ಒಟ್ಟು 4643 ಕಡೆಗಳಲ್ಲಿ , 128 ದಾಸರು , 3220 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಳಿ ಭವಾನಿ ಶಿವೆ ಪಾಲಿಸೇ | ಪ ಗೋತ್ರೋದ್ಬವೆಸಿತ ಗೋತ್ರ ಕೃತಾಲಯೆ | ಗೋತ್ರಸುರಾರ್ಚಿತೆ ಗೋತ್ರಾರಿಯನುತೆ 1 ಭುವನೇಶ್ವರಿತ್ರೈ ಭುವನಾರ್ಚಿತಪದ | ಭುವನಜಯುಗ್ಮಳೆ ಭುವನಜ ಲೋಚನಳೇ 2 ನಾಗಾಂಬರ ಪ್ರಿಯೆ ನಾಗ ಸುವೇಣಿಯೇ | ನಾಗತಿ ಬೆಡುವೆ ನಾ ಗಿರಿಜೇಶಳೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕೀಚಕಾಂತಕ ಭೀಮಸೇನರಾಯ ಯಾಚಿಸುವೆ ನಿನಗಾನು ಎಲ್ಲರನು ಸಲಹೆಂದು ಪ ಕುಂತಿ ಜಠರೋದ್ಭವನೆ ಕುವಲಯದೊಳಗಿಪ್ಪಮ ಹಂತರಿಗೆ ಬಪ್ಪ ಜನ್ಮಾದಿರೋಗ ಚಿಂತೆಗಳ ಕಳೆದ ನಿಶ್ಚಿಂತರನು ಮಾಡು ಸ ರ್ವಾಂತರಾತ್ಮಕ ಸುಖದ ಸರ್ವೇಶ ಶಕ್ರಾದಿ ನುತ 1 ದ್ರೌಪದೀರಮಣ ಜ್ಞಾತಾಜ್ಞಾತ ಕರ್ಮಜ ಮ ಹಾಪರಾಧಗಲೆಸದನು ದಿನದಲಿ ನೀ ಪೊರೆಯಬೇಕುಪೇಕ್ಷಿಸದೆ ನಿನ್ನವರ ವಿ ವಿಶ್ವ ಚೇಷ್ಟಕನೆ 2 ಕೌರವಾಂತಕನೆ ಕಾಶ್ಯಪಿಸುತರ ಸಂತೈಪ ಭಾರ ನಿನ್ನದು ಭವದಿ ಭಕ್ತಬಂಧೋ ಪ್ರೇರಕ ಪ್ರೇರ್ಯ ರೂಪಗಳಿಂದ ಸರ್ವರ ಶ ರೀರದೊಳಗಾಡುವೆ ದೇವತೆಗಳೊಡನೆ 3 ಪವಮಾನತನಯ ಪಾಪಿಷ್ಠರೊಳಗಿದ್ದು ನಿ ನ್ನವರನೀಪರಿ ದಣಿಸಿ ನೋಡುತಿಹುದು ಭುವನತ್ರಯೇಶ ಭೂಷಣವೇನೋ ನಿನಗೆ ಸ ತ್ಕವಿ ಕುಲೋತ್ತಂಸ ಕಾವರ ಕಾಣೆ ನಿನ್ನುಳಿದು 4 ಧನಧಾನ್ಯ ಪಶುಪತ್ನಿ ಜ್ಞಾನಭಕುತಿ ತನಗೆ ತಾನೊದಗಿ ಬಪ್ಪುದು ಸುನಿಶ್ಚಯ ಸನಾ ತನ ಜಗನ್ನಾಥ ವಿಠ್ಠಲನೊಲುಮೆ ಪಾತ್ರ 5
--------------
ಜಗನ್ನಾಥದಾಸರು
ಕುಂಟೆ ಹೊಡೆಯೊ ಜಾಣ ಅದನೋಡಿ ಕುಂಟೆ ಹರಗೋ ಜಾಣ ಪ ಕುಂಟೆ ಹೊಡ್ಸೋನಾಗಿ ಕಂಟಿಕಡಿದು ನೀ ಎಂಟೆತ್ತುಗಳ ಹೂಡಿ ಮಂಟಪದ್ಹೊಲವನ್ನುಅ.ಪ ಅರಿವೆಮಡಿಕೆಹೊಡೆಯೊ ಮರವ್ಯೆಂಬ ಕರಿಕಿದಡ್ಡನಳಿಯೊ ಶರಣೆಂಬಗುದ್ದಲ್ಹಿಡಿಯೊ ಗರುವೆಂಬ ದುರಿತಕರುಣಗಳಗಿಯೊ ತೆರಪಿಲ್ಲದ್ಹೇಳುತ ಜರಾಮರಣೆಂಬ ಕಸ ಕರುಣೆಂಬ ಮಾಗಿ ಮಡಿ ಮಾಡಿ ಭರದಿ ಹಸನಮಾಡು 1 ಧ್ಯಾನ ದಾಸರಸೇವೆಯೆಂದೆಂಬುವ ಖೂನ ಮಾಡೆಲೊ ಬದುವ ದಾನಧರ್ಮಯೆಂಬುವ ಸತತದಿ ಹನಿಸು ಗೊಬ್ಬರವ ಜ್ಞಾನಿಸಂಗವೆಂಬ ಜಾಣಬೆದೆಗಾಲದಿ ಜ್ಞಾನಕೂರಿಗೆಯಿಂದ ಧ್ಯಾನಬೀಜವ ಬಿತ್ತು 2 ಮನನೆಂಬಬೆಳೆ ಕಾಯೋ ನಿಜವಾದ ನೆನೆವೆಂಬರ ಕವಣ್ಹಿಡಿಯೊ ಮನಚಂಚಲ್ಹಕ್ಕ್ಹೊಡೆಯೊ ಶಾಂತಿಸದ್ಗುಣವೆಂಬ ಫಲ ಪಡೆಯೊ ಘನತರ ದೃಢವೆಂಬ ಧಾನ್ಯರಾಸಿಮಾಡಿ ವನಜಾಕ್ಷ ಶ್ರೀರಾಮನೊನರುಹಕರ್ಪಿಸು 3
--------------
ರಾಮದಾಸರು
ಕುಣಿ ಕುಣಿಯಲೋ ಬಾಲಗೋಪಾಲ ಪ ಗೋಪಾಲ ನೀರದ ನೀರ ಅ.ಪ ಯಮುನಾ ತೀರದಿ ಹಿಮಕಿರಣನು ತಾ ಮಮತೆಯ ತೋರಲು ಬೆಳಗುತಿಹ ಘಮಘಮಿಸುವ ಈ ಸುಮಗಳು ಸೂಸಿರೆ ಪ್ರಮದೆಯರೆಲ್ಲರ ಪ್ರೇಮಾಂಗಣದಲಿ 1 ಗಂಧವ ಮಾರುತ ಬೀರುತಲಿರುವನು ಇಂದಿರೆ ಕೊಳಲಿನ ರೂಪದಲಿ ಚಂದದಿ ನಾದವ ತುಂಬಲು ಪರಮಾ ನಂದವು ಮಾನಸ ಮಂದಿರದಲಿ ನೀ 2 ಕಾಯವು ರೋಮಾಂಚಿತವಾಯ್ತೊ ಮಾಯಾವಾದವೊ ಮೋಹಗಳು ತಾಯಿ ಮಡಿಲು ಸೇರಿದ ಶಿಶುವಂದದಿ ಹಾಯವೆನಿಸಿತೊ ಜೀವನ ಯಾತ್ರೆಯು 3 ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಬಿಡಿಸೊ ಸ್ವಾಮಿ ನಿನ್ನಯ ಪಾದಯುಗಳವೆ ಕ್ಷೇಮವೆನ್ನಿಸೊ ಸಾರಾಸಾರ ವಿವೇಕದಿ ಮೋಕ್ಷದ ಕೋರಿಕೆ ಪುಟ್ಟಿಸೊ ಭವ ಪಾರ ಸೇರಿಸೋ 4 ಸಾರದ ಕರುಣಕೆ ಕಾರಣ ಬಿಂಬದ ಮೂರುತಿ ದರುಶನವು ಭಾರತಿ ರಮಣನ ಮಂಗಳಶಾಸ್ತ್ರ ವಿಚಾರವೆ ಕಾರಣವು ಭಕುತ ಜನ ಪ್ರಸನ್ನ ಲಕುಮಿರಮಣ ಎನ್ನು ತಕಿಟ ತಕಿಟ ಎಂದು 5
--------------
ವಿದ್ಯಾಪ್ರಸನ್ನತೀರ್ಥರು
ಕುಲಮದ ವೈಭವಮದ ವಿದ್ಯಾಮದಗಳನುಳಿದು ಹರಿದಾಸರ ಮರೆಯೊಕ್ಕು ಸುಖಿಯಾಗು ಪ. ಮಾನವ ಪೇಳೆಯಸರ್ಪತÀಲ್ಪನ ಪೂಜೆಗುಚಿತನಾದರೆ ಅವನಇಪ್ಪತ್ತೊಂದು ಕುಲ ಸುಕುಲ ನೋಡಾ1 ಸುರರ ಸೋಲಿಸಿ ಸ್ವರ್ಗಸಿರಿಯ ಭೋಗಿಸಿದ ದೈ-ತ್ಯರ ಭಾಗ್ಯ ಬಿಸುಟುಪೋದುದ ಕೇಳೆಯಸ್ಥಿರವಲ್ಲ ಸಂಪತ್ತು ಪರಕೆ ಪ್ರತ್ಯಹವೆಂದರಿದುನರಹರಿಯ ಚರಣಸೇವೆಯ ಮಾಡು 2 ಎತ್ತು ಹೊತ್ತಗೆಯ ಹೊರೆ ಹೊತ್ತಡದಕೆ ಸಂ-ಪತ್ತೇನೋ ಮರುಳ ಸರ್ವಜ್ಞರುಂಟೆಭಕ್ತಿಯುಳ್ಳವನೊಬ್ಬ ನೆರೆಜಾಣ ಜಾಣರಿವರೆತ್ತ್ತೆಂದರಿಯದ ಹಯವದನನಂಘ್ರಿಯ ಬಲ್ಲ 3
--------------
ವಾದಿರಾಜ
ಕುಲವ್ಯಾವುದಯ್ಯ ಕಪಿಕುಲನೆ ನಿನಗೆ ಒಲಿದಿಹನು ಹರಿ ನಿನಗೆ ಎಂದು ಜನ ನುತಿಸುವರು ಪ. ಮರ ಹಾರುವಂಥ ಮರ್ಕಟಕುಲದಲವತರಿಸಿ ಶರಧಿ ಲಂಘಿಸುತ ದ್ವೀಪಾಂತರವಾಸಿ ದುರುಳರನು ಸಂಹರಿಸಿ ದೊರೆ ಸುತರ ಸೇವಿಸಿ ಕರದಿ ಎಂಜಲು ಕೊಂಡು ಮರವನೇರಿದನೆ 1 ಪ್ರಥಮ ಕುಲವನೆ ಬಿಟ್ಟು ದ್ವಿತೀಯ ಕುಲದೊಳಗುದಿಸಿ ಹಿತವೆ ರಕ್ಕಸಿ ಸಂಗ ಪಥದಿ ನಿನಗೆ ದಿತಿಜನಾಹುತಿ ಅನ್ನ ಗತಿಯಿಲ್ಲದಲೆ ತಿಂದು ಚತುರ ಕುಲಜನ ನೀ ನುತಿಸಿ ಹಿಗ್ಗಿದನೆ 2 ತುಳುವಂಶಜನೆ ನೀ ಲಲನೆ ಸಂಗವ ತೊರೆದು ಅಲೆದೆ ಯತಿಯಾಗಿ ಈ ಇಳೆ ಎಲ್ಲವ ಕುಲನ್ಯೂನ ಗೋಪಾಲಕೃಷ್ಣವಿಠ್ಠಲನ ಪದವ ಒಲಿಸಲೋಡಿದೆ ಆರು ಬರದಂಥ ಗಿರಿಗೆ 3
--------------
ಅಂಬಾಬಾಯಿ
ಕುಸುಮ ಗಂಧಿನಿ ಸೀತೆಯೆ ಪ ಮಂಜೀರ ಭೂಷೆಯೆ ಮಂಜುಸುವಾಣಿಯೆ ಕಂಜನಾಭ ರಾಮ ಭಾಮೆಯೆ ಮಂಜುಳಾಂಗಿಯೆ 1 ಅಂಬುಜಪಾಣಿಯೆ ಅಂಬುಜನಾಭಿಯೆ ಬಿಂಬಫಲ ಸದೃಶಾನನೆ ಕಂಬುಕಂಧರೆ 2 ಕ್ಷೋಣೀಷ ಸನ್ನುತೆ ವಾಣೀಶ ವಂದಿತೆ ಏಣ ನೇತ್ರೆ ಶ್ರೀರಾಮ ಸುಪ್ರಾಣನಾಯಕಿ 3 ಸುರರಚಿರ ಕುಂತಲೆ ಪರಿಜನ ವತ್ಸಲೆ ನಿರುಪಮ ವಾಣಿಸುನ್ನುತೆ ಪ್ರಣವಾಂಚಿತೆ 4 ಮಾನವ ಸೇವ್ಯಯೆ ಧೇನುಪುರಿಕಾಂತ ಸುಪ್ರಿಯೆ ರಾಮವಲ್ಲಭ 5
--------------
ಬೇಟೆರಾಯ ದೀಕ್ಷಿತರು
ಕೂಸನು ಕಂಡೀರ್ಯಾ ನಮ್ಮ ಕೂಸನು ಕಂಡೀರ್ಯಾ ಪ ಶ್ರೀಕೃಷ್ಣನ ಸೇವಿಪಅ.ಪ. ನಗುತಿಹ ಕೂಸು1 ಕರೆದರೆ ಬರುವಂಥ ಕೂಸು ಕಾರುಣ್ಯನಿಧಿ ನಮ್ಮ ಗುರುರಾಜರೆಂಬ ಕೂಸು 2 ಕಿರಣದಂತ್ಹೊಳೆಯುತ ಭಕ್ತಶಿರೋಮಣಿ ಶ್ರೀ ರಾಘವೇಂದ್ರರೆಂಬೊ ಕೂಸು3
--------------
ರಾಧಾಬಾಯಿ
ಕೂಸು ಕಂಡಿರ್ಯಾ ಧ್ರುವ ವೇದವ ತಂದು ಉಳುಹಿತೀ ಕೂಸು ಮೇದಿನಿ ಭಾರವ ತಾಳಿತೀ ಕೂಸು ಸಾಧಿಸಿ ಧಾರುಣಿ ಗೆದ್ದಿತೀ ಕೂಸು ಉದಿಸಿ ಸ್ತಂಭದೊಳು ಮೂಡಿತೀ ಕೂಸು 1 ಭೂಮಿಯು ಮೂರಡಿ ಮಾಡಿತೀ ಕೂಸು ನೇಮದಿ ಪರಶುವ ಹಿಡಿಯಿತೀಕೂಸು ಸಮುದ್ರ ಸೇತುವೆ ಕಟ್ಟಿತೀ ಕೂಸು ಕಾಮ ಪೂರಿಸಿತೀ ಕೂಸು 2 ಬೆತ್ತಲೆ ತ್ರಿಪುರದಲಿ ಸುಳಿಯಿತೀಕೂಸು ವಸ್ತಿ ಕುದುರೆ ನಾಳಿತೀ ಕೂಸು ಸತ್ಯಸನಾತನಾಗಿಹ್ಯ ಕೂಸು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೃತಿ 5 ಇಂದು ಎನಗೆ ಗೋವಿಂದ ನಿನ್ನ ಪಾದಾರ ವಿಂದವ ತೋರೊ ಮುಕುಂದ ಪ ಸುಂದರ ವದನನೆ ನಂದಗೋಪನ ಕಂದ ಮಂದರೋದ್ಧರ ಆನಂದ ಇಂದಿರಾ ರಮಣ ಅ.ಪ ನೊಂದೆನಯ್ಯ ಭವಬಂಧನದೊಳು ಸಿಲುಕಿ ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು ಕಂದನು ಎಂದೆನ್ನ ಕುಂದುಗಳೆಣಿಸದೆ ಕಂದರ್ಪ ಜನಕನೆ 1 ಮೂಢತನದಿ ಬಹು ಹೇಡಿ ಜೀವ ನಾನಾಗಿ ದೃಢಭಕುತಿಯನು ಮಾಡಲಿಲ್ಲವೊ ಹರಿಯೆ ನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆ ಗಾಡಿಕಾರ ಕೃಷ್ಣ ಬೇಡಿಕೊಂಬೆನೊ ನಿನ್ನ 2 ಧಾರುಣಿಯೊಳು ಭೂಭಾರ ಜೀವ ನಾನಾಗಿ ದಾರಿತಪ್ಪಿ ನಡೆದೆ ಸೇರಿದೆ ಕುಜನರ ಆರೂ ಕಾಯುವರಿಲ್ಲ ಸೇರಿದೆ ನಿನಗಯ್ಯ ಧೀರ ವೇಣುಗೋಪಾಲ ಪಾರಗಾಣಿಸೊ ಹರಿಯೆ 3
--------------
ವಿಜಯೀಂದ್ರತೀರ್ಥರು
ಕೃತ್ತಿಕೋತ್ಸವ ಗೀತೆ ಕೃತ್ತಿಕೋತ್ಸವ ನೋಡುವ ಬಾರೆ ನ ಮ್ಮಾರ್ತಿಯ ಪರಿಹರಿಪನು ನೀರೆ ಪ. ಬಹುಚಂದದಿ [ನಿಂದ]1 ಚಂದಂದಾಭರಣ ತೊಟ್ಟನೆ ಅರ್ತಿಯಿಂದಲೆ ತಾ ಪೊರಟಾನೆ 2 ಮಹಾಧ್ಯಾನದ ಮೇಲಿರಿಸಿ ಭಕ್ತವತ್ಸಲನಾಲಯಕೆಲ್ಲ 3 ಯಾರದಿಂದಲೆ ಶ್ರೀರಂಗನೇರಿ ಚಕ್ರಮೂರುತಿಯಮಂಟಪದಲ್ಲಿ 4 ಪಂದ (?)ವನಿತ್ತಾನೆ ಮುದದಿ ಲಕ್ಷ್ಮಿಗೆ ಸೇವೆ ಕೊಟ್ಟಾನೆ 5 ಆಳುಗಳ ಕೈಲಿತ್ತು ಪೊರೆದಾನೆ ಭಕ್ತರ ಹಸ್ತದಲಿ ಚಿತ್ತೈಸಿದನೆ 6 ಇಂದಿರೆರಮಣ ಗೋವಿಂದನೆ ಭವಬಂಧನಂಗಳನೆಲ್ಲ ಕಳೆವನೆ 7 ಅರ್ತಿಯಿಂದಲೆ ನೋಡಿದವರಿಗೆ ಮುಕ್ತಿಯ ಕೊಡುವನು ಸತ್ಯವಿದು 8
--------------
ಯದುಗಿರಿಯಮ್ಮ
ಕೃಪೆ ಮಾಡೋ ಕೃಷ್ಣ ಕೃಪೆಮಾಡೋ ತಪ್ಪದೆ ಪ್ರಾತಃ ಸಂಜೆ ನಿನ್ನ ಸ್ತುತಿ ಮಾಡುವಂತೆ ಪ ಚಂದ್ರಹಾಸನಂತೆ ವ್ರತ ಮಾಡಲರಿಯೆ ಅಂದಿನ ಧ್ರುವನಂತೆ ತಪಗೈಯಲಾರೆ ಕಂದ ಪ್ರಹ್ಲಾದನಂತೆ ಬಿಡದೆ ನುತಿಸಲಾರೆ ಸಂದ ನಚಿಕೇತನಂತೆ ಮೃತ್ಯುಗೆಲ್ಲಲರಿಯೆ 1 ಕರಿರಾಜನಂತೆ ಕೂಗಲರಿಯೆನೋ ಗರುಡನಂತೆ ಸದಾ ಹೊತ್ತು ತಿರುಗಲಾರೆ ಮರುತಜನಂತೆ ಭಂಟನಾಗಲರಿಯೆ ಉರಗರಾಜನಂತೆ ಶಯನಕಾಗಲಾರೆ 2 ದ್ರೌಪದಿಯಂತೆ ಅತ್ತು ಮೊರೆಯಿಡಲಾರೆ ರೂಪೆ ಭಾಮೆಯಂತೆ ಬಲು ಮೋಹಿಸಲಾರೆ ಆಪಾಟಿ ಸಖನಾಗರಿಯೆನು ಮಕರಂದನೊಲು ವಿಪ್ರನಾರಾಯಣನಂತೆ ಭಕ್ತಿಯರಿಯೆನೊ ಹರಿಯೆ 3 ಜಾಜಿಪುರೀಶ ನಿನ್ನ ಚರಣ ಸೇವೆಯ ಕೊಡೊ ಸಾಜದಿ ಮಾಡುವೆ ತಿಳಿದಂತೆ ಪಾಮರನು 4
--------------
ನಾರಾಯಣಶರ್ಮರು
ಕೃಪೆಯ ತೋರಬಾರದೇನೋ | ಗೋಪಾಲರಾಯ ಪ ತಾಪತ್ರಯ ಬಲು ದೀಪನವಾಗಿದೆನೀ ಪರಿಹರಿಸದೆ ಮತ್ತೋರ್ವರನರಿಯೆ ಅ.ಪ. ಸೂನು ಶ್ರೀನಿವಾಸಾ |ಸಾರುತ ತವಪದ ಸೇವಿಸಿ ಭಕುತಿಲಿ |ದೂರೋಡಿಸಿದನು ಜವನವರಾ 1 ಗಿರಿಜಾತೆಯ ಪ್ರಿಯ ಕುವರಾ | ನೃಪವರದಶರಥ ಸುತ ಭರತಗೆ ಅವರಾ |ಮಾರುತಿ ಮತವನು ಅರುಹುತ ನೀ ಸಂಸಾರಕೆ | ತಾರಕ ನೆನಿಸಿದ ಧೀರಾ 2 ಭೋಗಿ ಶೀಲಾ | ನೀನಘದೂರ ಕಳೆಯೊ ಮೋಹಜಾಲಾ |ಭೋಗಿಶಯನ ಗುರು ಗೋವಿಂದ ವಿಠಲನಬಾಗಿ ಭಜಿಸುವಂಥ ಭಾಗ್ಯವ ನೀಯೋ 3
--------------
ಗುರುಗೋವಿಂದವಿಠಲರು
ಕೃಪೆಯಿರಲಿ ಸ್ವಾಮಿ ಕೃಪೆಯಿರಲಿ ಅಪರಿಗಣ್ಯ ಸುಗುಣಾಂಬುಧಿ ಹರಿ ನಿನ್ನ ಪ. ಬೇರಿಗೆ ದಿವ್ಯ ಕಾವೇರಿ ನದಿಯ ಜಲ ಧಾರೆಯಿರಲು ಕೊಂಬೆಗಳುಬ್ಬಿ ಸಾರಭರಿತ ಫಲದೋರುವ ತರುವಂತೆ ಧಾರುಣಿಪರು ಕೈ ಸೇರುವರು 1 ಶತ್ರುಗಳಂಜಿ ಬಗ್ಗುವರು ಕಾಳ ಕೂಟ ಪಥ್ಯವಾಗುವುದು ನಿನ್ನಣುಗರಿಗೆ ನಿತ್ಯ ಮಾಡುವಾ ದುಷ್ಕøತವೆಲ್ಲವು ಪರ- ಮೋತ್ತಮ ಧರ್ಮಕರ್ಮಗಳಾಹಲೂ 2 ಕನಸು ಮನಸಿನಲ್ಲಿ ನೆನೆಸುವ ಕಾರ್ಯಗ- ಳನುಕೂಲವಾಗುವದನುದಿನವು ಮನಸಿಜನಯ್ಯ ನೀನನುವಾಗಿರೆ ಸರ್ವ ಜನರೆಲ್ಲರು ಬಹು ಮನ್ನಿಸುವರು 3 ಋಗ್ಯಜುಸ್ಸಾಮಾಥರ್ವಣಗಳೆಂಬ ವೇದ ಸ- ಮಗ್ರ ನೀ ಕರುಣಿಸಿ ಒಲಿದಿರಲು ಸುಜ್ಞಾನ ಭಕ್ತಿ ವೈರಾಗ್ಯ ಸಹಿತವಾಗಿ ಭಾಗ್ಯದೇವತೆ ಕೈ ಸೇರುವಳು 4 ಈ ಕಾರಣದಿಂದನೇಕರ ಬಯಸದೆ ಶ್ರೀಕರ ನೀ ಕರುಣಿಸಿದರಿಂದು ಸಾಕೆಂದೊದರುವೆನೇಕಮನದಲಿ ದ- ಯಾಕರ ವೆಂಕಟರಮಣನಿಂದು 5
--------------
ತುಪಾಕಿ ವೆಂಕಟರಮಣಾಚಾರ್ಯ
ಕೃಷ್ಣ ಕದ್ದು ಬಂದೆನಯ್ಯ ರಂಗ ಮದ್ದು ಕಾಣೆನಯ್ಯ ಕಣ್ಣು ಕೊಟ್ಟು ಇಟ್ಟೆ ಇಲ್ಲಿ ನಿನ್ನ ನೋಡಲೆಂದು ಪ ನಾನು ನನ್ನದೆಂದು ಭ್ರಾಂತಿ ತಂದುಕೊಂಡೆನಯ್ಯ ನಿನ್ನದೆನ್ನದೆಂದೆ ನಾನು ನನ್ನ ಬಿಟ್ಟು ನೀನು ನಿಂತೆ ಅ.ಪ ಎಲ್ಲಿ ಇಲ್ಲ ನೀನು ದೇವ ಕುಂದು ಕೊರತೆಯುಂಟೆ ನಿನಗೆ ಖುಲ್ಲಮೋಹವೆಂಬ ಮೋಡ ನಿನ್ನ ಬೆಳಕು ಮುಚ್ಚಿತಯ್ಯ ಕಾಲಕಳೆದು ಕಲಿತೆ ನಿನ್ನ ಕಾಲುಬಿಟ್ಟರಿಲ್ಲ ಕೂಲ ಸೇರಿಸಯ್ಯ ಬೇರೆ ದಾರಿಯಿಲ್ಲವಯ್ಯ 1 ಅರಿತು ಪೇಳ್ವೆನಯ್ಯ ಕೃಷ್ಣ ನೀನು ಹೇಳಿ ಕೊಟ್ಟೆ ಆಗ ಬರಿದೆ ಕೆಟ್ಟು ಹೋದೆ ದೇವ ಒಳಿತು ಮಾಡವಯ್ಯ ಈಗ ಮರೆತು ನಿಲ್ಲಲಾರೆ ನಿನ್ನ ಕಲೆತುಬಂದು ನಿಲ್ಲೊ ನೀನು [ವರ]ಶೆಲ್ವ ಭಾಗ್ಯವಯ್ಯ ನೀನು ಭೋಗಮೋಕ್ಷವಯ್ಯ ದೇವ2
--------------
ಸಂಪತ್ತಯ್ಯಂಗಾರ್