ಒಟ್ಟು 1211 ಕಡೆಗಳಲ್ಲಿ , 4 ದಾಸರು , 1185 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆನೆದು ನಮಿಸುವೆ ನಾನು ವಾರಂವಾರ ಪ ನೆನೆದು ನಮಿಸುವೆ ನಾನನುದಿನ ಹರಿಪದ ವನಜ ಮಧುಪರಾದ ಅನುಭವ ಶರಣರ ಅ.ಪ ಆದಿಮೂರುತಿತ್ರಯ ಮಧ್ವಮುನಿರೇಯ ಪದ್ಮನಾಭ ನರಹರಿ ಧ್ಯಾನ ಮಾಧವಾಕ್ಷೋಭ್ಯರ ಮಹಾ ಜಯತೀರ್ಥರಾ ರಾಧಕ ವಿದ್ಯಾದಿರಾಜ ಕವಿನಿಧಿ ಸಾದರ ವಾಗೀಂದ್ರ ಶಾಂತ ರಾಮಚಂದ್ರ ಸಾಧು ವಿದ್ಯಾನಿಧಿಯರ ರಘುನಾಥ ಮೇದಿನಿ ರಘುವರ್ಯರ ರಘೋತ್ತಮ ವೇದವ್ಯಾಸಾರ್ಯರ ವಾರಂವಾರ 1 ಇತ್ತ ವಿದ್ಯಾಧೀಶ ಈ ವೇದನಿಧಿ ಘೋಷ ಸತ್ಯವ್ರತರ ನಾಮ ಸತ್ಯನಿಧಿಯ ನೇಮ ಸತ್ಯನಾಥಾಖ್ಯಾತ ಸತ್ಯಾಭಿನವ ತೀರ್ಥ ಮತ್ತಿಳೆಯೊಳಗಿರ್ಪ ಮನಕೆ ಸೂಚಿಸಿ ಬಪ್ಪ ಕೃತ್ಯಮ್ ಸುಜ್ಞಾನ ಕೃಷ್ಣದ್ವೈಪಾಯನ ಇತ್ಯಧಿಕ ಸರ್ವರ ಜನದಲಿ ಅತ್ಯಧಿಕ ಮೀರ್ವರಾ ಪುರುಷಾರ್ಥ ಉತ್ತಮ ಪದಲಿರುವರಾ ವಾರಂ ವಾರ 2 ಶರಣೆಂದು ಆದ್ಯರ ಸಕಲ ಪ್ರಸಿದ್ಧರ ಶುಭ ವ್ಯಾಸರಾಯರ ವರ ಹಯಗ್ರೀವ ಜಗವರಿತ ವಾದಿರಾಜ ಪುರಂದರದಾಸ ಪುತ್ರರಾ ವರ ಮಧ್ವರಾ ನೆರೆ ತಾಳ ಪಾಕರ ನುತ ಮತಿ ಕನಕರ ಹರಿಭಕ್ತಿ ಉಲ್ಹಾಸರ ಬಂಡೆರಂಗ ನರಿತಿಹ ನಿಜದಾಸರ ಮಹಿಪತಿ ಗುರುಶರಣರ ತೋಷರ ವಾರಂ ವಾರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೆನೆದು ಸುಖಿಸಿ ನಮ್ಮ ಆದಿ ಶರಣರಾ ಅನುದಿನ ಹರಿ ಮೆಚ್ಚಿದ ಪ್ರಿಯರಾ ಪ ಪ್ರಲ್ಹಾದ ನಾರದ ಪರಾಶರ ಮುನಿ ವಲ್ಲಭ ರುಕ್ಮಾಂಗದಾ ಧ್ರುವರಾ ಉಲ್ಹಾಸದಿಂದಲಿ ಅಂಬರೀಷ ಗಜೇಂದ್ರನಾ ಬಲ್ಲಿದ ಬಲಿ ಗುಣ ಸಾಗರರಾ ಹನುಮ ವಿಭೀಷಣ ಜಾಂಬವ ಅಜಮಿಳ ಮುನಿ ಮುಚಕುಂದಾರ್ಜುನ ಮುಖ್ಯರಾ 1 ಉದ್ಧವ ಉಪಮಾನ್ಯನು ಜನÀದೋಳಧಿಕರಾದಾ ಪುಂಡಲೀಕ ಭೀಷ್ಮರಾ ಭಕುತಿ ವನಧಿಯೊಳು ಮೆರೆವರ ತನವಾದಾ 2 ಶುಕಶೌನಕ ಮುಖ್ಯ ಸಜ್ಜನರಾ | ಪ್ರಕಟದಿ ಮಹಿಪತಿ ನಂದನು ಸ್ತುತಿಸಿದ | ಮುಕುತಿಗೆ ಯೋಗ್ಯ-ನಾ ಮಾಡುವರಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೆನೆಯೋ ನೀ ಎನ್ನ ಮನವೇ| ಅನುಪಮ್ಯ ಶ್ರೀ ಮುಕುಂದನಾ| ಚಕೋರ ಸುನಕ್ಷತ್ರೇಶ ಗೋಪಾಲನಾ| ಶ್ರೀಲೊಲನಾ ನಂದಬಾಲನಾ ಪ ವರಭಕ್ತ ಧೃವಗ ಸ್ಥಿರಪದ ವಿತ್ತನಾ| ಧರಣಿಯ ಭಯಹರ ಪುರುಷೋತ್ತಮನಾ| ಉರಗ ತುಳಿದವನಾ| ಉರಗಶಯನುರಗಾ ಭರಣನ ಸಖನಾ| ಸುನಖನ ಅಬ್ಬ ಮುಖನಾ 1 ದುರಿತ ನಿವಾರಕನಾ| ಕರುಣಾದೀ ಅಹಲ್ಯಯ ನುದ್ಧರಿಸಿದನಾ ಸರಸಿಜ ಸಮಪದ ಸರಸಿಜನಾಭನಾ| ಸರಿಸಿಜ ಪಾಣಿಯ ಸರಸಿಜ ನೇತ್ರನಾ 2 ಸುಚರಿತ್ರನಾ ಮುನಿಸ್ತೋತ್ರನಾ| ಗುರುವರ ಮಹಿಪತಿ ನಂದನ ಜೀವನಾ| ಗಿರಿವರಧಾರನಾ ಕಂಸಾಸುರ ಮರ್ಧನಾ| ಶರಧಿ ನಿವಾಸನಾ| ಹರಿಶತ ಕಿರಣ ಹರಿಸುತ ಪ್ರೀಯನಾ| ಸ್ಮರಸೈಯ್ಯನಾ ಕೃಷ್ಣರೇಯನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೆನೆವೆನಾ ನೆನೆವರಿಗೊಲಿವನಾ ಅನುದಿನಾ ನೆನೆವನಾ| ಕಾವನಾ ಪಾವನಾ ದೇವನಾ ಪ ಗಜರಾಜ ಧ್ರವ ಪ್ರಲ್ಹಾದಂಬರೀಷನ| ಅಜಮಿಳ ವಿಭೀಷಣ ರುಕ್ಮಾಂಗದರ್ಜುನ| ಸುಜನ ಭೀಷ್ಮ ವಿದುರನ| ನಿಜವ ದೋರಿಧನ್ಯ ಗೈಸಿದವನಾ1 ಮುರಾರಿ ವಾರಿಜಾರಿ ವಂಶ ವೀರಧೀರನಾ ಪಾರ ವಾರನಾ ಸುರ ಸಹಕಾರನಾ ಕರುಣಾಳು ಮೂರುತಿ ಪರಮೋದಾರನ ಗುರು ಮಹಿಪತಿಜ ಮನೋಹರನಾ2
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೆರೆ ಮಾಡುವೆ ನಮ್ಮೈಯ್ಯಾ ಸಾಧುರಾ ಪ ಝಮ್ಮನೆ ಹೋಗುವೆ | ಸುಮ್ಮನದಿ ಬಾಗುವೆ | ಮುಮ್ಮಳಿ ತ್ರಯಗಳ ನೀಗುವೆ ನಮ್ಮೈಯ್ಯಾ 1 ಬೋಧಾಮೃತನುಂಬೆ | ಮಾಧವನಾ ಕಾಂಬೆ | ಸಾದರ ಪರಗತಿ ಪಡಕೊಂಬೆ ನಮ್ಮೈಯ್ಯಾ 2 ಘನಗುರು ಚರಿತವಾ | ನೆನೆಯುತ ನಿರುತವಾ | ಮನಕ ಮಾಡುವೆ ಪ್ರೇಮ ಭರಿತವಾ ನಮ್ಮೈಯ್ಯಾ 3 ಶ್ರವಣ ಮಾಡುವೆ | ತವಕದಿ ಕೊಡುವೆ | ಹವಣಿಸಿ ವರಗಳ ಬೇಡುವೇ ನಮ್ಮೈಯ್ಯಾ4 ಮಹಿಪತಿ ಸುತ ಪ್ರೀಯಾ | ಮಹಿಯೊಳೊಲಿವಪರಿಯಾ | ವಿಹಿತದಿ ಬಲುವೆನೆ ಭಕ್ತಿಯಾ ನಮ್ಮೈಯ್ಯಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೆರೆನಂಬು ಮನವೆ ಹರಿಯ ಸಿರಿಯನಾಳುವ ದೊರಿಯ ಧ್ರುವ ಸ್ಮರಿಸಿದಾಕ್ಷಣ ಕರಿಯ ಸೆರೆಯಬಿಡಿಸಿದನರಿಯ ಚರಣಕಮಲಯುಗ್ಮಮರಿಯ 1 ಧರಿಯೊಳು ದ್ರೌಪದಿ ಮೊರಿಯ ಹರಿ ಕೇಳಿದ ನೀನರಿಯ ಅರಿತು ನಡೆವನೀ ಪರಿಯ ಸಾರುತಿದೆ ಶ್ರುತಿ ಖರಿಯ 2 ಅರವಿನೊಳು ಮನ ಹರಿಯ ತೋರುವ ಘನ ಅಶ್ಚರ್ಯ ತರಳ ಮಹಿಪತಿದೊರಿಯ ನೆರೆನಂಬಿರೊ ಈ ಪರಿಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೆಲಿಗೆ ಬಾರದು ಗುರುವೇ ಮನವಿದು ಪ ಒಳ್ಳೆಯವರಾ ನಡೆ ಕಂಡು | ಎಳ್ಳನಿತು ನಾಚದು | ಖುಳ್ಳರ ಮನದಲ್ಲಿ ಬೆರೆಸುವದು 1 ಚರಟ ಮಾತುಗಳಲ್ಲಿ ಹರುಷವ ಬಡುವರು | ಪರಮ ಸದ್ಭೋಧದಲ್ಲಿ ತೊಳಗುವದು 2 ಏನ ಹೇಳಿದರೇನು ಜ್ಞಾನವ ಕೊಳ್ಳದು | ತಾನೆ ತನ್ನಿಚ್ಛೆಯಲಿ ತಿರುಗುವದು 3 ಸ್ಥಿರವಾಗುವ ಪರಿಯಲಿ ಕರುಣವ ಮಾಡುವುದು | ಸರಣೆ ಸರಪಳಿ ನಿಕ್ಕಿ ನಿಲಿಸುವುದು 4 ಸನ್ನುತ ಮಹಿಪತಿ ಚಿನ್ನನ ಹೊರೆವದು | ಧನ್ಯಗೈಸಲು ಮನವ ತಿದ್ದುವದು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೆಲೆಯಗೊಳ್ಳಿರೊ ಮನವ ಬಲಿದು ನೆಲೆಯಗೊಳ್ಳಿರೊ ನೆಲೆಯಗೊಳ್ಳಿರಯ್ಯ ನೀವು ಬಲಿದು ಭಾವಭಕ್ತಿಯಿಂದ ಧ್ರುವ ಹಲವು ಮಾತಾಡಿ ನಿಮ್ಮ ಕುಲವ ಚಲವವೆಂದು ಎನಿಸಬ್ಯಾಡಿ ಹೊಲಬು ತಿಳಿದು ನಿಮ್ಮ ನೆಲೆಯನಿಭವನರಿತು ನೋಡಿರೊ 1 ಗುಟ್ಟು ತಿಳಿಯಲರಿಯದೆ ಬೊಟ್ಟೆಣಿಸಿ ದಣಿಯಬ್ಯಾಡಿ ಮಟ್ಟಮಾಡಿ ಮನವ ನಿಜಗಟ್ಟಿಗೊಳ್ಳಿರೊ 2 ನಿಲವು ತಿಳಿದು ನೆಲಯಗೊಂಡು ಇಳಿಯೊಳಗೆ ಮಹಿಪತಿಯು ಒಲಿದು ದಯಮಾಡಿ ಸಲಹುತಿಹ ಗುರು ಕಾಣಿರೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೆಲೆಯು ನೋಡಿ ಧ್ರುವ ಕರ್ಮಕ ಮಂದದಿ ಸಿಲುಕಲಿ ಬ್ಯಾಡಿ ವರ್ಮನರುವ್ಹ ಗುರುಯೋಗ ಧರ್ಮವ ಮಾಡಿ ನಿರ್ಮನದಲಿ ನಿಜಘನ ಬೆರೆದಾಡಿ ನಿರ್ಮಳ ನಿಶ್ಚಳ ನಿರ್ಗುಣ ಆತ್ಮನ ಕೂಡಿ 1 ಅನುದಿನ ಅನುಭವಾಮೃತವನು ಸೂರ್ಯಾಡಿ ತನುಮನಧನ ಶ್ರೀಗುರುವಿನರ್ಪಣೆ ಮಾಡಿ ಅನುಭವದಲಿ ಆತ್ಮದ ನೆಲೆನಿಭ ನೋಡಿ ಘನಬ್ರಹ್ಮಾನಂದದ ಸುಖದಲಿ ಲೋಲ್ಯಾಡಿ2 ಮಹಾಮಹಿಮನ ಸುಸೇವೆಯ ಮಾಡಿ ಮಹಿಪತಿ ಒಡಿಯನ ಶ್ರೀಪಾದವ ನೋಡಿ ಇಹಪರ ಸಾಯೋಜ್ಯ ಸದ್ಗತಿ ಮುಕ್ತಿಯ ಕೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡಬಾರದೆ ಹರಿಯ ಮನವೆ ಧ್ರುವ ಸುಲಲಿತವಾಗಿ ಸುಲ್ಲಭವಾಗ್ಹಾನೆ ನೆಲೆ ನಿಭವಾಗಿ ತನ್ನೊಳು ತುಂಬ್ಹಾನೆ 1 ಹೃದಯಕಮಲದೊಳು (ಕರೆಗುಡು)ತ್ಹಾನೆ ಸದೋದಿತ ಸವಿಸುಖ ಬೀರುತಲ್ಹಾನೆ 2 ಹಲವು ಪರಿಯಲಿ ತಾ ಸಲಹುತಲ್ಹಾನೆ ಕುಲಕೋಟಿ ಬಂಧು ಬಳಗಾಗ್ಹಾನೆ 3 ಕಣ್ಣಿನ ಮುಂದೆವೆ ತಾನೆ ಕಟ್ಹಾನೆ ಬಣ್ಣ ಬಣ್ಣದಲಿ ತಾ ಭಾಸುತಲ್ಹಾನೆ 4 ಸ್ವಹಿತ ಸುಖದ ಸುಮೂರುತಿ ಆಗ್ಹಾನೆ ಮಹಿಪತಿಯೊಳು ಶ್ರೀಪತಿ ಆಗ್ಹಾನೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡಮ್ಮಮ್ಮಾ ಎಂಥವನಿವಾ ಚಿನ್ನನೆ| ಗೋಪಿಯ ಕಂದಾ ಅಂತವ ದೋರಗುಡನೆ ಪ ಸಗಟನ ಮುರಿದೊತ್ತಿದ|ಮೊಲೆಯ ಕೊಟ್ಟ| ಮುಗುದೆಯ ಪ್ರಾಣ ಹೀರಿದಾ 1 ವಿಷಮಡು ಕಲಕಿದನೆ|ಕಾಳಿಂಗನಾ| ವಸುಧೆಗೆ ಎಳೆತಂದನೆ 2 ಪಶುಪಕ್ಷಿ ಮೃಗಾಂಗನೇರು|ಕೊಳಲಧ್ವನಿಗೆ| ನಿಸಿದಿನಿ ಮರುಳಹರು3 ತಿನಬ್ಯಾಡಮಣ್ಣವೆಂದರೆ|ಬಾಯೊಳು ಜಗವ| ದೋರಿದ ಜನ ಬೆದರೆ 4 ತಂದೆ ಮಹಿಪತಿ ಸ್ವಾಮಿಯ|ಹೇಳಲಿ ನಾನು ಒಂದೆರಡೆಂದು ಲೀಲೆಯ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡಮ್ಮಾ ಶ್ರೀ ವಾಸುದೇವನಾ ನಮ್ಮ ಬೇಡಿದಿಷ್ಟಾರ್ಧವ ನೀವನಾ ಪ ಪರ ಬ್ರಹ್ಮ ರೂಢಿಗೆ ನರಲೀಲೆಯಾಡುವ ಬಗೆಯಾಅ.ಪ ದೇವರ ಅನುಮತ ನೋಡಿದಾ ಅಂವ ದೇವಕಿ ಉದರದಿ ಮೂಡಿದಾ ಪಾವನ ಗೋಕುಲ ಮಾಡಿದಾ ಸುಖ ದೇವಿ ಯಶೋದೆಗೆ ನೀಡಿದಾ ಆವಾವ ಪರಿಯಲಿ ನೋವ ಬಗೆಯ ಬಂದು ಗಾಲಿಲ ಅಸುರರ ಜೀವನ ವಳಿದಾ 1 ಗೊಲ್ಲತೆಯರ ಮನಮೋಹಿಸಿ ಕದ್ದು ಅಲ್ಲಿಹ ಪಾಲ್ಬಣ್ಣೆ ಸೇವಿಸಿ ಬಿಲ್ಲ ಹಬ್ಬದ ನೆವತೋರಿಸಿ ಪೋಗಿ ಮಲ್ಲಚಾಣರರಾ ಭಂಗಿಸೀ ಬಲ್ಲಿದ ಕಂಸನ ಮಲ್ಲಯದ್ಧಗಳಿಂದ ಘಲ್ಲಿಸಿದನು ಜನಚಲ್ಲಿ ಬಡಿದನಾ 2 ನೀರೊಳು ಕಟ್ಟಿಸಿ ಮನೆಯನು ಬಂಗಾರದ ದ್ವಾರಕಾ ಪುರವನು ಸೇರಿಸಿ ಯದುಕುಲದವರನು ರುಕ್ಮಿ ಣೀ ರಮಣಲ್ಲಿಗೆ ಮರೆದನು ಸಾರಿದ ಶರಣರಾ ತಾರಿಸಿ ಹೋದನು ಮಹಿಪತಿ ನಂದನ ಪ್ರೀಯನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡಿ ನಿಜಸುಖ ಕೂಡಿ ಗುರುಮುಖ ಧ್ರುವ ವ್ಯರ್ಥವ್ಯಾಕೆ ಡಂಭ ಆರ್ತು ನಾಡಿಗುಂಭ ಗುರ್ತುಮಾಡಿಕೊಡುವ ಪೂರ್ಣ ಗುರು ನಿರಾಲಂಬ 1 ಙÁ್ಞನ ನಿಜಗೂಢ ಏನುಬಲ್ಲ ಮೂಢ ಸ್ವಾನುಭವಕಾಗಿ ನೀವು ಮಾಡಿ ಮನದೃಢ 2 ತೋರುತಿದೆ ಖೂನ ಪರಮ ಸೂಕ್ಷ್ಮ ಙÁ್ಞನತರಳ ಮಹಿಪತಿ ನಿಜಾನಂದ ಸುಖಧನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡಿ ನಿಮ್ಮೊಳು ನಿಜಾನಂದಬೋಧ ಕೂಡಿ ಕರುಣಾಸಿಂಧು ಶ್ರೀಗುರುಪಾದ ಧ್ರುವ ಇಡಾ ಪಿಂಗಳ ಮಧ್ಯ ನೋಡಿ ಈಗ ನಾಡಿ ಸುಷಮ್ಮವಿಡಿದು ಕೂಡಿ ಬ್ಯಾಗ ನೋಡಬಲ್ಲಿದೆ ಬ್ರಹ್ಮಾನಂದ ಭೋಗ ಗೂಢವಿದ್ಯವಿದು ತಾ ರಾಜಯೋಗ ಒಡನೆ ತಿಳಿಯುವದಲ್ಲ ಷಡಚಕ್ರ ಭೇದವಲ್ಲ ಬಡವರಿಗಳವಲ್ಲ ಗೂಢಿನ ಸೊಲ್ಲ 1 ಪಿಡಿದು ಮನಮಾಡಿ ದೃಢನಿಶ್ಚಯ ಬಿಡದೆ ಭೇದಿಸಿನೋಡಿ ಸುಜ್ಞಾನೋದಯ ಇಡದು ತುಂಬ್ಯದೆ ವಸ್ತು ಜ್ಯೋತಿರ್ಮಯ ಪಡೆದುಕೊಳ್ಳಿರೊ ಗುರು ಕರುಣ ದಯ ಮನ ಉನ್ಮನ ಮಾಡಿ ಘನಸುಖದೊಳು ಕೂಡಿ ಅನುದಿನ ನಲಿದಾಡಿ 2 ಮೂರುಗುಣರಹಿತ ಮೂಲರೂಪ ತೋರುತಿಹ್ಯದು ನಿಜ ನಿರ್ವಿಕಲ್ಪ ತರಳ ಮಹಿಪತಿ ಪ್ರಾಣ ಪಾಲಿಪ ಹೊರೆದು ಸಲಹುವ ಗುರುಕಲದೀಪ ಭಾವಿಕರಿಗೆ ಜೀವ ಕಾವ ಕರುಣದೇವ ವಾಸುದೇವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡಿ ನೋಡಿ ನಿಮ್ಮೊಳು ನಿಜಘನವ ಧ್ರುವ ಆಧಾರ ದೃಢದಿಂದ ಆರು ಸ್ಥಳವ ಮುಟ್ಟಿ ಆದಿ ಅನಾದಿಯ ಪಥವು ನೋಡಿ 1 ಭೂಚರ ಖೇಚರಚಾಚರ ಗೋಚರ ಅಲಕ್ಷ ಮುದ್ರೆಯ ಸ್ಥಾನ ನೋಡಿ 2 ಪರಾಪಶ್ಯಂತಿಯು ಮಧ್ಯಮ ವೈಖರಿ ಸಾರ ನೋಡಿ3 ಪಂಚತತ್ವದ ಗತಿ ಪಂಚಪ್ರಾಣವದ ಸ್ಥಿತಿ ಪಂಚಕರುಣಾಕೃತಿ ಗತಿ ನೋಡಿ 4 ಸ್ಥೂಲ ಸೂಕ್ಷ್ಮಕಾರಣ ಮಹಾಕಾರಣ ನೋಡಿ ಆನಂದಗತಿಯಲಿ ಬೆರೆದಾಡಿ 5 ಶೂನ್ಯ ಮಹಾ ಶೂನ್ಯ ನಿಶ್ಯೂನ್ಯ ನೋಡಿ 6 ಮಹಿಪತಿಸ್ವಾಮಿ ಶ್ರೀಗುರು ಸರ್ವೋತ್ತಮ ನೋಡಿ ಆನಂದಗತಿಯಲಿ ಬೆರೆದಾಡಿ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು