ಒಟ್ಟು 36720 ಕಡೆಗಳಲ್ಲಿ , 136 ದಾಸರು , 10408 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾಗ್ದೇವಿ - ನಿಮ್ಮಚರಣ ಕಮಲಂಗಳ ದಯಮಾಡು ದೇವಿ ಪ ಶಶಿ ಮುಖದ ನಸುನಗೆಯ ಬಾಲೆಎಸೆವ ಕರ್ಣದ ಮುತ್ತಿನೋಲೆನಸುನಗುವ ಸುಪಲ್ಲ ಗುಣಶೀಲೆ - ದೇವಿಬಿಸಜಾಕ್ಷಿ ಎನ್ನ ಹೃದಯದೊಳು ನಿಂದವಳೆ 1 ಇಂಪು ಸೊಂಪಿನ ಚಂದ್ರ ಬಿಂಬೆಕೆಂಪು ತುಟಿಗಳ ನಾಸಿಕದ ರಂಭೆಜೊಂಪು ಮದನನ ಪೂರ್ಣ ಶಕ್ತಿ ಬೊಂಬೆ - ಒಳ್ಳೆಸಂಪಗೆ ಮುಡಿಗಿಟ್ಟು ರಾಜಿಪ ಶಾರದಾಂಬೆ2 ಸನ್ನುತ ರಾಣಿವಾಸೆ 3
--------------
ಕನಕದಾಸ
ವಾಜಿವದನಾರ್ಚಕ ಶ್ರೀ ವಾದಿರಾಜ ಪ ರಾಜೀವನಯನ ಶ್ರೀ ಕೃಷ್ಣನಲಿ ಬಿಡು ಎನ್ನ ಅ.ಪ. ದೇವದೇವೇಶನ ಪರಮ ಒಲುಮೆಗೆ ಪಾತ್ರ ಪಾವನ್ನತಮಚರಿಯ ಪತಿತಪಾಲ ಸಾವಧಾನದಿ ಎನ್ನ ಆದಿರೋಗವನಳಿದು ಕೇವಲ ಸದ್ಭಕ್ತಿ ಶೀಲನ ಮಾಡಯ್ಯ 1 ಭಾರತೀಪತಿ ಪದವನೈದುವ ಮಹಾತ್ಮ ಮಾರಾರಿಸುರ ಪೂಜ್ಯ ಕರುಣಿಸಿ ಕಾಯೊ ಸಾರಿದೆನು ತವ ಚರಣ ಸರಸಿಜಯುಗ್ಮಗಳ ದೂರ ಮಾಡದೆ ಹರಿಯ ಕರುಣಪಾತ್ರನ ಮಾಡು 2 ಭಾಗವತ ಶಿರೋರತುನರಿಂದರ್ಚಿತನೆ ಶಿರಿ ವೇಣುಗೋಪಾಲ ವೇದ ವೇದ್ಯ ಜಯೇಶವಿಠಲನ ಮನದಲ್ಲಿ ಬಿಡದಿಪ್ಪ ಪರಮಕೃಪೆ ಬೇಡುವೆನು ಕರುಣಾಬ್ಧಿ ಕೃಪೆ ಮಾಡು 3
--------------
ಜಯೇಶವಿಠಲ
ವಾಣಿ ವೀಣಾಪಾಣಿ ಬ್ರಹ್ಮನರಾಣಿ ಪಾಹಿ ಕಿಂಕರ ಪಾಪಕÀೃಪಾಣೀ ಪ ಖ್ಯಾತೇ ವೇದಮಾತೇ ನಾಗಭೂಷಣ ಮಾತೇ ಮಾಲಾಪುಸ್ತಕ ಶೋಭಿತಹಸ್ತೇ 1 ಭವ್ಯೇ ಭವ್ಯಕೃತ್ಯೇ ಭವ ಮುಖ್ಯರಿಗಭಯವನಿತ್ತೇ ಮತ್ತೆ ಗಿರಿಜಾದಿಗಳಿಗೆ ನೀನತ್ತೆ 2 ಶುಕ್ಲೇ ಪರಶುಕ್ಲೇ ಶುಕ್ಲಹಂಸದಿ ಮೆರೆದಿರ್ಪೆ ಶುಕ್ಲ ರಾಜೇಶ ಹಯಮುಖ ಭಕ್ತೇ 3
--------------
ವಿಶ್ವೇಂದ್ರತೀರ್ಥ
ವಾಣಿ ಪರಮಕಲ್ಯಾಣಿ ನಮೋ ನಮೋ ಅಜನರಾಣಿ ಪಂಕಜಪಾಣಿ ಪ. ಭಳಿರೆ ಭಳಿರೆ ಅಂಬೆ ಭಕ್ತಜನಸುಖದಂಬೆಸುಳಿದಾಡು ಶುಭನಿತಂಬೆ ಅಮ್ಮ ನಿಮ್ಮಹೊಳೆ ಹೊಳೆವ ಮುಖ ಮುಕುರ ಬಿಂಬೆಇಳೆಯೊಳಗೆ ಸರಿಗಾಣೆ ಶಾರದಾಂಬೆ ಪುತ್ಥಳಿಬೊಂಬೆ 1 ವಾಗ್ದೇವಿ 2 ಜಯಜಯತು ಜಗನ್ಮಾತೆ ಜಗದೊಳಗೆ ಪ್ರಖ್ಯಾತೆದಯಮಾಡು ಧವಳಗೀತೆ ಸತತ ಶ್ರೀಹಯವದನ ಪದಕೆ ಪ್ರೀತೆ ಇಳೆಯೊಳಗೆನಯದಿ ಗೆಲಿಸೆನ್ನ ಮಾತೆ ವಿಧಿಕಾಂತೆ 3
--------------
ವಾದಿರಾಜ
ವಾಣಿ ಬಾರೆ ಬೇಗ ವದನದಿ ವಾಣಿ ಬಾರೆ ಬೇಗ ಪ. ಜಾಣೆ ಕಲ್ಯಾಣಿ ಬ್ರಹ್ಮನ ರಾಣಿ ಭಾರತಿ ವಾಣಿ ಅ.ಪ. ಹೃದಯ ಮಂದಿರದಿಲಿದು ಸುವರ್ಣದ ಪದುಮ ಮಂಟಪಕೆ ಮುದವ ಬೀರುತೆನ್ನ ವದನದಿ ಸೇರುತ ಮುದ ಸುವಾಣಿಯ ಚದುರೆ ನುಡಿಸುವ ಶುಕವಾಣಿ 1 ಮಂಗಳ ಮಹಿಮನ ಅಂಗುಟದಿಂ ಬಂ ದಂಬರದಿಂದುದಿಶಿದಾಮರ ತರಂಗಿಣಿ ಗಂಗಾಸ್ನಾನವ ಮಾಡಿಶಿ ನಿನಗೆ ರಂಗನ ದಯಸೈತ ಪೀತಾಂಬರನುಡಿಸುವೆ ವಾಣಿ 2 ಭಕ್ತಿಯರಿಶಿಣ ಯುಕ್ತಿಯ ಕುಂಕುಮ ಶಕ್ತಿಯ ಗಂಧವ ಪರಶಕ್ತಿಯ ಪೂವನು ಮುಕ್ತಿದಾತೆ ಪೂಜಿಪೆ ಶ್ರೀ ಶ್ರೀನಿವಾಸ ಮುಕ್ತಿಪಥದಪೂರ್ವ ಮುತ್ತಿನರಗಿಣಿ ವಾಣಿ 3
--------------
ಸರಸ್ವತಿ ಬಾಯಿ
ವಾಣಿ ಬ್ರಹ್ಮನ ರಾಣಿ ಕಲ್ಯಾಣೀ| ಫಣಿವೇಣಿ ಸದ್ಗುಣ | ಶ್ರೇಣಿ ವೀಣಾ ಪುಸ್ತಕ ಪಾಣಿ ಪ ಜಾಣೆ ಶ್ರೀ ಜಗತ್ರಾಣಿ ಶಾಸ್ತ್ರ ಪ್ರ- ವೀಣೆ ವೇದ ಪ್ರಮಾಣಿ ನಿನಗೆಣೆ | ಗಾಣೆ ಸಂತತಕೇಣವಿಡದೆನ್ನಾಣೆ | ನೆಲಸಿರು ಮಾಣದೆನ್ನೊಳು ಅ.ಪ. ತ್ರಿಜಗ ಶುಭ ಕಾಯೇ | ಓಂಕಾರರೂಪಿಣಿ | ಮಾಯೆ ಮುನಿಜನಗೇಯೆ ಸುಖದಾಯೇ || ತೋಯಜಾಂಬಕಿ ಶ್ರೀಯರ ಸೊಸೆ | ಆಯದಿಂದಲಿ ಶ್ರೇಯಸ್ಸುಖಪದ - ವೀಯೆ ಸಂತತ ಕಾಯೆ ಶತಧೃತಿ ಪ್ರೀಯೆ | ನೀನೆನಗೀಯೆ ವಾಕ್ಸುಧೆü 1 ಅಕ್ಷರ ಸ್ವರೂಪೆ ನಿರ್ಲೇಪೇ | ಮೌನಿಜನ ಮಾನಸ | ಪಕ್ಷ ಸಕಲಾಧ್ಯಕ್ಷೆ ಶುಭಚರಿತೇ | ಸೂಕ್ಷ್ಮ ಸ್ಥೂಲ ಸುಲಕ್ಷಣಾನ್ವಿತೆ | ಮುಮುಕ್ಷು ಜನ ನಿಜ | ಭಕ್ತಿ ಭುಕ್ತಿವರ ಪ್ರದಾಯಕಿ | ಮುಕ್ತಿ ಸುಖ ಸೌಖ್ಯ ಪ್ರದಾಯಕಿ 2 ಸುಂದರಾಂಗಿ ಆನಂದ ಗುಣ ಭರಿತೇ | ವಂದಿಸುವೆ ತವಪದ -| ದ್ವಂದಕಾನತನಾಗಿ ಸಚ್ಚರಿತೇ | ಯೆಂದು ಮದ್‍ಹ್ವನ್ ಮಂದಿರದಿ ನೀ | ನಿಂದು ಆಪದ್ ಬಂಧು ಕರುಣಾ | ಸಿಂಧುವನು ನಾನೆಂದು ಪೊಗಳ್ವಾ -| ನಂದವರ ಸದಾನಂದ ಪಾಲಿಸೇ 3
--------------
ಸದಾನಂದರು
ವಾಣಿ ಮಂಗಳಂ ದೇವಿ ಪ ಗೀರ್ವಾಣಿ ಕಮಲಪಾಣಿ ಭ್ರಮರವೇಣಿ ಕೀರವಾಣಿ ಅ.ಪ. ಇಂದುವದನೆ ದೇವಿ ಚಂದ್ರಧವಳ ಸುಂದರಾಂಗಿ ಕುಂದರದನೆ ಮಂದಗಮನೆ 1 ವೀಣಾ ಪಾಣಿ ದೇವಿ ಶೋಣ ಬಿಂದು ದಶನ ವಸನೆ ಏಣನಯನೆ ಧವಳ ವಸನೆ 2 ಅಂಬುಜಾಕ್ಷಿ ದೇವಿ ಕುಂಭ ಸಂಭವಾದಿ ವಿನುತೆ ಕಂಬುಕಂಠಿ ಶಂಭು ಸೋದರಿ 3 ಶಾರದಾಂಬೆ ದೇವಿ ಅಂಬರೋಪಮಾನ ಮಧ್ಯೆ ಜಂಭವೈರಿ ಗೀಯಮಾನೆ 4 ಜ್ಞಾನರೂಪೆ ದೇವಿ ಮೌನಿ ಹೃದಯ ಕಮಲಹಂಸೆ ಧೇನುನಗರ ಸನ್ನಿವಾಸೆ 5
--------------
ಬೇಟೆರಾಯ ದೀಕ್ಷಿತರು
