ಒಟ್ಟು 3655 ಕಡೆಗಳಲ್ಲಿ , 116 ದಾಸರು , 2523 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚರಣದಾಸರ ಸದುಹೃದಯ ನಿವಾಸನೆ ಸಿರಿರಾಮ ಪರಮ ಪಾವನೆ ವರಜಾಹ್ನವೀ ಜನಕನೆ ಸಿರಿರಾಮ ಪ ಶರಣಜನರ ಮೇಲ್ನುಡಿಯೋಳ್ಸಂಚಾರನೆ ಸಿರಿರಾಮ ನೆರೆನಂಬಿ ಭಜಿಪರ ಭವಮಲಹರಣನೆ ಸಿರಿರಾಮ ಕರುಣದೊದೆದು ಯುವತಿಕುಲವನುದ್ಧರಿಸದನೆ ಸಿರಿರಾಮ ವರದ ವಾಸುಕಿಶಾಯಿ ಜಗದೇಕ ಬಂಧುವೇ ಸಿರಿರಾಮ 1 ಧುರಧೀರವಾಲಿಯ ಗರುವನಿವಾರನೆ ಸಿರಿರಾಮ ಮರೆಬಿದ್ದ ಸುಗ್ರೀವನ ದು:ಖಪರಿಹಾರನೆ ಸಿರಿರಾಮ ಪರಮಭಕ್ತ್ಹನುಮಗೆ ಕರವಶನಾದನೆ ಸಿರಿರಾಮ ಶರಣುಬಂದಸುರಗೆ ಸ್ಥಿರಪಟ್ಟವಿತ್ತನೆ ಸಿರಿರಾಮ 2 ಶರಧಿಮಥನಮಾಡಿ ಸುರರ ರಕ್ಷಸಿದನೆ ಸಿರಿರಾಮ ಹರನಕೊರಳ ಉರಿ ಕರುಣದ್ಹಾರಿಸಿದನೆ ಸಿರಿರಾಮ ವರಗಿರಿನಂದನೆಮನ ಸೂರೆಗೈದನೆ ಸಿರಿರಾಮ ಸರುವದೇವರದೇವ ಅದ್ಭುತಮಹಿಮನೆ ಸಿರಿರಾಮ 3 ಕರಿಯ ರಕ್ಷಣೆಗಾಗಿ ಕಾಸಾರಕ್ಕಿಳಿದನೆ ಸಿರಿರಾಮ ತರುಣಿಮೈಗಾವಗೆ ಚರನಾಗಿ ನಿಂತನೆ ಸಿರಿರಾಮ ಚರಣದಾಸರಮನೆ ತುರಗವ ಕಾಯ್ದನೆ ಸಿರಿರಾಮ ಪರಮಭಾಗವತರನರೆಲವ ಬಿಟ್ಟಿರನೆ ಸಿರಿರಾಮ 4 ಅನುಪಮ ವೇದಗಳಗಣಿತಕ್ಕೆ ಮೀರಿದನೆ ಸಿರಿರಾಮ ಸನಕಸನಂದಾದಿ ಮನುಮುನಿ ವಿನಮಿತನೆ ಸಿರಿರಾಮ ವನರುಹ ಬ್ರಹ್ಮಾಂಡ ಬಲುದರದಿಟ್ಟಾಳ್ವನೆ ಸಿರಿರಾಮ ಮನಮುಟ್ಟಿ ಭಜಿಪರ ಘನಮುಕ್ತಿ ಸಾಧ್ಯನೆ ಸಿರಿರಾಮ 5
--------------
ರಾಮದಾಸರು
ಚರಣವ ನರ್ಚಿಸುವೆ ಹರಿ ನಿನ್ನ ಮರೆಯದೆ ಕೀರ್ತಿಸುವೆ ನೀನೆ ಎನ್ನರಸ ರಕ್ಷಿಸು ಎಂದು ಪ ರಕ್ಷಿಸು ಎಂದು 1 ಸುಗುಣಂಬರೀಶ ಭೂಪಗೆ ಕೊಡಲಾಕ್ಷಣ ಗಮನ ಚನ್ನಿಗನೆ ರಕ್ಷಿಸು ಎಂದು 2 ಮುಳಿದು ಗಜವ ನೆಗಳೆಳೆಯಲು ಭಯದಲಿ ನಳಿನಾಕ್ಷ ನಿನಗೆ ದೂರಲು ಬೇಗದಲಿ ಸಾರಿ ಸುಲಲಿತ ಮಹಿಮನೆಗಳ ಸೀಳಿ ಕರಿಯನು ಸಲಹಿದೆ ದೇವ ಗೋವಳನೆ ರಕ್ಷಿಸು ಎಂದು 3 ಬೇಗದಲಿ ಕಂಬದಿಬಂದು ಸದೆದು ದಾನವನ ದಾಯದಲಿ ಕಾಯ್ದು ಪದುಮಾಕ್ಷ ನರಹರಿ ಮುದದಿ ರಕ್ಷಿಸು ಎಂದು 4 ದುರುಳ ದುಶ್ಯಾಸನ ಭೂವರ ಪಾಂಡು ತನುಜರ ಅರಸಿಯ ಸೀರೆಯ ಭರದಿ ಸೆಳೆಯಲಾಗ ಮೊರೆಯಿಡಲಕ್ಷಯ ವರವನಿತ್ತು ಸಲಹಿದ ಹರಿ ಸುತ ಕೋಣೆಯ ಲಕ್ಷ್ಮೀಶ ರಕ್ಷಿಸು ಎಂದು 5
--------------
ಕವಿ ಪರಮದೇವದಾಸರು
ಚರಣವನೆನೆಮನವೆ | ನಂಬಿ ಚರಣವ ನೆನೆಮನವೆ | ಶ್ರೀರಾಮವೇದವ್ಯಾಸರ ಪಾದಕಮಲವ | ನಿರುತದಿ ಪೂಜಿಪಗುರು ಸತ್ಯಪೂರ್ಣರ ಪ ಶ್ರೀ ಮಧ್ವಶಾಸ್ತ್ರದಾ | ಸರೋವರ | ಪ್ರೇಮದಿಹಂಸರಾ | ವ್ಯೋಮ ಕೇಶನಪ್ರಿಯನಾಮ ಮುಕ್ತಾಫಲ | ಪ್ರೇಮದಿಸೇವಿಪ ಕೋಮಲ ಕಾಯರ 1 ಪೋಕದುರ್ವಾದಿಗಳಾ | ವದನಕೆ | ಹಾಕಿದ ಕೀಲಿಗಳಾ | ಬೇಕಾದ ಸಂಪದನೇಕವನುಣಿಸುವ | ಲೋಕಕೆ ಮಾನ್ಯಾಗಿ ಸಾಕುವರೊಡೆಯರ 2 ಮುನಿ ಅಭೀನವತೀರ್ಥರ | ಶುಭಕರ | ವನಜದಿಜನಿಸಿದರಾ | ವನಿಯೊಳು ಮಹೀಪತಿಜನ ಸಲಹುವರಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಚರಣಾರಾಧಿಸೋ ಚಾರುತರ ಭೂ ವರಹ ವೇಂಕಟೇಶನಾ ಉರಗಾದ್ರಿವಾಸನಾ ವರ ಶ್ರೀನಿವಾಸನಾ ಪ ದುರಿತಕೋಟಿಯ ಹರಿವ ಸ್ವಾಮಿ ಪು ಷ್ಕರಿಣಿ ತೀರ ವಿಹಾರನಾ ಸಿರಿಮನೋಹರನಾ ಪರಮ ಉದಾರನಾ 1 ವಾಹನೋತ್ಸವದಲ್ಲಿ ಪರಿಪರಿ ಮಹಿಮೆ ಜನರಿಗೆ ದೋರ್ವನಾ ಸಹಜದಿ ಮೆರೆವನಾ ಬಹಳ ಪೂರ್ವನಾ 2 ನಡೆದು ಯಾತ್ರೆಗೆ ಬರಲು ಹಯಮೇಧ ಅಡಿಅಡಿಗೆ ಫಲ ನೀವನಾ ಬಿಡದೆವಾ ಕಾವನಾ ಮೃಡಜರ ದೇವನಾ3 ಸಕಲರಿಗೆ ನೈವೇದ್ಯನುಣಿಸುವಿ ಅಖಿಳ ಸಂಶಯ ಹಾರಸೀ ವೈಕುಂಠ ಸೇರಿಸೀ ಸ್ವಕರದಿ ತೋರಿಸೀ 4 ಇಂದು ನಮ್ಮನಿ ದೈವವಾಗಿಹ ತಂದೆ ಮಹಿಪತಿ ಪ್ರೀಯನಾ ಸುಂದರ ಕಾಯನಾ ವೃಂದಸುರ ಧ್ಯೇಯಾನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಚಾರು ಹಸ್ತಾಯ 1ಹೃದಯಶೋಭಿತ ಮಹಾ ಕೌಸ್ತುಭಾಭರಣಾಯವಿಧಿಜನಕ ನಾಭಿಪಂಕಜ ಭಾಸುರಾಯಸದಮಲಾಯತ ಕಾಂಚಿದಾಮಯುತ ವಸನಾಯಬುಧಜನಮನೋವೇದ್ಯ ಪಾದಪದ್ಮಾಯ 2ಲಕ್ಷ್ಮೀಕಳತ್ರಾಯ ಸೂಕ್ಷ್ಮಸ್ವರೂಪಾಯಕುಕ್ಷಿಗತಭುವನ ಪರಿಪಾಲಕಾಯಪಕ್ಷೀಂದ್ರಕಂಧರಾರೂಢಾಯ ದುಷ್ಟಜನಶಿಕ್ಷಾಸಮರ್ಥಾಯ ಸಾಕ್ಷಿ ಚೈತನ್ಯಾಯ 3ವಿಶ್ವಸ್ವರೂಪಾಯ ವಿಶ್ವತರು ಮೂಲಾಯವಿಶ್ವಗುಣ ಸಂಹಾರಕಾರಣಾಯವಿಶ್ವನಾಟಕಸೂತ್ರಧಾರಾಯ ನಿತ್ಯಾಯವಿಶ್ವಕೃತ ಸುಕೃತದುಷ್ಕøತ ಲೇಪರಹಿತಾಯ 4ಧರಣಿಕಮಲಾಲಯಾಶ್ರಿತ ದಿವ್ಯ ಪಾಶ್ರ್ವಾಯಸುರಮುನಿ ಸ್ತುತಿ ಘೋಷಪೂರಿತಾಯಪರಮಪಾವನಪುಣ್ಯ ಶೇಷಾದ್ರಿನಿಲಯಾಯಸ್ಮರಜನಕ ಸುರಶಿಖಾಮಣಿ ವೆಂಕಟೇಶಾಯ 5ಓಂ ಅನಘಾಯ ನಮಃಕಂ||ಗಣಪತಿ ನಿನ್ನಾಗ್ನೇಯದಲಿನ ತಾ ನೈರುತ್ಯದೆಶೆಯೊಳಂಬಿಕೆಮರುತನೊಳನುಪಮ ಶಂಕರನೀಶಾನ್ಯನೋಳರ್ಚಿತರಾರೈಯ್ಯ ತಿರುಪತಿಯೊಡೆಯಾನೀನೇ ಗಣಪತಿ ಸೂರ್ಯನುನೀನೇ ಶಿವ ನಿನ್ನ ಶಕ್ತಿ ದೇವಿಯು ನಾನೂನೀನಾಗಿ ನಿನ್ನ ಭಜಿಸಿದೆನೀ ನಿರ್ಣಯ ನಿನ್ನ ವಚನ ವೆಂಕಟರಮಣಾ
--------------
ತಿಮ್ಮಪ್ಪದಾಸರು
ಚಿಕ್ಕ ತಿರುಪತಿವಾಸ - ಶ್ರೀ ವೆಂಕಟೇಶ ಪ ಅಕ್ಕರದಿ ನೀನೆನ್ನ - ತಕ್ಕೈಸಬೇಕೋ ಅ.ಪ. ಚಕ್ರಧರ ದೇವಾಚೊಕ್ಕ ಮೂರುತಿ ಅಜನ | ಪೊಕ್ಕಳಾದಲಿ ಪಡೆದುಲಕ್ಕುಮಿಗೆ ಮೀರ್ದ ಪೊಂ | ಬಕ್ಕಿ ಧೇರನ ಕಾಯೋ 1 ಸಪ್ತ ಪ್ರಕಾರದಲಿ | ಆಪ್ತ ನೀ ನೆಲಿಸಿದ್ದುಗುಪ್ತ ಮಹಿಮನೆ ಜಗಕೆ | ವ್ಯಕ್ತನಾಗದಲೇ |ಕ್ಲುಪ್ತಿಯಿಂದದಿ ಹವಿ | ಭೋಕ್ತø ಯಜ್ಞನಿವೊಲಿದುವ್ಯಕ್ತನಾದೆಯೊ ಜಡದಿ | ಅವ್ಯಕ್ತ ಮೂರ್ತೇ 2 ಮೂರ್ತಿ | ಪ್ರತಿರಹಿತ ದೇವಾ 3 ವರಾಹ | ಸ್ವಾಮಿ ಪುಷ್ಕರಿಣ್ಯಾದಿಆ ಮಹಾ ತೀರ್ಥಗಳ | ವಿಮಾನ ಸ್ಥಿತನಾ |ಈ ಮನೋರೂಪದಲಿ | ನೇಮಾನು ಸಂಧಾನಕಾಮಿಸುವೆ ಶ್ರೀರಮಣ | ಭೂಮಿಗ್ವಲ್ಲಭನೇ 4 ಸರ್ವಜಗ ಸೃಜಿಸುವನೆ | ಸರ್ವವನು ಲಯಿಸುವನೆಸರ್ವಕುತ್ತಮನೆನಿಪೆ | ಶರ್ವವಂದ್ಯಾಸರ್ವ ಪ್ರೇರಕ ನೀನೆ | ಸರ್ವ ಚೇಷ್ಟಕ ನೀನೆಸರ್ವ ಸುಂದರ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಚಿಂತಾಮಣಿಗಮಿತ ಚಿಂತಾಮಣಿ ಚಿಂತಲವಾಡಿ ಶ್ರೀ ನೃಸಿಂಹಸ್ವಾಮಿ ಪ ಕಂತುಪಿತ ಕೊಟ್ಟರುವ ಸಾಮಥ್ರ್ಯದಿಂದಲೇ ಐಹಿಕ ವಸ್ತುವೀವುದು ಅನಂತ ಶ್ರೀಪತಿ ಚಿಂತಲವಾಡಿ ಕರುಣಿ ಸ್ವ - ತಂತ್ರನು ಇಹಪರದಿ ಐಶ್ವರ್ಯವ 1 ಕಾಕುಮನ ವಾಕ್ಕಾಯ ಶುದ್ಧ ಮಾಡುವ ದೇವಿ ಶ್ರೀ ಕಾವೇರಿ ತೀರದಲಿ ಕುಳಿತು ಸರ್ವ ಭಕುತರಿಗೆ ವರವೀವ ಶ್ರೀಕಾಂತ ನರಸಿಂಹ ಸುಖಜ್ಞಾನಮಯ ದೋಷದೂರ ಗುಣನಿಧಿಯು 2 ಮಮಕಾರ ಅಹಂಕಾರ ಡಂಭತನವನು ಬಿಟ್ಟು ಮಮಸ್ವಾಮಿ ಸರ್ವರಿಗೂ ಪರಮೈಕಸ್ವಾಮಿಯು ಸುಮನಸಾರ್ಚಿತ ಕುಸುಮಸಂಭವನ ತಾತನು ರಮಾಪತಿ ಪ್ರಸನ್ನ ಶ್ರೀನಿವಾಸ ನಮೋ ಎನ್ನಿ 3
--------------
ಪ್ರಸನ್ನ ಶ್ರೀನಿವಾಸದಾಸರು
ಚಿತ್ತಗೊಟ್ಟು ಸಿರಿಕೃಷ್ಣ ಕಾಯಿ ಕಂಡ್ಯ ಪ ಮತ್ತೊಬ್ಬ ನಾನಲ್ಲ ನಿನ್ನ ಭೃತ್ಯರ ಭೃತ್ಯಅ.ಪ ಕಾಲನವರ ಮುನ್ನ ಮುಂಚೂಣಿ ದಾಳಿಗೆಕೀಳು ಮನಮಂತ್ರಿ ಮೂಲೆಯ ಪೊಗಲುಮೂಲ ಬಲದಾಳಿಗೆ ಮುರಿದು ನಾನೋಡಲುಕಾಲಗೆಟ್ಟು ನಾನಿಹ ಕಾಲದಲ್ಲಿ 1 ಪಿತ್ತವೆಂಬ ಕಿಚ್ಚು ವಾತಕೂಡ್ಹೆಚ್ಚಿತುಹತ್ತಿಕೊಂಡು ದೇಹಪುರ ಸುಡುವಾಗಮತ್ತೆ ಶ್ಲೇಷ್ಮವು ಕೂಡಿ ಸುತ್ತು ಮುತ್ತೆಳೆವಾಗಎತ್ತ ಹೋಗಲೆಂಬ ಸಂಕಟದೊಳಗೆ 2 ತಿಂದೋಡಿ ಬಂಧುಗಳೆಲ್ಲ ಕೈಬಿಟ್ಟರುಮುಂದೆಮದೂತರು ಬಂದು ನಿಂದಾಗಎಂದಿಗಾದರು ಒಮ್ಮೆ ನೆನೆದುದ ಕೈಗೊಂಡುಹಿಂದಿಟ್ಟುಕೊಂಡೆನ್ನ ಕಾಯಿ ಕಂಡ್ಯ ಕೃಷ್ಣ3
--------------
ವ್ಯಾಸರಾಯರು
ಚೇತರಿಸಾಲೊಲ್ಲೆಯಾ ಮನಪಾತಕ ನಿದ್ರೆ ಭರದಿಂ ಪ ಮಲಮಯ ಕಾಯದಾ ಹೊಲಸು ಹಸಿವಿತ್ರಿಷಿ ಛಲಮದ ರÉೂೀಗಗಳಾ ಮಲಗುವರೆ ಮಹನೀಯರ ತೆರದಿ 1 ದಾರಾತನು ಬಲಹೀರುತ ಮಾಯವ ಬೀರುತಲಾತ್ಮಜರು ದಾರಿದ್ರ್ಯದ ದಾವಾನಳ ಸುಡುತಿರೆ ನಾರದರೋಲ್ ನಿಶ್ಚಿಂತನಾಗಿ 2 ಶಿರಿಗೋವಿಂದ ವಿಠಲ ಮೊರೆ ಪೊಕ್ಕರೆ ಪೊರೆಯುವನೆಂದು ಅಭಯಾ ವರಭುಜಗಳು ನಾಭಾಯತ್ತಿನಿಂದಿರಲು ಸುರ ಅರಿಗಳ ತೆರೆ ಹೊರಳೂರಗದಾ 3
--------------
ಅಸ್ಕಿಹಾಳ ಗೋವಿಂದ
ಚೋದ್ಯ ಕೇಳಿಚಿತ್ರದ ಹೂವಿನ ಹವಳ ಕಾಯಾಗುವಅರ್ಥವ ತಿಳಿದು ಹೇಳಿ 1 ಸುಟ್ಟ ಬೀಜವ ಬಿತ್ತಿ ಬೆಳೆಯ ಬಾರದ ಕಾಯಿಬೆಟ್ಟದಿ ಸಾರವನುತೊಟ್ಟು ಇಲ್ಲದ ಹಣ್ಣ ಮುಟ್ಟಿ ಕೊಯ್ವನು ಒಬ್ಬಹುಟ್ಟು ಬಂಜೆಯ ಮಗನು 2 ಒಣಗಿದ್ದ ಮರನೇರಿ ಹಣ್ಣು ಕಾಯನು ಮಗನುದಣಿಯದೆ ಮೆದ್ದಿಳಿದ ರಣದಲ್ಲಿ ತಲೆ ಹೊಯ್ದ ರುಂಡವು ಬೀಳಲುಹೆಣನೆದ್ದು ಕುಣಿದಾಡಿತು 3 ಕಣ್ಣಿಲ್ಲದಾತನು ಕಂಡು ಪಿಡಿದ ಮೃಗಕೈಯಿಲ್ಲದಾತನೆಚ್ಚಮಣ್ಣಲಿ ಹೊರಳುವ ಕಾಲಿಲ್ಲದಾತನುಗಣ್ಯವಿಲ್ಲದೆ ಪಿಡಿದ 4 ಎಲ್ಲರು ಕೇಳಿ ಕನಕ ಹೇಳಿದ ಮಾತಎಲ್ಲರೂ ಗ್ರಹಿಸಿಕೊಳ್ಳಿಬೆಳ್ಳಿ ಕಣ್ಣಿನವಗೆ ತಿಳಿಯಲಾರದ ಮಾತುಬಲ್ಲಾದಿಕೇಶವನು 5 |
--------------
ಕನಕದಾಸ
ಚೋದ್ಯ ಚೋದ್ಯ ಸರ್ವದ ವೇದ ವೇದ್ಯ ನಂಬಿದ ಭಕ್ತ ಜನರಿಗಾಗುವ ಸುಖಸಾಧ್ಯ ಪ. ಶ್ರೀ ಮಹೀಶ ಸತ್ಯಭಾಮೆಯರರಸ ಸು- ಧಾಮ ತಂದವಲಕ್ಕಿ ಪ್ರೇಮದಿಂದಲಿ ಮೆದ್ದ 1 ಅಂಡಜವಾಹ ಬ್ರಹ್ಮಾಂಡಗಣಾತತ ಪಾಂಡುಕುವರನಿಗಾದನು ಭಂಡಿಸೂತ 2 ಆದರೀ ಕೃತಮಾಯ ಕೃತ್ಯಕದಂಡ ಸ- ನ್ಮುದದಿಂದ ವಿದುರನ ಮನೆಯ ಪಾಲುಂಡ 3 ಶ್ರೀವರೀವರಿಯಿಂದ ಸರಸಮಾಡುತಲಿರೆ ಗೋಪಿಯರಿಗೆ ಮೆಚ್ಚಿ ಗೋವುಗಳ ಕಾಯ್ದ 4 ಗೊಲ್ಲರ ಹುಡುಗರ ಪೆಗಲೇರಿ ಮೆರೆದ 5 ಘೋರ ಸಂಸಾರಪಹಾರಿ ನಾರದ ವಂದ್ಯ ಜಾರ ಚೋರ ಕೃತ್ಯ ತೋರಿದ ವರದ 6 ಮಾನವ ದೈತ್ಯ ಗಣರಿಗಾಧಾರ ಮ- ತ್ತಾವ ಕಾಲಕು ಭೇದಭೇದವ ಸೇರಾ 7 ತೇಜಸ್ತಿಮಿರಾದಿ ಸೋಜಿಗ ಶಕ್ತಿಮ- ಹೋಜಸನೀತ ಪರಾಜಯ ರಹಿತಾ 8 ಪರದೇಶಿಯ ಮೇಲೆ ಕರುಣ ಕಟಾಕ್ಷದಿ ಸಿರಿಯೊಡಗೂಡಿ ಬಂದಿರುವ ಶೃಂಗಾರ 9 ಸರ್ವಕಾಲದಿ ತನ್ನ ನೆನವಿತ್ತು ದುಷ್ಕøತ ಪರ್ವತಗಳ ಪುಡಿ ಮಾಡುವ ಧೀರ 10 ತನಯನ ಕಲಭಾಷೆ ಜನನಿ ಲಾಲಿಸುವಂತೆ ಸಾರ 11 ಪೋರಭಾವವ ಶುಭವೇರಿಸುವನು ತುಷ ವಾರಿಯು ಗಂಗೆಯ ಸೇರುವಾಕಾರ 12 ವಿದ್ಯ ಬುದ್ಧಿಗಳಿಲ್ಲದಿದ್ದರು ದಾಸರ ನಿರವದ್ಯ ಬೇಗದಲಿ 13 ಸನ್ನುತ ಕರ್ಮವ ಮನ್ನಿಸನೆಂದಿಗು ಮುರನರಕಾರಿ 14 ಚಿಂತಾಕ್ರಾಂತಿಗಳಿರದಂತೆ ಸರ್ವದ ನಿ- ರಂತರ ಪೂಜೆಗೊಂಬರ ಚಕ್ರಧಾರಿ 15 ನಿರುಪಮಾನಂದ ನಿರ್ಭರ ಪುಣ್ಯಮೂರ್ತಿ ಶ್ರೀವರ ಶೇಷ ಭೂಧರವರನ ಸತ್ಕೀರ್ತಿ 16
--------------
ತುಪಾಕಿ ವೆಂಕಟರಮಣಾಚಾರ್ಯ
ಛಂದದಿಂದ ಬಂದು ಸಲಹೊ ಫಂಡರೀಶ ನಿನ್ನ ನಂಬಿದೆ ಪ ತಂದೆ ನೀನೆ ಸರ್ವರಿಗೆ ಅನಿಮಿತ್ತ ಬಂಧುವಲ್ಲವೆ ಅ.ಪ ದೋಷಿನಾನು ಮೂಢನಾನು ವಲಿಯೆನೆಂದು ಏಕೆ ಹೇಳು ದೋಷದೂರ ಜ್ಞಾನರೂಪ ಬಿಂಬ ನಿನ್ನ ದಾಸನಲ್ಲವೆ 1 ಎಲ್ಲಾ ಸತ್ತಾದಾತ ನೀನು ಇಲ್ಲ ನಿನಗೆ ಭೇದವೇನು ನಲ್ಲ ಶರಣು ಎಂದಮೇಲೆ ವಲ್ಲೆ ಎನ್ನೆ ಬಿರುದು ಪೋಗದೆ 2 ಕಾಕುಮಾಡಿ ಎನ್ನ ಜಗದಿ ನೂಕಿ ಬಿಟ್ಟು ಭಂಟರಲ್ಲಿ ಸಾಕದೇನೆ ಬಿಟ್ಟರೀಗ ಲೋಕನಗದೆ ಭಕ್ತರಾಣೆ 3 ಮುಂದುಮಾಡಿ ಹಿಂದೆ ಎನ್ನ ಹಿಂದು ಮಾಡಿ ಈಗ ನಗುವೆ ಇಂದಿರೇಶ ನಿನ್ನ ನ್ಯಾಯ ಮಂದನಾನು ಅರಿಯೆ ಶರಣು 4 ಲಕುಮಿ ಮೊದಲು ಎಲ್ಲಾ ಜಗಕೆ ಶಕುತ ನೀನೆ ಒಬ್ಬ ಆಶ್ರಯ ನೀಡಿಕಾಯೋ ಬೇಗನೆ 5
--------------
ಕೃಷ್ಣವಿಠಲದಾಸರು
ಛಲಾವ್ಯಾಕೊ ನಿನಗೆ ಎನ್ನಲಿ ಪ ಛಲಾವ್ಯಾಕೊ ಕೋಲಾಚಲವೇಂಕಟ ಫಲಾ ನೀಡಿ ನೀ ಭಲಾನೆನಿಸೊ ದೇವಾ ಅ.ಪ ಧರಾತಳದಿ ಭೂಧರಾಗ್ರಮಂದಿರ ಪರಾವರೇಶನೆ ದರಾರಿಕರಶೂರ 1 ರಮಾವರನೆ ತವ ಸಮಾನರಾಗಿಹ ಸುಮಾನಸಾರ್ಕರ ಕ್ಷಮಾತಳದಿ ಕಾಣೆ 2 ಕುಲಾಲಕೃತ ಮೃತ್ ಕಲಾಪಧರಮಹಾ ಉಲಾಯುಗಾತ್ಮಜ ಬಲಾರಿಸುತಸುಖ 3 ಶತ್ರುಬವರದೊಳು ವೃತ್ರಾರಿತನಯನ ಮಿತ್ರಾನ ತೋರಿ ಪೊರೆದ್ಯೊ ಶತ್ರುಹನನದೇವ 4 ತಕ್ಷಣದಲಿ ಸಾಸಿರಾಕ್ಷ ತನಯನ ಪೊರೆದಿ 5 ಭರ್ಮಾನಸ್ತ್ರದ ನಿಜ ಮರ್ಮವರಿತು ನೀ ಧರ್ಮಾಪೌತ್ರನ ಕಾಯ್ದಿ ಸುಧರ್ಮನಾಮಕ ನಿನಗೆ 6 ದಶಾಸ್ಯ ಮುಖಮಹನಿಶಾಚರೇಶರ ದಶಾಕಳದ ಮಹಾ ದಶಾವತಾರನೆ 7 ವಟಾದ ಎಲೆಸಂಪುಟಾದಲೊರಗುಂ - ಗುಟಾವ ನುಂಬುವ ದಿಟಾ ವಿಶ್ವೋದರ 8 ದಾತಾ ಗುರುಜಗನ್ನಾಥ ವಿಠಲ ನಿಜ ದೂತಾಪಾಲಕನೆಂದು ಖ್ಯಾತಾನಾಗಿಹ ನಿನಗೆ 9
--------------
ಗುರುಜಗನ್ನಾಥದಾಸರು
ಜಗತ್ಸಾರ ವಿಠಲ | ನೀನಿವಳ ಸಲಹೊ ಪ ಬಗೆಬಗೆಯಲಿಂ ನಿನ್ನ | ದಾಸ್ಯಕಾಂಕ್ಷಿಪಳಅ.ಪ. ಭಯದೋರಿ ಸ್ವಪ್ನದಲಿ | ಜಯದೇವಿಸುತ ಪ್ರಾಣದಯೆ ಪಡೆಯಲನುವಾಗ್ಯೆ | ಭಯವನು ತೋರ್ದೇಹಯಮೊಗನೆ ನಿನ್ನಂಥ | ದಯೆ ಪೂರ್ಣರಿನ್ನುಂಟೆನಯವಿನಯ ದಿಂದಿರ್ಪ | ಕನ್ಯೆಯನು ಸಲಹೊ 1 ವ್ಯಾಜ ಕರುಣೇಗೋಜು ಸಂಸøತಿಯಳಿಯೆ | ಬಾಜಿಸುತ ಮನದಲ್ಲಿನೈಜರೂಪವ ತೋರೊ | ಹೇ ಜನಾರ್ದನನೇ 2 ನೂಕಿ ಸಂತಾಪಗಳ | ಲೌಕಿಕ ಸುಭೋಗ ವೈದೀಕ ವೆನಿಸೋ ಹೇ ಕೃ | ಪಾಕರನೇ ದೇವಾಜೋಕೆಯಿಂದಿವಳ ನೀ ಸಾಕಬೇಕೆಂದೆಂಬವಾಕು ಮನ್ನಿಸಿ ಕಾಯೊ | ಶ್ರೀ ಕರಾರ್ಚಿತನೇ 3 ನೀಚೋಚ್ಚ ತರತಮದ | ಸೂಕ್ಷ್ಮ ಸುಜ್ಞಾನಗಳವಾಚಿಸಿವಳಲಿ ನಿಂತು | ಕೀಚಕಾಂತಕನುತಪ್ರಾಚೀನ ಕರ್ಮಗಳ | ಮೋಚಕನು ನೀ ಸವ್ಯಸಾಚಿ ಸಖನೇ ಇವಳ | ಪೇಕ್ಷೆಗಳ ನೀಯೋ 4 ದೇವವರ ಭವ್ಯಾತ್ಮ | ಪಾವನವು ತವ ಸ್ಮøತಿಯನೀ ವೊಲಿದು ಸರ್ವತ್ರ | ಸರ್ವ ಕಾಲದಲೀಈ ವುದನೆ ಬಿನ್ನವಿಪೆ | ಬಾವಜ್ಞ ಸಲಿಸುವುದುಕಾವ ಕರುಣಾಳು ಗುರು | ಗೋವಿಂದ ವಿಠಲಾ5
--------------
ಗುರುಗೋವಿಂದವಿಠಲರು
ಜಗದಯ್ಯಾ ಜಗದಯ್ಯಾ ಜಗತ್ರಾಣ ಜಗಜೀವನ ಪಾವನ ಪ ಸಾವು ಹುಟ್ಟುಯೆಂಬ ಹೇಯಕುಣಿಯೊಳು ಬಿದ್ದು ನೋಯಲಾರದೆ ಬಲು ಬಾಯಬಿಡುತ ನಿಮ್ಮ ಪಾವನ ಪಾದಕ್ಕೆ ಮರೆಯಬಿದ್ದೆನಯ್ಯ ಸೇವಕಜನರಯ್ಯಾ ಕಾಯೋ ಎನ್ನಾರ್ಯ 1 ಪರಿಭವಶರಧೆಂಬ ಉರಿವಕಿಚ್ಚಿನೊಳು ಪರಿಪರಿಮರುಗುತ ಕರುಣಾಂಬುಧಿ ನಿನ್ನ ಅರಿವಿಟ್ಟರಿದೆ ವರ ಪರಮ ಬಿರುದುಗಳು ಶರಣಾಗತರ ಪ್ರಿಯಕರ ಪಿಡಿದೆತ್ತಯ್ಯ 2 ವಿಷಯಲಂಪಟವೆಂಬ ವ್ಯಸನಕೂಪದಿ ಬಿದ್ದು ಬಸವಳಿದನುಪಮ ದೆಸೆಗೆಟ್ಟೆ ಕುಸುಮಾಕ್ಷ ಶಿಶುವಿನ ತವಪಾದ ಅಸಮದಾಸಜನ ರೊಶದಿ ಇಟ್ಟು ಪೊರೆ ಕುಶಲಮತಿಯ ನೀಡಿ3 ಭವಭವದಲಿ ಬೇಡುವೆನಭವನೆ ಬಾಗಿ ದಯಪಾಲಿಸಿ ಸ್ಥಿರಜ್ಞಾನಸುಪದವ ಭವಗುಣಹಿಂಗಿಸಿ ದಿವನಿಶೆನ್ನುವುದಕೆ ಸವಿನಾಮವಿತ್ತು ಕಾಯೋ ಭವರೋಗವೈದ್ಯನೆ 4 ಮೂರರಿಂ ಗೆಲುವಿತ್ತು ಮೂರರಿಂದಾಂಟಿಸಿ ಮೂರರ ಮೋಹನಿವಾರಿಸು ದೇವ ಮೂರು ನಿನಗರ್ಪಿಸಿ ಸಾರಿಬೇಡುವೆ ನೀಡ ಪಾರಮೋಕ್ಷಪದ ಧೀರ ಶ್ರೀರಾಮಯ್ಯ 5
--------------
ರಾಮದಾಸರು