ಒಟ್ಟು 21209 ಕಡೆಗಳಲ್ಲಿ , 136 ದಾಸರು , 8951 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರತಿಯನು ಎತ್ತಿರಮ್ಮ ವರ ಮಹಾಲಕ್ಷುಮಿಗೆ ಚಾರುಮತಿಗೆ ವರವನಿತ್ತಪಾರ ಕರುಣಾಂಬುಧಿಗೆ ಪ ಶ್ರಾವಣ ಶುಕ್ರವಾರದಲಿ ಸಾವಧಾನ ಮನದಿ ನಿತ್ಯ ಸೇವಿಸುವರಿಗೊಲಿದು ಭಾಗ್ಯವೀವ ಮಹಾಲಕ್ಷುಮಿಗೆ 1 ಹೆತ್ತತಾಯಿ ತನ್ನ ಶಿಶುವನರ್ಥಿಯಿಂದ ಸಲಹುವಂತೆ ಭೃತ್ಯವರ್ಗವನ್ನು ಪೊರೆದು ನಿತ್ಯಲೋಕ ಮಾತೆಗೀಗ 2 ಚಿಂತಿತಾರ್ಥನೀವ ಲಕ್ಷ್ಮೀಕಾಂತನುರ ಸ್ಥಳದಿ ನಿಂತು ದಂತಿವರದನನಂತ ಗುಣಗಳನಂತಗಾಣದಿರುವಳಿಗೆ 3
--------------
ಲಕ್ಷ್ಮೀನಾರಯಣರಾಯರು
ಆರತಿಯನು ನಾನು ಬೆಳಗುವೆ ನಮ್ಮಪ್ರೇರಿಪ ಪ್ರಭುವ ಪಡೆವೆನೆಂಬ ಪವಿಷಯಂಗಳಾರತಿ ವಿಸ್ತರಿಸಲು ಬಹುವಿಷಮಮಾರ್ಗವ ಕಾಬ ವೊಡಲಿತ್ತವುವಿಷವಾುತಾ ಸುಖ ವಿವಿಧ ಭೋಗಂಗಳುಮೃಷೆಯೆಂದು ಹರಿಯನ್ನೆ ಮಚ್ಚಿಕೊಂಬ 1ಲೋಕಂಗಳೈದಲು ಲೋಪವಾದವುಯೆಲ್ಲಸಾಕಾುತವರಲ್ಲಿ ಸಂಚರಿಸಿಈ ಕುಹಕವ ನಂಬಲೆಲ್ಲವು ಬಹು ದುಃಖಶ್ರೀಕಾಂತನ ಕೂಡಿ ಸುಖವಿರುವ 2ಹದಿನಾಲ್ಕು ಕರಣದ ಹವಣಿನಾರತಿಯಲ್ಲಿಹುದುಗಿಸಿ ಜ್ಞಾನದ ಹೊಸ ದೀಪವಹೃದಯಕಮಲದಲ್ಲಿ ಹೊಂದಿಹ ತಿರುಪತಿಸದನ ವೆಂಕಟಗೆತ್ತಿ ಸುಖಿಯಾಗುವ 3ಓಂ ಶಿಶುಪಾಲ ಶಿರಶ್ಛೇತ್ರೇ ನಮಃ
--------------
ತಿಮ್ಮಪ್ಪದಾಸರು
