಶರಣ ಸಂರಕ್ಷಣಿ ದುರಿತ ವಿಧ್ವಂಸಿನಿ 1 ಘನಸುಖದಾಯಿಣಿ ದೀನ ಉದ್ಧಾರಣಿ ಶಿಖಾಮಣಿ ನೀನೆ ಶ್ರೀ ಲಕ್ಷುಮಿಣಿ 2 ಬಾಹ್ಯಂತ್ರ ವ್ಯಾಪಿಣಿ ಮಹಾಗುರು ಸ್ವರೂಪಿಣಿ ಸಾಹ್ಯದಲಿ ನೀ ಪೂರ್ಣ ಮಹಿಪತಿಯ ಸ್ವಾಮಿಣಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯಬೇಕೆಲೋ ರಂಗಾ ಎನ್ನಾ | ನೀ ಕಾಯಬೇಕೆಲೋ ರಂಗಾ | ತೋಯಜಾಕ್ಷ ದಯಾನಿಧಿ ತರಣೋ | ಪಾಯದೋರೋ ಶುಭಾಂಗಾ ಪ ದುರಿತ ಸಮೂಹವ ಬಂದು | ಶಣಸುತ | ಹರಿದಂಜಿಸುತಿವೆಯಿಂದು | ನರಹರಿ ನಿನ್ನ ನಾಮದ ಘನಗರ್ಜನೆಯ |ಕೊಡು | ಮರಳು ಮಾನವನಿವನೆಂದು 1 ಕುಂದನಾರಿಸಿಯೆಲ್ಲಾ ನೋಡಲು | ಒಂದೆರಡೆನಲಿಕ್ಕಿಲ್ಲಾ | ಮಂದಮತಿ ಅವಗುಣ ರಾಶಿ ಪತಿತರ | ವೃಂದದೊಳೆನ್ನಧಿಕಲಾ2 ಕೊಂಬು ನೀಚನವಾದರೆ ಬಿರದಾ | ಡಂಬರ ನೀಚನಲ್ಲಾ | ಇಂಬುದೋರೆಲೆ ನಿನ್ನ ದಾಸರ ದಾಸ | ಎಂಬದೆನ್ನಧಿಕಾರವಿಲ್ಲಾ 3 ಬಿನ್ನಹವೆನ್ನ ಮುರಾರಿ | ಪಾಲಿಸಿ | ನಿನ್ನ ಚರಣವ ದೋರಿ | ಧನ್ಯಗೈಸೆಲೋ ಗುರುವರ ಮಹಿಪತಿ ಚಿನ್ನನೊಡಿಯ ಸಹಕಾರಿ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು