ನಿನ್ನದೇ ಸಕಲ ಸೌಭಾಗ್ಯ ಸಾಧನವು ಹರಿಯೆ ಪ
ನಿನ್ನದೆಂಬಭಿಮಾನ ಲವಲೇಶ ಸಲ್ಲದಯ್ಯಾ ಅ.ಪ.
ನಿನ್ನ ಪ್ರೇರಣೆ ಹೊರತು ತೃಣವೊಂದು ಚಲಿಸದು
ನಿನ್ನಿಚ್ಛೆಗನುಸಾರ ಸಕಲ ಜಗವು
ನಿನ್ನ ಚಿತ್ತಕೆ ಬಾರದಿಹುದೇನು ನಡೆಯುವುದೋ
ನಿನ್ನ ನಂಬಿದವರನು ನೀನಾಗೆ ಸಲಹುವೆಯೊ 1
ಸರ್ವತಂತ್ರ ಸ್ವತಂತ್ರ ಸರ್ವಾಂತರಾತ್ಮಕನೆ
ಸರ್ವಜಗದಾಧಾರ ಸರ್ವೇಶನೆ
ಅಘ ದೂರ
ಸರ್ವಕಾಲದಲೆನ್ನ ಗರ್ವರಹಿತನ ಮಾಡೊ 2
ಸತ್ಯಚಿತ್ತನೆ ನಿನ್ನ ಚಿತ್ತವೆನ್ನಯ ಭಾಗ್ಯ
ಕರ್ತೃತ್ವದಭಿಮಾನ ಕಳೆದು ಕಾಯೊ
ಮತ್ತೇನು ಬೇಡುವೆನು ಪರತಂತ್ರ ನಾನಯ್ಯ
ಮುಕ್ತಿದಾಯಕ ಶ್ರೀಶ ಶ್ರೀ ಕರಿಗಿರೀಶ 3