ಆರತಿಯನೆತ್ತಿರೆಲ್ಲ ಆನಂದಗೆಆರತಿಯನೆತ್ತಿರೆಲ್ಲ ಸ್ವಾನಂದಗೆ ಪ ಸದನ ಸದನ ಬಿಟ್ಟಿಹಗೆತೋರುತಿಹ ಬ್ರಹ್ಮರಂಧ್ರ ತುರೀಯ ರೂಪಗೆ 1 ಕಣ್ಣಿನೊಳಗೆ ಕಣ್ಣು ತೆರೆದು ನಿರೀಕ್ಷಿಪಗೆಕಣ್ಣ ಬೊಂಬೆಯೊಳಗೆ ಕುಳಿತು ನೋಡುತಿಹಗೆಭಿನ್ನವಿಲ್ಲದ ಆನಂದ ಸುಖದಿ ರಮಿಸುತಿಹನಿಗೆಹೊನ್ನ ತಗಡಿನಂತೆ ಥಳಥಳಿಸುತಿಹಗೆ 2 ಉಕ್ಕುವ ತೇಜಗಳೆಲ್ಲ ತಾವೊಂದಾಗಿ ಕೂಡಿಮಿರು ಹರಿವ ಬೆಳದಿಂಗಳಂತೆಯಿಹಗೆಲೆಕ್ಕವಿಲ್ಲದಲೆಯುತಿಹ ಸುಖದ ರಾಶಿಗೆಮುಕ್ತಿ ಮೂರುತಿ ಶ್ರೀ ಚಿದಾನಂದ ಗುರುವಿಗೆ 3
--------------
ಚಿದಾನಂದ ಅವಧೂತರು
ಆರತಿಯನೆತ್ತುವೆ ಪ ಸಾರಸನೇತ್ರಗೆ ಮುತ್ತಿನ ಅ.ಪ ನೀಡುತ್ತಯನ್ನನು ಕೂಡಿ ಸುಖಪಡಿಸುವವಗೆ 1 ಅನುದಿನದಲಿ ಎನ್ನ ಘನ ಬೋಧೆ ಪೇಳುವವಗೆ 2 ಪಾಮರತ್ವವ ಬಿಡಿಸಿ ಕ್ಷೇಮಾವಕೊಡುವ ಗುರು ರಾಮ ವಿಠ್ಠಲನಿಗೆ 3
--------------
ಗುರುರಾಮವಿಠಲ
ಆರತಿಯಾಡುವೆನು ಸದ್ಗುರುವಿಗೆಆರತಿಯಾಡುವೆನು ಪ ಕಾಯವ ಜರೆಯುತ್ತಲಿಕೈಯನೆ ಮುಗಿಯುತಲಿಮಾಯವ ಹರಿಯುತಲಿಬಾಯಿ ಕೊಂಡಾಡುತಲಿ ಸದ್ಗುರುವಿಗೆ 1 ಕುಣಿ ಕುಣಿದಾಡುತಲಿಮನವನೆ ನೀಡುತಲಿಘನಮುಕ್ತಿ ಬೇಡುತಲಿಅನುಮಾನವ ಬಿಡುತಲಿ ಸದ್ಗುರುವಿಗೆ 2 ಅರಿವನೆ ಅರಿತುಗುರಿಯನೆ ಮರೆತುಪೂರವನೆ ಬೆರೆತುಗುರು ಚಿದಾನಂದನರಿತು ಸದ್ಗುರುವಿಗೆ 3
--------------
ಚಿದಾನಂದ ಅವಧೂತರು
ಆರತಿಯೆತ್ತಿದರು ಅಪ್ರಮೇಯಗೆ ಪ ಸಾರಸಮುಖಿಯರು ಸಂತೋಷದಿಂದ ಅ.ಪ ತರಳಗೋಸುಗ ಕಂಬ ಬಿರಿದು ಅವತಾರಗೈದು ದುರುಳನುದುರವ ಸೀಳಿ ಕರುಳ ಧರಿಸಿದವಗೆ 1 ದಾದಿ ಕಾರಣ ಪೂರ್ಣ ಭೋದಾಮೃತಮಯಗೆ 2 ಕಾಮುಕರನು ಕೊಂದು ಭೂಮಿ ಭಾರವನಿಳುಹಿ ಸ್ವಾಮಿಯಾಗಿ ಮೆರೆವ ಶ್ರೀ ಮನೋಹರನಿಗೆ 3 ಸ್ವಸ್ತಿಯಾಗಲಿ ಎಂದು ಹಸ್ತಿನಿಯರು | ಹವಳದ 4 ಕಿಂಕರ ಜನಮನ ಸಂಕಟಹರ ನಿಷ್ಕ ಳಂಕ ನೀನೆನ್ನುತ ಶಂಕಿನಿಯರು | ರತ್ನದ 5 ಭೃತ್ಯವತ್ಸಲನೆಂದು ಚಿತ್ತಿನಿಯರು | ಮುತ್ತಿನ 6 ಕುಂದಣ 7 ಸೌಪರ್ಣಿ ವಾರುಣಿ ರ್ವಾಣಿÉ ಸ್ಮರನ ರಾಣಿ ಯಿಂದ್ರಾಣಿ ಮುಖ್ಯರು | ಹುವ್ವಿನ 8 ಪುರಹರ ವೈರಿ ಮುಖ್ಯ ಸುರವಂದ್ಯ ಶರಣ ಶ್ರೀ ಗುರು ರಾಮವಿಠಲಗೆ 9
--------------
ಗುರುರಾಮವಿಠಲ
ಆರತಿಯೆತ್ತಿದರು ನಾರಿಯರು ಕೃಷ್ಣಗೆ ಪ ನೀರೆ ರುಕ್ಮಣಿ ಸತ್ಯಭಾಮ ಸಮೇತಗೆ ಅ.ಪ ಭವ ಮುಕ್ತರ ಪೊರೆವಗೆ ಮುನಿಜನ ವಂದ್ಯಗೆ 1 ವಾರಿಜಾಕ್ಷಿ ದ್ರೌಪದಿಗೆ ಸೀರೆಗಳಕ್ಷಯ ಮಾಡಿ ಕ್ರೂರರ ಮುಖಗರ್ವ ಕುಂದಿಸಿದ ಮಹಿಮಗೆ 2 ಕುಂಡಲಿಶಯನ ಶ್ರೀ ಗುರುರಾಮವಿಠಲಗೆ 3
--------------
ಗುರುರಾಮವಿಠಲ
ಆರತಿಯೆತ್ತುವೆ ಆತ್ಮೇಶ್ವರಗೆ ಪ ಮಾರ ಕೋಟಿ ಲಾವಣ್ಯ ಮತ್ಪ್ರಿಯ ಸ್ವಾಮಿಗೆ ಅ.ಪ ಮನಕೊಡೆಯನೆನ್ನಿಸಿ ಮಮತೆಯ ವಿಸ್ತರಿಸಿ ಅನುದಿನ ಬೇಡಿದಿಷ್ಟಾರ್ಥವನೀವಗೆ 1 ಶುಭದಾಯಕನಾಗಿ ಶೋಭಿಸುತಿರ್ಪಗೆ2 ಗುರುರಾಮವಿಠ್ಠಲ ಕರುಣಾನಿಧಿಗೇ 3
--------------
ಗುರುರಾಮವಿಠಲ
ಆರಮ್ಮ ಮುರಲಿಯನೂದುವನುಮಾರ ಸುಂದರ ಸುಖ ಸಾರುವ ಜಗಕೆ ಪ ಪುಂಡರೀಕಾಕ್ಷನು ಹಿಂಡುಗೋವ್ಗಳ ಕಾಯ್ದುಕಂಡ ಕಂಡವರನ್ನು ಕರೆಯುತಾನೆಚೆಂಡು ಬಗರಿ ಗೋಲಿ ಗುಂಡುಗಳನೆ ಕಟ್ಟಿತಂಡ ತಂಡವಾಗಿ ಪೋದನಮ್ಮ 1 ತಾಯಿ ಕಟ್ಟಿರುವಂಥಾ ತೋರ ಬುತ್ತಿಯ ಗಂಟುತೂಗುತ ಯಮುನೆಯ ತೀರದಲ್ಲೇತೋರ ಉಪ್ಪಿನಕಾಯಿ ಬುತ್ತಿಗಳನೆ ತಿಂದುತೀರಿದವರಿಗೆಲ್ಲಾ ತಾ ಕೊಡುವಾ 2 ಇಂದಿರೇಶನು ಕೊಟ್ಟ ತಿಂದ ಉಪ್ಪಿನಕಾಯಿಆನಂದಬಟ್ಟರು ಗೋಪನಂದನರುಹಿಂದಿನ ಪುಣ್ಯವು ಬಂದೊದಗಿತು ಎಂದುತಿಂದ ಎಂಜಲನಿಟ್ಟ ಇಂದಿರೇಶ3