ವಾಣಿ ವರದೆ ಶಾರದೆ ನಿನ್ನ ಚರಣವ ಸೇರಿದೆ ಪ. ಎನ್ನ ನಾಲಿಗೆಯೊಳ್ನೆಲಸು ಹರಿಲೀಲೆಯನ್ನು ನುಡಿಸು 1 ಅತಿರೋಹಿತ ವಿಜ್ಞಾನಿ ವೇದವ್ಯೂ ಹಕಭಿಮಾನಿ 2 ಲಕ್ಷ್ಮೀನಾರಾಯಣನ ಸೊಸೆ ಸರ್ವಾಧಾರ ಭಕ್ತಿವಿಲಾಸೆ3
--------------
ತುಪಾಕಿ ವೆಂಕಟರಮಣಾಚಾರ್ಯ
ವಾಣಿನಾಥ ನಿನ್ನ ಮಹಿಮೆಕ್ಷೋಣಿಯೊಳಗೆ ಪೊಗಳುವೆನು ಪ ಶ್ರೀನಿವಾಸನಮಲ ಮುಖವಾಮಾನಸಾದಿ ತೋರಿಸೀಗ ಅ.ಪ. ಹರಿಯ ನಾಭಿ ಕಮಲದಲ್ಲಿ ಧರಿಸಿ ತನುವ ತಪತಪೆಂದುಎರಡುವರ್ಣ ಕೇಳಿ ಚರಿಸೆಪರಮಪುರುಷನನ್ನು ಕಂಡೆ 1 ಸಣ್ಣಬಾಲ ನಾಮ ಹರಿಯತಿನ್ನಬೇಡ ನಿನಗೆ ಬಹಳಅನ್ನಮಾಡಿಕೊಡುವೆನೆಂದುಧನ್ಯ ಜಗವ ನಿರ್ಮಿಸಿದೆಯಾ 2 ಕರ್ಮ ಮಾಡದಲೆಇಂದಿರೇಶ ನಿನ್ನ ಮನದಿಪೊಂದಿ ಭಜಿಪೆ ಪಾವನಾತ್ಮಾ 3
--------------
ಇಂದಿರೇಶರು
ವಾಣೀ ನೀ ತೋರೆ ವಾರಿಜನಾಭನ, ಮಹಾಲಾಭನ್ನ ನಿತ್ಯ ಸುಲಭನ ಭಾನು ಸನ್ನಿಭನ ಪ ಕ್ಷೋಣೀಯೊಳಗಣ ಪ್ರಾಣಶ್ರೇಷ್ಠ - ಜಗ ತ್ರಾಣನ ತೋರಿಸೆ ಭಾನು ಸನ್ನಿಭಳೆ ಅ. ಪ. ಚೈತನ್ಯರಾಣಿ ಪುಸ್ತಕಪಾಣಿ-ಸುನೀಲವೇಣಿ ಅತ್ಯಂತ ಮಹಿಮೆ ಗುಣಗುಣಶ್ರೇಣಿ ತ್ರಿಲೋಕ ಜನನಿ ಸತ್ಯವ ತೋರುತ ನಿತ್ಯೋಪಾದಿಲಿ ಸತ್ಯ ಸಂಕಲ್ಪಳೆ ನಿತ್ಯದಿ ಪೂಜಿಪೆ ತ್ವತ್ಪಾದಾಂಬುಜವಿತ್ತು ನೀ ಸಲಹೆ1 ನಾಲಿಗೆಯಲ್ಲಿ ಬಂದು ನಿಂದು ದಯದಿಂದ ಇಂದು ಶ್ರೀಲೋಲ ಹರಿಯೆ ದೈವವೆಂದು ಕೊಂಡಾಡೆ ಮುಂದು ಕಾಲ ಹಿಂಗಿಸಿ ವಿ- ಶಾಲ ಮತಿಯ ಕೊಟ್ಟು ಆಳುಗಳೊಡನೆ ಸು- ಶೀಲ ಜ್ಞಾನವಿತ್ತು ಆಲಸ್ಯಮಾಡದೆ ಶೀಲ ಮುಕ್ತಿಗನುಕೂಲವಾಗುವುದಕ್ಕೆ2 ಜನ್ಮ ಬಂದಿದೆ ಕಡೆಗೆ ಮಾಡು ದಯದಿಂದ ನೋಡು ಘನ ಕೀರ್ತಿವಂತೆ ಅಭಯವ ನೀಡು, ನಿನಗಲ್ಲ ಈಡು ಕನಸಿಲಿ ಮನಸಿಲಿ ಮನಸಿಜನೈಯನ ನೆನೆಸುವ ಸೌಭಾಗ್ಯವನುದಿನ ಕೊಟ್ಟು ಘನಪ್ರೇರಣೆಯಿಂದ ವಿಜಯವಿಠ್ಠಲನಂಘ್ರಿ ವನಜವ ತೋರಿ ಸನ್ಮೋದವನೀಯೆ3
--------------
ವಿಜಯದಾಸ
ವಾಣೀ ಪರಮ ಕಲ್ಯಾಣಿ - ವಾರಿಜೋದ್ಭವನ ರಾಣೀ ನಾರೀ ಶಿರೋಮಣಿ ಪ ಕ್ಷೋಣಿಯೊಳಗೆ ಸರಿಗಾಣೆನೆ ನಿನಗೆ ಸು- ಪ್ರಾಣಿಯೆ ಹರಿಪದರೇಣು ಧರಿಪೆ ಸದಾ ಅ. ಪ. ಸರಸ್ವತಿ ನಿತ್ಯಾಸಾವಿತ್ರಿ ದೇವಿ ಗಾಯತ್ರಿ ಸರಸಿಜದಳ ಸುನೇತ್ರಿ ನಿಕರ ಸ್ತೋತ್ರಿ - ಶೋಭನಗಾತ್ರಿ ಕರುಣಾಸಾಗರೆ ಪವಿತ್ರಿ ಚರಣದಂದಿಗೆ ಪಂಚ ಬೆರಳು ಭೂಷಣ ಧ್ವನಿ ಸರವು ಕನಕ ಗೆಜ್ಜೆ ಸರಪಳಿ ಪೊಳೆವಾಂ- ಬರಧರೆ ಸುಂದರಿ ಎರಗುವೆ ಎನ್ನನು ಎರವು ಮಾಡದೆ ತ್ರಿಕರಣ ಶುಧ್ಧನೆ ಮಾಡೆ 1 ಸರ್ವರಾತ್ಮಕೆ ಪ್ರಖ್ಯಾತೆ-ಧವಳಗೀತೆ ಸರ್ವರಿಗೆ ಮಹಾ ಪ್ರೀತೆ ನಿರ್ವಾಹವಂತೆ ಪತಿವ್ರತೆ ನಿರ್ಮಲ ಚರಿತೆ ಪೂರ್ವದೇವತೆ ಹರಿಜಾತೆ ಉರ್ವಿಯೊಳಗೆ ಮದಗರ್ವದ ಮತಿನಾ- ನೋರ್ವನಲ್ಲದೆ ಮತ್ತೋರ್ವನ ಕಾಣೆನು ಪೂರ್ವಜನ್ಮದ ಪಾಪ ಪರ್ವತದಂತಿದೆ ನಿರ್ವಾಹವನುಮಾಡೆ ದೂರ್ವಾಂಕುರದಿ 2 ನಿಗಮಾಭಿಮಾನಿ ಸುಜ್ಞಾನಿ ಅಗಣಿತ ಫಲದಾಯಿನಿ ಝಗಝಗಿಸುವ ಕರಯುಗಳ ಭೂಷಣ ಪ - ನ್ನಗವೇಣಿ ಕುಂಕುಮ ಮೃಗಮದ ವೊಪ್ಪಲು ಜಗತ್ಪತಿ ಪ್ರದ್ಯುಮ್ನ ವಿಜಯವಿಠ್ಠಲನಮಗಳೆ ಸುಖಾತ್ಮಕೆ ಜಗದಿ ಶುಶ್ರೋಣೆ 3
--------------
ವಿಜಯದಾಸ
ವಾತನ್ನ ಜಯಾಜಾತನ್ನ ಲೋಕ- ಪ್ರೀತನ್ನ ಸ್ತುತಿಸಿ ಖ್ಯಾತನ್ನ ಪ ವಿಷವ ನುಂಗಿದ ಮಹಾಶೌರ್ಯನ್ನ ನಿತ್ಯ ಅಸಮ ಸುಂದರ ಮತಿಧಾರ್ಯನ್ನ ನಿಶಾಚರ ಕುಲದೋಷ ಸೂರ್ಯನ್ನ ಆರಾ ಧಿಸುವ ಭಕ್ತರ ಸುಕಾರ್ಯನ್ನ 1 ವಾನರ ಕುಲದೊಳು ಧೈರ್ಯನ್ನ ಮುದ್ದು ಆನನ ಗೀರ್ವಾಣವರ್ಯನ್ನ ಆನಂದ ವಿಜ್ಞಾನ ಚರ್ಯನ್ನ ದುಷ್ಟ - ದಾನವರಳಿದತಿ ವೀರ್ಯನ್ನ 2 ದ್ವಿಜರಾಜ ಕುಲಾಗ್ರಣಿ ಭೀಮನ್ನ ಮಹ ದ್ವಿಜಕೇತ ನಂಘ್ರಿಗೆ ಪ್ರೇಮನ್ನ ದ್ವಿಜರ ಪಾಲಿಸಿದ ನಿಸ್ಸೀಮನ್ನ ಕುರು ವ್ರಜವ ಸದೆದ ಸಾರ್ವಭೌಮನ್ನ 3 ಅದ್ವೈತ ಮತ ಕೋಲಾಹ ಲನ್ನ ವೇದ ಸಿದ್ಧಾಂತ ಶುಭಗುಣ ಶೀಲನ್ನ ಸದ್ವೈಷ್ಣವರನ್ನು ಪಾಲನ್ನ ಗುರು ಮಧ್ವಮುನಿ ಗುಣಲೋಲನ್ನ 4 ಚಾರುಚರಿತ ನಿರ್ದೋಷನ್ನ ಲೋಕ ಮೂರರೊಳಗೆ ಪ್ರಕಾಶನ್ನ ಧೀರ ವಿಜಯವಿಠ್ಠಲೇಶನ್ನ ಬಿಡದೆ ಆರಾಧಿಪ ಭಾರತೀಶನ್ನ 5
--------------
ವಿಜಯದಾಸ
ವಾದಿಗಳೆದೆಶೂಲಾ | ಗುರುವೆ | ವಾದಿರಾಜ ಶೀಲಾ ಪ ಬೋಧಿಸಿ ದಶಮತಿ | ಬೋಧರ ಶಾಸ್ತ್ರವಐದಿಸು ಸದ್ಗತಿ | ಯಾದವೇಶನ ಪ್ರೀತಿ ಅ.ಪ. ಸೋದೆ ಪುರದಲಿರುವಾ | ವೃಂದಾವನಮೋದದಿ ದರ್ಶಿಸುವಾ ||ಸಾಧುಗಳಘನೀಗಿ | ವೇದವಿನುತ ಹರಿಪಾದವ ತೋರಿಸಿ | ಮೋದವ ಕೊಡಿಸುವ 1 ಧವಳಾಭಿದ ಗಂಗಾ | ಅಲ್ಯುದುಭವಿಸಿರ್ಪುದು ತುಂಗಾ ||ಸವನ ಮೂರಲಿ ಸ್ನಾನ ಕವಿದಿಹ ಅಜ್ಞಾನಸ್ರವಿಸಿ ಶ್ರೀಹರಿ ಜ್ಞಾನ | ಪ್ರವಹವ ಸೃಜಿಸುಪುದು 2 ಪಂಚ ವೃಂದಾವನದೀ | ಇಹ ಹರಿಪಂಚ ಸುರೂಪದಲೀ ||ಅಂಚೆಗಮನ ಹರಿ | ಮಂಚಯೋಗ್ಯ ಮುಖಪಂಚವಿಂಶತಿ ಸುರ | ವಾಂಛಿತ ಪಡೆವರು 3 ವಾಗೀಶ ಕರಜಾತಾ | ಸೇವಿತನಾರಾಯಣ ಭೂತ ||ಭೋಗಿ ಪುರೀಶನ | ರೋಗವ ಹರಿಸಿದೆಆಗಮಜ್ಞ ಗುರು | ನಾಗಶಯನ ಪ್ರಿಯ 4 ಬದರಿಯೊಳಿದ್ದವನಾ | ತರಿಸಿದಿವಿಧಿನುತ ತ್ರಿವಿಕ್ರಮನಾ ||ಮುದದಿ ನಿಲ್ಲಿಸುತ | ವಿಧವಿಧ ವೈಭವವಿಧಿಸೆ ನಿನ್ನಯ ಜನ | ಒದಗಿ ಚರಿಸುವರು 5 ಮೋದ ||ಸುಜನ ಸುರದ್ರುಮ | ಭಜಿಸೆ ಹರಿಸಿ ಭ್ರಮಅಜ ಜನಕನ ತೋರ್ವೆ || ಋಜು ಲಾತವ್ಯರೆ 4 ಪ್ರಾಕೃತ ಪದಪದ್ಯಾ | ರಚಿಸುತಅ - ಪ್ರಾಕೃತ ನಿರವದ್ಯಾ ||ಅ - ವ್ಯಾಕೃತ ಗುರು ಗೋವಿಂದ ವಿಠ್ಠಲಸ್ವೀಕೃತ ನಿಜ ಭಕ್ತ | ಪ್ರಾಕೃತ ಕಳೆವಂಥ 5
--------------
ಗುರುಗೋವಿಂದವಿಠಲರು
ವಾದಿರಾಜ ಅಸ್ಮದ್ಗುರು ವಾದಿರಾಜ ಪ ವಾದಿರಾಜ ತವ ಪಾದಕಮಲಕಭಿ ವಾದನ ಮಾಳ್ಪೆ ಸಮೋದವಿತ್ತು ಕಾಯೊ 1 ಸಾರಿದರಿಗೆ ಕಲ್ಪ ಭೂರುಹ ದಂತೆ ಮ ನೋರಥ ಸಲಿಸುವ ಸೂರಿಗಳರಸೇ 2 ಭೇದ ಪಂಚಕವನು ಸಾಧಿಸಿ ಕುಮತಕು ವಾದಿಗರ್ವಾದ್ರಿ ವಿಭೇದನ ಗೈದೆ 3 ದೇಶಿಕವರ್ಯ ವಾಗೀಶ ಕುವರನೆ ಕ್ಲೇಶ ಹರಿಸು ಅಘನಾಶ ಗೈದು 4 ಸಿರಿ ಜಗನ್ನಾಥವಿಠಲನ ಸುಗುಣಗಳನುದಿನ ಪೊಗಳಿ ಹಿಗ್ಗುವೊ 5
--------------
ಜಗನ್ನಾಥದಾಸರು
ವಾದಿರಾಜ ಗುರು ನೀ ದಯಮಾಡದೆ ಈ ದುರಿತಗಳ ಕಳೆದಾದರಿಪರಾರೊ ಪ ದೈಶಿಕಾರ್ಯ ವಾಗೀಶಕುವರ ತವ ದಾಸಸಮೂಹವ ನೀ ಸಲಹೋ ಸದಾ 1 ನೀ ಗತಿಯೆಂದನುರಾಗದಿ ನಂಬಿದೆ ಭೋಗಪತೀಶನ ರೋಗವ ಕಳೆದೆ 2 ಜನ್ಮಾಧಿವಾಧ್ಯುನ್ಮಾದ ಭ್ರಮ ನಿಮ್ಮ ಮೊರೆ ಹೊಕ್ಕ ಮೇಲಿನ್ನರಲುಂಟೆ 3 ಭೂಮಿಪರುಪಟಳಕಾ ಮಹಿನಾಥನು ತಾ ಮೈಮರೆದಿರೆ ನೀ ಮುದವಿತ್ತೆ 4 ಮೋದಮುನಿಮತ ಪಯೋದಧಿ ಪೂರ್ಣ ವಿಧೋದಯ ಶರಣರ ಕಾದುಕೊ ಧೊರಿಯೆ 5 ಕಲಿಬಾಧೆಯು ವೆಗ್ಗಳವಾಗಿದೆ ಕಾಯೊ ಇಳೆಯೊಳು ಯತಿಕುಲತಿಲಕ ಕೃಪಾಳೊ 6 ನಿನ್ನೊಶನಾದ ಜಗನ್ನಾಥ ವಿಠಲನ ಉನ್ನಾಹದಲಿ ತೋರೆನ್ನ ಮನದಲಿ 7
--------------
ಜಗನ್ನಾಥದಾಸರು