--------------
ಇಂದಿರೇಶರು
ಆರು ನಿನ್ನಂಘ್ರಿ ಭಜಿಸುವರೈಯ್ಯಾ ಸಾರಹೃದಯರ ಪ್ರೀಯ ಸುರಮುನಿಜನ ಧ್ಯೇಯಾ ಪ ಕಮಲಭವಶಿವ ಇಂದ್ರ ನೀನಾಗೇನು ರಮೆ ಧರಾದೇವಿ ರಮಣಾದರೇನು ಯಮದೂತರೊಳಗಾದ ಆಜಮಿಳ ಪೆಸೆ ರ್ಗೊಳೆ ಸುಮನಿಸುರ ನಯ್ಯವನ ಕಾಯದಿದ್ದೊಡೆ 1 ಜಗದುತ್ಪತ್ತಿ ಸ್ಥಿತಿಲಯ ಕರ್ತನಾಗೇನು ಮಗುಳಿ ಸೂತ್ರಧಾರಿಯಾದರೇನು ಸುಗುಣ ಪ್ರಲ್ಹಾದಂಬರೀಷ ಕರಿವರ ಧ್ರುವಾದಿಗಳನುದ್ದರಿಸಿ ತಾರಿಸದಿದ್ದಡೆ 2 ಎಂದೆಂದು ಅರ್ತಜನ ಬಂದು ದೀನಾನಾಥ ತಂದೆ ಮಹಿಪತಿ ಸ್ವಾಮಿಯಂದಡೇನು ಮಂದಮತಿ ಕುಂದಘನವಂದು ನೋಡದ್ದೆ ಇಂದು ನಂದನಗೆ ಸೇವೆ ಪದಲಿಡದಿದ್ದರೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆರು ಬಂದರು ಸಖಿ ತೇರಿನ ಬೀದಿಲೆಮಾರಜನಕನ ಸಾರುತ ಹೊಗಳುವರಾರೆ ಕರಿಪುರದಲಿ ಬಂದವರಾರೆ ಪ. ದುಷ್ಟ ದೈತ್ಯರ ಶಿರವ ಕುಟ್ಟಿ ತಮಸ್ಸಿಗೆ ಹಾಕಿಅಟ್ಟಹಾಸದಿಂದ ಭೇರಿ ಘಟ್ಯಾಗಿ ಹೊಯಿಸುವರಾರೆ1 ಕ್ರೂರ ದೈತ್ಯರ ಶಿರವ ಸೇರಿಸಿ ತಮಸ್ಸಿಗೆ ಭೋರೆಂಬೊ ತುತ್ತೂರಿ ಕಾಳಿ ಹಿಡಿಸುವರಾರೆ 2 ವೆಂಕಟನ ದ್ವೇಷಿಗೆ ಸಂಕಟ ಬಿಡದೆಂದುಡಂಕರದಿಂದಲೆ ಡಂಕಿಯ ಹೊಯಿಸುವರಾರೆ 3 ಖೂಳ ದೈತ್ಯರ ಶಿರವ ಸೀಳಿ ತಮಸಿಗೆ ಹಾಕಿಭಾಳಾ ರೌಸದಿಂದ ಕಾಳಿಯ ಹಿಡಿಸುವರಾರೆ4 ಭಾಗವತರ ಸುಖ ಹೀಗೆ ಉನ್ನತ ಎಂದು ಈಗ ತೋರುತ ಭರದಿ ನಾಗಸ್ವರ ಹಿಡಿಸುವರಾರೆ5 ಅಂಬುಜನಾಭನ ನಂಬಲು ಸುಖವಿತ್ತು ಬಂಬಂಬೆನುತ ಶಂಖವ ಸಂಭ್ರಮದಿ ಹಿಡಿಸುವರಾರೆ 6 ನಿರ್ಜರ ಹಂಸನೀ ಹೌದೆಂದು ಸಂಶಯ ಬಿಡಿಸುತ ಕಂಸಾಳೆ ಹೊಯ್ಸುವರಾರೆ7 ಎಷ್ಟೆಷ್ಟು ಕಾಲಕ್ಕೂ ಕೃಷ್ಣಗೆ ದೊರೆ ಎಂದುಶ್ರೇಷ್ಠಾದ ಜಾಂಗುಟಿ ಫಟ್ಯಾಗಿ ಹೊಯಿಸುವರಾರೆ8 ಕಬ್ಬು ಬಿಲ್ಲಿನಯ ಒಬ್ಬ ಜಗದೀಶನೆಂದುಅಬ್ಬರದಿ ಕರಣೆ ನಿರ್ಭಯದಿ ಹಿಡಿಸುವರಾರೆ9 ಮಿತಿಯಿಲ್ಲದೆ ಶೃತಿ ಸಾರುವ ಮಧ್ವಮvವೆÉ ಅಧಿಕವೆಂದು ಶೃತಿಯನೆÉ ಹಿಡಿಸುವರಾರೆ 10 ತಂದೆ ರಾಮೇಶನ ಹೊಂದಲು ಸುಖವೆಂದು ಸುಂದರ ಕೊಳಲನೆ ಮುಂದೆ ಊದಿಸುವರಾರೆ 11
--------------
ಗಲಗಲಿಅವ್ವನವರು
ಆರು ಬದುಕಿದರಯ್ಯ ಹರಿ ನಿನ್ನ ನಂಬಿ ಪ ತೋರು ಈ ಧರೆಯೊಳಗೆ ಒಬ್ಬರನು ಕಾಣೆ ಕೃಷ್ಣ ಅ ಕಲಹ ಬಾರದ ಮುನ್ನ ಕರ್ಣನೊಬ್ಬನ ಕೊಂದೆಸುಲಭದಲಿ ಕೌರವರ ಮನೆಯ ಮುರಿದೆನೆಲನ ಬೇಡಲು ಪೋಗಿ ಬಲಿಯ ಭೂಮಿಗೆ ತುಳಿದೆಮೊಲೆಯನುಣ್ಣಲು ಪೋಗಿ ಪೂತನಿಯ ಕೊಂದೆ 1 ಕರುಳೊಳಗೆ ಕತ್ತರಿಯನಿಟ್ಟೆ ಹಂಸಧ್ವಜನಸರಸದಿಂ ಮಗಳ ಗಂಡನ ಕೊಲಿಸಿದೆಮರುಳಿನಿಂದಲಿ ಪೋಗಿ ಭೃಗುಮುನಿಯ ಕಣ್ಣೊಡೆದೆಅರಿತು ನರಕಾಸುರನ ಹೆಂಡಿರನು ತಂದೆ2 ತಿರುಪೆ ಕೂಳ್ ಪುಟ್ಟದೈ ಕೃಷ್ಣ3
--------------
ಕನಕದಾಸ
ಆರು ಬಲ್ಲರು ಹರಿಹರಾದಿಗಳ ಮಹಿಮೆಯನು ಪ ವಾರಿಜೋದ್ಭವ ಸುರೇಂದ್ರಾದಿಗಳಿಗಳವಲ್ಲಅ ಶೌರಿ 1 ಬಲಿಚಕ್ರವರ್ತಿ ಭಕ್ತಿಗೆ ಮೆಚ್ಚಿ ಅವನ ಬಾ-ಗಿಲ ಕಾಯ್ದನಚ್ಯುತನು ಅನುಗಾಲದಿಬಲು ಭುಜನು ಬಾಣಾಸುರನ ಗೃಹ ದ್ವಾರವನುಬಳಸಿ ಕಾಯ್ದನು ಹರನು ವರವ ತಾನಿತ್ತು 2 ಭೋಗಿಶಯನನು ಆಗಿ ಭೋಗಿಭೂಷಣನಾಗಿವಾಗೀಶನಾಗಿ ಸೃಷ್ಟಿಸ್ಥಿತಿಲಯಕ್ಕಾಗು ಕಾರಣ ಕಾರ್ಯ ಕರ್ಮಾದಿ ರೂಪಕ್ಕೆಕಾಗಿನೆಲೆಯಾದಿಕೇಶವನ ಮಹಿಮೆಯನು 3
--------------
ಕನಕದಾಸ
ಆರು ಸಂಗಡ ಬಾಹೊರೆಲೆ ಮನುಜ ನಿನಗೆ ಹಾರೈಸಿ ಬಳಲುವೆ ಬರಿದೆ ಭವದೊಳಗೆ ಪ ಗುರುಹಿರಿಯರಗ್ನಿಯ ಪರಿಮುಖದಿ ನಿನ್ನಯ ಕರಪಿಡಿದು ಮಾಂಗಲ್ಯ ಧರಿಸಿಕೊಂಡರ್ಧ ಶರೀರವೆನಿಸುವ ಸತಿಯು ಮರಣ ಕಾಲದಿ ನಯನ ತಿರುಗುವುದ ಕಂಡಂಜಿ ತಿರಿಗಿನಿಂತಳುತಿಹ್ಯಳು 1 ತನುಜಮನುಜರಿವರೆಲ್ಲ ನಿನಗತಿಹಿತ ಬಂಧು ಮಣಿದು ಸೇವಿಪರು ನಿನ್ನನುದಿನವು ಬಿಡದೆ ತನುಬಿಟ್ಟ ಕ್ಷಣದಿ ನನನಿನಗೆನುತ ಮನೆಕೀಲಿ ಘನ ಜಗಳ ಕಾಣು ಬಿದ್ದ್ಹೆಣದ ಪರಿವಿಲ್ಲದೆ 2 ಕುಲವಿದ್ಯವ್ಯವಹಾರ ಕಳವುಕೊಲೆ ನೃಪಸೇವೆ ತಲೆ ಬಾಗಿ ಜನರಲ್ಲಿ ಬಲುದೈನ್ಯ ಬಟ್ಟು ಗಳಿಸಿ ಹೂಳಿದ ದ್ರವ್ಯ ಎಳೆದೊಯ್ಯಲ್ಯಮ ನಿನ್ನ ತಲೆಯೆತ್ತಿ ನೋಡದಲೆ ನೆಲದಿ ನಿಲ್ಲುವುದು 3 ಭೂಮಿ ನಿನ್ನದು ಎಂದು ನೇಮವನು ಬರಕೊಂಡು ಕೋಮಲ ಮನೆಕಟ್ಟಿ ತಾಮಸದಿ ನಲಿವಿ ಭೂಮಿಯ ರಿಣತೀರಿ ನೀ ಮಡಿದಾಕ್ಷಣ ಬಹಿ ರ್ಭೂಮಿಯೋಳ್ಹುತಿವರೆಲೆ ಪಾಮರ ಮನುಜ 4 ಬಂಧುಬಾಂಧವರೆಲ್ಲ ಹಿಂದೆ ಉಳಿಯುವರು ಮಂದನಾಗದೆ ತಂದೆ ಶ್ರೀರಾಮ ಪಾದಾರವಿಂದಮಂ ನಂಬಿ ಭವಬಂಧವನು ಗೆಲಿಯೊ 5
--------------
ರಾಮದಾಸರು
ಆರುತಿ ಬೆಳಗುವೆವು ಕೃಷ್ಣಗೆ ರಾಧಾಕೃಷ್ಣಗೆ ಬೆಳಗುವೆವು ಪ ಗೋಕುದಲಿ ಹುಟ್ಟಿ | ಗೋವುಗಳನು | ಕಾಯ್ದವಗೆ ಗೋಪಾಲಕೃಷ್ಣಗೆ ಬೆಳಗುವೆವು 1 ನಂದಕುಮಾರನಿಗೆ ಇಂದೀವರಾಕ್ಷ ಬಾಲನಿಗೆ | ರಾಧಾಕೃಷ್ಣಗೆ ಬೆಳಗುವೆವು 2 ಶಾಮಸುಂದರನಿಗೆ ಕಾಮಿತಶೀಲ ಕೃಷ್ಣನಿಗೆ ರಾಧಾಕೃಷ್ಣಗೆ 3
--------------
ಶಾಮಸುಂದರ ವಿಠಲ